ಪಿ.ವಿ.ನಾರಾಯಣ
ಡಾ| ಪಿ.ವಿ.ನಾರಾಯಣ ಇವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಪ್ರವಾಚಕರಾಗಿದ್ದಾರೆ. “ಬಳ್ಳಿಗಾವೆ”, “ವಚನ ಚಳುವಳಿ”, “ವಚನ ಸಾಹಿತ್ಯ-ಒಂದು ಸಾಂಸ್ಕೃತಿಕ ಅಧ್ಯಯನ” ಮೊದಲಾದ ವಿಮರ್ಶಾ ಗ್ರಂಥಗಳನ್ನಲ್ಲದೆ ಮೂರು ಸಂಪಾದಿತ, ಆರು ಅನುವಾದಿತ ಕೃತಿಗಳನ್ನು ಹಾಗು ಎಂಟು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಸವಣ್ಣನವರನ್ನು ಕುರಿತು ತೀವ್ರ ವಿವಾದ ಉಂಟು ಮಾಡಿದ ಇವರ ಕೃತಿ "ಧರ್ಮಕಾರಣ"ವನ್ನು ಸಾರ್ವಜನಿಕರ ಒತ್ತಾಯದ ಮೆರೆಗೆ ಕರ್ನಾಟಕ ಸರ್ಕಾರವು ನಿಷೇಧಿಸಿದೆ. ಸುಪ್ರೀಂ ಕೋರ್ಟ ಕೂಡಾ ಈ ಕೃತಿಯ ನಿಷೇಧವನ್ನು ಎತ್ತಿ ಹಿಡಿದಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |