ಪ್ರವೀಣ್ ನಾಯಕ್
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಕೆ. ಪ್ರವೀಣ್ ನಾಯಕ್ ಜನಿಸಿದ್ದು ಏಪ್ರಿಲ್ ೧೨, ೧೯೬೨ರಲ್ಲಿ ತಂದೆ : ಕೆ. ಕೃಷ್ಣ ನಾಯಕ್ ತಾಯಿ : ರಾಧಾ ನಾಯಕ್
ಸುಮಾರು ಎರಡು ದಶಕಗಳಿಗೂ ಪತ್ರಿಕಾ ಛಾಯಾಗ್ರಾಹಕರಾಗಿ ಹಾಗೂ ಪತ್ರಕರ್ತರಾಗಿ ಕೆ. ಪ್ರವೀಣ್ ನಾಯಕ್ ಕನ್ನಡ ಚಿತ್ರರಂಗದಲ್ಲಿ ಪರಿಚಿತ ಹೆಸರು. ೧೯೮೪ರಲ್ಲಿ ಕನ್ನಡ ದೂರದರ್ಶನದ ಪ್ರಥಮ ಅನೌನ್ಸರ್ ಆಗಿ ವೃತ್ತಿ ಜೀವನ ಆರಂಭ. ನಂತರ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಲ್ಲಿ ಅಭಿನಯ ಹಾಗೂ ನಿರ್ದೇಶನ. `ಜೆಡ್' ಕನ್ನಡ ಚಲನಚಿತ್ರವನ್ನು ನಿರ್ದೇಶಿಸುವುದರ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ. `ಹ್ಞೂಂ ಅಂತೀಯಾ ಉಹ್ಞೂಂ ಅಂತೀಯಾ', `ಮೀಸೆ ಚಿಗುರಿದಾಗ' ಇವರ ನಿರ್ದೇಶನದ ಇತರ ಕನ್ನಡ ಚಿತ್ರಗಳು. ಶಿವಮಣಿ ನಿರ್ದೇಶಿಸಿ ಅಭಿನಯಿಸಿದ `ಲವ್ ಯು' ಹಾಗೂ ಧ್ಯಾನ್ ಅಭಿನಯಿಸಿದ `ಜಾಕ್ಪಾಟ್' ಚಿತ್ರಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆ ರಚನೆ. ಪ್ರಸಕ್ತ `ಶಂಕ್ರ' ಕನ್ನಡ ಚಲನಚಿತ್ರದ ನಿರ್ದೇಶನದಲ್ಲಿ ನಿರತರಾಗಿದ್ದಾರೆ ಪ್ರವೀಣ್ ನಾಯಕ್. ಶ್ರೀನಗರ ಕಿಟ್ಟಿ ಈ ಚಿತ್ರದ ನಾಯಕರಾಗಿದ್ದು ಮಾರ್ಚ್ (೨೦೧೪) ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.
ಕೆ. ಪ್ರವೀಣ್ ನಾಯಕ್ ಅವರ ಜೀವನದ ಸಂಕ್ಷಿಪ್ತ ಪರಿಚಯ ಇಂತಿದೆ.
