ಫಾಲಿ ಸ್ಯಾಮ್ ನಾರಿಮನ್

ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು, ಮ

ನಾರಿಮನ್

ಬದಲಾಯಿಸಿ
  • ಫಾಲಿ ಸ್ಯಾಮ್ ನಾರಿಮನ್ (ಜನವರಿ 1929 10 ಜನನ) ಅವರು ಭಾರತದ ವಿಶಿಷ್ಠ ಸಂವಿಧಾನಾತ್ಮಕ ನ್ಯಾಯಾಧೀಶ ಆಗಿದ್ದಾರೆ. 1971 ರಿಂದ ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ ಮತ್ತು 1991 ರಿಂದ ಭಾರತದ ಬಾರ್ ಅಸೋಸಿಯೇಶನ್ ಅಧ್ಯಕ್ಷರು. ನಾರಿಮನ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಬಗೆಹರಿಸಲು ಅಂತಾರಾಷ್ಟ್ರೀಯ ಮಟ್ಟದ ಸಂಧಾನಕಾರ.ಅವರು ಭಾರತದ ಅತ್ಯಂತ ವಿಶೇಷ ಸಾಂವಿಧಾನಿಕ ವಕೀಲರಲ್ಲಿ ಒಬ್ಬರು. ಅವರು ಹಲವಾರು ಪ್ರಮುಖ ಸಂದರ್ಭಗಳಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಅವರು ಮೇ ಜೂನ್ 1975 1972- ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು.
  • ಅವರಿಗೆ 1991 ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿತು. ಮತ್ತೆ ಪದ್ಮ ವಿಭೂಷಣ 2007ರಲ್ಲಿ ಮತ್ತು ಜಸ್ಟೀಸ್ ಗ್ರುಬರ್ ಪ್ರಶಸ್ತಿಯನ್ನು, 2002ರಲ್ಲಿ ಕೊಡಲ್ಪಟ್ಟಿದೆ. ಭಾರತ ಪಾರ್ಲಿಮೆಂಟ್‍ನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ನಾಮಕರಣ ಉಳಿದಿದೆ ಒಂದು ಅವಧಿಗೆ ಸದಸ್ಯ ಪದ (1999-2005)ಹೊಂದಿದ್ದರು.[][]

[[]

  • ಎರಡನೇ ವಿಶ್ವಯುದ್ಧದಲ್ಲಿ ಜಪಾನೀಯರು ಬರ್ಮಾ (ಈಗಿನ ಮ್ಯಾನ್ಮಾರ್‌) ದೇಶದ ರಾಜಧಾನಿಯಾಗಿದ್ದ ರಂಗೂನಿನ (ಈಗಿನ ಯಾಂಗೂನ್) ಮೇಲೆ ಬಾಂಬ್‌ ದಾಳಿ ಮಾಡಿದ್ದರಿಂದ, ರಂಗೂನಿನಲ್ಲಿ ನೆಲೆಸಿದ್ದ ನಾರಿಮನ್ ಪಾರ್ಸಿ ಕುಟುಂಬ ಈ ಬಾಂಬ್‌ ದಾಳಿಯ ಕಾರಣದಿಂದಾಗಿ ಭಾರತಕ್ಕೆ ಬಂದು ನೆಲೆಸುತ್ತದೆ. 1929ರಲ್ಲಿ ರಂಗೂನ್‌ನಲ್ಲಿ ಜನಿಸಿದ ಫಾಲಿ ಸ್ಯಾಮ್ ನಾರಿಮನ್ ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ಹೀಗೆ ಭಾರತಕ್ಕೆ ಬರುತ್ತಾರೆ. ತಂದೆ ಸ್ಯಾಮ್ ಬರಿಯಾಮ್ಜೀ ನಾರಿಮನ್, ತಾಯಿ ಬಾನೂ ನಾರಿಮನ್. ಶಿಮ್ಲಾದಲ್ಲಿ ಶಾಲೆ ಮತ್ತು ಮುಂಬಯಿನಲ್ಲಿ ಪದವಿ ಶಿಕ್ಷಣ. ಮಗನನ್ನು ಐ.ಸಿ.ಎಸ್. ಅಧಿಕಾರಿ ಮಾಡಬೇಕೆಂಬುದು ಅವರ ತಂದೆಯ ಮಹದಾಸೆ. ಲಂಡನ್ನಿಗೆ ಕಳುಹಿಸುವಷ್ಟು ಹಣ ಅವರ ಬಳಿ ಇರುವುದಿಲ್ಲ, ಹೀಗಾಗಿ ಆ ಆಸೆ ಈಡೇರುವುದಿಲ್ಲ. ಗಣಿತ ಮತ್ತು ವಿಜ್ಞಾನ ತಲೆಗೆ ಹತ್ತುವುದಿಲ್ಲ. ಬಿ.ಎ. ಪದವಿ ಪೂರೈಸಿ ಕಾನೂನು ವ್ಯಾಸಂಗ ಮಾಡುತ್ತಾರೆ.

