ಪ್ರಕಾಶ್ ಪಿ. ಕಾರಾಟ್
ಪ್ರೊ. ಪ್ರಕಾಶ್ ಪ್ರೇಮ್ ಕುಮಾರ್ ಕಾರಾಟ್ ರವರು ವಿಜ್ಞಾನ ಸಂಶೋಧಕರು, ಘನ ಭೌತ ವಿಜ್ಞಾನ, ದ್ರವ ಸ್ಫಟಿಕ ವಿಜ್ಞಾನದಲ್ಲಿ ಪರಿಣತರು ಮತ್ತು ಭೌತ ಶಾಸ್ತ್ರ ಪ್ರಾಧ್ಯಾಪಕರು. ಕಳೆದ ೫೫ ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭೌತಶಾಸ್ತ್ರದ ಶಾಖೆಗಳಾದ ಕಾಂತೀಯ ವಸ್ತುಗಳು ಮತ್ತು ದ್ರವ ಸ್ಫಟಿಕಗಳ ಕುರಿತು ಹೆಚ್ಚಿನ ಸಂಶೋಧನೆ ಮಾಡಿದ್ದಾರೆ. ಇವರ ತಾಯ್ನುಡಿ ಕನ್ನಡ.
ಪ್ರಕಾಶ್ ಪಿ. ಕಾರಾಟ್ | |
---|---|
ಜನನ | ಸೆಪ್ಟೆಂಬರ್ ೩೦, ೧೯೪೪ ಮಂಗಳೂರು |
ವಾಸ | ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | ಮಂಗಳೂರು ವಿಶ್ವವಿದ್ಯಾಲಯ, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಸಂತ ಅಲೋಸಿಯಸ್ ಕಾಲೇಜು ಮಂಗಳೂರು |
ಅಭ್ಯಸಿಸಿದ ಸಂಸ್ಥೆ | ಮೈಸೂರು ವಿಶ್ವವಿದ್ಯಾಲಯ, ರಾಮನ್ ಸಂಶೋಧನಾ ಸಂಸ್ಥೆ ಬೆಂಗಳೂರು |
ಡಾಕ್ಟರೆಟ್ ಸಲಹೆಗಾರರು | ಎಸ್. ಚಂದ್ರಶೇಖರ್[೧] |
ಡಾಕ್ಟರೆಟ್ ವಿದ್ಯಾರ್ಥಿಗಳು | ಡಿ.ಸುಧಾಕರ್ ರಾವ್ [೨], ಜೆ. ಇಂದಿರಾ, ಬಿ. ಪಾರ್ವತಿ[೩], ಹರೀಶ ಕುಮಾರ್ [೪] |
ಹುಟ್ಟು
ಬದಲಾಯಿಸಿಪ್ರಕಾಶ್ ಪಿ. ಕಾರಾಟ್ ರವರು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಲ್ಮಠದಲ್ಲಿ ೧೯೪೪ ಸಪ್ಟಂಬರ ೩೦ ರಂದು ಜನಿಸಿದರು. ಈ. ಎಸ್. ಕಾರಟ್ ಮತ್ತು ಸಿ. ಕಾರಾಟ್ ರವರು ಇವರ ಹೆತ್ತವರು.
ವಿದ್ಯಾಭ್ಯಾಸ
ಬದಲಾಯಿಸಿಪ್ರಕಾಶ್ ಪ್ರೇಮ್ ಕುಮಾರ್ ಕಾರಾಟ್ ರವರು ಮಂಗಳೂರಿನ ಜ್ಯೋತಿ ವೃತ್ತದಲ್ಲಿರುವ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ (ಈಗ ಸರಕಾರಿ ಬಾಲಕಿಯರ ಶಾಲೆ) ಒಂದರಿಂದ ಮೂರನೆಯ ತರಗತಿವರೆಗೆ, ಅನಂತರ ಅಶೋಕನಗರದಲ್ಲಿನ ಮುನಿಸಿಪಾಲಿಟಿ ಶಾಲೆಯಲ್ಲಿ ನಾಲ್ಕು ಮತ್ತು ಐದನೆಯ ತರಗತಿ ಅಭ್ಯಾಸ ಮಾಡಿದರು. ಬಳಿಕ ಮಂಗಳೂರಿನ ರಥಬೀದಿಯಲ್ಲಿರುವ ಬಿ. ಇ. ಎಮ್ ಹೈಸ್ಕೂಲಿನಲ್ಲಿ ಆರರಿಂದ ಹತ್ತನೆಯ ತರಗತಿವರೆಗೆ ಕಲಿತರು. ಆಮೇಲೆ ಮಂಗಳೂರಿನ ಸರಕಾರಿ ಕಾಲೇಜಿ (ಈಗ ವಿಶ್ವವಿದ್ಯಾಲಯ ಕಾಲೇಜು) ನಲ್ಲಿ ಪಿಯುಸಿ ಮುಗಿಸಿ ಬಿ.ಎಸ್ಸಿ. ಪದವಿ ಪಡೆದರು.
