ಫುಡ್ ನೆಟ್ವರ್ಕ್ ಎಂಬುದು ದೂರದರ್ಶನದ ಒಂದು ವಿಶೇಷ ವಾಹಿನಿಯಾಗಿದ್ದು, ಇದು ಆಹಾರ ಹಾಗು ಆಹಾರ ತಯಾರಿಕೆಯ ಬಗ್ಗೆ ಒಂದೇ ಬಾರಿ ಹಾಗು ಪುನರಾವರ್ತಿತವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಸ್ಕ್ರಿಪ್ಪ್ಸ್ ನೆಟ್ವರ್ಕ್ಸ್ ಇನ್ಟರಾಕ್ಟಿವ್, ನೆಟ್ವರ್ಕ್ ನ ಶೇಖಡಾ ೭೦ರಷ್ಟು ಪಾಲನ್ನು ಹೊಂದಿದೆ, ಹಾಗು ಉಳಿದ ಭಾಗವು ಟ್ರಿಬ್ಯೂನ್ ಕಂಪನಿಯ ಒಡೆತನದಲ್ಲಿದೆ.

Food Network
Launched November 23, 1993
Owned by Scripps Networks and Tribune
Picture format 480i (SD)
1080i (HD)
Slogan Way more than cooking
Headquarters New York City, New York
Sister channel(s) Cooking Channel
DIY Network
Great American Country
HGTV
Travel Channel
Website foodnetwork.com
Availability
Satellite
DirecTV 231 (SD/HD)
1231 (VOD)
Dish Network 110 (SD/HD)
9462 (HD)
Sky Channel 262
Channel 263 (+1)
Freesat (UK) Channel 405
Channel 406 (+1)
DStv Channel 185
Cable
Available on most cable systems Check local listings

ಈ ಪ್ರಸಾರ ಕೇಂದ್ರದಿಂದ ಬಿತ್ತರವಾಗುವ ಕಾರ್ಯಕ್ರಮಗಳನ್ನು ಒಂಬತ್ತು ದಶಲಕ್ಷಕ್ಕೂ ಅಧಿಕ ಮನೆಗಳಲ್ಲಿ ವೀಕ್ಷಿಸಲಾಗುತ್ತದೆ. ನ್ಯೂಯಾರ್ಕ್ ನಗರದ ಜೊತೆಯಲ್ಲಿ, ಇದು ಅಟ್ಲಾಂಟ, ಲಾಸ್ ಏಂಜಲಿಸ್, ಸ್ಯಾನ್ ಫ್ರ್ಯಾನ್ಸಿಸ್ಕೋ, ಚಿಕಾಗೋ, ಡೆಟ್ರಾಯ್ಟ್, ಜರ್ಸಿ ಸಿಟಿ, ಹಾಗು ನಾಕ್ಸ್ವಿಲ್ಲೇ, ಟೆನಿಸ್ಸಿಯಲ್ಲೂ ಸಹ ತನ್ನ ಕಚೇರಿಗಳನ್ನು ಹೊಂದಿದೆ.

ಫುಡ್ ನೆಟ್ವರ್ಕ್, ಏಪ್ರಿಲ್ ೧೯, ೧೯೯೩ ರಲ್ಲಿ TV ಫುಡ್ ನೆಟ್ವರ್ಕ್ ಎಂಬ ಹೆಸರಿನಿಂದ ಸ್ಥಾಪನೆಯಾಗ್ಯಿತು, ಹಾಗು ಅದೇ ವರ್ಷದ ನವೆಂಬರ್ ೨೩ರಲ್ಲಿ ತನ್ನ ಪ್ರಸಾರವನ್ನು ಆರಂಭಿಸಿತು, ಇದು ಕಾನೂನುಬದ್ಧವಾಗಿ ಟೆಲಿವಿಶನ್ ಫುಡ್ ನೆಟ್ವರ್ಕ್, G.P ಎಂಬ ಹೆಸರನ್ನೇ ಹೊಂದಿದೆ. ಕೆಲವೇ ವರ್ಷಗಳೊಳಗಾಗಿ, ಇದು ತನ್ನ ಪ್ರಸಾರ ನಾಮವನ್ನು ಸಂಕ್ಷಿಪ್ತಗೊಳಿಸಿಕೊಂಡಿತು. ಇದನ್ನು ರೀಸ್ ಸ್ಚಾನ್ಫೆಲ್ಡ್, (CNNನ ಸ್ಥಾಪಕರಲ್ಲಿ ಒಬ್ಬರು), ದಿ ಪ್ರಾವಿಡೆನ್ಸ್ ಜರ್ನಲ್ ನ ಅಧ್ಯಕ್ಷ ಟ್ರಿಗ್ವೆ ಮೈರ್ಹೇನ್ ನ ನಿರ್ದೇಶನದಡಿಯಲ್ಲಿ ಸೃಷ್ಟಿಸಿದರು. ಇದರ ಮೂಲ ಭಾಗಿದಾರರು ಸ್ವತಃ ಜರ್ನಲ್ ನ್ನು ಒಳಗೊಂಡಿದ್ದರು, ಅಡೆಲ್ಫಿಯಾ, ಸ್ಕ್ರಿಪ್ಪ್ಸ್ ಹೊವರ್ಡ್, ಕಾಂಟಿನೆಂಟಲ್ ಕೇಬಲ್ ವಿಷನ್, ಕೇಬಲ್ ವಿಷನ್ ಇಂಡಸ್ಟ್ರೀಸ್, ಹಾಗು ಬಹು ಮುಖ್ಯವಾಗಿ, ಚಿಕಾಗೋನ ಟ್ರಿಬ್ಯೂನ್ ಕಂಪನಿ.

