ಪ್ಲೇಗ್

ಸಾಂಕ್ರಾಮಿಕ ರೋಗ

ಪ್ಲೇಗ್ ಒಂದು ಸಾಂಕ್ರಾಮಿಕ ರೋಗ. ಈ ರೋಗವು ಯೆರ್ಸಿನಿಯ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ೨೦೦೭ರ ವರೆಗೂ ಪ್ಲೇಗ್ ರೋಗವು ವಿಶ್ವದ ಮೂರು ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ನೀಡಿತ್ತು. ಹಿಂದಿನ ದಿನಗಳಲ್ಲಿ ಪ್ಲೇಗ್,ಕಾಲಾರ ಮತ್ತು ಹಳದಿ ಜ್ವರ ಈ ಮೂರು ರೋಗಗಳು ವಿಶ್ವದಾದ್ಯಂತ ಹರಡುತ್ತಿದ್ದ ಸಾಂಕ್ರಾಮಿಕ ರೋಗಗಳು. ಹಿಂದಿನ ದಿನಗಳಲ್ಲಿ ಪ್ಲೇಗ್ ರೋಗವು ಬಹಳ ಸಾವುಗಳಿಗೆ ಕಾರಣವಾಗಿತ್ತು ಮತ್ತು ಇದರಿಂದ ಪ್ರಮುಖ ಸಾಂಸ್ಕೃತಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಪ್ಲೇಗ್‌ನಿಂದ ಆದ ಪರಿಣಾಮಗಳಲ್ಲಿ ಜಸ್ಟಿನಿಯನ್ನ ಪ್ಲೇಗ್ (೫೪೧-೫೪೨) ದೊಡ್ಡದು. ಅನಂತರ ೧೩೪೦ರಲ್ಲಿ ಬ್ಲ್ಯಾಕ್ ಡೆತ್ ಮುಖಾಂತರ ಎರಡನೇ ಸಾಂಕ್ರಾಮಿಕ ಪ್ಲೇಗ್ ಮುಂದುವರೆಯಿತ್ತು. ೧೮೫೫ರಲ್ಲಿ ಮುರನೇ ಸಾಂಕ್ರಾಮಿಕ ಪ್ಲೇಗ್ ಶುರುವಾಯಿತ್ತು ಆನಂತರ ೧೯೫೯ರಲ್ಲಿ ಪ್ಲೇಗ್ ರೋಗ ಕೊನೆಗಾಣ ತೊಡಗಿತ್ತು. ಸಾಮಾನ್ಯವಾಗಿ ಪ್ಲೇಗ್ ರೋಗವು ಗಾಳಿಯ ಮೂಲಕ ಮತ್ತು ನೇರ ಸಂಪರ್ಕದಿಂದ ಹರಡುತ್ತದೆ. ವಿರಳವಾಗಿ ಕಲುಷಿತಗೊಂಡ ಮತ್ತು ಸರಿಯಾಗಿ ತಯಾರಿಸದ ಆಹಾರದಿಂದ ಹರಡುವ ಸಾಧ್ಯತೆಗಳು ಇದೆ.ಪ್ಲೇಗ್ ರೋಗದ ಲಕ್ಷಣಗಳು ವ್ಯಕ್ತಿಯ ಸೋಂಕಿನ ಕೇಂದ್ರೀಕೃತ ಪ್ರದೇಶಗಳನ್ನು ಅವಲಂಬಿಸಿರುತ್ತದೆ. ಈ ರೋಗವು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ದುಗ್ಧರಸ ಗ್ರಂಥಿಗಳಲ್ಲಿ, ರಕ್ತ ಕಣಗಳಲ್ಲಿ ಮತ್ತು ಶ್ವಾಸಕೋಶಗಳಲ್ಲಿ ಕಾಣಿಸಿಕೊಳ್ಳುತ್ತದೆ.[][]

