ಪೀಪಾಯಿ
ಪೀಪಾಯಿಯು ಉಬ್ಬಿಕೊಂಡಿರುವ ಮಧ್ಯಭಾಗವನ್ನು ಹೊಂದಿರುವ ಟೊಳ್ಳಾದ ಉರುಳೆಯಾಕಾರದ ಧಾರಕ, ಮತ್ತು ಇದು ಅಗಲಕ್ಕಿಂತ ಉದ್ದವಾಗಿರುತ್ತದೆ. ಇವನ್ನು ಸಾಂಪ್ರದಾಯಿಕವಾಗಿ ಕಟ್ಟಿಗೆಯ ಬಾಗುಪಟ್ಟಿಗಳಿಂದ ತಯಾರಿಸಿ ಕಟ್ಟಿಗೆ ಅಥವಾ ಲೋಹದ ದುಂಡುಕಟ್ಟುಗಳಿಂದ ಕಟ್ಟಲಾಗಿರುತ್ತದೆ.
ವೈನ್ ಸಂಗ್ರಹಿಸಿಡಲು ಬೇಕಾದ ಕಟ್ಟಿಗೆಯ ಆಧುನಿಕ ಪೀಪಾಯಿಗಳನ್ನು ಅನೇಕ ಬಗೆಯ ಓಕ್ ಮರಗಳಿಂದ ತಯಾರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಪ್ರಮಾಣಿತ ಗಾತ್ರಗಳನ್ನು ಹೊಂದಿರುತ್ತವೆ: ೨೨೫ ಲೀಟರ್‌ಗಳು, ೨೨೮ ಲೀಟರ್‌ಗಳು, ೩೦೦ ಲೀಟರ್‌ಗಳು. ಆಧುನಿಕ ಪೀಪಾಯಿಗಳನ್ನು ಅಲ್ಯುಮೀನಿಯಂ, ತುಕ್ಕುರಹಿತ ಉಕ್ಕು ಮತ್ತು ಎಚ್‍ಡಿಪಿಇಯಂತಹ ವಿಭಿನ್ನ ಬಗೆಗಳ ಪ್ಲಾಸ್ಟಿಕ್‍ನಿಂದ ಕೂಡ ತಯಾರಿಸಬಹುದು.
ಪೀಪಾಯಿಗಳು ನೀರು, ತೈಲ, ಸಾರಾಯಿ ಮತ್ತು ಸಾಕೆಯಂತಹ ದ್ರವಗಳ ಸಂಗ್ರಹಣೆ ಸೇರಿದಂತೆ, ಅನೇಕ ಉಪಯೋಗಗಳನ್ನು ಹೊಂದಿವೆ. ವೈನ್, ಕೊನ್ಯಾಕ್, ಆರ್ಮನ್ಯಾಕ್, ಶೆರಿ, ಪೋರ್ಟ್, ವಿಸ್ಕಿ ಮತ್ತು ಬಿಯರ್‍ನಂತಹ ಮಾಗುತ್ತಿರುವ ಪಾನೀಯಗಳನ್ನು ಸಂಗ್ರಹಿಸಿಡಲು ಕೂಡ ಪೀಪಾಯಿಗಳನ್ನು ಬಳಸಲಾಗುತ್ತದೆ. ಒಂದು ಕಾಲದಲ್ಲಿ ಕೋವಿಮದ್ದು, ಮಾಂಸ, ಮೀನು, ಪೇಂಟ್, ಜೇನು, ಮೊಳೆಗಳು ಮತ್ತು ಟ್ಯಾಲೊ ಸೇರಿದಂತೆ ಇತರ ದ್ರವ್ಯಗಳನ್ನು ಕಟ್ಟಿಗೆಯ ಪೀಪಾಯಿಗಳಲ್ಲಿ ಸಂಗ್ರಹಿಸಿಡಲಾಗುತ್ತಿತ್ತು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Origin of "over a barrel"
- Chisholm, Hugh, ed. (1911). "Barrel" . Encyclopædia Britannica (11th ed.). Cambridge University Press.
- Barrel Basics
- Barrel Construction
- How to store and maintain oak barrel