ಫುಡ್ ನೆಟ್ವರ್ಕ್ ನ್ನು ಮೊದಲು ಬಾರಿಗೆ ಅಂತಾರಾಷ್ಟ್ರೀಯವಾಗಿ UKನಲ್ಲಿ ನವೆಂಬರ್ ೯, ೨೦೦೯ರಲ್ಲಿ ಪ್ರಾರಂಭಿಸಲಾಯಿತು, ಹಾಗು ಏಷ್ಯಾದಲ್ಲಿ ಇದು ಜುಲೈ ೫, ೨೦೧೦ರಲ್ಲಿ ಪ್ರಾರಂಭಿಸಲಾಯಿತು(ಸ್ಟಾರ್ ಹಬ್ TVಯ ವಾಹಿನಿ ೪೩೩ ಹಾಗು ಫುಡ್ ನೆಟ್ವರ್ಕ್ ಏಷ್ಯಾದಲ್ಲಿ HD ರೂಪಾಂತರವಾದ ೪೬೮ನೇ ವಾಹಿನಿಯಲ್ಲಿ ಪ್ರಸಾರವಾಯಿತು).[]

ಈ ಸಂಸ್ಥೆಯ ಪಾಲುದಾರರೂ ಸಹ ಆಗಿದ್ದ ಸ್ಚಾನ್ಫೆಲ್ಡ್ ರನ್ನು ನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಯಿತು ಹಾಗು ಇದರ ನಿರ್ವಹಣ ಮಂಡಳಿಯಲ್ಲಿ ಪ್ರಾವಿಡೆನ್ಸ್ ಜರ್ನಲ್ ನ ಇಬ್ಬರು ಕೆಲಸಗಾರರಿದ್ದರು. ನೆಟ್ವರ್ಕ್ ನ ಮೂಲ ಪಟ್ಟಿಯಲ್ಲಿ ಎಮೆರಿಲ್ ಲಗಸ್ಸೆ (ಎಸೆನ್ಸ್ ಆಫ್ ಎಮೆರಿಲ್), ಡೆಬ್ಬಿ ಫೀಲ್ಡ್ಸ್, ಡೋನ್ನ ಹ್ಯಾನೋವರ್, ಡೇವಿಡ್ ರೊಸೆನ್ಗಾರ್ಟೆನ್, ಕರ್ಟಿಸ್ ಐಕಿನ್ಸ್, ಡಾ. ಲೂಯಿಸ್ ಅರ್ರೋನೆ, ಜಾಕ್ವೆಸ್ ಪೆಪಿನ್ ಹಾಗು ರಾಬಿನ್ ಲೀಚ್ ಸೇರಿದ್ದರು. ಅದರ ಮರು ವರ್ಷ ನೆಟ್ವರ್ಕ್, WGBHನಿಂದ ಜೂಲಿಯಾ ಚಿಲ್ಡ್ಸ್ ಗೆ ಹಕ್ಕನ್ನು ಪಡೆದುಕೊಂಡಿತು.

೧೯೯೫ರಲ್ಲಿ ಸ್ಚಾನ್ಫೆಲ್ಡ್ ನೆಟ್ವರ್ಕ್ ನ ನಿರ್ವಾಹಕ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಆದರೆ ಸಂಸ್ಥೆಯಲ್ಲಿನ ತಮ್ಮ ಪಾಲನ್ನು ೧೯೯೮ರಲ್ಲಿ ಸ್ಕ್ರಿಪ್ಪ್ಸ್ ಗೆ ಮಾರುವವರೆಗೂ ನಿರ್ದೇಶಕ ಮಂಡಳಿಯಲ್ಲಿ ಉಳಿದರು.

ಫುಡ್ ನೆಟ್ವರ್ಕ್ ನ್ನು A. H. ಬೆಲೋ ಕಾರ್ಪ್. ಕಾರ್ಪೋರೇಶನ್ ನಿಂದ E. W. ಸ್ಕ್ರಿಪ್ಪ್ಸ್ ಸಂಸ್ಥೆಯು ೧೯೯೭ರಲ್ಲಿ ವಶಪಡಿಸಿಕೊಂಡಿತು, ಇದಕ್ಕಾಗಿ ಸ್ಯಾನ್ ಆಂಟೋನಿಯೊ, ಟೆಕ್ಸಾಸ್ ನಲ್ಲಿರುವ KENS-AM/TVಗೆ ವ್ಯಾಪಾರ ಮಾಡಿತು. ಬೆಲೋ ೧೯೯೬ರಲ್ಲಿ ಪ್ರಾವಿಡೆನ್ಸ್ ಜರ್ನಲ್ ಕಂಪನಿಯನ್ನು ಖರೀದಿಸಿದಾಗ ನೆಟ್ವರ್ಕ್ ನ್ನು ತನ್ನ ವಶಪಡಿಸಿಕೊಂಡಿತು. ಅದರ ಮರು ವರ್ಷ ಮೈರ್ಹೇನ್ ಜರ್ನಲ್ ಸಂಸ್ಥೆಯನ್ನು ತೊರೆದರು.

