ಪಿಯರ್ಸ್ ಬ್ರಾಸ್ನನ್

ಪಿಯರ್ಸ್ ಬ್ರೆಂಡನ್ ಬ್ರಾನ್ಸನ್ (ಜನನ ಮೇ 16, 1953) ಒಬ್ಬ ಐರಿಷ್ ನಟ. ಐರಿಷ್ ಮತ್ತು ಅಮೆರಿಕನ್ ಪೌರತ್ವಗಳೆರಡನ್ನೂ ಹೊಂದಿರುವಂತಹ ಒಬ್ಬ ನಟ, ಚಲನಚಿತ್ರನಿರ್ಮಾಪಕ ಹಾಗೂ ಪರಿಸರಪ್ರೇಮಿ. 16ನೆಯ ವಯಸ್ಸಿನಲ್ಲಿ ಶಾಲೆ ಬಿಟ್ಟ ಬ್ರಾನ್ಸನ್ ಚಿತ್ರಕಲಾ ಉದ್ಯಮದಲ್ಲಿ ತರಬೇತಿ ಪಡೆಯಲು ತೊಡಗಿ, ನಂತರ ಲಂಡನ್ನಿನ ಡ್ರಾಮಾ ಸೆಂಟರ್ ನಲ್ಲಿ ಮೂರು ವರ್ಷಗಳ ಕಾಲ ತರಬೇತಿ ಪಡೆದನು. ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ಇವನು ರೆಮಿಂಗ್ಟನ್ ಸ್ಟೀಲ್ ಎಂಬ ಟಿವಿ ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದನು. ಅವನು ಗುಪ್ತಚರನಾದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಗೋಲ್ಡನ್ ಐ , ಟುಮಾರೋ ನೆವರ್ ಡೈಸ್ , ದ ವರ್ಲ್ಡ್ ಈಸ್ ನಾಟ್ ಎನಫ್ ಮತ್ತು ಡೈ ಅನದರ್ ಡೇ ಚಿತ್ರಗಳಲ್ಲಿ ಅಭಿನಯಿಸಿದನು. ಅವನು ತನ್ನ ಧ್ವನಿ ಮತ್ತು ಬಾಂಡ್ ನ ಪ್ರತಿರೂಪವನ್ನೂ ವಿಡಿಯೋ ಆಟJames Bond 007: Everything or Nothing ಎಂಡ್ ಹಿಸ್ ಲೈಕ್ ನೆಸ್ ಟುJames Bond 007: Nightfire ಗೆ ನೀಡಿದನು. 1993ರಲ್ಲಿ ಬ್ರಾನ್ಸನ್ ಮಿಸೆಸ್ ಡೌಟ್ ಫೈರ್ ಚಿತ್ರದಲ್ಲಿನ 'ಸ್ಟುವರ್ಟ್ ಡನ್ಮೆಯರ್' ನ ಪಾತ್ರದಲ್ಲಿ ಅಭಿನಯಿಸಿದನು. 1997ರಲ್ಲಿ ಡಾಂಟೇ'ಸ್ ಪೀಕ್ ಎಂಬ ಚಲನಚಿತ್ರದಲ್ಲಿ, ಲಿಂಡಾ ಹ್ಯಾಮಿಲ್ಟನ್ ಳೊಡನೆ ಅಗ್ನಿಪರ್ವತ ತಜ್ಞ ಹ್ಯಾರಿ ಡಾಲ್ಟನ್ ನ ಪಾತ್ರದಲ್ಲಿ ಅಭಿನಯಿಸಿದನು. 1996ರಲ್ಲಿ ಬ್ಯೂ ಸೇಂಟ್ ಕ್ಲೇರ್ ಜೊತೆಗೂಡಿ ಲಾಸ್ ಏಂಜಲೀಸ್ ನಲ್ಲಿ ಐರಿಷ್ ಡ್ರೀಮ್ ಟೈಮ್ ಎಂಬ ನಿರ್ಮಾಪಕ ಸಂಸ್ಥೆಯನ್ನು ಹುಟ್ಟುಹಾಕಿದನು. ಕ್ಯಾಸೆಂಡ್ರಾ ಹ್ಯಾರಿಸ್ ಳೊಡನೆ ಅವಳ ಅವಸಾನದವರೆಗೂ ವಿವಾಹಿತನಾಗಿದ್ದ ಇವನು ನಂತರ ಕೀಲಿ ಶಾಯೆ ಸ್ಮಿತ್ ಳನ್ನು ವಿವಾಹವಾಗಿದ್ದಾನೆ. ಜೇಮ್ಸ್ ಬಾಂಡ್ ನ ಪಾತ್ರದಲ್ಲಿ ಅಭಿನಯಿಸುವುದನ್ನು ಬಿಟ್ಟ ನಂತರ ಬ್ರಾನ್ಸನ್ ದ ಮೆಟಡೋರ್ ಮತ್ತು ಸೆರಾಫಿನ್ ಫಾಲ್ಸ್ ನಂತಹ ಚಿತ್ರಗಳಲ್ಲಿ ನಟಿಸಿದ್ದಾನೆ. 2004ರಲ್ಲಿ ಅಮೆರಿಕದ ಪೌರನಾದನು. ನಂತರದ ದಿನಗಳಲ್ಲಿ ಬ್ರಾನ್ಸನ್ ತನ್ನ ಉದಾರತೆಗೆ ಮತ್ತು ಪರಿಸರ ಕಾಳಜಿಗೆ ಹೆಸರುವಾಸಿಯಾಗಿದ್ದಾನೆ. ಗಾಉನಪ್ರಧಾನವಾದ ಚಲನಚಿತ್ರ ಮಮ್ಮಾ ಮಿಯಾ ದಲ್ಲಿ ಸ್ಯಾಮ್ ಕಾರ್ಮೈಕಲ್ ನ ಪಾತ್ರದಲ್ಲಿ ಬ್ರಾನ್ಸನ್ ಅಭಿನಯಿಸಿದನು.

