ಪ್ರಗತಿ
ಪ್ರಗತಿ (ಮುನ್ನಡೆ) ಎಂದರೆ ಸಂಸ್ಕರಿತ, ಸುಧಾರಿತ, ಅಥವಾ ಬೇರೆ ರೀತಿಯಲ್ಲಿ ಬಯಸಿದ ಸ್ಥಿತಿಯ ಕಡೆಗಿನ ಚಲನೆ. ಪ್ರಗತಿವಾದದ ಸಂದರ್ಭದಲ್ಲಿ, ಪ್ರಗತಿಯ ಕಲ್ಪನೆಯು ತಂತ್ರಜ್ಞಾನ, ವಿಜ್ಞಾನ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿನ ಮುಂದುವರಿಕೆಗಳು ಸುಧಾರಿತ ಮಾನವ ಸ್ಥಿತಿಯನ್ನು ಉಂಟುಮಾಡಿವೆ, ಮತ್ತು ಇದನ್ನೇ ವಿಸ್ತರಿಸುತ್ತಾ ಉಂಟುಮಾಡುವುದನ್ನು ಮುಂದುವರಿಸುತ್ತವೆ ಎಂಬ ಪ್ರತಿಪಾದನೆಯನ್ನು ಸೂಚಿಸುತ್ತದೆ[೧]; ಸಾಮಾಜಿಕ ವ್ಯವಸ್ಥೆಯು ನೇರ ಮಾನವ ಕ್ರಿಯೆಯ ಪರಿಣಾಮವಾಗಿ ಉಂಟಾಗಬಹುದು, ಅಂದರೆ ಸಾಮಾಜಿಕ ಉದ್ಯಮ ಅಥವಾ ಕ್ರಿಯಾವಾದದ ಮೂಲಕವೆಂಬ ಅರ್ಥದಲ್ಲಿ, ಅಥವಾ ಸಮಾಜಸಾಂಸ್ಕೃತಿಕ ವಿಕಸನದ ಸಹಜ ಭಾಗವಾಗಿ.
ಪ್ರಗತಿಯ ಪರಿಕಲ್ಪನೆಯನ್ನು ೧೯ನೇ ಶತಮಾನದ ಮುಂಚಿನ ವರ್ಷಗಳ ಸಾಮಾಜಿಕ ಸಿದ್ಧಾಂತಗಳಲ್ಲಿ ಪರಿಚಯಿಸಲಾಯಿತು, ವಿಶೇಷವಾಗಿ ಅಗಸ್ಟ ಕಾಂಟ್ ಮತ್ತು ಹರ್ಬರ್ಟ್ ಸ್ಪೆನ್ಸರ್ ವಿವರಿಸಿದಂತೆ.
ಉಲ್ಲೇಖಗಳು
ಬದಲಾಯಿಸಿ