ಪ್ಲೇಗ್ ರೋಗದಿಂದ ನರಳುತ್ತಿರುವುದು
ಪ್ಲೇಗ್ ರೋಗದ ಒಂದು ಲಕ್ಷಣ

ರೋಗ ಹರಡುವಿಕೆ

ಬದಲಾಯಿಸಿ

ವೈ.ಪೆಸ್ಟಿಸ್ ಬ್ಯಾಕ್ಟೀರಿಯಾವು ರೋಗಿಯ ದೇಹದಿಂದ ಆರೋಗ್ಯ ವ್ಯಕ್ತಿಯನ್ನು ಸಾಮಾನ್ಯವಾಗಿ ಕೆಳಗಿನ ಮುಖಾಂತರವಾಗಿ ಸೇರುತ್ತದೆ. ಅವು,

  • ದೇಹದ ಹೊರ ಬರುವ ದ್ರವ್ಯಗಳಾದ ರಕ್ತ, ಗೋಣೆ ಮತ್ತು ಎಂಜಲು ಆರೋಗ್ಯ ವ್ಯಕ್ತಿಯ ಚರ್ಮವನ್ನು ಸಂಪರ್ಕಿಸಿದ್ದಾಗ ರೋಗ ಹರಡುವ ಸಾಧ್ಯತೆಗಳಿವೆ.
  • ನೇರ ಶಾರೀರಕ ಸಂಬಂಧದಿಂದ ಸೋಂಕಿತ ವ್ಯಕ್ತಿಯು ಸ್ಪರ್ಶಿಸುವುದರಿಂದ ಮತ್ತು ಲೈಂಗಿಕ ಸಂಪರ್ಕದಿಂದ ರೋಗ ಹರಡುತ್ತದೆ.
  • ಪರೋಕ್ಷವಾದ ಸಂಪರ್ಕದಿಂದ ಅಂದರೆ ಸಾಮಾನ್ಯವಾಗಿ ಕಲುಷಿತಗೊಂಡ ಮಣ್ಣು ಅಥವಾ ಕಲುಷಿತಗೊಂಡ ಪ್ರದೇಶದಿಂದ ರೋಗ ಹರಡುತ್ತದೆ.
  • ಗಾಳಿಯಿಂದ ಹರಡುತ್ತದೆ. ರೋಗ ಉಂಟು ಮಾಡುವ ಸೂಕ್ಷ್ಮಜೀವಿಗಳು ರೋಗಿಯ ದೇಹದಿಂದ ಹೊರ ಬಂದು ಗಾಳಿಯಲ್ಲಿ ಸೇರಿಕೊಂಡು ಗಾಳಿಯನ್ನು ಕಲುಷಿತಗೊಳಿಸುತ್ತದೆ. ಆನಂತರ ಅವು ಉಸಿರಾಟದ ಮೂಲಕ ಆರೋಗ್ಯ ವ್ಯಕ್ತಿಯ ದೇಹವನ್ನು ಹೊಕ್ಕಿ ರೋಗವನ್ನು ಉಂಟು ಮಾಡುತ್ತದೆ.
  • ಫೀಕಲ್-ಓರಲ್ ಸಂವಹನ ಸಮಯದಲ್ಲಿ ಕಲುಷಿತ ಆಹರ ಮತ್ತು ನೀರಿನಿಂದ ರೋಗ ಹರಡುವ ಸಾಧ್ಯತೆಗಳು ಇವೆ.
  • ರೋಗ ಬರಿತ ಕ್ರಿಮಿ-ಕೀಟಗಳು ಕಚ್ಚುವುದರಿಂದ ರೋಗ ಹರಡುತ್ತದೆ.[]