ಪಿಯರ್ಸ್ ಬ್ರಾಸ್ನನ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Pierce Brendan Brosnan
(1953-05-16) ೧೬ ಮೇ ೧೯೫೩ (ವಯಸ್ಸು ೭೧)
Drogheda, County Louth, Ireland
ವೃತ್ತಿ Actor, producer, environmentalist
ವರ್ಷಗಳು ಸಕ್ರಿಯ 1979–present
ಪತಿ/ಪತ್ನಿ Cassandra Harris
(1977–1991) (her death)
Keely Shaye Smith
(2001–present)
Official website

ಆರಂಭಕ ಜೀವನ

ಬದಲಾಯಿಸಿ

ಮೇ 16. 1953ರಂದು ಐರ್ಲೆಂಡ್ಲೌತ್ ಕೌಂಟಿ[]ಡ್ರೊಗೆದಾದಲ್ಲಿನ ಸೇಂಟ್ ಮೇರೀಸ್ ಆಸ್ಪತ್ರೆಯಲ್ಲಿ ಥಾಮಸ್ ಬ್ರಾನ್ಸನ್ ಎಂಬ ಬಡಗಿ ಮತ್ತು ಮೇ (ಜನ್ಮನಾಮ ಸ್ಮಿತ್ ) ದಂಪತಿಗಳ ಒಬ್ಬನೇ ಮಗನಾಗಿ ಬ್ರಾನ್ಸನ್ ನ ಜನನವಾಯಿತು. ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದ ಬ್ರಾನ್ಸನ್ ನ ಶಿಕ್ಷಣ ಕ್ರಿಶ್ಚಿಯನ್ ಬ್ರದರ್ಸ್ ನಡೆಸುತ್ತಿದ್ದ ಸ್ಥಳೀಯ ಶಾಲೆಯಲ್ಲಿ ನಡೆಯಿತು. ತಂದೆಯು ಕುಟುಂಬವನ್ನು ತ್ಯಜಿಸಿ ಹೊರಟುಹೋದನಂತರ ಬ್ರಾನ್ಸನ್ ನ ತಾಯಿಯು ದಾದಿಯಾಗಿ ಕೆಲಸ ಮಾಡಲೋಸುಗ ಲಂಡನ್ ಗೆ ಬಂದಳು. "ನನ್ನ ಬಾಲ್ಯದಲ್ಲಿ ಒಂಟಿತನವೇ ಹೆಚ್ಚು. ದಕ್ಷಿಣ ಐರ್ಲೆಂಡ್ ನ ಒಂದು ಸಣ್ಣ ಪಟ್ಟಣದಲ್ಲಿ ನಾನು ಬೆಳೆದೆ. ನನಗೆ ನನ್ನ ತಂದೆಯ ಪರಿಚಯವೇ ಇರಲಿಲ್ಲ. ಅವನು ನಾನು ಶಿಶುವಾಗಿದ್ದಾಗಲೇ ಹೊರಟುಹೋದುದರಿಂದ ನನ್ನನ್ನು ಸಾಕಿ ಸಲಹಿದವರು ನನ್ನ ತಾಯಿ ಮತ್ತು ನನ್ನ ಅಜ್ಜ-ಅಜ್ಜಿಯರು. 50ರ ದಶಕದಲ್ಲಿ ಕ್ಯಾಥೊಲಿಕ್ ಆಗಿ, ಅದರಲ್ಲೂ ಐರಿಷ್ ಕ್ಯಾಥೋಲಿಕ್ ಆಗಿದ್ದು, ಇದ್ದೂ ಇಲ್ಲದ ವಿವಾಹ ಹೊಂದಿದ್ದು, ತಂದೆಯೂ ಇಲ್ಲದ ನನ್ನ ಪರಿಸ್ಥಿತಿಯನ್ನೂ ನಿಭಾಯಿಸುತ್ತಾ, ನನ್ನ ತಾಯಿ ಬಹಳವೇ ತೊಂದರೆಗಳನ್ನು ಅನುಭವಿಸಿದಳು. ನನ್ನ ತಾಯಿ ಬಹಳ ಧೈರ್ಯವಂತಳು. ಇದ್ದ ಜಾಗ ತೊರೆದು ಇಂಗ್ಲೆಂಡ್ ಗೆ ಹೋಗಿ ನರ್ಸ್ ಆಗಿ ಬಾಳುವ ದಿಟ್ಟ ಹೆಜ್ಜೆಯಿಟ್ಟಳಾಕೆ. ನನ್ನ ಮತ್ತು ಅವಳ ಬದುಕು ಇನ್ನೂ ಉತ್ತಮವಾಗಬೇಕೆಂಬುದೇ ಆಕೆಯ ಗುರಿಯಾಗಿತ್ತು. ನನ್ನ ತಾಯಿ ಮನೆಗೆ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಬರುತ್ತಿದ್ದಳು." ಎಂಬುದು ಬ್ರಾನ್ಸನ್ ನ ಅಂಬೋಣ.[] ಹೀಗಾಗಿ ಬ್ರಾನ್ಸನ್ ತನ್ನ ಅಜ್ಜ-ಅಜ್ಜಿಯರಾದ ಫಿಲಿಪ್ ಮತ್ತು ಕ್ಯಾಥ್ಲೀನ್ ಸ್ಮಿತ್ ರ ಪಾಲನೆ-ಪೋಷಣೆಯಲ್ಲಿ ಬೆಳೆದನು.[] ಅವರ ಮರಣಾನಂತರ ಒಬ್ಬ ಚಿಕ್ಕಮ್ಮನೊಡನೆಯೂ, ನಂತರ ಒಬ್ಬ ಚಿಕ್ಕಪ್ಪನೊಡನೆಯೂ ಬದುಕು ಸಾಗಿಸಿದನು. ಆದರೆ ನಂತರ ಈಲೀನ್ ಎಂಬ ಸ್ತ್ರೀಯೊಡನೆ ಪಟ್ಟಣದ ಕೆಳದರ್ಜೆಯ ಭಾಗದಲ್ಲಿ ವಾಸಿಸಲು ಕಳುಹಿಸಲ್ಪಟ್ಟನಾದರೂ ಆ ವಾಸ ಸ್ವಾಗತಾರ್ಹವಾಗಿತ್ತು ಎಂದು ವರ್ಣಿಸುತ್ತಾನೆ ಬ್ರಾನ್ಸನ್.