ಓಲ್ಡ್ ಮಾಂಕ್ (ಚಲನಚಿತ್ರ)

ಓಲ್ಡ್ ಮಾಂಕ್ [೧] 2022 ರ ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು ಎಂ. ಜಿ. ಶ್ರೀನಿವಾಸ್ ಬರೆದು,ನಿರ್ದೇಶಿಸಿ,ನಟಿಸಿದ್ದಾರೆ. [೨] ಎಂ ಜಿ ಶ್ರೀನಿವಾಸ್, ಅದಿತಿ ಪ್ರಭುದೇವ [೩] [೪] ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರ ಶೀರ್ಷಿಕೆಯು ಅದೇ ಹೆಸರಿನ ಜನಪ್ರಿಯ ಆಲ್ಕೋಹಾಲ್ ಪಾನೀಯ ಬ್ರಾಂಡ್‌ನಿಂದ ಪ್ರೇರಿತವಾಗಿದೆ. ಕನ್ನಡದಲ್ಲಿ "ಹಳೆ ಸಂನ್ಯಾಸಿ" ಎಂದರ್ಥ. [೫] ಹಿರಿಯ ನಟ ರಾಜೇಶ್ ಅವರು ಚಲನಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಫೆಬ್ರವರಿ 2022 ರಲ್ಲಿ ನಿಧನರಾಗುವ ಮೊದಲು ಅವರ ಅಭಿನಯಿಸಿದ ಚಿತ್ರವಾಗಿದೆ. [೬] ಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. [೭]

ವಿಮರ್ಶಕರು ಈ ಚಿತ್ರದ ನಿರ್ದೇಶನ, ಹಾಸ್ಯ, ಸಾಹಿತ್ಯ, ಸಂಭಾಷಣೆ ಮತ್ತು ಅಭಿನಯಗಳನ್ನು ಶ್ಲಾಘಿಸಿದರು. [೮] [೯]

ಕಥೆಯ ಹಿನ್ನೆಲೆ

ಬದಲಾಯಿಸಿ

ನಾರದನು ಕೃಷ್ಣ ಮತ್ತು ರುಕ್ಮಿಣಿಯರ ನಡುವೆ ಜಗಳವನ್ನು ಸೃಷ್ಟಿಸಿದ ನಂತರ ಶ್ರೀಕೃಷ್ಣನಿಂದ ಶಾಪಗ್ರಸ್ತನಾಗಿ ಭೂಮಿಗೆ ಬರುತ್ತಾನೆ. ಅವನು ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳುವ ಏಕೈಕ ಮಾರ್ಗವೆಂದರೆ ಭೂಮಿಯಲ್ಲಿ ಅವನು ಪ್ರೀತಿಸುವವರನ್ನು ಮದುವೆಯಾಗುವುದು. ನಾರದನು ಈಗ ಅಪ್ಪಣ್ಣ ಎಂಬ ಹೆಸರಿನಲ್ಲಿ , ಕೇವಲ ಅರೇಂಜ್ಡ್ ಮ್ಯಾರೇಜ್‌ನಲ್ಲಿ ನಂಬಿಕೆಯಿಡುವ ಕುಟುಂಬದಲ್ಲಿ ಜನಿಸಿದ್ದಾನೆ ಮತ್ತು ಅವನ ತಂದೆ ಖಳನ ಪಾತ್ರದಲ್ಲಿದ್ದು ಅವನಿಗೆ ಪ್ರೀತಿಯನ್ನು ಕಂಡುಕೊಳ್ಳುವ ಅವಕಾಶವಿಲ್ಲ. ಅವನು ತನ್ನ ಪ್ರಿಯತಮೆಯನ್ನು ಕಂಡುಕೊಳ್ಳಲು ಅನೇಕ ಅಡಚಣೆಗಳಿವೆ.

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಎಲ್ಲಾ ಹಾಡುಗಳನ್ನು ಸೌರಭ್ ವೈಭವ್ ಸಂಯೋಜಿಸಿದ್ದಾರೆ. ಮತ್ತು ಆನಂದ್ ಆಡಿಯೋ ಲೇಬಲ್ ಅಡಿಯಲ್ಲಿ ಬಿಡುಗಡೆಯಾಗಿದೆ. [೧೩] ಗುಬ್ಬಿ ಬರೆದು ಹಾಡಿರುವ "ಓಲ್ಡ್ ಈಸ್ ಗೋಲ್ಡು" ಹಾಡಿನಲ್ಲಿ , ಫೋಟೋಶಾಪ್ ಮಾಡಿದ ಪೋಸ್ಟರ್ ಬಳಸಿ ಪ್ರಸಿದ್ಧ ಚಲನಚಿತ್ರಗಳಿಗೆ ಗೌರವ ಸಲ್ಲಿಸಲಾಗಿದೆ. [೧೪]

