ಫ್ಲಾಶ್ ಅನಿಮೇಷನ್
Expression error: Unexpected < operator.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (December 2009) |
ಒಂದು ಫ್ಲಾಶ್ ಅನಿಮೇಷನ್ ಅಥವಾ ಫ್ಲಾಶ್ ವ್ಯಂಗ್ಯಚಿತ್ರ ಮಾಲಿಕೆ ಯು ಒಂದು ಚಲಿತ ಚಲನಚಿತ್ರವಾಗಿದ್ದು, ಅಡೋಬ್ ಫ್ಲಾಶ್ ಅಥವಾ ಅದೇ ಬಗೆಯ ಅನಿಮೇಷನ್ ತಂತ್ರಾಂಶವನ್ನು ಬಳಸಿಕೊಂಡು ಇದನ್ನು ಸೃಷ್ಟಿಸಲಾಗುತ್ತದೆ ಮತ್ತು .swf ಕಡತ ಸ್ವರೂಪದಲ್ಲಿ ಅನೇಕವೇಳೆ ಇದನ್ನು ವಿತರಿಸಲಾಗುತ್ತದೆ. ಫ್ಲಾಶ್ ಅನಿಮೇಷನ್ ಎಂಬ ಪದವು ಕೇವಲ ಕಡತ ಸ್ವರೂಪಕ್ಕೆ ಮಾತ್ರವೇ ಅಲ್ಲದೇ ಚಲನೆ ಹಾಗೂ ದೃಶ್ಯಗೋಚರ ಶೈಲಿಯ ಒಂದು ನಿರ್ದಿಷ್ಟ ಬಗೆಗೆ ಉಲ್ಲೇಖಿಸಲ್ಪಡುತ್ತದೆ. ಚಲನೆ-ಶೈಲಿಯ ಈ ನಿರ್ದಿಷ್ಟ ಬಗೆಯು ಅನೇಕ ವಲಯಗಳಲ್ಲಿ ಸರಳೀಕೃತ ಅಥವಾ ಅಪರಿಷ್ಕೃತ ಅಥವಾ ನಯನಾಜೂಕು ಇಲ್ಲದ ಬಗೆಯಾಗಿ ನೋಡಲ್ಪಡುತ್ತದೆ. ಆದಾಗ್ಯೂ, ಫ್ಲಾಶ್ ಚಲಿತ ಡಜನ್‌ಗಟ್ಟಲೆ ದೂರದರ್ಶನ ಸರಣಿಗಳು, ಲೆಕ್ಕವಿಲ್ಲದಷ್ಟು ಹೆಚ್ಚಾಗಿರುವ ಫ್ಲಾಶ್ ಚಲಿತ ದೂರದರ್ಶನ ಜಾಹೀರಾತುಗಳು, ಮತ್ತು ಚಲಾವಣೆಯಲ್ಲಿರುವ ಪ್ರಶಸ್ತಿ-ವಿಜೇತ ಆನ್‌ಲೈನ್ ಕಿರುಚಿತ್ರಗಳು ಇವೇ ಮೊದಲಾದ ದಾಖಲೆಗಳನ್ನು ಹೊಂದಿರುವ ಫ್ಲಾಶ್ ಅನಿಮೇಷನ್, ಒಂದು ಪುನರುದಯವನ್ನು ಅನುಭವಿಸುತ್ತಿದೆ.
1990ರ ದಶಕದ ಅಂತ್ಯದಲ್ಲಿ, ಬಹುಪಾಲು ಅಂತರಜಾಲ ಬಳಕೆದಾರರಿಗೆ ಸಂಬಂಧಿಸಿದಂತೆ ಆವರ್ತನ ಶ್ರೇಣಿಯು ಇನ್ನೂ 56 kbit/s ಮಟ್ಟದಲ್ಲೇ ಇದ್ದಾಗ, ಅನೇಕ ಫ್ಲಾಶ್ ಅನಿಮೇಷನ್ ಕಲಾವಿದರು ವೆಬ್ ಹಂಚಿಕೆಗಾಗಿ ಉದ್ದೇಶಿಸಲ್ಪಟ್ಟ ಯೋಜನೆಗಳನ್ನು ಸೃಷ್ಟಿಸುವಾಗ ಸೀಮಿತ ಅನಿಮೇಷನ್ ಮತ್ತು ಸಂಪರ್ಕ ಛೇದಕ ಅನಿಮೇಷನ್ ಪದ್ಧತಿಯನ್ನು ಅಳವಡಿಸಿಕೊಂಡರು. ಇದು ಶ್ರವಣ ಮತ್ತು ಉನ್ನತ-ಮಟ್ಟದ ಅನಿಮೇಷನ್ ಎರಡನ್ನೂ ಪ್ರವಹಿಸಬಲ್ಲ ಸಾಮರ್ಥ್ಯದ 1 MB ಅವಕಾಶದ ಅಡಿಯಲ್ಲೇ ಉತ್ತಮವಾದ ರೀತಿಯಲ್ಲಿ ಕಿರುಚಿತ್ರಗಳು ಹಾಗೂ ಪಾರಸ್ಪರಿಕ ಅನುಭವಗಳನ್ನು ಬಿಡುಗಡೆಮಾಡಲು ಕಲಾವಿದರಿಗೆ ಅವಕಾಶನೀಡಿತು. 1999ರಲ್ಲಿ ಬಿಡುಗಡೆಯಾದ ದಿ ಗಾಡ್‌ಡ್ಯಾಮ್ ಜಾರ್ಜ್ ಲಿಕ್ಕರ್ ಪ್ರೋಗ್ರ್ಯಾಮ್ ನ ಮೊದಲ ಸಂಚಿಕೆಯು ಕೇವಲ 628kBಯಲ್ಲಿ ಸಾದರಪಡಿಸಲ್ಪಟ್ಟಿರುವುದು ಇದಕ್ಕೊಂದು ಉದಾಹರಣೆಯಾಗಿದೆ.
ಕಳಪೆಯಾಗಿ-ನಿರ್ಮಿಸಲ್ಪಟ್ಟ ಫ್ಲಾಶ್ ಅನಿಮೇಷನ್‌ನ ಕೆಲವೊಂದು ಪ್ರಮಾಣಕ ಮುದ್ರೆಗಳಲ್ಲಿ, ಸ್ವಾಭಾವಿಕವಾದ ಎಳೆತದ ಚಲನೆಗಳು (ನಡಿಗೆಯ-ಆವರ್ತನಗಳು ಮತ್ತು ಭಂಗಿಗಳಲ್ಲಿ ಕಂಡುಬಂದಂತೆ), ಸ್ವತಃ-ಮಧ್ಯಂತರ ಚೌಕಟ್ಟುಗಳನ್ನು ಸೃಷ್ಟಿಸಿಕೊಂಡ ಪಾತ್ರ ಚಲನೆಗಳು, ಪ್ರಕ್ಷೇಪಣಾರಹಿತವಾದ ತುಟಿಚಲನೆ-ಮಾತಿನ ಹೊಂದಾಣಿಕೆ, ಮತ್ತು ಮುಂಭಾಗದಿಂದ ಪಾರ್ಶ್ವದೃಶ್ಯದೆಡೆಗಿನ ಹಠಾತ್ತಾದ ಬದಲಾವಣೆಗಳು ಸೇರಿವೆ. ಬಿಟ್‌ನಕಾಶೆಗಳು ಮತ್ತು ಇತರ ರ್ಯಾಸ್ಟರ್-ಆಧರಿತ ಕಲೆಯನ್ನಷ್ಟೇ ಅಲ್ಲದೇ ವಿಡಿಯೋವನ್ನು ಒಂದೆಡೆ ಸಂಯೋಜಿಸಬಲ್ಲ ಸಾಮರ್ಥ್ಯವನ್ನು ಫ್ಲಾಶ್ ಹೊಂದಿದೆಯಾದರೂ, ಕೇವಲ ವೆಕ್ಟರ್-ಆಧರಿತ ರೇಖಾಚಿತ್ರಗಳನ್ನು ಮಾತ್ರವೇ ಬಳಸಿಕೊಂಡು ಬಹುಪಾಲು ಫ್ಲಾಶ್ ಚಲನಚಿತ್ರಗಳು ನಿರ್ಮಿಸಲ್ಪಟ್ಟಿವೆ. ವೆಕ್ಟರ್ ಆಧರಿತ ರೇಖಾಚಿತ್ರಗಳು ಒಂದುರೀತಿಯ ಸ್ಪಷ್ಟವಾದ ರೇಖಾಚಿತ್ರಗಳ ನೋಟವನ್ನು ಒದಗಿಸುತ್ತವೆ.
