ಪ್ರತಿಷ್ಠಾನ ಸರಣಿ ಕಾದಂಬರಿಗಳು

ಪ್ರತಿಷ್ಠಾನ ಸರಣಿ ಕಾದಂಬರಿಗಳು ಆಂಗ್ಲ ಭಾಷೆಯ ಹೆಸರಾಂತ ವೈಜ್ಞಾನಿಕ ಕಾದಂಬರಿಕಾರ ಐಸಾಕ್ ಅಸಿಮೋವ್ ರವರು ರಚಿಸಿದ ಕಾದಂಬರಿ ಸರಣಿಗಳು. ಇವುಗಳ ಮೂಲಭಾಷೆ ಇಂಗ್ಲಿಷ್ (ಫೌಂಡೇಷನ್ ಸೀರೀಸ್). ಈ ಸರಣಿಯಲ್ಲಿ ಒಟ್ಟು ೭ ಕಾದಂಬರಿಗಳಿದ್ದು ಅವುಗಳ ಕಥನ ನಿಕಟವಾಗಿ ಹೊಸೆದುಕೊಂಡರೂ ಪ್ರತಿ ಪುಸ್ತಕವನ್ನು ಸ್ವತಂತ್ರವಾಗಿಯೇ ಓದಬಹುದು. ಈ ಸರಣಿಯಲ್ಲಿ ರೋಬಾಟ್ ಸರಿಣಿ ಕಾದಂಬರಿಗಳನ್ನೂ, ಸಾಮ್ರಾಜ್ಯ ಸರಣಿ ಕಾದಂಬರಿಗಳನ್ನೂ ಕೆಲವೊಮ್ಮೆ ಕೂಡಿಸಿ ಉದ್ದೇಶಿಸುವ ಪದ್ಧತಿಯೂ ಇರುವುದು. ಈ ಸರಣಿಯು ಬಹುಳ ಶ್ಲಾಘನೆಗೆ ಪಾತ್ರವಾಗಿ ಹ್ಯೂಗೋ ಪುರಸ್ಕಾರದ ಆಶ್ರಯದಡಿ ಒಮ್ಮೆ ಮಾತ್ರ ಪ್ರದಾನ ಮಾಡಿದ "ಉತ್ತಮೋತ್ತಮ ಸಾರ್ವಕಾಲಿಕ ಸರಣಿ" ಎಂಬ ಪ್ರಶಸ್ತಿಯಿಂದ ಪುರಸ್ಕೃತವಾಯಿತು.

ಚಿತ್ರ:2nd foundation flat view.JPG
ದ್ವಿತೀಯ ಪ್ರತಿಷ್ಠಾನ (1953), 1973 ಪ್ಯಾಂತರ್ ಕಾಗದಹೊದಿಕೆ ಆವೃತ್ತಿ, ರಕ್ಷಾಪುಟ ಕಲೆ ಕ್ರಿಸ್ ಫಾಸ್.

