ಪ್ರಕಾಶ್ ಸಿಂಗ್ ಬಾದಲ್

ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು

ಪ್ರಕಾಶ್ ಸಿಂಗ್ ಬಾದಲ್ (ಹುಟ್ಟು ೮ ಡಿಸೆಂಬರ್ ೧೯೨೭) ೨೦೦೭ರಿಂದ ೧೧ ಮಾರ್ಚ್ ೨೦೧೭ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೧೯೭೦-೧೯೭೧,೧೯೭೭-೧೯೮೦ ಮತ್ತು ೧೯೯೭-೨೦೦೨ರ ಅವಧಿಯಲ್ಲಿ ಕೂಡ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫-೨೦೦೮ರ ಅವಧಿಗೆ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷರಾಗಿಯೂ ಇದ್ದರು. ೨೦೦೮ರಿಂದ ತಮ್ಮ ಪುತ್ರ ಮತ್ತು ಉಪ-ಮುಖ್ಯಮಂತ್ರಿ ಸುಖ್‌ಬೀರ ಸಿಂಗ್ ಬಾದಲ್‌ರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ‌ಗೈದರು.[][] ಶಿರೋಮಣಿ ಅಕಾಲಿ ದಳ ಪಕ್ಷದ ಮುಖಂಡರಾದ ಕಾರಣ ಗುರುದ್ವಾರ ಪ್ರಬಂಧಕ ಕಮಿಟಿಯ ಕಾರ್ಯ ನಿರ್ವಹಣೆಯಲ್ಲಿ ಬಾದಲ್‌ರಿಗೆ ಹೆಚ್ಚು ಪ್ರಭಾವವುಂಟು. [] ದೆಹಲಿ ಸಿಖ್ ಪ್ರಬಂಧಕ ಕಮಿಟಿಯ ಜವಾಬ್ದಾರಿ ಕೂಡ ಬಾದಲ್‌ರ ಹೆಗಲ ಮೇಲಿದೆ.

ಪ್ರಕಾಶ್ ಸಿಂಗ್ ಬಾದಲ್

ಹಾಲಿ
ಅಧಿಕಾರ ಸ್ವೀಕಾರ 
೧ ಮಾರ್ಚ್ ೨೦೦೭ ರಿಂದ ೧೧ ಮಾರ್ಚ್ ೨೦೧೭
ರಾಜ್ಯಪಾಲ ಜ. ಸುನೀತ್ ರಾಡ್ರಿಗಸ್
ಶಿವರಾಜ್ ಫಾಟೀಲ್
ಕಪ್ತಾನ್ ಸಿಂಗ್ ಸೋಲಂಕಿ
ಪೂರ್ವಾಧಿಕಾರಿ ಕ್ಯಾ. ಅಮರಿಂದರ್ ಸಿಂಗ್
ಅಧಿಕಾರ ಅವಧಿ
೨೭ ಮಾರ್ಚ್ ೧೯೭೦ – ೧೪ ಜೂನ್ ೧೯೭೦
ರಾಜ್ಯಪಾಲ ಡಿ._ಸಿ._ಪಾವಟೆ
ಪೂರ್ವಾಧಿಕಾರಿ ಗುರ್ನಾಮ್ ಸಿಂಗ್
ಉತ್ತರಾಧಿಕಾರಿ ರಾಷ್ಟ್ರಪತಿ ಆಡಳಿತ
ಅಧಿಕಾರ ಅವಧಿ
೨೦ ಜೂನ್ ೧೯೭೭ – ೧೭ ಫ಼ೆಬ್ರವರಿ ೧೯೮೦
ರಾಜ್ಯಪಾಲ ಮಹೇಂದ್ರ ಮೋಹನ್ ಚೌಧರಿ
ರಂಜಿತ ಸಿಂಗ ನರೂಲ
ಜೈಸುಖ್ ಲಾಲ್ ಹಾಥಿ
ಪೂರ್ವಾಧಿಕಾರಿ ರಾಷ್ಟ್ರಪತಿ ಆಡಳಿತ
ಉತ್ತರಾಧಿಕಾರಿ ರಾಷ್ಟ್ರಪತಿ ಆಡಳಿತ
ಅಧಿಕಾರ ಅವಧಿ
೧೨ ಫ಼ೆಬ್ರವರಿ ೧೯೯೭ – ೨೬ ಫ಼ೆಬ್ರವರಿ ೨೦೦೨
ರಾಜ್ಯಪಾಲ ಲೆ ಜ ಬಿ ಕೆ ಎನ್ ಛ್ಹಿಬ್ಬರ್
ಲೆ ಜ ಜೆ ಎಫ಼್ ಆರ್ ಜೇಕಬ್
ಪೂರ್ವಾಧಿಕಾರಿ ರಾಜಿಂದರ್ ಕೌಲ್ ಭಟ್ಟಲ್
ಉತ್ತರಾಧಿಕಾರಿ ಕ್ಯಾ. ಅಮರಿಂದರ್ ಸಿಂಗ್
ವೈಯಕ್ತಿಕ ಮಾಹಿತಿ
ಜನನ (1927-12-08) ೮ ಡಿಸೆಂಬರ್ ೧೯೨೭ (ವಯಸ್ಸು ೯೭)
ಅಬುಲ್ ಖುರಾನ, Punjab, British India
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಶಿರೋಮಣಿ ಅಕಾಲಿ ದಳ
ಇತರೆ ರಾಜಕೀಯ
ಸಂಲಗ್ನತೆಗಳು
National Democratic Alliance
ಸಂಗಾತಿ(ಗಳು) ಸುರೀಂದರ್ ಜಕೌರ್(೧೯೩೮–೨೦೧೧)
ಮಕ್ಕಳು ಸುಖ್‌ಬೀರ ಸಿಂಗ್ ಬಾದಲ್
ಪ್ರಣೀತ್ ಕೌರ್
ವಾಸಸ್ಥಾನ ಚಂಢೀಗಢ, ಭಾರತ
ಉದ್ಯೋಗ ರಾಜಕಾರಣಿ

