ಫ್ರೆಡರಿಕ್ ಅಬೆಲ್

ಇಂಗ್ಲಿಷ್ ರಾಸಾಯನಶಾಸ್ತ್ರಜ್ಞ (1827 – 1902)

ಫ್ರೆಡರಿಕ್ ಆಗಸ್ಟಸ್ ಅಬೆಲ್ ಆಂಗ್ಲ ರಸಾಯನಶಾಸ್ತ್ರಜ್ಞ. ೧೮೨೭ ಜುಲೈ ೧೭ರಂದು ಲಂಡನ್ನಿನಲ್ಲಿ ಜನಿಸಿದರು.

ವಿದ್ಯಾಭ್ಯಾಸ ಬದಲಾಯಿಸಿ

ಜೋಹಾನ್ ಲಿಯೋಪೋಲ್ಡ್ ಅವರ ಮಗನಾಗಿ ಜನಿಸಿದ ಅಬೆಲ್,ರಸಾಯನಶಾಸ್ತ್ರವನ್ನು ರಾಯಲ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಷನ್ನಲ್ಲಿ ಅಧ್ಯಯನ ಮಾಡಿದರು ಮತ್ತು ೧೮೪೫ರಲ್ಲಿ ರಾಯಲ್ ಕಾಲೇಜ್ ಆಫ್ ಕೆಮಿಸ್ಟ್ರಿಯಲ್ಲಿ ಎ.ಡಬ್ಲ್ಯೂ.ವೋನ್ ಹೋಫ್ಮನ್ ಅವರ ೨೬ ಮೂಲ ವಿಧ್ಯಾರ್ಥಿಗಳಲ್ಲಿ ಒಬ್ಬರಾದರು. ೧೮೫೨ರಲ್ಲಿ ಮಿಲಿಟರಿ ಅಕಾಡೆಮಿಯಲ್ಲಿ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡರು. [೧]

ವೃತ್ತಿಜೀವನ ಬದಲಾಯಿಸಿ

೧೮೫೪ರಿಂದ ೧೮೮೮ರವರೆಗೆ ರಾಯಲ್ ಆರ್ಸೆನಲ್ನ ಕೆಮಿಕಲ್ ಎಸ್ಟಾಬ್ಲಿಶ್ಮೆಂಟ್ನಲ್ಲಿ ರಕ್ಷಣೆಯ ರಸಾಯನಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಮೂರು ವರ್ಷಗಳ ನಂತರ ವಾರ್ ಡಿಪಾರ್ಟ್ಮೆಂಟ್ಗೆ ರಸಾಯನಶಾಸ್ತ್ರಜ್ಞರಾಗಿ ಹಾಗೂ ಸರ್ಕಾರದ ರಾಸಾಯನಿಕ ರೆಫರಿಯಾಗಿ ನೇಮಕವಾದರು.ನಂತರ ಸ್ಪೋಟಕಗಳ ರಸಾಯನಶಾಸ್ತ್ರದೊಂದಿಗೆ ಹೆಚ್ಚಿನ ಕೆಲಸವನ್ನು ಮಾಡಿದರು.

ವೈಯಕ್ತಿಕಜೀವನ ಬದಲಾಯಿಸಿ

ಅಬೆಲ್ ತನ್ನ ಮೊದಲ ಹೆಂಡತಿಯಾದ ಸಾರಾ ಬ್ಲಾಂಚ್ ಅವರ ಮರಣದ ನಂತರ ಎರಡನೆ ಬಾರಿ ಗಿಲ್ಯೆಟ್ಟಾ ಡೆ ಲಾ ಫೆಯಿಲ್ಲಡೆಯನ್ನು ವಿವಾಹವಾದರು.[೨].

ಪುಸ್ತಕಗಳು ಬದಲಾಯಿಸಿ

  • ದಿ ಮಾಡರ್ನ್ ಹಿಸ್ಟರಿ ಆಫ್ ಗನ್ ಪೌಡರ್ (೧೮೬೬).
  • ಗನ್-ಕಾಟನ್ (೧೮೬೬).
  • ಓನ್ ಎಕ್ಸ್ಪ್ಲೋಸಿವ್ ಏಜೆಂಟ್ಸ್ (೧೮೭೨).
  • ರಿಸರ್ಚ್ ಇನ್ ಎಕ್ಸ್ಪ್ಲೋಸಿವ್ಸ್ (೧೮೭೫).
  • ಇಲೆಕ್ಟ್ರಿಸಿಟಿ ಅಪ್ಲೈಡ್ ಟು ಎಕ್ಸ್ಪ್ಲೋಸಿವ್ ಪರ್ಪಸಸ್ (೧೮೯೮).

ನಿಧನ ಬದಲಾಯಿಸಿ

ಅಬೆಲ್ ಸೆಪ್ಟೆಂಬರ್ ೬,೧೯೦೨ರಂದು ಲಂಡನ್ನಿನ ವೈಟ್ ಕೋರ್ಟ್ ಹಾಲ್ನಲ್ಲಿ ನಿಧನರಾದರು.[೩]

ಉಲ್ಲೇಖಗಳು ಬದಲಾಯಿಸಿ

  1. https://www.britannica.com/biography/Frederick-Augustus-Abel
  2. https://biographydesk.com/biography-of-frederick-augustus-abel/
  3. https://www.npg.org.uk/collections/search/person/mp00007/sir-frederick-augustus-abel-1st-bt