ಮುಂದಕ್ಕೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತ ಶಾಸ್ತ್ರದಲ್ಲಿ ಎಮ್. ಎಸ್ಸಿ . ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರೊ. ಎಸ್. ಚಂದ್ರಶೇಖರ್ [೫]ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿರುತ್ತಾರೆ.
ಹುದ್ದೆಗಳು
ಬದಲಾಯಿಸಿಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪಾನ್ಯಾಸಕರಾಗಿ ೧೯೬೭ ರಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಅನಂತರ ಬೆಂಗಳೂರಿನ ಪ್ರಸಿದ್ಧ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಪ್ರಸಿದ್ಧ ಎಸ್. ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ "Electric and Magnetic Field Effects in Liquid crystals" ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪದೆದರು. ಅನಂತರ ೧೯೮೨ ರಲ್ಲಿ ಮಂಗಳೂರಿನ ಮಂಗಳ ಗಂಗೋತ್ರಿ ಯಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ, ರೀಡರ್, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಹೀಗೆ ಬೇರೆ-ಬೇರೆ ಹುದ್ದೆಯಲ್ಲಿ ೨೩ ವರ್ಷಗಳ ಕಾಲ (೧೯೮೨ ರಿಂದ ೨೦೦೪) ಅಧ್ಯಾಪನ, ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
- ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ವಿಶೇಷ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿರುವರು (೨೦೧೨ ರಿಂದ ೨೦೨೧).
- ಮಂಗಳೂರು ವಿಶ್ವವಿದ್ಯಾಲಯ,ಪರೀಕ್ಷಾಂಗ ಕುಲಸಚಿವರಾಗಿ ಕಾರ್ಯನಿರ್ವಹಿಸಿದರು (೧೯೯೮-೧೯೯೯).
- ಮಂಗಳೂರು ವಿಶ್ವವಿದ್ಯಾನಿಲಯ ಭೌತಶಾಸ್ತ್ರ ಅಧ್ಯಾಪಕರ ಸಂಘದ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಸಿದ್ದಾರೆ.
- ಮಂಗಳೂರು ವಿಶ್ವವಿದ್ಯಾಲಯದ ಗಣಕಶಾಸ್ತ್ರ ವಿಭಾಗದ ಸಂಯೋಜಕರಾಗಿ ಕೆಲಸ ಮಾಡಿದರು (೧೯೯೬-೧೯೯೭).
ಸಂಶೋಧನೆ
ಬದಲಾಯಿಸಿದ್ರವ ಸ್ಫಟಿಕ ವಿಜ್ಞಾನದಲ್ಲಿ ಸಂಶೊಧನೆ ಮಾಡಿದ ಮೊದಲಿಗರ ಸಾಲಿನಲ್ಲಿ ಸೇರುವರು.[೬] ಅವರು ನಾಲ್ಕು ವಿದ್ಯಾರ್ಥಿಗಳಿಗೆ ಪಿಎಚ್. ಡಿ. ಪದವಿಯ ಮಾರ್ಗದರ್ಶನ ಮಾಡಿದ್ದಾರೆ ಮತ್ತು ಆರು ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿಗೆ ಮಾರ್ಗದರ್ಶನ ಮಾಡಿದ್ದಾರೆ.