ಈ ರೋಗವು ಮೊದಲಿಗೆ ಕೀಟಗಳಲ್ಲಿ ಕಾಣಿಸಿಕೊಂಡಿತು. ಆನಂತರ ಆ ಕೀಟಗಳನ್ನು ತಿನ್ನುವ ಪ್ರಾಣಿಗಳಲ್ಲಿ ಕಂಡು ಬಂತು. ಕ್ರಿಮಿ-ಕೀಟಗಳು ಆರೋಗ್ಯ ವ್ಯಕ್ತಿಯನ್ನು ಕಚ್ಚುವುದರಿಂದ ಮನುಷ್ಯ ಕುಲದಲ್ಲಿ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಕ್ರೀಮಿ-ಕೀಟಗಳು ರೋಗ ಹರಡುವ ವಾಹಕಗಳಾಗಿವೆ. ವೈ.ಪೆಸ್ಟಿಸ್ ಬ್ಯಾಕ್ಟೀರಿಯವು ಮೊದಲಿಗೆ ಕೀಟಗಳ ದೇಹವನ್ನು ಹೊಕ್ಕಿ ಅದರ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಅದರ ಉದರದಲ್ಲಿ ಪ್ಲೇಗ್ ಅನ್ನು ಉಂಟು ಮಾಡುತ್ತದೆ. ಇದರ ಪರಿಣಾಮವಾಗಿ ಅದರ ಹಸಿವಿಗೆ ಕಾರಣವಾಗುತ್ತದೆ. ಆ ಕೀಟವು ಬೇರೆ ಕೀಟವನ್ನು ಅಥವಾ ಮನುಷ್ಯನನ್ನು ಕಚ್ಚುತ್ತದೆ. ಆದರು ಹಸಿವು ಅಡಗಿಸಿಕೊಳ್ಳಲು ಆಗದೆ ಅದರ ರಕ್ತವನ್ನು ಕಚ್ಚಿದ ಕೀಟದ ಅಥವಾ ಮನುಷ್ಯನ ಗಾಯದ ಮೇಲೆ ವಾಂತಿ ಮಾಡುತ್ತದೆ. ಇದರಿಂದ ಕಚ್ಚಿಸಿಕೊಂಡ ಕೀಟದ ಅಥವಾ ಮನುಷ್ಯನ ದೇಹಕ್ಕೆ ಬ್ಯಾಕ್ಟೀರಿಯಾ ಹೊಕ್ಕಿ ರೋಗವನ್ನು ಉಂಟು ಮಾಡುತ್ತದೆ. ಆನಂತರ ಕಚ್ಚಿದ ಕೀಟವು ಹಸಿವು ಬಾದೆ ತಾಳಲಾರದೆ ಸಾವನಪ್ಪುತ್ತದೆ. ಈ ರೀತಿಯಲ್ಲಿ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.[]

ವಿವಿಧ ರೀತಿಯ ಪ್ಲೇಗ್ ರೋಗ

ಬದಲಾಯಿಸಿ
  • ಗೆಡ್ಡೆ ಪ್ಲೇಗ್
  • ಸೆಪ್ಟಿಸಿಮಿಕ್ ಪ್ಲೇಗ್
  • ನೀಮೊನಿಯಾ ಪ್ಲೇಗ್
  • ದನಿ ಪ್ಲೇಗ್
  • ಮಿದುಳ ಪ್ಲೇಗ್

ಮುಂದಾದ ವಿರಳಾವದ ಪ್ಲೇಗ್‌ಗಳನ್ನು ನೋಡಬಹುದು.[]

