ಪ್ರೀತಿ ಶಂಕರ್

ಭಾರತೀಯ ಪ್ರಾಧ್ಯಾಪಕಿ ಮತ್ತು ಸಂಶೋಧಕಿ

ಪ್ರೀತಿ ಶಂಕರ್ (ಪ್ರೀತಿ ಮೊಂತೀರೊ; ಸೆಪ್ಟೆಂಬರ್ ೧೯೪೭ - ಅಕ್ಟೋಬರ್ ೨೦೧೧) ಅವರು ಒಬ್ಬ ಭಾರತೀಯ ಅಧ್ಯಾಪಕಿ, ಸಂಶೋಧಕಿ, ಶಿಕ್ಷಣತಜ್ಞೆಯಾಗಿದ್ದರು. ಅವರ ಸಂಶೋಧನೆಗಳು ಕಂಪೈಲರ್ ಡಿಸೈನ್, ಫಾರ್ಮಲ್ ಲ್ಯಾಂಗ್ವೇಜ್ ಥಿಯರಿ, ಮತ್ತು ಅಲ್ಗೊರಿಥ್ಮಿಕ್ ಕೋಡಿಂಗ್ ಥಿಯರಿ ಕ್ಷೇತ್ರಗಳ ಮೇಲೆ ಕೇಂದ್ರಿತವಾಗಿದ್ದವು.[]

ಪ್ರೀತಿ ಶಂಕರ್
ಜನನ೧೯೪೭
ಮರಣ೨೦೧೧
ಕಾರ್ಯಕ್ಷೇತ್ರಗಳುಇಲೆಕ್ಟ್ರಿಕಲ್ ಇಂಜಿನಿಯರಿಂಗ್‍
ಅಭ್ಯಸಿಸಿದ ಸಂಸ್ಥೆಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ
ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ (ಪಿಎಚ್‍ಡಿ)

ಬಾಲ್ಯ ಮತ್ತು ವೃತ್ತಿಜೀವನ

ಬದಲಾಯಿಸಿ

ಪ್ರೀತಿ ಅವರು ಗೋವಾದ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಇನ್ನೊಸೆನ್ಸಿಯೊ ಮೊಂತೀರೊ ಭಾರತೀಯ ಸೇನೆಯಲ್ಲಿ https://www.britannica.com/topic/brigadier ಬ್ರಿಗೇಡಿಯರ್] ಆಗಿದ್ದರು ಮತ್ತು ತಾಯಿ ಸೋಫಿಯಾ ಗಣಿತ ಮತ್ತು ಫ್ರೆಂಚ್ ಶಿಕ್ಷಕಿಯಾಗಿದ್ದರು[]. ಭಾರತ-ಪಾಕ್ ಗಡಿಯ ಸುರನ್‍ಕೋಟ್‍ನಲ್ಲಿ ಸೇವೆ ಸಲ್ಲಿಸಲೋಸುಗ ಪ್ರೀತಿ ಅವರ ತಂದೆತಾಯಿಗಳು ೧೯೫೮ರಲ್ಲಿ ಪುಣೆಯ ಖಡಕ್‍ವಾಸ್ಲಾದಿಂದ ಜಮ್ಮುವಿಗೆ ಹೋಗಬೇಕಾಯಿತು. ಇದರಿಂದಾಗಿ ಪ್ರೀತಿ ಅವರು ಆರು ತಿಂಗಳುಗಳ ಕಾಲ ಶಾಲಾ ಶಿಕ್ಷಣವನ್ನು ತಪ್ಪಿಸಿಕೊಳ್ಳಬೇಕಾಯಿತು ಮತ್ತು ಆ ಅವಧಿಯಲ್ಲಿ ಅವರ ತಾಯಿಯಿಂದ ಮನೆಯಲ್ಲಿಯೇ ಶಿಕ್ಷಣ ಪಡೆದರು. ಕೆಲವು ವರ್ಷಗಳ ನಂತರ ಅವರು ಪುಣೆಗೆ ಹಿಂದಿರುಗಿ ಫರ್ಗುಸನ್ ಕಾಲೇಜಿಗೆ ಸೇರಿಕೊಂಡರು. ಮುಂದೆ ೧೯೬೮ರಲ್ಲಿ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‍ನಲ್ಲಿ ಬಿ.ಟೆಕ್. ಪದವಿ ಪಡೆದ ಪ್ರಥಮ ಮಹಿಳೆ ಎನಿಸಿದರು. ಪದವಿ ಪಡೆದ ನಂತರ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ, ಕಾಲೇಜು ಪಾರ್ಕ್‍ನಿಂದ ಪಿಹೆಚ್.ಡಿ. ಪಡೆದರು.[] ಒಂದು ವರ್ಷದ ನಂತರ ಅವರು ಭಾರತಕ್ಕೆ ಮರಳಿದರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ನೇಮಕಗೊಂಡರು.[]

