ಪೆನ್ ಕಂಪ್ಯೂಟಿಂಗ್
ಪೆನ್ ಕಂಪ್ಯೂಟಿಂಗ್ ಎಂಬುದು ಒಂದು ಕೀಲಿಮಣೆ ಮತ್ತು ಒಂದು ಮೌಸ್‌ನಂಥ ಸಾಧನಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ, ಒಂದು ಪೆನ್ನು (ಅಥವಾ ಸ್ಟೈಲಸ್) ಮತ್ತು ಫಲಕವನ್ನು (ತಂತ್ರಜ್ಞಾನದ ಪರಿಭಾಷೆಯಲ್ಲಿ ಇದಕ್ಕೆ 'ಟ್ಯಾಬ್ಲೆಟ್' ಎಂದು ಕರೆಯಲಾಗುತ್ತದೆ) ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಒಂದು ಕಂಪ್ಯೂಟರ್ ಬಳಕೆದಾರ-ಇಂಟರ್‌ಫೇಸ್‌ಗೆ ಉಲ್ಲೇಖಿಸಲ್ಪಡುತ್ತದೆ.
ನಿಸ್ತಂತು ಫಲಕ PCಗಳು, PDAಗಳು ಮತ್ತು GPS ಗ್ರಾಹಿಗಳಂಥ ಚಲನೀಯ ಸಾಧನಗಳ ಬಳಕೆಗೂ ಪೆನ್ ಕಂಪ್ಯೂಟಿಂಗ್ ಎಂಬ ಪರಿಭಾಷೆಯು ಉಲ್ಲೇಖಿಸಲ್ಪಡುತ್ತದೆ. ಚಲನೀಯ ಸಂವಹನೆಗೆ ಅವಕಾಶ ನೀಡುವ ಯಾವುದೇ ಉತ್ಪನ್ನದ ಬಳಕೆಗೆ ಉಲ್ಲೇಖಿಸುವುದಕ್ಕಾಗಿ ಈ ಪರಿಭಾಷೆಯು ಬಳಸಲ್ಪಟ್ಟಿದೆ. ಇಂಥದೊಂದು ಸಾಧನದ ಒಂದು ಸೂಚನೆಯೇ ಒಂದು ಸ್ಟೈಲಸ್ ಆಗಿದೆ. ಒಂದು ಕೀಲಿಮಣೆ, ಸಂಖ್ಯಾಫಲಕ, ಮೌಸ್ ಅಥವಾ ಸ್ಪರ್ಶಫಲಕದಂಥ ಹೆಚ್ಚು ಸಾಂಪ್ರದಾಯಿಕವಾದ ಇಂಟರ್‌ಫೇಸ್‌ನ್ನು ಬಳಸುವುದಕ್ಕೆ ಪ್ರತಿಯಾಗಿ, ನಕ್ಷಾರಚನೆಯ ಫಲಕ ಅಥವಾ ಸ್ಪರ್ಶತೆರೆಯೊಂದರ ಮೇಲೆ ಒತ್ತುವುದಕ್ಕಾಗಿ ಈ ಸಾಧನವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಐತಿಹಾಸಿಕವಾಗಿ ಹೇಳುವುದಾದರೆ, ಪೆನ್ ಕಂಪ್ಯೂಟಿಂಗ್ (ಬಳಕೆದಾರರು ಒದಗಿಸುವ ಪಾರಸ್ಪರಿಕ ಪ್ರಭಾವದ ದತ್ತಮಾಹಿತಿಗೆ ಸಂಬಂಧಿಸಿದಂತಿರುವ ಒಂದು ಪ್ರಾಥಮಿಕ ಸಾಧನವಾಗಿ ಒಂದು ತೋರುಗಡ್ಡಿ ಸಾಧನ ಹಾಗೂ ಕೈಬರಹದ ಗುರುತಿಸುವಿಕೆಯನ್ನು ಬಳಸಿಕೊಳ್ಳುವ ಮೂಲಕ ಬಳಕೆದಾರ-ಇಂಟರ್‌ಫೇಸ್ ಒಂದನ್ನು ಉದ್ಯುಕ್ತಗೊಳಿಸುವ ಒಂದು ಕಂಪ್ಯೂಟರ್ ವ್ಯವಸ್ಥೆ ಎಂಬುದಾಗಿ ಇದು ವ್ಯಾಖ್ಯಾನಿಸಲ್ಪಟ್ಟಿದೆ) ಬಳಕೆಯ ಪರಿಕಲ್ಪನೆಯು ಒಂದು ಮೌಸ್ ಮತ್ತು ರೇಖಾಚಿತ್ರದ ಪ್ರದರ್ಶನದ ಬಳಕೆಗೂ ಕನಿಷ್ಟಪಕ್ಷ ಎರಡು ದಶಕಗಳಷ್ಟು ಹಿಂದೆಯೇ ಆಚರಣೆಯಲ್ಲಿತ್ತು; 1950ರ ದಶಕ ಮತ್ತು 1960ರ ದಶಕದ ಆರಂಭಿಕ ಭಾಗದ ಸ್ಟೈಲೇಟರ್ [೧] ಮತ್ತು RAND ಫಲಕ[೨] ವ್ಯವಸ್ಥೆಗಳೊಂದಿಗೆ ಇದು ಪ್ರಾರಂಭವಾಯಿತು ಎನ್ನಬಹುದು.
ಪೆನ್ ಕಂಪ್ಯೂಟಿಂಗ್‌ನ ಸಾರ್ವತ್ರಿಕ ಕೌಶಲಗಳು
ಬದಲಾಯಿಸಿಪೆನ್ ಕಂಪ್ಯೂಟಿಂಗ್‌ಗೆ ಸಂಬಂಧಿಸಿದ ಬಳಕೆದಾರ ಇಂಟರ್‌ಫೇಸ್‌ಗಳನ್ನು ಹಲವಾರು ಮಾರ್ಗಗಳಲ್ಲಿ ಅನುಷ್ಠಾನಗೊಳಿಸಬಹುದು. ವಾಸ್ತವಿಕ ಯಂತ್ರವ್ಯವಸ್ಥೆಗಳು ಸಾಮಾನ್ಯವಾಗಿ ಈ ಕೌಶಲಗಳ ಒಂದು ಸಂಯೋಜನೆಯನ್ನು ಅಳವಡಿಸಿಕೊಳ್ಳುತ್ತವೆ.
ತೋರುಗಡ್ಡಿ/ಗುರುತುಕಾರಕ ದತ್ತಮಾಹಿತಿ
ಬದಲಾಯಿಸಿಮೌಸ್ನಂಥ ಸಾಧನವನ್ನು ಬದಲಾಯಿಸುವ ದೃಷ್ಟಿಯಿಂದ ಫಲಕ ಮತ್ತು ಸ್ಟೈಲಸ್‌ಗಳು ತೋರುಗಡ್ಡಿ ಸಾಧನಗಳಾಗಿ ಬಳಸಲ್ಪಡುತ್ತವೆ. ಮೌಸ್ ಎಂಬುದೊಂದು ತತ್ಸಂಬಂಧಿಯಾದ ತೋರುಗಡ್ಡಿ ಸಾಧನ ಎಂಬುದನ್ನು ನೀವು ಗಮನಿಸಬೇಕು- ಕಂಪ್ಯೂಟರ್ ತೆರೆಯ ಮೇಲೆ "ಜರುಗುಪಟ್ಟಿಯನ್ನು (ಕರ್ಸರ್‌ನ್ನು) ಆಚೀಚೆಗೆ ಜರುಗಿಸಲು" ಬಳಕೆದಾರರು ಮೌಸ್‌ನ್ನು ಬಳಸುತ್ತಾರೆ. ಆದಾಗ್ಯೂ, ಫಲಕ ಎಂಬುದೊಂದು ಪರಿಪೂರ್ಣ ವಾದ ತೋರುಗಡ್ಡಿ ಸಾಧನವಾಗಿದೆ- ಜರುಗುಪಟ್ಟಿಯು ಎಲ್ಲಿಗೆ ಹೋಗುತ್ತದೋ ಅಲ್ಲಿ ನಿಖರವಾಗಿ ಸ್ಟೈಲಸ್‌ನ್ನು ಬಳಕೆದಾರರು ಇರಿಸಬೇಕಾಗುತ್ತದೆ.