ಪ್ರಸಿದ್ಧ ವಿದ್ಯಾರ್ಥಿಗಳು
ಬದಲಾಯಿಸಿಸಾವಿರಾರು ವಿದ್ಯಾರ್ಥಿಗಳ ಮೆಚ್ಛಿನ ಶಿಕ್ಷಕರಾದ ಕಾರಟ್ ರವರು ಪ್ರೊ. ವೈ. ಎಸ್ . ಮಯ್ಯ [೭], ಡಾ. ಯು. ಬಿ. ಪವನಜ, ಡಾ. ದೀಪಾ ರಘು [೮] , ಪ್ರೊ. ಮಂಜುನಾಥ ಪಟ್ಟಾಭಿ [೯], ಪ್ರೊ. ಪ್ರಕಾಶ್ ಕಾಮತ್ [೧೦], ಪ್ರೊ.ಎಸ್. ಎಮ್. ಧರ್ಮಪ್ರಕಾಶ್[೧೧], ಪ್ರೊ. ಟಿ. ಎಸ್ . ಮಹೇಶ್ [೧೨] ಡಾ. ವಿ. ರಾಧಾಕೃಷ್ಣ (ಭಾರತೀಯ ಬಾಹ್ಯಾಕಾಶ ಸಂಸ್ಥೆ), ಡಾ.ರೇಖಾ ರಾವ್ (ಭಾಭಾ ಅಣು ಸಂಶೋಧನಾ ಕೇಂದ್ರ) [೧೩] ರಂತಹ ಪ್ರಸಿದ್ಧ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ್ದಾರೆ.
ಗೌರವಗಳು
ಬದಲಾಯಿಸಿ- ಪ್ರೊ. ಎನ್. ವಿ. ಮಧುಸೂದನ ಮತ್ತು ಬಿ. ಕೆ. ಸದಾಶಿವರವರ ಜೊತೆಯಲ್ಲಿ ಸಂಶೋಧನೆಯ ಕೆಲಸ ಮಾಡುವ ಅವಕಾಶ[೧೪], [೧೫]
- ವಿದ್ಯಾರ್ಥಿಗಳಿಂದ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿನಿಧಿ ಉಪನ್ಯಾಸದ ಸ್ಥಾಪನೆ.[೧೬]
ಪ್ರೊ. ಪ್ರಕಾಶ್ ಪಿ. ಕರಾಟ್ ದತ್ತಿನಿಧಿ ಉಪನ್ಯಾಸ ನೀಡಿದವರು
ಬದಲಾಯಿಸಿ- ೨೦೧೫: ಪ್ರೊ. ಎನ್.ವಿ. ಮಧುಸೂದನ , ರಾಮನ್ ಸಂಶೋಧನಾ ಸಂಸ್ಥೆ ಬೆಂಗಳೂರು. [೧೭]
- ೨೦೧೬: ಪ್ರೊ. ಎಂ.ವಿ. ಸತ್ಯನಾರಾಯಣ , ಐ ಐ ಟಿ. ಮದ್ರಾಸ್
- ೨೦೧೭: ಪ್ರೊ. ವೈ.ಸ್. ಮಯ್ಯಾ , ಐ. ಐ .ಟಿ. ಮುಂಬಯಿ [೧೮]
- ೨೦೧೮: ಡಾ. ಟಿ. ಜಿ. ರಮೇಶ್ , ಐ ಸಿ. ಟಿ. ಎಸ್ . ಬೆಂಗಳೂರು
- ೨೦೧೯: ಪ್ರೊ. ಪಿ. ಎಸ್. ಅನಿಲ್ ಕುಮಾರ್, ಭಾರತೀಯ ವಿಜ್ಞಾನ ಮಂದಿರ ಬೆಂಗಳೂರು[೧೯]
- ೨೦೨೦: ಪ್ರೊ. ಟಿ. ಎಸ್ . ಮಹೇಶ್ , ಐ. ಐ . ಎಸ್ . ಇ . ಆರ್ ಪುಣೆ [೨೦]
- ೨೦೨೧: ಡಾ . ಟಿ. ಏನ್ . ನಾರಾಯಣನ್ , ಟಿ.ಎಫ್ ಐ ಆರ್ , ಹೈದೆರಾಬಾದ್[೨೧]
- ೨೦೨೨: ಡಾ . ವಿ. ರಾಧಾಕೃಷ್ಣ , ಭಾರತೀಯ ಬಾಹ್ಯಾಕಾಶ ಸಂಸ್ಥೆ ಬೆಂಗಳೂರು[೨೨]
- ೨೦೨೩:ಡಾ. ನಾಗೆಶ್ ಎಸ್ ಕಿಣಿ, ಚೀಫ಼್ ಟೆಕ್ನಾಲೊಜಿ ಅಫ಼ಿಸರ್, ವಿಮನೊ, ಬೆಂಗಳೂರು [೨೩]
- ೨೦೨೪:ಪ್ರೊ.ಅರುಮೊಗಮ್ ತಮಿಲವೆಲ್, ಟಿ.ಎಫ್ ಐ ಆರ್,ಮುಂಬಾಯಿ[೨೪]
ಉಲ್ಲೇಖ
ಬದಲಾಯಿಸಿ- ↑ https://en.wikipedia.org/wiki/Sivaramakrishna_Chandrasekhar
- ↑ https://www.linkedin.com/in/sudhakar-rao-59915446/?originalSubdomain=in
- ↑ https://mangaloreuniversity.ac.in/sites/default/files/Award%20from%201982-.pdf
- ↑ https://vidwan.inflibnet.ac.in/profile/131246
- ↑ [[೧]]
- ↑ http://dspace.rri.res.in/bitstream/2289/6590/1/Annual_Report_1976-77.pdf
- ↑ https://www.linkedin.com/in/y-s-mayya-321104131/?originalSubdomain=in
