ಫರಾನ್ ಅಖ್ತರ್ (ಹಿಂದಿ:फ़रहान अख़्तर; 1974 ರ ಜನವರಿ 9 ರಂದು ಜನನ), ಭಾರತೀಯ ಚಲನಚಿತ್ರ ತಯಾರಕರು , ಚಿತ್ರಕತೆಗಾರ, ನಟ, ಹಿನ್ನೆಲೆ ಗಾಯಕ, ಗೀತಕಾರ, ಚಲನಚಿತ್ರ ನಿರ್ಮಾಪಕ, ಮತ್ತು ದೂರದರ್ಶನದ ಆತಿಥೇಯ ನಿರೂಪಕರಾಗಿದ್ದಾರೆ. ಇವರು ಪ್ರಧಾನವಾಗಿ ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

Farhan Akthar
Farhan Akhtar at Luck By Chance launch
Born (1974-01-09) ೯ ಜನವರಿ ೧೯೭೪ (ವಯಸ್ಸು ೫೦)
Occupation(s)Actor, director, producer, playback singer, lyricist, screenwriter, television host
Years active1991—present
SpouseAdhuna Akhtar
ChildrenAkira Akhtar, Shakya Akhtar

ಇವರು ನಿರ್ದೇಶಿಸಿದ ಮೊದಲ ಚಿತ್ರ ದಿಲ್ ಚಾಹತಾ ಹೈ ಯನ್ನು ಎಲ್ಲೆಡೆ ಪ್ರಶಂಸಿಸಲಾಯಿತು. ಮೊದಲ ಬಾರಿಗೆ ರಾಕ್ ಆನ್!! ನಲ್ಲಿ ಅಭಿನಯಿಸುವ ಮೂಲಕ ನಟರಾದರು.

ವೈಯಕ್ತಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ

ಫರಾನ್ ಅಖ್ತರ್, ಚಿತ್ರಕತೆಗಾರ ಜಾವೆದ್ ಅಖ್ತರ್ ಮತ್ತು ಹನಿ ಇರಾನಿಯವರ ಪುತ್ರನಾಗಿ ಮುಂಬೈನಲ್ಲಿ ಜನಿಸಿದರು. ಇವರನ್ನು ಒಬ್ಬ ನಾಸ್ತಿಕನಂತೆ ಬೆಳೆಸಲಾಯಿತು.[][] ಬಾಲ್ಯದ ವಿದ್ಯಾಭ್ಯಾಸವನ್ನು ಜುಹುನಲ್ಲಿರುವ ಮಾನೆಕ್ ಜಿ ಕೂಪರ್ ಶಾಲೆಯಲ್ಲಿ ಮುಗಿಸಿದರು. ಅನಂತರ ವಾಣಿಜ್ಯದಲ್ಲಿ ಪದವಿಯನ್ನು ಪಡೆಯಲು H.R. ಕಾಲೇಜಿಗೆ ಸೇರಿಕೊಂಡರು. ಆದರೆ ಎರಡನೆಯ ವರ್ಷದಲ್ಲೇ ವಿದ್ಯಾಭ್ಯಾಸವನ್ನು ಕೈಬಿಟ್ಟರು.[]

ನಟಿ ಶಬಾನ ಆಜ್ಮಿ ಇವರ ಮಲತಾಯಿಯಾಗಿದ್ದಾರೆ. ಇವರು ಉರ್ದು ಕವಿ ಜಾನ್ ನಿಸಾರ್ ಅಖ್ತರ್ ರ ಮೊಮ್ಮಗನಾಗಿದ್ದು, ಬಾಲಿವುಡ್ ಚಲನಚಿತ್ರಗಳ ನಿರ್ದೇಶಕಿ/ನೃತ್ಯ ಸಂಯೋಜಕಿ ಫರಾ ಖಾನ್ ರ ಸೋದರ ಸಂಬಂಧಿಯಾಗಿದ್ದಾರೆ. ಅವರ ಸಹೋದರಿ ಜೋಯಾ ಅಖ್ತರ್,(refer: https://www.youtube.com/watch?v=kfTcaAMqjBA&NR=1&feature=fvwp they are a year apart and not twins) ಇತ್ತೀಚೆಗಷ್ಟೆ ಲಕ್ ಬೈ ಚಾನ್ಸ್ ಎಂಬ ಅವರ ಮೊದಲ ಚಿತ್ರವನ್ನು ನಿರ್ದೇಶಿಸಿದರು. ಇದರಲ್ಲಿ ಫರಾನ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫರಾನ್, ಅಧುನ್ ಭಾಬನಿ ಅಖ್ತರ್ ರನ್ನು ಮದುವೆಯಾದರು. ಇವರು ಕೇಶವಿನ್ಯಾಸಕಿಯಾಗಿದ್ದು, ತಮ್ಮ ಸಹೋದರನೊಡನೆ ಬಿಬ್ಲಂಟ್ ಸೆಲೂನ್ (ಕೇಶ ಶೃಂಗಾರ ವೃತ್ತಿ)ನಡೆಸುತ್ತಿದ್ದಾರೆ. ಅವರು ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ: ಷಕ್ಯಾ ಮತ್ತು ಅಕಿರಾ.

