ಪೇ ಪರ್ ಕ್ಲಿಕ್ (PPC ) ಅಂತರಜಾಲ ಜಾಹೀರಾತು ಮಾದರಿಯಾಗಿದ್ದು, ಅಂತರಜಾಲ ತಾಣಗಳಲ್ಲಿ ಬಳಸಲಾಗುತ್ತದೆ. ಜಾಹೀರಾತುದಾರರು ತಮ್ಮ ಜಾಹೀರಾತು ಕ್ಲಿಕ್ ಆದಾಗ ಮಾತ್ರ ಅವರ ಸೇವಾ ಕಂಪ್ಯೂಟರ್‌(ಹಾಸ್ಟ್)ಗೆ ಹಣ ಪಾವತಿ ಮಾಡುತ್ತಾರೆ. ಸರ್ಚ್ ಎಂಜಿನ್(ಹುಡುಕು ಎಂಜಿನ್)ನೊಂದಿಗೆ, ಜಾಹೀರಾತುದಾರರು ತಮ್ಮ ಗುರಿಯಿರಿಸಿದ ಮಾರುಕಟ್ಟೆಗೆ ಪ್ರಸ್ತುತವಾದ ಮುಖ್ಯಪದಗುಚ್ಛಗಳಿಗೆ ಸಾಮಾನ್ಯವಾಗಿ ಬಿಡ್ ಮಾಡುತ್ತಾರೆ. ಹೂರಣ ತಾಣಗಳು(ಕಂಟೆಂಟ್ ಸೈಟ್‌ಗಳು)ಸಾಮಾನ್ಯವಾಗಿ ಬಿಡ್ಡಿಂಗ್ ವ್ಯವಸ್ಥೆ ಬಳಸುವ ಬದಲಿಗೆ ಪ್ರತಿ ಕ್ಲಿಕ್‌ಗೆ ನಿಗದಿತ ದರವನ್ನು ವಿಧಿಸುತ್ತದೆ.

ಪ್ರತಿ ಕ್ಲಿಕ್‌ ವೆಚ್ಚ (CPC)ವು ಹುಡುಕು ಎಂಜಿನ್‌ಗಳಿಗೆ ಮತ್ತು ಇತರ ಅಂತರಜಾಲ ಪ್ರಕಾಶಕರಿಗೆ ಜಾಹೀರಾತುದಾರರು ಅವರ ಜಾಹೀರಾತಿಗೆ ಸಂಬಂಧಿಸಿದ ಒಂದು ಕ್ಲಿಕ್‌ಗಾಗಿ ನೀಡುವ ಮೊತ್ತವಾಗಿದ್ದು, ಅದು ಜಾಹೀರಾತುದಾರರ ಅಂತರಜಾಲ ತಾಣಕ್ಕೆ ವೀಕ್ಷಕನನ್ನು ಒಯ್ಯುತ್ತದೆ.

ಒಂದು ಅಂತರಜಾಲ ತಾಣಕ್ಕೆ ಅತ್ಯಧಿಕ ಪ್ರಮಾಣದ ಟ್ರಾಫಿಕ್(ವೀಕ್ಷಕ) ಉಂಟುಮಾಡುವ ಸಾಮಾನ್ಯ ಪೋರ್ಟಲ್‌ಗೆ ವಿರುದ್ಧವಾಗಿ, PPC ಅಫಿಲಿಯೇಟ್(ಸಹಾಯಕ) ಮಾದರಿಯನ್ನು ಅನುಷ್ಠಾನಕ್ಕೆ ತರುತ್ತದೆ. ಜನರು ಸರ್ಫ್ ಮಾಡುವ ಕಡೆಯಲ್ಲೆಲ್ಲ ಖರೀದಿ ಅವಕಾಶಗಳನ್ನು ಅದು ಒದಗಿಸುತ್ತದೆ. ಸಹಾಯಕ ಪಾಲುದಾರ ತಾಣಗಳಿಗೆ ಹಣಕಾಸು ಪ್ರೋತ್ಸಾಹ ಧನವನ್ನು(ಆದಾಯದ ಶೇಕಡಾವಾರು ರೂಪದಲ್ಲಿ) ಪ್ರಸ್ತಾಪಿಸುವ ಮೂಲಕ ಅದನ್ನು ಸಾಧಿಸುತ್ತದೆ. ಅಫಿಲಿಯೇಟ್(ಸಹಾಯಕ ತಾಣಗಳು)ವ್ಯಾಪಾರಿಗೆ ಪರ್ಚೇಸ್-ಪಾಯಿಂಟ್ ಕ್ಲಿಕ್-ಥ್ರೂ(ಕ್ಲಿಕ್ ಮಾಡುವ ಮೂಲಕ ಖರೀದಿ ತಾಣ) ಒದಗಿಸುತ್ತದೆ. ಇದು ನಿರ್ವಹಣೆಗೆ ಹಣ ಪಾವತಿ ಮಾಡುವ ಮಾದರಿಯಾಗಿದೆ. ಸಹಾಯಕ ತಾಣ ಮಾರಾಟವನ್ನು ಹುಟ್ಟು ಹಾಕದಿದ್ದರೆ, ವ್ಯಾಪಾರಿಗೆ ಯಾವುದೇ ವೆಚ್ಚವನ್ನು ಸಂಕೇತಿಸುವುದಿಲ್ಲ. ಬ್ಯಾನರ್ ವಿನಿಮಯ, ಪೇ ಪರ್ ಕ್ಲಿಕ್ ಮತ್ತು ಆದಾಯ ಹಂಚಿಕೆ ಕಾರ್ಯಕ್ರಮಗಳ ವ್ಯತ್ಯಾಸಗಳನ್ನು ಒಳಗೊಂಡಿದೆ.