ಗೆಡ್ದೆ ಪ್ಲೇಗ್

ಬದಲಾಯಿಸಿ

ಮೊದಲಿಗೆ ಕ್ರಿಮಿ-ಕೀಟವು ಮಾನವನ್ನು ಕಚ್ಚಿ ಗಾಯ ಮಾಡುತ್ತದೆ. ಆನಂತರ ಆ ಗಾಯದ ಮೇಲೆ ಕೀಟವು ತನ್ನ ರಕ್ತವನ್ನು ವಾಂತಿ ಮಾಡಿ ಮಾನವನ ರಕ್ತವನ್ನು ಕಲುಷಿತಗೊಳಿಸುತ್ತದೆ. ಇದರ ಮೂಲಕ ವೈ.ಪೆಸ್ಟಿಸ್ ಬ್ಯಾಕ್ಟೀರಿಯವು ಮಾನವನ ರಕ್ತ ಕಣಗಳಲ್ಲಿ ಸೇರಿಕೊಂಡು ತನ್ನ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೊಗುತ್ತದೆ. ಒಂದು ಬಾರಿ ಬ್ಯಾಕ್ಟೀರಿಯ ದುಗ್ಧನಾಳಗಳಿಗೆ ಸೇರಲು ಶುರುಮಾಡಿದ್ದಾಗ ದೇಹದ ತೆರಪಿನ ದ್ರವಗಳನ್ನು ಹರಿಸುತ್ತವೆ. ಆನಂತರ ಈ ಬ್ಯಾಕ್ಟೀರಿಯ ಅಪಾಯಕಾರಿ ವಿಷಕಾರಕಗಳನ್ನು ಹೊರ ಬಿಡುತ್ತದೆ. ಅದರಲ್ಲಿ ಒಂದು ಬೀಟ ಅಡ್ರೆನರ್ಜಿಕ್ ದಿಗ್ಬಂಧನ ರೋಗವನ್ನು ಉಂಟುಮಾಡುತ್ತದೆ.[]

ರೋಗಕಾರಕ

ಬದಲಾಯಿಸಿ

ಯೆರ್ಸಿನಿಯ ಪೆಸ್ಟಿಸ್ ಬ್ಯಾಕ್ಟೀರಿಯವು ಒಂದು ಗ್ರಾಮ್ ನೆಗೆಟಿವ್ ದಂಡಾಕಾರದ ಬ್ಯಾಕ್ಟೀರಿಯ. ಈ ಬ್ಯಾಕ್ಟೀರಿಯ ಯುಬ್ಯಾಕ್ಟೀರಿಯ ಗುಂಪಿಗೆ ಸೇರುತ್ತದೆ. ಇದರ ಕುಟುಂಬ ಎನ್ಟಿರೊಬ್ಯಾಕ್ಟೀರಿಯೇಸಿಯೆ. ಇದ್ನ್ನು ಸಾಮಾನ್ಯವಾಗಿ ವೈ.ಪೆಸ್ಟಿಸ್ ಎಂದು ಕರೆಯಲಾಗುತ್ತದೆ. ವೈ.ಪೆಸ್ಟಿಸ್ ಬ್ಯಾಕ್ಟೀರಿಯ ಚಲನೆರಹಿತ, ಕಡ್ಡಿ ಆಕಾರದ, ಅನುಮೋದಕ ಆಮ್ಲಜನಕರಹಿತ ಬೈಪೋಲಾರ್ ಬ್ಯಾಕ್ಟೀರಿಯ.[]