ವೃತ್ತಿಜೀವನ

ಬದಲಾಯಿಸಿ

ಫರಾನ್ ಅಖ್ತರ್, ಅವರ ವೃತ್ತಿಜೀವನವನ್ನು ತಮ್ಮ 17 ನೇ ವಯಸ್ಸಿನಲ್ಲಿ, ಚಲನಚಿತ್ರ ಛಾಯಾಗ್ರಾಹಕ-ನಿರ್ದೇಶಕ ಮನ್ಮೋಹನ್ ಸಿಂಗ್ ರವರೊಂದಿಗೆ ಲಮ್ಹೇ (1991) ಯಂತಹ ಚಿತ್ರಗಳಲ್ಲಿ ತರಬೇತಿ-ಅಭ್ಯಾಸಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆರಂಭಿಸಿದರು;ಹಿಮಾಲಯ್ ಪುತ್ರ (1997) ಚಲನಚಿತ್ರದಲ್ಲಿ ನಿರ್ದೇಶಕ ಪಂಕಜ್ ಪರ್ಷರ್ ರ ಸಹಾಯಕ ನಿರ್ದೇಶಕರಾಗುವ ಮೊದಲು ಮೂರು ವರ್ಷಗಳ ಕಾಲ ಅನೇಕ ಚಿತ್ರ ಸಂಭಂಧಿ ಚಟುವಟಿಕೆ, ದೂರದರ್ಶನ ಚಿತ್ರನಿರ್ಮಾಣ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು.[]

2001 ರ ಯಶಸ್ವಿ ಹಿಂದಿ ಚಲನಚಿತ್ರ ದಿಲ್ ಚಾಹತಾ ಹೈ ಗೆ ಚಿತ್ರಕಥೆ ಬರೆದು ನಿರ್ದೇಶಿಸುವ ಮೂಲಕ ಚಿತ್ರಕಥೆಗಾರ ಮತ್ತು ನಿರ್ದೇಶಕರಾದರು. ಈ ಚಲನಚಿತ್ರವನ್ನು ಎಕ್ಸೆಲ್ ಎಂಟರ್ ಟೈನ್ಮೆಂಟ್ ಪ್ರೈವೇಟ್. ಲಿಮಿಟೆಡ್ ನಿರ್ಮಿಸಿತು. ಇದು 1999 ರಲ್ಲಿ ರಿತೇಶ್ ಸಿದ್ವಾನಿ ಯೊಂದಿಗೆ ಒಡಗೂಡಿ ಅವರು ಸಹ ಭಾಗಿತ್ವದಲ್ಲಿ ಸ್ಥಾಪಿಸಿದ ಸಂಸ್ಥೆಯಾಗಿದೆ.[][] ಈ ಚಿತ್ರ (ಇದರಲ್ಲಿ ಅಮೀರ್ ಖಾನ್, ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಖನ್ನ ಅಭಿನಯಿಸಿದ್ದಾರೆ), ಅದೇ ತಾನೇ ಕಾಲೇಜಿನಿಂದ ಪದವೀಧರರಾಗಿ ಹೊರಬಂದ ಮೂರು ಜನ ಸ್ನೇಹಿತರ ಕಥೆ ಮತ್ತು ಪ್ರೇಮ ಅಲ್ಲದೇ ಸ್ನೇಹಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವರು ವ್ಯವಹರಿಸುವ ಬಗೆಯನ್ನು ಒಳಗೊಂಡಿದೆ. ಇದು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆ ಇದನ್ನು ಹೆಚ್ಚಾಗಿ ಮೆಚ್ಚಿಕೊಂಡಿತು. ಇದು ಅತ್ಯುತ್ತಮ ಚಿತ್ರಕಥೆ, ನಿರ್ದೇಶನ ಮತ್ತು ಚಲನಚಿತ್ರಗಳನ್ನೊಳಗೊಂಡಂತೆ ಅನೇಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕೆಲವು ನಾಮನಿರ್ದೇಶನಗಳನ್ನು ಗಳಿಸಿತು. ಇದು ಆ ವರ್ಷದ ಹಿಂದಿಯಲ್ಲಿ ಅತ್ಯುತ್ತಮ, ವೈಶಿಷ್ಟ್ಯಪೂರ್ಣ ಚಿತ್ರಕ್ಕೆ ನೀಡಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.[]