ಮುಖ್ಯಪದದ ಕ್ವೈರಿ(ಕೋರಿಕೆ) ಜಾಹೀರಾತುದಾರರ ಮುಖ್ಯಪದ(ಕೀ ವರ್ಡ್)ಪಟ್ಟಿಗೆ ಹೋಲಿಕೆಯಾದರೆ ಅಥವಾ ಹೂರಣ(ಕಂಟೆಂಟ್)ತಾಣವು ಪ್ರಸ್ತುತ ಕಂಟೆಂಟ್ ಪ್ರದರ್ಶಿಸಿದ ಸಂದರ್ಭದಲ್ಲಿ PPC ಜಾಹೀರಾತುಗಳನ್ನು ಬಳಸುವ ಅಂತರಜಾಲ ತಾಣಗಳು ಜಾಹೀರಾತನ್ನು ಪ್ರದರ್ಶಿಸುತ್ತವೆ. ಇಂತಹ ಜಾಹೀರಾತುಗಳನ್ನು ಪ್ರಾಯೋಜಿತ ಕೊಂಡಿ ಗಳು ಅಥವಾ ಪ್ರಾಯೋಜಿತ ಜಾಹೀರಾತು ಗಳು ಎಂದು ಕರೆಯಲಾಗುತ್ತದೆ.ಇವು ಹುಡುಕುವ ಎಂಜಿನ್(ಸರ್ಚ್ ಎಂಜಿನ್)ನ ಫಲಿತಾಂಶ ಪುಟಗಳ ಆರ್ಗಾನಿಕ್ ರಿಸಲ್ಟ್ಸ್(ಪಟ್ಟಿಗಳು)ಮೇಲೆ ಅಥವಾ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತದೆ. ಅಥವಾ ಕಂಟೆಂಟ್ ಪುಟದಲ್ಲಿ ವೆಬ್ ಡೆವಲಪರ್ ಆಯ್ಕೆ ಮಾಡಿದ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ.[]

PPC ಒದಗಿಸುವವರಲ್ಲಿ, ಗೂಗಲ್ ಆಡ್‌ವರ್ಡ್ಸ್, ಯಾಹೂ ಸರ್ಚ್ ಮಾರ್ಕೆಟಿಂಗ್ ಮತ್ತು ಮೈಕ್ರೋಸಾಫ್ಟ್ ಆಡ್‌ಸೆಂಟರ್ ಮೂರು ಅತೀ ದೊಡ್ಡ ಜಾಲ ನಿರ್ವಾಹಕಗಳಾಗಿದ್ದು, ಎಲ್ಲ ಮೂರೂ ಬಿಡ್ ಆಧಾರದ ಮಾದರಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಕ್ಲಿಕ್‌ಗೆ ವೆಚ್ಚ (CPC)ವು ಹುಡುಕುವ ಎಂಜಿನ್ ಅವಲಂಬಿಸಿ ಮತ್ತು ನಿರ್ದಿಷ್ಟ ಮುಖ್ಯಪದಕ್ಕೆ ಸ್ಪರ್ಧೆಯ ಮಟ್ಟವನ್ನು ಅವಲಂಬಿಸಿ ವ್ಯತ್ಯಾಸ ಹೊಂದಿರುತ್ತದೆ .[]

PPCಜಾಹೀರಾತು ಮಾದರಿಯು ಕ್ಲಿಕ್ ಫ್ರಾಡ್ ಮೂಲಕ ನಿಂದನೆಗೆ ತೆರೆದಿರುತ್ತದೆ. ಗೂಗಲ್ ಮತ್ತಿತರರು ಸ್ಪರ್ಧಿಗಳಿಂದ ಅಥವಾ ಭ್ರಷ್ಟ ವೆಬ್ ಡೆವಲಪರ್‌ಗಳ ನಿಂದನಾತ್ಮಕ ಕ್ಲಿಕ್‌ಗಳಿಂದ ರಕ್ಷಿಸಿಕೊಳ್ಳಲು ಸ್ವಯಂಚಾಲಿತ ವ್ಯವಸ್ಥೆಗಳನ್ನು[] ಅಳವಡಿಸಿವೆ.[]