ಸರಣಿಯ ಹಿನ್ನೆಲೆ

ಬದಲಾಯಿಸಿ

ಈ ಕಾದಂಬರಿಗಳು ಸುದೂರದ ಭವಿಷ್ಯದಲ್ಲಿ, ಮಾನವರು ಆಕಾಶಗಂಗಾ ತಾರಾಗಣದ ಮೇಲೆ ಹೆಚ್ಚು ಕಡಿಮೆ ಸಂಪೂರ್ಣ ಅಧಿವೇಶನವನ್ನು ಸ್ಥಾಪಿಸಿದ ಕಾಲದಲ್ಲಿ ನಡೆದ ಘಟನೆಗಳನ್ನು ಬಣ್ಣಿಸುವುವು. ನಿಷ್ಕೃಷ್ಟವಾಗಿ ಈ ಕಥನಗಳು ಹ್ಯಾರಿ ಸೆಲ್ಡನ್ ಎಂಬ ವಿಜ್ಞಾನಿಯ ಕಾಲದಿಂದ ೫೦೦ ವರ್ಷಗಳ ಚರಿತ್ರೆಯನ್ನು ವ್ಯಾಪಿಸುತ್ತವೆ. ಮಾನವರು ಆಕಾಶಗಂಗೆಯ ಎಲ್ಲೆಡೆಯಲ್ಲಿಯೂ ಚದುರಿದ್ದ ಅನೇಕಾನೇಕ ವಾಸಯೋಗ್ಯ ಗ್ರಹಗಳಲ್ಲಿ ನೆಲೆಸಿದ್ದು ಟ್ರ್ಯಾಂಟರ್ ಎಂಬ ಗ್ರಹದಲ್ಲಿ ಆಸ್ಥಾನವನ್ನು ಸ್ಥಾಪಿಸಿಕೊಂಡಿದ್ದ ಚಕ್ರವರ್ತಿಯೊಬ್ಬನ ಆಡಳಿತಕ್ಕೆ ಒಳಗಾಗಿರುವರು. ಸಾವಿರಾರು ವರ್ಷಗಳಿಂದ ನಡೆದು ಬಂದಿದ್ದ ಈ ಕ್ಷೀರಪಥವ್ಯಾಪಿ ಸಾಮ್ರಾಜ್ಯವು ಪತನದತ್ತ ಸಾಗಿರುವುದು ಎಂದು ಹ್ಯಾರಿ ಸೆಲ್ಡನ್ ಎಂಬ ವಿಜ್ಞಾನಿಯು ತನ್ನ ವಿನೂತನ ವಿಜ್ಞಾನವಾದ ಮಾನಸಿಕ-ಇತಿಹಾಸಶಾಸ್ತ್ರದ (ಸೈಕೋಹಿಸ್ಟರಿಯ) ಮೂಲಕ ಮುಂಗಾಣುವನು. ಹೀಗೆಯೇ ನಡೆದು ಹೋದಲ್ಲಿ, ಮಾನವತೆಯು ಅಂಧಕಾರಮಯ ಯುಗವನ್ನು ಒಂದು ಸಹಸ್ರಮಾನದೊಳಗೆ ಹೊಕ್ಕು, ಅದರಿಂದ ಚೇತರಿಸಿಕೊಂಡು ಹೊರಬರಲು ಮೂವತ್ತು ಸಹಸ್ರಮಾನಗಳೇ ಹಿಡಿದೀತು ಎಂದೂ ಕಂಡುಕೊಳ್ಳುತ್ತಾನೆ. ಹೀಗಾಗಿ, ಪತನವನ್ನು ತಡೆಯಲು ಸಾಧ್ಯವಾಗದಿದ್ದರೂ, ಪುನರುತ್ಥಾನಪೂರ್ವದ ಮಧ್ಯಂತರ ಕಾಲವನ್ನು ಕೇವಲ ಒಂದೇ ಸಹಸ್ರಮಾನದವರೆಗೆ ಕುಗ್ಗಿಸುವ ಉದ್ದೇಶದಿಂದ ಹ್ಯಾರಿ ಸೆಲ್ಡನ್ ಮತ್ತು ಅವನ ಸಹಕಾರಿಗಳು ತಮ್ಮ ವಿನೂತನ ವಿಜ್ಞಾನವಾದ ಸೈಕೋಹಿಸ್ಟರಿಯ ಅನುಗುಣವಾಗಿ ಭವಿಷ್ಯದ ಸಾರಥ್ಯವನ್ನು ವಹಿಸಿಕೊಳ್ಳಲು ಸಂಕಲ್ಪಿಸಿ ಎರಡು ಪ್ರತಿಷ್ಠಾನಗಳನ್ನು ಸಂಸ್ಥಾಪಿಸುವರು. ಅವುಗಳಲ್ಲಿ ವಿಜ್ಞಾನಿಗಳ ತಂಡವನ್ನೊಳಗೊಂಡ ಪ್ರಥಮ ಪ್ರತಿಷ್ಠಾನವು ಬಹಿರಂಗವಾಗಿಯೇ ಇದ್ದುಕೊಂಡು ಆಕಾಶಗಂಗಾ ತಾರಾಸಮೂಹದ ಅಂಚಿನಲ್ಲಿರುವ ಟರ್ಮಿನಸ್ ಎಂಬ ಗ್ರಹಕ್ಕೆ ತೆರಳುವುದು. ದ್ವಿತೀಯ ಪ್ರತಿಷ್ಠಾನವು ಗುಪ್ತವಾಗಿದ್ದುಕೊಂಡು, ಹಲವು ಶತಮಾನಗಳಷ್ಟುಕಾಲ ಪತನಪ್ರವೃತ್ತ ಪ್ರಸ್ತುತ ಸಾಮ್ರಾಜ್ಯಕ್ಕಾಗಲೀ ಅಥವಾ ಪ್ರಥಮ ಪ್ರತಿಷ್ಠಾನಕ್ಕಾಗಲೇ ತಿಳಿಯದಂತೆಯೇ ರಾಜಧಾನಿ ಟ್ಯ್ರಾಂಟರ್ ನಲ್ಲಿಯೇ ಮುಂದುವರಿಯುತ್ತದೆ.