ಮೌಸ್ ಒಂದಕ್ಕೆ ಬದಲಾಗಿ ಒಂದು ಸ್ಟೈಲಸ್ ಮತ್ತು ಫಲಕವನ್ನು ವಾಸ್ತವವಾಗಿ ಬಳಕೆ ಮಾಡುವಾಗ ಹಲವಾರು ಮಾನವ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ಸ್ಟೈಲಸ್‌ನ್ನು ಬಳಸಿಕೊಂಡು ಅದೇ ನಿಖರ ಸ್ಥಾನವನ್ನು ಎರಡುಬಾರಿ ಗುರಿಯಿರಿಸುವುದು ಅಥವಾ ತಟ್ಟುವುದು ಹೆಚ್ಚು ಪ್ರಯಾಸಕರವಾಗಿ ಕಂಡುಬರುತ್ತದೆ; ಹೀಗಾಗಿ, ಒಂದು ವೇಳೆ ಯಂತ್ರವ್ಯವಸ್ಥೆಯು ಮೌಸ್ ಒಂದರಿಂದ "ಜೋಡಿ-ಕ್ಲಿಕ್" ದತ್ತಮಾಹಿತಿಯನ್ನು ನಿರೀಕ್ಷಿಸುತ್ತಿದ್ದರೆ, ಸ್ಟೈಲಸ್ ಒಂದನ್ನು ಬಳಸಿಕೊಂಡು "ಜೋಡಿ-ಬಡಿತ"ದ ಕಾರ್ಯಾಚರಣೆಗಳನ್ನು ನಿರ್ವಹಿಸುವುದು ಪ್ರಯಾಸಕರವಾಗಿ ಪರಿಣಮಿಸುತ್ತದೆ.
ಒಂದು ಸ್ಪರ್ಶತೆರೆಯೊಂದಿಗೆ ನಿರ್ವಹಿಸಿದ ರೀತಿಯಲ್ಲಿಯೇ, ಸ್ಪರ್ಶ-ಸಂವೇದನಾಶೀಲವಾಗಿರುವ ಫಲಕವೊಂದರ ಮೇಲ್ಮೈ ಮೇಲೆ ಬೆರಳೊಂದನ್ನು ಸ್ಟೈಲಸ್ ರೀತಿಯಲ್ಲಿ ಬಳಸಬಹುದು ಎಂಬುದನ್ನು ನೀವಿಲ್ಲಿ ಗಮನಿಸಬೇಕು.
ಕೈಬರಹವನ್ನು ಗುರುತಿಸುವಿಕೆ
ಬದಲಾಯಿಸಿಕೀಲಿಮಣೆಯೊಂದನ್ನು ಬದಲಾಯಿಸಲು, ಅಥವಾ ಒಂದು ಮೌಸ್ ಮತ್ತು ಒಂದು ಕೀಲಿಮಣೆ ಈ ಎರಡನ್ನೂ ಬದಲಾಯಿಸಲು ಫಲಕ ಮತ್ತು ಸ್ಟೈಲಸ್ ಸಾಧನಗಳನ್ನು ಬಳಸಿಕೊಳ್ಳಬಹುದು. ಇದು ನೆರವೇರಲು ಫಲಕ ಮತ್ತು ಸ್ಟೈಲಸ್‌ನ್ನು ಎರಡು ವಿಧಾನಗಳಲ್ಲಿ ಬಳಸಬೇಕಾಗುತ್ತದೆ. ಅವುಗಳೆಂದರೆ:
- ತೋರುಗಡ್ಡಿ ವಿಧಾನ: ಈ ವಿಧಾನದಲ್ಲಿ ಮೇಲೆ ತಿಳಿಸಿದಂತೆ ಸ್ಟೈಲಸ್‌ನ್ನು ಒಂದು ತೋರುಗಡ್ಡಿ ಸಾಧನವಾಗಿ ಬಳಸಲಾಗುತ್ತದೆ.
- ಕೈಬರಹವನ್ನು ಗುರುತಿಸುವ ಆನ್‌ಲೈನ್ ವಿಧಾನ: ಈ ವಿಧಾನದಲ್ಲಿ, ಒಂದು ಸ್ಟೈಲಸ್‌ನಿಂದ ಮಾಡಲಾದ ಗೆರೆಬಡಿತಗಳು (ಸ್ಟ್ರೋಕ್ಸ್) ಒಂದು "ವಿದ್ಯುನ್ಮಾನದ ಇಂಕ್" ಆಗಿ ವಿಶ್ಲೇಷಿಸಲ್ಪಡುತ್ತವೆ; ಗೆರೆಬಡಿತಗಳು ಅಥವಾ ಗುರುತುಗಳ ಆಕಾರಗಳನ್ನು ಕೈಬರಹದ ಅಕ್ಷರಗಳಾಗಿ ಗುರುತಿಸುವ ತಂತ್ರಾಂಶವು ಈ ಕಾರ್ಯವನ್ನು ನೆರವೇರಿಸುತ್ತದೆ. ಆಗ ಒಂದು ಕೀಲಿಮಣೆಯಿಂದ ಪ್ರದಾನ ಮಾಡಿದ್ದೇನೋ ಎಂಬಂತೆ ಅಕ್ಷರಗಳು ಪಠ್ಯವಾಗಿ ಕಂಪ್ಯೂಟರ್‌ಗೆ ಒದಗಿಸಲ್ಪಡುತ್ತವೆ.
ವಿಧಾನಗಳ ನಡುವೆ ವಿಭಿನ್ನ ವ್ಯವಸ್ಥೆಗಳು (ತೋರುಗಡ್ಡಿಗೆ ಪ್ರತಿಯಾಗಿ ಕೈಬರಹದ ಗುರುತಿಸುವಿಕೆ) ವಿಭಿನ್ನ ಮಾರ್ಗಗಳಲ್ಲಿ ಬದಲಾಗುತ್ತವೆ, ಉದಾಹರಣೆಗೆ,
- ತೋರುಗಡ್ಡಿ ವಿಧಾನಕ್ಕೆ ಸಂಬಂಧಿಸಿದಂತೆ ಮತ್ತು ಕೈಬರಹದ-ಗುರುತಿಸುವಿಕೆಯ ವಿಧಾನಕ್ಕೆ ಸಂಬಂಧಿಸಿದಂತೆ ಫಲಕದ ಪ್ರತ್ಯೇಕ ಪ್ರದೇಶಗಳಲ್ಲಿ ಬರೆಯುವ ಮೂಲಕ.
- ವಿಧಾನಗಳನ್ನು ಬದಲಾಯಿಸುವ ದೃಷ್ಟಿಯಿಂದ ಸ್ಟೈಲಸ್‌ನ ಪಾರ್ಶ್ವದಲ್ಲಿರುವ ವಿಶೇಷ ಗುಂಡಿಯೊಂದನ್ನು ಒತ್ತುವ ಮೂಲಕ.