ಪ್ರತಿ ಕ್ಲಿಕ್‌ಗೆ ಬೆಲೆಯ ನಿರ್ಧಾರ

ಬದಲಾಯಿಸಿ

ಪ್ರತಿ ಕ್ಲಿಕ್‌ಗೆ ಬೆಲೆಯನ್ನು ನಿರ್ಧರಿಸಲು ಎರಡು ಮುಖ್ಯ ಮಾದರಿಗಳಿದ್ದು, ಅವು ಫ್ಲಾಟ್-ರೇಟ್ ಮತ್ತು ಬಿಡ್ ಆಧಾರಿತವಾಗಿವೆ. ಎರಡೂ ಪ್ರಕರಣಗಳಲ್ಲಿ ಜಾಹೀರಾತುದಾರರು ಗೊತ್ತಾದ ಮೂಲದಿಂದ ಕ್ಲಿಕ್‌ನ ಸಂಭಾವ್ಯ ಮೌಲ್ಯವನ್ನು ಪರಿಗಣಿಸುತ್ತಾರೆ. ಅವನ ಅಥವಾ ಅವಳ ಜಾಲತಾಣಕ್ಕೆ ಯಾವ ರೀತಿಯ ವ್ಯಕ್ತಿಯನ್ನು ವೀಕ್ಷಕರಾಗಿ ಜಾಹೀರಾತುದಾರ ನಿರೀಕ್ಷಿಸುತ್ತಾನೆ ಮತ್ತು ಆ ಜಾಹೀರಾತಿನ ವೀಕ್ಷಣೆಯಿಂದ ಆದಾಯ ರೂಪದಲ್ಲಿ ಜಾಹೀರಾತುದಾರನಿಗೆ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಏನು ಲಾಭವಾಗುತ್ತದೆ ಎನ್ನುವುದನ್ನು ಈ ಮೌಲ್ಯವು ಆಧರಿಸಿದೆ. ಜಾಹೀರಾತು ಗುರಿಯ ಇತರ ರೂಪಗಳು ಮುಖ್ಯಪದ ಮತ್ತು PPCಅಭಿಯಾನಗಳಲ್ಲಿ ಪಾತ್ರವಹಿಸುವ ಅಂಶಗಳು, ಗುರಿಯ ಹಿತಾಸಕ್ತಿ(ಶೋಧ ಯಂತ್ರದಲ್ಲಿ ನಮೂದಿಸಿರುವ ಶೋಧ ಪದದಿಂದ ಅಥವಾ ಅವರು ಬ್ರೌಸ್(ವೀಕ್ಷಣೆ)ಮಾಡುವ ಪುಟದ ಕಂಟೆಂಟ್‌ನಿಂದ ಇದನ್ನು ವ್ಯಾಖ್ಯಾನಿಸಲಾಗಿದೆ).ಇಚ್ಛೆ(ಉದಾ.ಖರೀದಿ ಮಾಡಬೇಕೊ ಅಥವಾ ಇಲ್ಲವೋ)ಸ್ಥಳ(ಬೌಗೋಳಿಕ ಗುರಿ)ಮತ್ತು ಅವರು ಬ್ರೌಸ್ ಮಾಡುವ ದಿನ ಮತ್ತು ವೇಳೆ ಒಳಗೊಂಡಿವೆ.

ಫ್ಲ್ಯಾಟ್ ದರದ PPC

ಬದಲಾಯಿಸಿ

ಫ್ಲ್ಯಾಟ್ ದರದ ಮಾದರಿಯಲ್ಲಿ ಜಾಹೀರಾತುದಾರ ಮತ್ತು ಪ್ರಕಾಶಕ ಪ್ರತೀ ಕ್ಲಿಕ್‌ಗೆ ಪಾವತಿ ಮಾಡುವ ನಿರ್ದಿಷ್ಟ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಅನೇಕ ಪ್ರಕರಣಗಳಲ್ಲಿ ಪ್ರಕಾಶಕ ದರ ಪಟ್ಟಿಯನ್ನು ಹೊಂದಿರುತ್ತಾನೆ ಮತ್ತು ಅವರ ಜಾಲತಾಣ ಅಥವಾ ಜಾಲದ ವಿವಿಧ ಪ್ರದೇಶಗಳಲ್ಲಿ CPCಯನ್ನು ಅದು ಪಟ್ಟಿ ಮಾಡುತ್ತದೆ. ಈ ವಿವಿಧ ಮೊತ್ತಗಳು ಪುಟಗಳಲ್ಲಿನ ಕಂಟೆಂಟ್‌ಗೆ ಸಾಮಾನ್ಯವಾಗಿ ಸಂಬಂಧಿಸಿದ್ದು, ಹೆಚ್ಚು ಮೌಲ್ಯಯುತ ವೀಕ್ಷಕರನ್ನು ಸೆಳೆಯುವ ಕಂಟೆಂಟ್ ಕಡಿಮೆ ಮೌಲ್ಯಯುತ ವೀಕ್ಷಕರನ್ನು ಸೆಳೆಯುವ ಕಂಟೆಂಟ್‌ಗಿಂತ ಸಾಮಾನ್ಯವಾಗಿ ಹೆಚ್ಚಿನ CPCಯನ್ನು ಹೊಂದಿರುತ್ತದೆ. ಆದಾಗ್ಯೂ, ವಿಶೇಷವಾಗಿ ಸುದೀರ್ಘ ಅಥವಾ ಹೆಚ್ಚಿನ ಮೌಲ್ಯದ ಒಪ್ಪಂದಗಳಿಗೆ ಬದ್ಧವಾಗಿರುವ ಅನೇಕ ಪ್ರಕರಣಗಳಲ್ಲಿ ಜಾಹೀರಾತುದಾರರು ಕಡಿಮೆ ದರಗಳಿಗೆ ಚರ್ಚೆ ಮಾಡಬಹುದು.