ಕಾರ್ಯಕ್ರಮ ಸಂಯೋಜನೆ

ಬದಲಾಯಿಸಿ

ಫುಡ್ ನೆಟ್ವರ್ಕ್ ಕಾರ್ಯಕ್ರಮಗಳು "ಫುಡ್ ನೆಟ್ವರ್ಕ್ ಇನ್ ದಿ ಕಿಚನ್" ಎಂದು ಕರೆಯಲ್ಪಡುವ ಬೆಳಗಿನ ಹೊತ್ತಿನ ಪ್ರಸಾರ ಹಾಗು ಪ್ರೈಮ್ ಟೈಮ್ ನ(ವೀಕ್ಷಕರು ಅತ್ಯಂತ ಹೆಚ್ಚಿನ ಸಮಯ ವೀಕ್ಷಿಸುವ ಸಮಯ) ಪ್ರಸಾರವನ್ನು ನೆಟ್ವರ್ಕ್ "ಫುಡ್ ನೆಟ್ವರ್ಕ್ ನೈಟ್ ಟೈಮ್" ಎಂದು ವಿಂಗಡಿಸಿದೆ. ಸಾಧಾರಣವಾಗಿ, "ಇನ್ ದಿ ಕಿಚನ್" ಅಡುಗೆಯ ಬಗ್ಗೆ ಮಾಹಿತಿಯನ್ನು ನೀಡಿದರೆ, "ನೈಟ್ ಟೈಮ್" ಕಾರ್ಯಕ್ರಮವು ಆಹಾರಕ್ಕೆ-ಸಂಬಂಧಿಸಿದ ಮನೋರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ಅಡುಗೆ ಸ್ಪರ್ಧೆಗಳು, ಆಹಾರಕ್ಕೆ-ಸಂಬಂಧಿಸಿದ ಪ್ರವಾಸ ಕಾರ್ಯಕ್ರಮಗಳು, ಹಾಗು ರಿಯಾಲಿಟಿ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. "ಫುಡ್ ನೆಟ್ವರ್ಕ್ ನೈಟ್ ಟೈಮ್" ಕ್ರಾಯಕ್ರಮದ ಜಾಹಿರಾತುಗಳು ಪ್ರಚಾರ ನೀಡುತ್ತವೆ ಆದರೆ ಬೆಳಗಿನ ಹೊತ್ತಿನ ಕಾರ್ಯಕ್ರಮದ ಬಗ್ಗೆ ಜಾಹಿರಾತು ಪ್ರಚಾರ ಮಾಡುವುದಿಲ್ಲ. ವಾಹಿನಿಯ ಹಲವು ಹೆಸರಾಂತ ವ್ಯಕ್ತಿಗಳು ಸಾಮಾನ್ಯವಾಗಿ ದುಪ್ಪಟ್ಟು-ಕಾರ್ಯ ನಿರ್ವಹಿಸುತ್ತಾರೆ(ಅಥವಾ ಅದಕ್ಕೂ ಹೆಚ್ಚು) — ಬೆಳಗಿನ ಹೊತ್ತಿನ ಹಾಗು ರಾತ್ರಿ ಸಮಯದ ಕಾರ್ಯಕ್ರಮಗಳೆರಡನ್ನೂ ನಡೆಸಿಕೊಡುತ್ತಾರೆ — ಹಾಗು ವಾಹಿನಿಯು ನಿಯಮಿತವಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ, ಇವುಗಳು ಮಾದರಿಯಾಗಿ ರಜಾದಿವಸಗಳಲ್ಲಿ ಕಾರ್ಯನಿರ್ವಹಿಸುವ ತನ್ನ ವಾಹಿನಿಯ ಹೆಸರಾಂತ ವ್ಯಕ್ತಿಗಳಿಗೆ ಆಟವನ್ನು ಏರ್ಪಡಿಸುತ್ತವೆ, ಅಥವಾ ವಿಷಯಾಧಾರಿತ ಅಡುಗೆ ಸ್ಪರ್ಧೆಗೆ ಹಲವು ಹೆಸರಾಂತ ವ್ಯಕ್ತಿಗಳನ್ನು ಒಂದುಗೂಡಿಸುತ್ತದೆ.

ಚಿತ್ರ:Food Network 2000.svg
ಹಿಂದಿನ ಲಾಂಛನ, 1996 ರಿಂದ ಡಿಸೆಂಬರ್ 31, 2002ರವರೆಗೆ ಬಳಸಲಾಗುತ್ತಿತ್ತು.

ಮಾರಿಯೋ ಬಟಾಲಿ ಹಾಗು ಬಾಬಿ ಫ್ಲೇ ೧೯೯೫ರಲ್ಲಿ ನೆಟ್ವರ್ಕ್ ಗೆ ಸೇರ್ಪಡೆಗೊಂಡರು. ೧೯೯೬ರಲ್ಲಿ ದಿ ಫುಡ್ ನೆಟ್ವರ್ಕ್ ನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದ ಜೋ ಲಾಂಗನ್, ಎಮೆರಿಲ್ ಲೈವ್! ನ್ನು ಸೃಷ್ಟಿಸಿದರು, ಇದು ವಾಹಿನಿಯ ವಿಶಿಷ್ಟ ಸರಣಿಯಾಯಿತು. ಇತರ ಕರ್ತವ್ಯಗಳ ನಡುವೆ, ಫ್ಲೇ ಹಾಗು ಬಟಾಲಿ ಇದೀಗ ನಿಯಮಿತವಾಗಿ ಐರನ್ ಚೆಫ್ ಅಮೆರಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ, ಇದು ವಾಹಿನಿಯ ಚೆನ್ನಾಗಿ ಸ್ವಾಗತಗೊಂಡ ಮೂಲ ಜಪಾನಿ ಸರಣಿಯ ಮರುರೂಪವಾಗಿದೆ. ಅಮೆರಿಕ ದ ನಿರೂಪಕ, ಆಲ್ಟನ್ ಬ್ರೌನ್, ತಮ್ಮ ಗುಡ್ ಈಟ್ಸ್ ನ್ನು ಅನುಸರಿಸಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದರು, ಇದು ವಿಜ್ಞಾನ, ಅಡುಗೆ ಹಾಗು ಸಂಪ್ರದಾಯಬದ್ಧವಲ್ಲದ ಹಾಸ್ಯದ ಮಿಶ್ರಣವಾಗಿದೆ. ಪ್ರಸಕ್ತದಲ್ಲಿ ವಾಹಿನಿಯ ಪ್ರಸಿದ್ಧ ನಿರೂಪಕಿಯೆಂದರೆ ರೇಚಲ್ ರೇ, ಈಕೆ ತನ್ನ ಕೇಬಲ್ ಅಭಿಮಾನಿಗಳನ್ನು ಸಂಘಾಧಾರಿತ ಮಾತುಕತೆ ಕಾರ್ಯಕ್ರಮ ದಲ್ಲಿ ಒಟ್ಟಾಗಿ ಸೇರಿಸಿದಳು(ಮುಖ್ಯವಾಗಿ ೩೦ ಮಿನಿಟ್ ಮೀಲ್ಸ್ ಹಾಗು $೪೦ ಏ ಡೇ ಸರಣಿಗಳ ಮೂಲಕ)