ಫ್ಲಾಶ್ ಅನಿಮೇಷನ್‌ಗಳು ವರ್ಲ್ಡ್ ವೈಡ್ ವೆಬ್‌ನ ಮಾಧ್ಯಮದ ಮೂಲಕ ವಿಶಿಷ್ಟವಾಗಿ ವಿತರಿಸಲ್ಪಡುತ್ತವೆ. ಇಂಥ ಸಂದರ್ಭಗಳಲ್ಲಿ ಅವು ಅನೇಕವೇಳೆ ಅಂತರಜಾಲ ವ್ಯಂಗ್ಯಚಿತ್ರ ಮಾಲಿಕೆಗಳು , ಆನ್‌ಲೈನ್ ವ್ಯಂಗ್ಯಚಿತ್ರ ಮಾಲಿಕೆಗಳು , ಅಥವಾ ವೆಬ್‌ವ್ಯಂಗ್ಯಚಿತ್ರಗಳು ಎಂದು ಉಲ್ಲೇಖಿಸಲ್ಪಡುತ್ತವೆ. ವೆಬ್ ಫ್ಲಾಶ್ ಅನಿಮೇಷನ್‌ಗಳು ಪಾರಸ್ಪರಿಕ ಪ್ರಭಾವವನ್ನು ಒಳಗೊಂಡಿರಬಹುದು ಮತ್ತು ಅವು ಅನೇಕ ವೇಳೆ ಒಂದು ಸರಣಿ ಯಲ್ಲಿ ಸೃಷ್ಸಿಸಲ್ಪಡುತ್ತವೆ. ಒಂದು ಫ್ಲಾಶ್ ಅನಿಮೇಷನ್ ವೆಬ್‌ಕಾಮಿಕ್ ಒಂದರಿಂದ ಪ್ರತ್ಯೇಕಿಸಲ್ಪಟ್ಟಿದೆ. ವೆಬ್‌ಕಾಮಿಕ್ ಎಂಬುದು ಒಂದು ವ್ಯಂಗ್ಯಚಿತ್ರ ಪಟ್ಟಿಯಾಗಿದ್ದು, ಒಂದು ಚಲಿತ ವ್ಯಂಗ್ಯಚಿತ್ರ ಮಾಲಿಕೆಗೆ ಬದಲಾಗಿ ವೆಬ್‌ನ ಮೂಲಕ ವಿತರಿಸಲ್ಪಡುತ್ತದೆ. ಫ್ಲಾಶ್ ಅನಿಮೇಷನ್ ಕೌಶಲವನ್ನು ಈಗ UKಯಾದ್ಯಂತದ ಶಾಲೆಗಳಲ್ಲಿ ಕಲಿಸಲಾಗುತ್ತಿದೆ ಮತ್ತು ಇದನ್ನು ಒಂದು GCSE ಮತ್ತು, o ಮಟ್ಟದ ಪಠ್ಯಕ್ರಮವಾಗಿ ತೆಗೆದುಕೊಳ್ಳಬಹುದಾಗಿದೆ.
ಇತಿಹಾಸ
ಬದಲಾಯಿಸಿಮ್ಯಾಕ್ರೋಮೀಡಿಯಾವು ಅಭಿವೃದ್ಧಿಪಡಿಸಿದ ಫ್ಲಾಶ್ ತಂತ್ರಜ್ಞಾನವನ್ನು (ಮ್ಯಾಕ್ರೋಮೀಡಿಯಾದ ಇತರ ಕಾರ್ಯಸೂಚಿಗಳ ಜೊತೆಯಲ್ಲಿ) ತಂತ್ರಾಂಶದ ದೈತ್ಯಕಂಪನಿಯಾದ ಅಡೋಬ್ 2005ರ ಏಪ್ರಿಲ್‌ನಲ್ಲಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು.
ರೆನ್ & ಸ್ಟಿಂಪಿ ಸೃಷ್ಟಿಕರ್ತನಾದ ಜಾನ್ ಕ್ರಿಕ್‌ಫಲೂಸಿ ಎಂಬಾತ ಮೊಟ್ಟಮೊದಲ ಬಾರಿಗೆ ಗಮನಸೆಳೆಯುವ ರೀತಿಯಲ್ಲಿ ಫ್ಲಾಶ್ ಅನಿಮೇಷನ್ ಸ್ವರೂಪವನ್ನು ಬಳಸಿದ. 1997ರ ಅಕ್ಟೋಬರ್ 15ರಂದು, ಅಂತರಜಾಲಕ್ಕೆಂದೇ[೧] ನಿರ್ದಿಷ್ಟವಾಗಿ ನಿರ್ಮಿಸಲ್ಪಟ್ಟ ದಿ ಗಾಡ್‌ಡ್ಯಾಮ್ ಜಾರ್ಜ್ ಲಿಕ್ಕರ್ ಪ್ರೋಗ್ರ್ಯಾಮ್ ಎಂಬ ಮೊದಲ ವ್ಯಂಗ್ಯಚಿತ್ರ ಮಾಲಿಕೆ ಸರಣಿಯನ್ನು ಆತ ವಿಧಿವತ್ತಾಗಿ ಬಿಡುಗಡೆಮಾಡಿದ. ಜಾರ್ಜ್ ಲಿಕ್ಕರ್ (ಈ ಕಾಲ್ಪನಿಕ ಪಾತ್ರವು ರೆನ್ & ಸ್ಟಿಂಪಿ ಸರಣಿಯಲ್ಲಿನ ಅವನ ಕೆಲಸವನ್ನು ಕೊನೆಗಾಣಿಸಿತು ಎಂಬ ಗಾಳಿಸುದ್ದಿಯಿತ್ತು) ಮತ್ತು ಆತನ ಮಂಕು-ಬುದ್ಧಿಯ ಸೋದರಸಂಬಂಧಿಯಾದ ಜಿಮ್ಮಿ ಎಂಬ ಅದೃಷ್ಟಹೀನ ದಡ್ಡ ಹುಡುಗನ (ದಿ ಹ್ಯಾಪ್ಲೆಸ್ ಈಡಿಯಟ್ ಬಾಯ್) ಪಾತ್ರಗಳು ಈ ಸರಣಿಯಲ್ಲಿದ್ದವು. ನಂತರದಲ್ಲಿ, ಕ್ರಿಕ್‌ಫಲೂಸಿಯು ಫ್ಲಾಶ್‌ನೊಂದಿಗೆ ಇನ್ನೂ ಹೆಚ್ಚಿನ ಚಲಿತಚಿತ್ರಗಳ ಯೋಜನೆಗಳನ್ನು ನಿರ್ಮಿಸಿದ. Icebox.comಗೆ ಮೀಸಲಾದ ಹಲವಾರು ಆನ್‌ಲೈನ್ ಕಿರುಚಿತ್ರಗಳು, ದೂರದರ್ಶನ ಜಾಹೀರಾತುಗಳು, ಮತ್ತು ಒಂದು ಸಂಗೀತ ವಿಡಿಯೋ ಇವು ಅವುಗಳಲ್ಲಿ ಸೇರಿದ್ದವು. ಅದಾದ ಕೆಲವೇ ದಿನಗಳ ನಂತರ, ಮತ್ತಷ್ಟು ನಿರಂತರತೆಯೊಂದಿಗೆ ವೆಬ್ ವ್ಯಂಗ್ಯಚಿತ್ರ ಮಾಲಿಕೆಗಳು ಅಂತರಜಾಲದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
1999ರ[೨] ಫೆಬ್ರುವರಿ 26ರಂದು ಫ್ಲಾಶ್ ಅನಿಮೇಷನ್‌ಗೆ ಸಂಬಂಧಿಸಿದ ಒಂದು ಪ್ರಮುಖ ಮೈಲಿಗಲ್ಲಿನಲ್ಲಿ, ವರ್ಲ್‌ಗರ್ಲ್ ಎಂಬ ಜನಪ್ರಿಯ ವೆಬ್ ಸರಣಿಯು ಕ್ರಮಬದ್ಧವಾಗಿ ನಿಗದಿಪಡಿಸಲ್ಪಟ್ಟ ಮೊದಲ ಫ್ಲಾಶ್ ಚಲಿತ ವೆಬ್ ಸರಣಿ ಎನಿಸಿಕೊಂಡಿತು. ಆ ದಿನದಂದು ಷೋಟೈಮ್ ಎಂಬ ಒಂದು ಅತ್ಯುತ್ತಮ ಗುಣಮಟ್ಟದ ಕೇಬಲ್ ವಾಹಿನಿಯಲ್ಲಿ ಒಂದು ಅಭೂತಪೂರ್ವವಾದ ರೀತಿಯಲ್ಲಿ ಇದು ಪೂರ್ವಪ್ರದರ್ಶನ ಕಂಡಿತು ಮತ್ತು ಷೋಟೈಮ್ ವೆಬ್‌ಸೈಟ್‌ನಲ್ಲಿ ಏಕಕಾಲಿಕವಾಗಿ ಬಿಡುಗಡೆಯಾಯಿತು.