ಪ್ರಲೋಭನೆ
ಪ್ರಲೋಭನೆಯು ಸಂತೋಷಕ್ಕಾಗಿ ಅಲ್ಪಾವಧಿಯ ಪ್ರೇರಣೆಗಳಲ್ಲಿ ತೊಡಗಿಕೊಳ್ಳುವ ಬಯಕೆ. ಪ್ರಲೋಭನೆಯು ದೀರ್ಘಾವಧಿಯ ಗುರಿಗಳಿಗೆ ಬೆದರಿಕೆ ಒಡ್ಡುತ್ತದೆ.[೧] ಕೆಲವು ಮತಗಳ ವಿಷಯದಲ್ಲಿ, ಪ್ರಲೋಭನೆಯು ಪಾಪಕ್ಕೆ ಒಲವು ತೋರುತ್ತದೆ. ಪ್ರಲೋಭನೆ ಪದವು ಕುತಂತ್ರದಿಂದ ಅಥವಾ ಕುತೂಹಲ, ಆಸೆ ಅಥವಾ ನಷ್ಟದ ಭಯದಿಂದ ಒಬ್ಬ ವ್ಯಕ್ತಿಯನ್ನು ಅಂತಹ ಕ್ರಿಯೆಯನ್ನು ಮಾಡುವಂತೆ ಪ್ರೋತ್ಸಾಹಿಸುವುದು ಅಥವಾ ಪ್ರೇರೇಪಿಸುವುದನ್ನೂ ವಿವರಿಸುತ್ತದೆ.
ಆತ್ಮಸಂಯಮ ಮತ್ತು ಅಹಂನ ಬರಿದಾಗಿಕೆಯ ವಿಷಯದಲ್ಲಿ, ಪ್ರಲೋಭನೆಯನ್ನು ಒಬ್ಬ ವ್ಯಕ್ತಿಯು ಸಾಧಿಸಲು ಆಶಿಸುವ ದೀರ್ಘಾವಧಿಯ ಗುರಿಗಳಿಗಾಗಿ ಕಾಯುವ ಅವನ ಸಾಮರ್ಥ್ಯಕ್ಕೆ ಅಡ್ಡಿಪಡಿಸುವ ತಕ್ಷಣದ, ಸಂತೋಷಕರ ಬಯಕೆ ಮತ್ತು/ಅಥವಾ ಪ್ರೇರಣೆ ಎಂದು ವಿವರಿಸಲಾಗುತ್ತದೆ.
ಹೆಚ್ಚು ಅನೌಪಚಾರಿಕವಾಗಿ, ಪ್ರಲೋಭನೆ ಪದವನ್ನು ನೈತಿಕ ಅಥವಾ ಸೈದ್ಧಾಂತಿಕ ಮೌಲ್ಯಮಾಪನಕ್ಕೆ ಏನೂ ಸಂಬಂಧವಿರದೇ "ಆಕರ್ಷಿತವಾಗುವ ಮತ್ತು ಸೆಳೆಯಲ್ಪಡುವ ಸ್ಥಿತಿ" ಎಂಬ ಅರ್ಥಕೊಡಲು ಬಳಸಬಹುದು; ಉದಾಹರಣೆಗೆ, ಅದನ್ನು ತಿಂದರೆ ಏನೂ ನಕಾರಾತ್ಮಕ ಪರಿಣಾಮಗಳು ಉಂಟಾಗದಿದ್ದರೂ ಒಂದು ಖಾದ್ಯವು ಪ್ರಲೋಭನಗೊಳಿಸುತ್ತದೆ ಎಂದು ಒಬ್ಬರು ಹೇಳಬಹುದು.