ಫ್ಲ್ಯಾಟ್ ದರದ ಮಾದರಿಯು ನಿರ್ದಿಷ್ಟವಾಗಿ ದರ ಹೋಲಿಕೆ ಸೇವೆ ಎಂಜಿನ್‌ಗಳಿಗೆ ಸಾಮಾನ್ಯವಾಗಿರುತ್ತದೆ. ಇದು ದರ ಪಟ್ಟಿಗಳನ್ನು ಪ್ರಕಟಿಸುತ್ತದೆ.[] ಆದಾಗ್ಯೂ ಈ ದರಗಳು ಕೆಲವೊಮ್ಮೆ ಕನಿಷ್ಠವಾಗಿರುತ್ತದೆ ಮತ್ತು ಜಾಹೀರಾತುದಾರರು ಹೆಚ್ಚಿನ ಗೋಚರತೆಗೆ ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ. ಈ ತಾಣಗಳು ಉತ್ಪನ್ನ ಅಥವಾ ಸೇವೆ ವರ್ಗಗಳಾಗಿ ವಿಭಾಗವಾಗಿದ್ದು, ಜಾಹೀರಾತುದಾರರು ಹೆಚ್ಚಿನ ಪ್ರಮಾಣದಲ್ಲಿ ಗೊತ್ತುಮಾಡಲು ಅವಕಾಶ ಒದಗಿಸುತ್ತದೆ. ಅನೇಕ ಪ್ರಕರಣಗಳಲ್ಲಿ ಈ ಜಾಲತಾಣಗಳ ಇಡೀ ಮುಖ್ಯ ಕಂಟೆಂಟ್ ಹಣಪಾವತಿಯ ಜಾಹೀರಾತುಗಳಾಗಿವೆ.

ಬಿಡ್ ಆಧಾರಿತ PPC

ಬದಲಾಯಿಸಿ

ಬಿಡ್ ಆಧಾರಿಕ ಮಾದರಿಯಲ್ಲಿ,ಜಾಹೀರಾತುದಾರ ಒಪ್ಪಂದಕ್ಕೆ ಸಹಿ ಹಾಕುತ್ತಾನೆ ಮತ್ತು ಇದು ಪ್ರಕಾಶಕ ಅಥವಾ ಜಾಹೀರಾತು ಜಾಲ ಆಯೋಜಿಸುವ ಖಾಸಗಿ ಹರಾಜಿನಲ್ಲಿ ಇತರೆ ಜಾಹೀರಾತುದಾರರ ವಿರುದ್ಧ ಸ್ಪರ್ಧಿಸಲು ಅವರಿಗೆ ಅವಕಾಶ ನೀಡುತ್ತದೆ. ಪ್ರತಿಯೊಬ್ಬ ಜಾಹೀರಾತುದಾರ ಗೊತ್ತಾದ ಜಾಹೀರಾತು ಸ್ಥಳಕ್ಕೆ ಕೊಡುವ ಗರಿಷ್ಠ ಮೊತ್ತದ ಬಗ್ಗೆ ಅವನು ಅಥವಾ ಅವಳು ಸೇವೆ ನೀಡುವ ಕಂಪ್ಯೂಟರ್‌(ಹಾಸ್ಟ್)ಗೆ ಮಾಹಿತಿ ನೀಡುತ್ತಾರೆ.(ಸಾಮಾನ್ಯವಾಗಿ ಮುಖ್ಯಪದ ಆಧರಿಸಿದೆ).ಹೀಗೆ ಮಾಡಲು ಅವರು ಆನ್‌ಲೈನ್ ಸಾಧನಗಳನ್ನು ಬಳಸುತ್ತಾರೆ. ಪ್ರತಿ ಬಾರಿ ವೀಕ್ಷಕ ಜಾಹೀರಾತು ಸ್ಥಳವನ್ನು ಒತ್ತಿದಾಗ ಹರಾಜು ಸ್ವಯಂಚಾಲಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಜಾಹೀರಾತು ಸ್ಥಳವು ಹುಡುಕುವ ಎಂಜಿನ್ ಫಲಿತಾಂಶ ಪುಟದ (SERP) ಭಾಗವಾಗಿದ್ದರೆ, ಬಿಡ್ ಮಾಡಿದ ಮುಖ್ಯಪದಕ್ಕೆ ಶೋಧ ನಡೆಸಿದಾಗ ಸ್ವಯಂಚಾಲಿತ ಹರಾಜು(ಆಕ್ಷನ್) ಸಂಭವಿಸುತ್ತದೆ. ಶೋಧಕರ ಬೌಗೋಳಿಕ ಸ್ಥಳ, ಶೋಧದ ದಿನ ಮತ್ತು ಕಾಲ ಮುಂತಾದವನ್ನು ಗುರಿಯಿರಿಸಿದ ಮುಖ್ಯಪದಕ್ಕೆ ಎಲ್ಲ ಬಿಡ್‌ಗಳನ್ನು ಹೋಲಿಸಿ, ನಂತರ ವಿಜೇತರನ್ನು ನಿರ್ಧರಿಸಲಾಗುತ್ತದೆ. SERPಯಲ್ಲಿ ಸಾಮಾನ್ಯವಾಗಿ ಸಂಭವಿಸುವ ಬಹು ಜಾಹೀರಾತು ಸ್ಥಳಗಳಿರುವ ಪರಿಸ್ಥಿತಿಗಳಲ್ಲಿ, ಬಹು ವಿಜೇತರು ಇರಬಹುದು. ಪುಟದಲ್ಲಿ ಅವರ ಸ್ಥಾನಗಳು ಪ್ರತಿಯೊಬ್ಬರು ಬಿಡ್ ಮಾಡಿದ ಮೊತ್ತದಿಂದ ಪ್ರಭಾವ ಹೊಂದಿರುತ್ತದೆ. ಅತ್ಯಧಿಕ ಬಿಡ್ ಮಾಡಿದ ಜಾಹೀರಾತು ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚುವರಿ ಅಂಶಗಳಾದ ಗುಣಮಟ್ಟ ಮತ್ತು ಪ್ರಸ್ತುತತೆ ಕೆಲವುಬಾರಿ ಪಾತ್ರ ವಹಿಸಬಹುದು.(ನೋಡಿ ಗುಣಮಟ್ಟ ಅಂಕ(ಕ್ವಾಲಿಟಿ ಸ್ಕೋರ್)