[] ತನಗೆ ಶಿಕ್ಷಣ ನೀಡಿದ ಕ್ರಿಶ್ಚಿಯನ್ ಬ್ರದರ್ಸ್ ಬಗ್ಗೆ ಬ್ರಾನ್ಸನ್ ಖಾರವಾಗಿ ನುಡಿಯುತ್ತಾನೆ, "ನಾನು ಕ್ರಿಶ್ಚಿಯನ್ ಬ್ರದರ್ಸ್ ರಿಂದ ಶಿಕ್ಷಣ ಪಡೆಯುತ್ತಾ ಬೆಳೆದನಲ್ಲಾ, ಆ ಶಿಕ್ಷಕರು ನಿಜಕ್ಕೂ ಘೋರ, ಬಲು ಘೋರ ಮನುಷ್ಯರು. ಬಹಳ ಬೂಟಾಟಿಕೆಯ ಜನರವರು. ಮಕ್ಕಳೊಡನೆ ಅವರ ನಡವಳಿಕೆ ಬಹಳ ಕ್ರೂರವಾಗಿರುತ್ತಿತ್ತು. ಅವರು ಲೈಂಗಿಕವಾಗಿ ಕ್ಷೋಭೆಗೊಳಗಾಗಿದ್ದರು. ಕಾಠಿಣ್ಯವುಳ್ಳವರು. ನಿಜಕ್ಕೂ ಹೇಡಿಗಳು. ನನಗೆ ಅವರ ಬಗ್ಗೆ ಹೇಳಲು ಒಂದೇ ಒಂದು ಒಳ್ಳೆಯ ಮಾತೂ ಇಲ್ಲ ಮತ್ತು ಎಂದಿಗೂ ಇರುವುದೂ ಇಲ್ಲ. ಅವರ ಸಂಗ ಬಹಳ ಗಲೀಜು. ಬಹಳ ಕೊಳಕು. ಘೋರ. ಲಜ್ಜೆಗೊಳ್ಳುವುದರ ಹೊರತಾಗಿ ಕ್ರಿಶ್ಚಿಯನ್ ಬ್ರದರ್ಸ್ ರಿಂದ ನಾನು ಏನನ್ನೂ ಕಲಿಯಲಿಲ್ಲ." ೆನ್ನುತ್ತಾರೆ ಬ್ರಾನ್ಸನ್.[] ಬ್ರಾನ್ಸನ್ ಆಗಸ್ಟ್ 12, 1964ರಂದು ಐರ್ಲೆಂಡ್ ಬಿಟ್ಟುಬಂದು ತನ್ನ ತಾಯಿಯನ್ನು ಮತ್ತು ಆ ವೇಳೆಗೆ ಆಕೆ ಹೊಸದಾಗಿ ಮದುವೆಯಾಗಿದ್ದ ವಿಲಿಯಮ್ ಕಾರ್ಮೈಕಲ್ ಎಂಬ ಎರಡನೆಯ ಮಹಾಯುದ್ಧದಲ್ಲಿ ಹೋರಾಡಿದ ಬ್ರಿಟಿಷ್ ಸೇನಾನಿಯನ್ನು ಸೇರಿದನು. ಆ ವೇಳೆಗೆ ಅವರು ಸ್ಕಾಟ್ ಲ್ಯಾಂಡ್ ನ ಹಳ್ಳಿಯಾದ ಲಾಂಗ್ ನಿಡ್ರಿ ಯಲ್ಲಿ ವಾಸಿಸುತ್ತಿದ್ದರು.[][] ಬ್ರಾನ್ಸನ್ ಕೂಡಲೆ ತನ್ನ ತಾಯಿಯ ನೂತನ ಗಂಡನನ್ನು ತನ್ನ ತಂದೆಯಾಗಿ ಸ್ವೀಕರಿಸಿದನು.[] ಬ್ರಾನ್ಸನ್ 11ರ ಹರೆಯದವನಾಗಿದ್ದಾಗ, ಕಾರ್ಮೈಕಲ್ ಅವನನ್ನು ಮೊಟ್ಟಮೊದಲ ಬಾರಿಗೆ ಬಾಂಡ್ ಚಿತ್ರ, ಗೋಲ್ಡ್ ಫಿಂಗರ್ ನೋಡಲು ಕರೆದೊಯ್ದನು.[] ನಂತರ ಲಂಡನ್ ಗೆ ಹಿಂತಿರುಗಿ, ಪಶ್ಚಿಮ ಲಂಡನ್ಪುಟ್ನೀ ಎಂಬಲ್ಲಿನ ರಾಜ್ಯದ ಮಾದರಿ ಪ್ರೌಢಶಾಲೆಯಾದ ಎಲಿಯಾಟ್ ಸ್ಕೂಲ್ ನಲ್ಲಿ ಬ್ರಾನ್ಸನ್ ತನ್ನ ಶಿಕ್ಷಣವನ್ನು ಮುಂದುವರಿಸಿದನು.[] ಬ್ರಾನ್ಸನ್ ಐರ್ಲೆಂಡ್ ನಿಂದ ಇಂಗ್ಲೆಂಡ್ ಗೆ ವಲಸೆ ಬಂದುದರ ಬಗ್ಗೆ ಮತ್ತು ಲಂಡನ್ನಿನ ತನ್ನ ವಿದ್ಯಾಭ್ಯಾಸದ ಬಗ್ಗೆ "10 ವರ್ಷ ವಯಸ್ಸಿನ ಐರಿಷ್ ಹುಡುಗನಾಗಿ, ಇಂಗ್ಲೆಂಡ್ ನಂತಹ ದೊಡ್ಡ ನಗರಕ್ಕೆ, ಲಂಡನ್ ನಂತಹ ರಾಜಧಾನಿಗೆ, ಹೋದಾಗ, ಜೀವನ ಬಹಳ ವೇಗವಾಗಿ ಸಾಗುತ್ತದೆ. ಐರ್ಲೆಂಡಿನಲ್ಲೋ ಅಬ್ಬಬ್ಬಾ ಎಂದರೆ ಏಳು ತರಗತಿಗಳ ಶಾಲೆ. ಲಂಡನ್ನಿನಲ್ಲಿ ಬೃಹತ್ತಾದ, ಪರಿಪೂರ್ಣವಾದ, 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ. ಮೇಲಾಗಿ ನಾನೊಬ್ಬ ಐರಿಷ್. ಮತ್ತು ನಾನು ಐರಿಷ್ ಎಂಬುದನ್ನು ಮರೆಯದಂತೆ ಅವರ ನಡವಳಿಕೆ ಇರುತ್ತದೆ; ಬ್ರಿಟನ್ನಿನವರಿಗೆ ಈ ರೀತಿಯ ನಡವಳಿಕೆ ಕರಗತವಾಗಿದೆ ಮತ್ತು ಹೀಗಾಗಿ ನಾನು ಹೊರಗಿನವನೇ ಎಂಬ ಭಾವ ನನ್ನಲ್ಲಿ ಚೆನ್ನಾಗಿ ಬೇರೂರಿತು."ಎನ್ನುತ್ತಾರೆ.[] ಅವನು ಶಾಲೆಗೆ ಹೋಗುತ್ತಿದ್ದಾಗ ಅವನಿಗೆ ಇದ್ದ ಅಡ್ಡ ಹೆಸರು "ಐರಿಷ್" ಎಂದು.[]

