ಪಿ ಡಿ ಸತೀಶ್ ಚಂದ್ರ

ಕಿರುಪರಿಚಯ

ಬದಲಾಯಿಸಿ

ಪಾವಗಡ ದ್ವಾರಕನಾಥ್‌ ಸತೀಶ್‌ ಚಂದ್ರ ಅವರು ರಂಗಭೂಮಿ ಹಾಗೂ ಕಿರುತೆರೆಗಳಲ್ಲಿ ಪೀ. ಡೀ. ಅಂತಲೇ ಜನಜನಿತರಾಗಿದ್ದಾರೆ. ಎನ್‌.ಎಂ.ಕೆ.ಆರ್.ವಿ. ಕಾಲೇಜಿನ ಪತ್ರಿಕೋದ್ಯಮದ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ಇವರನ್ನು ರಂಗಭೂಮಿ ತನ್ನತ್ತ ಸೆಳೆದುಕೊಂಡಿತು. ರೇಡಿಯೋ ವೃತ್ತಿಗೆ ಪೂರ್ಣವಿರಾಮವನ್ನಿಟ್ಟು, ನಟನೆಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡರು. ಪ್ರದರ್ಶನ ಕಲಾ ಸಂಘವನ್ನು ಸ್ಥಾಪಿಸಿದ ಪೀಡೀ, ಈ ಮೂಲಕ ಅಸಂಖ್ಯಾತ ಕಲಾವಿದರನ್ನು ಒಂದೆಡೆ ಸೇರಿಸಿ ಅವರಿಗೊಂದು ವೇದಿಕೆ ನಿರ್ಮಿಸಿಕೊಟ್ಟರು. ರಂಗಭೂಮಿಯ ಜೊತೆಗೆ ಕಿರುತೆರೆಯತ್ತ ಹೊರಳಿದ ಪೀಡೀ ಅವರು ಹೆಸರಾಂತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಹಿರಿತೆರೆಯಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರ ರಸಿಕರ ಮನಗೆದ್ದಿದ್ದಾರೆ.

ಆರಂಭಿಕ ಜೀವನ

ಬದಲಾಯಿಸಿ

ಸತೀಶ್‌ ಚಂದ್ರ ಅವರ ತಾಯಿ ಶಿವಮೊಗ್ಗದವರು, ತಂದೆಯವರು ಮೂಲತಃ ಪಾವಗಡದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಸತೀಶ್‌ಚಂದ್ರ ಅವರ ಜನ್ಮಸ್ಥಳ ಶಿವಮೊಗ್ಗ. ಪ್ರಾಥಮಿಕ ವಿದ್ಯಾಭ್ಯಾಸ ನಡೆದಿದ್ದು ಬಸವನಗುಡಿಯ ನ್ಯಾಷನಲ್‌ ಸ್ಕೂಲ್‌ನಲ್ಲಿ. ಹೆಚ್‌. ಕೆ. ಈ.ಎಸ್.‌ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪಡೆದ ಇವರು. ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜಿನಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಪಿ ಡಿ ಸತೀಶ್‌ ಚಂದ್ರ
ಪಾವಗಡ ದ್ವಾರಕನಾಥ್‌ ಸತೀಶ್‌ ಚಂದ್ರ
Born
ಸತೀಶ್‌ ಚಂದ್ರ

04-07-74
ಶಿವಮೊಗ್ಗ
Nationalityಭಾರತೀಯ
EducationMCJ
Alma materಸೆಂಟ್ರಲ್‌ ಕಾಲೇಜ್
Occupationನಟ []
Years active2001 ರಿಂದ
Organisationಪ್ರದರ್ಶನ ಕಲಾ ಸಂಸ್ಥೆ[]
Known forಕಲಾಕೃಷಿ, ಪ್ರಕಾಸಂ, ರಂಗಸಂಘಟನೆ, ನಟನೆ, ರಂಗನಿರ್ದೇಶನ
Televisionಭಲೇ ಬಸವ, ಪಾಂಡುರಂಗ ವಿಠಲ, ಪಾಪಾ ಪಾಂಡು, ಸಿಲ್ಲಿಲಲ್ಲಿ, ವಾರಾನ್ನ,
Spouseರಮಾ ರಾವ್
Childrenಶಮ
ಸಾರ
Websitehttps://www.prakasamtrust.org/pd/

ಚಲಚಿತ್ರಗಳ ಪಟ್ಟಿ

ಬದಲಾಯಿಸಿ
Filmography
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿ
2010 Kutty Srank ಮೂಪನ್ malayaam
2014 ಅಭಿಮನ್ಯು (ಚಲನಚಿತ್ರ) ಗುಡ್ಡಳ್ಳಿ ಗೋಪಾಲ
2019 99 (ಚಲನಚಿತ್ರ) ಗಿರಿ
2019 ಐ ಲವ್ ಯು (ಚಲನಚಿತ್ರ) ಮಾಲಿಂಗ
2019 ಬೆಲ್ ಬಾಟಮ್ [] ಫೋಟೋಗ್ರಾಫರ್‌ ಗುರುಪಾದ
2019 ತಾಯಿಗೆ ತಕ್ಕ ಮಗ ಸಂಬಂಧಿಕ
2019 ಯಜಮಾನ (೨೦೧೯ರ ಚಲನಚಿತ್ರ) ಕೆಲಸಗಾರ
2020 ಶಿವಾಜಿ ಸುರತ್ಕಲ್ (ಚಲನಚಿತ್ರ) ವಿದ್ಯಾಸಾಗರ
2020 ಆಕ್ಟ್-1978 (ಚಲನಚಿತ್ರ) ರಮೇಶ
2022 ಓಲ್ಡ್ ಮಾಂಕ್ (ಚಲನಚಿತ್ರ) (film)[]
2023 ಕ್ರಾಂತಿ (2023 ಚಲನಚಿತ್ರ) [] ಕಾನ್ಸ್ಟೇಬಲ್‌ ಸೂರಪ್ಪ
2023 ಲಾಫಿಂಗ್ ಬುದ್ಧ 2023 ಸೇಟು

ಕಿರುತೆರೆ

ಬದಲಾಯಿಸಿ
  • ಪಾಂಡು ರಂಗ ವಿಠಲ
  • ಭಲೇ ಬಸವ
  • ಗಲಿ ಗಲಿ‌ ಸಿಮ್‌ ಸಿಮ್
  • ಪಾಪ ಪಾಂಡು 2
  • ವಾರಾನ್ನ
  • ಚುನಾವಣಾ ಮಸಾಲ - ನ್ಯೂಸ್‌ 18 ಕನ್ನಡ

ಉಲ್ಲೇಖ

ಬದಲಾಯಿಸಿ
  1. https://www.thehindu.com/features/metroplus/he-is-happy-and-he-shows-it/article5351625.ece
  2. https://www.prakasamtrust.org/
  3. https://www.facebook.com/rishab.shetty.5/videos/990995247764931/
  4. https://timesofindia.indiatimes.com/entertainment/kannada/movies/news/pd-sathish-chandra-gets-to-play-time-in-his-next-kannada-film/articleshow/83539299.cms
  5. https://en.wikipedia.org/wiki/Kranti_(2023_film)