[೩] ಡೇವಿಡ್ B. ವಿಲಿಯಮ್ಸ್ ಸೃಷ್ಟಿಸಲ್ಪಟ್ಟು ಆತ ಸ್ತಾಪಿಸಿದ ವಿಷನರಿ ಮೀಡಿಯಾ ಎಂಬ ಸ್ಟುಡಿಯೋದಿಂದ ತಯಾರಿಸಲ್ಪಟ್ಟ ವರ್ಲ್‌ಗರ್ಲ್ ಸರಣಿಯು ಸರ್ವರೀತಿಯಲ್ಲೂ-ಶಕ್ತಿಯುತವಾಗಿರುವ "ಮಾಧ್ಯಮತಂತ್ರಜ್ಞ ಸಾಮ್ರಾಜ್ಯ"ವೊಂದರಿಂದ ಆಳಲ್ಪಡುತ್ತಿರುವ ಭವಿಷ್ಯಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಓರ್ವ ಅಸಾಮಾನ್ಯ ನಾಯಕಿಯ ಸಾಹಸಕಥೆಗಳನ್ನು ಈ ಸರಣಿಯು ಅನುಸರಿಸುತ್ತದೆ. ಈ ಸರಣಿಯು ಮೂಲತಃ ಸೀಮಿತ ಅನಿಮೇಷನ್ ಮತ್ತು ಧ್ವನಿಯೊಂದಿಗಿನ ಒಂದು ವೆಬ್ ಕಾಮಿಕ್ ಆಗಿ 1997ರ ವಸಂತಋತುವಿನಲ್ಲಿ ವಿಧಿವತ್ತಾಗಿ ಬಿಡುಗಡೆಯಾಯಿತು.[೪] Lycos.com ಮತ್ತು ವೆಬ್TV ಸೇರಿದಂತೆ ಆನ್‌ಲೈನ್ ಸಿಂಡಿಕೇಟಿನ ಪಾಲುದಾರಿಕೆಯನ್ನು ಗಳಿಸಿದ ನಂತರ, 1998ರ ಜುಲೈನಲ್ಲಿ ಮೊಟ್ಟಮೊದಲಬಾರಿಗೆ ಸರಣಿಯು ಫ್ಲಾಶ್ ಅನಿಮೇಷನ್‌ನ್ನು ಅಳವಡಿಸಿಕೊಂಡಿತು.[೫] ಷೋಟೈಮ್ ಕೇಬಲ್ ವಾಹಿನಿಯಲ್ಲಿನ ತನ್ನ ಪ್ರಥಮ ಪ್ರವೇಶದ ನಂತರ, ಷೋಟೈಮ್ ವೆಬ್‌ಸೈಟ್‌ನಲ್ಲಿನ[೬] 50ಕ್ಕೂ ಹೆಚ್ಚಿನ ಫ್ಲಾಶ್ ವೆಬ್ ಸಂಚಿಕೆಗಳಲ್ಲಿ ಸದರಿ ಶೀರ್ಷಿಕೆಪಾತ್ರದ ನಾಯಕಿಯು ಕಾಣಿಸಿಕೊಂಡಳು.[೭]
ಸರಿಸುಮಾರು ಅದೇ ವೇಳೆಗೆ, ಪಾರಸ್ಪರಿಕ ಪ್ರಭಾವದ "ಫ್ರಾಗ್ ಇನ್ ಎ ಬ್ಲೆಂಡರ್" ಎಂಬ ಅನಿಮೇಷನ್‌ನ್ನು ಜೋ ಕಾರ್ಟೂನ್ ಬಿಡುಗಡೆಮಾಡಿತು. "ಸಾಂಕ್ರಾಮಿಕ ಸ್ವರೂಪದಲ್ಲಿ ಪ್ರಚಂಡ ಯಶಸ್ಸನ್ನು ಹಬ್ಬಿಸಿದ" ಅಂತರಜಾಲ ಮಾಧ್ಯಮದಲ್ಲಿನ ನಿಜವಾದ ಮೊಟ್ಟಮೊದಲ ಕೃತಿ ಎಂಬ ಕೀರ್ತಿಯನ್ನು ಪಡೆದ ಈ ಅನಿಮೇಷನ್ ಚಿತ್ರವು 1999ರಲ್ಲಿ ಬಿಡುಗಡೆಯಾದಂದಿನಿಂದಲೂ 90 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿತು.
ನವೆಂಬರ್ 1999ರಲ್ಲಿ ದಿ ವಾನ್ ಘೌಲ್ಸ್ ನ ಪ್ರತ್ಯಕ್ಷ ಪ್ರಸಾರವಾಯಿತು. ಮೂಲ ಗೀತೆಗಳನ್ನು ಒಳಗೊಂಡಿರುವ ವ್ಯಂಗ್ಯಚಿತ್ರ ಮಾಲಿಕೆಯ ಸಂಚಿಕೆಗಳೊಂದಿಗಿನ ಮೊದಲ ಸಂಗೀತ ಸಮೂಹವು ಇದರಲ್ಲಿ ಸೇರಿತ್ತು. ಇದು 1970ರ ದಶಕದ ಶನಿವಾರದ ಬೆಳಗಿನ ವ್ಯಂಗ್ಯಚಿತ್ರ ಮಾಲಿಕೆಗಳ ಧಾಟಿಯಲ್ಲಿತ್ತು. ಹಲವಾರು ಜನಪ್ರಿಯ ವೆಬ್ ಪ್ರವೇಶತಾಣಗಳು 1990ರ ದಶಕದ ಡಾಟ್-ಕಾಮ್ ಉತ್ಕರ್ಷದ ಅವಧಿಯಲ್ಲಿ ಫ್ಲಾಶ್ ಅನಿಮೇಷನ್‌ನ್ನು ಒಳಗೊಂಡಿದ್ದವು. ಐಸ್‌ಬಾಕ್ಸ್, ಮಾಂಡೋಮೀಡಿಯಾ, ಕ್ಯಾಂಪ್‌ಚೊವಾಸ್, ಮೀಡಿಯಾಟ್ರಿಪ್, ಬಾಗ್‌ಬೀಸ್ಟ್ ಮತ್ತು ಆಟಂಫಿಲ್ಮ್ಸ್ ಇಂಥ ಕೆಲವು ತಾಣಗಳಲ್ಲಿ ಸೇರಿದ್ದವು. ಮಾರ್ವೆಲ್ ಕಾಮಿಕ್ಸ್‌ನ ಸ್ಟಾನ್ ಲೀಯು ಒಂದು ಚಲಿತ ವ್ಯಂಗ್ಯಚಿತ್ರಗಳ ತಾಣವನ್ನು ಪ್ರಾರಂಭಿಸಿದ.
ವಯಸ್ಕರಿಗೆ-ಮಾತ್ರ ಮೀಸಲಾಗಿದ್ದ ಅನೇಕ ಫ್ಲಾಶ್ ವ್ಯಂಗ್ಯಚಿತ್ರ ಮಾಲಿಕೆ ತಾಣಗಳ ಹರಡಿಕೆಯನ್ನೂ ಅಂತರಜಾಲವು ಕಂಡಿತು. ಆ ಅವಧಿಗೆ ಸೇರಿದ ಕೆಲವೊಂದು ಪ್ರದರ್ಶನ ಕಾರ್ಯಕ್ರಮಗಳು ಸಾಂಪ್ರದಾಯಿಕ ಮಾಧ್ಯಮಗಳಿಗೆ ರೂಪಾಂತರವನ್ನು ಮಾಡಿದವು. ಕ್ವೀರ್ ಡಕ್, ಗ್ಯಾರಿ ದಿ ರ್ಯಾಟ್, ಹ್ಯಾಪಿ ಟ್ರೀ ಫ್ರೆಂಡ್ಸ್, ಮತ್ತು ರಾಜಕೀಯ-ದೃಷ್ಟಿಕೋನದ ಜಿಬ್‌ಜಾಬ್ ಕಿರುಚಿತ್ರಗಳು ಇದರಲ್ಲಿ ಸೇರಿದ್ದವು. ಪ್ರಾಸಂಗಿಕವಾಗಿ, ಸದರಿ ಪ್ರವೃತ್ತಿಯು ತಿರುವುಮುರುವಾಗಿದೆ: ABC ಮತ್ತು ಫಾಕ್ಸ್‌ಗಳೆರಡರಿಂದಲೂ ರದ್ದುಪಡಿಸಲ್ಪಟ್ಟ ನಂತರ, ಆಟಂ ಫಿಲ್ಮ್ಸ್ ಸಂಸ್ಥೆಯು ಅಂತರಜಾಲಕ್ಕೆ ಮಾತ್ರ ಮೀಸಲಾದ ದಿ ಕ್ರಿಟಿಕ್ ನ ಸಂಚಿಕೆಗಳನ್ನು 2000-2001ರಲ್ಲಿ ಸೃಷ್ಟಿಸಿತು. ಮತ್ತೊಂದು ನಿದರ್ಶನದಲ್ಲಿ, ವಿಶಾಲ ಪರದೆಗೆ ಹೆಚ್ಚೂಕಮ್ಮಿ ಫ್ಲಾಶ್ ರೂಪಾಂತರಗೊಂಡಿತು. 2001ರಲ್ಲಿ, ಮೊಟ್ಟಮೊದಲ ಫ್ಲಾಶ್-ಚಲಿತ ರೂಪಕ ಚಲನಚಿತ್ರ ಎನಿಸಿಕೊಳ್ಳಬೇಕಿದ್ದ ದುರ್ವಿಧಿಯ "ಲಿಲ್' ಪಿಂಪ್" ಚಿತ್ರದ ಕುರಿತಾದ ನಿರ್ಮಾಣಕಾರ್ಯವು ಆರಂಭಗೊಂಡಿತು. ಇದು ಒಂದು ಅಂತರಜಾಲದ ಸರಣಿಯಾಗಿಯೂ ಪ್ರಸಾರಗೊಳ್ಳಲು ಪ್ರಾರಂಭಗೊಂಡಿತು.