ಶಾಲೆಯನ್ನು 16ರ ವಯಸ್ಸಿನಲ್ಲಿ ಬಿಟ್ಟ ನಂತರ ಬ್ರಾನ್ಸನ್ ಚಿತ್ರಕಲಾವಿದನಾಗುವ ಹಂಬಲದಿಂದ ವಾಣಿಜ್ಯಪರ ಚಿತ್ರಗಳನ್ನು ಬಿಡಿಸುವ ತರಬೇತಿ ಪಡೆಯಲು ಸೆಂಟ್ರಲ್ ಸೇಂಟ್ ಮಾರ್ಟಿನ್ಸ್ ಕಾಲೇಜ್ ಆಫ್ ಆರ್ಟ್ ಎಂಡ್ ಡಿಸೈನ್ ಗೆ ಸೇರಿದನು.[] 1969ರಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುವ ಶಿಬಿರಕ್ಕೆಂದು ಓವಲ್ ಹೌಸ್ ಗೆ ಬ್ರಾನ್ಸನ್ ಬಂದನು. ಒಬ್ಬ ಬೆಂಕಿ ತಿನ್ನುವವನು(ಜಾದೂಗಾರ) ಅಲ್ಲಿ ನೆರೆದಿದ್ದ ಹೆಂಗಸರಿಗೆ ಎದೆಯ ಭಾಗದಲ್ಲಿ ಬೆಂಕಿಯನ್ನು ತೊಡಗಿಸಿಕೊಳ್ಳುವುದು ಹೇಗೆಂದು ತರಬೇತಿ ನೀಡುತ್ತಿದ್ದನು ಮತ್ತು ತತ್ಕಾರಣವಾಗಿ ಆ ಸ್ತ್ರೀಯರು ತಮ್ಮ ಮೇಲುಡುಗೆಗಳನ್ನು ತೆರೆದಿದ್ದರು. ಇದನ್ನು ಕಂಡ ಬ್ರಾನ್ಸನ್ ತಾನೂ ಅಲ್ಲಿ ಸೇರಲಿಚ್ಛಿಸಿದನು ಮತ್ತು 'ಬೆಂಕಿ ತಿನ್ನುವ' ವಿದ್ಯೆ ಕಲಿತನು.[೧೦] ಒಬ್ಬ ಸರ್ಕಸ್ ಏಜೆಂಟನು ಇವನು ಬೆಂಕಿಯೊಡನೆ ಆಟವಾಡುತ್ತಿದ್ದುದನ್ನು ಕಂಡು, ಮೂರು ವರ್ಷಗಳ ಕಾಲ ಇವನನ್ನು ತನ್ನ ಸೇವೆಯಲ್ಲಿರಿಸಿಕೊಂಡನು[]. ನಂತರದ ಮೂರು ವರ್ಷಗಳಲ್ಲಿ ಬ್ರಾನ್ಸನ್ ಡ್ರಾಮಾ ಸೆಂಟರ್ ಲಂಡನ್ ನಲ್ಲಿ ಅಭಿನಯದ ತರಬೇತಿ ಪಡೆದನು.[೧೧] ಬ್ರಾನ್ಸನ್ ನಟನಾಗುವ ಮತ್ತು ನಟನಾದುದರಿಂದ ತನ್ನ ಜೀವನದ ಮೇಲೆ ಆದ ಪರಿಣಾಮಗಳನ್ನು ಹೀಗೆ ವರ್ಣಿಸುತ್ತಾರೆ, "ನಾನು ಅಭಿನಯವನ್ನು ಕಂಡುಕೊಂಡಾಗ, ಅಥವಾ, ಅಭಿನಯವೇ ನನ್ನನ್ನು ಆರಿಸಿಕೊಂಡಾಗ, ನನಗೆ ಸ್ವಚ್ಛಂದತೆ ದೊರೆತಂತಹ ಅನುಭವವಾಯಿತು. ಅದು ಮತ್ತೊಂದು ಬದುಕಿಗೆ ಮೆಟ್ಟಿಲಾಯಿತು, ನನ್ನ ಜೀವನದ ಹಾದಿಗಿಂತಲೂ ಬಲು ವಿಭಿನ್ನವಾದ ಬದುಕಿಗೆ, ಹಾಗೂ ಅಭಿನಯ ನನಗೆ ಸಿದ್ಧಿಸಿದ ಕಲೆಯಾಗಿತ್ತು, ಅದು ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಗೆ ಪಡೆದ ಮೆಚ್ಚುಗೆ ನನ್ನ ಬದುಕಿಗೆ ಬಹಳ ತೃಪ್ತಿ ತಂದಿತು."[]

