ಕಾಸರಗೋಡು ಜಿಲ್ಲೆಯ 'ಬಂದಡ್ಕ ಕೋಟೆ' ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿದೆ. ಇದು ಕಾಸರಗೋಡಿನ ಬೃಹತ್ ಕೋಟೆಗಳಲ್ಲಿ ಪ್ರಮುಖವಾದದ್ದು.[] ಪ್ರಸ್ತುತ ಈ ಕೋಟೆಯು ಪ್ರವಾಸಿತಾಣವಲ್ಲ.[]

ಬಂದಡ್ಕ ಕೋಟೆಯ ನವೀಕರಣ ಹಂತ

ಕಾಸರಗೋಡು - ಕಾಞ್ಞಂಗಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಯಿನಾಚಿಯಿಂದ ಪ್ರಾರಂಭವಾಗುವ ರಾಜ್ಯ ಹೆದ್ದಾರಿಯಲ್ಲಿ ಪೂರ್ವಕ್ಕೆ 30 ಕಿ.ಮೀ (12° 30′ 03.6″ N, 75° 16′ 05.88″ E) ದೂರದಲ್ಲಿ ಬಂದಡ್ಕ ಕೋಟೆಯು ಇದೆ. ಬಂದಡ್ಕ ಪೇಟೆಯು ಕೋಟೆಯ ವಾಯುವ್ಯ ಗಡಿಯನ್ನು ಹಂಚಿಕೊಳ್ಳುತ್ತದೆ. ದಕ್ಷಿಣ ಗಡಿಯಲ್ಲಿ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೂರ್ವದಲ್ಲಿ ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನ ಮತ್ತು ಶ್ರೀ ರಾಮನಾಥ ದೇವಳ ಇದೆ. ಈ ಕೋಟೆ ಬಂದಡ್ಕ ಪೇಟೆಯ ಒಳಭಾಗದಲ್ಲಿದೆ. ಬಂದಡ್ಕವನ್ನು 'ಕೋಟೆಕ್ಕಾಲ್' ಎಂದೂ ಕರೆಯುತ್ತಾರೆ []

