ಫೌಜಿ ಕವಿ ಮೆಹರ್ ಸಿಂಗ್
ಹುತಾತ್ಮಕವಿ ಮೆಹರ್ ಸಿಂಗ್ ದಹಿಯಾ ರವರು (೧೯೧೬-೧೯೪೫) ಸಾಮಾನ್ಯವಾಗಿ ಸೈನಿಕ ಮೆಹರ್ ಸಿಂಗ್ ಅಥವಾ ಜಾಟ್ ಮೆಹರ್ ಸಿಂಗ್ ಎಂದು ಪ್ರಸಿದ್ದಿಯಾಗಿದ್ದಾರೆ. ಇವರು ಹರಿಯಾಣದ ಮುಖ್ಯ ಕವಿ. [೧] ಇವರು ಹರಿಯಾಣದ ಸೋನಿಪತ್ (ಆ ಸಮಯದಲ್ಲಿ ರೋಹ್ಟಕ್ ಜಿಲ್ಲೆ) ಜಿಲ್ಲೆಯ ಖರ್ಖೋಡಾ ತಹಶೀಲ್‌ನಲ್ಲಿರುವ ಬರೋನಾ ಗ್ರಾಮದಲ್ಲಿ ಜಾಟ್‌ಗಳ ದಹಿಯಾ ಕುಲದಲ್ಲಿ ಜನಿಸಿದರು. ಹರಿಯಾಣದ ಜೊತೆಗೆ ಅವರ ರಾಗ್ನಿಗಳು ಇನ್ನೂ ದೆಹಲಿ ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಜನಪ್ರಿಯವಾಗಿವೆ. ಜಾಟ್ ರೆಜಿಮೆಂಟ್‌ನ ದಾಖಲೆಗಳ ಪ್ರಕಾರ ಅವರು ೧೫ ಫೆಬ್ರವರಿ ೧೯೧೬ [೨] ಜನಿಸಿದರು. ಅವರ ತಂದೆ ಶ್ರೀ ನಂದರಾಮ್ ಕೃಷಿಕರಾಗಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಗಳಿಂದಾಗಿ ಅವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ೩ನೇ ತರಗತಿಯವರೆಗೆ ಮಾತ್ರ ಪಡೆದರು. ಬಾಲ್ಯದಿಂದಲೂ ಅವರಿಗೆ ರಾಗ್ನಿಗಳನ್ನು ಹಾಡುವುದು ಎಂದರೆ ಒಲವು. [೩] ರಾಗ್ನಿಗಳನ್ನು ಹಾಡುವ ಅಭ್ಯಾಸದ ಬಗ್ಗೆ ಅವರ ತಂದೆ ಸಿಟ್ಟಾಗಿದ್ದರು. ಆದರೆ ಅವರನ್ನು ಈ ಹವ್ಯಾಸದಿಂದ ದೂರವಿಡುವಲ್ಲಿ ಅವರು ಯಶಸ್ವಿಯಾಗಲಿಲ್ಲ. ಮೆಹರ್ ಸಿಂಗ್ ಪ್ರೇಮ್ ಕೌರ್ ಅವರನ್ನು ವಿವಾಹವಾದರು. ೧೯೩೭ ರಲ್ಲಿ ಮೆಹರ್ ಸಿಂಗ್ ಸೈನ್ಯಕ್ಕೆ ಸೇರಿದರು. ಅಲ್ಲಿಯೂ ಅವರು ರಾಗಿಣಿಗಳನ್ನು ಹಾಡುತ್ತಿದ್ದರು ಮತ್ತು ರೆಕಾರ್ಡಿಂಗ್ ಮಾಡುತ್ತಿದ್ದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರು ಮತ್ತು ಅವರ ಸೇನಾ ಸಹೋದ್ಯೋಗಿಗಳು ಆಜಾದ್ ಹಿಂದ್ ಫೌಜ್ ಜೊತೆ ಮೈತ್ರಿ ಮಾಡಿಕೊಂಡರು. ೧೯೪೫ ರಲ್ಲಿ ಅವರು ಭಾರತದ ಸ್ವಾತಂತ್ರ್ಯದ ಕಾರಣಕ್ಕಾಗಿ ಹೋರಾಡುವಾಗ ಹುತಾತ್ಮರಾದರು. [೪]
ಪರಂಪರೆ
ಬದಲಾಯಿಸಿಅವರ ಗೌರವಾರ್ಥವಾಗಿ ಅವರ ಸ್ಥಳೀಯ ಗ್ರಾಮ ಮತ್ತು ರಾಜ್ಯದಲ್ಲಿ ನಡೆದ ಕೆಲವು ಚಟುವಟಿಕೆಗಳು:
- ಹರಿಯಾಣದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸಲು ಹಾಗು ಕೊಡುಗೆಗಾಗಿ ಸೈನಿಕ ಜಾತ್ ಮೆಹರ್ ಸಿಂಗ್ ಪ್ರಶಸ್ತಿಯನ್ನು ಹರಿಯಾಣ ರಾಜ್ಯದ ಮುಖ್ಯಮಂತ್ರಿಯವರು ಜಾನಪದ ಗಾಯಕರಿಗೆ ನೀಡುತ್ತಾರೆ.[೫]
- ಫೆಬ್ರವರಿ ೧೫ ಅನ್ನು ಮೆಹರ್ ಸಿಂಗ್ ಅವರ ಸ್ಮರಣಾರ್ಥಅವರ ದಿನವನ್ನಾಗಿ ಆಚರಿಸಲಾಗುತ್ತದೆ.ಮತ್ತು ಪ್ರತಿ ವರ್ಷ ರಾಗ್ನಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. [೬]
