ಪ್ರದ್ಯೋತ ರಾಜವಂಶವು ಆಧುನಿಕ ಮಧ್ಯ ಪ್ರದೇಶ ರಾಜ್ಯದಲ್ಲಿನ ಅವಂತಿಯನ್ನು ಆಳಿದ ಒಂದು ಪ್ರಾಚೀನ ಭಾರತೀಯ ರಾಜವಂಶವಾಗಿತ್ತು. ಆದರೆ, ಈ ರಾಜವಂಶವು ಮಗಧದಲ್ಲಿನ ಬಾರ್ಹದ್ರಥ ರಾಜವಂಶವನ್ನು ಹಿಂಬಾಲಿಸಿತು ಎಂದು ಬಹುತೇಕ ಪುರಾಣಗಳು (ಬ್ರಹ್ಮಾಂಡ ಪುರಾಣದ ಒಂದು ಹಸ್ತಪ್ರತಿಯನ್ನು ಹೊರತುಪಡಿಸಿ) ಹೇಳುತ್ತವೆ.[] ವಾಯು ಪುರಾಣದ ಪ್ರಕಾರ, ಅವಂತಿಯ ಪ್ರದ್ಯೋತರು ಮಗಧವನ್ನು ಸ್ವಾಧೀನಪಡಿಸಿಕೊಂಡು ಕ್ರಿ.ಪೂ. ೭೯೯-೬೮೪ ರವರೆಗೆ ೧೩೮ ವರ್ಷ ಅಲ್ಲಿ ಆಳ್ವಿಕೆ ನಡೆಸಿದರು. ಅವಂತಿಯ ರಾಜ ಪ್ರದ್ಯೋತನ ಮಗ ಪಾಲಕನು ಕೌಶಾಂಬಿಯನ್ನು ಜಯಿಸಿ ತನ್ನ ರಾಜ್ಯವನ್ನು ಪ್ರಬಲಗೊಳಿಸಿದನು.

ಬೌದ್ಧ ಮತ್ತು ಜೈನ ಎರಡೂ ಪಠ್ಯಗಳ ಪ್ರಕಾರ, ಉತ್ತರಾಧಿಕಾರಿಯಾಗಲು ರಾಜನ ಮಗನು ತನ್ನ ತಂದೆಯನ್ನು ಕೊಲ್ಲಬೇಕೆಂಬುದು ಪ್ರದ್ಯೋತ ಸಂಪ್ರದಾಯಗಳಲ್ಲಿ ಒಂದಾಗಿತ್ತು. ಈ ಅವಧಿಯಲ್ಲಿ, ಮಗಧದಲ್ಲಿ ಅಪರಾಧಗಳು ಸಾಮಾನ್ಯವಾಗಿದ್ದವು ಎಂದು ವರದಿ ಮಾಡಲಾಗಿದೆ. ವಂಶದ್ವೇಷಗಳು ಮತ್ತು ಅಪರಾಧಗಳಿಂದ ಬೇಸತ್ತು, ಮಗಧದ ಜನ ಬಂಡಾಯವೆದ್ದು ಹರ್ಯಂಕನನ್ನು ರಾಜನನ್ನಾಗಿ ಕ್ರಿ.ಪೂ. ೬೮೪ರಲ್ಲಿ ಆಯ್ಕೆಮಾಡಿದರು. ಇದು ಮಗಧದಲ್ಲಿ ಹರ್ಯಂಕ ರಾಜವಂಶದ ಉದಯಕ್ಕೆ ಕಾರಣವಾಯಿತು.

ಆದರೆ, ಪ್ರದ್ಯೋತ ರಾಜವಂಶವು ಅವಂತಿಯಲ್ಲಿ ಆಳ್ವಿಕೆ ನಡೆಸುವುದನ್ನು ಮುಂದುವರಿಸಿತು. ಕೊನೆಗೆ ಶಿಶುನಾಗನು ಅವಂತಿಯನ್ನು ಜಯಿಸಿದನು. ಇವನು ಕೊನೆಯ ಪ್ರದ್ಯೋತ ಅರಸನಾದ ನಂದೀವರ್ಧನನನ್ನು ಸೋಲಿಸಿದನು ಮತ್ತು ಕ್ರಿ.ಪೂ. ೪೧೩ರಲ್ಲಿ ಮಗಧದ ಹರ್ಯಂಕ ರಾಜವಂಶವನ್ನೂ ನಾಶಮಾಡಿದನು.

  • ಪ್ರದ್ಯೋತ ಮಹಾಸೇನ
  • ಪಾಲಕ
  • ವಿಶಾಖಯೂಪ
  • ಅಜಕ ಅಥವಾ ಆರ್ಯಕ
  • ವರ್ತಿವರ್ಧನ ಅಥವಾ ನಂದಿವರ್ಧನ

ಮೇರುತುಂಗನ ವಿಸರಶ್ರೇಣಿಯ ಪ್ರಕಾರ, ಪಾಲಕನ ಆಳ್ವಿಕೆ ಕ್ರಿ.ಪೂ. ೫೨೭ರಲ್ಲಿ ಆರಂಭವಾಯಿತು.[] ಇವನು ಉಜ್ಜಯಿನಿಯ ಚಂದ ಪ್ರದ್ಯೋತನ ಮಗನಾಗಿದ್ದನು.[]

ಉಲ್ಲೇಖಗಳು

ಬದಲಾಯಿಸಿ

ಉದ್ಧರಣಗಳು

ಬದಲಾಯಿಸಿ
  1. Misra, V.S. (2007). Ancient Indian Dynasties, Mumbai: Baratiya Vidya Bhavan, ISBN 81-7276-413-8, p.300
  2. Kailash Chand Jain 1991, p. 85.
  3. Kailash Chand Jain 1991, p. 81.


ಮೂಲಗಳು

ಬದಲಾಯಿಸಿ