SERPಯಲ್ಲಿರುವ ಜಾಹೀರಾತು ಸ್ಥಳಗಳು ಸೇರಿದಂತೆ, ಪ್ರಮುಖ ಜಾಹೀರಾತು ಜಾಲಗಳು ಸಂದರ್ಭೋಚಿತ ಜಾಹೀರಾತುಗಳಿಗೆ ಅವಕಾಶ ನೀಡುತ್ತದೆ. ಈ ಜಾಹೀರಾತುಗಳನ್ನು ಅವರು ಸಹಯೋಗ ಹೊಂದಿದ ಮೂರನೇಯವರ ಸ್ವತ್ತುಗಳಲ್ಲಿ ನೀಡಲಾಗುತ್ತದೆ. ಈ ಪ್ರಕಾಶಕರು ಜಾಲದ ಪರವಾಗಿ ಸೇವೆ ನೀಡುವ ಕಂಪ್ಯೂಟರ್‌ನ ಜಾಹೀರಾತುಗಳಿಗೆ ಸಹಿ ಹಾಕುತ್ತಾರೆ. ಇದಕ್ಕೆ ಪ್ರತಿಯಾಗಿ,ಅವರು ಜಾಲವು ಉತ್ಪಾದಿಸುವ ಜಾಹೀರಾತು ಆದಾಯದ ಭಾಗವನ್ನು ಸ್ವೀಕರಿಸುತ್ತದೆ. ಇದು ಜಾಹೀರಾತುದಾರರು ನೀಡುವ ಒಟ್ಟು ಆದಾಯದ ೫೦% ರಿಂದ ೮೦% ಆಗಿರಬಹುದು. ಈ ತಾಣಗಳನ್ನು ಸಾಮಾನ್ಯವಾಗಿ ಕಂಟೆಂಟ್ ಜಾಲ ವೆಂದು ಉಲ್ಲೇಖಿಸಲಾಗುತ್ತದೆ. ಅದರಲ್ಲಿನ ಜಾಹೀರಾತುಗಳನ್ನು ಸಂದರ್ಭೋಚಿತ ಜಾಹೀರಾತುಗಳು ಎನ್ನಲಾಗುತ್ತದೆ. ಏಕೆಂದರೆ ಜಾಹೀರಾತು ಸ್ಥಳಗಳು ಪುಟದ ಸಂದರ್ಭವನ್ನು ಆಧರಿಸಿ ಮುಖ್ಯಪದಗಳ ಜತೆ ಸಂಬಂಧ ಹೊಂದಿದೆ. ಸಾಮಾನ್ಯವಾಗಿ ಕಂಟೆಂಟ್ ಜಾಲಗಳ ಜಾಹೀರಾತುಗಳು SERPಯಲ್ಲಿ ಕಾಣಸಿಗುವ ಜಾಹೀರಾತುಗಳಿಗಿಂತ ಅತೀ ಕಡಿಮೆ ಕ್ಲಿಕ್ ಮೂಲಕ ದರ(CTR)ಮತ್ತು ಪರಿವರ್ತನೆ ದರ(CR) ವನ್ನು ಹೊಂದಿರುತ್ತದೆ ಮತ್ತು ಇದರ ಪರಿಣಾಮವಾಗಿ ಕಡಿಮೆ ಅಧಿಕ ಮೌಲ್ಯವನ್ನು ಹೊಂದಿರುತ್ತದೆ. ಕಂಟೆಂಟ್ ಜಾಲದ ಸ್ವತ್ತುಗಳು ವೆಬ್‌ಜಾಲ ತಾಣ,ನ್ಯೂಸ್‌ಲೆಟರ್‌ಗಳು ಮತ್ತು ಈಮೇಲ್‌ಗಳನ್ನು ಒಳಗೊಂಡಿರಬಹುದು.[]

