ಬಚೌರ್ (ಗೋವಿನ ತಳಿ)
ಉತ್ತಮ ಕೆಲಸಗಾರ ತಳಿ ಎಂದು ಈಸ್ಟ್ ಇಂಡಿಯಾ ಕಂಪೆನಿಯ ಕಾಲದಿಂದಲೇ ಖ್ಯಾತವಾಗಿದ್ದ ಗೋವು. ಗಾಡಿ ಎಳೆಯಲು ಬಹಳ ಹೆಸರುವಾಸಿಯಾಗಿದ್ದ ಈ ತಳಿಯ ಎತ್ತುಗಳಿಗೆ ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದ ತನಕವೂ ತುಂಬ ಬೇಡಿಕೆಯಿತ್ತು ಹರಿಯಾಣಿ ತಳಿಯ ಸಾಮ್ಯತೆಯನ್ನು ಹೊಂದಿ, ಅದರೊಟ್ಟಿಗೆ ತನ್ನದೇ ಕೆಲವು ವಿಶೇಷತೆಗಳನ್ನು ಹೊಂದಿದ ಒಂದು ಉತ್ತಮ ಕೆಲಸಗಾರ ತಳಿ ಬಚೌರ್. ಈ ತಳಿಯ ಮೂಲ ಬಿಹಾರದ ಸೀತಾಮಾರಿ, ಮಧುಬನಿ, ದರ್ಭಾಂಗ ಪ್ರಾಂತ್ಯಗಳೆಂದು ಊಹಿಸಲಾಗಿದೆ. ದೊಡ್ದ ಮಂದೆಗಳಲ್ಲಿ ಸಾಕುವವರು ಅಪರೂಪ. ಕುಟುಂಬದಲ್ಲಿ ೪-೫ ಹಸುಗಳು ಸಾಮಾನ್ಯ. ಇವರ ಸಾಕಣಿಕೆಯ ಮತ್ತೊಂದು ವಿಶೇಷವೆಂದರೆ ಹಸುಗಳಿಗೆ ಹೋರಿಗರು ಹುಟ್ಟಿದರೆ ಇವರು ಆ ಹಸುವಿನ ಹಾಲನ್ನು ಉಪಯೋಗಿಸುವುದೇ ಇಲ್ಲ. ಎಲ್ಲ ಹಾಲೂ ಕರುವಿಗೆ ಸೀಮಿತ. ಇವರಲ್ಲಿ ಒಂದು, ಒಂದೂವರೆ ವರ್ಷಕ್ಕೆ ಕೋಡು ಸುಡುವ ಸಂಪ್ರದಾಯವಿದೆ.
ಬಚೌರ್ | |
---|---|
ತಳಿಯ ಹೆಸರು | ಬಚೌರ್ |
ಮೂಲ | ಬಿಹಾರ |
ವಿಭಾಗ | ಕೆಲಸಗಾರ ತಳಿ , ಧೃಡ ಶರೀರ |
ಬಣ್ಣ | ಬಿಳಿ |
ಮುಖ | ದೊಡ್ಡ ಕಣ್ಣು |
ಕೊಂಬು | ಗಿಡ್ಡ ಅರ್ಧವೃತ್ತಾಕೃತಿ |
ಕಾಲುಗಳು | ಮಧ್ಯಮ ಗಾತ್ರ |
ಕಿವಿ | ನೇರವಾದ ಕಿವಿ |
ನೆಟ್ಟನೆ ನಡುವಿನ, ಸಣ್ಣ ಕುತ್ತಿಗೆಗಳ, ದೊಡ್ಡ ಕಣ್ಣುಗಳ, ನೇರವಾದ ಸಣ್ಣ ಕಿವಿಗಳ ಧೃಡ ಶರೀರಿ ಬಚೌರ್ ತಳಿಯ ಆಹಾರ ಅತ್ಯಲ್ಪ. ಹೋರಿಗಳು ಅಜಮಾಸು ೧೧೦ ಸೆಂಟೀಮೀಟರ್‌ಗಳು. ಹಸುಗಳು ೧೦-೨೦ ಸೆ.ಮೀ. ಕಮ್ಮಿ. ಬಣ್ಣ ಬಿಳಿ. ಇವು ಗಾಡಿ ಎಳೆಯುವುದಕ್ಕೆ ಖ್ಯಾತವಾಗಿದ್ದವು. ಎಷ್ಟರ ಮಟ್ಟಿಗೆ ಎಂದರೆ ೧೯ನೆಯ ಶತಮಾನದ ಪ್ರಾರಂಭದ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಈ ಎತ್ತುಗಳಿಗೆ ಬೇಡಿಕೆಯಿತ್ತು. ಇವುಗಳ ಒಂದು ಜೋಡಿ ಎತ್ತುಗಳು ೨-೩ ಟನ್ ತೂಕದ ಗಾಡಿಯನ್ನು ಆರಾಮವಾಗಿ ಎಳೆಯಬಲ್ಲವು.
ಆಧಾರ/ಆಕರ
ಬದಲಾಯಿಸಿ'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.