ಶಾಲೆ ಮತ್ತು ಕಾಲೇಜು ಮಂಗಳೂರಿನಲ್ಲಿ ಜನಿಸಿದ ಪ್ರವೀಣ್ ನಾಯಕ್ ಪ್ರೈಮರಿ ಶಾಲೆ ಕಲಿತದ್ದು ಬಂಟವಾಳ ಬಳಿಯ ವಿಟ್ಲ ತಾಲೂಕಿನಲ್ಲಿ. ಶಾಲೆಯ ಬಾಲ್ಯದ ದಿನಗಳು, ತಂದೆಯವರ ಶಿಸ್ತು, ಊರಿನ ವಿಶೇಷ ಜಾತ್ರೆ, ಸಂಭ್ರಮಗಳು, ರುಚಿಯಾದ ಬಗೆ ಬಗೆ ತಿನಿಸುಗಳು, ಶಾಲೆಯ ಶಿಸ್ತಿನ ಸಿಪಾಯಿ ಸದಾ ಶುಭ್ರ ಶ್ವೇತವಸ್ತ್ರಧಾರಿ ತ್ಯಾಂಪಣ್ಣ ಮಾಸ್ತರರು, ಗೆಳೆಯರೊಡನಾಟ ಇವೆಲ್ಲವೂ ಮರೆಯಲಾಗದ್ ಸಿಹಿನೆನಪುಗಳು ಪ್ರವೀಣ್ ಪಾಲಿಗೆ. ತಂದೆ ಕೆ.ಕೆ. ನಾಯಕ್ ಸಿಂಡಿಕೇತ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದು ಮುಂದೆ ವರ್ಗಾವಣೆಗೊಂಡಿದ್ದು ತಿಪಟೂರಿಗೆ. ತಿಪಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಜೀವನ ಆರಂಭ. ಶಾಲೆಯಲ್ಲಿ ಆಟಪಾಠಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡ ಪ್ರವೀಣ್ ಎಲ್ಲಾ ಚಟುವಟಿಕೆಗಳಲ್ಲೂ ಮೇಲೆತ್ತಿದ ಕೈ. ಐದನೇ ತರಗತಿಯಲ್ಲಿದ್ದಾಗಲೇ ಪ್ರಥಮ ಬಾರಿಗೆ `ಅಲೆಕ್ಸಾಂಡರ್' ಕನ್ನಡ ನಾಟಕವನ್ನು ರಚಿಸಿ ನಿರ್ದೇಶಿಸಿ ಎಲ್ಲರಿಂದಲೂ ಶಹಬ್ಬಾಸ್ಗಿರಿ ಸಂಪಾದನೆ. ಮುಂದೆ ವರ್ಗವಾದಾಗ ತಂದೆಯೊಡನೆ ಬೆಂಗಳೂರಿಗೆ ಹೊರಟು ನಿಂತ ಪ್ರತಿಭಾವಂತ ಬಾಲಕ ಪ್ರವೀಣ್ರನ್ನು ಮನಸ್ಸಿಲ್ಲದ ಮನಸ್ಸಿನಿಂದ ಬೀಳ್ಕೊಟ್ಟರಂತೆ ಶಾಲೆಯ ಹೆಡ್ಮಾಸ್ತರರು. ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರ್ಪಡೆಯಾದ ಪ್ರವೀನ್ ವಿದ್ಯಾಭ್ಯಾಸವಲ್ಲದೇ ಇತರ ಕಲೆಯಲ್ಲೂ ಆಸಕ್ತಿ ವಹಿಸಲಾರಂಭಿಸಿದರು. ಮೊದಲಿಗೆ ಖ್ಯಾತ ಚಿತ್ರಕಲಾವಿದ ಎಂ.ಟಿ.ವಿ. ಆಚಾರ್ಯರಲ್ಲಿ ಚಿತ್ರಕಲಾಭ್ಯಾಸದ ಆರಂಭ. ಅನಂತರ ಕನ್ನಡ ಚಿತ್ರಕಲಾಪರಿಷತ್ ಹಾಗೂ ಕೆನ್ ಆರ್ಟ್ ಶಾಲೆಯಲ್ಲಿ ಮುಂದುವರಿಕೆ. ಒಂಭತ್ತನೇ ತರಗತಿಯಲ್ಲಿದ್ದಾಗಲೇ ವ್ಯಂಗ್ಯಚಿತ್ರಕಾರನಾಗಿ ರೂಪುಗೊಂಡ ಇವರ ವ್ಯಂಗ್ಯಚಿತ್ರಗಳು ಅಂದಿನ ಸುಧಾ, ಪ್ರಜಾಮತ, ಮಯೂರ, ಕಸ್ತೂರಿ ಮುಂತಾದ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಕನ್ನಡದಲ್ಲಷ್ಟೇ ಅಲ್ಲದೇ ತಮಿಳಿನ `ಆನಂದ ವಿಕಟನ್' ಪತ್ರಿಕೆಯೂ ಇವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿತ್ತು. ಅತ್ಯಂತ ಕಿರಿಯ ವ್ಯಂಗ್ಯಚಿತ್ರಕಲಾವಿದ ಎಂಬ ಪುರಸ್ಕಾರ ರಂಗಚಿತ್ರಬಳಗದಿಂದ ಇವರಿಗೆ ದೊರೆತಿತ್ತು. ಎಪಿಎಸ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಅಡ್ಮಿಷನ್ ಪಡೆಯುವುದರ ಮೂಲಕ ಕಾಲೇಜು ಜೀವನ ಪ್ರಾರಂಭ. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಭಾಗವಹಿಸಿ ಅತಿ ಹೆಚ್ಚು ಪ್ರಥಮ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಪ್ರವೀಣ್ರದ್ದು. ಪ್ರತಿವರ್ಷ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯುತ್ತಿದ್ದರು ಪ್ರವೀಣ್. ಕನ್ನಡ ಚಲನಚಿತ್ರಗಳ ನಿರ್ದೇಶನ ವಿದ್ಯಾಭ್ಯಾಸ ಪೂರೈಸಿದ ನಂತರ ಸ್ವಂತ ಉದ್ಯೋಗ ಪ್ರಾರಂಭಿಸಿದ್ದ ಪ್ರವೀಣ್ ನಾಯಕ್ ಆಲ್ ಇಂಡಿಯಾ ರೇಡಿಯೋದಲ್ಲಿ ನಾಟಕ, ಸಂಕಲನ, ನಿರ್ವಹಣೆ ಮುಂತಾದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವದೊಂದಿಗೆ ದೂರದರ್ಶನದ ಕನ್ನಡ ಕಾರ್ಯಕ್ರಮಗಳ ನಿರೂಪಕನಾಗಿ ಆಯ್ಕೆಯಾದರು. ಮುಂದುವರೆದು ಧಾರಾವಾಹಿಗಳಲ್ಲಿ ಅಭಿನಯ ಮತ್ತು ನಿರ್ದೇಶನವನ್ನು ಮಾಡಿದರು. `ಜೆಡ್' ಕನ್ನಡ ಚಲನಚಿತ್ರವನ್ನು ನಿರ್ದೇಶಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿ ಮುಂದೆ `ಹ್ಞೂಂ ಅಂತೀಯಾ ಉಹ್ಞೂಂ ಅಂತೀಯಾ', `ಮೀಸೆ ಚಿಗುರಿದಾಗ' ಚಿತ್ರಗಳನ್ನು ನಿರ್ದೇಶಿಸಿದರು. ಶಿವಮಣಿ ನಟಿಸಿ ನಿರ್ದೇಶಿಸಿದ `ಲವ್ ಯು', ಧ್ಯಾನ್ ಅಭಿನಯಿಸಿದ `ಜಾಕ್ಪಾಟ್' ಚಿತ್ರಕಥೆಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದರು. ಸದ್ಯದಲ್ಲಿ `ಶಂಕ್ರ' ಚಿತ್ರದ ನಿರ್ದೇಶನದ ತಯಾರಿಯಲ್ಲಿದ್ದಾರೆ ಪ್ರವೀಣ್.
ಕನ್ನಡ ಕೃತಿಗಳ ರಚನೆ ಸುಮಾರು ಎರಡು ವರ್ಷಗಳ ಕಾಲ ಮನಸ್ಸಿನ ಶಕ್ತಿಯ ಬಗ್ಗೆ ಅಧ್ಯಯನ ಹಾಗೂ ಪ್ರಯೋಗಗಳನ್ನು ಮಾಡಿದ ಪ್ರವೀಣ್ ಮನಸ್ಸಿಗೆ ಹಾಗೂ ಸಮ್ಮೋಹಿನಿಗೆ ಸಂಬಂಧಿಸಿದಂತೆ `ಧ್ಯಾನ ನನ್ನ ಅನುಭವದಲ್ಲಿ' ಹಾಗೂ `ಜಪ' ಎಂಬ ಕಿರುಪುಸ್ತಕಗಳನ್ನು ರಚಿಸಿದರು. ಕನ್ನಡದ ಮೇರುನಟ ರಾಜ್ಕುಮಾರ್ ಅವರೊಂದಿಗೆ ಸುಮಾರು ಇಪ್ಪತ್ತು ವರ್ಷಗಳ ಒಡನಾಟ ಹೊಂದಿದ್ದ ಪ್ರವೀಣ್ ಡಾ. ರಾಜ್ಕುಮಾರ್ ಕುರಿತ `ರಾಜ್ಕುಮಾರ್ ಒಂದು ಬೆಳಕು' ಕೃತಿಯನ್ನು ೨೦೧೦ರಲ್ಲಿ ಹೊರತಂದರು. ಜನಮನ ಗೆದ್ದ ಈ ಕೃತಿ ಕರ್ನಾಟಕ ಸರ್ಕಾರದ `ಪುಸ್ತಕ ಸೊಗಸು' ಪ್ರಥಮ ಪ್ರಶಸ್ತಿಯನ್ನು ಪಡೆದಿದೆ. `ದೇವರು, ಧರ್ಮ - ಏನಿದರ ಮರ್ಮ?' ಇವರು ರಚಿಸಿದ ವೈಚಾರಿಕತೆಯ ಕೃತಿ.