ಜಾಹೀರಾತುದಾರರು ಅವರು ಸ್ವೀಕರಿಸುವ ಪ್ರತಿಯೊಂದು ಕ್ಲಿಕ್‌ಗೆ ಪಾವತಿ ಮಾಡುತ್ತಾರೆ ಮತ್ತು ಬಿಡ್ ಮೊತ್ತದ ಆಧಾರದ ಮೇಲೆ ವಾಸ್ತವ ಮೊತ್ತವನ್ನು ಪಾವತಿ ಮಾಡುತ್ತಾರೆ. ಹರಾಜು ಮಾಡುವ ಹಾಸ್ಟ್‌ಗಳು ವಿಜೇತ ಬಿಡ್‌ದಾರನಿಗೆ ನಂತರದ ಅತ್ಯಧಿಕ ಬಿಡ್‌ದಾರನಿಗಿಂತ ಸ್ವಲ್ಪ ಹೆಚ್ಚಿಗೆ ಹಣವನ್ನು ಅಥವಾ ವಾಸ್ತವ ಮೊತ್ತದ ಬಿಡ್ ಹಣ ವಿಧಿಸುವುದು(ಉದಾ.ಒಂದು ಪೆನ್ನಿ)ಸಾಮಾನ್ಯ ಅಭ್ಯಾಸವಾಗಿದೆ.[] ಇದು ಬಿಡ್‌ದಾರರು ತಮ್ಮ ಬಿಡ್‌ಗಳನ್ನು ಅತೀ ಸಣ್ಣ ಮೊತ್ತಗಳಿಗೆ ಹೊಂದಾಣಿಕೆ ಮಾಡಿಕೊಂಡು ಪ್ರತಿ ಕ್ಲಿಕ್‌ಗೆ ಸ್ವಲ್ಪ ಕಡಿಮೆ ಹಣ ಪಾವತಿ ಮಾಡುವ ಮೂಲಕ ಹರಾಜು ಗೆಲ್ಲುಬಹುದೇ ಎಂದು ಪ್ರಯತ್ನಿಸುವ ಪರಿಸ್ಥಿತಿಗಳು ತಪ್ಪುತ್ತದೆ.

ಯಶಸ್ಸನ್ನು ಗರಿಷ್ಠಗೊಳಿಸಲು ಮತ್ತು ಪ್ರಮಾಣವನ್ನು ಸಾಧಿಸಲು, ಸ್ವಯಂಚಾಲಿಕ ಬಿಡ್ ನಿರ್ವಹಣೆ ವ್ಯವಸ್ಥೆಗಳನ್ನು ಅಳವಡಿಸಬಹುದು. ಈ ವ್ಯವಸ್ಥೆಗಳನ್ನು ಜಾಹೀರಾತುದಾರ ನೇರವಾಗಿ ಬಳಸಬಹುದು. ಆದರೂ ಅವು ಸಾಮಾನ್ಯವಾಗಿ ಜಾಹೀರಾತು ಏಜೆನ್ಸಿಗಳು ಬಳಸುತ್ತವೆ. PPC ಬಿಡ್ ನಿರ್ವಹಣೆಯನ್ನು ಅವು ಸೇವೆಯಾಗಿ ಒದಗಿಸುತ್ತವೆ. ಈ ಸಾಧನಗಳು ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಬಿಡ್ ನಿರ್ವಹಣೆಗೆ ಅವಕಾಶ ನೀಡುತ್ತದೆ. ಅತ್ಯಂತ ಸ್ವಯಂಚಾಲಿತ ವ್ಯವಸ್ಥೆ ಸಾವಿರಾರು ಅಥವಾ ಮಿಲಿಯಗಟ್ಟಲೆ PPC ಬಿಡ್‌ಗಳನ್ನು ನಿಯಂತ್ರಿಸುತ್ತದೆ. ವ್ಯವಸ್ಥೆಯು ಸಾಮಾನ್ಯವಾಗಿ ಅದಕ್ಕೆ ಗೊತ್ತು ಮಾಡಿದ ಗುರಿಯ ಆಧಾರದ ಮೇಲೆ ಪ್ರತಿಯೊಂದು ಬಿಡ್‌ ನಿರ್ಧರಿಸುತ್ತದೆ. ಉದಾಹರಣೆಗೆ ಲಾಭವನ್ನು ಗರಿಷ್ಠಗೊಳಿಸುವ ಅಥವಾ ಲಾಭನಷ್ಟವಿಲ್ಲದೇ ವೀಕ್ಷಣೆಯನ್ನು ಗರಿಷ್ಠಗೊಳಿಸುವ ಗುರಿ ಹೊಂದಲಾಗುತ್ತದೆ. ವ್ಯವಸ್ಥೆಯು ಜಾಹೀರಾತುದಾರನ ವೆಬ್‌ತಾಣಕ್ಕೆ ಸಂಬಂಧಿಸಿದ್ದು, ಪ್ರತಿಯೊಂದು ಕ್ಲಿಕ್‌ನ ಫಲಿತಾಂಶವನ್ನು ಒದಗಿಸಿ, ನಂತರ ಅದು ಬಿಡ್‌ಗಳನ್ನು ಗೊತ್ತುಮಾಡಲು ಅವಕಾಶ ನೀಡುತ್ತದೆ. ಈ ವ್ಯವಸ್ಥೆಗಳ ಪರಿಣಾಮಕಾರಿತ್ವವು ಸಾಧನೆ ದತ್ತಾಂಶದ ಗುಣಮಟ್ಟ ಮತ್ತು ಪ್ರಮಾಣಕ್ಕೆ ನೇರವಾಗಿ ಸಂಬಂಧಿಸಿರುತ್ತದೆ-ಕಡಿಮೆ ವೀಕ್ಷಣೆಯ ಜಾಹೀರಾತುಗಳು ದತ್ತಾಂಶ ಸಮಸ್ಯೆಯ ಕೊರತೆಗೆ ದಾರಿ ಕಲ್ಪಿಸಬಹುದು. ಇದು ಅನೇಕ ಬಿಡ್ ನಿರ್ವಹಣೆ ಸಾಧನೆಗಳನ್ನು ನಿರುಪಯೋಗಿ ಅಥವಾ ನಿಷ್ಕ್ರಿಯವಾಗಿಸುತ್ತದೆ.