ಶಿಕ್ಷಣ ವಿವರ

ಬದಲಾಯಿಸಿ
  • ರಂಗೂನ್ ಪಾರ್ಸಿ ಪೋಷಕರು ಸ್ಯಾಮ್ ಬರಿಯಾಮ್‍ಜಿ ನಾರಿಮನ್ ಮತ್ತು ಬಾನೂ ನಾರಿಮನ್ ಅವರಿಗೆ 1929 ರಲ್ಲಿ ಜನಿಸಿದ ಫಾಲಿ, ಬಿಷಪ್ ಕಾಟನ್ ಸ್ಕೂಲ್, ಶಿಮ್ಲಾ ತನ್ನ ಶಾಲಾಶಿಕ್ಷಣವನ್ನು ಮಾಡಿದರು. ನಂತರ ಅವರು ಸೇಂಟ್ ಕ್ಸೇವಿಯರ್ ಕಾಲೇಜಿನ ಬಾಂಬೆಯಲ್ಲಿ (ಈಗ ಮುಂಬಯಿ), ಅರ್ಥಶಾಸ್ತ್ರ ಹಾಗು ಇತಿಹಾಸ-ಹಿಸ್ಟರಿಯಲ್ಲಿ, 1950ರಲ್ಲಿ ಬಿ.ಎ (ಆನರ್ಸ) ಅಧ್ಯಯನ ಮಾಡಿ, ಸರ್ಕಾರಿ ಕಾನೂನು ಕಾಲೇಜು, ಮುಂಬಯಿನಲ್ಲಿ ಕಾನೂನು ಪದವಿ (LL.B.)ಮಾಡಿದರು. ನಂತರ , ವಕೀಲರ (ಅಡ್ವೊಕೇಟ್)ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಅದಕ್ಕಾಗಿ ಕಿನ್‍ಲಾಕ್ (KinlockKinlock Forbes Gold Medal) ಫೋರ್ಬ್ಸ್ ಚಿನ್ನದ ಪದಕ ಪಡೆದರು,ಮತ್ತು ಪ್ರಶಸ್ತಿ ರೋಮನ್ ಲಾ & ಜ್ಯೂರಿಸ್ಪ್ರೂಡೆನ್ಸ್ ನಲ್ಲಿ ಪ್ರಶಸ್ತಿ ಗಳಿಸಿದರು.

ವೃತ್ತಿಜೀವನ

ಬದಲಾಯಿಸಿ
  • ನಾರಿಮನ್ ಬಾಂಬೆ ಹೈ ಕೋರ್ಟ್‍ನಲ್ಲಿ ತನ್ನ ಕಾನೂನು ವೃತ್ತಿ ಆರಂಭಿಸಿದರು. 22 ವರ್ಷಗಳ ಅಭ್ಯಾಸದ ನಂತರ, ಅವರು 1971 ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರನ್ನಾಗಿ ನೇಮಿಸಲಾಯಿತು. ಅದೇ ಸ್ಥಾನವನ್ನು ಅವರು ಇಲ್ಲಿಯವರೆಗೆ ಉಳಿಸಿಕೊಂಡಿದ್ದಾರೆ.

ಧೈರ್ಯಶಾಲಿ ನ್ಯಾಯವಾದಿ

ಬದಲಾಯಿಸಿ
  • ಅಂತಾರಾಷ್ಟ್ರೀಯ ಖ್ಯಾತಿಯ ನ್ಯಾಯಕೋವಿದ, ಸಂವಿಧಾನ ಮತ್ತು ಜಲವಿವಾದ ಕಾಯ್ದೆಯಲ್ಲಿ ಅವರಂತೆ ವಾದಿಸುವವರು ಭಾರತದಲ್ಲಿ ಮತ್ತೊಬ್ಬರಿಲ್ಲ ಎಂದೇ ಹೇಳಲಾಗುತ್ತದೆ. ಅಳ್ಳೆದೆಯವರು ಉತ್ತಮ ನ್ಯಾಯವಾದಿಯಾಗಲು ಸಾಧ್ಯವಿಲ್ಲ, ಸಿಂಹಹೃದಯದ ಔದಾರ್ಯ ಬೇಕೇ ಬೇಕು ಎನ್ನುತ್ತಾರೆ ನಾರಿಮನ್‌. ಬದುಕಿನಲ್ಲಿ ತಾವು ಏನಾದರೂ ಸಾಧಿಸಿದ್ದರೆ ಅದರ ಸಿಂಹಪಾಲು ಶ್ರೇಯಸ್ಸು ತಮ್ಮ ಪತ್ನಿ ಬಾಪ್ಸಿ ನಾರಿಮನ್‌ಗೆ ಸಲ್ಲಬೇಕು ಎಂಬುದು ಅವರ ಸಾರ್ವಜನಿಕ ನಿವೇದನೆ. ಅವರ ಪುತ್ರ ರೋಹಿಂಟನ್ ನಾರಿಮನ್ ಅವರು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ.ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದ್ದರು.
  • ನರ್ಮದಾ ಮುಳುಗಡೆ ಸಂತ್ರಸ್ತರ ವಿರುದ್ಧ ಗುಜರಾತ್ ಸರ್ಕಾರದ ಪರ ಹಿಡಿದ ವಕಾಲತ್ತನ್ನು ಅವರು ಒಂದು ಹಂತದ ತನಕ ಸಮರ್ಥಿಸಿಕೊಂಡಿದ್ದಾರೆ. ಭಾರೀ ಜಲಾಶಯಗಳು ಮನುಕುಲದ ಪಾಲಿಗೆ ಅನಿಷ್ಟಗಳು ಎಂಬ ಟೀಕೆ ಅವರಿಗೆ ಒಪ್ಪಿಗೆ ಇಲ್ಲ. ಆದರೆ ಅವುಗಳಿಂದ ಸಂತ್ರಸ್ತರಾಗುವವರಿಗೆ ಮರುವಸತಿ ಕಲ್ಪಿಸಬೇಕು ಎಂಬುದು ಅವರ ವಾದ.