ಅದರ ಅಂತಃಸತ್ವದ ರೀತಿಯಲ್ಲಿಯೇ ಸಮರ್ಥವಾಗಿ ವಿವಾದಾತ್ಮಕವಾಗಿದ್ದ ಈ ಚಿತ್ರವು ಒಂದು ಗಮನಾರ್ಹವಾದ ದೊಡ್ಡ ಅಂದಾಜುವೆಚ್ಚವನ್ನು ಹೊಂದಿತ್ತು. ಅಷ್ಟೇ ಅಲ್ಲ, ಹಲವಾರು ಚಿರಪರಿಚಿತ ನಟರು (ವಿಲಿಯಂ ಷಾಟ್ನರ್, ಬೆರ್ನೀ ಮ್ಯಾಕ್, ಮತ್ತು ಲಿಲ್ ಕಿಮ್ ಸೇರಿದಂತೆ), ಒಂದು ಸಂಪೂರ್ಣ ತಂಡ, ಹಾಗೂ ಸರಿಸುಮಾರು ನಿಮಿಷಗಳ ನಿರಂತರವಾದ ಅವಧಿಯನ್ನು ಇದು ಹೊಂದಿತ್ತು. ಸದರಿ ಚಲನಚಿತ್ರವನ್ನು ಸೋನಿ ಪಿಕ್ಷರ್ಸ್ ಸಂಸ್ಥೆಯು ಬಿಡುಗಡೆ ಮಾಡದಿರಲು ನಿರ್ಧರಿಸಿತಾದರೂ, ಅಂತಿಮವಾಗಿ ಲಯನ್'ಸ್ ಗೇಟ್ ಸಂಸ್ಥೆಯಿಂದ ಇದು DVDಯ ಮೂಲಕ ಬಿಡುಗಡೆಗೊಂಡಿತು.
ಹಲವಾರು ಧ್ವನಿಮುದ್ರಿಕಾ ಕಂಪನಿಗಳು ಮಡೋನ್ನಾ, ದಿ ಬೀಸ್ಟೀ ಬಾಯ್ಸ್ ಮತ್ತು ಟೆನೇಷಿಯಸ್ D ಸೇರಿದಂತೆ ಆನ್‌ಲೈನ್ ಮೂಲಕ ತಮ್ಮ ಕಲಾವಿದರ ಕೃತಿಗಳಿಗೆ ಪ್ರಚಾರವನ್ನು ದೊರಕಿಸಿಕೊಂಡುವ ದೃಷ್ಟಿಯಿಂದ ಚಲಿತ ಸಂಗೀತದ ವಿಡಿಯೋಗಳನ್ನು ಬಿಡುಗಡೆ ಮಾಡುವುದರೊಂದಿಗೆ ಹೊಸತೊಂದು ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡವು. ಆದಾಗ್ಯೂ, ಫ್ಲಾಶ್ ಚಲಿತ ಸಂಗೀತದ ವಿಡಿಯೋಗಳ ವಿಸ್ತರಣೆಗೆ ಅನುವುಮಾಡಿಕೊಡುವ ರೀತಿಯಲ್ಲಿ ಯಾವುದೂ ಸಹ ಪ್ರಚಂಡ ಯಶಸ್ಸನ್ನು ದಾಖಲಿಸಲಿಲ್ಲ.
ಉಳಿದವರ ಪೈಕಿ ಆಡಂ ಸ್ಯಾಂಡ್ಲರ್ ಹಾಗೂ ಟಿಮ್ ಬರ್ಟನ್ ಎಂಬಿಬ್ಬರು ಅಂತರಜಾಲಕ್ಕೆ-ಮಾತ್ರವೇ ಮೀಸಲಾದ ಮೂಲ ಚಲಿತಕೃತಿಗಳನ್ನು ಬಿಡುಗಡೆ ಮಾಡಿದರಾದರೂ ಸಹ, ಹಣಕಾಸಿನ ದೃಷ್ಟಿಯಿಂದ ಯಶಸ್ವೀ ಎನಿಸಿಕೊಳ್ಳಬಹುದಾದ ಮಾದರಿಗಳನ್ನು ರೂಪಿಸುವಲ್ಲಿ ವಿಫಲರಾದರು ಮತ್ತು ಇದರಿಂದಾಗಿ ಆ ಪ್ರವೃತ್ತಿಯು ಕಣ್ಮರೆಯಾಯಿತು. ಕಾರ್ಯಸಾಧ್ಯವಾದ ಕಿರುಪಾವತಿಯ ವ್ಯವಸ್ಥೆಗಳ ಒಂದು ಕೊರತೆಯೂ ಸಹ ಇದಕ್ಕೆ ಹೆಚ್ಚಿನ ರೀತಿಯಲ್ಲಿ ಕಾರಣವಾಯಿತು.
ಹಲವಾರು ಜನಪ್ರಿಯ ಆನ್‌ಲೈನ್ ಸರಣಿಗಳು ಪ್ರಸ್ತುತ ಫ್ಲಾಶ್‌ನಲ್ಲಿ ನಿರ್ಮಾಣಗೊಂಡಿವೆ. ಅಂಥ ಕೆಲವು ಉದಾಹರಣೆಗಳೆಂದರೆ: ESPN ಹಾಗೂ ಅನಿಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳಿಂದ ನಿರ್ಮಿಸಲ್ಪಟ್ಟ ಎಮಿ ಪ್ರಶಸ್ತಿ-ವಿಜೇತ ಆಫ್-ಮೈಕ್ಸ್ ; ವಾರ್ನರ್ ಬ್ರದರ್ಸ್‌ನಿಂದ ನಿರ್ಮಿಸಲ್ಪಟ್ಟ ಗೋಥಾಮ್ ಗರ್ಲ್ಸ್ ; ಫ್ಯೂಚರ್ ಥಾಟ್ ಪ್ರೊಡಕ್ಷನ್ಸ್‌ನಿಂದ ನಿರ್ಮಿಸಲ್ಪಟ್ಟ ಕ್ರೈಮ್ ಟೈಮ್, ಮತ್ತು ಮೈಕ್ ಮತ್ತು ಮ್ಯಾಟ್ ಚಾಪ್‌ಮನ್‌ರಿಂದ ನಿರ್ಮಿಸಲ್ಪಟ್ಟ ಹೋಮ್‌ಸ್ಟಾರ್‌ರನ್ನರ್.
ಮ್ಯಾಕ್ರೋಮೀಡಿಯಾ ಫ್ಲಾಶ್ ಬಳಸಿಕೊಂಡು ಅನೇಕ ಚಲಿತ ದೂರದರ್ಶನ ಸರಣಿಗಳು ನಿರ್ಮಾಣಗೊಂಡಿವೆ. ಸದರಿ ತಂತ್ರಾಂಶವನ್ನು ಬಳಸುವುದರಿಂದಾಗಿ ಸ್ಪರ್ಧಾತ್ಮಕವಾದ ರೀತಿಯಲ್ಲಿ ಕಡಿಮೆಯಾಗುವ ನಿರ್ಮಾಣವೆಚ್ಚ ಹಾಗೂ ಒಂದು ವಿಶಿಷ್ಟವಾದ ಶೈಲಿಯನ್ನು ಸಾಧಿಸಲು ಇರುವ ಅವಕಾಶವು ಇಂಥ ನಿರ್ಮಾಣಗಳಿಗೆ ಪ್ರೇರಣೆಯಾಗಿವೆ. ಇಂಥ ಕೆಲವು ಉದಾಹರಣೆಗಳೆಂದರೆ: ಮೆಟಲೋಕ್ಯಾಲಿಪ್ಸ್ , ಬೀಯಿಂಗ್ ಇಯಾನ್ , ಫಾಸ್ಟರ್'ಸ್ ಹೋಮ್ ಫಾರ್ ಇಮ್ಯಾಜಿನರಿ ಫ್ರೆಂಡ್ಸ್ , ಕಪ್ಪಾ ಮೈಕಿ , ಹೈ ಹೈ ಪಫಿ ಅಮಿಯೂಮಿ , ಹ್ಯಾಪಿ ಟ್ರೀ ಫ್ರೆಂಡ್ಸ್ , ಆಡ್ ಜಾಬ್ ಜ್ಯಾಕ್ , ವೋವ್! & ವಾವ್! ವುಬ್‌ಝಿ! , BBCಯ ಮೂರು ಪ್ರದರ್ಶನವಾದ ಮಂಕಿ ಡಸ್ಟ್ , ಚಾನೆಲ್ ಫೋರ್‌ನ ಕಾರ್ಯಕ್ರಮವಾದ ಮಾಡರ್ನ್ ಟಾಸ್ , ಯಿನ್ ಯಾಂಗ್ ಯೋ , ಆಘ್! ಇಟ್ಸ್ ದಿ ಮಿಸ್ಟರ್ ಹೆಲ್ ಷೋ , ಸಿನಿಮ್ಯಾಕ್ಸ್ನ ಎಲಿ'ಸ್ ಡರ್ಟಿ ಜೋಕ್ಸ್ , ಷೋಟೈಮ್‌ನಿಂದ ಬಂದ ಕ್ವೀರ್ ಡಕ್ , ಹಾಗೂ ಕಾಮಿಡಿ ಸೆಂಟ್ರಲ್‌ನಲ್ಲಿ ಬಂದ ಷಾರ್ಟೀಸ್ ವಾಚಿಂಗ್ ಷಾರ್ಟೀಸ್ .