- ಪ್ರತಿ ವರ್ಷ ನವೆಂಬರ್ ೧೪ ರಂದು ಶಾಲಾ ಮಕ್ಕಳ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
- ವರ್ಷಕ್ಕೊಮ್ಮೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತದೆ.ಇದರಲ್ಲಿ ಪಿ.ಜಿ.ಐ.ಎಮ್.ಎಸ್ (PGIMS) ರೋಹ್ಟಕ್‌ನ ನಿವೃತ್ತ ಮತ್ತು ಕೆಲಸ ಮಾಡುವ ವೈದ್ಯರು ಸ್ವಯಂಪ್ರೇರಿತ ಆಧಾರದ ಮೇಲೆ ಭಾಗವಹಿಸುತ್ತಾರೆ.
- ಅವರ ಬರಹಗಳ ಪುಸ್ತಕವನ್ನು ಪ್ರಕಟಿಸಲಾಗಿದೆ.
- ಗ್ರಾಮದ ಪಂಚಾಯತ್ ದಾನವಾಗಿ ನೀಡಿದ ೨ ಎಕರೆ ಜಾಗದಲ್ಲಿ ಮೆಹರ್ ಸಿಂಗ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. [೭]
ಇದನ್ನು ಸಹ ನೋಡಿ
ಬದಲಾಯಿಸಿ- ಸಾಂಗ್
- ಹರ್ಯಾನ್ವಿ ಸಿನಿಮಾ
- ಹರ್ಯಾನ್ವಿ ಸಂಗೀತ
- ಹರ್ಯಾನ್ವಿ ಭಾಷೆ
- ಭಾರತೀಯ ಸಂಗೀತ ವಾದ್ಯಗಳು
- ಭಾರತೀಯ ಜಾನಪದ ನೃತ್ಯಗಳ ಪಟ್ಟಿ
- ಹರ್ಯಾನ್ವಿ-ಭಾಷೆಯ ಚಲನಚಿತ್ರಗಳ ಪಟ್ಟಿ
- ಹರ್ಯಾನ್ವಿ ಸಿನಿಮಾ
- ಬಜೆ ಭಗತ್
- ದಯಾಚಂದ್ ಮೇನ
- ಲಕ್ಷ್ಮಿ ಚಂದ್
ಉಲ್ಲೇಖಗಳು
ಬದಲಾಯಿಸಿ- ↑ Chaudhry, D.R. (2007). Haryana at Crossroads: Problems and Prospects. National Book Trust. pp. 3, 9. ISBN 9788123750330.
- ↑ "मेहर सिंह - कविता कोश". kavitakosh.org (in ಹಿಂದಿ). Retrieved 2018-11-18.
- ↑ Singh, Sarban; Organisation, Haryana (India) Gazetteers (2001). Haryana State Gazetteer: Lacks special title (in ಇಂಗ್ಲಿಷ್). Haryana Gazetteers Organisation, Revenue Department.
- ↑ "किस्सा फौजी मेहर सिंह". PEENG (in ಹಿಂದಿ). 2016-05-15. Archived from the original on 2018-11-18. Retrieved 2018-11-18.
- ↑ "Cash high: Artistes' Award Money Hiked". Hindustan Times. 22 March 2012. Retrieved 3 December 2018.
- ↑ "The birth anniversary of Jat Mehar Singh, celebrated with pompous grandeur". Dainik Bhaskar (in Hindi). 16 February 2016. Retrieved 3 December 2018.
{{cite news}}
: CS1 maint: unrecognized language (link) - ↑ "मेहर सिंह | मेहर सिंह का जीवन परिचय | Mehar Singh | Biography of Mehar Singh". www.mharaharyana.com. Archived from the original on 2018-11-18. Retrieved 2018-11-18.