೨೦೦೫ರ ಆರಂಭದಲ್ಲಿ, ವಾರ್ಷಿಕ ರಿಯಾಲಿಟಿ ಸ್ಪರ್ಧೆ, ದಿ ನೆಕ್ಸ್ಟ್ ಫುಡ್ ನೆಟ್ವರ್ಕ್ ಸ್ಟಾರ್ ಗೆ, ಕಾರ್ಯಕ್ರಮದ ವೀಕ್ಷಕರು ತಮ್ಮದೇ ಆದ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ನ್ಯೂಯಾರ್ಕ್ ಗೆ ಬಂದರು. ಹಿಂದಿನ ಸರಣಿಗಳ ವಿಜೇತರುಗಳಲ್ಲಿ ಡ್ಯಾನ್ ಸ್ಮಿತ್ ಹಾಗು ಸ್ಟೀವ್ ಮ್ಯಾಕ್ಡೋನಾಗ್(ಪಾರ್ಟಿ ಲೈನ್ ವಿಥ್ ದಿ ಹಾರ್ಟಿ ಬಾಯ್ಸ್ ), ಗೈ ಫಿಯೇರಿ(ಗೈಸ್ ಬಿಗ್ ಬೈಟ್ , ಡೈನರ್ಸ್, ಡ್ರೈವ್-ಇನ್ಸ್ ಅಂಡ್ ಡೈವ್ಸ್ , "ಗೈಸ್ ಆಫ್ ದಿ ಹುಕ್," "ಅಲ್ಟಿಮೇಟ್ ರೆಸಿಪಿ ಷೋಡೌನ್," "ಗೈಸ್ ಬಿಗ್ ನಿತ್," "ಗೈಸ್ ಫ್ಯಾಮಿಲಿ ಫೀಸ್ಟ್"), ಅಮಿ ಫಿನ್ಲೆ (ದಿ ಗೌರ್ಮೆಟ್ ನೆಕ್ಸ್ಟ್ ಡೋರ್ ), ಆರೋನ್ ಮ್ಯಾಕ್ಕಾರ್ಗೋ, ಜೂ.(ಬಿಗ್ ಡ್ಯಾಡಿ'ಸ್ ಹೌಸ್ ),[] ಮೆಲಿಸ್ಸಾ ಡ'ಅರೇಬಿಯನ್(ಟೆನ್ ಡಾಲರ್ ಡಿನ್ನರ್ಸ್ ) ಹಾಗು ಆರತಿ ಸಿಕ್ವೇರ(ಆರತಿ ಪಾರ್ಟಿ ).[] ೨೦೧೦ರ ಸರಣಿಗೆ, ದಿ ನೆಕ್ಸ್ಟ್ ಫುಡ್ ನೆಟ್ವರ್ಕ್ ಸ್ಟಾರ್ ಲಾಸ್ ಏಂಜಲಿಸ್ ಗೆ ಸ್ಥಳಾಂತರಗೊಂಡಿತು.

ಸ್ಕ್ರಿಪ್ಪ್ಸ್ ಹಾಗು ಚೆಲ್ಲೋಮೀಡಿಯಾ ನಡುವಿನ ಒಪ್ಪಂದದ ಪ್ರಕಾರವಾಗಿ, ಫುಡ್ ನೆಟ್ವರ್ಕ್ ಕಾರ್ಯಕ್ರಮವು ೨೦೦೯ರ ಕಡೆ ಭಾಗದಲ್ಲಿ ಯುನೈಟೆಡ್ ಕಿಂಗ್ಡಮ್ ನಲ್ಲಿ ತನ್ನ ಪ್ರಸಾರವನ್ನು ಆರಂಭಿಸಿತು ಹಾಗು ೨೦೧೦ರ ಆರಂಭದಲ್ಲಿ ಇತರ ಮಾರುಕಟ್ಟೆಗಳಲ್ಲಿ ತನ್ನ ಪ್ರಸರಣವನ್ನು ಆರಂಭಿಸಿತು.[]

ಫುಡ್ ನೆಟ್ವರ್ಕ್ HD

ಬದಲಾಯಿಸಿ
ಚಿತ್ರ:Food Network HD Logo.svg
ಫುಡ್ ನೆಟ್ವರ್ಕ್ HD ಲಾಂಛನ

ಫುಡ್ ನೆಟ್ವರ್ಕ್ HD ಒಂದು ೧೦೮೦i ಹೈ ಡೆಫಿನಿಶನ್ ಆಗಿದ್ದು, ಫುಡ್ ನೆಟ್ವರ್ಕ್ ನ ಸಹಪ್ರಸಾರವಾಗಿದೆ. ಇದು ಮೂಲವಾಗಿ, SD ರೂಪಾಂತರಕ್ಕಿಂತ ಹೆಚ್ಚಾಗಿ ವಿವಿಧ ಸರದಿಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ. ಮಾರ್ಚ್ ೩೧, ೨೦೦೮ರಲ್ಲಿ ಫುಡ್ ನೆಟ್ವರ್ಕ್(HGTVಯ ಜೊತೆಗೂಡಿ) ತನ್ನ ಸ್ಟ್ಯಾಂಡರ್ಡ್ ಡೆಫಿನಿಶನ್ ಸೂಚಕದ ಒಂದು HD ಸಹಪ್ರಸಾರವನ್ನು ಮತ್ತೆ ಆರಂಭಿಸಿತು. ಇದರ ಪರಿಣಾಮವಾಗಿ, ಈ ಕಾರ್ಯಕ್ರಮವು ಎರಡೂ ವಾಹಿನಿಗಳಲ್ಲಿ ಸದೃಶವಾಗಿರುತ್ತದೆ, ಜೊತೆಗೆ ಹೈ ಡೆಫಿನಿಶನ್ ರೂಪಾಂತರವು ಲಭ್ಯವಿಲ್ಲದಾಗ, ಸ್ಟ್ಯಾಂಡರ್ಡ್ ಡೆಫಿನಿಶನ್ ನ ಮಾರ್ಪಡಿತ ಹಾಗು ವಿಸ್ತೃತ ಕಾರ್ಯಕ್ರಮಗಳ ರೂಪಾಂತರಗಳನ್ನು ಪ್ರಸಾರ ಮಾಡಲಾಗುತ್ತದೆ. ಕೆಲವು ಕೇಬಲ್ ಸಂಸ್ಥೆಗಳು, ಪೂರ್ವ ಕರಾವಳಿಯ ಸಮಯಾಧಾರಿತವಾಗಿ ಕಾರ್ಯಕ್ರಮಗಳ HD ರೂಪಾಂತರಗಳನ್ನು ಪ್ರಸಾರ ಮಾಡುತ್ತದೆ(ಉಪಗ್ರಹ ಸೇವೆಗಳಿಗೆ ಸದೃಶವಾಗಿ) ಜೊತೆಗೆ SD ರೂಪಾಂತರವನ್ನು ಅದರ ಸಾಮಾನ್ಯವಾದ ನಿಗದಿತ ಸಮಯದಲ್ಲೇ ಪ್ರಸಾರ ಮಾಡಲಾಗುತ್ತದೆ. ಇದು ಕೇಬಲ್ ನೆಟ್ವರ್ಕ್ ಗಳ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ.