೨೦೧೫ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪ್ರಕಾಶ್ ಸಿಂಗ್ ಬಾದಲ್‌ರಿಗೆ ಲಭಿಸಿದೆ.

ಪ್ರಕಾಶ್ ಸಿಂಗ್ ಬಾದಲ್ ಅಬುಲ್ ಖುರಾನ ಎಂಬ ಗ್ರಾಮದಲ್ಲಿ ೮ ಡಿಸೆಂಬರ್ ೧೯೨೭ರಂದು ಜನಿಸಿದರು. ಧಿಲ್ಲೋನ್ ಜಾಟ್ ವರ್ಗಕ್ಕೆ ಸೇರಿದ ಪ್ರಕಾಶ್ ಸಿಂಗ್ ಬಾಲ್ಯದಿಂದ ನಾಯಕತ್ವದ ಗುಣ ಪ್ರದರ್ಶಿಸುತ್ತಿದ್ದರು.[][] He graduated from the Forman Christian College in Lahore.[]

ಬಾದಲ್ ಗ್ರಾಮದ ಸರಪಂಚರಾಗಿ ೧೯೪೭ರಲ್ಲಿ ರಾಜಕೀಯ ಜೀವನ ಶುರು ಮಾಡಿದ ಪ್ರಕಾಶ್ ಸಿಂಗ್ , ಲಂಬಿ ಗ್ರಾಮದ ಬ್ಲಾಕ್ ಕಮಿಟಿಯ ಚೇರ್‌ಮನ್ ರಾಗಿ ನಿಯುಕ್ತಿಗೊಂಡರು. ೧೯೫೭ರ ಚುನಾವಣೆಯಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.[] ೧೯೬೯ರಲ್ಲಿ ಮರುಆಯ್ಕೆಯಾದ ಪ್ರಕಾಶ್ ಸಿಂಗ್ ಸಮಾಜ-ಕಲ್ಯಾಣ, ಪಂಚಾಯ್ತಿರಾಜ್, ಪಶುಸಂಗೋಪನೆ, ಜಲಚರ ಸಚಿವರಾಗಿ ನಿಯುಕ್ತಿಗೊಂಡರು.[] ೧೯೭೨,೧೯೮೦ ಮತ್ತು ೨೦೦೨ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ೨೯೯೨ರ ಚುನಾವಣೆಯನ್ನು ಶಿರೋಮಣಿ ಅಕಾಲಿ ದಳ ಪಕ್ಷ ಬಹಿಷ್ಕರಿದ್ದ ಕಾರಣ ಚುನಾವಣೆಗೆ ನಿಲ್ಲದ ಪ್ರಕಾಶ್ ಸಿಂಗ್, ಒಟ್ಟು ೧೦ ಬಾರಿ ಶಾಸಕರಾಗಿ ಆಯ್ಕೆಯಾಗೊದ್ದಾರೆ.[][] ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಉಲ್ಲೇಖಗಳು

ಬದಲಾಯಿಸಿ
  1. Bains, Satinder (31 January 2008). "Sukhbir Badal becomes youngest president of Shiromani Akali Dal". Punjab Newsline. Archived from the original on 28 ನವೆಂಬರ್ 2010. Retrieved 10 December 2010.
  2. Badal Jr. is Akali president. Thehindu.com (1 February 2008). Retrieved on 2015-10-17.
  3. SAD-Sant Samaj combine sweeps SGPC elections. Tribuneindia.com. Retrieved on 17 October 2015.
  4. Mohan, Archis (31 January 2012). "Close race for Badal & rival". The Telegraph. Calcutta, India.
  5. Bakshi, S.R. Parkash Singh Badal:Chief Minister of Punjab. APH Publishing Corporation, 1998, p. 11.
  6. Gopal, Navjeevan (15 March 2012). "Literate, under middle, ninth passed all in new cabinet". Indian Express. Retrieved 2 June 2014.
  7. ೭.೦ ೭.೧ "The grand old man of Akali politics" Archived 2013-10-10 ವೇಬ್ಯಾಕ್ ಮೆಷಿನ್ ನಲ್ಲಿ., CNN-IBN, 2 March 2007.
  8. Punjab Polls 2012. Tribuneindia.com (26 December 2011). Retrieved on 17 October 2015.
  9. Parkash Singh Badal. pbplanning.gov.in.