ಇತಿಹಾಸ

ಬದಲಾಯಿಸಿ

೧೯೯೮ರ ಫೆಬ್ರವರಿಯಲ್ಲಿ ೨೫ ನೌಕರರಿಂದ ಆರಂಭವಾದ ಕಂಪೆನಿ(ನಂತರದ ಓವರ್ಚರ್,ಈಗ ಯಾಹೂ!ವಿನ ಭಾಗ) Goto.comನ ಜೆಫ್ರಿ ಬ್ರೀವರ್ ಕ್ಯಾಲಿಫೋರ್ನಿಯದ TED ಸಮ್ಮೇಳನದಲ್ಲಿ ಪೇ-ಪರ್-ಕ್ಲಿಕ್‌ ಶೋಧ ಎಂಜಿನ್ ಪರಿಕಲ್ಪನೆಯ ಸಾಕ್ಷ್ಯವನ್ನು ಮಂಡಿಸಿದರು.[] ಈ ಪ್ರಾತ್ಯಕ್ಷಿಕೆ ಮತ್ತು ನಂತರದ ವಿದ್ಯಮಾನಗಳು PPC ಜಾಹೀರಾತು ವ್ಯವಸ್ಥೆಯನ್ನು ಸೃಷ್ಟಿಸಿತು. PPC ಮಾದರಿಯ ಪರಿಕಲ್ಪನೆಯ ಹಿರಿಮೆಯು ಐಡಿಯಲ್ಯಾಬ್ ಮತ್ತು Goto.com ಸಂಸ್ಥಾಪಕ ಬಿಲ್ ಗ್ರಾಸ್ ಅವರಿಗೆ ಸಲ್ಲುತ್ತದೆ.

ಗೂಗಲ್ ಶೋಧ ಎಂಜಿನ್‌ನನ್ನು ೧೯೯೯ರ ಡಿಸೆಂಬರ್‌ನಲ್ಲಿ ಜಾಹೀರಾತು ನೀಡುವ ಮೂಲಕ ಆರಂಭಿಸಿತು. ೨೦೦೦ ಅಕ್ಟೋಬರ್‌ವರೆಗೆ ಆಡ್‌ವರ್ಡ್ಸ್ ವ್ಯವಸ್ಥೆ ಜಾರಿಗೆ ತಂದಿರಲಿಲ್ಲ. ಇದು ಜಾಹೀರಾತುದಾರರು ಗೂಗಲ್ ಶೋಧ ಎಂಜಿನ್‌ನಲ್ಲಿ ಟೆಕ್ಸ್ಟ್ ಜಾಹೀರಾತುಗಳನ್ನು ಸೃಷ್ಟಿಸಲು ಜಾಹೀರಾತುದಾರರಿಗೆ ಅವಕಾಶ ನೀಡಿತು. ಆದಾಗ್ಯೂ, PPCಯನ್ನು ೨೦೦೨ರಲ್ಲಿ ಆರಂಭಿಸಲಾಯಿತು. ಅಲ್ಲಿಯವರೆಗೆ ಜಾಹೀರಾತುಗಳಿಗೆ ಕಾಸ್ಟ್ ಪರ್ ಥೌಸಂಡ್ ಇಂಪ್ರೆಷನ್ಸ್(ಪ್ರತಿ ಸಾವಿರ ಜಾಹೀರಾತುಗಳ ವೆಚ್ಚ)ವನ್ನು ವಿಧಿಸಲಾಯಿತು.

GoTo.com PPCಯನ್ನು ೧೯೯೮ರಲ್ಲಿ ಆರಂಭಿಸಿತು. ಯಾಹೂ! GoTo.com (ನಂತರ ಓವರ್‌ಚರ್ )ಜಾಹೀರಾತುದಾರರನ್ನು ಒಂದುಗೂಡಿಸಲು ೨೦೦೧ ನವೆಂಬರ್‌ವರೆಗೆ ಪ್ರಯತ್ನಿಸಲಿಲ್ಲ.[] ಇದಕ್ಕೆ ಮುಂಚಿತವಾಗಿ, SERPS ಜಾಹಿರಾತುವಿನ ಯಾಹೂವಿನ ಮುಖ್ಯ ಮೂಲವು ಜತೆಗೆ ಸಂದರ್ಭೋಚಿತ IABಜಾಹೀರಾತು ಘಟಕಗಳನ್ನು(ಮುಖ್ಯವಾಗಿ ೪೬೮x೬೦ ಡಿಸ್ಪ್ಲೇ ಜಾಹೀರಾತುಗಳು) ಒಳಗೊಂಡಿತ್ತು. ಯಾಹೂ!ಜತೆ ಸಂಘಟನೆಯ ಒಪ್ಪಂದವು ೨೦೦೩ ಜುಲೈನಲ್ಲಿ ನವೀಕರಣಕ್ಕೆ ಬಂದ ಸಂದರ್ಭದಲ್ಲಿ ಯಾಹೂ! ಔವರ್‌ಚರ್‌ರನ್ನು $೧.೬೩ ಶತಕೋಟಿಗೆ ಸ್ವಾಧೀನಕ್ಕೆ ತೆಗೆದುಕೊಳ್ಳುವ ಇಚ್ಛೆಯನ್ನು ಪ್ರಕಟಿಸಿತು.[]