ತರುವಾಯ ಅಖ್ತರ್ ಅವರ ಮುಂದಿನ ಯೋಜನೆಯಾದ ಲಕ್ಷ್ಯ (2004) ನ ನಿರ್ದೇಶನದತ್ತ ಗಮನಹರಿಸಿದರು. ಇದು ಜೀವನದಲ್ಲಿ ಗುರಿ ಇಲ್ಲದೇ ಅಲೆದಾಡುತ್ತಿರುವ, ಅನಂತರ ತನಗಾಗಿ ಒಂದು ಗುರಿಯನ್ನು ನಿರ್ಧರಿಸಿಕೊಳ್ಳುವ ಯುವಕನ ಕಥೆಯಾಗಿದ್ದು, ಇದರಲ್ಲಿ ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದರೂ ಕೂಡ, ಅಪಾರ ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು.[dubious ][ಸೂಕ್ತ ಉಲ್ಲೇಖನ ಬೇಕು] ಈ ಚಿತ್ರದ ಕಥೆಯನ್ನು ಅವರ ತಂದೆ ಜಾವೆದ್ ಅಖ್ತರ್ ಬರೆದಿದ್ದರು. ಈ ನಡುವೆ ಅವರು ಗುರಿಂದರ್ ಚಂದ್ ರ, 2004ರಲ್ಲಿ ತೆರೆಕಂಡ ಹಾಲಿವುಡ್ ಚಲನಚಿತ್ರ ಬ್ರೈಡ್ ಅಂಡ್ ಪ್ರಿಜ್ಯುಡೀಸ್ ಗೆ ಗೀತರಚನೆ ಮಾಡಿದ್ದರು.

ಅನಂತರ ಫರಾನ್ 1978ರ ಅಮಿತಾಭ್ ಬಚ್ಚನ್ ಅಭಿನಯದ ಡಾನ್ ಚಿತ್ರದ ರೀಮೇಕ್, ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್ ಅನ್ನು ನಿರ್ದೇಶಿಸಿದರು. ಶಾರುಖ್ ಖಾನ್ ಈ ಚಲನಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದು 2006 ರ ಅಕ್ಟೋಬರ್ 20 ರಂದು ತೆರೆಕಂಡಿತು. ಈ ಚಲನಚಿತ್ರ ವಿಮರ್ಶಕವಾಗಿ ನಿಂದನೆಗೆ ಗುರಿಯಾದರೂ ಕೂಡ 50 ಕೋಟಿಗೂ ಅಧಿಕ ಗಳಿಕೆ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಜಯ ಸಾಧಿಸಿತು. ಅಲ್ಲದೇ ವರ್ಷದ ಐದನೇ ಯಶಸ್ವಿ ಚಿತ್ರವಾಯಿತು.[] 2007 ರಲ್ಲಿ ಫರಾನ್ ಹನಿಮೂನ್ ಟ್ರಾವೆಲ್ಸ್ ಪ್ರೈವೆಟ್. ಲಿಮಿಟೆಡ್. ಚಿತ್ರವನ್ನು ನಿರ್ಮಿಸಿದರು, ಇದು ಕೂಡ ಗಲ್ಲಾಪೆಟ್ಟಿಯಲ್ಲಿ ತೃಪ್ತಿಕರ ಮಟ್ಟದ ಸಾಧನೆ ಕಂಡಿತು.[]