ಚರಿತ್ರೆ

ಬದಲಾಯಿಸಿ
 
ಬಂದಡ್ಕ ಕೋಟೆ

ಈ ಕೋಟೆಯು 16 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದೆ ಎಂಬುದಾಗಿ ಚಾರಿತ್ರಿಕ ದಾಖಲೆಗಳಿಂದ ತಿಳಿದುಬಂದಿದೆ.[] ಇಕ್ಕೇರಿ ರಾಜವಂಶವು ಕಾಸರಗೋಡಿನ ಸುತ್ತಮುತ್ತ ವಿವಿಧ ಕೋಟೆಗಳನ್ನು ನಿರ್ಮಿಸಲು ಮುಂದಾಗಿತ್ತು.[] ಮೈಸೂರ ಪ್ರಾಂತ್ಯಕ್ಕೆ ವಿದೇಶಗಳೊಂದಿಗೆ ಸಂಪರ್ಕಿಸಲು ಮತ್ತು ಅವರ ವಾಣಿಜ್ಯ ಅಗತ್ಯಗಳನ್ನು ಪೂರೈಸಲು ಈ ಕೋಟೆಯನ್ನು ನಿರ್ಮಿಸಲಾಗಿದೆ.[] ಆ ಕಾಲದಲ್ಲಿ, ಬೇಕಲ್ ಬಂದರು ಆಶ್ರಯವಾಗಿತ್ತು. ಈ ಕೋಟೆಯಿಂದ ಪ್ರತೀ 12 ಕಿ.ಮೀ ದೂರದಲ್ಲಿ ಒಂದೊಂದು ಕೋಟೆ ಕಂಡುಬರುತ್ತದೆ. ಅವುಗಳಲ್ಲಿ ಚಂದ್ರಗಿರಿ ಕೋಟೆ, ಪೊವ್ವೆಲ್ ಕೋಟೆ, ಕುಂಡಂಗುಳಿ ಕೋಟೆ ಮತ್ತು ಬಂದಡ್ಕ ಕೋಟೆ ಅಸ್ತಿತ್ವಕ್ಕೆ ಬಂದಿದೆ. ಕುಂಡಂಗುಳಿ ಕೋಟೆ ಮತ್ತು ಬಂದಡ್ಕ ಕೋಟೆಗಳ ನಿರ್ಮಾಣಕ್ಕೆ ಇಕ್ಕೇರಿ ರಾಜವಂಶದ ಶಿವಪ್ಪ ನಾಯಕನು ನೇತೃತ್ವ ವಹಿಸಿದ್ದನು. ಅವನ ಕಾಲದಿಂದ ಬಂದ ಕರ್ನಾಟಕದ ಜನರು ಇಂದಿಗೂ ಇಲ್ಲಿ ವಾಸಿಸುತ್ತಿದ್ದಾರೆ. ಇಕ್ಕೇರಿ ರಾಜವಂಶದ ನಂತರ ಟಿಪ್ಪು ಸುಲ್ತಾನ್ ಮತ್ತು ಇತರರು ಇಲ್ಲಿಗೆ ಬಂದರು. ಟಿಪ್ಪು ಸುಲ್ತಾನ್ ಅವರೊಂದಿಗೆ ಬಂದ ಸಾಹೇಬರುಗಳು ಇಂದಿಗೂ ಕುಂಡಂಗುಳಿಯಲ್ಲಿ ವಾಸಿಸುತ್ತಿದ್ದಾರೆ. ಮೈಸೂರಿನ ಆಳ್ವಿಕೆಯು ಮುಸ್ಲೀಮರ ವ್ಯಾಪ್ತಿಗೆ ಬಂದಾಗ ಉಂಟಾದ ಬದಲಾವಣೆಗಳು ಈ ಪ್ರದೇಶಗಳಲ್ಲಿ ಇನ್ನೂ ಕಂಡುಬರುತ್ತವೆ.[] ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಶಸ್ತ್ರಾಸ್ತ್ರ ಮತ್ತು ಕುದುರೆಗಳನ್ನು ಬೇಕಲ್ ಬಂದರಿನ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲಿಂದ ಆಮದುಗಳನ್ನು ಈ ಪ್ರದೇಶದ ಮೂಲಕ ಕರ್ನಾಟಕಕ್ಕೆ ಕೊಂಡೊಯ್ಯಲಾಗುತ್ತಿತ್ತು.

ಸರ್ಕಾರಿ ದಾಖಲೆಗಳ ಪ್ರಕಾರ, ಕೋಟೆಯು ಸರ್ವೆ ನಂಬರ್ 150ರಲ್ಲಿ 9.16 ಎಕರೆ ಭೂಮಿಯನ್ನು ಹೊಂದಿದೆ. ಒಟ್ಟು 12 ಕೋಟೆಕೊತ್ತಲಗಳಿದ್ದವು. ಕೋಟೆ ಮತ್ತು ಭದ್ರಕೋಟೆ ಹಾಳಾಗಿದೆ. ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಚೇರಿಯ ಪಕ್ಕದಲ್ಲಿದೆ. ಸ್ವಾತಂತ್ರ್ಯದ ಮೊದಲು 1932ರಲ್ಲಿ ಕೋಟೆಯನ್ನು ಸಮೀಕ್ಷೆ ಮಾಡಲಾಯಿತು ಎಂದು ದಾಖಲೆಗಳು ತೋರಿಸುತ್ತವೆ. 1956 ರವರೆಗೆ, ಕುತ್ತಿಕೋಲು ಮತ್ತು ಬೇಡಡ್ಕ ಪಂಚಾಯತಿಗಳು ದಕ್ಷಿಣ ಕನ್ನಡದ ಭಾಗವಾಗಿದ್ದವು. ಉತ್ತರ, ಪಶ್ಚಿಮ ಮತ್ತು ದಕ್ಷಿಣಕ್ಕೆ ನದಿಗಳಿಂದ ಆವೃತವಾಗಿರುವ ಬೇಡಡುಕ್ಕ ಕರ್ನಾಟಕದ ಸುಳ್ಯ ನಗರವನ್ನು ಅವಲಂಬಿಸಿತ್ತು.

