ಬಂಗಾಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ.ಮಂಗಳೂರು ರಾಜ್ಯದ ಸಾಮಂತರಾದ ಬಂಗರಸರು ಇಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಮೂಲ ವಂಶದ ಅರಸರ ಮೂಲ ಸ್ಥಾನವೂ ಇದೇ ಬಂಗಾಡಿ ಆಗಿತ್ತು. ಇಲ್ಲಿಂದ ಕುದುರೆಮುಖ ಪರ್ವತದ ಸುಂದರ ನೋಟ ಕಾಣಸಿಗುತ್ತದೆ.

ಇತಿಹಾಸ

ಬದಲಾಯಿಸಿ

ಇದು ಗಂಗರಸರ ವಂಶಸ್ಥರಾದ ಬಂಗರ ರಾಜಧಾನಿಯಾಗಿತ್ತು. ಬಂಗರು ಮಂಗಳೂರಿನಲ್ಲಿ ರಾಜ್ಯಭಾರ ಮಾಡುತ್ತಿದ್ದವರ ಸಾಮಂತರಾಗಿದ್ದರು. ಇವರ ಅಧಿಕಾರ ಈಗಿನ ಪುತ್ತೂರು ತಾಲೂಕು, ಬೆಳ್ತಂಗಡಿ ತಾಲೂಕು, ಮಂಗಳೂರು ತಾಲೂಕಿನ ಹಲವು ಪ್ರದೇಶಗಳನ್ನೊಳಗೊಂಡಿತ್ತು. ಬಂಗಾಡಿಯಲ್ಲಿ ಜೀರ್ಣಾವಸ್ಥೆಯಲ್ಲಿರುವ ಬಂಗರ ಮೂಲದೇವರಾದ ಸೋಮನಾಥೇಶ್ವರ ದೇವಾಲಯವಿದೆ. ಪೂರ್ವದಲ್ಲಿ ಪಶ್ಚಿಮಘಟ್ಟ ಪ್ರದೇಶದ ಬಲ್ಲಾಳರಾಯನದುರ್ಗದಲ್ಲಿ ಪಾಳುಬಿದ್ದಿರುವ ಒಂದು ಕೋಟೆ ಕೂಡಾ ಇದೆ.+

ಪ್ರಸ್ತುತ

ಬದಲಾಯಿಸಿ

ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಪಶ್ಚಿಮಘಟ್ಟದ ತಪ್ಪಲಿನ ಒಂದು ಸುಂದರ ಪ್ರದೇಶ.




"https://kn.wikipedia.org/w/index.php?title=ಬಂಗಾಡಿ&oldid=1258712" ಇಂದ ಪಡೆಯಲ್ಪಟ್ಟಿದೆ