ಸರಣಿಯಲ್ಲಿನ ಕಾದಂಬರಿಗಳ ಪಟ್ಟಿ

ಬದಲಾಯಿಸಿ

ಪಾತ್ರ ಪ್ರಪಂಚ

ಬದಲಾಯಿಸಿ
  • ಹ್ಯಾರಿ ಸೆಲ್ಡನ್ - ಸೈಕೋಹಿಸ್ಟರಿಯ ಪ್ರವರ್ತಕ. ಇವನ ಮುಂದಾಳತ್ವದಲ್ಲಿ ಪ್ರತಿಷ್ಠಾನಗಳನ್ನು ಮತ್ತು 'ಸೆಲ್ಡನ್ ಯೋಜನೆ' ಗಳನ್ನು ಕಲ್ಪಿಸಲಾಯಿತು. ಏಟೋ ಡೆಮೆರ್ಜೆಲ್ ನಂತರ ಚಕ್ರವರ್ತಿ ಮೊದಲನೇ ಕ್ಲಿಯೋನ್ ನ ಕ್ಷೀರಪಥಾಧಿಪತ್ಯದಡಿ ಪ್ರಥಮ ಮಂತ್ರಿ (ಫಸ್ಟ್ ಮಿನಿಸ್ಟರ್) ಆಗಿದ್ದನು. ಪರಂಪರೆಯ ಪ್ರಕಾರ ದ್ವಿತೀಯ ಪ್ರತಿಷ್ಠಾನದ ಮೊದಲ ಪ್ರಥಮ ಪ್ರೋಕ್ತ (ಫಸ್ಟ್ ಸ್ಪೀಕರ್)
  • ಆರ್. ಡೇನೀಲ್ ಓಲಿವಾ - ಮಾನವಸದೃಶ ರೋಬಾಟ್. ಇವನು ಏಟೋ ಡೆಮೆರ್ಜೆಲ್ (ಪ್ರಥಮ ಮಂತ್ರಿ) ಮತ್ತು ಚೆಟ್ಟರ್ ಹಮ್ಮಿನ್ ಎಂಬ ಹೆಸರುಗಳನ್ನೂ ಧರಿಸುವನು. ಇವನು ಪ್ರತಿಷ್ಠಾನವನ್ನು ಮತ್ತು ಸೆಲ್ಡನ್ ಯೋಜನೆಯನ್ನು, ಮತ್ತು ಗಾಯ ಮತ್ತು ಗ್ಯಾಲಾಕ್ಸಿಯ ಎಂಬ ಗ್ರಹವ್ಯಾಪಿ ವಸಾಹತುಗಳನ್ನು ಸೃಷ್ಟಿಸುತ್ತಾನೆ
  • ಯೂಗೋ ಅಮಾರಿಲ್ - ಹ್ಯಾರಿ ಸೆಲ್ಡನ್ ನ ಸಹಕಾರಿ.
  • ಡೋರ್ಸ್ ವೆನಬಿಲಿ - ಹ್ಯಾರಿ ಸೆಲ್ಡನ್ ನ ಪತ್ನಿ ಮತ್ತು ರಕ್ಷಕಿ. ಕೊನೆಯಲ್ಲಿ ಇವಳು ಒಬ್ಬ ಮಾನವಸದೃಶ ರೋಬಾಟ್ ಎಂದು ತಿಳಿದು ಬರುತ್ತದೆ

‍*ಚಕ್ರವರ್ತಿ ಮೊದಲನೆಯ ಕ್ಲಿಯಾನ್ - ಎಂಟುನ್ ವಂಶಜ

  • ಸಾಲ್ವರ್ ಹಾರ್ಡಿನ್ - ಟರ್ಮಿನಸ್ ನಗರದ ಮೊದಲ ಮೇಯರ್. 'ಎನ್ಸೈಕ್ಲೋಪೀಡಿಯ ಗಲಾಕ್ಟಿಕಾ' ಎಂಬ ವಿಶ್ವಕೋಶ ರಚನೆಯೇ ಪ್ರಥಮ ಪ್ರತಿಷ್ಠಾನದ ಗುರಿಯೆನ್ನುವವರ ಪೊಳ್ಳನ್ನು ಗುರುತಿಸಿದವರಲ್ಲಿ ಮೊದಲಿಗ
  • ಹೋಬರ್ ಮ್ಯಾಲೋ - "ವರ್ತಕ ಪ್ರಭು" - ಪ್ರಥಮ ಪ್ರತಿಷ್ಠಾನದ 'ವರ್ತಕ' ದಿನಗಳ ಮೇಯರ್
  • ದಿ ಮ್ಯೂಲ್ (ಇವನು 'ಗಾಯ' ಗ್ರಹದ ಮೂಲನಿವಾಸಿ) - ಮಾನವರ ಮನಸ್ಸನ್ನು ತಿರುಗಿಸಬಲ್ಲ ಸಾಮರ್ಥ್ಯವುಳ್ಳ ಮಾರ್ಪಾಳು (ಮ್ಯೂಟೆಂಟ್)
  • ಎಬ್ಲಿಂಗ್ ಮಿಸ್ - ಇವನು ದ್ವಿತೀಯ ಪ್ರತಿಷ್ಠಾನದ ತಾಣವನ್ನು ಕಂಡುಕೊಂಡವರಲ್ಲಿ ಮೊದಲನೆಯವನೆಂಬ ಪ್ರತೀತಿ