- ಪಠ್ಯವಾಗಿ ಗುರುತಿಸಲ್ಪಡದ ಯಾವುದೇ ಗುರುತುಗಳನ್ನು ತೋರುಗಡ್ಡಿಯ ದತ್ತಮಾಹಿತಿಯಾಗಿ ಪರಿಗಣಿಸುವಂಥ ಸನ್ನಿವೇಶದ ಮೂಲಕ.
- ಒಂದು ವಿಶೇಷವಾದ ಭಾವಸೂಚಕ ಗುರುತನ್ನು ಗುರುತಿಸುವ ಮೂಲಕ.
ಮಾಹಿತಿಯನ್ನು ಪ್ರದಾನ ಮಾಡುವುದಕ್ಕಾಗಿರುವ ನಿಜಾವಧಿಯ ಅಂಕೀಕರಿಸುವಿಕೆಯ ಫಲಕವೊಂದನ್ನು ಬಳಸಿಕೊಂಡು ಕೈಬರಹದ ಗುರುತಿಸುವಿಕೆಯ ಭೇದ ಅರಿಯಲು ಅಥವಾ ಅದನ್ನು ಪ್ರತ್ಯೇಕಿಸಲು "ಆನ್‌ಲೈನ್ ವಿಧಾನದ ಕೈಬರಹವನ್ನು ಗುರುತಿಸುವಿಕೆ" ಎಂಬ ಪರಿಭಾಷೆಯು ಬಳಸಲ್ಪಡುತ್ತದೆ. "ಆಫ್‌ಲೈನ್ ವಿಧಾನದ ಕೈಬರಹ ಗುರುತಿಸುವಿಕೆ" ಎಂಬ ಪರಿಭಾಷೆಯು ಇದಕ್ಕೆ ವ್ಯತಿರಿಕ್ತವಾಗಿದ್ದು, ಇದು ಕಾಗದವೊಂದರಿಂದ ಪಡೆದ ಕೈಬರಹದ ಸ್ಥಿರ ಸಂಕೇತಗಳ ದೃಗ್ವೈಜ್ಞಾನಿಕ ಸ್ವರೂಪದ ಅಕ್ಷರ ಗುರುತಿಸುವಿಕೆಯಾಗಿದೆ.
ನೇರ ಕುಶಲ ನಿರ್ವಹಣೆ
ಬದಲಾಯಿಸಿಅನುಕರಿಸಲ್ಪಟ್ಟ ಲಕ್ಷ್ಯಗಳ ಮೇಲೆ ನೇರವಾಗಿ ಸ್ಪರ್ಶಿಸಲು, ಒತ್ತಲು, ಮತ್ತು ಎಳೆಯಲು ಸ್ಟೈಲಸ್ ಸಾಧನವು ಬಳಸಲ್ಪಡುತ್ತದೆ. ನೇರ ಕುಶಲ ನಿರ್ವಹಣೆಯ ಕುರಿತಾದ ವಿಶೇಷ ವಿಕಿ ಲೇಖನವನ್ನು ನೋಡಿ. ವ್ಯಾಂಗ್ ಫ್ರೀಸ್ಟೈಲ್ ವ್ಯವಸ್ಥೆಯು [೩] ಇದಕ್ಕೊಂದು ಉದಾಹರಣೆಯಾಗಿದೆ. ಕೈಬರಹದ ಟಿಪ್ಪಣಿಗಳನ್ನು ಸೇರಿಸುವುದಕ್ಕಾಗಿ ವಿದ್ಯುನ್ಮಾನದ "ಇಂಕ್"ನ್ನು ಸೇರ್ಪಡೆ ಮಾಡುವುದರೊಂದಿಗೆ ಸಂಪೂರ್ಣವಾಗಿ ನೇರ ಕುಶಲ ನಿರ್ವಹಣೆಯ ಮೂಲಕ ಫ್ರೀಸ್ಟೈಲ್ ಕಾರ್ಯನಿರ್ವಹಿಸಿದ.
ಭಾವಸೂಚಕವನ್ನು ಗುರುತಿಸುವಿಕೆ
ಬದಲಾಯಿಸಿಇದು ಕೆಲವೊಂದು ವಿಶೇಷ ಆಕಾರಗಳನ್ನು ಗುರುತಿಸುವುದರ ಕೌಶಲವಾಗಿದೆ; ಆದರೆ ಇಲ್ಲಿ ಅವನ್ನು ಕೈಬರಹದ ದತ್ತಮಾಹಿತಿಯಾಗಿ ಗುರುತಿಸುವ ಬದಲು, ವಿಶೇಷ ಆದೇಶವೊಂದರ ಒಂದು ಸೂಚಕವಾಗಿ ಗುರುತಿಸಲಾಗುತ್ತದೆ ಎಂಬುದು ಗಮನಾರ್ಹ ಅಂಶ.
ಉದಾಹರಣೆಗೆ, "ಹಂದಿ-ಬಾಲದ" ಆಕಾರವೊಂದು (ಓರ್ವ ಕರಡಚ್ಚು ತಿದ್ದುವವರ ಗುರುತಾಗಿ ಇದು ಅನೇಕವೇಳೆ ಬಳಸಲ್ಪಡುತ್ತದೆ) "ತೆಗೆದುಹಾಕುವುದರ" ಕಾರ್ಯಾಚರಣೆಯನ್ನು ಸೂಚಿಸುತ್ತದೆ. ಕಾರ್ಯಗತಗೊಳಿಸುವಿಕೆಯನ್ನು ಅವಲಂಬಿಸಿ, ತೆಗೆದುಹಾಕಲ್ಪಟ್ಟ ಅಂಶವು ಗುರುತನ್ನು ಮಾಡಲಾದ ಭಾಗದಲ್ಲಿದ್ದ ಲಕ್ಷ್ಯವಸ್ತು ಅಥವಾ ಪಠ್ಯವಾಗಿರಬಹುದು, ಅಥವಾ ಯಾವ ಅಂಶವನ್ನು ತೆಗೆದುಹಾಕಬೇಕು ಎಂಬುದನ್ನು ಆಯ್ಕೆಮಾಡಲು ಸ್ಟೈಲಸ್‌ನ್ನು ಒಂದು ತೋರುಗಡ್ಡಿ ಸಾಧನವಾಗಿ ಬಳಸಬಹುದು.
ಇತ್ತೀಚಿನ ಯಂತ್ರವ್ಯವಸ್ಥೆಗಳು ಅಂಕೀಕಾರಕಗಳನ್ನು ಬಳಸಿಕೊಂಡಿದ್ದು, ಇವು ಒಂದು ಸಲಕ್ಕೆ ಒಂದಕ್ಕಿಂತ ಹೆಚ್ಚು "ಸ್ಟೈಲಸ್"ಗಳನ್ನು (ಇದು ಸಾಮಾನ್ಯವಾಗಿ ಒಂದು ಬೆರಳಾಗಿರುತ್ತದೆ) ಗುರುತಿಸಬಲ್ಲವಾಗಿರುತ್ತವೆ ಹಾಗೂ ಅನೇಕ-ಸ್ಪರ್ಶದ ಭಾವಸೂಚಕಗಳನ್ನು ಬಳಕೆಮಾಡಿಕೊಳ್ಳಲು ಸಮರ್ಥವಾಗಿರುತ್ತವೆ.