ರೋಗದ ಚಿಕಿತ್ಸೆ

ಬದಲಾಯಿಸಿ

೧೮೯೭ರಲ್ಲಿ ಮೊಟ್ಟ ಮೊದಲಿಗೆ ಬೊಂಬೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ ವಾಲ್ಡೆಮರ್ ಹಫ್‌ಕಿನ್ಸ್‌ರವರು ಪ್ಲೇಗ್ ರೋಗದ ವಿರುದ್ಧ ಲಸಿಕೆಯನ್ನೂ ಕಂಡು ಹಿಡಿದು ಅದನ್ನು ಗೆಡ್ಡೆ ಪ್ಲೇಗ್ ರೋಗ ವಿನಾಶದ ಮೇಲೆ ಪರೀಕ್ಷಿಸಿದ್ದರು.ಆನಂತರ ಆ ಲಸಿಕೆಯನ್ನು ರೋಗದ ಚಿಕಿತ್ಸೆಯನಾಗಿ ಬಳಸ ತೊಡಗಿದರು. ಈ ಪ್ಲೇಗ್ ರೋಗವು ಆರಂಭಿಕ ಹಂತಗಳಲ್ಲಿ ಕಂಡು ಬಂದಲ್ಲಿ ಅದನ್ನು ಪ್ರತಿಜೀವಕ ಚಿಕಿತ್ಸೆ‌ಯ ಮುಖಾಂತರ ರೋಗವನ್ನು ಹೋಗಲಾಡಿಸ ಬಹುದು. ಇತ್ತೀಚಿನ ದಿನಗಳಲ್ಲಿ ಬಳಕೆಯಲ್ಲಿ ಇರುವ ಪ್ರತಿಜೀವಕ ಚಿಕಿತ್ಸೆ‌ಗಳೆಂದರೆ ಸ್ಟ್ರೆಪ್ಟೊಮೈಸಿನ್, ಕ್ಲೋರಾಮ್ಫೆನಿಕೋಲ್ ಮತ್ತು ಟೆಟ್ರಾಸೈಕ್ಲಿನ್. ಹೊಸ ಪೀಳಿಗೆಯ ಪೈಕಿಯಲ್ಲಿ ಇರುವ ಪ್ರತಿಜೀವಕಗಳಲ್ಲಿ ಜೆನ್ಟಮಿಸಿನ್(gentamicin) ಮತ್ತು ಡಾಕ್ಸಿಸೈಕ್ಲಿನ್ ಪ್ರತಿಜೀವಕ ಚಿಕಿತ್ಸೆ ತುಂಬ ಪರಿಣಾಮಕಾರಿಯಾಗಿದೆ. ಈ ಎರಡು ಪ್ರತಿಜೀವಕಗಳು ಪ್ಲೇಗ್ ಮೊನೊತೆರಪಟಿಕ್( monotherapeutic) ಚಿಕಿತ್ಸೆಯಲ್ಲಿ ತುಂಬ ಪರಿಣಾಮಕಾರಿಯಾಗಿದೆ. ಈ ರೋಗದ ಬ್ಯಾಕ್ಟೀರಿಯವು ಔಷಧ ಪ್ರತಿರೋಧವನ್ನು ಅಭಿವೃದ್ಧಿಸಿ ಕೊಂಡು ಮತ್ತಷ್ಟು ರೋಗಗಳಿಗೆ ಕಾರಣವಾಗಿತ್ತದೆ.ಈ ರೀತಿಯ ಒಂದು ಸಂದರ್ಭದಲ್ಲಿ 1995 ರಲ್ಲಿ ಮಡಗಾಸ್ಕರ್ ಕಂಡುಬಂದಿದೆ. ಮುಂದಿನ ಏಕಾಏಕಿ ಮಡಗಾಸ್ಕರ್ ನವೆಂಬರ್ 2014 ರಲ್ಲಿ ವರದಿಯಾಗಿದೆ.