ಫುಡ್ ನೆಟ್ವರ್ಕ್ Food.comಗೆ ಮರುರೂಪ

ಬದಲಾಯಿಸಿ

ಮಾರ್ಚ್ ೨೦೦೯ರಲ್ಲಿ, ಫುಡ್ ನೆಟ್ವರ್ಕ್ ಮರು-ಉದ್ದೇಶಿತ Food.comನ್ನು ಪ್ರಾರಂಭಿಸಿತು, ಇದೊಂದು ಗುರುತಿನ ಜಾಲತಾಣವಾಗಿದ್ದು, ತನ್ನ ಬಳಕೆದಾರರಿಗೆ ಆನ್ಲೈನ್ ನ ವಿವಿಧ ಮೂಲಗಳಿಂದ ಪಾಕವಿಧಾನದ ವಿವರಣೆಯನ್ನು ಸಂಗ್ರಹಿಸಲು ಹಾಗು ಶೋಧಿಸಲು ಅವಕಾಶ ಮಾಡಿಕೊಡುತ್ತದೆ.

ಫುಡ್ ನೆಟ್ವರ್ಕ್ ವಿಡಿಯೋ ಗೇಮ್

ಬದಲಾಯಿಸಿ

ಫುಡ್ ನೆಟ್ವರ್ಕ್ ಕುಕ್ ಆರ್ ಟು ಬಿ ಕುಕ್ಡ್ ನ್ನು ಬಿಡುಗಡೆಗೊಳಿಸಿದೆ, ಇದು Wii ಕನ್ಸೋಲ್ ನ ಒಂದು ವಿಡಿಯೋ ಗೇಮ್ ಆಗಿದೆ. ನಾಮ್ಕೊ ಅಭಿವೃದ್ಧಿಪಡಿಸಿದ ಈ ಆಟವು, ವಾಸ್ತವವಾದ ಅಡುಗೆ ಮಾಡುವ ಅನುಭವಗಳನ್ನು ಅನುಕರಿಸುತ್ತದೆ ಹಾಗು ಇದು ನವೆಂಬರ್ ೩, ೨೦೦೯ರಲ್ಲಿ ಬಿಡುಗಡೆಯಾಯಿತು.[][] ಆಟಗಾರರು, ಆಟವು ಹೊಂದಿರುವ ಪಾಕವಿಧಾನಗಳನ್ನೂ ಸಹ ಪ್ರಯತ್ನಿಸಬಹುದು.

ಕೇಬಲ್ ವಿಷನ್ ನೊಂದಿಗಿನ ವಿವಾದ

ಬದಲಾಯಿಸಿ

ಜನವರಿ ೧, ೨೦೧೦ರಲ್ಲಿ HGTV ಹಾಗು ಫುಡ್ ನೆಟ್ವರ್ಕ್ ಕೇಬಲ್ ವಿಷನ್ ನಿಂದ ತೆಗೆದುಹಾಕಲ್ಪಟ್ಟವು, ಇದೊಂದು ಪ್ರಮುಖ ಕೇಬಲ್ ಸಂಸ್ಥೆಯಾಗಿದ್ದು, ನ್ಯೂಯಾರ್ಕ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಪ್ರಸಾರ ವ್ಯವಸ್ಥೆಯನ್ನು ಕಲ್ಪಿಸುತ್ತಿತ್ತು. ಸ್ಕ್ರಿಪ್ಪ್ಸ್, HGTV ಹಾಗು ಫುಡ್ ನೆಟ್ವರ್ಕ್ ನ್ನು ಕೇಬಲ್ ವಿಷನ್ ನ ಕಾರ್ಯಕ್ರಮ ಸಂಯೋಜನೆಗಳಿಂದ ತೆಗೆದುಹಾಕಿತು, ಡಿಸೆಂಬರ್ ೩೧, ೨೦೦೯ರಲ್ಲಿ ಇದರ ಒಪ್ಪಂದವು ಮುಗಿದಿತ್ತು. ಕೇಬಲ್ ವಿಷನ್ ಹಾಗು ಸ್ಕ್ರಿಪ್ಪ್ಸ್ ಹಲವಾರು ತಿಂಗಳುಗಳ ಕಾಲ ಹೊಸ ಒಪ್ಪಂದಕ್ಕೆ ಒಪ್ಪಿಗೆ ನೀಡಲು ಸಂಧಾನಗಳನ್ನು ನಡೆಸಿದವು, ಆದರೆ ಯಾವುದೇ ಪ್ರಗತಿಯು ಕಂಡುಬರಲಿಲ್ಲ ಹಾಗು ಎರಡೂ ಪ್ರಸಾರ ಕೇಂದ್ರಗಳು ಕೇಬಲ್ ವಿಷನ್ ನ ಗ್ರಾಹಕರಿಗೆ ತಮ್ಮ ಸೇವೆಯನ್ನು ನಿಲ್ಲಿಸಿದವು. ಕೇಬಲ್ ವಿಷನ್ ನಿಂದ ಫುಡ್ ನೆಟ್ವರ್ಕ್ ನ ಕಾರ್ಯಕ್ರಮಗಳು ತಮ್ಮ ಪ್ರಸಾರವನ್ನು ನಿಲ್ಲಿಸಿದಾಗ ಇದು ನ್ಯೂಯಾರ್ಕ್ ನಲ್ಲಿನ ಟ್ರಿಬ್ಯೂನ್-ಒಡೆತನದ WPIX ಹಾಗು ಹಾರ್ಟ್ಫೋರ್ಡ್, ಕನೆಕ್ಟಿಕಟ್ ನಲ್ಲಿದ್ದ WTXXನೊಂದಿಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿತು, ಇದು ಜನವರಿ ೧೦, ೨೦೧೦ರಲ್ಲಿ ಪ್ರಸಾರವಾದ ಐರನ್ ಚೆಫ್ ಅಮೆರಿಕ ದ ವಿಶೇಷ ಸಂಚಿಕೆಯಲ್ಲಿ ಪ್ರಥಮ ಮಹಿಳೆ ಮಿಚೆಲ್ ಒಬಾಮರೊಂದಿಗಿನ ಮಾತುಕತೆ ಕಾರ್ಯಕ್ರಮದ ನಂತರ, ಜನವರಿ ೩ರ ಫುಡ್ ನೆಟ್ವರ್ಕ್ ಪ್ರಸಾರದಲ್ಲಿ ಸಂಚಿಕೆಯು ಅತ್ಯಧಿಕ ಸಾಪೇಕ್ಷ ಜನಪ್ರಿಯತೆಯನ್ನು ಗಳಿಸಿತು.[] ಜನವರಿ ೨೧, ೨೦೧೦ರಲ್ಲಿ ಕೇಬಲ್ ವಿಷನ್ ಹಾಗು ಸ್ಕ್ರಿಪ್ಪ್ಸ್ ಒಪ್ಪಂದವನ್ನು ಮಾಡಿಕೊಂಡವು ಹಾಗು ಅದೇ ದಿವಸ ಫುಡ್ ನೆಟ್ವರ್ಕ್ ಹಾಗು HGTV ತನ್ನ ಪ್ರಸಾರವನ್ನು ಆರಂಭಿಸಿತು.[]