ಪೆನ್‌ಪಾಯಿಂಟ್ OS ಎಂಬುದು ಒಂದು ವಿಶೇಷ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಕಾರ್ಯಾಚರಣಾ ವ್ಯವಸ್ಥೆಯ ಎಲ್ಲಾ ಮಟ್ಟಗಳಲ್ಲಿ ಭಾವಸೂಚಕದ ಗುರುತಿಸುವಿಕೆ ಮತ್ತು ಕೈಬರಹದ ದತ್ತಮಾಹಿತಿಯನ್ನು ಇದು ಸಂಯೋಜಿಸಿತ್ತು. ಕೇವಲ ಭಾವಸೂಚಕದ ಗುರುತಿಸುವಿಕೆಯಷ್ಟನ್ನೇ ಅಳವಡಿಸಿಕೊಂಡಿದ್ದ ಹಿಂದಿನ ಯಂತ್ರವ್ಯವಸ್ಥೆಗಳು ವಿಶೇಷ ಅನ್ವಯಿಕೆಗಳ ವ್ಯಾಪ್ತಿಯೊಳಗೇ ಆ ಕಾರ್ಯವನ್ನು ನಿರ್ವಹಿಸಿದವು; CAD/CAM ಅನ್ವಯಿಕೆಗಳು [೪][೫] ಅಥವಾ ಪಠ್ಯ ಸಂಸ್ಕರಣೆಯಂಥವು ಇದಕ್ಕೆ ನಿದರ್ಶನಗಳಾಗಿವೆ.[೬]
ಇತಿಹಾಸ
ಬದಲಾಯಿಸಿಪೆನ್ ಕಂಪ್ಯೂಟಿಂಗ್ ಪರಿಕಲ್ಪನೆ ಅಥವಾ ಪ್ರಕ್ರಿಯೆಯು ಅತ್ಯಂತ ಆಳವಾದ ಐತಿಹಾಸಿಕ ಮೂಲಗಳನ್ನು ಹೊಂದಿದೆ. ಪ್ರಸಕ್ತ ವಾಣಿಜ್ಯ ಉತ್ಪನ್ನಗಳೊಂದಿಗೆ ಮಾತ್ರವೇ ನಿಕಟ ಪರಿಚಯವಿರುವ ಜನರಿಗೆ ಈ ಮೂಲಗಳ ಆಳವು ಸಾಕಷ್ಟು ಆಶ್ಚರ್ಯವನ್ನುಂಟುಮಾಡಬಹುದು. ಉದಾಹರಣೆಗೆ, ಕೈಬರಹಕ್ಕೆ ಸಂಬಂಧಿಸಿದಂತೆ ಬಳಸಲಾದ ವಿದ್ಯುನ್ಮಾನ ಫಲಕಕ್ಕಾಗಿರುವ ಮೊದಲ ಒಡೆತನದ ದಾಖಲೆಯನ್ನು (ಪೇಟೆಂಟ್‌ನ್ನು) 1888ರಲ್ಲಿ ಮಂಜೂರುಮಾಡಲಾಯಿತು.[೭] ಕೈಬರಹದ ಚಲನೆಯನ್ನು ವಿಶ್ಲೇಷಿಸುವ ಮೂಲಕ ಕೈಬರಹದ ಅಕ್ಷರಗಳನ್ನು ಗುರುತಿಸಿದ ಯಂತ್ರವ್ಯವಸ್ಥೆಯೊಂದಕ್ಕೆ ಸಂಬಂಧಿಸಿದ, ಪ್ರಾಯಶಃ ಮೊದಲನೆಯದು ಎನಿಸಿರುವ ಒಡೆತನದ ದಾಖಲೆಯನ್ನು 1915ರಲ್ಲಿ ಮಂಜೂರುಮಾಡಲಾಯಿತು.[೮] ಒಂದು ಆಧುನಿಕವಾದ ಡಿಜಿಟಲ್ ಕಂಪ್ಯೂಟರ್‌ನೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ, ಕೀಲಿಮಣೆಯೊಂದರ ಬದಲಿಗೆ ಒಂದು ಫಲಕ ಮತ್ತು ಕೈಬರಹದ ಪಠ್ಯದ ಗುರುತಿಸುವಿಕೆಯನ್ನು ಬಳಸಿಕೊಂಡ, ಬಹಿರಂಗವಾಗಿ-ನಿರೂಪಿಸಲ್ಪಟ್ಟ ಮೊದಲ ಯಂತ್ರವ್ಯವಸ್ಥೆಯ ನಿದರ್ಶನವು 1956ರಷ್ಟು ಹಿಂದೆಯೇ ದಾಖಲಿಸಲ್ಪಟ್ಟಿದೆ.[೯]
ಅನೇಕ ಶೈಕ್ಷಣಿಕ ಮತ್ತು ಸಂಶೋಧನಾ ಯಂತ್ರವ್ಯವಸ್ಥೆಗಳ ಜೊತೆಗೆ, ವಾಣಿಜ್ಯೋತ್ಪನ್ನಗಳನ್ನು ಹೊಂದಿದ್ದ ಹಲವಾರು ಕಂಪನಿಗಳು 1980ರ ದಶಕದಲ್ಲಿ ಅಸ್ತಿತ್ವದಲ್ಲಿದ್ದವು: ಪೆನ್‌ಸೆಪ್ಟ್, ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಕಾರ್ಪೊರೇಷನ್, ಮತ್ತು ಲೈನಸ್ ಇವೇ ಆ ಕಂಪನಿಗಳಾಗಿದ್ದು, ಕಿಕ್ಕಿರಿದು ತುಂಬಿಹೋಗಿದ್ದ ಈ ಕ್ಷೇತ್ರದಲ್ಲಿ ಇವು ತಮ್ಮದೇ ಆದ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದವು. ನಂತರದಲ್ಲಿ, GO ಕಾರ್ಪ್ ಎಂಬ ಕಂಪನಿಯು ಒಂದು ಫಲಕ PC ಉತ್ಪನ್ನಕ್ಕೆ ಸಂಬಂಧಿಸಿದಂತೆ ಪೆನ್‌ಪಾಯಿಂಟ್ OS ಕಾರ್ಯಾಚರಣಾ ವ್ಯವಸ್ಥೆಯನ್ನು ಹೊರತಂದಿತು. ಇದು GO ಕಾರ್ಪೊರೇಷನ್ ವತಿಯಿಂದ ಸಲ್ಲಿಸಲಾದ ಒಡೆತನದ ದಾಖಲೆಗಳ ಪೈಕಿ ಒಂದಾಗಿದ್ದು, ಇದು ಫಲಕ PCಯ ಕಾರ್ಯಾಚರಣಾ ವ್ಯವಸ್ಥೆಗೆ ಸಂಬಂಧಿಸಿದ ಇತ್ತೀಚಿನ ಕಾನೂನು-ಉಲ್ಲಂಘನೆಯ ಮೊಕದ್ದಮೆಯನ್ನು ಎದುರಿಸುತ್ತಿದೆ.[೧೦]
ಈ ಕೆಳಗಿನ ಕಾಲಯೋಜನೆ ಪಟ್ಟಿಯು ಈ ಇತಿಹಾಸದ ಕೆಲವೊಂದು ಪ್ರಮುಖ ಘಟನೆಗಳ ವಿವರಗಳನ್ನು ನೀಡುತ್ತದೆ:
- 1950ಕ್ಕೆ ಮುಂಚೆ
- 1888: ಕೈಬರಹವನ್ನು ಸೆರೆಹಿಡಿಯುವುದಕ್ಕೆ ಸಂಬಂಧಿಸಿದ ವಿದ್ಯುತ್‌ಚಾಲಿತ ಸ್ಟೈಲಸ್ ಸಾಧನದ ಮೇಲೆ ಎಲಿಶಾ ಗ್ರೇ ಕಂಪನಿಗೆ U.S. ಪೇಟೆಂಟ್‌ನ್ನು ಮಂಜೂರು ಮಾಡಲಾಯಿತು.[೧೧][೧೨]