ಪ್ಲೇಗ್ ರೋಗದ ಪ್ರತಿರಕ್ಷಣೆ

ಬದಲಾಯಿಸಿ

ಸಾಮಾನ್ಯವಾಗಿ ಈ ಪ್ಲೇಗೆ ರೋಗ ಮಾನವರಲ್ಲಿ ವಿಶ್ವದ ಬಹುತೇಕ ಭಾಗಗಳಲ್ಲಿ ಅಪರೂಪವಾಗಿ ಕಂಡು ಬಂದಿದೆ. ರೋಗದಿಂದ ತೀವ್ರವಾಗಿ ಬಳಲುತ್ತಿರುವವರು ಅಥವಾ ಎನ್‍ಜ಼ೊಟಿಕ್(enzootic) ಪ್ಲೇಗ್ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಾಡಿಕೆಯ ಲಸಿಕೆ ತೆಗೆದುಕೊಳ್ಳುವುದು ಅಗತ್ಯ. ಈ ರೋಗವು ಸಾಮಾನ್ಯವಾಗಿ ಪಶ್ಚಿಮ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಈ ರೋಗವು ಸಾಕ್ರಾಂಮಿಕ ರೋಗವಾಗಿರುವುದರಿಂದ ಪ್ಲೇಗ್ ಎಂದು ವರದಿಯಾದ ಸ್ಥಳದಿಂದ ಬರುವ ಪ್ರಯಾಣಿಕರನ್ನು ಬೇರೆ ಸ್ಥಳಕ್ಕೆ ಸೇರಿಸುವುದಿಲ್ಲ. ಹೀಗಾಗಿ ಸಿಡಿಸಿ ರೋಗದ ಲಸಿಕೆ ಇವರಿಗೆ ಮಾತ್ರ ಶಿಫಾರಸು ಮಾಡುತ್ತಾರೆ. ಅವರು, * ವೈ.ಪೆಸ್ಟಿಸ್ ಜೊತೆ ಕೆಲಸ ಮಾಡುವ ಎಲ್ಲಾ ಪ್ರಯೋಗಾಲಯ ಮತ್ತು ಕ್ಷೇತ್ರ ಸಿಬ್ಬಂದಿಗಳಿಗೆ,

  • ವೈ.ಪೆಸ್ಟಿಸ್ ಜೊತೆ ವಾಯುದ್ರವ ಪ್ರಯೋಗಗಳಲ್ಲಿ ತೊಡಗಿರುವ ಎಲ್ಲ ಜನರಿಗೆ,
  • ಎನ್‍ಜ಼ೊಟಿಕ್(enzootic) ಪ್ಲೇಗ್ ಪ್ರದೇಶಗಳಲ್ಲಿ ಪ್ಲೇಗ್ ರೋಗದ ಬಗ್ಗೆ ಸಂಶೋಧನೆಯ ಕ್ಷೇತ್ರದ ವ್ಯವಹಾರಗಳಲ್ಲಿ ತೊಡಗಿರುವ ಜನರಿಗೆ ಮಾತ್ರ ಶಿಫಾರಸು ಮಾಡುತ್ತಾರೆ.

ಕೊಕ್ರೇನ್ ಸಂಯೋಜನೆಯ ಮೂಲಕ ವ್ಯವಸ್ಥಿತ ಪರಿಶೀಲನೆಯು ಲಸಿಕೆಯ ಪರಿಣಾಮಕತ್ವದ ಯಾವುದೇ ಹೇಳಿಕೆಯನ್ನು ಮಾಡಲು ಸಾಕಷ್ಟು ಗುಣಮಟ್ಟದ ಅಧ್ಯಯನಗಳೂ ಇಲ್ಲ.[]

ಉಲ್ಲೇಖನಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2017-04-20. Retrieved 2017-03-25.
  2. https://www.cdc.gov/MMWR/preview/mmwrhtml/mm5534a4.htm
  3. http://abcnews.go.com/Health/story?id=1128953
  4. https://www.cdc.gov/MMWR/preview/mmwrhtml/mm5534a4.htm
  5. "ಆರ್ಕೈವ್ ನಕಲು". Archived from the original on 2017-04-20. Retrieved 2017-03-25.
  6. http://www.reuters.com/article/us-libya-plague-idUSTRE55F42820090616
  7. https://books.google.co.in/books?id=IcljzNyv4EgC&pg=PA21&redir_esc=y&hl=en#v=onepage&q&f=false
  8. "ಆರ್ಕೈವ್ ನಕಲು". Archived from the original on 2017-04-20. Retrieved 2017-03-25.
"https://kn.wikipedia.org/w/index.php?title=ಪ್ಲೇಗ್&oldid=1251413" ಇಂದ ಪಡೆಯಲ್ಪಟ್ಟಿದೆ