೧೯೭೯ರಲ್ಲಿ ಪ್ರೀತಿಯವರು ಸೀಮಿತ ಕ್ಷೇತ್ರ (Finite Field) ಗಳ ಮೇಲೆ ವ್ಯಾಖ್ಯಾನಿಸಲಾದ ಮತ್ತು ಆ ಕಾರಣಕ್ಕಾಗಿ ಸೀಮಿತ ಉಂಗುರ (Finite Ring) ಗಳ ಮೇಲೆ ಕಾರ್ಯಾಚರಿಸುವ ಬಿಸಿಎಚ್ ಕೋಡ್‍ಅನ್ನು ಅಭಿವೃದ್ಧಿಪಡಿಸಿ, ಕ್ಷೇತ್ರ ವಿಜ್ಞಾನ (Field Science) ದ ಆದ್ಯ ಪ್ರವರ್ತಕಿಯಾದರು. ೨೦೦೨ರಲ್ಲಿ ಅವರು ವೈ.ಎನ್. ಶ್ರೀಕಾಂತ್‍ರೊಂದಿಗೆ ಸಿಆರ್‌ಸಿ ಪ್ರೆಸ್‍ನ ಸಹ ಸಂಪಾದಕಿಯಾಗಿ ಮತ್ತು ರೆಸೊನೆನ್ಸ್ ಎಂಬ ಭಾರತದ ಪರಿಣಿತರಿಂದ ಪರಾಮರ್ಶಿಸಲ್ಪಟ್ಟ ಜರ್ನಲ್ (Peer reviewed Journal of India) ನ ನಾಯಕತ್ವ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು.

ವೈಯಕ್ತಿಕ ಜೀವನ

ಬದಲಾಯಿಸಿ

ವಿವೇಕ್ ಮೊಂತೀರೊ (ಸೈದ್ಧಾಂತಿಕ ಭೌತವಿಜ್ಞಾನಿ), ಅಂಜಲಿ ಮೊಂತೀರೊ (ಚಿತ್ರ ನಿರ್ಮಾಪಕರು ಮತ್ತು ಮಾಧ್ಯಮ ಅಧ್ಯಯನದ ಪ್ರಾಧ್ಯಾಪಕರು), ಮತ್ತು ನಂದಿತಾ ಡಿ'ಸೋಜ (ಅಭಿವೃದ್ಧಿ ಮತ್ತು ವರ್ತನಾ ಶಿಶುವೈದ್ಯೆ)ರನ್ನು ಒಳಗೊಂಡಂತೆ ಪ್ರೀತಿಯವರಿಗೆ ಅನೇಕ ಒಡಹುಟ್ಟಿದವರಿದ್ದರು. ಪ್ರೀತಿಯವರು ೧೯೭೪ರಲ್ಲಿ ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್‍ನಲ್ಲಿ ಥಿಯರಿಟಿಕಲ್ ಫ್ಲುಯಿಡ್ ಡೈನಮಿಸಿಸ್ಟ್ ಆಗಿದ್ದ ಪಿ.ಎನ್. ಶಂಕರ್‌ರನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು - ೧೯೭೬ರಲ್ಲಿ ಜನಿಸಿದ ನಚಿಕೇತ್ (ಮಗ) ಮತ್ತು ೧೯೮೩ರಲ್ಲಿ ಜನಿಸಿದ ಮೃದುಲಾ (ಮಗಳು).

ಗೌರವಗಳು

ಬದಲಾಯಿಸಿ
  • ಜಯಾ ಜಯಂತ್ ಪ್ರಶಸ್ತಿಯನ್ನು ೨೦೦೬ ರಿಂದ ೨೦೦೯ ರ ವರೆಗೆ ಪಡೆದಿದ್ದಾರೆ.
  • ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರುಗಳ ಸಂಸ್ಥೆ] (IEEE) ಯಿಂದ ವಿಶಿಷ್ಠ ಉಪನ್ಯಾಸಕಿ (Distinguished Lecturer) ಯಾಗಿ ಹೆಸರಿಸಲ್ಪಟ್ಟರು.

ಪರಂಪರೆ

ಬದಲಾಯಿಸಿ

ನವನಿರ್ಮಿತಿ ಕಲಿಕಾ ಪ್ರತಿಷ್ಠಾನದ UMED ಭವನದಲ್ಲಿ ಪ್ರೀತಿ ಶಂಕರ್ ಜನಪ್ರಿಯ ಗಣಿತ ಮತ್ತು ವಿಜ್ಞಾನ ಗ್ರಂಥಾಲಯ Archived 2018-12-11 ವೇಬ್ಯಾಕ್ ಮೆಷಿನ್ ನಲ್ಲಿ.ವಿದೆ.[]

ಉಲ್ಲೇಖಗಳು

ಬದಲಾಯಿಸಿ
  1. https://www.ias.ac.in/womeninscience/priti_shankar.pdf
  2. https://pritishankarhomage.files.wordpress.com/2011/10/pritishankar-currentscience.pdf
  3. http://genealogy.math.ndsu.nodak.edu/id.php?id=134778
  4. "ಆರ್ಕೈವ್ ನಕಲು" (PDF). Archived from the original (PDF) on 2019-10-13. Retrieved 2019-10-13.
  5. "ಆರ್ಕೈವ್ ನಕಲು". Archived from the original on 2018-12-11. Retrieved 2019-10-13.