ಕಾರ್ಟೂನ್ ನೆಟ್‌ವರ್ಕ್‌ನ ಅಡಲ್ಟ್ ಸ್ವಿಮ್ ಕಾರ್ಯಸೂಚಿಯ ವಿಭಾಗದಲ್ಲಿ ಪ್ರಸಾರಗೊಂಡ ಹೋಮ್ ಮೂವೀಸ್ ಮತ್ತು ಹಾರ್ವೆ ಬರ್ಡ್‌ಮನ್, ಅಟಾರ್ನಿ ಅಟ್ ಲಾ ನಂಥ ಇತರ ದೂರದರ್ಶನ ಸರಣಿಗಳು ಇತರ ಅನಿಮೇಷನ್ ತಂತ್ರಜ್ಞಾನದಿಂದ ಫ್ಲಾಶ್‌ಗೆ ಬದಲಾಯಿಸಿಕೊಂಡಿವೆ.
ಅನೇಕ ಅನಿಮೇಷನ್ ಚಲನಚಿತ್ರೋತ್ಸವಗಳು "ವೆಬ್ ವ್ಯಂಗ್ಯಚಿತ್ರ ಮಾಲಿಕೆಗಳು" ಅಥವಾ "ಅಂತರಜಾಲ ವ್ಯಂಗ್ಯಚಿತ್ರ ಮಾಲಿಕೆಗಳ" ವಿಭಾಗಗಳಿಗೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಪ್ರತ್ಯೇಕವಾದ ವರ್ಗಗಳನ್ನು ಸೇರಿಸುವ ಮೂಲಕ, ಫ್ಲಾಶ್ ಅನಿಮೇಷನ್‌ನ ಜನಪ್ರಿಯತೆಗೆ ಪ್ರತಿಸ್ಪಂದನೆಯನ್ನು ನೀಡಿವೆ.
ಇದರ ಜೊತೆಗೆ, ಪ್ರತ್ಯೇಕವಾಗಿರುವ ಹಲವಾರು ವೆಬ್-ಆಧರಿತ ಫ್ಲಾಶ್ ಸ್ಪರ್ಧೆಗಳು ನೆಲೆಗಾಣಿಸಲ್ಪಟ್ಟಿವೆ. ಕೇವಲ "ಅಂತರಜಾಲಕ್ಕಾಗಿ ಮಾತ್ರವೇ ನಿರ್ಮಿಸಲ್ಪಟ್ಟ" ಚಿತ್ರಗಳ ವರ್ಗವು ಮಾತ್ರವೇ ಉಳಿಯಲಿದೆ ಎಂದು ಊಹಿಸಲಾಗಿದೆ. ಏಕೆಂದರೆ, ಅನಿಮೇಷನ್ ಚಲನಚಿತ್ರೋತ್ಸವಗಳಲ್ಲಿನ ಸ್ಪರ್ಧೆಗಳು ಚಲನಚಿತ್ರದ ಉದ್ದ ಹಾಗೂ ಹಂಚಿಕೆಯ ವಾಹಿನಿಯಿಂದ ವ್ಯಾಖ್ಯಾನಿಸಲ್ಪಟ್ಟ ವರ್ಗಗಳಲ್ಲಿ ವಿಶಿಷ್ಟವಾಗಿ ವ್ಯವಸ್ಥೆಗೊಳಿಸಲ್ಪಟ್ಟಿವೆಯೇ ಹೊರತು, ಚಲನಚಿತ್ರಗಳನ್ನು ಸೃಷ್ಟಿಸಲು ಬಳಸಲಾದ ಅನಿಮೇಷನ್ ತಂತ್ರಗಳು ಅಥವಾ ಸಾಧನಗಳ ವರ್ಗಗಳ ಆಧಾರದ ಮೇಲೆ ಅಲ್ಲ.
ಟೈಮ್‌ಲೈನ್ - ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಫ್ಲಾಶ್ ಯೋಜನೆಗಳು
ಬದಲಾಯಿಸಿ2001 | TV ವೇರ್‌ಹೌಸ್ | ಈ BBC ಕಾರ್ಯಸೂಚಿಗೆ ಸಂಬಂಧಿಸಿದ ಶೀರ್ಷಿಕೆ ಸರಣಿಯನ್ನು ಫ್ಲಾಶ್‌ನಲ್ಲಿ ಎಲಿಫೆಂಟ್ ಎಗ್ ಸಂಸ್ಥೆಯು ನಿರ್ಮಿಸಿತು. |
2002 | ಗ್ಯಾರಿ ದಿ ರ್ಯಾಟ್ | ಮೂಲತಃ ಒಂದು ವೆಬ್ ವ್ಯಂಗ್ಯಚಿತ್ರ ಮಾಲಿಕೆಯಾದ ಇದನ್ನು ನಂತರದಲ್ಲಿ 30 ನಿಮಿಷದ ಒಂದು ಸರಣಿಯಾಗಿ ಸೃಷ್ಟಿಸಲಾಯಿತು, ಇದರ ಅನಿಮೇಷನ್ ಕಾರ್ಯವನ್ನು ಸ್ಪೈಕ್ TVಗಾಗಿ ನಿಕ್ ಡಿಜಿಟಲ್ ಸ್ಟುಡಿಯೋಸ್ ಈಸ್ಟ್ ಸಂಸ್ಥೆಯು ಕೈಗೊಂಡಿತು. |
2002 | ಮೀನಾ Archived 2010-06-05 ವೇಬ್ಯಾಕ್ ಮೆಷಿನ್ ನಲ್ಲಿ. | ಫ್ಯೂಚರ್ ಥಾಟ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ರೂಪಿಸಲ್ಪಟ್ಟ ಯೋಜನೆಗೆ ಸಂಬಂಧಿಸಿದ ಪಬ್ಲಿಕ್ ಸರ್ವೀಸ್ ಅನೌನ್ಸ್‌ಮೆಂಟ್‌ನ (PSAನ) ಒಂದು ನೂರು ನಿಮಿಷಗಳ ಒಂದು ಸರಣಿ. |
2002 | ದಿ ಪ್ರೌಡ್ ಫ್ಯಾಮಿಲಿ ಷಾರ್ಟೀಸ್ | ದಿ ಪ್ರೌಡ್ ಫ್ಯಾಮಿಲಿ ಯ ಈ ಸಂಚಿಕೆಗಳ ಅನಿಮೇಷನ್ ಕಾರ್ಯಗಳು ಅನಿಮೊಬೈಲ್ ಹಣೆಪಟ್ಟಿಯಡಿಯಲ್ಲಿ ಹೈಪರಿಯನ್ ಪಿಕ್ಷರ್ಸ್ ಸಂಸ್ಥೆಯಲ್ಲಿ ಕೈಗೊಳ್ಳಲ್ಪಟ್ಟವು. ಎರಡು ಸಂಚಿಕೆಗಳ (ದಿ ಬೀಚ್ ಮತ್ತು ಪಿಕ್ನಿಕ್ ) ಅನಿಮೇಷನ್ ಕಾರ್ಯವನ್ನು ಅನಿಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ನಡೆಸಿತು. |
2002 | ಹೋಮ್ ಮೂವೀಸ್ | ಈ ಸರಣಿಯ ಎರಡನೇ ಸರಣಿಯನ್ನು ಫ್ಲಾಶ್‌ನಲ್ಲಿ ನಿರ್ಮಿಸಲಾಯಿತು. |
2002 | ¡ಮ್ಯೂಚಾ ಲ್ಯೂಚಾ! | ಇದು US ನೆಟ್‌ವರ್ಕ್‌ನ ಮೊದಲ ಫ್ಲಾಶ್ ಸರಣಿಗಳಲ್ಲಿ ಒಂದು. |
2002 | ದಿ ಮಿಸ್ಟರ್ ಡಿಂಕ್ ಷೋ | ಮೊದಲಬಾರಿಗೆ ಪ್ರಸಾರವಾದ ಕೆನಡಾದ ಫ್ಲಾಶ್ ನಿರ್ಮಾಣ. |
2002 | ಬಾಬಿನಾಗ್ಸ್ | BBC ಟೂ ವೇಲ್ಸ್‌ನಲ್ಲಿ ಪ್ರಸಾರವಾಯಿತು. |
2002 | ವೀಬ್ಲ್ ಅಂಡ್ ಬಾಬ್ | MTV2 UKಯಲ್ಲಿಯೂ ಪ್ರಸಾರಮಾಡಲ್ಪಟ್ಟ ಒಂದು ವೆಬ್ ವ್ಯಂಗ್ಯಚಿತ್ರ ಮಾಲಿಕೆ. |