ಸಾಗಿ ಬಂದ ವೃತ್ತಿ ಮಾರ್ಗ

ಬದಲಾಯಿಸಿ

ವೃತ್ತಿ ಜೀವನದ ಆರಂಭ

ಬದಲಾಯಿಸಿ

1975ರಲ್ಲಿ ಡ್ರಾಮಾ ಸೆಂಟರ್ ನಿಂದ ತರಬೇತಿ ಪಡೆದು ಹೊರಬಂದ ಬ್ರಾನ್ಸನ್ ಅಭಿನಯ ಸಹಾಯಕ ವೇದಿಕಾ ವ್ಯವಸ್ಥಾಪಕ (acting assistant stage ಮ್ಯಾನೇಜರ್)ನಾಗಿ ಯಾರ್ಕ್ ಥಿಯೇಟರ್ ರಾಯಲ್ ಸೇರಿ, ತನ್ನ ಅಭಿನಯ ಜೀವನಕ್ಕೆ ವೇಯ್ಟ್ ಅಂಟಿಲ್ ಡಾರ್ಕ್ ಮೂಲಕ ಪಾದಾರ್ಪಣೆ ಮಾಡಿದನು. ಆರು ತಿಂಗಳೊಳಗೆ ಟೆನೆಸ್ಸಿ ವಿಲಿಯಮ್ಸ್ ಎಂಬ ನಾಟಕರಚನಕಾರನು ಬ್ರಿಟಿಷ್ ಪ್ರಥಮ ನಾಟಕ ಪ್ರದರ್ಶನವಾದ ದ ರೆಡ್ ಡೆವಿಲ್ ಬ್ಯಾಟರಿ ಸೈನ್ ಎಂಬ ನಾಟಕದಲ್ಲಿ ಮೆಕಾಬ್ ನ ಪಾತ್ರವಹಿಸಲು ಆರಿಸಿದನು.[೧೨] ಬ್ರಾನ್ಸನ್ ನ ಅಭಿನಯವು ಲಂಡನ್ ನಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿದ್ದು, ಬ್ರಾನ್ಸನ್ ಇಂದಿಗೂ ವಿಲಿಯಮ್ಸ್ ಕಳುಹಿಸಿದ ತಂತಿ ಸಂದೇಶ "ಥ್ಯಾಂಕ್ ಗಾಡ್ ಫಾರ್ ಯೂ, ಮೈ ಡಿಯರ್ ಬಾಯ್" ಎಂಬುದನ್ನು ಜತನದಿಂದ ಇಟ್ಟುಕೊಂಡಿದ್ದಾರೆ.[೧೩] ಅಭಿನಯರಂಗದಲ್ಲೇ ಮುಂದುವರೆದ ಬ್ರಾನ್ಸನ್ ದ ಲಾಂಗ್ ಗುಡ್ ಫ್ರೈಡೇ (1980), ದ ಮಿರರ್ ಕ್ರ್ಯಾಕ್ಡ್ (1980) ನಂತಹ ಚಲನಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡದ್ದಲ್ಲದೆ ದ ಪ್ರೊಫೆಷನಲ್ಸ್ , ಮರ್ಫೀಸ್ ಸ್ಟ್ರೋಕ್ ಮತ್ತು ಪ್ಲೇ ಫಾರ್ ಟುಡೇ ಯಂತಹ ಕಿರುತೆರೆಯ ಚಿತ್ರಗಳಲ್ಲೂ ಅಭಿನಯಿಸಿದನು. ಮ್ಯಾನಿಯನ್ಸ್ ಆಫ್ ಅಮೆರಿಕ ಎಂಬ ಯುನೈಟೆಡ್ ಸ್ಟೇಟ್ಸ್ ನ ಜನಪ್ರಿಯ ಕಿರುತೆರೆಯ ಕಿರುಧಾರವಾಹಿಯಲ್ಲಿನ ಪ್ರಮುಖ ಪಾತ್ರದ ಮೂಲಕ ಅವನು ಕಿರುತೆರೆಯ ತಾರೆಯಾದನು.[೧೪] ಇದರ ಬೆನ್ನಲ್ಲೇ 1982ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಕುಳಿತ ಮೊಟ್ಟಮೊದಲ ಮಹಿಳೆ ಲೇಡಿ ನ್ಯಾನ್ಸಿ ಆಸ್ಟರ್ ಳ ಜೀವನವನ್ನು ಬಿಂಬಿಸಿದ ಮಾಸ್ಟರ್ ಪೀಸ್ ಥಿಯೇಟರ್ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದನು. 1985ರಲ್ಲಿ ಪ್ರೀತಿ-ವಂಚಿತ ರಾಬರ್ಟ್ ಗೌಲ್ಡ್ ಷಾ II ನ ಪಾತ್ರಕ್ಕೆ ಜೀವ ತುಂಬಿದ ಬ್ರಾನ್ಸನ್ ಗೆ ಅತ್ಯುತ್ತಮ ಪೋಷಕ ನಟ ಎಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶಿಸಲಾಯಿತು.[೧೫] 1982ರಲ್ಲಿ ಬ್ರಾನ್ಸನ್ ದಕ್ಷಿಣ ಕ್ಯಾಲಿಫೋರ್ನಿಯಾಗೆ ತೆರಳಿ NBCಯ ರೋಚಕ ಪತ್ತೇದಾರಿ ಸರಣಿಯಾದ ರೆಮಿಂಗ್ಟನ್ ಸ್ಟೀಲ್ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ನಲ್ಲಿ ಖ್ಯಾತಿವೆತ್ತವರಾದರು.[] ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಅದೇ ವರ್ಷ ಬ್ರಾನ್ಸನ್ "ಯುವ ಜೇಮ್ಸ್ ಬಾಂಡ್ ನ ಪಾತ್ರಕ್ಕೆ ಸರಿಹೊಂದಬಲ್ಲರು" ಎಂದು ಅಭಿಪ್ರಾಯ ಪಟ್ಟಿತು.[೧೬] ರೆಮಿಂಗ್ಟನ್ ಸ್ಟೀಲ್ 1987ರಲ್ಲಿ ಮುಗಿದ ನಂತರ ಬ್ರಾನ್ಸನ್ ದ ಫೋರ್ತ್ ಪ್ರೋಟೋಕಾಲ್ (1987),ಎಂಬ ರೋಚಕ ಶೀತಲ ಸಮರ ಬಿಂಬಿಸುವ ಚಿತ್ರದಲ್ಲಿ ಮೈಕಲ್ ಕೇಯ್ನ್ ನೊಡನೆ, ದ ಡಿಸೀವರ್ಸ್ (1988) ಹಾಗೂ ದ ಲಾನ್ ಮೋವರ್ ಮ್ಯಾನ್ (1992)ಎಂಬ ಚಿತ್ರಗಳಲ್ಲಿ ಅಭಿನಯಿಸಿದನು. 1992ರಲ್ಲಿ NBCಗಾಗಿ ರನ್ನಿಂಗ್ ವೈಲ್ಡ್ ಎಂಬ ಒಂದು ಪ್ರಾರಂಭಿಕ ಪ್ರಾತ್ಯಕ್ಷಿಕೆಯಲ್ಲಿ ಆಟೋ ವರ್ಲ್ಡ್ ಪತ್ರಿಕೆಯ ವರದಿಗಾರನ ಪಾತ್ರದಲ್ಲಿ ಕಾಣಿಸಿಕೊಂಡನು. ಜೆನ್ನಿಫರ್ ಲವ್ ಹ್ಯೂಯಿಟ್ ಅವನ ಮಗಳಾಗಿ ಅಭಿನಯಿಸಿದ್ದ ಈ ಚಿತ್ರ ತೆರೆ ಕಾಣಲೇ ಇಲ್ಲ.[೧೭] 1993ರಲ್ಲಿ ಹಾಸ್ಯಮಯ ಚಿತ್ರ ಮಿಸೆಸ್ ಡೌಟ್ ಫೈರ್ ನಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದನು. ಡೆತ್ ಟ್ರೈನ್ (1993) ಮತ್ತು ಹಾಂಗ್ ಕಾಂಗ್ ನಲ್ಲಿ ಕೇಂದ್ರಿತವಾದ ಬೇಹುಗಾರಿಕಾ ಸ್ವಾರಸ್ಯಕರ ಚಿತ್ರ ನೈಟ್ ವಾಚ್ (1995)ನಂತಹ ಕಿರುತೆರೆಗಾಗಿ ಮಾಡಿದ ಚಲನಚಿತ್ರಗಳಲ್ಲೂ ಅವನು ಅಭಿನಯಿಸಿದನು.

