ಶೀತಕಯಂತ್ರ
(ಫ಼್ರಿಜ್ ಇಂದ ಪುನರ್ನಿರ್ದೇಶಿತ)
ಶೀತಕಯಂತ್ರವು (ಆಡುಮಾತಿನಲ್ಲಿ ಫ಼್ರಿಜ್) ಉಷ್ಣ ನಿರೋಧಕ ಭಾಗ ಮತ್ತು ಫ್ರಿಜ್‍ನ ಒಳಭಾಗವನ್ನು ಕೋಣೆಯ ತಾಪಮಾನಕ್ಕಿಂತ ಕಡಿಮೆ ತಾಪಮಾನಕ್ಕೆ ತಂಪಾಗಿಸಲು ಫ್ರಿಜ್‍ನ ಒಳಗಿನಿಂದ ಅದರ ಬಾಹ್ಯ ವಾತಾವರಣಕ್ಕೆ ಶಾಖವನ್ನು ವರ್ಗಾಯಿಸುವ (ಯಾಂತ್ರಿಕ, ವಿದ್ಯುನ್ಮಾನ, ಅಥವಾ ರಾಸಾಯನಿಕ) ಶಾಖದ ಪಂಪನ್ನು ಹೊಂದಿರುವ ಒಂದು ಸಾಮಾನ್ಯ ಗೃಹೋಪಯೋಗಿ ವಸ್ತು. ತಂಪಾಗಿಸುವಿಕೆಯು ಅಭಿವೃದ್ಧಿಹೊಂದಿದ ದೇಶಗಳಲ್ಲಿ ಒಂದು ಜನಪ್ರಿಯ ಆಹಾರ ಸಂಗ್ರಹ ತಂತ್ರ. ಸೀಮಿತ ಪರಿಮಾಣದಲ್ಲಿ ಕಡಿಮೆ ಉಷ್ಣಾಂಶವು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿ ಪ್ರಮಾಣವನ್ನು ತಗ್ಗಿಸುತ್ತದೆ, ಹಾಗಾಗಿ ಶೀತಕಯಂತ್ರವು ಹಾಳಾಗುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.[೧]
ಉಲ್ಲೇಖಗಳು
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |