ಪ್ರಶಾಂತ್ ಮಾಡ್ತ
ಇವರು ಯೇಸು ಸಭೇಎಂಬ ಯಾಜಕ ವೃಂದಕ್ಕೆ ಸೇರಿದ್ದಾರೆ. ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.
ವಿದ್ಯಾಬ್ಯಾಸ
ಬದಲಾಯಿಸಿಬೆಂಗಳೂರು ವಿ.ವಿಯಿಂದ ಸ್ವರ್ಣ ಪದಕಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾನಕೊತ್ತರ ಪದವಿ ಪಡೆದ ಬಳಿಕ ಮಂಗಳೂರಿನ ಸಂತ ಅಲೋಶೀಯಸ್ ಕಾಲೇಜಿನಲ್ಲಿ ತಮ್ಮ ಪ್ರಾಧ್ಯಾಪಕ ವ್ರತ್ತಿಯ ಬಳಿಕ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಮಾಡಿದ್ದಾರೆ, ಹಾಗೂ ಶ್ರೇಷ್ಟ ಶಿಕ್ಶಣ ತಜ್ಞರಾಗಿ ಹೊರಹೊಮ್ಮಿದರು. 'ಯೇಸು ಸಭೆ'ಯನ್ನು ಸೇರಲು ಅವರು ಪೂರ್ವಭಾವಿಯಾಗಿ ಜಗದ ಹಲವು ಧರ್ಮಗಳನ್ನು,ತತ್ವಶಾಸ್ತ್ರಗಳನ್ನು ದಶಕಗಳ ಕಾಲ ಅದ್ಯಯನ ಮಾಡಿದ್ದರು. ರೆ|ಪ್ರಶಾಂತ್ ಅವರು ಸಾಹಿತ್ಯ ವಿಮರ್ಶೆ, ಸಂಸ್ಕ್ರತಿ ವಿಮರ್ಶೆ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಅವುಗಳ ಮೂಲ ಗ್ರಂಥಗಳಲ್ಲಿ ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದಾರೆ.
ಕೃತಿಗಳು
ಬದಲಾಯಿಸಿಕನ್ನಡದ ಥೆಸಾರಸ್-ಪದನಿಧಿ, ಕೊಂಕಣಿ ಥೆಸಾರಸ್-ಥೆಸಾರ್[೧]' ಕೊಂಕಣಿ ನುಡಿಗಟ್ಟುಗಳ ಬೃಹತ್ ಕೋಶವಾದ -'ಕೊಂಕಣಿ ಪಿಕೊಳಿಂ' ಈ ಬಗೆಯವು.'ನಿನ್ನಂತೆ ನಾನಗಲು',ಮತ್ತು 'ಸಾನಿಧ್ಯ'-ಅವರು ಕನ್ನಡಕ್ಕೆ ಅನುವಾದಿಸಿದ ಜಗದ್ಪ್ರಸಿದ್ದ ಅನುಭವಿ ಬರಹಗಳು.'ರಾಟವಳ್','ಶೆಂಭರ್ ಕಿಟಾಳಾಂ' ಕೊಂಕಣಿ ಲೇಖನಗಳ ಸಂಗ್ರಹ.ಕರ್ನಾಟಕದ ಹಿರಿಯ ಶಿಕ್ಷಣ ಸಂಸ್ಥೆಯಾದ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸವನ್ನು 'ಆನ್ ಈಗಲ್ಸ್ ವಿಂಗ್ಸ್'-ಎಂಬ ಗೃಂಥವನ್ನು ಆಂಗ್ಲ ಭಾಷೆಯಲ್ಲಿ ರಚಿಸಿದ್ದಾರೆ.ಸಮಾಜವನ್ನು, ಸಂಸ್ಕೃತಿಯವನ್ನು ವಿರಚನೆ ಮಾಡಿನೊಡಿ, ವಿಚಾರಕ್ಕೆ ನವಿರು ಹಾಸ್ಯ ಬೆರೆಸಿ,ಓದುಗರನ್ನು ಚಿಂತನೆಗೆ ಹಚ್ಚುವ ಅವರ ಅಂಕಣ 'ಚಕಿತ ಚಿತ್ತ' ಉದಯವಾಣಿ ಪತ್ರಿಕೆಯಲ್ಲಿ ಪ್ರಕಟನೆಗೊಳ್ಳುತ್ತಿದೆ.
ಪ್ರಶಸ್ತಿಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