2007 ರಲ್ಲಿ, HIV ರೋಗಲಕ್ಷಣ ಮತ್ತು ರೋಗಿಗೆ ಕೌಟುಂಬಿಕ ಬೆಂಬಲದ ಅಗತ್ಯವಿರುವ ಕಥೆಯುಳ್ಳ, 12 ನಿಮಿಷದ ಕಿರುಚಿತ್ರ ಪಾಸಿಟಿವ್ ಅನ್ನು ನಿರ್ದೇಶಿದರು. ಇದನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಇದು 'ಏಡ್ಸ್ ಜಾಗೋ' (ಏಡ್ಸ್ ಜಾಗೃತಿ )ಯ ಭಾಗವಾಗಿದೆ. ನಾಲ್ಕು ಕಿರು ಚಿತ್ರಗಳ ಸರಣಿಗಳನ್ನು ಮೀರಾ ನಾಯರ್, ಸಂತೋಷ್ ಸಿವನ್ , ವಿಶಾಲ್ ಭಾರಧ್ವಜ್ ಮತ್ತು ಫರಾನ್ ಅಖ್ತರ್ ನಿರ್ದೇಶಿಸಿದ್ದಾರೆ. ಇವುಗಳನ್ನು ಮೀರಾ ನಾಯರ್ ರ ಮೀರಾ ಬಾಯಿ ಫಿಲ್ಮ್ಸ್ ಕಂಪನಿಯೊಂದಿಗೆ ಮತ್ತು ಆವಾಹನ್ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಅಲ್ಲದೇ ಬಿಲ್ ಅಂಡ್ ಮಿಲಿಂಡ್ ಗೇಟ್ಸ್ ಫೌಂಡೇಷನ್ನ ಸಹಕಾರದೊಂದಿಗೆ ನಿರ್ಮಿಸಲಾಗಿದೆ.[೧೦] ಇದರಲ್ಲಿ, ಬೊಮನ್ ಇರಾನಿ, ಶಬಾನಾ ಆಜ್ಮಿ ಮತ್ತು ಆರಂಭಿಕ ನಟ ಅರ್ಜುನ್ ಮಾಥೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.[೧೧]

2008 ರಲ್ಲಿ, ರಾಕ್ ಆನ್!! ಚಿತ್ರದಲ್ಲಿ ಅಭಿನಯಿಸುವ ಮೂಲಕ ಅಖ್ತರ್ ತಮ್ಮ ಆರಂಭಿಕ ವೃತ್ತಿಪರತೆಯ ನಟರಾದರು. ಇದು ವಿಮರ್ಶಾತ್ಮಕವಾಗಿ ಭಾರಿ ಮೆಚ್ಚುಗೆಯನ್ನು ಗಳಿಸಿತಲ್ಲದೇ ಗಲ್ಲಾ ಪೆಟ್ಟಿಗೆಯಲ್ಲಿಯೂ ಸಾಧನೆ ಕಂಡಿತು. ಅದರಲ್ಲೂ ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಅತ್ಯಂತ ಯಶಸ್ವಿಯಾಯಿತು.[೧೨] ಫರಾನ್, ಅವರ ಸಹೋದರಿ ಜೋಯಾ ನಿರ್ದೇಶನದ ಮೊದಲ ಚಿತ್ರ ಲಕ್ ಬೈ ಚಾನ್ಸ್ ನಲ್ಲಿಯೂ ಕೂಡ ನಾಯಕ ನಟನಾಗಿ ಕಾಣಿಸಿಕೊಂಡರು. ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಇವರ ಇತ್ತೀಚೆಗೆ ತೆರೆಕಂಡ ಚಿತ್ರವಾಗಿದೆ. ಇನ್ನೂ ಎರಡು ಚಲನಚಿತ್ರಗಳನ್ನು 2010 ರಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧರಿಸಲಾಗಿತ್ತು: ಧ್ರುವ್ ಮತ್ತು ಗುಲೇಲ್ (ಇವು ಇವರ ನಿರ್ಮಾಣದ ಚಿತ್ರಗಳಾಗಿರದೇ ಕೇವಲ ನಟನೆಯಲ್ಲಿ ಮಾತ್ರ್ರ ಭಾಗಿಯೆನಿಸಿವೆ).