AT&Tಯೊಂದಿಗಿನ ವಿವಾದ

ಬದಲಾಯಿಸಿ

AT&T U-ರೂಪಾಂತರವು ಫುಡ್ ನೆಟ್ವರ್ಕ್, ಕುಕಿಂಗ್ ಚ್ಯಾನಲ್, HGTV, DIY ನೆಟ್ವರ್ಕ್ ಹಾಗು ಗ್ರೇಟ್ ಅಮೆರಿಕನ್ ಕಂಟ್ರಿಯ ಕಾರ್ಯಕ್ರಮಗಳ ಪ್ರಸಾರವನ್ನು ನವೆಂಬರ್ ೫, ೨೦೧೦ರಲ್ಲಿ ಕೈಬಿಟ್ಟಿತು,[] ಎರಡು ದಿನಗಳ ನಂತರ ನವೆಂಬರ್ ೭, ೨೦೧೦ರಲ್ಲಿ ವಿವಾದವು ಬಗೆಹರಿಯಿತು.[೧೦][೧೧]

ಮಾಧ್ಯಮದ ಅಭಿಪ್ರಾಯ

ಬದಲಾಯಿಸಿ

ಡಿಸೆಂಬರ್ ೨೦೦೭ರಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಬಿಸ್ನೆಸ್ ವಿಭಾಗವು, ಎಮೆರಿಲ್ ಲಗಸ್ಸೇಯ ಎಮೆರಿಲ್ ಲೈವ್ ಕಾರ್ಯಕ್ರಮದ ಕೊನೆಯಲ್ಲಿ ಲೇಖನವನ್ನು ಪ್ರಕಟಿಸಿತು ಹಾಗು ಅಧ್ಯಕ್ಷ ಬ್ರೂಕ್ ಜಾನ್ಸನ್ ರ ಹೇಳಿಕೆಯನ್ನು ಈ ರೀತಿಯಾಗಿ ಉಲ್ಲೇಖಿಸಿತು, ಇದರಂತೆ ಲಗಸ್ಸೇ "ಫುಡ್ ನೆಟ್ವರ್ಕ್ ಕುಟುಂಬದ ಒಬ್ಬ ಮೌಲ್ಯಾಧಾರಿತ ಸದಸ್ಯರಾಗಿ ಉಳಿದಿದ್ದಾರೆ" ಎಂದು ಹೇಳಿಕೆ ನೀಡಿದ್ದರು.[೧೨]

ಡೆರೆಕ್ ಬೈನೆ, SNL ಕಗನ್ ಸಂಶೋಧನಾ ಸಂಸ್ಥೆಯ ಹಿರಿಯ ವಿಶ್ಲೇಷಕ, "ಜನರು ಪ್ರಗತಿ ಹೊಂದುತ್ತಿರುವ ಬಗ್ಗೆ ಆಶ್ಚರ್ಯವೆನಿಸುವುದಿಲ್ಲ" ಎಂಬ ಅಭಿಪ್ರಾಯವನ್ನು ಹೊಂದಿದ್ದಾಗಿ ವರದಿಯಾಗಿದೆ. "ಇವರುಗಳು ಜನರಿಗೆ ಯಾವುದೇ ವೇತನ ನೀಡುವುದಿಲ್ಲ ಏಕೆಂದರೆ ಅವರುಗಳು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಹವಣಿಕೆಯಲ್ಲಿರುತ್ತಾರೆ". "ಈ ನಿಟ್ಟಿನಲ್ಲಿ ಯೋಜನೆಯುದ್ದಕ್ಕೂ ಇದು ಅವರ ಕಾರ್ಯತಂತ್ರವಾಗಿರುತ್ತದೆ".[೧೨]

ಲೇಖನವು, ಫುಡ್ ನೆಟ್ವರ್ಕ್ ನ ಜನಪ್ರಿಯತೆಯು ಕಡಿಮೆಯಾಗುತ್ತಿರುವ ಬಗ್ಗೆಯೂ ಸಹ ವ್ಯಾಖ್ಯಾನಿಸಿತು, ಇದರಂತೆ ದಿನನಿತ್ಯದ ಸಾಪೇಕ್ಷ ಜನಪ್ರಿಯತೆಯಲ್ಲಿ "ಒಂದು ವರ್ಷದ ಹಿಂದೆ ೫೮೦,೦೦೦ರಷ್ಟು ಜನರು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರೆ ಅದು ಸರಾಸರಿ ೫೪೪,೦೦೦ರಷ್ಟು ಜನರಿಗೆ ಇಳಿಕೆಯಾಗಿದೆ" ಎಂದು ವರದಿ ಮಾಡಿತು. ಇದು ಗಮನಿಸಿದಂತೆ, "ಹೆಚ್ಚು ಮಹತ್ವವಾಗಿ, ಒಟ್ಟಾರೆಯಾಗಿ 'ಇನ್ ಕಿಚನ್" ಎಂದು ಕರೆಯಲ್ಪಡುತ್ತಿದ್ದ ಇದರ ವಾರಾಂತ್ಯದ ವಿಶಿಷ್ಟ ಮಾಹಿತಿ ಕಾರ್ಯಕ್ರಮಗಳು, ಕಳೆದ ವರ್ಷದ ವೀಕ್ಷಕರಿಗೆ ಹೋಲಿಸಿದರೆ ಶೇಖಡಾ ೧೫ರಷ್ಟು ಕಡಿಮೆಯಾಗಿದೆ, ಇದು ಸರಾಸರಿ ೮೩೦,೦೦೦ರಷ್ಟು ವೀಕ್ಷಕರನ್ನು ಹೊಂದಿದೆ. ಇದು ನೆಟ್ವರ್ಕ್ ಒಡೆತನದಲ್ಲಿದ್ದ ಮರುಪಾವತಿಯು, 'ಜಾಹಿರಾತುದಾರರಿಗೆ 'ಉತ್ತಮ ಅವಕಾಶವೆಂದು' ಪರಿಚಿತವಾಯಿತು."[೧೨]

