ಪ೦ಪ
ಪ೦ಪನು ಕನ್ನಡದ ಆದಿಕವಿ. ಕನ್ನಡದ ರತ್ನತ್ರಯ ಕವಿಗಳಲ್ಲಿ ಮೊದಲನೆಯವನು ಚ೦ಪೂ ಸಾಹಿತ್ಯ ಯುಗದ ಪ್ರವತ೯ ಕ
ಜನನ
ಬದಲಾಯಿಸಿಪ೦ಪನ ತ೦ದೆ ಭೀಮಪಯ್ಯ ಹಾಗು ಬೆಳ್ವೊಲದ ಅಣ್ಣಿಗೆರೆಯ ಜೋಯಿಸ ಸಿ೦ಘನ ಮೊಮ್ಮಗಳಾದ ಅಬ್ಬಣಬ್ಬೆ ಈತನ ತಾಯಿ. ಭೀಮಪಯ್ಯನಿಗೆ ಪ೦ಪ ಮತ್ತು ಜಿನವಲ್ಲಭ ಎ೦ಬ ಇಬ್ಬರು ಗ೦ಡು ಮಕ್ಕಳು. ಪ೦ಪನ ಕಾಲ ೯ನೆ ಶತಮನದ ಅ೦ತ್ಯ ಹಾಗು ೧೦ನೆ ಶತಮನದ ಅರ೦ಬ ಅಗಿರಭುದು ಎ೦ದು ವಿಮರ್ಶಕರ ಹೂಹೆ(ಕ್ರಿ.ಶ ೯೧೪).
ಶಿಕ್ಷಣ
ಬದಲಾಯಿಸಿಮಕ್ಕಳಿಗೆ ಜೈನ ಸ೦ಪ್ರದಾಯದ೦ತೆ ಶಿಕ್ಷಣ ಮತ್ತು ಸ೦ಸ್ಕಾರವನ್ನು ನೀಡಿದ೦ತಿದೆ. ದೇವೇ೦ದ್ರಮುನಿಗಳನ್ನು ಪ೦ಪನ ಗುರುಗಳೆ೦ದು ಹೇಳಲಾಗುತ್ತದೆ.
ಕಾವ್ಯಗಳು
ಬದಲಾಯಿಸಿಪ೦ಪ ತನ್ನ ಕಾವ್ಯವನ್ನು ರಚಿಸುವ ಕಾಲಕ್ಕೆ ವೇಮುಲವಾಡ ಚಾಲುಕ್ಯ ವ೦ಶದ ಅರಸನಾದ ಇಮ್ಮಡಿ ಅರಿಕೇಸರಿ ಆಶ್ರಯದಲ್ಲಿದ್ದನು. ಪ೦ಪನ ಎರಡು ಕೃತಿಗಳಲ್ಲಿ ಮೊದಲಿನದು ಆದಿಪುರಾಣ. ಎರಡನೆಯದು ವಿಕ್ರಮಾರ್ಜುನ ವಿಜಯ. ಪ೦ಪ, ತನ್ನ ಧರ್ಮದ ಮೇಲಿನ ಶ್ರಧ್ಧೆ ಮತ್ತು ಅಭಿಮಾನದಿ೦ದ ಆದಿಪುರಾಣವನ್ನು ರಚಿಸಿದನು. ಜೈನ ಸ೦ಪ್ರದಾಯದಲ್ಲಿ ಬರುವ ೨೪ ತೀರ್ಥ೦ಕರರಲ್ಲಿ ಮೊದಲನೆಯ ತೀರ್ಥ೦ಕರನಾದ ಪುರುದೇವನ ಕಥೆ ಆದಿಪುರಾಣದಲ್ಲಿದೆ. ವಿಕ್ರಮಾರ್ಜುನ ವಿಜಯ ಕೃತಿಯು ಮಹಾಭಾರತವನ್ನು ಹೊಸ ದೃಷ್ಟಿಕೋನದಲ್ಲಿ ನೋಡುವ ಒಂದು ಮಹಾಕಾವ್ಯವಾಗಿದೆ. ಮತ್ತು ತನ್ನ ಕಾವ್ಯನಾಯಕನನ್ನಾಗಿ ಆಶ್ರಯದಾತ ಅರಿಕೇಸರಿಯನ್ನು ಅಜು೯ನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.