ಅಖ್ತರ್ ಮೊದಲ ಬಾರಿಗೆ ರಾಕ್ ಆನ್!! ನಲ್ಲಿ ಹಾಡುವುದರೊಂದಿಗೆ ಗಾಯಕರಾದರಲ್ಲದೇ, ಈ ಚಿತ್ರದ ಬಹುಪಾಲು ಹಾಡುಗಳನ್ನು ಹಾಡಿದ್ದಾರೆ. ಅವರು A. R. ರೆಹಮಾನ್ ಸಂಗೀತ ಸಂಯೋಜನೆಯ ಬ್ಲೂ ಚಿತ್ರದ ಒಂದು ಹಾಡನ್ನು ಹಾಡಬೇಕಿತ್ತು.[೧೩] ಆದರೆ ಅಖ್ತರ್, ಕಾರ್ತಿಕ್ ಕಾಲಿಂಗ್ ಕಾರ್ತಿಕ್ ನ ಚಿತ್ರೀಕರಣದಲ್ಲಿ ನಿರತರಾದ ಕಾರಣ ಈ ಹಾಡನ್ನು ಹಾಡಲು ಅವರಿಗೆ ಸಮಯ ದೊರೆಯಲಿಲ್ಲ.

ನಾಚ್ ಬಲಿಯೇ (2005) ಎಂಬ ನೃತ್ಯ ರಿಯಾಲಿಟಿ ಪ್ರದರ್ಶನದ ಮೊದಲ ಸರಣಿ ಮತ್ತು ಫೆಮಿನಾ ಮಿಸ್ ಇಂಡಿಯಾ (2002ರಲ್ಲಿ) ಎಂಬ ಸೌಂದರ್ಯ ಸ್ಪರ್ಧೆಯನ್ನು ಒಳಗೊಂಡಂತೆ ದೂರದರ್ಶನದ ಕೆಲವು ಪ್ರದರ್ಶನಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಇವರು NDTV ಇಮ್ಯಾಜಿನ್ ಚಾನಲ್ ನ ಓಯೇ! ಕಾರ್ಯಕ್ರಮದ ಆತಿಥೇಯರಾಗಿದ್ದಾರೆ.ಇಟ್ಸ್ ಫ್ರೈಡೆ! ಎಂದು ಕರೆಯಲಾಗುವ TV ಪ್ರದರ್ಶನವನ್ನು ನಡೆಸಿಕೊಡುತ್ತಾರೆ.[೧೪]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ನಿರ್ದೇಶಕ/ಚಿತ್ರಕಥೆ ಬರಹಗಾರ

ಬದಲಾಯಿಸಿ
ವರ್ಷ ಚಲನಚಿತ್ರ ಟಿಪ್ಪಣಿಗಳು
2001

ದಿಲ್ ಚಾಹತಾ ಹೈ

ವಿಜೇತ , ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ವಿಜೇತ , ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿ
ವಿಜೇತ , ಫಿಲ್ಮ್ ಫೇರ್ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ
ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
2004

ಲಕ್ಷ್ಯ

ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
2006

ಡಾನ್

2007 ಪಾಸಿಟಿವ್ ಕಿರು ಚಲನಚಿತ್ರ
ನಿರ್ದೇಶಕ
2011 ಡಾನ್ 2

ನಿರ್ಮಾಪಕ

ಬದಲಾಯಿಸಿ
ಗೇಮ್
ವರ್ಷ ಚಲನಚಿತ್ರ ನಿರ್ದೇಶಕ ಟಿಪ್ಪಣಿಗಳು
1995

ಡಾನ್

ತನ್ನದೇ ಪಾತ್ರ ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
ಹನಿಮೂನ್ ಟ್ರಾವೆಲ್ಸ್ ಪ್ರೈವೆಟ್. ಲಿಮಿಟೆಡ್. ರೀಮಾ ಕಾಗ್ಟಿ
2008

ರಾಕ್ ಆನ್!!

ಅಭಿಷೇಕ್ ಕಪೂರ್ ವಿಜೇತ , ಹಿಂದಿಯ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
2009

ಲಕ್‌ ಬೈ ಚಾನ್ಸ್‌

ಜೋಯಾ ಅಖ್ತರ್
2010 ಕಾರ್ತಿಕ್ ಕಾಲಿಂಗ್ ಕಾರ್ತಿಕ್ ವಿಜಯ್ ಲಾಲ್ವಾನಿ
1995 ಡಾನ್ 2 ತನ್ನದೇ ಪಾತ್ರ
ಅಭಿನಯ್ ಡಿಯೋ
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
2008

ರಾಕ್ ಆನ್!!