- 1915: ಒಂದು ಸ್ಟೈಲಸ್‌ನೊಂದಿಗಿನ ಕೈಬರಹವನ್ನು ಗುರುತಿಸುವ ಬಳಕೆದಾರರ ಇಂಟರ್‌ಫೇಸ್‌ಗೆ U.S. ಪೇಟೆಂಟ್ ದೊರೆಯಿತು.[೧೩][೧೪]
- 1942: ಕೈಬರಹದ ಮಾಹಿತಿ ಪ್ರದಾನಕ್ಕೆ ಸಂಬಂಧಿಸಿದ ಸ್ಪರ್ಶತೆರೆಯ ಮೇಲೆ U.S. ಪೇಟೆಂಟ್‌ನ್ನು ನೀಡಲಾಯಿತು.[೧೫][೧೬]
- 1945: ವ್ಯಾನೆವರ್ ಬುಶ್ ಎಂಬಾತ 'ಆಸ್ ವಿ ಮೇ ಥಿಂಕ್' ಎಂಬ ತನ್ನ ಪ್ರಬಂಧದಲ್ಲಿ ಮೆಮೆಕ್ಸ್ ಎಂಬ ಸಾಧನದ ಕುರಿತು ಪ್ರಸ್ತಾವಿಸಿದ; ಇದು ಕೈಬರಹದ ಮಾಹಿತಿ ಪ್ರದಾನವೂ ಸೇರಿದಂತೆ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ಸಾಧನವಾಗಿತ್ತು.[೧೭]
- 1950ರ ದಶಕ
- ಕಂಪ್ಯೂಟರ್‌ನ ದತ್ತಮಾಹಿತಿ ಹಾಗೂ ಕೈಬರಹದ ಗುರುತಿಸುವಿಕೆಗೆ ಸಂಬಂಧಿಸಿದಂತಿರುವ, ಪೆನ್ನನ್ನೊಳಗೊಂಡಿರುವ ಸ್ಟೈಲೇಟರ್ ವಿದ್ಯುನ್ಮಾನದ ಫಲಕವನ್ನು ಟಾಮ್ ಡೈಮಂಡ್ ಎಂಬಾತ ಪ್ರದರ್ಶಿಸಿದ.[೯]
- 1960ರ ದಶಕದ ಆರಂಭ
- 1960ರ ದಶಕದ ಅಂತ್ಯಭಾಗ
- ಕ್ಸೆರಾಕ್ಸ್ PARC ಕಂಪನಿಯ ಅಲನ್ ಕೇ ಎಂಬಾತ ಪೆನ್ ಪ್ರದಾನವನ್ನು ಬಳಸಿಕೊಂಡು ಡೈನಬುಕ್ ಎಂಬ ನೋಟ್‌ಬುಕ್ ಒಂದನ್ನು ಪ್ರಸ್ತಾವಿಸಿದೆ: ಅದೇನೇ ಇದ್ದರೂ, ಈ ಸಾಧನವು ನಿರ್ಮಾಣಗೊಳ್ಳಲೇ ಇಲ್ಲ.
- 1982
- ಮ್ಯಾಸಚೂಸೆಟ್ಸ್‌ನ ವಾಲ್ಥಾಮ್‌ನ ಪೆನ್‌ಸೆಪ್ಟ್ ಕಂಪನಿಯು ಸಾರ್ವತ್ರಿಕ-ಉದ್ದೇಶದ ಒಂದು ಕಂಪ್ಯೂಟರ್-ಸಂಬಂಧಿ ಸಾಧನವನ್ನು ಮಾರುಕಟ್ಟೆ ಮಾಡಿತು; ಒಂದು ಕೀಲಿಮಣೆ ಮತ್ತು ಮೌಸ್‌ನ ಬದಲಿಗೆ ಒಂದು ಫಲಕ ಹಾಗೂ ಕೈಬರಹದ ಗುರುತಿಸುವಿಕೆಯನ್ನು ಇದು ಬಳಸಿಕೊಂಡಿತ್ತು.[೨೦]
- ಕೇಡರ್ ಸಿಸ್ಟಮ್ ಎಂಬ ಕಂಪನಿಯು ಮಾರಾಟ ತಾಣದಲ್ಲಿಡುವ ಇನ್ಫೋರೈಟ್ ಎಂಬ ಕಂಪ್ಯೂಟರ್-ಸಂಬಂಧಿ ಸಾಧನವನ್ನು ಮಾರುಕಟ್ಟೆ ಮಾಡಿತು; ಕೈಬರಹದ ಗುರುತಿಸುವಿಕೆ, ಒಂದು ಸಣ್ಣ ವಿದ್ಯುನ್ಮಾನ ಫಲಕ ಹಾಗೂ ಪೆನ್ನನ್ನು ಇದು ಬಳಸಿಕೊಂಡಿತ್ತು.[೨೧]
- 1985:
- 1989
- GRiD ಸಿಸ್ಟಮ್ಸ್ ಕಂಪನಿಯ ವತಿಯಿಂದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ GRiDPad[೨೫] ಎಂಬ ಸಾಧನವು ವಾಣಿಜ್ಯ ಸ್ವರೂಪದಲ್ಲಿ ಮೊಟ್ಟಮೊದಲು ಲಭ್ಯವಾದ ಫಲಕದ-ಶೈಲಿಯ ಒಯ್ಯಬಹುದಾದ ಕಂಪ್ಯೂಟರ್ ಆಗಿತ್ತು. ಇದರ ಕಾರ್ಯಾಚರಣಾ ವ್ಯವಸ್ಥೆಯು MS-DOSನ್ನು ಆಧರಿಸಿತ್ತು.
- ಫ್ರೀಸ್ಟೈಲ್‌ನ್ನು ವ್ಯಾಂಗ್ ಲ್ಯಾಬರೇಟರೀಸ್ ಪರಿಚಯಿಸಿತು. ಫ್ರೀಸ್ಟೈಲ್ ಎಂಬುದು ಒಂದು ಅನ್ವಯಿಕೆಯಾಗಿತ್ತು ಮತ್ತು MS-DOS ಅನ್ವಯಿಕೆಯೊಂದರಿಂದ ಪರದೆಯ ಮೇಲಿನ ಮಾಹಿತಿಯನ್ನು ಸೆರೆಹಿಡಿಯುವಲ್ಲಿ ಇದು ಸಮರ್ಥವಾಗಿತ್ತು, ಹಾಗೂ ಧ್ವನಿಯ ಮತ್ತು ಕೈಬರಹದ ಟಿಪ್ಪಣಿಗಳನ್ನು ಸೇರ್ಪಡೆ ಮಾಡುವುದಕ್ಕೆ ಬಳಕೆದಾರರಿಗೆ ಇದು ಅವಕಾಶ ನೀಡಿತ್ತು. ಫಲಕದ PCಯಂತಹ ಯಂತ್ರವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ನಂತರದಲ್ಲಿ ಬಂದ ಟಿಪ್ಪಣಿ-ತೆಗೆದುಕೊಳ್ಳುವ ಅನ್ವಯಿಕೆಗಳಿಗೆ ಇದೊಂದು ಅತ್ಯಾಧುನಿಕ ಮತ್ತು ಸಂಕೀರ್ಣವಾದ ಪೂರ್ವವರ್ತಿಯಾಗಿತ್ತು.[೩] MS-DOS ಇದರ ಕಾರ್ಯಾಚರಣೆ ವ್ಯವಸ್ಥೆಯಾಗಿತ್ತು.
