ಫ್ರೆಡರಿಕ್ ವೊಹ್ಲರ್

ಫ್ರೆಡರಿಕ್ ವೊಹ್ಲರ್ ಐರ್ಲೆಂಡಿನ ವಿಜ್ಞಾನಿ .[]

ವೊಹ್ಲರ್ ಜುಲೈ ೩೧, ೧೮೦೦ರಲ್ಲಿ ಹನೌನ ಎಸ್ಚೆರ್ಶೈಮಲ್ಲಿ ಜನಿಸಿದರು. ೧೮೨೩ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದರು. ೧೮೨೬ರಿಂದ ೧೮೩೧ರವರೆಗೆ ರಸಾಯನಶಾಸ್ತ್ರವನ್ನು ಬರ್ಲಿನ್ನಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಹಾಗೂ ಕಾಸೆಲ್ಲಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ಭೋಧಿಸಿದರು. ನಂತರ ಗೊಟ್ಟಿಂಗನ್ನಿನ ವಿಶ‍್ವವಿದ್ಯಾನಿಲಯದಲ್ಲಿ ರಸಾಯನಶಾಸ್ತ್ರದ ಪ್ರಾದ್ಯಾಪಕರಾದರು. ೧೮೩೪ರಲ್ಲಿ ಅವರು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸದಸ್ಯರಾಗಿ ಆಯ್ಕೆಯಾದರು.[]

ರಸಾಯನಶಾಸ್ತ್ರಕ್ಕೆ ಕೊಡುಗೆಗಳು

ಬದಲಾಯಿಸಿ

೧೮೨೮ರಲ್ಲಿ ವೊಹ್ಲರ್ನ ಸಂಶ್ಲೇಷಣೆಯ ಮೂಲಕ ಅಮೋನಿಯಂ ಸೈನೇಟಿನಿಂದ ಯೂರಿಯಾವನ್ನು ಸಂಶ‍್ಲೇಷಿಸಿದನು. ವೊಹ್ಲರನ್ನು ಸಾವಯವ ರಸಾಯನಶಾಸ್ತ್ರದ ಪ್ರವರ್ತಕ ಎಂದು ಪರಿಗಣಿಸಲಾಯಿತು. ವೊಲ್ಹರ್ ಬೆರಿಲಿಯಂ,ಸಿಲಿಕಾನ್ ಹಾಗೂ ಸಿಲಿಕಾನ್ ನೈಟ್ರೈಡಿನ ಸಹ ಸಂಶೋಧಕ ಮತ್ತು ಕ್ಯಾಲ್ಸಿಯಂ ಕಾರ್ಬೈಡಿನ ಸಂಶ್ಲೇಷಣೆ ಕೂಡಾ ಮಾಡಿದ್ದನು. ೧೮೩೪ರಲ್ಲಿ ವೊಹ್ಲರ್ ಹಾಗೂ ಜಸ್ಟಸ್ ಲೈಬಿಗ್ ಕಹಿ ಬಾದಾಮಿ ತೈಲದ ತನಿಖೆಯನ್ನು ಪ್ರಕಟಿಸಿದರು. ಅವರು ಇಂಗಾಲ , ಜಲಜನಕ ಹಾಗೂ ಆಮ್ಲಜನಕದ ಪರಮಾಣುಗಳು ಒಂದು ಅಂಶದಂತೆ ವರ್ತಿಸಬಹುದು,ಒಂದು ಅಂಶದ ಸ್ಥಳವನ್ನು ತೆಗೆದುಕೊಳ್ಳಬಹುದು ಮತ್ತು ರಾಸಾಯನಿಕ ಸಂಯುಕ್ತಗಳಲ್ಲಿನ ಅಂಶಗಳಿಗೆ ವಿನಿಮಯಗೊಳ್ಳುತ್ತದೆ ಎಂದು ತಮ್ಮ ಪ್ರಯೋಗದಿಂದ ಸಾಬೀತುಪಡಿಸಿದರು. ೧೮೨೭ರಲ್ಲಿ ವೊಹ್ಲರ್ ಅಲೂಮಿನಿಯಂ ಲೋಹವನ್ನು ಆವಿಷ್ಕರಿಸಿದನು.[]

ವೊಹ್ಲರ್ ಇವರು ೨೩ ಸೆಪ್ಟೆಂಬರ್ ೧೮೮೨ ರಂದು ಗೊಟ್ಟಿಂಗನ್ನಲ್ಲಿ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