ಅದಿತ್ಯ ಷ್ರೋಫ್

ವಿಜೇತ , ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟ ಪ್ರಶಸ್ತಿ
ವಿಜೇತ , IIFA ಆರಂಭಿಕ ತಾರೆ ಪ್ರಶಸ್ತಿ
ವಿಜೇತ , ಪುರುಷ- ಭರವಸೆ ಮೂಡಿಸಬಲ್ಲ ಅತ್ಯುತ್ತಮ ಆರಂಭಿಕ ನಟನಿಗೆ ನೀಡುವ ಸ್ಟಾರ್ ಸ್ಕ್ರೀನ್ ಪ್ರಶಸ್ತಿ

2009

ಲಕ್‌ ಬೈ ಚಾನ್ಸ್‌

ವಿಕ್ರಂ ಜೈಸಿಂಗ್
2010 ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಕಾರ್ತಿಕ್ ನಾರಾಯಣ್
2011 ಜಿಂದಗಿ ನಾ ಮಿಲೇಗಿ ದೊಬಾರ TBA

ಹಿನ್ನೆಲೆ ಗಾಯಕ

ಬದಲಾಯಿಸಿ
ರಾಕ್ ಆನ್!!
ವರ್ಷ ಚಲನಚಿತ್ರ ಹಾಡು
1994 ರಾಕ್ ಆನ್!!
ಸೋಚಾ ಹೇ
ಪಿಚಲೆ ಸಾತ್ ದಿನೋ ಮೆ
ತುಮ್ ಹೊ ತೊ
ಸಿನ್ ಬಾದ್ ದಿ ಸ್ಯೇಲರ್