ಜೇಮ್ಸ್ ಬಾಂಡ್ (1995–2004)

ಬದಲಾಯಿಸಿ

ಬ್ರಾನ್ಸನ್ ನ ಮೊದಲ ಹೆಂಡತಿಯು ಫಾರ್ ಯುವರ್ ಐಸ್ ಓನ್ಲಿ ಎಂಬ ಬಾಂಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದ ಕಾರಣ ಜೇಮ್ಸ್ ಬಾಂಡ್ ಚಿತ್ರಗಳ ನಿರ್ಮಾಪಕ ಆಲ್ಬರ್ಟ್ ಆರ್. ಬ್ರೋಕೋಲಿಯನ್ನು ಬ್ರಾನ್ಸನ್ ಆ ಚಿತ್ರದ ಸೆಟ್ಸ್ ನಲ್ಲಿ ಮೊದಲ ಬಾರಿಗೆ ಭೇಟಿಯಾದನು. ಬ್ರೋಕೋಲಿಯು "ಅವನು ಅಭಿನಯಿಸಬಲ್ಲನಾದರೆ - ರೋಜರ್ ಮೂರ್ ನಿಂದ ಪಾರಂಪಾರಿಕವಾಗಿ ಬಾಂಡ್ ನ ಪಾತ್ರವನ್ನು ಪಡೆದು ಮುಂದುವರೆಸಲು ಅವನೇ ನನ್ನ ಆಯ್ಕೆ." ಎಂದನು.[೧೬] ಎಂಟರ್ಟೈನ್ಮೆಂಟ್ ಟುನೈಟ್ ಮತ್ತು ನ್ಯಾಷನಲ್ ಎನ್ ಕ್ವೈರರ್ ಪತ್ರಿಕೆಗಳು ಬ್ರಾನ್ಸನ್ ರೋಜರ್ ಮೂರ್ ನ ಮತ್ತೊಂದು ಪಾತ್ರವಾದ ದ ಸೇಂಟ್ , ಸೈಮನ್ ಟೆಂಪ್ಲರ್ ನ ಪಾತ್ರವನ್ನೂ ತನ್ನದಾಗಿಸಿಕೊಳ್ಳಸಿದ್ದಾನೆ ಎಂದು ವರದಿ ಮಾಡಿದವು.[೧೬] ಬ್ರಾನ್ಸನ್ ಈ ಹೇಳಿಕೆಗಳನ್ನು ನಿರಾಕರಿಸುತ್ತಾ " ಅದು ಇನ್ನೂ ಹಾಲಿವುಡ್ ನಲ್ಲಿ ಯಾರದೋ ಡೆಸ್ಕ್ ಮೇಲೆ ಪವಡಿಸಿದೆ" ಎಂದನು.[೧೮] 1986ರಲ್ಲಿ ಬಾಂಡ್ ಪಾತ್ರದಲ್ಲಿ ಅಭಿನಯಿಸಲು ತಿಮೋತಿ ಡಾಲ್ಟನ್ ನನ್ನು ಸಂಪರ್ಕಿಸಲಾಯಿತು; 1986ರ ಬ್ರೆಂಡಾ ಸ್ಟಾರ್ ನ ಚಿತ್ರೀಕರಣದಲ್ಲಿ ಆಗಲೇ ನಿರತನಾದುದರಿಂದ ಡಾಲ್ಟನ್ ಈ ಪಾತ್ರವನ್ನು ಒಪ್ಪಿಕೊಳ್ಳಲು ಆಗಲಿಲ್ಲ. ನಂತರ ಸ್ಯಾಮ್ ನೀಲ್ ನಿಂದ ಹಿಡಿದು ಹಲವಾರು ನಟರನ್ನು ಆ ಪಾತ್ರಕ್ಕಾಗಿ ಸ್ಕ್ರೀನ್ ಟೆಸ್ಟ್ ಮಾಡಿದರೂ ಬ್ರೋಕೋಲಿಗೆ ಅವರಾರೂ ಸರಿಕಾಣಲಿಲ್ಲ.[೧೯] ರೆಮಿಂಗ್ಟನ್ ಸ್ಟೀಲ್ ಇನ್ನೇನು ಮುಗಿಯುವುದರಲ್ಲಿತ್ತಾದುದರಿಂದ ಬ್ರಾನ್ಸನ್ ಗೆ ಈ ಪಾತ್ರವನ್ನು ನೀಡಲು ಮುಂದೆ ಬಂದರು, ಆದರೆ ಈ ಸುದ್ದಿಯ ಪ್ರಕಟಣೆಯು ರೆಮಿಂಗ್ಟನ್ ಸ್ಟೀಲ್ ಮತ್ತೆ ಜೀವದುಂಬುವಂತೆ ಪರಿಣಾಮ ಬೀರಿದುದರ ಫಲವಾಗಿ ಅದರ ಕರಾರಿನ ಮೇರೆಗೆ ಬ್ರಾನ್ಸನ್ ಬಾಂಡ್ ನ ಪಾತ್ರವನ್ನು ನಿರಾಕರಿಸಬೇಕಾಯಿತು.