ಪುರಾತತ್ವ ಇಲಾಖೆಯ ನಿಯಂತ್ರಣ

ಬದಲಾಯಿಸಿ
 
ಕೋಟೆಯ ಆಕೃತಿಯಲ್ಲಿ ನಿರ್ಮಿಸಲಾಗಿರುವ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರವೇಶದ್ವಾರ

ಹನ್ನೆರಡನೆಯ ಹಣಕಾಸು ಆಯೋಗವು ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಸಮೀಕ್ಷೆ ನಡೆಸಲು ಪ್ರಯತ್ನಿಸಿದರೂ ಬಂದಡ್ಕ ಕೋಟೆಯ ನಿವಾಸಿಗಳು ಇದನ್ನು ವಿರೋಧಿಸಿದರು. ಹಣಕಾಸು ಆಯೋಗದ ನೆರವಿನೊಂದಿಗೆ ಕುಂಡಂಗುಳಿ ಕೋಟೆ ಮತ್ತು ಬಂದಡ್ಕ ಕೋಟೆಗಳನ್ನು ನವೀಕರಿಸಲಾಯಿತು. ಆದರೆ, ನಿರ್ಮಾಣವನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಬೇಕಾಯಿತು.[]

ಕೋಟೆ ಮತ್ತು ಶಾಲೆ

ಬದಲಾಯಿಸಿ

ಬಂದಡ್ಕ ಗ್ರಾಮದ ಸಂಪನ್ನ ಚರಿತ್ರೆಯ ನೆನಪಿಗಾಗಿ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯದ್ವಾರವನ್ನು ಕೋಟೆಯ ಆಕೃತಿಯಲ್ಲಿ ವೈಭವದಿಂದ ನಿರ್ಮಿಸಲಾಗಿದೆ.[]

ಚಿತ್ರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Chandragiri Fort, Kasaragod, Kerala" https://indiapl.com/kerala/chandragiri-fort-285617
  2. "ಅಗತ್ಯ: ಅರಿಕ್ಕಾಡಿ ಕೋಟೆ ರಕ್ಷ ಣೆ ತುರ್ತು ಅಗತ್ಯ | ವಿಜಯ ಕರ್ನಾಟಕ" https://vijaykarnataka.com/news/kasaragod/arikkady-fort-protection-imminent/amp_articleshow/66098773.cms
  3. [೧] Archived 2021-12-04 ವೇಬ್ಯಾಕ್ ಮೆಷಿನ್ ನಲ್ಲಿ.|"ಬಂದಡ್ಕದಲ್ಲಿ ಕೋಟೆ ಇತ್ತು" (ಮಾತೃಭೂಮಿ - ಮಲೆಯಾಳಂ ದಿನಪತ್ರಿಕೆಯ ವಾರ್ತೆ)
  4. [೨]|ದೇಶಾಭಿಮಾನಿ ಮಲೆಯಾಳಂ ದಿನಪತ್ರಿಕೆಯ ವಾರ್ತೆ
  5. "Powel Fort or Povval Fort | Forts protected by Department of Archaeology | Protected Monuments" http://www.archaeology.kerala.gov.in/monuments/powel-fort/57
  6. "ಬೇಕಲ ನೋಡಲೇಬೇಕಲ್ಲ ! - Udayavani | DailyHunt Lite" https://xiaomi.dailyhunt.in/news/india/kannada/udayavani-epaper-udayavani/bekala+nodalebekalla-newsid-169818006?pgs=H&pgn=0&tk=0&mode=wap& Archived 2021-09-09 ವೇಬ್ಯಾಕ್ ಮೆಷಿನ್ ನಲ್ಲಿ.
  7. [೩] Archived 2021-11-29 ವೇಬ್ಯಾಕ್ ಮೆಷಿನ್ ನಲ್ಲಿ.|ಮಾತೃಭೂಮಿ - ಮಲೆಯಾಳಂ ದಿನಪತ್ರಿಕೆಯ ವಾರ್ತೆ
  8. [೪] Archived 2021-11-29 ವೇಬ್ಯಾಕ್ ಮೆಷಿನ್ ನಲ್ಲಿ.|ಮಾತೃಭೂಮಿ (ಮಲೆಯಾಳಂ) ಇ-ಪತ್ರಿಕೆ
  9. [೫]|ಬಂದಡ್ಕ ಶಾಲೆಯ ಪ್ರವೇಶದ್ವಾರ ಉದ್ಘಾಟನಾ ಸುದ್ದಿ (ರಿಪೋರ್ಟರ್ ಟಿ.ವಿ - ಮಲೆಯಾಳಂ)