- ↑ https://www.linkedin.com/in/deepa-raghu-5367715b/
- ↑ https://mangaloreuniversity.ac.in/drmanjunatha-pattabhi-0
- ↑ https://vidwan.inflibnet.ac.in/profile/172916
- ↑ https://mangaloreuniversity.ac.in/dr-s-m-dharmaprakash
- ↑ https://www.linkedin.com/in/t-s-mahesh-4b5029195/?originalSubdomain=in
- ↑ https://www.linkedin.com/in/rekha-rao-5a78506a/?originalSubdomain=in
- ↑ https://www.tandfonline.com/doi/abs/10.1080/00268947608084830
- ↑ https://www.tandfonline.com/doi/abs/10.1080/15421407708084487
- ↑ https://timesofindia.indiatimes.com/home/N-V-Madhusudana-scientist-emeritus-from-Raman-Research-Institute-Bengaluru-will-deliver-the-Prof-Prakash-P-Karat-Endowment-Lecture-on-Elastic-Properties-of-Liquid-Crystals-at-Eric-Mathias-hall-St-Aloysius-College-Mangaluru-on-February-21-/articleshow/46296497.cms
- ↑ https://timesofindia.indiatimes.com/home/N-V-Madhusudana-scientist-emeritus-from-Raman-Research-Institute-Bengaluru-will-deliver-the-Prof-Prakash-P-Karat-Endowment-Lecture-on-Elastic-Properties-of-Liquid-Crystals-at-Eric-Mathias-hall-St-Aloysius-College-Mangaluru-on-February-21-/articleshow/46296497.cms?from=mdr
- ↑ "ಆರ್ಕೈವ್ ನಕಲು". Archived from the original on 2021-06-12. Retrieved 2022-03-21.
- ↑ https://www.daijiworld.com/news/newsDisplay.aspx?newsID=563019
- ↑ https://newskarnataka.com/events/campus/st-aloysius-college-hosts-prof-prakash-p-karat-endowment-lecture-%C2%96-2020/
- ↑ "ಆರ್ಕೈವ್ ನಕಲು". Archived from the original on 2021-09-28. Retrieved 2022-03-21.
- ↑ https://english.upayuktha.com/2022/03/prof-prakash-p-karat-endowment-lecture.html
- ↑ https://konkancatholic.com/sac-to-hold-prof-prakash-p-karat-endowment-lecture-2023/
- ↑ "ಆರ್ಕೈವ್ ನಕಲು". Archived from the original on 2024-05-29. Retrieved 2024-05-29.