ಪ್ರಲೋಭನೆಗೆ ಸಂಬಂಧಿಸಿದಂತೆ ವಿರೋಧಾಭಾಸದ ಪರಿಣಾಮಗಳಿವೆ ಎಂದು ಸಂಶೋಧನೆಯು ಸೂಚಿಸುತ್ತದೆ. ಪ್ರಲೋಭನೆಗಳು ತಮ್ಮನ್ನು ಪ್ರದರ್ಶಿಸಿಕೊಳ್ಳುವ ಎಲ್ಲ ರೂಪಗಳನ್ನು ಒಳಗೊಂಡಂತೆ, ತೀರ್ಮಾನ ಮಾಡುವಲ್ಲಿ ಉನ್ನತ ನೈತಿಕ ಮಾನದಂಡಗಳನ್ನು ಸುಲಭವಾಗಿಸಬಹುದಾದ ಆಯ್ಕೆಗಳ ಸಮೂಹವಿದೆ.
- ಪ್ರಬಲ ಅಥವಾ ಸ್ಪಷ್ಟವಾದ ಪ್ರಲೋಭನೆಗಳಿಗೆ ಹೋಲಿಸಿದರೆ ದುರ್ಬಲ ಅಥವಾ ಸೂಕ್ಷ್ಮ ಪ್ರಲೋಭನೆಗಳು ಕಡಿಮೆ ಆತ್ಮಸಂಯಮಕ್ಕೆ ಕಾರಣವಾಗುತ್ತವೆ.
- "ಲಭ್ಯವಾದ ಪ್ರಲೋಭನೆಗಳು ಕಡಿಮೆ ಮಹತ್ವಪೂರ್ಣ ಮತ್ತು ಕಡಿಮೆ ಆಕರ್ಷಕವಾಗಿರುತ್ತವೆ" ಎಂದು ಬೆಂಬಲಿತ ಸಂಶೋಧನೆಯು ಹೇಳುತ್ತದೆ.
ಪ್ರಲೋಭನೆಗಳು ದೀರ್ಘಾವಧಿಯ ಸಾಧನೆಯ ಮೇಲೆ ಪರಿಣಾಮಗಳನ್ನು ಹೊಂದಿರಬಹುದು. ಪ್ರಲೋಭನೆ ಮತ್ತು ಅದರ ಪರಿಣಾಮಗಳನ್ನು ಅನುಭವಿಸಿದ ವ್ಯಕ್ತಿಗಳು ತಮ್ಮ ಅನುಭವಗಳಿಂದ ಪ್ರಯೋಜನಗಳಿವೆ ಎಂದು ಕಂಡುಕೊಂಡರು ಎಂದು ಕಂಡುಬಂದಿದೆ.
ಒಬ್ಬ ಪ್ರಾಧ್ಯಾಪಕರು ಹಣದಂತಹ ಪ್ರಲೋಭನೆಗಳ ಪ್ರೇರಕ ಮತ್ತು ಮನವೊಲಿಸುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಒಂದು ಸಂಶೋಧನಾ ಲೇಖನವನ್ನು ಬರೆದರು. ಇದರ ಪ್ರಕಾರ, ಪ್ರಲೋಭನೆಯು ಒಬ್ಬರು ಬೌದ್ಧ ಧರ್ಮ, ಕ್ರೈಸ್ತ ಧರ್ಮದಂತಹ ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸುವಂತೆ ಒತ್ತಾಯಪಡಿಸಬಹುದು. ದೊಡ್ಡ ಪ್ರಮಾಣದ ಹಣ ಸಿಗುವ ಅವಕಾಶ ನೀಡಿದಾಗ ನಾವು ತೊಂದರೆಕೊಡುವ, ಕದಿಯುವ, ಲೈಂಗಿಕ ದುರಾಚಾರದಲ್ಲಿ ಪಾಲ್ಗೊಳ್ಳುವ, ಅಥವಾ ಮಾದಕ ವಸ್ತುಗಳನ್ನು ಸೇವಿಸುವ ಹೆಚ್ಚಿನ ಸಾಧ್ಯತೆಗಳಿರುತ್ತವೆ ಎಂದು ಇವರು ಹೇಳುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Webb, J.R. (Sep 2014). Incorporating Spirtuality into Psychology of temptation: Conceptualization, measurement, and clinical implications. Spirtuality in Clinical Practice. 1.3. PP: 231-241