ಫಿಲಿಪ್ ಸಿಡ್ನಿ

ಇಂಗ್ಲಿಷ್ ಕವಿ, ಆಸ್ಥಾನ, ಮತ್ತು ರಾಜತಾಂತ್ರಿಕ
(ಪಿಲಿಫ್ ಸಿಡ್ನಿ ಇಂದ ಪುನರ್ನಿರ್ದೇಶಿತ)

ಸರ್ ಪಿಲಿಫ್ ಸಿಡ್ನಿ:-- ಇಂಗ್ಲೀಷ್ ಸಾಹಿತ್ಯದ ಎಲಿಜಬೆತ್ ಕಾಲದ ಪ್ರಮುಖ ಕವಿ. ಸಿಡ್ನಿಯು ಕೇವಲ ಕವಿಯಾಗಿ ಮಾತ್ರವಲ್ಲದೆ ರಾಜಪರಿವಾರದವನೂ, ಸೈನಿಕನೂ, ಆಗಿ ತನ್ನನ್ನು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದವನು.

ಪಿಲಿಫ್ ಸಿಡ್ನಿಯು ನವೆಂಬರ್ ೩೦.೧೫೫೪ ರಲ್ಲಿ ಕೆಂಟ್ ನ ಒಂದು ಶ್ರೀಮಂತ, ವೈಭವಶಾಲಿ ಕುಟುಂಬದಲ್ಲಿ ಜನಿಸಿದನು. ಇವನು ಸರ್ ಹೆನ್ರಿ ಸಿಡ್ನಿ ಮತ್ತು ಮೇರಿ ಡ್ಯುಡ್ಲಿ ಯ ಮೊದಲನೆ ಮಗನಾಗಿ ಜನಿಸಿದನು. ಇವನಿಗೆ ರಾಬರ್ಟ್ ಎಂಬ ಸಹೋದರ ಮತ್ತು ಮೇರಿ ಎಂಬ ಒಬ್ಬ ಸಹೋದರಿ ಇದ್ದರು. ಇವನ ತಾಯಿ ಯೂರೋಪಿನ ಉತ್ತರಭಾಗವನ್ನು ಆಳಿತ್ತಿದ್ದ ಮೊದಲನೆ ಚಕ್ರವರ್ತಿ ಜಾನ್ ಡ್ಯುಡ್ಲಿಯ ಮಗಳು. ಇವನ ಸಹೋದರ ರಾಬರ್ಟ್ ರಾಜನೀತಿಯುಳ್ಳವನು ಮತ್ತು ಕಲಾ ಆರಾಧಕನು ಸಾಹಿತ್ಯ ಅಶ್ರಯದಾತನು ಆಗಿದ್ದನು. ಇವನ ಸಹೋದರಿ ಮೇರಿ ಪೆಂಬ್ರೋಕ್ ನ ಎರಡನೇ ಚಕ್ರವರ್ತಿ ಹೆನ್ರಿ ಹರ್ಬರ್ಟ್ ನನ್ನು ವಿವಾಹವಾಗಿದ್ದಳು. ಹೆನ್ರಿ ಹರ್ಬರ್ಟ್ ಬರಹಗಾರನು, ತರ್ಜಿಮೆದಾರನು, ಸಾಹಿತ್ಯ ಆಶ್ರಯದಾತನು ಆಗಿದ್ದನು. ಪಿಲಿಫ್ ಸಿಡ್ನಿಯು ತನ್ನ ಅಪೂರ್ಣ ಕೃತಿ 'ಆರ್ಕಾಡಿಯಾ' ವನ್ನು ತನ್ನ ಸಹೋದರಿ ಮೇರಿಗೆ ಅರ್ಪಿಸಿದ್ದನು. ನಂತರ ಮೇರಿ ಅದನ್ನು ಪೂರ್ಣಗೊಳಿಸಿದಳು. ಅದು ಮುಂದೆ 'ದಿ ಕೌಂಟೆಸ್ ಆಫ್ ಪೆಂಬ್ರೋಕ್ಸ್ ಆರ್ಕಾಡಿಯಾ' ಎಂದು ನಾಮಕಾರಣಗೊಂಡಿತು. ಪಿಲಿಫ್ ಸಿಡ್ನಿಯು ಶ್ರೂಬೆರಿ ಶಾಲೆಯಲ್ಲಿ ಮತ್ತು ಅಕ್ಸ್ ಫರ್ಡ್ ನಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದನು. ೧೫೭೨ರಲ್ಲಿ ಶ್ರೀವ್ಬರಿ ಪಾರ್ಲಿಮೆಂಟಿಗೆ ಸದಸ್ಯನಾಗಿ ಆಯ್ಕೆಯಾದನು ಮತ್ತು ಅದೆ ವರ್ಷದಲ್ಲಿ ರಾಣಿ ಮೊದಲನೆ ಎಲಿಜಬೆತ್ ಮತ್ತು ಡಕ್.ಡಿ.ಅಲೆನ್ ಖಾನ್ ರ ವಿವಾಹ ಮಹೋತ್ಸವಕ್ಕೆ ರಾಯಬಾರಿಯಾಗಿ ಪ್ರಾನ್ಸಿಗೆ ಪ್ರಯಾಣ ಬೆಳೆಸಿದನು. ನಂತರ ಕೆಲವು ವರ್ಷಗಳನ್ನು ಯೂರೋಪಿನ ಪ್ರಮುಖ ಪ್ರದೇಶಗಳಾದ ಜರ್ಮನಿ, ಇಟಲಿ, ಪೋಲೆಂಡ್, ಹಂಗೇರಿಯಾ ಮತ್ತು ಆಸ್ತ್ರಿಯಾಗಳಲ್ಲಿ ಕಲೆದನು. ಈ ಪ್ರಯಾಣದಿಂದ ಯೂರೋಪಿನ ಪ್ರಮುಖ ರಾಜಕೀಯ ತಜ್ಞರ ಮತ್ತು ಜ್ಞಾನಿಗಳ ಪರಿಚಯವಾಹಿತು. ಸಿಡ್ನಿಯು ೧೫೭೫ರಲ್ಲಿ ಮತ್ತೆ ಇಂಗ್ಲೆಂಡಿಗೆ ತೆರಳಿದನು. ಅಲ್ಲಿ ಪೆನೆಲೊಪ್ ಡೆವರೆಕ್ಸ್ ಳನ್ನು ಬೇಟಿಯಾದನು. ಇವಳು ಸಿಡ್ನಿಯ 'ಆಸ್ತ್ರೊಪೆಲ್ ಮತ್ತು ಸ್ಟೆಲಾ' ಸಾನೆಟ್ ಕೃತಿಯಿಂದ ಪ್ರಬಾವಿತಳಾದಳು. ಇವಳ ತಂದೆ ವಾಲ್ಟೆರ್ ಡೆವರೆಕ್ಸ್, ಎಸೆಕ್ಸ್ ನ ಮೊದಲ ಚಕ್ರವರ್ತಿಯಾಗಿದನು. ವಾಲ್ಟೆರ್ ಪೆನೆಲೊಪ್ ಳನ್ನು ಸಿಡ್ನಿಗೆ ಕೊಟ್ಟು ವಿವಾಹ ಮಾಡಿಸುವ ಬಯಕೆ ಹೊಂದಿದ್ದನು. ದೂರಾದೃಷ್ಟವಶಾತ್ ವಾಲ್ಟೆರ್ ೧೫೭೬ರಲ್ಲಿ ಇಹಲೋಕ ತ್ಯೆಜಿಸಿದನು. ನಂತರ ಸಿಡ್ನಿಯು ಇಂಗ್ಲೆಂಡಿನಲ್ಲಿ ರಾಜಕೀಯ ಮತ್ತು ಕಲೆಗಳಲ್ಲಿ,ಸಾಹಿತ್ಯ]ದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡನು. ಇದಲ್ಲದೆ ಅವನ ತಂದೆಯ ಆಢಳಿತವನ್ನು ಐರ್ಲೆಂಡಿನಲ್ಲಿ ಬಹಳ ವರ್ಷಗಳ ಕಾಲ ರಕ್ಷಿಸಿ ನಿರ್ವಹಿಸಿದನು.

