ಪೆದ್ದಮ್ಮ ಗುಡಿ ಭಾರತದ ತೆಲಂಗಾಣ ರಾಜ್ಯದಹೈದರಾಬಾದ್‌ನಲ್ಲಿರುವ ಒಂದು ಹಿಂದೂ ದೇವಾಲಯವಾಗಿದೆ.[][] ಬೊನಾಲು ಹಬ್ಬದ ಸಮಯದಲ್ಲಿ ಇದು ಬಹಳ ಪ್ರಸಿದ್ಧವಾಗಿರುತ್ತದೆ.[][]

ಪೆದ್ದಮ್ಮ ದೇವಾಲಯ
ಪೆದ್ದಮ್ಮ ದೇವಸ್ಥಾನದ ಪ್ರವೇಶದ್ವಾರ

ವ್ಯುತ್ಪತ್ತಿ

ಬದಲಾಯಿಸಿ

ಪೆದ್ದ ಮತ್ತು ಅಮ್ಮ ಎಂಬ ಎರಡು ಪ್ರತ್ಯೇಕ ಶಬ್ದಗಳನ್ನು ಒಳಗೊಂಡಿರುವ "ಪೆದ್ದಮ್ಮ" ಪದದ ಅರ್ಥ ಅಕ್ಷರಶಃ 'ತಾಯಂದಿರ ತಾಯಿ' ಅಥವಾ "ಪರಮ ತಾಯಿ" ಎಂದು. ಇವಳು ಗ್ರಾಮ ದೇವತೆಗಳ 11 ರೂಪಗಳಲ್ಲಿ ಒಬ್ಬಳು ಮತ್ತು ಅತ್ಯಂತ ಸರ್ವೋಚ್ಚ ಎಂದು ಪರಿಚಿತಳಾಗಿದ್ದಾಳೆ.

ಪ್ರತಿ ವರ್ಷ ಜೂನ್-ಜುಲೈನಲ್ಲಿ ನಡೆಯುವ ಬೊನಾಲು ಹಬ್ಬದ ಸಮಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಜನರು ವರ್ಷವಿಡೀ ತಾಯಿಗೆ ತಮ್ಮ ಪ್ರಾರ್ಥನೆಗಳು ಮತ್ತು ಬಲಿಗಳನ್ನು ಅರ್ಪಿಸುತ್ತಾರೆ ಮತ್ತು ತಾಯಿಯು ತನಗೆ ಪ್ರಾರ್ಥನೆಯನ್ನು ಸಲ್ಲಿಸುವ ಪ್ರತಿಯೊಬ್ಬ ಭಕ್ತನ ಮೇಲೆ ತನ್ನ ಆಶೀರ್ವಾದವನ್ನು ಧಾರೆಯೆರೆಯುವುದಕ್ಕೆ ಪರಿಚಿತಳಾಗಿದ್ದಾಳೆ.

ದೇವಾಲಯದಲ್ಲಿನ ದೇವತೆಗಳು

ಬದಲಾಯಿಸಿ
 
ಪೆದ್ದಮ್ಮ ದೇವಸ್ಥಾನ - ಹೈದರಾಬಾದ್

ಪೆದ್ದಮ್ಮ ದೇವಾಲಯವು ಮುಖ್ಯ ದೇವಾಲಯವಲ್ಲದೆ ಪಕ್ಕದಲ್ಲಿ ಒಂದೆರಡು ಸಣ್ಣ ಗುಡಿಗಳನ್ನು ಹೊಂದಿದೆ.

ಒಂದು ಲಕ್ಷ್ಮಿ, ಗಣಪತಿ ಮತ್ತು ಸರಸ್ವತಿ ದೇವಸ್ಥಾನ ಮತ್ತು ಇನ್ನೊಂದು ನಾಗದೇವತೆ ದೇವಸ್ಥಾನ.

ಭಕ್ತರು ದೇವಿಗೆ ತೆಂಗಿನಕಾಯಿಯನ್ನು ಮಾತ್ರ ಅರ್ಪಿಸಬಹುದು. ದೇವಾಲಯದ ಒಳಗೆ ಸಾಕಷ್ಟು ತೆಂಗಿನಕಾಯಿಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ.

ಉಲ್ಲೇಖಗಳು

ಬದಲಾಯಿಸಿ
  1. "Ex-serviceman with gun creates flutter at Peddamma temple". The Hindu.
  2. "Anniversary celebrations at Peddamma temple". The Hindu.
  3. "Peddamma Temple Timings".
  4. "Ecstasy marks Bonalu at Mahankali temple". The Hindu.