ಪೂಜಾ ಚಂದ್ರಶೇಖರ್
ಪೂಜಾ ಚಂದ್ರಶೇಖರ್, [೧] 'ಅಮೆರಿಕದಲ್ಲಿ ನೆಲಸಿರುವ, ಭಾರತೀಯ ಮೂಲದ ವಿದ್ಯಾರ್ಥಿನಿ. ಬಾಲ್ಯದಿಂದಲೇ ಪಾರ್ಕಿನ್ಸನ್ ರೋಗಪೀಡಿತ ಬಾಲಕಿಯರಲ್ಲೊಬ್ಬಳಾಗಿದ್ದಾಳೆ. ಪೂಜಾ, ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗಿ. "ಐವಿ ಲೀಗ್,"[೨] ಆಯೋಜಿಸಿದ ಪರೀಕ್ಷೆಯಲ್ಲಿ ೧೭ ವರ್ಷದ 'ಪೂಜಾ ಚಂದ್ರಶೇಖರ್' [೩] ಭಾಗವಹಿಸಿದ್ದಳು. ಐತಿಹಾಸಿಕ ಹಿನ್ನೆಲೆ ಹೊಂದಿರುವ, ಅಮೆರಿಕದ ಪ್ರತಿಷ್ಠಿತ 8 ವಿಶ್ವವಿದ್ಯಾಲಯಗಳಲ್ಲಿ ಅವರಿಗೆ ಪ್ರಿಯವಾದ ವಿಶ್ವವಿದ್ಯಾಲಯಗಳಲ್ಲಿ ಒಂದರಲ್ಲಿ ಪ್ರವೇಶ ಪಡೆಯುವುದು ಜೀವನದ ಗುರಿಗಳಲ್ಲೊಂದಾಗಿತು. ಪೂಜಾ ಚಂದ್ರಶೇಖರ್,[೪] ಐವಿ ಲೀಗ್‌ನ ಎಲ್ಲ 8 ವಿಶ್ವವಿದ್ಯಾಲಯಗಳಲ್ಲೂ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾಳೆ.
ವಿದ್ಯಾಭ್ಯಾಸ,ಪರಿವಾರ
ಬದಲಾಯಿಸಿ'ಪೂಜಾ ಚಂದ್ರಶೇಖರ್', ಅಮೆರಿಕದ ವರ್ಜಿನಿಯ ರಾಜ್ಯದ,'ಥಾಮಸ್ ಜೆಫರ್ ಸನ್ ಹೈಸ್ಕೂಲ್' ನಲ್ಲಿ ವಿದ್ಯಾರ್ಥಿನಿಯಾಗಿದ್ದಾಳೆ.ಬೆಂಗಳೂರಿನ ಮೂಲದ ಪೂಜಾಳ ತಂದೆ ತಾಯಿಗಳು ಅಮೇರಿಕಾದಲ್ಲಿ ಉದ್ಯೋಗಕ್ಕಾಗಿ ನೆಲೆಸಿದ್ದಾರೆ. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪೂಜಾಳ ಅದ್ಭುತ ವಿದ್ಯಾ ಪ್ರತಿಭೆ ಐ.ವಿ.ಲೀಗ್[೫] ಪರೀಕ್ಷೆಗಳಮೂಲಕ ಬೆಳಕಿಗೆ ಬಂದಿದೆ. [೬] ಮುಂದೆ ಕಾಲೇಜಿಗೆ ಸೇರಿ ಉನ್ನತ ವ್ಯಾಸಂಗಮಾಡಲು "ಐ ವಿ ಲೀಗ್'ಗೆ ಸೇರಿದ 8 ವಿವಿಗಳಿಗೆ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ಒಂದರಲ್ಲಾದರೂ ಸೀಟು ಪಡೆದುಕೊಳ್ಳುವುದು ಅವರ ಆದ್ಯತೆಗಳಲ್ಲೊಂದಾಗಿತ್ತು. ಆದರೆ, ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪರಿಣಾಮವಾಗಿ 'ಐವಿ ಲೀಗ್'ಗೆ ಸೇರಿದ ಎಲ್ಲ ೮ ವಿಶ್ವವಿದ್ಯಾಲಯದಲ್ಲೂ ಪ್ರವೇಶ ಪದೆದಿದ್ದಾರೆ. ಸ್ಟಾನ್‌ಫರ್ಡ್, ಎಂಐಟಿ, ಡ್ನೂಕ್ ಸೇರಿದಂತೆ "ಐವಿ ಲೀಗ್' ಹೊರತಾದ ಇತರ ೬ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಲ್ಲೂ ಆಕೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾಳೆ. ಈ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿರುವ ೧೪ ವಿಶ್ವವಿದ್ಯಾಲಯಗಳಲ್ಲೂ ಪೂಜಾ ಅರ್ಹತೆಗಳಿಸಿಕೊಂಡು ಒಂದು ದೊಡ್ಡ ಸಾಧನೆ ಮಾಡಿದ್ದಾಳೆ.[೭]
ಐ.ವಿ.ಲೀಗ್ ಅಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು
ಬದಲಾಯಿಸಿ- ಬ್ರೌನ್,(Brown),
- ಕೊಲಂಬಿಯ (Columbia),
- ಕಾರ್ನೆಲ್ (Carnell),
- ಡಾರ್ಟ್ ಮಾತ್ (Dartmouth),
- ಹಾರ್ವರ್ಡ್ (Harvard),
- ಪೆನ್ (Penn),
- ಪ್ರಿನ್ಸ್ಟನ್ (Princeton),
- ಯೇಲ್ (Yale),
ಮೇಲೆ ನಮೂದಿಸಿದ ೮ ವಿಶ್ವವಿದ್ಯಾಲಯಗಳು, ಉತ್ತರ ಪೂರ್ವ ಅಮೆರಿಕದಲ್ಲಿ ಅತ್ಯಂತ ಹೆಸರುವಾಸಿಯಾದ ಪುರಾತನ,ಹಾಗೂ ಮಹತ್ವದ ವಿದ್ಯಾಸಂಸ್ಥೆಗಳಾಗಿವೆ. ಇವುಗಳ ಒಕ್ಕೂಟವನ್ನು 'ಐ.ವಿ.ಲೀಗ್' ಎಂದು ಕರೆಯುತ್ತಾರೆ. ೧೯೩೭ ರಲ್ಲಿ 'ಫುಟ್ಬಾಲ್ ಕ್ರೀಡಾ ವಿಮರ್ಶಕ', 'ಕಾಸ್ವೆಲ್ ಆಡಮ್ಸ್ ರು', ಅವರ ಸಮಯದಲ್ಲಿ ಅತ್ಯಂತ ಬಲಾಢ್ಯ ಪೂರ್ವ ಅಮೆರಿಕದ ಫುಟ್ಬಾಲ್ ತಂಡವನ್ನು ಐ.ವಿ.ಲೀಗ್ ಎಂಬ ಪದಗುಚ್ಛದಿಂದ ಸಂಭೋಧಿಸಿ ಪ್ರಸಿದ್ಧಿಪಡಿಸಿದರು. ಈ 'ಕಾಲ್ಚೆಂಡಿನ ಟೀಮ್' ನಲ್ಲಿ ಆರ್ಮಿ,ಮತ್ತು ನೌಕಾದಳದ ಯೋಧರೂ ಸೇರಿದ್ದರು.