- 1991
- ಮೊಮೆಂಟಾ ಪೆನ್‌ಟಾಪ್ ಬಿಡುಗಡೆಯಾಯಿತು.[೨೬]
- ಪೆನ್‌ಪಾಯಿಂಟ್ OS ಎಂದು ಕರೆಯಲ್ಪಡುವ ಒಂದು ಮೀಸಲಾಗಿರುವ ಕಾರ್ಯಾಚರಣಾ ವ್ಯವಸ್ಥೆಯನ್ನು GO ಕಾರ್ಪ್ ಕಂಪನಿಯು ಪ್ರಕಟಿಸಿತು; ಕೈಬರಹದ ಭಾವಸೂಚಕ ಆಕಾರಗಳ ಮೂಲಕ ಕಾರ್ಯಾಚರಣಾ ವ್ಯವಸ್ಥೆಯ ಡೆಸ್ಕ್‌ಟಾಪ್‌ನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಇದು ಒಳಗೊಂಡಿತ್ತು.[೨೭][೨೮] ವಿಭಿನ್ನ ದಿಕ್ಕುಗಳಲ್ಲಿರುವ "ಫ್ಲಿಕ್" ಭಾವಸೂಚಕಗಳು, ತಾಳೆ-ಗುರುತುಗಳು, ಕತ್ತರಿ-ಗುರುತುಗಳು, ಹಂದಿ-ಬಾಲದ ಗುರುತುಗಳು, ಮತ್ತು ಗುಂಡಗಿರುವ ಆಕಾರಗಳು ಇವೇ ಮೊದಲಾದವು ಭಾವಸೂಚಕಗಳಲ್ಲಿ ಸೇರಿದ್ದವು.
- ಫ್ಯೂಚರ್ ಕಂಪ್ಯೂಟಿಂಗ್ ಕಂಪನಿಯ ಪೋರ್ಷಿಯಾ ಐಸಾಕ್‌ಸೆನ್ ಎಂಬಾತ ಅಂದಾಜಿಸಿದ ಪ್ರಕಾರ, ಪೆನ್‌ಪಾಯಿಂಟ್ OSನ್ನು ಚಾಲಿಸುತ್ತಿರುವಂಥ ಪೆನ್ ಕಂಪ್ಯೂಟರ್‌ಗಳಿಗೆ ಸಂಬಂಧಿಸಿದ ಒಟ್ಟಾರೆ ವಾರ್ಷಿಕ ಮಾರುಕಟ್ಟೆಯ ಮೌಲ್ಯವು 500 ದಶಲಕ್ಷ $ನಷ್ಟಿತ್ತು.
- MS-DOS, ಪೆನ್‌ಪಾಯಿಂಟ್ ಅಥವಾ ಪೆನ್ ವಿಂಡೋಸ್‌ನ್ನು ಚಾಲಿಸುತ್ತಿರುವ, ಮಾದರಿ 3125ರ ಪೆನ್ ಕಂಪ್ಯೂಟರ್‌ನ್ನು NCR ಕಂಪನಿಯು ಬಿಡುಗಡೆಮಾಡಿತು.[೨೯]
- ಅಭಿವೃದ್ಧಿಯ ವಲಯಕ್ಕೆ ಆಪಲ್ ನ್ಯೂಟನ್ ಪ್ರವೇಶಿಸಿತು; ಅಂತಿಮವಾಗಿ ಇದು ಒಂದು PDA ಆಗಿ ಮಾರ್ಪಟ್ಟಿತಾದರೂ, ಇದರ ಮೂಲ ಪರಿಕಲ್ಪನೆಯು (ಒಂದು ದೊಡ್ಡದಾದ ಪರದೆ ಹಾಗೂ ಮಹತ್ತರವಾದ ಚಿತ್ರಿಸುವಿಕೆಯ ಸಾಮರ್ಥ್ಯಗಳನ್ನು ಇದು ಬಯಸುತ್ತಿತ್ತು) ಒಂದು ಫಲಕ PCಯನ್ನು ಹೋಲುವಂತಿತ್ತು.
- ಅಟಾರಿ ಕಾರ್ಪೊರೇಷನ್‌ನ ಸ್ಯಾಮ್ ಟ್ರಾಮಿಯೆಲ್ ಎಂಬಾತ ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ CeBIT '91 ಪ್ರದರ್ಶನದಲ್ಲಿ "ST-ಫಲಕ"ವನ್ನು (ಇದಕ್ಕೆ "ಸ್ಟೈಲಸ್" ಎಂಬ ಸಂಕೇತನಾಮವನ್ನು ನೀಡಲಾಗಿತ್ತು) ಸಾದರಪಡಿಸಿದ. ಆದರೆ ಈ ಕಂಪ್ಯೂಟರ್ ತಯಾರಾಗಲೇ ಇಲ್ಲ.
- 1992
- ಏಪ್ರಿಲ್‌ನಲ್ಲಿ IBM 2125 ಪೆನ್ ಕಂಪ್ಯೂಟರ್‌ನ್ನು ("ಥಿಂಕ್‌ಪ್ಯಾಡ್" ಎಂದು ಹೆಸರಿಸಲ್ಪಟ್ಟ IBMನ ಮೊದಲ ಮಾದರಿ) IBM ಪ್ರಕಟಿಸಿತು ಮತ್ತು GO ಕಾರ್ಪ್ ಕಂಪನಿಯು ಪೆನ್‌ಪಾಯಿಂಟ್‌ನ್ನು ಹಡಗಿನಲ್ಲಿ ರವಾನಿಸಿತು ಬಿಡುಗಡೆಮಾಡಿತು.[೩೦]
- ಪೆನ್‌ಪಾಯಿಂಟ್ OSಗೆ ನೀಡಿದ ಒಂದು ಪ್ರತಿಸ್ಪಂದನೆಯಾಗಿ ಪೆನ್ ಕಂಪ್ಯೂಟಿಂಗ್‌ಗೆ ಮೀಸಲಾದ ವಿಂಡೋಸ್‌ನ್ನು ಮೈಕ್ರೋಸಾಫ್ಟ್ ಬಿಡುಗಡೆಮಾಡಿತು.
- 1993
- ಥಿಂಕ್‌ಪ್ಯಾಡ್‌ನ್ನು IBM ಬಿಡುಗಡೆಮಾಡಿತು; ಇದು IBM ಥಿಂಕ್‌ಪ್ಯಾಡ್ 750P ಮತ್ತು 360P ಮಾದರಿಗಳ ರೂಪದಲ್ಲಿ ಗ್ರಾಹಕರ ಮಾರುಕಟ್ಟೆಗೆ ಲಭ್ಯವಾದ ಮೊಟ್ಟಮೊದಲ ವಾಣಿಜ್ಯ ಸ್ವರೂಪದ ಒಯ್ಯಬಹುದಾದ ಫಲಕ ಕಂಪ್ಯೂಟರ್ ಉತ್ಪನ್ನವಾಗಿತ್ತು.[೩೧]
- ಆಪಲ್ ಮೆಸೇಜ್‌ಪ್ಯಾಡ್ ಎಂದೂ ಹೆಸರು ಪಡೆದಿದ್ದ ನ್ಯೂಟನ್ PDAನ್ನು ಆಪಲ್ ಕಂಪ್ಯೂಟರ್ ಪ್ರಕಟಿಸಿತು; ಒಂದು ಸ್ಟೈಲಸ್‌ನ ಜೊತೆಗೆ ಕೈಬರಹವನ್ನು ಗುರುತಿಸುವ ವ್ಯವಸ್ಥೆಯನ್ನು ಇದು ಹೊಂದಿತ್ತು.