200? | ಕ್ಸಿಯಾವೋ ಕ್ಸಿಯಾವೋ #3 | MTVಯಲ್ಲಿ ಪ್ರಸಾರವಾದ ಒಂದು ಮನುಷ್ಯನ ರೇಖಾಕೃತಿಯ ಅನಿಮೇಷನ್ ಚಿತ್ರ |
2005 | ಸ್ಟ್ರೋಕರ್ ಅಂಡ್ ಹೂಪ್ | ರದ್ದುಮಾಡಲ್ಪಟ್ಟ ಅಡಲ್ಟ್ ಸ್ವಿಮ್ ಸರಣಿಗಳು. |
ಟೈಮ್‌ಲೈನ್ - ಇತರ ಫ್ಲಾಶ್ ಚಲಿತ TV ಸರಣಿಗಳು
ಬದಲಾಯಿಸಿ2010 | ಅಗ್ಲಿ ಅಮೆರಿಕನ್ಸ್ | ಕಾಮಿಡಿ ಸೆಂಟ್ರಲ್‌ನಿಂದ ಇದು ಬಿಡುಗಡೆಯಾಯಿತು. ಸೂಪರ್‌ಜೈಲ್‌ನ ಸೃಷ್ಟಿಕರ್ತರಾದ ಔಗನ್‌ಬ್ಲಿಕ್ ಸ್ಟುಡಿಯೋಸ್‌ನಿಂದ ಇದು ಸೃಷ್ಟಿಸಲ್ಪಟ್ಟಿತು. |
ಟೈಮ್‌ಲೈನ್ - ಮೊದಲ ಫ್ಲಾಶ್ ರೂಪಕ ಚಲನಚಿತ್ರ ಯೋಜನೆಗಳು (ಚಿತ್ರಮಂದಿರದಲ್ಲಿ ಬಿಡುಗಡೆಯಾದ ಚಿತ್ರಗಳು)
ಬದಲಾಯಿಸಿಯೋಜನೆಯ | ಟಿಪ್ಪಣಿಗಳು | |
2005 | ದಿ ಗೋಲ್ಡನ್ ಬ್ಲೇಜ್ | ಬೈರನ್ E. ಕಾರ್ಸನ್‌ನಿಂದ ನಿರ್ದೇಶಿಸಲ್ಪಟ್ಟ ಈ ಚಿತ್ರವು, ಬ್ಲೇರ್ ಅಂಡರ್‌ವುಡ್ ಹಾಗೂ ಮೈಕೇಲ್ ಕ್ಲಾರ್ಕ್ ಡಂಕನ್‌ರ ಧ್ವನಿಗಳನ್ನು ಹೊಂದಿದ್ದು ಚಿತ್ರಮಂದಿರದಲ್ಲಿ ಒಂದು ಸೀಮಿತವಾದ ಓಟವನ್ನು ಕಾಣುವ ಮೂಲಕ, ವಿಶಾಲ ಪರದೆಯ ಮೇಲೆ ಬಿಡುಗಡೆಯಾಗುವಲ್ಲಿನ ಮೊಟ್ಟಮೊದಲ ಫ್ಲಾಶ್ ಚಲಿತ ಚಲನಚಿತ್ರವೆನಿಸಿಕೊಂಡಿತು. |
2005 | ಕ್ಸುಕ್ಸಿನ್ಹಾ ಎ ಗುಟೋ ಕಾಂಟ್ರಾ ಒಸ್ ಮಾನ್ಸ್‌ಟ್ರಸ್ ಡೊ ಎಸ್‌ಪ್ಯಾಕೊ | ಕ್ಲೆವೆರ್‌ಸನ್ ಸಾರೆಂಬಾ ಎ ಆಂಡ್ರೆ ಪ್ಯಾಸ್ಸೊಸ್‌ನಿಂದ ನಿರ್ದೇಶಿಸಲ್ಪಟ್ಟು, ರಯೋ ಡಿ ಜನೈರೋದಲ್ಲಿನ ಲ್ಯಾಬೊಸಿನೆಯಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವು 2005ರ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಗೊಂಡಿತು ಮತ್ತು ಬ್ರೆಜಿಲ್‌ನಲ್ಲಿ ಒಂದು ಅದ್ಭುತ ಯಶಸ್ಸನ್ನು ದಾಖಲಿಸಿತು. |
2006 | Romeo & Juliet: Sealed with a Kiss | ಡಿಸ್ನೆ ಸಂಸ್ಥೆಯ ಹಿಂದಿನ ಚಲನ ವ್ಯಂಗ್ಯಚಿತ್ರಕಾರನಾದ ಫಿಲ್ ನಿಬ್ಬಲಿಂಕ್ ಇದನ್ನು ರೂಪಿಸಲು 4 1/2 ವರ್ಷಗಳನ್ನು ತೆಗೆದುಕೊಂಡ ಮತ್ತು ಮೊಹೊ ಸಂಯೋಜನೆಯೊಂದಿಗೆ ಒಂದು ವ್ಯಾಕಮ್ ಟ್ಯಾಬ್ಲೆಟ್‌ನ್ನು ಫ್ಲಾಶ್ 4ರೊಳಗೆ ನೇರವಾಗಿ ಬಳಸುವ ಮೂಲಕ ಆತ 112,000 ಚೌಕಟ್ಟುಗಳನ್ನು ಬರೆದ. |
2006 | ದಟ್ ಡಾರ್ನ್ ಜೀಸಸ್ | ಇದು ಹತ್ತೊಂಬತ್ತು ನಿಮಿಷಗಳ ಒಂದು ಚಲಿತ ಭಾಗವಾಗಿದ್ದು, 1.85:1 ಮತ್ತು HD 1080 (1920 px X 1080 px) ಅನುಪಾತದಲ್ಲಿ ಯೂನಿವರ್ಸಲ್ ರಿಮೋಟ್ Archived 2011-02-01 ವೇಬ್ಯಾಕ್ ಮೆಷಿನ್ ನಲ್ಲಿ. ಚಲನಚಿತ್ರಕ್ಕಾಗಿ ಫ್ಯೂಚರ್ ಥಾಟ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿತು. |
2007 | Turma da Mônica: Uma Aventura no Tempo | ರಯೋ ಡಿ ಜನೈರೋದ ಲ್ಯಾಬೊಸಿನೆಯಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವನ್ನು ಮೌರಿಸಿಯೋ ಡೆ ಸೌಸಾ ನಿರ್ದೇಶಿಸಿದ್ದು, ಬ್ರೆಜಿಲ್‌ನ ಅನಿಮೇಷನ್ ಇತಿಹಾಸದಲ್ಲಿ ಇದೊಂದು ಗಲ್ಲಾಪೆಟ್ಟಿಗೆಯ ಅತಿದೊಡ್ಡ ಯಶಸ್ಸಿನ ಚಿತ್ರವೆನಿಸಿಕೊಂಡಿದೆ. |
2007 | ಚಿಲ್ಲಿ ಬೀಚ್ Archived 2012-06-15 ವೇಬ್ಯಾಕ್ ಮೆಷಿನ್ ನಲ್ಲಿ.: ದಿ ವರ್ಲ್ಡ್ ಈಸ್ ಹಾಟ್ ಎನಫ್" | ಇದು ಮಾರ್ಚ್ ಎಂಟರ್‌ಟೈನ್‌ಮೆಂಟ್‌ನಿಂದ ನಿರ್ಮಿಸಲ್ಪಟ್ಟು http://www.ilaugh.comನಿಂದ[ಶಾಶ್ವತವಾಗಿ ಮಡಿದ ಕೊಂಡಿ] ಪ್ರದರ್ಶಿಸಲ್ಪಟ್ಟ, ಚಿಲ್ಲಿ ಬೀಚ್ ಎಂಬ ದೂರದರ್ಶನ ಪ್ರಸಾರರೂಪದ ಚಲಿತ ಸರಣಿಯಿಂದ ಪಡೆಯಲಾದ ಒಂದು ಉಪೋತ್ಪನ್ನವಾಗಿದೆ. |