ಪ್ರಶಸ್ತಿಗಳು

ಬದಲಾಯಿಸಿ
  • ರಾಷ್ಟ್ರೀಯ ಪ್ರಶಸ್ತಿಗಳು
  • 2002: ಹಿಂದಿಯ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ದಿಲ್ ಚಾಹತಾ ಹೈ
  • 2009: ಹಿಂದಿಯ ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ರಾಕ್ ಆನ್!!
  • ಫಿಲ್ಮ್‌ಫೇರ್ ಪ್ರಶಸ್ತಿಗಳು
  • 2002: ಅತ್ಯುತ್ತಮ ಚಲನಚಿತ್ರಕ್ಕೆ ನೀಡುವ ಫಿಲ್ಮ್ ಫೇರ್ ವಿಮರ್ಶಕರ ಪ್ರಶಸ್ತಿ: ದಿಲ್ ಚಾಹತಾ ಹೈ
  • 2002: ಅತ್ಯುತ್ತಮ ಚಿತ್ರಕಥೆ : ದಿಲ್ ಚಾಹತಾ ಹೈ
  • 2002: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ : ದಿಲ್ ಚಾಹತಾ ಹೈ: ನಾಮನಿರ್ದೇಶಿತ
  • 2002: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ : ದಿಲ್ ಚಾಹತಾ ಹೈ : ನಾಮನಿರ್ದೇಶಿತ
  • 2005: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ : ಲಕ್ಷ್ಯ: ನಾಮನಿರ್ದೇಶಿತ
  • 2007: ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ: ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್: ನಾಮನಿರ್ದೇಶಿತ
  • 2007: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ:ಡಾನ್ - ದಿ ಚೇಸ್ ಬಿಗಿನ್ಸ್ ಅಗ್ಯೇನ್: ನಾಮನಿರ್ದೇಶಿತ
  • 2009: ಅತ್ಯುತ್ತಮ ಆರಂಭಿಕ ನಟನಿಗೆ ನೀಡುವ ಫಿಲ್ಮ್ ಫೇರ್ ಪ್ರಶಸ್ತಿ: ರಾಕ್ ಆನ್!!
  • 2009: ಫಿಲ್ಮ್ ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ : ರಾಕ್ ಆನ್!!: ನಾಮನಿರ್ದೇಶಿತ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2012-10-24. Retrieved 2011-01-14.
  2. [4] ^ ಸ್ಪಿರಿಚ್ಯುಯಾಲಿಟಿ ಹಾಲೊ ಆರ್ ಹೋಕ್ಸ್ Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ. - Javedakhtar.com, ಸ್ಪಿರಿಚ್ಯುಯಾಲಿಟಿ, ಹಾಲೊ ಅಥವಾ ಹೋಕ್ಸ್, 2005 ರ ಫೆಬ್ರವರಿ 26. "ಕೆಲವೊಂದು ವಿಷಯಗಳನ್ನು ನಾನು ಮುಕ್ತವಾಗಿ ಚರ್ಚಿಸಲು ಬಯಸುತ್ತೇನೆ" ನನ್ನ ಹೆಸರನ್ನು ಬಳಸಿ ಎಲ್ಲ ಪಡೆಯಲಿಕ್ಕಾಗದು– ಜಾವೇದ್ ಅಖ್ತರ್ ನಾನು ರಹಸ್ಯವನ್ನು ಬಯಲುಮಾಡುತ್ತಿಲ್ಲ, ಅನೇಕ ಬಾರಿ ನಾನು ಹೇಳಿದ್ದೇನೆ ಈಗಲೂ ಹೇಳುತ್ತಿದ್ದೇನೆ, ಬರಹದಲ್ಲಿ ಅಥವಾ TVಯಲ್ಲಿ, ಸರ್ವಜನಿಕರೆದುರು… ನಾನೊಬ್ಬ ನಾಸ್ತಿಕ, ನಾನು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಹೊಂದಿಲ್ಲ. ಆದ್ದರಿಂದ ಯಾವುದೇ ರೀತಿಯ ಆಧ್ಯಾತ್ಮಿಕತೆಯಲ್ಲಿ ನನಗೆ ನಂಬಿಕೆಯಿಲ್ಲ." ಯಾವುದೋ ರೀತಿಯ."
  3. ಆಪಲ್ ಆಫ್ ದಿ ಹಿಪ್ ಅರ್ಬನ್ ಟ್ರೀ- ನಟನಾಗಿ ಮೊದಲ ಬಾರಿಗೆ ಅಭಿನಯಿಸಿದರು. Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. ತೆಹೆಲ್ಕಾ , Vol 5, Issue 35, 2008 ರ ಸೆಪ್ಟೆಂಬರ್ 6.
  4. ಫರಾನ್ ಅಖ್ತರ್ ಜೀವನಚರಿತೆ Archived 2010-01-09 ವೇಬ್ಯಾಕ್ ಮೆಷಿನ್ ನಲ್ಲಿ..
  5. ಅಫಿಷಿಯಲ್ ಪ್ರೊಫೈಲ್, ಅಂಡ್ ಫಿಲ್ಮೋಗ್ರಫಿ, Archived 2009-09-04 ವೇಬ್ಯಾಕ್ ಮೆಷಿನ್ ನಲ್ಲಿ. ಎಕ್ಸೆಲ್ ಎಂಟರ್ಟೈನ್ಮೆಂಟ್ ಪ್ರೈವೆಟ್. ಲಿಮಿಟೆಡ್. .
  6. ಫರಾನ್ ಅಖ್ತರ್ ಲೈವ್ ಮಿಂಟ್ , ಆಗಸ್ಟ್ 30. 2008.
  7. "Lagaan sweeps national film awards". Times of India. 2002-07-28. Farhan Akhtar's Dil Chahta Hai won the award for best feature film in Hindi {{cite news}}: |access-date= requires |url= (help); Cite has empty unknown parameter: |coauthors= (help)
  8. "Box Office 2006". BoxOffice India. Archived from the original on 2012-05-25. Retrieved 2009-01-27.
  9. "Box Office 2007". BoxOffice India. Archived from the original on 2012-07-30. Retrieved 2009-01-27.
  10. ಮೀರಾ ನಾಯರ್, ಫರಾನ್ ಅಖ್ತರ್ ಟು ಮೇಕ್ ಫಿಲ್ಮ್ ಸ್ ಆನ್ ಏಡ್ಸ್ Rediff.com , ಮೂವೀಸ್ , 2007 ರ ಜನವರಿ 22
  11. ಫರಾನ್ ಅಖ್ತರ್ 'ಸ್ ಪಾಸಿಟಿವ್ ಔಟ್ ಲುಕ್ ಆನ್ HIV ಸೀಫಿ , ನ್ಯೂಸ್ , 2007 ರ ಅಕ್ಟೋಬರ್ 18
  12. "Box Office 2008". BoxOffice India. Archived from the original on 2012-07-22. Retrieved 2009-01-27.
  13. [೧]
  14. "Farhan Akhtar to dabble in television production now". The Hindu. 2008-11-26. Archived from the original on 2008-12-10. Retrieved 2009-01-27.


ಬಾಹ್ಯ ಕೊಂಡಿಗಳು

ಬದಲಾಯಿಸಿ