ಮೊಬೈಲ್ ಅಪ್ಲಿಕೇಶನ್ ತಂತ್ರಾಂಶ
ಬದಲಾಯಿಸಿ೧೭ ವಾರ್ಷದ ಪೂಜಾ ಚಂದ್ರಶೇಖರ್,[೮] ಪಾರ್ಕಿನ್ಸನ್ ರೋಗದ ಲಕ್ಷಣಗಳನ್ನು ಸುಲಭವಾಗಿಯೂ, ಮತ್ತು ತ್ವರಿತವಾಗಿಯೂ ಕಂಡುಹಿಡಿಯಲು 'ಮೊಬೈಲ್ ಅಪ್ಲಿಕೇಷನ್' ಎಂಬ ತಂತ್ರಜ್ಞಾನವನ್ನು ಸಿದ್ಧಗೊಳಿಸಿ, ಅದನ್ನು ಅಭಿವೃದ್ಧಿ ಪಡಿಸುವ ದಿಕ್ಕಿನಲ್ಲಿ ಶ್ರಮಿಸುತ್ತಿದ್ದಾಳೆ. ಅವಳು ನಿರ್ಮಿಸಿದ ಮೊಬೈಲ್ ಬಳಸಿ ಮಾತಾಡುವ ಸಮಯದಲ್ಲಿ ಜನರು ಪಾರ್ಕಿನ್‌ಸನ್ ರೋಗಗ್ರಸ್ತರಾಗಿದ್ದಾರೆಯೇ ಎನ್ನುವ ವಿಷಯವನ್ನು ೯೬% ಪ್ರತಿಷತ್ ಖಚಿತವಾಗಿ ಪತ್ತೆ ಹಚ್ಚಬಹುದು. ಈ ವಿಶೇಷ ಮೊಬೈಲ್, ದೇಶ-ವಿದೇಶಗಳ ಮಾರುಕಟ್ಟೆಯಲ್ಲಿ ಮುಂದೆ ಬರುವ ಸಾಧ್ಯತೆಯಿದೆ.
ProjectCSGIRLS
ಬದಲಾಯಿಸಿ'ಪೂಜ,' 'ಪ್ರಾಜೆಕ್ಟ್ ಸಿ.ಎಸ್.ಗರ್ಲ್ಸ್, [೯] ಎಂಬ ಎನ್.ಜಿ.ಒ. ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾಳೆ. ಈ ಸಂಸ್ಥೆ, ಬಾಲಕಿಯರು ವಿಜ್ಞಾನ, ತಂತ್ರಜ್ಞಾನ, ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉನ್ನತ ಅಧ್ಯಯನಕ್ಕೆ ಮುಂದುವರೆಯುವ ಸಮಯದಲ್ಲಿ ನೆರವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ ಉದಯವಾಣಿ, Apr 12, 2015, 'ಪೂಜಾ ಚಂದ್ರಶೇಖರ್, ಅಮೆರಿಕದಲ್ಲಿ ಬೆಂಗ್ಳೂರು ಬಾಲಕಿಯ ಶಿಕ್ಷಣ ಸಾಹಸ'
- ↑ 'Ivy_League', wikipedia,'Ivy League'
- ↑ "Hindustan times, Apr 15, 2015, Pooja Chandrasekar: She's only 17, but has scored admissions to all 8 Ivy League Schools". Archived from the original on ಏಪ್ರಿಲ್ 22, 2015. Retrieved ಏಪ್ರಿಲ್ 22, 2015.
- ↑ Pooja Chandrashekar
- ↑ Urban Dictionary, 'Ivy League' Top Definition
- ↑ The American Bazar, April, 10, 2015, Indian American student from Virginia Pooja Chandrashekar earns admission to all 8 Ivy League schools
- ↑ Ivy League College Admission Summary
- ↑ The Hindu, April, 13, 2015
- ↑ "FOUNDER AND CEO, POOJA CHANDRASHEKAR (SENIOR, THOMAS JEFFERSON HIGH SCHOOL FOR SCIENCE AND TECHNOLOGY)". Archived from the original on 2015-04-18. Retrieved 2015-04-23.