2008 | ಮಿಕಿ ದಿ ಸ್ಕ್ವಿರಿಲ್ | ಚಾಜ್ ಬಾಟಮ್ಸ್‌ನಿಂದ ನಿರ್ದೇಶಿಸಲ್ಪಟ್ಟ ಈ ಚಿತ್ರವು, 76 ನಿಮಿಷ ಅವಧಿಯ ಒಂದು ರೂಪಕ ಚಲಿತ ಚಿತ್ರವಾಗಿದ್ದು, ಒಂದು ವ್ಯಾಕಮ್ ಗ್ರಾಫೈರ್ ಟ್ಯಾಬ್ಲೆಟ್ ಮೇಲೆ 6,500 ಚೌಕಟ್ಟುಗಳೊಂದಿಗೆ ಚಿತ್ರಿಸಲ್ಪಟ್ಟಿದೆ. |
2008 | ದಿ ಸೀಕ್ರೆಟ್ ಆಫ್ ಕೆಲ್ಸ್ | ರೂಪಕ ಚಿತ್ರದಷ್ಟು-ಉದ್ದದ, ಕೈನಲ್ಲಿ-ಬರೆಯಲ್ಪಟ್ಟ ಈ ಚಲಿತ ಚಲನಚಿತ್ರವನ್ನು ಫ್ರಾನ್ಸ್ ಮತ್ತು ಬೆಲ್ಜಿಯಂದಲ್ಲಿನ ಸಹಯೋಗ ನಿರ್ಮಾಣದೊಂದಿಗೆ, ಕಾರ್ಟೂನ್ ಸಲೂನ್ ಎಂಬ ಐರಿಷ್ ಸ್ಟುಡಿಯೋ ನಿರ್ಮಿಸಿತು. ಚಲನಚಿತ್ರದ ಬಹುಭಾಗವು ಸಾಂಪ್ರದಾಯಿಕವಾದ ರೀತಿಯಲ್ಲಿ ಚಲಿತ ಸ್ವರೂಪವನ್ನು ಹೊಂದಿದ್ದರೂ ಸಹ, ಚಿತ್ರದ ಹಲವಾರು ಸನ್ನಿವೇಶಗಳಿಗೆ ಫ್ಲಾಶ್‌ನ್ನು ಬಳಸಲಾಗಿದೆ. |
2008 | ಸೀತಾ ಸಿಂಗ್ಸ್ ದಿ ಬ್ಲ್ಯೂಸ್ | ನೀನಾ ಪಾಲೆಯು ನಿರ್ಮಿಸಿ ನಿರ್ದೇಶಿಸಿದ ಚಿತ್ರವಿದು. 83 ನಿಮಿಷದ ಈ ರೂಪಕ ಚಲನಚಿತ್ರವನ್ನು ಸ್ವತಂತ್ರವಾಗಿ ಮತ್ತು ಸಂಪೂರ್ಣವಾಗಿ ಫ್ಲಾಶ್‌ನಲ್ಲಿ ಸೃಷ್ಟಿಸಲಾಯಿತು. |
2008 | ವಾಲ್ಟ್ಜ್ ವಿತ್ ಬಶೀರ್ | ಅರಿ ಫೋಲ್ಮನ್ ಎಂಬಾತ ನಿರ್ದೇಶಿಸಿದ ಈ ಚಿತ್ರಕ್ಕೆ, ಡೇವಿಡ್ ಪೋಲನ್ಸ್ಕಿ ಅನಿಮೇಷನ್ ನಿರ್ದೇಶಕನಾಗಿದ್ದ. ಈ 89 ನಿಮಿಷ ಅವಧಿಯು ರೂಪಕ ಚಲನಚಿತ್ರವನ್ನು ಕೈಬರಹದ-ರೇಖಾಚಿತ್ರ ಮತ್ತು ವಿಡಿಯೋ ತುಣುಕನ್ನು ಆಧರಿಸಿದ ಫ್ಲಾಶ್ ಅನಿಮೇಷನ್‌ನ ಒಂದು ಸಂಯೋಜನೆಯನ್ನು ಬಳಸಿ ಸೃಷ್ಟಿಸಲಾಯಿತು. ಒಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದುಕೊಂಡ ಈ ಚಿತ್ರವು, ಅಕಾಡೆಮಿ ಪ್ರಶಸ್ತಿಗಳಲ್ಲಿನ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರದ ವಿಭಾಗಕ್ಕಾಗಿ ನಾಮನಿರ್ದೇಶನಗೊಂಡಿತು. |
2010 | ಎಲ್ ಸೊಲ್ | ಇದು ಅರ್ಜೆಂಟೀನಾದ ಮೊದಲ ಚಲಿತ ಚಲನಚಿತ್ರವಾಗಿದ್ದು, ಅಡೋಬ್ ಫ್ಲಾಶ್‌ನಲ್ಲಿ ಇದನ್ನು ಸಂಪೂರ್ಣವಾಗಿ ಸೃಷ್ಟಿಲಾಯಿತು. ಅಯಾರ್ ಬ್ಲಾಸ್ಕೋ ಎಂಬಾತ ಈ ಚಿತ್ರವನ್ನು ನಿರ್ದೇಶಿಸಿದ. |
ಫ್ಲಾಶ್ ಅನಿಮೇಷನ್ ಹಂಚಿಕೆ
ಬದಲಾಯಿಸಿಸಾಂಪ್ರದಾಯಿಕ ಅನಿಮೇಷನ್ ತಂತ್ರಗಳನ್ನು ಬಳಸುವುದಕ್ಕಿಂತ ಫ್ಲಾಶ್ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಅನಿಮೇಷನ್‌ನ್ನು ಸೃಷ್ಟಿಸುವುದು ಸಾಧ್ಯವಾಗಿರುವ ಸಮಯದಲ್ಲಿಯೇ, ಸದರಿ ತಂತ್ರಾಂಶವನ್ನು ಬಳಸಿಕೊಂಡು ಯೋಜನೆಯೊಂದನ್ನು ನಿರ್ಮಿಸುವಲ್ಲಿ ಅಗತ್ಯವಿರುವ ಸಮಯ, ಹಣ, ಮತ್ತು ಕುಶಲತೆ ಮೊದಲಾದವುಗಳ ಪ್ರಮಾಣವು, ಆರಿಸಿಕೊಂಡ ವಿಷಯ ಮತ್ತು ಶೈಲಿಯನ್ನು ಅವಲಂಬಿಸಿರುತ್ತದೆ. ದೂರದರ್ಶನದ ಪ್ರಸಾರಕ್ಕೆ ಹೋಲಿಸಿದಾಗ, ಅಂತರಜಾಲ ಹಂಚಿಕೆ ಗಮನಾರ್ಹವಾಗಿ ಸುಲಭದಾಯಕ ಮತ್ತು ಕಡಿಮೆ ವೆಚ್ಚದ್ದಾಗಿದೆ, ಮತ್ತು ನ್ಯೂಗ್ರೌಂಡ್ಸ್ ರೀತಿಯ ವೆಬ್‌ಸೈಟುಗಳು ಉಚಿತವಾದ ಹೋಸ್ಟಿಂಗ್ ವ್ಯವಸ್ಥೆಯನ್ನು ಒದಗಿಸುತ್ತವೆ. ಅನೇಕ ಫ್ಲಾಶ್ ಅನಿಮೇಷನ್‌ಗಳು ಪ್ರತ್ಯೇಕವಾದ ಅಥವಾ ಹವ್ಯಾಸಿ ಕಲಾವಿದರನ್ನು ಬಳಸಿಕೊಂಡು ಸೃಷ್ಟಿಸಲ್ಪಟ್ಟಿವೆಯಾದರೂ, ತಂತ್ರಾಂಶವನ್ನು ಬಳಸಿಕೊಂಡು ಒಂದು ಗಮನಾರ್ಹವಾದ ಕೃತಿಯನ್ನು ಸೃಷ್ಟಿಸಲು ಒಂದಷ್ಟು ಪ್ರಮಾಣದ ತಾಂತ್ರಿಕ ಜ್ಞಾನದ ಅಗತ್ಯವು ಇದಕ್ಕೆ ಬೇಕಾಗುತ್ತದೆ. ವೆಬ್ ಮಾಧ್ಯಮದಲ್ಲಿ ಮೊದಲು ವಿತರಿಸಲ್ಪಟ್ಟ ಅನೇಕ ಫ್ಲಾಶ್ ಅನಿಮೇಷನ್‌ಗಳು ದೂರದರ್ಶನದಲ್ಲೂ, ಅದರಲ್ಲೂ ನಿರ್ದಿಷ್ಟವಾಗಿ MTV ಹಾಗೂ G4TVಯಂಥ ಜಾಲಗಳಲ್ಲಿ ಪ್ರಸಾರವಾಗುವಷ್ಟರಮಟ್ಟಿಗೆ ಜನಪ್ರಿಯಗೊಂಡವು.
