ಪುಟ್ಟಕ್ಕನ ಮಕ್ಕಳು (ಧಾರಾವಾಹಿ)

ಭಾರತಿಯ ಕನ್ನಡ ಟಿವಿ ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಜೊತೆ ಜೊತೆಯಲಿ ಟಿವಿ ಸರಣಿಯ ನಿರ್ದೇಶಕರಾದ ಆರೂರು ಜಗದೀಶ್ [] ಅವರು ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. [] ಈ ಧಾರಾವಾಹಿಯು 13 ಡಿಸೆಂಬರ್ 2021 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಝಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. [] ಈ ಕಾರ್ಯಕ್ರಮವು ಝೀ ತೆಲುಗಿನಲ್ಲಿ ಪ್ರಸಾರವಾಗುವ ತೆಲುಗು ಧಾರಾವಾಹಿ ರಾಧಮ್ಮ ಕುತುರು ರೀಮೇಕ್ ಆಗಿದೆ. [] ಈ ಸರಣಿಯಲ್ಲಿ ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಂಜನಾ, ಅಕ್ಷರ ಮತ್ತು ಶಿಲ್ಪಾ ನಟಿಸಿದ್ದಾರೆ. []

ಪುಟ್ಟಕ್ಕನ ಮಕ್ಕಳು (ಧಾರಾವಾಹಿ)
ಶೈಲಿನಾಟಕ
ನಿರ್ದೇಶಕರುಆರೂರು ಜಗದೀಶ್
ನಟರುಉಮಾಶ್ರೀ
ಮಂಜು ಭಾಷಿಣಿ
ರಮೇಶ್ ಪಂಡಿತ್
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು135
ನಿರ್ಮಾಣ
ಕ್ಯಾಮೆರಾ ಏರ್ಪಾಡುಮಲ್ಟಿ-ಕ್ಯಾಮೆರಾ
ಸಮಯ22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ13 ಡಿಸೆಂಬರ್ 2021 (2021-12-13) – ಪ್ರಸ್ತುತ

ಇದನ್ನು ಟಿವಿ ಪ್ರಸಾರಕ್ಕೂ ಮುಂಚೆಯೇ ಝೀ 5 ನಲ್ಲಿ ವೀಕ್ಷಣೆ ಮಾಡಬಹುದು.

ಕಥೆಯ ಸಾರಾಂಶ

ಬದಲಾಯಿಸಿ

ಪುಟ್ಟಕ್ಕ ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ  ಅವಳ‌ ಗಂಡ ಎರಡನೇ ಮದುವೆಯಾಗಿ ಪುಟ್ಟಕ್ಕಳನ್ನು ಬಿಡುತ್ತಾನೆ. ತನ್ನ ಮೂವರು ಹೆಣ್ಣುಮಕ್ಕಳನ್ನು ಬೆಳಸಲು ಪುಟ್ಟಕ್ಕ ಸಣ್ಣ ಹೋಟೆಲ್ (ಪುಟ್ಟಕ್ಕನ ಮೆಸ್) ನಡೆಸಿ ಜೀವನ ಸಾಗಿಸುತ್ತಾಳೆ.

ಧಾರವಾಹಿಯ ಕಥೆಯು ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಒಬ್ಬ ತಾಯಿಯ ಕುರಿತಾಗಿದೆ. ಪುಟ್ಟಕ್ಕ ಮತ್ತು ಅವಳ ಹೆಣ್ಣು ಮಕ್ಕಳು ಹೇಗೆ ತಮಗೆ ಬಂದ ಎಲ್ಲಾ ಕಷ್ಟಗಳ ವಿರುದ್ಧ ಹೋರಾಡುತ್ತಾರೆ ಎಂಬುವುದೇ ಕಥೆಯ ತಿರುಳಾಗಿದೆ.

ಕಲಾವಿದರು

ಬದಲಾಯಿಸಿ
  • ಪುಟ್ಟಕ್ಕ ಪಾತ್ರದಲ್ಲಿ ಉಮಾಶ್ರೀ
  • ಅಕ್ಷರಾ ಪಾತ್ರದಲ್ಲಿ ಸಹನಾ
  • ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ
  • ಶಿಲ್ಪಾ ಪಾತ್ರದಲ್ಲಿ ಸುಮಾ
  • ಕಾಂತಿಯಾಗಿ ಧನುಷ್ ಎನ್.ಎಸ್
  • ಬಂಗಾರಮ್ಮನಾಗಿ ಮಂಜು ಭಾಷಿಣಿ
  • ರಾಜೇಶ್ವರಿಯಾಗಿ ಹಂಸ ಪ್ರತಾಪ್
  • ಗೋಪಾಲನಾಗಿ ರಮೇಶ್ ಪಂಡಿತ್

ಉಲ್ಲೇಖಗಳು

ಬದಲಾಯಿಸಿ
  1. "Puttakanna Makkalu will strike a chord with women, says Jagadish Aroor". The Times of India (in ಇಂಗ್ಲಿಷ್). 13 September 2021. Retrieved 7 July 2022.
  2. "New show Puttakana Makkalu to be premiered soon - Times of India". The Times of India (in ಇಂಗ್ಲಿಷ್). Retrieved 7 March 2022.
  3. "Puttakkana Makkalu to premiere today; here's all you need to know about the new show - Times of India". The Times of India (in ಇಂಗ್ಲಿಷ್). Retrieved 7 March 2022.
  4. "Umashree returns to TV as a single mother in Puttakana Makkalu - Times of India". The Times of India (in ಇಂಗ್ಲಿಷ್). Retrieved 7 March 2022.
  5. "Meet the star cast of the new show Puttakkana Makkalu which is premiering today - Times of India". The Times of India (in ಇಂಗ್ಲಿಷ್). Retrieved 7 March 2022.


ಬಾಹ್ಯ ಕೊಂಡಿಗಳು

ಬದಲಾಯಿಸಿ