[೧೬] ಆ ಹೊತ್ತಿಗೆ ಡಾಲ್ಟನ್ ಆ ಪಾತ್ರ ಮಾಡಲು ಬಿಡುವಾದುದರಿಂದ ಮುಂದಿನ ಬಾಂಡ್ ಚಿತ್ರಗಳಾದ ದ ಲಿವಿಂಗ್ ಡೇ ಲೈಟ್ಸ್ (1987) ಮತ್ತು ಲೈಸೆನ್ಸ್ ಟು ಕಿಲ್ (1989) ಚಿತ್ರಗಳು ಆತನ ಪಾಲಾದವು. ಚಿತ್ರದ ವಿಶೇಷ ಹಕ್ಕುಗಳ ಹಾಗೂ ಮಾಲೀಕತ್ವದ ಬಗ್ಗೆ ಕಾನೂನಿನ ತಕರಾರುಗಳು ಎದ್ದ ಕಾರಣ ಡಾಲ್ಟನ್ 1991ರಲ್ಲಿ ಅಭಿನಯಿಸಬೇಕಿದ್ದ ಮೂರನೆಯ ಬಾಂಡ್ ಚಿತ್ರವು (ಗಾಳಿಮಾತಿನ ಪ್ರಕಾರ ಚಿತ್ರದ ಹೆಸರು:ದ ಪ್ರಾಪರ್ಟಿ ಆಫ್ ಎ ಲೇಡಿ [೨೦]) ರದ್ದಾಗಿ, ಬಾಂಡ್ ಚಿತ್ರಗಳ ಸರಣಿ ಆರು ದೀರ್ಘ ವರ್ಷಗಳ ಕಾಲ ಕಣ್ಮರೆಯಾಯಿತು. ಗೋಲ್ಡನ್ ಐ ಮೂಲತಃ ಬಾಂಡ್[ಸೂಕ್ತ ಉಲ್ಲೇಖನ ಬೇಕು] ನ ಪಾತ್ರಧಾರಿ ಡಾಲ್ಟನ್ ಗಾಗಿಯೇ ಬರೆದದ್ದಾಗಿದ್ದು, ಡಾಲ್ಟನ್ ಅದನ್ನು ತಿರಸ್ಕರಿಸಿದನು. ಜೂನ್ ೭, 1994ರಂದು ಬ್ರಾನ್ಸನ್ ಬಾಂಡ್ ಪಾತ್ರವಹಿಸುವ ಐದನೆಯ ನಟ ಎಂದು ಘೋಷಿಸಲಾಯಿತು.[೧೬] ಬ್ರಾನ್ಸನ್ ನನ್ನು ಮೂರುಚಿತ್ರಗಳಲ್ಲಿ ಪಾತ್ರವಹಿಸಲು ಹಾಗೂ ಬೇಕಿದ್ದರೆ ನಾಲ್ಕನೆಯದರಲ್ಲೂ ಅಭಿನಯಿಸಲು ಗೊತ್ತುಮಾಡಲಾಯಿತು. ಅವನು ಮೊದಲು ಬಾಂಡ್ ಆಗಿ ಅಭಿನಯಿಸಿದ 1955ರ ಗೋಲ್ಡನ್ ಐ ವಿಮರ್ಶಕರ ಮೆಚ್ಚುಗೆ ಗಳಿಸಿತು. ವಿಮರ್ಶಕ ಜೇಮ್ಸ್ ಬೆರಾಡಿನೆಲಿ ಬ್ರಾನ್ಸನ್ ನನ್ನು "ಇವನ ಹಿಂದಿನವನಿಗಿಂತಲೂ ನಿರ್ದಿಷ್ಟವಾಗಿ ಉತ್ತಮನು" ಹಾಗೂ "ನೈಜ ಆಕರ್ಷಣೆಯೊಂದಿಗೆ ಹಾಸ್ಯದತ್ತ ಒಲವೂ ಇರುವವನು" ಎಂದು ಬಣ್ಣಿಸಿದನು.[೨೧] ಗೋಲ್ಡನ್ ಐ ಜಗದಾದ್ಯಂತ US $350 ಮಿಲಿಯನ್ ಗಳಿಸಿತು.[೨೨] 1995ರಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ಒಟ್ಟು ಹಣ ಗಳಿಸಿದ ಚಿತ್ರಗಳ ಸಾಲಿನಲ್ಲಿ ಅದು ನಾಲ್ಕನೆಯ ಸ್ಥಾನ ಪಡೆಯಿತು.[೨೩] ಹಣದುಬ್ಬರವಿಲ್ಲದ ಅಂದಿನ ದಿನಗಳಲ್ಲಿ ಅದು ಅತ್ಯಂತ ಯಶಸ್ವಿ ಬಾಂಡ್ ಚಿತ್ರವಾಯಿತು.[೨೪]