- ಪೆನ್‌ಪಾಯಿಂಟ್‌ನ್ನು ನಿಸ್ತಂತು ಸಂಪರ್ಕಗಳೊಂದಿಗೆ ಸಂಯೋಜಿಸುವ ಮೂಲಕ, EO ಪರ್ಸನಲ್ ಕಮ್ಯುನಿಕೇಟರ್ ಎಂಬ ಸಾಧನವನ್ನು AT&T ಪರಿಚಯಿಸಿತು.
- ಒಂದು ಸ್ಪರ್ಶ-ತೆರೆ ಮತ್ತು ಪ್ರದರ್ಶಿಕೆಯನ್ನು ಬಳಸಿಕೊಂಡಿರುವ ಒಂದು ಅನಲಾಗ್ ಸೆಲ್‌ಫೋನ್ ಆಗಿರುವ IBM ಸೈಮನ್ ಪರ್ಸನಲ್ ಕಮ್ಯುನಿಕೇಟರ್ ಸಾಧನವನ್ನು ಬೆಲ್‌ಸೌತ್ ಕಂಪನಿಯು ಬಿಡುಗಡೆ ಮಾಡಿತು. ಕೈಬರಹವನ್ನು ಗುರುತಿಸುವ ವ್ಯವಸ್ಥೆಯನ್ನು ಇದು ಒಳಗೊಂಡಿರಲಿಲ್ಲವಾದರೂ, ಬಳಕೆದಾರರು ಸಂದೇಶಗಳನ್ನು ಬರೆದು, ಅನಲಾಗ್ ಸೆಲ್‌ಫೋನ್ ಜಾಲಬಂಧದಲ್ಲಿ ಫ್ಯಾಕ್ಸ್ ಸಂದೇಶಗಳ ರೂಪದಲ್ಲಿ ಅವನ್ನು ಕಳಿಸಲು ಇದು ಅವಕಾಶ ಕಲ್ಪಿಸಿತ್ತು; ಅಷ್ಟೇ ಅಲ್ಲ, ಇದು PDA ಮತ್ತು ಇ-ಮೇಲ್‌ನ ವಿಶಿಷ್ಟ ಲಕ್ಷಣಗಳನ್ನೂ ಒಳಗೊಂಡಿತ್ತು.
- 1999
- ಆಕ್ಸೆಸ್ ಟೆಕ್ನಾಲಜೀಸ್ ವತಿಯಿಂದ ಸೃಷ್ಟಿಸಲ್ಪಟ್ಟ "QBE" ಪೆನ್ ಕಂಪ್ಯೂಟರ್, 'ಕಾಮ್‌ಡೆಕ್ಸ್ ಬೆಸ್ಟ್ ಆಫ್ ಷೋ' ಪ್ರಶಸ್ತಿಯನ್ನು ಗೆದ್ದುಕೊಂಡಿತು.[೩೨]
- 2000
- ಆಕ್ಸೆಸ್ ಟೆಕ್ನಾಲಜೀಸ್ ವತಿಯಿಂದ ಸೃಷ್ಟಿಸಲ್ಪಟ್ಟ "QBE Vivo" ಪೆನ್ ಕಂಪ್ಯೂಟರ್, 'ಕಾಮ್‌ಡೆಕ್ಸ್ ಬೆಸ್ಟ್ ಆಫ್ ಷೋ'ನಲ್ಲಿ ಪರಸ್ಪರ ಸಮಾನತೆಯನ್ನು ಕಾಯ್ದುಕೊಂಡಿತು.
- 2001
- ಕಾಮ್‌ಡೆಕ್ಸ್‌ನಲ್ಲಿನ ಪ್ರದರ್ಶನದಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಬಿಲ್‌ಗೇಟ್ಸ್ ಫಲಕ PCಯೊಂದರ (ಇದಕ್ಕೆ ಮೈಕ್ರೋಸಾಫ್ಟ್ ನೀಡಿದ ವ್ಯಾಖ್ಯಾನ ಹೀಗಿತ್ತು: ಇದು ಪೆನ್-ಸಾಧನವನ್ನು ಒದಗಿಸಲ್ಪಟ್ಟ ಕಂಪ್ಯೂಟರ್ ಆಗಿದ್ದು ಮೈಕ್ರೋಸಾಫ್ಟ್‌ನಿಂದ ರೂಪಿಸಲ್ಪಟ್ಟಿರುವ ಯಂತ್ರಾಂಶದ ವಿಶಿಷ್ಟತೆಗಳಿಗೆ ಇದು ಸರಿಹೊಂದಿಕೊಳ್ಳುತ್ತದೆ ಮತ್ತು "ವಿಂಡೋಸ್ XP ಟ್ಯಾಬ್ಲೆಟ್ PC ಎಡಿಷನ್" ಕಾರ್ಯಾಚರಣಾ ವ್ಯವಸ್ಥೆಯ ಒಂದು ಪರವಾನಗಿ ಪಡೆದ ಪ್ರತಿಯನ್ನು ಚಾಲಿಸುತ್ತದೆ)[೩೩] ಮೊಟ್ಟಮೊದಲ ಸಾರ್ವಜನಿಕ ಮೂಲಮಾದರಿಯನ್ನು ಪ್ರದರ್ಶಿಸಿ ನಿರೂಪಿಸಿದ.
- 2003
- 2006
- ಸಾರ್ವತ್ರಿಕ ಲಭ್ಯತೆಗಾಗಿ ವಿಂಡೋಸ್ ವಿಸ್ಟಾ ಬಿಡುಗಡೆಯಾಯಿತು. ವಿಂಡೋಸ್ XPಯ ವಿಶೇಷ ಫಲಕ PC ಆವೃತ್ತಿಯ ಕಾರ್ಯಾತ್ಮಕತೆಯನ್ನು ವಿಸ್ಟಾ ಒಳಗೊಂಡಿತ್ತು.