ಫುಡ್ ನೆಟ್ವರ್ಕ್ ನ ಮಾಜಿ ಅಧ್ಯಕ್ಷ ಹಾಗು CEO ಎರಿಕಾ ಗ್ರುಯೇನ್ (೧೯೯೫–೧೯೯೮), ತಮ್ಮ ಅಧಿಕಾರಾವಧಿಯಲ್ಲಿ ಎಮೆರಿಲ್ ಲೈವ್ ನ್ನು ರೂಪಿಸಿದರು, ಈಕೆ ಹೆಚ್ಚುತ್ತಿದ್ದ ಸ್ಪರ್ಧೆಗೆ ಕಡಿಮೆ ವೀಕ್ಷಕರಿರುವುದರ ಬಗ್ಗೆ ಆರೋಪಿಸಿದರು, "ವೆಬ್ ನಲ್ಲಿ ಪಾಕವಿಧಾನದ ಬಗ್ಗೆ ಎಲ್ಲ ವಿಧವಾದ ಮಾಹಿತಿ ವಿದಿಯೋಗಳಿವೆ".[೧೨]

ಆದರೆ ಇದು ವರದಿ ಮಾಡಿದಂತೆ, "ಬಾಬ್ ಟುಸ್ಚ್ಮನ್, ಕಾರ್ಯಕ್ರಮ ಸಂಯೋಜನೆ ಹಾಗು ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದ್ದ ಫುಡ್ ನೆಟ್ವರ್ಕ್ ನ ಹಿರಿಯ ಉಪಾಧ್ಯಕ್ಷ, ವಾರಾಂತ್ಯದಲ್ಲಿ ಸಾಪೇಕ್ಷ ಜನಪ್ರಿಯತೆಯಲ್ಲಿ ಉಂಟಾಗುವ ಇಳಿಕೆಯು 'ನಾವು ಊಹಿಸಿರಲಿಲ್ಲ'. ಅವರ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷವೂ ನೆಟ್ವರ್ಕ್ ನ ಸಾಪೇಕ್ಷ ಜನಪ್ರಿಯತೆಯು ಕಾಲಾನುಕ್ರಮದಲ್ಲಿ ಎರಡು ಅಂಕಿಗಳಂತೆ ಹೆಚ್ಚುತ್ತಾ ಹೋಯಿತು, ಈ ಬೆಳವಣಿಗೆಯನ್ನು ತಾಳಿಕೊಳ್ಳಲು ಸಾಧ್ಯವಾಗಿರಲಿಲ್ಲ."[೧೨]

"ಒಂದು ವರ್ಷದ ಹಿಂದೆ, ಫುಡ್ ನೆಟ್ವರ್ಕ್, 'ಹೆಸರಾಂತ ವ್ಯಕ್ತಿಗಳ' ದೃಷ್ಟಿಕೋನದಿಂದ 'ಹೆಚ್ಚು ಕಷ್ಟಸಾಧ್ಯವಾದ ಮಾರ್ಗದಿಂದ' ಹೊಸ ಒಪ್ಪಂದಗಳನ್ನು ಬದಲಾಯಿಸಲು ಹುರುಪಿನಿಂದ ಪ್ರಯತ್ನಿಸಿತು, ಎಂದು ಬದಲಾದ ಕಾರ್ಯತಂತ್ರಕ್ಕೆ ಗುರಿಯಾಗಿದ್ದ ಒಬ್ಬ ವ್ಯಕ್ತಿಯು ಹೇಳಿದರೆಂದು ಪ್ರಕಟಿಸಿತು, ಇದು ಪುಸ್ತಕದ ಒಪ್ಪನದಗಳು ಹಾಗು ಲೈಸೆನ್ ನೀಡುವ ಉದ್ಯಮಗಳಲ್ಲಿ ಆಧಾರ ನೀಡುವಂತೆ ಒತ್ತಾಯಿಸುವುದರ ಜೊತೆಗೆ ಹೊರಗಿನ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ತಂದಿತು.[೧೨]

ಎಮೆರಿಲ್ ಲಗಸ್ಸೇಯ ಮಾದರಿ ಡೇವಿಡ್ ರೊಸೆನ್ಗಾರ್ಟನ್ ಸಹ ಕಾರ್ಯಕ್ರಮದಿಂದ ನಿರ್ಗಮಿಸಿದರು. ತಮ್ಮ ಪುಸ್ತಕ ಟೇಸ್ಟ್ ನ ಮುನ್ನುಡಿಯಲ್ಲಿ, ಎರಿಕಾ ಗ್ರುಯೇನ್, ಈ ಕಾರ್ಯಕ್ರಮವು ಫುಡ್ ನೆಟ್ವರ್ಕ್ ನ ಮೊದಲ ಒಳಾಂಗಣ ನಿರ್ಮಾಣವಾಗಿದ್ದು, ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದೆನಿಸಿತು. ೧೯೯೮ರ ಕೊನೆಯಲ್ಲಿ ಆಕೆ ಅಲ್ಲಿಂದ ನಿರ್ಗಮಿಸಿದ ಮೇಲೆ, ಕಾರ್ಯಕ್ರಮವು ೧:೦೦ amಗೆ ಪ್ರಸಾರವಾಗ ತೊಡಗಿತು, ಪ್ರಸಾರದ ಸಮಯದಲ್ಲಾದ ಇದರ ಅನಿವಾರ್ಯ ಇಳಿಕೆಯು ಸಾಪೇಕ್ಷ ಜನಪ್ರಿಯತೆಯಲ್ಲಿ ಇಳಿಕೆಯನ್ನು ತರುವುದರ ಜೊತೆಗೆ ಅಂತಿಮವಾಗಿ ನಿಂತು ಹೋಯಿತು. ಈ ವಿಲಕ್ಷಣವಾದ ಹಾಗು, ಮೇಲ್ಮೈಯಲ್ಲಿ ಕಂಡುಬರುವ, ನೆಟ್ವರ್ಕ್ ಆಸಕ್ತಿಗೆ ವಿರುದ್ಧವಾದ ವರ್ತನೆಯನ್ನು ಎಂದಿಗೂ ವಿವರಿಸಲಾಗಿಲ್ಲ.[೧೩]

