ಪ್ರಾಣಿ ಅಹಾರ (ಮೇವು) ಎಂದರೆ ಪಶುಪಾಲನೆಯ ಚಟುವಟಿಕೆಯಲ್ಲಿ ಸಾಕುಪ್ರಾಣಿಗಳಿಗೆ ನೀಡಲಾದ ಆಹಾರ. ಇವುಗಳು ಸಾಮಾನ್ಯವಾಗಿ ಎರಡು ಮೂಲಭೂತ ಪ್ರಕಾರದ್ದಾಗಿವೆ ತಂದು ಒದಗಿಸಿದ ಮೇವು ಮತ್ತು ಮೇತದ ಮೇವು.

ಕುದುರೆಗಳ ಮೇವು

ಮೇವನ್ನು ಪ್ರಾಣಿಗಳಿಗೆ ಬೇರೆಡೆಯಿಂದ ತಂದು ಒದಗಿಸಬಹುದು (ಇದರಲ್ಲಿ ಕತ್ತರಿಸಿ ಒಯ್ದು ನೀಡಲಾದ ಸಸ್ಯಗಳು ಸೇರಿರುತ್ತವೆ), ಅಂದರೆ ಪ್ರಾಣಿಗಳು ತಾವೇ ಮೇಯ್ದ ಆಹಾರ ಇದರಲ್ಲಿ ಸೇರಿರುವುದಿಲ್ಲ. ಇದರಲ್ಲಿ ಒಣಗಿಸಿರುವ ಮೇವು, ಒಣಗಿದ ಧಾನ್ಯಕಾಂಡಗಳು, ಹಗೇವಿನಲ್ಲಿ ಕೂಡಿಟ್ಟ ಹಸಿ ಮೇವು, ಸಂಕೋಚನಗೊಳಿಸಿದ ಸಣ್ಣ ಉಂಡೆ ರೂಪದ ಆಹಾರ, ಎಣ್ಣೆಗಳು ಹಾಗೂ ತೂಕಮಾಡಿ ನೀಡಲಾದ ಮಿಶ್ರ ಆಹಾರ, ಮತ್ತು ಮೊಳಕೆಬರಿಸಿದ ಧಾನ್ಯಗಳು ಹಾಗೂ ದ್ವಿದಳಧಾನ್ಯಗಳು ಸೇರಿವೆ.

ಮೇಯ್ದ ಆಹಾರ ಎಂದರೆ ಮೇಯುವ ಜಾನುವಾರುಗಳು ತಿನ್ನುವ ಸಸ್ಯ ವಸ್ತು (ಮುಖ್ಯವಾಗಿ ಸಸ್ಯದ ಎಲೆಗಳು ಮತ್ತು ಕಾಂಡಗಳು).[] ಈ ಪ್ರಕಾರದ ಆಹಾರದಲ್ಲಿ ಪ್ರಾಣಿಗಳು ನೇರವಾಗಿ ತಿನ್ನುವ ಸಸ್ಯಗಳು ಸೇರಿವೆ, ಉದಾಹರಣೆಗೆ ಹುಲ್ಲು, ಬೆಳೆಯ ಶೇಷಗಳು, ಅಥವಾ ಅಪಕ್ವ ಏಕದಳ ಬೆಳೆಗಳು.

ಉಲ್ಲೇಖಗಳು

ಬದಲಾಯಿಸಿ
  1. Fageria, N.K. (1997). Growth and Mineral Nutrition of Field Crops. NY, NY: Marcel Dekker. p. 595.