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಗಿಚ್ಚ ಗಿಲ್ಲಿ ಗಿಲ್ಲಿ"ಮುದಕನ್ನ ಮೊರಬಮುದಕನ್ನ ಮೊರಬ3:08
2."ಓಲ್ಡ್ ಈಸ್ ಗೋಲ್ಡು"ಗುಬ್ಬಿಗುಬ್ಬಿ2:01
3."ಕಲರ್ ಕಲರ್ ಚಿಟ್ಟೆ"ನಾಗಾರ್ಜುನ್ ಶರ್ಮಾಸೌರಭ್ ಗುಪ್ತಾ2:20
4."I.A.S ಅಂದ್ರೆ"ಶ್ರೀನಿ, ಪ್ರಸನ್ನ ವಿ.ಎಂವಿಶಾಖ್ ನಾಗಲಾಪುರ2:42
ಒಟ್ಟು ಸಮಯ:10:11

ಬಿಡುಗಡೆ

ಬದಲಾಯಿಸಿ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಲನಚಿತ್ರ ಬಿಡುಗಡೆ ಹಲವಾರು ಬಾರಿ ಮುಂದೂಡಲ್ಪಟ್ಟಿದೆ.

ಇತರ ಚಿತ್ರಗಳೊಂದಿಗೆ ಸ್ಪರ್ಧೆಯನ್ನು ತಪ್ಪಿಸಲು ಮತ್ತು ಸಾಂಕ್ರಾಮಿಕ ನಂತರದ ಚತ್ರಮಂದಿರಗಳಲ್ಲಿ 100% ಆಸನಗಳನ್ನು ಅನುಮತಿಸುವ ಸರ್ಕಾರದ ನಿರ್ಧಾರವನ್ನು ಆಧರಿಸಿ ಚಲನಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಶ್ರೀನಿ ಘೋಷಿಸಿದರು. [೧೫] ಚಲನಚಿತ್ರವು 25 ಫೆಬ್ರವರಿ 2022 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. [೭]

ಉಲ್ಲೇಖಗಳು

ಬದಲಾಯಿಸಿ
 1. "'ಓಲ್ಡ್ ಮಾಂಕ್‌'ನಲ್ಲಿ ಕಾಮಿಡಿ ನಶಾ". Vijaya Karnataka. Retrieved 10 April 2022.
 2. "MG Srinivas talks about his latest Kannada film 'Old Monk'". The Hindu. 31 May 2021. Retrieved 10 April 2022.
 3. "'ಓಲ್ಡ್‌ ಮಾಂಕ್‌'ಗಾಗಿ ಶ್ರೀನಿ ಜೊತೆ ಕೈ ಜೋಡಿಸಿದ ಅದಿತಿ ಪ್ರಭುದೇವ!". Vijaya Karnataka. 2017-04-14. Retrieved 2020-01-28.
 4. "ಓಲ್ಡ್ ಮಾಂಕ್ ಗೆ ಅದಿತಿ ಪ್ರಭುದೇವ ನಾಯಕಿ!". Kannadaprabha. Retrieved 2020-01-28.
 5. "Old Monk will be a stress buster". The Hindu. 24 February 2022. Retrieved 2022-04-10.
 6. NS Sridhar Murthy (19 February 2022). "Rajesh: A master at handling complex roles". Deccan Herald. Retrieved 2022-04-11.
 7. ೭.೦ ೭.೧ "MG Srinivas-directed Old Monk's Telugu remake and dubbing rights sold". New Indian Express. Retrieved 2022-04-10. ಉಲ್ಲೇಖ ದೋಷ: Invalid <ref> tag; name "Release" defined multiple times with different content
 8. Sunayana Suresh (25 February 2022). "Old Monk Movie Review: A clever and entertaining comedy, after a long time". Times Of India. Retrieved 2022-04-11.
 9. A Sharadhaa (26 February 2022). "Old Monk review: This comedy-drama will definitely lift our spirits". New Indian Express. Retrieved 2022-04-11.
 10. "Srinivas to start shooting for 'Old Monk' from today". Indian Express. Retrieved 5 September 2020.
 11. "Aditi Prabhudeva to sport a traditional look in MG Srinivas' Old Monk". The New Indian Express. Retrieved 2020-01-28.
 12. "Trailer Talk: M.G. Srini's 'Old Monk' promises a full-fledged family entertainer will plenty of laughs". Times Of India. 26 August 2021. Retrieved 25 September 2021.
 13. "Old Monk Songs". Retrieved 12 April 2022.
 14. "Old Monk Song - Old Is Goldu". Times Of India. Retrieved 12 April 2022.
 15. "Old Monk Movie: ಹೇಳಿದ ಮಾತಿನಂತೆ ರಿಲೀಸ್ ಡೇಟ್ ಫೈನಲ್ ಮಾಡಿದ 'ಓಲ್ಡ್ ಮಾಂಕ್' ಶ್ರೀನಿ". Vijaya Karnataka. Retrieved 11 April 2022.

ಬಾಹ್ಯ ಕೊಂಡಿಗಳು

ಬದಲಾಯಿಸಿ