ಇವನ್ನೂ ಗಮನಿಸಿ‌

ಬದಲಾಯಿಸಿ
  • ಫುಡ್ ನೆಟ್ವರ್ಕ್ ನಿಂದ ಪ್ರಸಾರವಾಗುವ ಕಾರ್ಯಕ್ರಮಗಳ ಪಟ್ಟಿ
  • ಫುಡ್ ನೆಟ್ವರ್ಕ್ (ಕೆನಡಾ)
  • ಡಿಶ್ ನೆಟ್‌ವರ್ಕ್ಸ್ ಚಾನಲ್ಸ್ ಗಳ ಪಟ್ಟಿ
  • ಡೈರೆಕ್TV ಚಾನಲ್ಸ್ ಗಳ ಪಟ್ಟಿ
  • ಫುಡ್ ನೆಟ್ವರ್ಕ್ ಪ್ರಶಸ್ತಿಗಳು

ಉಲ್ಲೇಖಗಳು‌‌

ಬದಲಾಯಿಸಿ
  1. ಫುಡ್ ಬಿಸ್ನೆಸ್ ನ್ಯೂಸ್: ಸ್ಚ್ರೋಯೆಡರ್, ಎರಿಕ್ "ಫುಡ್ ನೆಟ್ವರ್ಕ್ ಟು ಲಾಂಚ್ ಇನ್ ಇಂಟರ್ನ್ಯಾಷನಲ್ ಮಾರ್ಕೆಟ್ಸ್" ನವೆಂಬರ್ 4, 2009. (ಸಂಪೂರ್ಣ ಲೇಖನವನ್ನು ವೀಕ್ಷಿಸಲು ದಾಖಲಾತಿಯ ಅಗತ್ಯವಿದೆ.)
  2. "Aaron McCargo, Jr". Archived from the original on 2008-08-05. Retrieved 2008-07-28.
  3. Slezak, Michael (August 16, 2010). "'Next Food Network Star' season finale recap: And the winner is..." Entertainment Weekly. Retrieved August 16, 2010.
  4. "Scripps, Chello to launch Food Network overseas". Business Courier of Cincinnati. October 5, 2009.
  5. Nelson, Randy (April 30, 2009). "Joystiq impressions: Food Network: Cook or Be Cooked". Joystiq.com.
  6. Brion, Raphael (October 22, 2009). "Upcoming: Food Network's Cook or Be Cooked Video Game". EatMeDaily.com. Archived from the original on ಡಿಸೆಂಬರ್ 28, 2010. Retrieved ಮೇ 9, 2011.
  7. ವಾಲ್ ಸ್ಟ್ರೀಟ್ ಜರ್ನಲ್l: "ಸ್ಕ್ರಿಪ್ಪ್ಸ್ ಟು ಆಫರ್ ಫ್ರೀ ಷೋ ಇನ್ ಫೈಟ್ ವಿಥ್ ಕೇಬಲ್ ವಿಷನ್", ಜನವರಿ 6, 2010. (ಸಂಪೂರ್ಣ ಲೇಖನವನ್ನು ವೀಕ್ಷಿಸಲು ಚಂದಾರರಾಗುವ ಅಗತ್ಯವಿದೆ.)
  8. ಸ್ಕ್ರಿಪ್ಪ್ಸ್, ಕೇಬಲ್ ವಿಷನ್ ಡೀಲ್ ರಿಟರ್ನ್ಸ್ ಫುಡ್ ನೆಟ್ವರ್ಕ್, HGTV ಟು ಸಬ್ಸ್ಕ್ರೈಬರ್ಸ್ Archived 2010-03-29 ವೇಬ್ಯಾಕ್ ಮೆಷಿನ್ ನಲ್ಲಿ., ದಿ ರಾಪ್ , ಜನವರಿ ೨೧, ೨೦೧೦
  9. AT&T's U-ವರ್ಸ್ ಡ್ರಾಪ್ಸ್ ಫುಡ್ ನೆಟ್ವರ್ಕ್, HGTV ಅಂಡ್ ಅದರ್ ಸ್ಕ್ರಿಪ್ಪ್ಸ್ ನೆಟ್ವರ್ಕ್ಸ್ Archived 2011-05-03 ವೇಬ್ಯಾಕ್ ಮೆಷಿನ್ ನಲ್ಲಿ., ಚಿಕಾಗೋ ಟ್ರಿಬ್ಯೂನ್ , ನವೆಂಬರ್ ೫, ೨೦೧೦
  10. ಫುಡ್ ನೆಟ್ವರ್ಕ್, HGTV, ಬ್ಯಾಕ್ ಆನ್ U-ವರ್ಸ್ Archived 2012-07-08 at Archive.is, ಚಿಕಾಗೋ ಟ್ರಿಬ್ಯೂನ್ , ನವೆಂಬರ್ ೭, ೨೦೧೦
  11. AT&T U-ವರ್ಸ್, ಸ್ಕ್ರಿಪ್ಪ್ಸ್ ರಿಕನೆಕ್ಟ್ ಆನ್ ಕ್ಯಾರೇಜ್ ಕಾಂಟ್ರಾಕ್ಟ್, ಮಲ್ಟಿಚ್ಯಾನಲ್ ನ್ಯೂಸ್ , ನವೆಂಬರ್ ೭, ೨೦೧೦
  12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ಚೆಂಜಿಂಗ್ ಕೊರ್ಸಸ್ ಅಟ್ ದಿ ಫುಡ್ ನೆಟ್ವರ್ಕ್, ನ್ಯೂ ಯಾರ್ಕ್ ಟೈಮ್ಸ್ , ಡಿಸೆಂಬರ್ ೧೭, ೨೦೦೭
  13. ಡೇವಿಡ್ ರೊಸೆನ್ಗಾರ್ಟನ್ (೧೯೯೮), ಟೇಸ್ಟ್: ಆನ್ ಪ್ಯಾಲೆಟ್'ಸ್ ಜರ್ನಿ ಥ್ರೂ ದಿ ವರ್ಲ್ಡ್'ಸ್ ಗ್ರೇಟೆಸ್ಟ್ ಡಿಶಸ್ , ಟೆಲಿವಿಶನ್ ಫುಡ್ ನೆಟ್ವರ್ಕ್, ರಾಂಡಂ ಹೌಸ್, ISBN ೦-೩೭೫-೭೫೨೬೫-X


ಬಾಹ್ಯ ಕೊಂಡಿಗಳು‌‌

ಬದಲಾಯಿಸಿ