ಸಾಹಿತ್ಯ ಕೃಷಿ

ಬದಲಾಯಿಸಿ

ಇವನ ಸಾಹಿತ್ಯ ಕೃತಿಗಳು ಇವನ ಹೆಸರು ಅಜಾರಾಮರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇವನ ಯೂರೋಪಿನ ಪ್ರವಾಸದಲ್ಲಿದ್ದಾಗ ೧೫೮೦ರಲ್ಲಿ "ಆಸ್ತ್ರೊಪೆಲ್ ಮತ್ತು ಸ್ಟೆಲಾ" ಎಂಬ ಕೃತಿಯನ್ನು ರಚಿಸಿದನು. ಇದು ಇವನ ಮೊದಲ ಮತ್ತು ಎಂಗ್ಲೀಷ್ ಸಾಹಿತ್ಯದಲ್ಲಿ ಮುಖ್ಯವಾದ ಸಾನೆಟ್ ಕೃತಿಯಾಗಿದೆ. ಈ ಕೃತಿಯಲ್ಲಿ ಪೆಟ್ರಾರ್ಕನ್ ಬಗೆಯ ಸಾನೆಟ್ ಗಳನ್ನು ಕಾಣಬಹುದು. ಈ ಕೃತಿಯು ೧೦೮ ಸಾನೆಟ್ ಮತ್ತು ೧೧ ಹಾಡುಗಳನ್ನು ಹೊಂದಿದೆ. ಇದನ್ನು ಸಿಡ್ನಿಯು ತನ್ನ ಪ್ರಿಯತಮೆ ಪೆನಲೊಪಳಿಗೆ ಸಮರ್ಪಿಸಿದನು. ಸುಮಾರು ೧೫೭೮ರಲ್ಲಿ "ದ ಲೇಡಿ ಆಫ್ ಮೇ" ಎಂಬ ಮತ್ತೋಂದು ಕೃತಿಯನ್ನು ಕ್ವಿನ್ ಎಲಿಜಬೆತಳಿಗಾಗಿ ರಚಿಸಿದನು. ಇವಲ್ಲದೆ "ದಿ ಕೌಂಟೆಸ್ ಆಫ್ ಪೆಂಬ್ರೋಕ್ಸ್ ಆರ್ಕಾಡಿಯಾ" ಮತ್ತು "ಎ ಡಿಪೆನ್ಸ್ ಆಫ್ ಪಾಯ್ಸಿ" ಎಂಬ ಕೃತಿಗಳನ್ನು ರಚಿಸಿದ್ದಾನೆ. ಅದರೆ ದೂರಾದೃಷ್ಟವಶಾತ್ ಇವನ ಯಾವ ಕೃತಿಗಳು ಜೀವಿತಾವಧಿಯಲ್ಲಿ ಪ್ರಕಟಗೊಳ್ಳಲಿಲ್ಲ್ಲ.

ಫಿಲಿಪ್ ಸಿಡ್ನಿಯ ಕೊನೆಯ ದಿನಗಳು

ಬದಲಾಯಿಸಿ

ಪಿಲಿಪ್ ಸಿಡ್ನಿಗೆ ಯುದ್ಧವೆಂಬುದು ರಕ್ತಗತವಾಗಿ ಬಂದಿತ್ತು..ಇವನು ಒಬ್ಬ ಸಮರ್ಥ ಸೈನಿಕನಾಗಿದ್ದನು. ೧೫೭೦ರಲ್ಲಿ ಪ್ರೋಟೆಸ್ಟೆಂಟ್ ರ ಪರವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಮತ್ತು ಸ್ಪೇನ್ ನ ವಿರುದ್ಧವಾಗಿ ಹೋರಾಡಿದನು.ಈ ಯುದ್ಧದ ಸಮಯದಲ್ಲಿ ಗಾಯಗೊಂಡು ಸಿಡ್ನಿಯು ತನ್ನ ೩೨ನೇ ವಯಸ್ಸಿನಲ್ಲಿ ಮರಣ ಹೊಂದಿದನು. ಸಿಡ್ನಿಯ ದೇಹ ೧೬ ಪೆಬ್ರವರಿ ೧೫೮೭ರಲ್ಲಿ ಲಂಡನಿನ ಸೇಂಟ್ ಪಾಲ್ ಕ್ಯಾಥಡ್ರಾಲ್ ಚರ್ಚ್ ಗೆ ತಲುಪಿತು.