ವೃತ್ತಿಪರ ಸ್ಟುಡಿಯೋಗಳಲ್ಲಿನ ಫ್ಲಾಶ್ ಅನಿಮೇಷನ್
ಬದಲಾಯಿಸಿವಿಶ್ವಾದ್ಯಂತವಿರುವ ಪ್ರಮುಖ ಅನಿಮೇಷನ್ ಸ್ಟುಡಿಯೋಗಳಲ್ಲಿ ಫ್ಲಾಶ್ ಅನಿಮೇಷನ್‌ವು ಗಣನೀಯ ಪ್ರಮಾಣದ ಜನಪ್ರಿಯತೆಯಲ್ಲಿ ತೇಲುತ್ತಿದೆ. ನಂತರದಲ್ಲಿನ ಮರು-ಬಳಕೆಗಾಗಿರುವ ಒಂದು ದೊಡ್ಡ ಸಂಖ್ಯೆಯ ವ್ಯವಸ್ಥೆಗಳನ್ನು (ಅಂದರೆ ಪಾತ್ರಗಳು, ದೃಶ್ಯಗಳು, ಚಲನೆಗಳು, ಮತ್ತು ಪರಿಕರಗಳಂಥವು) ಸುಸಂಘಟಿಸಬಲ್ಲ ತಂತ್ರಾಂಶದ ಸಾಮರ್ಥ್ಯದ ಪ್ರಯೋಜನವನ್ನು ಚಲನ ವ್ಯಂಗ್ಯಚಿತ್ರಕಾರರು ಬಳಸಿಕೊಂಡಿರುವುದು ಇದಕ್ಕೆ ಕಾರಣವೆನ್ನಬಹುದು. ಏಕೆಂದರೆ ಫ್ಲಾಶ್ ಕಡತಗಳು ವೆಕ್ಟರ್ ಕಡತ ಸ್ವರೂಪದಲ್ಲಿರುವುದರಿಂದ, ಪ್ರತಿಕೃತಿಯ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯಾಗದೇ ಅನಿಮೇಷನ್‌ನ್ನು 35 mm ಚಲನಚಿತ್ರಕ್ಕೆ ವರ್ಗಾಯಿಸುವಲ್ಲಿ ಅವನ್ನು ಬಳಸಿಕೊಳ್ಳಬಹುದಾಗಿದೆ. ಫಿಲ್ ನಿಬ್ಬೆಲಿಂಕ್ ಎಂಬಾತನನ್ನೂ ಒಳಗೊಂಡಂತೆ, ವಿಶ್ವಾದ್ಯಂತದ ಹಲವಾರು ಸ್ವತಂತ್ರ ಚಲನ ವ್ಯಂಗ್ಯಚಿತ್ರಕಾರರಿಂದ ಈ ಗುಣಲಕ್ಷಣವು ಬಳಸಿಕೊಳ್ಳಲ್ಪಟ್ಟಿದೆ. ಫಿಲ್ ನಿಬ್ಬೆಲಿಂಕ್ ತಾನು ಸೃಷ್ಟಿಸಿದ ....Romeo & Juliet: Sealed with a Kiss ಎಂಬ 77-ನಿಮಿಷ ಅವಧಿಯ ರೂಪಕ ಚಲನಚಿತ್ರವು 2006ರಲ್ಲಿ ಚಲನಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದನ್ನು ಕಂಡ. ಪ್ರತ್ಯಕ್ಷ ಅಭಿನಯ ಮಾಡುತ್ತಿರುವ ಕಲಾವಿದ ಸ್ಟೀವ್ ಮಾರ್ಟಿನ್, ಡೊನಾಲ್ಡ್ ಡಕ್ ಜೊತೆಯಲ್ಲಿ ಪರಸ್ಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಒಳಗೊಂಡಿದ್ದ ಡಿಸ್ನೆ ಲ್ಯಾಂಡ್‌ನ 50 ಮ್ಯಾಜಿಕಲ್ ಇಯರ್ಸ್ ಚಲನಚಿತ್ರಕ್ಕೆ ಸಂಬಂಧಿಸಿದಂತೆ, ಕೈನಲ್ಲಿ ಬರೆಯಲಾದ ಡೊನಾಲ್ಡ್ ಡಕ್‌ನ ಅನಿಮೇಷನ್‌ನ್ನು ಫ್ಲಾಶ್ ತಂತ್ರಾಂಶದಲ್ಲಿ ಚೊಕ್ಕಮಾಡಿ ಬಣ್ಣಹಾಕಲಾಯಿತು. ....The Drawn Together Movie: The Movie! ಎಂಬ, ನೇರವಾಗಿ-DVDಗೆ ರೂಪಾಂತರಿಸಲಾದ ಡ್ರಾನ್ ಟುಗೆದರ್ ಚಲಿತ ಸರಣಿಯ ಚಿತ್ರವನ್ನು ಕಾಮಿಡಿ ಸೆಂಟ್ರಲ್ ಸಂಸ್ಥೆಯು ನಿರ್ಮಿಸಿತು ಮತ್ತು 2010ರ ಏಪ್ರಿಲ್‌ನಲ್ಲಿ ಇದು ಬಿಡುಗಡೆಗೊಂಡಿತು. ಇದು ಸರಣಿಯ ಸಾಂಪ್ರದಾಯಿಕ ಅನಿಮೇಷನ್‌ನ್ನು ರದ್ದುಗೊಳಿಸಿತು ಮತ್ತು ಅದರ ಬದಲಿಗೆ ಫ್ಲಾಶ್ ಅನಿಮೇಷನ್‌ನ್ನು ಬಳಸಿತು.
ಇತರ ತಂತ್ರಾಂಶದಿಂದ ಫ್ಲಾಶ್ ಅನಿಮೇಷನ್‌ನ್ನು ಸೃಷ್ಟಿಸುವುದು
ಬದಲಾಯಿಸಿ.swf ಸ್ವರೂಪದಲ್ಲಿ ಉತ್ಪನ್ನವನ್ನು ಸೃಷ್ಟಿಸಬಲ್ಲ ಹಲವಾರು ಇತರ ತಂತ್ರಾಂಶದ ವ್ಯವಸ್ಥೆಗಳು ಲಭ್ಯವಿವೆ. ಇವುಗಳ ಪೈಕಿ ಟೂನ್ ಬೂಮ್, ಟಫೀ, ಕೂಲ್‌ಮೂವ್ಸ್, ಎಕ್ಸ್‌ಪ್ರೆಸ್ ಅನಿಮೇಟರ್ ಮತ್ತು ಅನಿಮೆ ಸ್ಟುಡಿಯೋ ಮುಖ್ಯವಾದವುಗಳಾಗಿವೆ. ಪ್ರಕ್ರಿಯೆಯ ಈ ಆರಂಭಿಕ-ಹಂತಗಳು ವ್ಯಂಗ್ಯಚಿತ್ರ ಮಾಲಿಕೆಗಳನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಬೆಂಬಲವನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ, ಸಾಂಪ್ರದಾಯಿಕವಾಗಿ ತರಬೇತಿ ಪಡೆದ ಚಲನ ವ್ಯಂಗ್ಯಚಿತ್ರಕಾರರಿಗೆ ಹೆಚ್ಚು ಹೇಳಿಮಾಡಿಸಿದಂಥ ಸಾಧನಗಳೊಂದಿಗೆ ಮಾತ್ರವೇ ಅಲ್ಲದೇ, ಪಾತ್ರದ ಅನಿಮೇಷನ್‌ನ್ನು ಗಮನಾರ್ಹವಾಗಿ ಕ್ಷಿಪ್ರಗೊಳಿಸಬಲ್ಲ, ಪಾತ್ರಗಳಿಗೆ ಸಂಬಂಧಿಸಿದ ಹೆಚ್ಚುವರಿ ಸಜ್ಜಿಕೆಗಳಿಗೂ ಇವು ಬೆಂಬಲವನ್ನು ನೀಡುತ್ತವೆ. ಇದರ ಜೊತೆಗೆ, 3D ಸ್ವರೂಪದ ಮಾಹಿತಿಯನ್ನು 2D ವೆಕ್ಟರ್‌ಗಳಿಗೆ [ಸೂಕ್ತ ಉಲ್ಲೇಖನ ಬೇಕು] ಪರಿವರ್ತಿಸಬಲ್ಲ ಕಾರ್ಯಸೂಚಿಗಳು ಕೂಡಾ ಲಭ್ಯವಿವೆ.
ಇವನ್ನೂ ಗಮನಿಸಿ
ಬದಲಾಯಿಸಿಅಡಿಟಿಪ್ಪಣಿಗಳು
ಬದಲಾಯಿಸಿ- ↑ "John K's Guide to Surviving the End of Television". ColdHardFlash. Retrieved 2007-04-23.
- ↑ "ಅನಿಮೇಷನ್ ವರ್ಲ್ಡ್ ನೆಟ್‌ವರ್ಕ್ - 2/3/1999". Archived from the original on 2009-04-30. Retrieved 2021-08-10.
- ↑ ಅನಿಮೇಷನ್ ವರ್ಲ್ಡ್ ನೆಟ್‌ವರ್ಕ್ - 1/1/2000 Archived 2009-04-30 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಬ್ರಾಂಡ್‌ವೀಕ್ - 3/15/1999
- ↑ ಆಡ್‌ವೀಕ್ - 7/13/1998
- ↑ "ಬ್ರಾಡ್‌ಕಾಸ್ಟಿಂಗ್ & ಕೇಬಲ್ - 9/4/2000". Archived from the original on 2009-05-01. Retrieved 2010-05-28.
- ↑ "ಅನಿಮೇಷನ್ ವರ್ಲ್ಡ್ ನೆಟ್‌ವರ್ಕ್ - 8/8/1999". Archived from the original on 2009-04-30. Retrieved 2021-08-10.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedಅನಿಮೇಷನ್ ವರ್ಲ್ಡ್ ನೆಟ್‌ವರ್ಕ್ - 1/1/2000
ಬಾಹ್ಯ ಕೊಂಡಿಗಳು
ಬದಲಾಯಿಸಿಫ್ಲಾಶ್ ಅನಿಮೇಷನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್