ಪ್ರಭಾವತಿಗುಪ್ತ (ಪ್ರ. 405) ವಾಕಾಟಕ ರಾಜವಂಶದ ರಾಣಿ ಹಾಗೂ ರಾಜಮಾತೆಯಾಗಿದ್ದಳು. ಇವಳು ಎರಡನೇ ರುದ್ರಸೇನನ ರಾಣಿಯಾಗಿದ್ದಳು, ಮತ್ತು ಅವಳ ಪುತ್ರರಾದ ದಿವಾಕರಸೇನ, ದಾಮೋದರಸೇನ, ಮತ್ತು ಪ್ರವರಸೇನರು ಅವಯಸ್ಕರಾಗಿದ್ದ ಅವಧಿಯಲ್ಲಿ, ೩೮೫ ರಿಂದ ೪೦೫ ರ ವರೆಗೆ ರಾಜಮಾತೆಯಾಗಿ ರಾಜ್ಯಭಾರ ಮಾಡಿದಳು.

ಪ್ರಭಾವತಿಗುಪ್ತ
ವಾಕಾಟಕ ರಾಜವಂಶದ ರಾಣಿ ಹಾಗೂ ರಾಜಮಾತೆ
ಆಳ್ವಿಕೆ ಕ್ರಿ.ಶ. 385-405
ಗಂಡ/ಹೆಂಡತಿ ಎರಡನೇ ರುದ್ರಸೇನ
ಸಂತಾನ
ದಿವಾಕರಸೇನ, ದಾಮೋದರಸೇನ ಮತ್ತು ಪ್ರವರಸೇನ
ತಂದೆ ಎರಡನೇ ಚಂದ್ರಗುಪ್ತ
ತಾಯಿ ಕುಬೇರನಾಗ

ಗುಪ್ತ ಸಾಮ್ರಾಜ್ಯಎರಡನೇ ಚಂದ್ರಗುಪ್ತನು ಅವಳ ತಂದೆ ಮತ್ತು ನಾಗ ಜನರ ಕುಬೇರನಾಗಳು ಅವಳ ತಾಯಿ. ಇವಳು ವಾಕಾಟಕರ ಎರಡನೇ ರುದ್ರಸೇನನನ್ನು ವಿವಾಹವಾದಳು. ೩೮೫ರಲ್ಲಿ ಅವನ ಮರಣದ ನಂತರ, ಇವಳು ತನ್ನ ಚಿಕ್ಕ ಪುತ್ರರಾದ ದಿವಾಕರಸೇನ, ದಾಮೋದರಸೇನ ಹಾಗೂ ಪ್ರವರಸೇನರಿಗೆ ರಾಜಮಾತೆಯಾಗಿ ಇಪ್ಪತ್ತು ವರ್ಷ ರಾಜ್ಯಭಾರ ಮಾಡಿದಳು. ಇದರಲ್ಲಿ, ಅವಳ ತಂದೆ ಅವಳ ಬೆಂಬಲವಾಗಿದ್ದನು ಮತ್ತು ವಾಕಾಟಕರು ಬಹುಮಟ್ಟಿಗೆ ಗುಪ್ತ ಸಾಮ್ರಾಜ್ಯದ ಭಾಗವಾಗಿದ್ದರು. ಈ ಅವಧಿಯನ್ನು ಹಲವುವೇಳೆ ವಾಕಾಟಕ-ಗುಪ್ತ ಕಾಲ ಎಂದು ಕರೆಯಲಾಗುತ್ತದೆ.[][]

ಉಲ್ಲೇಖಗಳು

ಬದಲಾಯಿಸಿ
  1. Kulke, Hermann; Rothermund, Dietmar (2004). A History of India (Fourth ed.). Routledge. pp. 91–92. Archived from the original on 4 ಅಕ್ಟೋಬರ್ 2014. Retrieved 1 October 2014.
  2. Singh, Upinder (2009). A history of ancient and early medieval India : from the Stone Age to the 12th century. New Delhi: Pearson Longman. p. 482. ISBN 978-81-317-1677-9. Retrieved 10 August 2016.