ಪತ್ರಿಕಾರಂಗ ಸುಮಾರು ಇಪ್ಪತ್ತು ವರ್ಷಗಳ ಕಾಲ ಪತ್ರಕರ್ತನಾಗಿ, ಪತ್ರಿಕಾ ಛಾಯಾಗ್ರಾಹಕರಾಗಿ ದುಡಿದ ಕನ್ನಡದ ಸರಿಸುಮಾರು ಎಲ್ಲಾ ಕಲಾವಿದರ ಹಾಗೂ ಹಿಂದಿ, ತಮಿಳು, ತೆಲುಗು ಚಿತ್ರರಂಗದ ಕಲಾವಿದರ, ತಂತ್ರಜ್ಞರ ಚಿತ್ರಗಳನ್ನೂ ಸೆರೆ ಹಿಡಿದಿದ್ದಾರೆ. ಪ್ರವೀಣ್ ಸೆರೆ ಹಿಡಿದ ಮೈಸೂರುಪೇಟ ಧರಿಸಿದ ರಾಜ್ಕುಮಾರ್ ಚಿತ್ರ ಲಕ್ಷಗಟ್ಟಲೆ ಡೌನ್ಲೋಡ್ ಕಂಡ ಏಕೈಕ ವ್ಯಕ್ತಿಯ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡದ ಹಲವಾರು ಪತ್ರಿಕೆಗಳಿಗೆ ಪ್ರಮುಖ ರಕ್ಷಾಪುಟಗಳನ್ನು ಒದಗಿಸಿದ ಹೆಮ್ಮೆ ಇವರದ್ದು. ಸ್ಟಾರ್ ಡಸ್ಟ್, ಸೊಸೈಟಿ, ಟೈಮ್ಸ್ ಆಫ್ ಇಂಡಿಯಾ ಮುಂತಾದ ಇಂಗೀಷ್ ಪತ್ರಿಕೆಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.
ಫೋಟೋ ಸ್ಟುಡಿಯೋ ಹವ್ಯಾಸಕ್ಕಾಗಿ ಫೋಟೋಗ್ರಫಿ ಆರಂಭಿಸಿದ ಪ್ರವೀಣ್ ಬೆಂಗಳೂರಿನಲ್ಲಿ `ಜೂಮ್' ಎಂಬ ಹೆಸರಿನಲ್ಲಿ ತಮ್ಮದೇ ಫೋಟೋ ಸ್ಟುಡಿಯೋ ಹೊಂದಿದ್ದಾರೆ. ಇಲ್ಲಿ ಪೋರ್ ಟ್ರೈಟ್ ಫೋಟೋಗಳಲ್ಲದೇ ಆಡ್-ಶೂಟ್, ಮಾಡೆಲಿಂಗ್, ಪೋರ್ಟ್ ಫೋಲಿಯೋ, ಕಾರ್ಪೊರೇಟ್ ಶೂಟ್, ಡಾಕ್ಯುಮೆಂಟರಿಗಳನ್ನು ಮಾಡಿಕೊಡಲಾಗುತ್ತದೆ.