ಪ್ರಕ್ಷೇಪಣ ಪರದೆಯು ಅನುಸ್ಥಾಪಿತ ಸೌಕರ್ಯವಾಗಿದ್ದು, ಇದು ಪ್ರೇಕ್ಷಕರ ನೋಟಕ್ಕಾಗಿ ಪ್ರಕ್ಷೇಪಿತ ಚಿತ್ರವನ್ನು ಪ್ರದರ್ಶಿಸಲು ಬಳಸಲಾಗುವ ಮೇಲ್ಮೈ ಮತ್ತು ಆಧಾರ ರಚನೆಯನ್ನು ಹೊಂದಿರುತ್ತದೆ. ಪ್ರಕ್ಷೇಪಣ ಪರದೆಗಳನ್ನು ಕಾಯಂ ಆಗಿ ಸ್ಥಾಪಿಸಲಾಗಿರಬಹುದು, ಚಿತ್ರಮಂದಿರದಲ್ಲಿದ್ದಂತೆ; ಗೋಡೆಯ ಮೇಲೆ ಚಿತ್ರಿಸಿರಬಹುದು;[೧] ಅಥವಾ ಮುಕ್ಕಾಲಿ ಅಥವಾ ನೆಲಹಾಸು ಏರಿಕೆಯ ಮಾದರಿಗಳನ್ನು ಹೊಂದಿದ್ದು ಸಾಗಿಸಬಲ್ಲದ್ದಾಗಿರಬಹುದು, ಸಮಾಲೋಚನಾ ಕೊಠಡಿ ಅಥವಾ ಇತರ ಮೀಸಲಿಲ್ಲದ ವೀಕ್ಷಣಾ ಸ್ಥಳದಲ್ಲಿರುವಂತೆ. ಸಾಗಿಸಬಲ್ಲ ಪರದೆಗಳ ಮತ್ತೊಂದು ಜನಪ್ರಿಯ ವಿಧವೆಂದರೆ ಹೊರಾಂಗಣ ಚಲನಚಿತ್ರ ಪ್ರದರ್ಶನಕ್ಕಿರುವ ಊದಿ ಉಬ್ಬಿಸಬಹುದಾದ ಪರದೆಗಳು (ಹೊರಾಂಗಣ ಚಿತ್ರಮಂದಿರ).[೨]

ಚಿತ್ರಮಂದಿರದಲ್ಲಿ ಪ್ರಕ್ಷೇಪಣ ಪರದೆ

ಉಲ್ಲೇಖಗಳು ಬದಲಾಯಿಸಿ