- 2008
- 2008ರ ಏಪ್ರಿಲ್‌ನಲ್ಲಿ, ಒಕ್ಕೂಟ ನ್ಯಾಯಾಲಯದ ದೊಡ್ಡ ಪ್ರಕರಣವೊಂದರ ಭಾಗವಾಗಿ, ವಿಂಡೋಸ್/ಫಲಕ PCಯ ಕಾರ್ಯಾಚರಣಾ ವ್ಯವಸ್ಥೆಯ ಮತ್ತು ಯಂತ್ರಾಂಶದ ಭಾವಸೂಚಕ ಲಕ್ಷಣಗಳು GO ಕಾರ್ಪ್ ಹೊಂದಿದ್ದ ಪೇಟೆಂಟ್ ಒಂದನ್ನು ಉಲ್ಲಂಘಿಸುತ್ತವೆ ಎಂಬುದು ಕಂಡುಬಂತು; ಇದು ಪೆನ್ ಕಂಪ್ಯೂಟರ್‌ನ ಕಾರ್ಯಾಚರಣಾ ವ್ಯವಸ್ಥೆಗಳ ಕುರಿತಾದ ಬಳಕೆದಾರರ ಇಂಟರ್‌ಫೇಸ್‌ಗೆ ಸಂಬಂಧಿಸಿದ್ದಾಗಿತ್ತು.[೧೦]
- HP ಟಚ್‌ಸ್ಮಾರ್ಟ್ tx2z ಎಂಬ ಹೆಸರಿನ, ಬಹುಸ್ಪರ್ಶ-ಸಮರ್ಥವಾದ ಎರಡನೇ ಫಲಕವನ್ನು HP ಬಿಡುಗಡೆಮಾಡಿತು.[೩೬]
ಇವನ್ನೂ ಗಮನಿಸಿ
ಬದಲಾಯಿಸಿ- ಭಾವಸೂಚಕದ ಗುರುತಿಸುವಿಕೆ
- ರೇಖಾನಕ್ಷೆಯ ಫಲಕ
- ಕೈಬರಹದ ಚಲನೆಯ ವಿಶ್ಲೇಷಣೆ
- ಕೈಬರಹವನ್ನು ಗುರುತಿಸುವಿಕೆ
- ಫಲಕ PC
- ಪಾರಸ್ಪರಿಕ ಪ್ರಭಾವದ ಬಿಳಿಫಲಕ
- ಲೇಸರ್ ಪಾಯಿಂಟರ್ (ಉದಾಹರಣೆ: ಗಮನಸೆಳೆಯುವಂತೆ ಮಾಡುವುದು)
- ಗ್ರಾಫಿಟಿ ಲೈಟಿಂಗ್
- ಬೆಳಕಿನ ಪೆನ್
- ರೇಖಾಚಿತ್ರವನ್ನು ಗುರುತಿಸುವಿಕೆ
ಉಲ್ಲೇಖಗಳು
ಬದಲಾಯಿಸಿ- ↑ Dimond, T.L. (1957-12-01), Devices for reading handwritten characters, Proceedings of Eastern Joint Computer Conference, pp. 232–237
- ↑ Groner, G.F. (1966-08), Real-Time Recognition of Handprinted Text, Memorandum RM-5016-ARPA, RAND Corporation
{{citation}}
: Check date values in:|date=
(help) - ↑ ೩.೦ ೩.೧ WANG Freestyle demo, Wang Laboratories, 1989, retrieved 2008-09-22
- ↑ Computerized Graphic Processing System: System User's Manual, Applicon Incorporated, 1973-09-01
- ↑ Newman, W.M. (1973-09-01), The Ledeen Character Recognizer, Principles of Interactive Computer Graphics, McGraw-Hill, pp. 575–582
- ↑ Coleman, Michael L. (1969), Text editing on a graphic display device using hand-drawn proofreader's symbols, from Pertinent Concepts in Computer Graphics: Proceedings of the 2nd University of Illinois Conference on Computer Graphics, University of Illinois Press
- ↑ Gray, Elisha (1888-07-31), Telautograph (PDF), United States Patent 386,815 (full image)
{{citation}}
: Cite has empty unknown parameter:|coauthors=
(help) - ↑ Goldberg, H.E. (1915-12-28), Controller (PDF), United States Patent 1,117,184 (full image)
- ↑ ೯.೦ ೯.೧ Dimond, Tom (1957-12-01), Devices for reading handwritten characters, Proceedings of Eastern Joint Computer Conference, pp. 232–237, retrieved 2008-08-23
- ↑ ೧೦.೦ ೧೦.೧ Mintz, Jessica (2008-04-04), Microsoft to Appeal $367M Patent Ruling, The Associated Press, retrieved 2008-09-04
{{citation}}
: Cite has empty unknown parameter:|coauthors=
(help) - ↑ Gray (1888-07-31), Telautograph, United States Patent 386,815
{{citation}}
: Cite has empty unknown parameter:|coauthors=
(help) - ↑ Gray, Elisha (1888-07-31), Telautograph (PDF), United States Patent 386,815 (full image)
{{citation}}
: Cite has empty unknown parameter:|coauthors=
(help) - ↑ Goldberg, H.E. (1915-12-28), Controller, United States Patent 1,117,184
- ↑ Goldberg, H.E. (1915-12-28), Controller (PDF), United States Patent 1,117,184 (full image)
- ↑ Moodey, H.C. (1942-12-27), Telautograph System, United States Patent 2,269,599
- ↑ Moodey, H.C. (1942-12-27), Telautograph System (PDF), United States Patent 2,269,599 (full image)
- ↑ Bush, Vannevar (1945-07-15), As We May Think, The Atlantic Monthly
- ↑ RAND Tablet, 1961-09-01
- ↑ 50 Years of Looking Forward, RAND Corporation, 1998-09-01, archived from the original on 2009-05-07
- ↑ Pencept Penpad (TM) 200 Product Literature, Pencept, Inc., 1982-08-15
- ↑ Inforite Hand Character Recognition Terminal, Cadre Systems Limited, England, 1982-08-15
- ↑ Users Manual for Penpad 320, Pencept, Inc., 1984-06-15
- ↑ Software Control at the Stroke of a Pen, Pencept, Inc., 1985, retrieved 2009-05-21
- ↑ Handwriter (R) GrafText (TM) System Model GT-5000, Communication Intelligence Corporation, 1985-01-15
- ↑ The BYTE Awards: GRiD System's GRiDPad, BYTE Magazine, Vol 15. No 1, 1990-01-12, p. 285
- ↑ Lempesis, Bill (1990-05), What's New in Laptops and Pen Computing, Flat Panel Display News
{{citation}}
: Check date values in:|date=
(help); Cite has empty unknown parameter:|coauthors=
(help) - ↑ Agulnick, Todd (1994-09-13), Control of a computer through a position-sensed stylus, United States Patent 5,347,295
- ↑ Agulnick, Todd (1994-09-13), Control of a computer through a position-sensed stylus (PDF), United States Patent 5,347,295 (full image)
- ↑ NCR announces pen-based computer press release, archived from the original (– Scholar search) on 2008-05-02, retrieved 2007-04-20
{{citation}}
: External link in
(help)|format=
- ↑ Penpoint OS shipping press release, archived from the original (– Scholar search) on 2007-08-30, retrieved 2007-04-20
{{citation}}
: External link in
(help)|format=
- ↑ ಲೆನೊವೊ - ದಿ ಹಿಸ್ಟರಿ ಆಫ್ ಥಿಂಕ್‌ಪ್ಯಾಡ್
- ↑ Trends at COMDEX Event 1999, retrieved 2008-08-11
- ↑ Microsoft (2005), Windows XP Tablet PC Edition 2005 Hardware Requirements, www.microsoft.com, retrieved 2009-03-14
- ↑ Fingerworks, Inc. (2003), iGesture Game Mode Guide, www.fingerworks.com, retrieved 2009-04-30
- ↑ MacEssentials (2007-08-02), Rubrik Apple: Das Lexikon der Fingersprache, www.mac-essentials.de, retrieved 2009-05-16
- ↑ HP TouchSmart tx2z, HP, retrieved 2008-11-28
{{citation}}
: Cite has empty unknown parameter:|coauthors=
(help)
ಬಾಹ್ಯ ಕೊಂಡಿಗಳು
ಬದಲಾಯಿಸಿಸರಿಸುಮಾರಾಗಿ 1917ರಿಂದ 1992ರವರೆಗಿನ ಪೆನ್ ಕಂಪ್ಯೂಟಿಂಗ್‌ನ ಇತಿಹಾಸವನ್ನು ಇದು ಒಳಗೊಂಡಿದ್ದು, ಸ್ಪರ್ಶ ಮತ್ತು ಭಾವಸೂಚಕ ತಂತ್ರಜ್ಞಾನವು ಇದರಲ್ಲಿ ಸೇರಿಕೊಂಡಿದೆ.