ಫತೇಘರ್ ಸಾಹಿಬ್
ಫತೇಘರ್ ಸಾಹಿಬ್ - ಇದು ಪಂಜಾಬ ರಾಜ್ಯದ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದೆ. ಈ ಸ್ಥಳಕ್ಕೆ ಪಂಜಾಬನ ಇತಿಹಾಸದಲ್ಲಿಯೇ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ಈ ಸ್ಥಳವು ಸಿಖ ಮತ್ತು ಮುಸ್ಲಿಮರ ನಡುವಿನ ರಣರಂಗ ಎಂದೇ ಪ್ರಸಿದ್ಧವಾಗಿದೆ. ಫತೇಗರ ಸಾಹಿಬನಲ್ಲಿ ಪ್ರಸಿದ್ಧ ಫತೇಘರ ಸಾಹಿಬ ಗುರುದ್ವಾರವಿದೆ. ಇದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯೂ ಹೌದು. ಗುರು ಗೋವಿಂದರ ಪುತ್ರರಾದ ಸಾಹಿಬಜಾದ ಫತೇ ಸಿಂಗ ಮತ್ತು ಸಾಹಿಬಜಾದ ಝೋರವಾರ ಸಿಂಗರು ಹುತಾತ್ಮರಾದ ಸ್ಥಳವಾಗಿದೆ. ಈ ಸಹೋದರರಿಬ್ಬರು ಮುಸ್ಲಿಮ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದರು. ಆಗ ಸಿರಹಿಂದನ ಫೌಜದಾರನಾಗಿದ್ದ ವಾಜಿದ ಖಾನನು ಇವರಿಬ್ಬರನ್ನು ಜೀವಂತವಾಗಿಯೇ ಇಟ್ಟಿಗೆಯ ಗೋಡಿನಲ್ಲಿ ಹೂಳಿದನು. ಈ ರೀತಿ ಸಹೋದರರಿಬ್ಬರು ತಮ್ಮ ಧರ್ಮ ರಕ್ಷಣೆಗಾಗಿ ಹುತಾತ್ಮರಾದರು.[೧][೨]
Fatehgarh Sahib
ਫ਼ਤਿਹਗੜ੍ਹ ਸਾਹਿਬ | |
---|---|
city | |
Country | ಭಾರತ |
State | Punjab |
District | Fatehgarh Sahib |
Elevation | ೨೪೬ m (೮೦೭ ft) |
Population | |
• Total | ೫೦,೭೮೮ |
Languages | |
• Official | Punjabi |
Time zone | UTC+5:30 (IST) |
PIN | 140406,140407 |
Telephone code | +91-1763 |
Vehicle registration | PB23 |
Website | www |
[೧] |
ಐತಿಹಾಸಿಕತೆ ಮತ್ತು ವೈವಿಧ್ಯತೆ
ಬದಲಾಯಿಸಿಫತೇಘರ್ ಸಾಹಿಬ ಎಂದರೆ “ವಿಜಯದ ನಗರ” ಎಂದರ್ಥ. ಇದು ಮುಸ್ಲಿಮ್ ರಾಜರ ನಿರಂಕುಶ ಮತ್ತು ಸರ್ವಾಧಿಕಾರದ ಆಡಳಿತದ ವಿರುದ್ದ ಸಿಖ್ಖರ ಗೆಲುವು ಮತ್ತು ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಕ್ರಿ.ಶ 1710 ರಲ್ಲಿ ಬಂದಾ ಬಹಾದೂರರ ನೇತ್ರತ್ವದಲ್ಲಿ ಸಿಖರು ಮುಸ್ಲಿಮರ ವಿರುದ್ಧ ಯದ್ಧಕ್ಕೆ ಸಿದ್ಧರಾದರು. ಆಗ ಮುಸ್ಲಿಮರ ದೊರೆ ಬಲ್ಬನನಾಗಿದ್ದನು. ಮುಂದೆ ಅಂತಿಮವಾಗಿ ಸಿಖ್ಖರು ಕೋಟೆಯನ್ನು ಸುತ್ತುವರೆದರು. ಈ ನಗರವು ನಾಲ್ಕು ದ್ವಾರಗಳಿಂದ ಸುತ್ತುವರೆದಿದೆ. ಇವು ಕ್ರಮವಾಗಿ ದಿವಾನ ತೋದರ ಮಲ್, ನವಾಬ ಶೇರ ಮೊಹಮ್ಮದ ಖಾನ, ಬಾಬಾ ಬಂದಾ ಸಿಂಗ ಬಹಾದುರ ಮತ್ತು ಬಾಬಾ ಮೋತಿ ರಾಮ ಮೆಹರಾ ಅವರುಗಳಿಗೆ ಸಮರ್ಪಿತವಾಗಿವೆ. ಈ ದ್ವಾರಗಳು ಉನ್ನತ ವಾಸ್ತುಶಿಲ್ಪ ಮೌಲ್ಯವನ್ನು ಹೊಂದಿವೆ. ಜೊತೆಗೆ ಇದು ಸಾಂಸ್ಕತಿಕ ವೈವಿಧ್ಯತೆ ಮತ್ತು ಜಾತ್ಯಾತೀತತೆಯನ್ನು ಸೂಚಿಸುತ್ತದೆ.