ಕರ್ನಾಟಕದ ಕಾವೇರಿ ವಿವಾದದಲ್ಲಿ ವಕೀಲರ ಮುಖ್ಯಸ್ಥರಾಗಿ ನಾರಿಮನ್

ಬದಲಾಯಿಸಿ
  • ಕಳೆದ 25ಕ್ಕೂ ಅಧಿಕ ವರ್ಷಗಳಿಂದ ಜಲ ವಿವಾದಗಳಲ್ಲಿ ಕರ್ನಾಟಕದ ಪರ ವಾದ ಮಂಡಿಸುತ್ತಿರುವ ನಾರಿಮನ್‌ ಅವರಿಗೆ ಈಗ 87 ವರ್ಷ ವಯಸ್ಸು. ಅವರೊಂದಿಗೇ ತಂಡದಲ್ಲಿರುವ ಅನಿಲ್‌ ದಿವಾನ್‌ ಅವರೂ ಅವರ ಸಮಕಾಲೀನರು.ನ್ಯಾಯಾಲಯ 2007ರಿಂದ ಇದುವರೆಗೆ ವಿಚಾರಣೆ ನಡೆಸಿ, ವಾದ, ಪ್ರತಿವಾದ ಆಲಿಸಿದ್ದು, ಇಡೀ ಪ್ರಕರಣಕ್ಕೆ ಕೊನೆ ಹಾಡುವ ಕಾಲ ಈಗ ಕೂಡಿಬಂದಿದೆ. ಪ್ರಕರಣದ ಒಳ– ಹೊರಗನ್ನು ಕೂಲಂಕಷವಾಗಿ ಬಲ್ಲ ನಾರಿಮನ್‌ ಅವರನ್ನು ಈ ಹಂತದಲ್ಲಿ ಬದಲಿಸುವುದು ಕೂಡದು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯ, ರಾಷ್ಟ್ರ ಕಂಡ ಅತ್ಯುತ್ತಮ ವಕೀಲರಲ್ಲಿ ನಾರಿಮನ್‌ ಸಹ ಒಬ್ಬರಾಗಿದ್ದಾರೆ. ಅಂಥವರು ನಮಗೆ ಸಿಕ್ಕಿರುವುದು ಅದೃಷ್ಟ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಿಗೂ ಅವರೆಂದರೆ ಗೌರವ.
  • ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರುಗಳಿಗೆ ಹೆಚ್ಚಿಸುವ ಸಂಬಂಧದ ವ್ಯಾಜ್ಯವನ್ನು ಕರ್ನಾಟಕಕ್ಕೆ ಗೆದ್ದು ಕೊಟ್ಟದ್ದು ಇದೇ ನಾರಿಮನ್ ತಂಡ. ತಮಿಳುನಾಡಿಗೆ ಕರ್ನಾಟಕ ಪ್ರತಿವರ್ಷ ಬಿಡುಗಡೆ ಮಾಡಬೇಕಿದ್ದ ಕಾವೇರಿ ನದಿ ನೀರಿನ ಭಾರವನ್ನು 380 ಟಿ.ಎಂ.ಸಿ. ಅಡಿಗಳಿಂದ 192 ಟಿ.ಎಂ.ಸಿ. ಅಡಿಗಳಿಗೆ ಇಳಿಸಿಕೊಟ್ಟ ಸಾಧನೆಯೂ ಇದೇ ನಾರಿಮನ್ ಅವರದು.[]

Padma Awards Directory (1954-2007)" (PDF). Ministry of Home Affairs. Retrieved 7 December 2010.

ಉಲ್ಲೇಖ

ಬದಲಾಯಿಸಿ
  1. 2002 Gruber Justice Prize Press Release: LIFETIME CHAMPION FOR HUMAN RIGHTS WINS PRIZE FOR JUSTICE
  2. /www.barandbench.com/index.php?
  3. http://rajyasabha.nic.in/rsnew/pre_member/1952_2003/n.pdf Member Official Biograph]
  4. "ನಾರಿಮನ್‌ ಕಾವೇರಿ ಕಟಕಟೆಯಲ್ಲಿ ನಿಂತ ನ್ಯಾಯನಿಪುಣ;ಉಮಾಪತಿ;11 Sep, 2016". Archived from the original on 2016-09-11. Retrieved 2016-09-11.



  • -