ಇವನ್ನೂ ನೋಡಿ

ಬದಲಾಯಿಸಿ
  • ಜಾಹೀರಾತು ಸೇವೆ
  • ಕ್ಲಿಕ್ ವಂಚನೆ
  • ಕ್ಲಿಕ್ ಮೂಲಕ ದರ
  • ಸಂದರ್ಭೋಚಿತ ಜಾಹೀರಾತು
  • ಪರಿವರ್ತನೆ (ಮಾರಾಟ)
  • ಪ್ರತಿ ಕ್ರಿಯೆಯ ವೆಚ್ಚ
  • ಪ್ರತಿ ಕ್ಲಿಕ್ ವೆಚ್ಚ
  • ಪ್ರತಿ ಕರಾರಿನ ವೆಚ್ಚ
  • ಪ್ರತಿ ಸಾವಿರದ ವೆಚ್ಚ
  • ಪಠ್ಯಾಂತರ್ಗತ ಜಾಹೀರಾತು
  • ಪ್ಲೇಸ್‌ಮೆಂಟ್‌ಗೆ ಹಣ ಪಾವತಿ
  • PPC ಕಾಪಿರೈಟಿಂಗ್
  • ಶೋಧ ಜಾಹೀರಾತು
  • ಶೋಧ ಎಂಜಿನ್ ಮಾರುಕಟ್ಟೆ ತಂತ್ರ
  • ಶೋಧ ಎಂಜಿನ್ ಕಾವಲು
  • SEO ಕಾಪಿರೈಟಿಂಗ್

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ಕಸ್ಟಮರ್ಸ್ ನೌ", ಡೇವಿಡ್ ಜೆಟೆಲಾ, ೨೦೦೯.
  2. Shuman Ghosemajumder (March 18, 2008). "Using data to help prevent fraud". Google Blog. Retrieved May 18, 2010.
  3. ಹೌ ಡು ಯು ಪ್ರಿವೆಂಟ್ ಇನ್‌ವ್ಯಾಲಿಡ್ ಕ್ಲಿಕ್ಸ್ ಎಂಡ್ ಇಂಪ್ರೆಶನ್ಸ್? ಗೂಗಲ್ಆಡ್‌ಸೆನ್ಸ್ ಹೆಲ್ಪ್ ಸೆಂಟರ್, ೨೦೦೮ ಜನವರಿ ೯ರಂದು ಮರುಸಂಪಾದಿಸಲಾಗಿದೆ.
  4. Shopping.com Merchant Enrollment Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ. Shopping.com, ೨೦೦೭ ಜೂನ್ ೧೨ರಂದು ಮರುಸಂಪಾದಿಸಲಾಗಿದೆ.
  5. Yahoo! Search Marketing (May 18, 2010). "Sponsored Search". Website Traffic Yahoo! Search Marketing (formerly Overture). Archived from the original on ಜುಲೈ 22, 2010. Retrieved May 18, 2010.
  6. ಆಡ್‌ವರ್ಡ್ಸ್ ಡಿಸ್ಕೌಂಟರ್ ಗೂಗಲ್ ಆಡ್ ‌ವರ್ಡ್ಸ್ ಹೆಲ್ಪ್ ೨೦೦೯ ಫೆಬ್ರವರಿ ೨೩ರಂದು ಮರುಸಂಪಾದಿಸಲಾಗಿದೆ.
  7. ಓವರ್ಚರ್ ಎಂಡ್ ಗೂಗಲ್: ಇಂಟರ್‌ನೆಟ್ ಪೇ ಪರ್ ಕ್ಲಿಕ್ (PPC) ಅಡ್ವರ್‌ಟೈಸಿಂಗ್ ಆಕ್ಷನ್ಸ್ Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ.,ಲಂಡನ್ ಬಿಸಿನೆಸ್ ಸ್ಕೂಲ್ ೨೦೦೭ಜೂನ್ ೧೨ರಂದು ಮರುಸಂಪಾದಿಸಲಾಗಿದೆ.
  8. Yahoo! Inc. (2002). "Yahoo! and Overture Extend Pay-for-Performance Search Agreement". Yahoo! Press Release. Archived from the original on ಜೂನ್ 9, 2007. Retrieved May 18, 2010.
  9. Stefanie Olsen (July 14, 2003). "Yahoo to buy Overture for $1.63 billion". CNET. Retrieved May 18, 2010.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Blog topics