ಫತೇಘರ್ ಸಾಹಿಬ್ ನಗರದ ಮತ್ತು ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು
ಬದಲಾಯಿಸಿಫತೇಘರ್ ಸಾಹಿಬ್ ಪ್ರವಾಸೋದ್ಯಮವು ಕೆಲವು ಜನಪ್ರಿಯ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಫತೇಘರ್ ಸಾಹಿಬ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳು ಯಾವುವು ಎಂದರೆ ಸಂಘೂಲ, ಆಮ ಖಾಸ್ ಭಾಗ, ಮಾತಾ ಚಕ್ರೇಶ್ವರಿ ದೇವಿ ಜೈನ ದೇವಸ್ಥಾನ. ತೇಲುವ ಉಪಹಾರ ಮಂದಿರ ಮತ್ತು ಇತರೆ ಸ್ಥಳಗಳು. ಇಲ್ಲಿ ಹೋಲಿ, ದಸರಾ, ದೀಪಾವಳಿ, ಬೈಸಾಖಿ ಮುಂತಾದ ಪ್ರಮುಖ ಹಬ್ಬಗಳನ್ನು ಇತರ ಧಾರ್ಮಿಕ ಉತ್ಸವಗಳೊಂದಿಗೆ ಬಹು ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಶಾಹಿದಿ ಜೋರ ಮೇಳ ಎಂಬ ಪ್ರಮುಖ ಹಬ್ಬವು ಫತೇಘರ ಸಾಹಿಬ್ ಪ್ರವಾಸೋದ್ಯಮದ ಒಂದು ಅವಿಭಾಜ್ಯ ಭಾಗವಾಗಿದೆ. ಇದನ್ನು ಹುತಾತ್ಮರಾದ ವೀರರ ತ್ಯಾಗದ ಸ್ಮರಣೆಗಾಗಿ ಪ್ರತಿವರ್ಷ ಡಿಸಂಬರನಲ್ಲಿ ಆಚರಿಸಲಾಗುತ್ತದೆ. ಜೊತೆಗೆ ಸಿರಹಿಂದ ಮತ್ತು ಸಂಘೂಲ ಇವೆರಡು ಫತೆಘರ ಸಾಹಿಬ ನಗರಕ್ಕೆ ಹತ್ತಿರ ವಿರುವ ಸ್ಥಳಗಳಾಗಿವೆ. ಈ ಸ್ಥಳಗಳಿಗೆ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಿ ರಜೆಯ ಮಜವನ್ನು ಸವಿಯಬಹುದು.
ಫತೇಘರ್ ಸಾಹಿಬ್ ನಗರವನ್ನು ತಲುಪುವುದು ಹೇಗೆ?
ಬದಲಾಯಿಸಿಫತೇಘರ್ ಸಾಹಿಬ್ ನಗರವು ಚಂದೀಘರನಿಂದ 42.2 ಕೀಲೋ ಮೀಟರ ದೂರದಲ್ಲಿದೆ. ಚಂದಿಘರನಿಂದ ಬಸ್ಸಿನ ಮೂಲಕ ಪತೇಘರ್ ಸಾಹಿಬ್ ನಗರವನ್ನು ತಲುಪಲು 52 ನಿಮಿಷಗಳು ಬೇಕು. ಈ ನಗರವು ರೇಲ್ವೆ ನಿಲ್ದಾಣವನ್ನು ಹೊಂದಿದೆ. ಪ್ರವಾಸಿಗರು ಸಿರಹಿಂದ ರೇಲ್ವೆ ನಿಲ್ದಾಣದ ಮೂಲಕವು ಇಲ್ಲಿಗೆ ತಲುಪಬಹುದು. ಸಿರಹಿಂದ ನಗರವು ಫತೇಘರ್ ಸಾಹಿಬ್ ನಗರದಿಂದ ಸುಮಾರು 5 ಕೀಲೊ ಮೀಟರ ದೂರದಲ್ಲಿದೆ.
ಫತೇಘರ್ ಸಾಹಿಬ್ ನಗರಕ್ಕೆ ಹೋಗಲು ಯೋಗ್ಯವಾದ ಸಮಯ
ಬದಲಾಯಿಸಿಪತೇಘರ್ ಸಾಹಿಬ್ ನಗರದ ಹವಾಮಾನವು ಬಹುತೇಕ ಉತ್ತರ ಭಾರತದ ಇತರ ನಗರಗಳಂತೆ ಇದೆ. ಈ ನಗರದಲ್ಲಿ ತುಂಬಾ ಉಷ್ಣತೆಯಿಂದ ಕೂಡಿದ ಬೇಸಿಗೆ ಕಾಲ, ಆಹ್ಲಾದಕರ ಮಳೆಗಾಲ ಮತ್ತು ಶೀತಲ ಚಳಿಗಾಲಗಳು ಕಂಡು ಬರುತ್ತದೆ. ಈ ಬದಲಾವಣೆ ಮತ್ತು ವೈವಿಧ್ಯತೆಯ ಹೊರತಾಗಿಯೂ ಫತೇಘರ್ ಸಾಹಿಬ್ ನಗರಕ್ಕೆ ಭೇಟಿ ನಿಡಲು ಯೋಗ್ಯವಾದ ಸಮಯ ಎಂದರೆ ಅಕ್ಟೋಬರ ನಿಂದ ಮಾರ್ಚ ತಿಂಗಳುಗಳು. ಈ ತಿಂಗಳುಗಳು ಫತೇಘರ್ ಸಾಹಿಬ್ ನಗರಕ್ಕೆ ಭೇಟಿ ಕೊಡಲು ತುಂಬಾ ಉತ್ತಮವಾದ ಸಮಯವಾಗಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Sirhind Archived 2008-02-02 ವೇಬ್ಯಾಕ್ ಮೆಷಿನ್ ನಲ್ಲಿ. Tourist Circuits & Cities of Punjab at punjabgovt.nic.in.
- ↑ "ಆರ್ಕೈವ್ ನಕಲು". Archived from the original on 2008-09-05. Retrieved 2016-07-05.