ಚಿತ್ರ:ParisandBond.jpg
ಟುಮಾರೋ ನೆವರ್ ಡೈಸ್ ಚಿತ್ರದಲ್ಲಿ ಜೇಮ್ಸ್ ಬಾಂಡ್ ಆಗಿ ಬ್ರಾನ್ಸನ್ (ಬಲಗಡೆ).

ಹೊಸ ವಿಚಾರಗಳನ್ನು ಮುಕ್ತವಾಗಿ ಸ್ವಾಗತಿಸುವ ಬ್ರಾನ್ಸನ್ ಕೆನಡಾದ ಚಿಕ್ಕ ಐತಿಹಾಸಿಕ ಚಲನಚಿತ್ರಗಳ ಸರಣಿಯಾದ ದ ಹೆರಿಟೇಜ್ ಮಿನಿಟ್ಸ್ ನಲ್ಲಿ ಗ್ರೇ ಔಲ್ ನ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡನು.

1996ರಲ್ಲಿ ಬ್ರಾನ್ಸನ್ ತನ್ನ ನಿರ್ಮಾಪಕ ಪಾಲುದಾರ ಬ್ಯೂ ಸೇಂಟ್ ಕ್ಲೇರ್ ನೊಡನೆ ಸೇರಿ "ಐರಿಷ್ ಡ್ರೀಮ್ಸ್" ಎಂಬ ಚಿತ್ರ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದನು. ಮೂರು ವರ್ಷಗಳ ನಂತರ ಆ ಕಂಪನಿಯ ಮೊದಲ ಸ್ಟುಡಿಯೋ ಯಾಜನೆಯಾದ ದ ಥಾಮಸ್ ಕ್ರೌನ್ ಅಫೇರ್ ಬಿಡುಗಡೆಯಾಗಿ ವಿಮರ್ಶೆ ಮತ್ತು ಗಲ್ಲಾಪೆಟ್ಟಿಗೆ ಎರಡರಲ್ಲೂ ಯಶ ಕಂಡಿತು.[೨೫] ಬ್ರಾನ್ಸನ್ 1997ರ ಟುಮಾರೋ ನೆವರ್ ಡೈಸ್ ಮತ್ತು 1999ರ ದ ವರ್ಲ್ಡ್ ಈಸ್ ನಾಟ್ ಎನಫ್ ಮೂಲಕ ಮತ್ತೆ ಬಾಂಡ್ ಚಿತ್ರಗಳಿಗೆ ಮರಳಿದರು ಹಾಗೂ ಆ ಎರಡೂ ಚಿತ್ರಗಳು ಯಶವನ್ನು ಕಂಡವು. 2002ರಲ್ಲಿ ಬ್ರಾನ್ಸನ್ ಬಾಂಡ್ ಆಗಿ ನಾಲ್ಕನೆಯ ಬಾರಿ ಡೈ ಅನದರ್ ಡೇ ಚಿತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರವು ಮಿಶ್ರ ಪ್ರತಿಕ್ರಿಯೆ ಗಳಿಸಿದರೂ ಬಾಕ್ಸ್ ಆಫೀಸ್ ನ ದೃಷ್ಟಿಯಲ್ಲಿ ಯಶಸ್ವಿಯೇ ಆಯಿತು. ಸ್ವತಃ ಬ್ರಾನ್ಸನ್ನೇ ತರತನ್ನ ನಾಲ್ಕನೆಯ ಬಾಂಡ್ ಚಿತ್ರದಲ್ಲಿನ ಹಲವಾರು ಅಂಶಗಳ ಬಗ್ಗೆ ಟೀಕೆ ಮಾಡಿದನು. ಆ ಚಿತ್ರದ ಪ್ರಚಾರ ಮಾಡುವ ಸಮಯದಲ್ಲಿ, ತಾನು ಜೇಮ್ಸ್ ಬಾಂಡ್ ನ ಪಾತ್ರಗಳಲ್ಲಿ ಮುಂದುವರಿಸಲು ಬಯಸುವೆನೆಂದು ಹೇಳಿದನು."ಮತ್ತೊಂದು ಬಾಂಡ್ ಚಿತ್ರದಲ್ಲಿ ಅಭಿನಯಿಸಲು ಬಯಸುತ್ತೇನೆ, ಖಂಡಿತ. ಕಾನರಿ ಆರು ಬಾಂಡ್ ಚಿತ್ರಗಳಲ್ಲಿ ಅಭಿನಯಿಸಿದರು. ಆರು ಚಿತ್ರಗಳಲ್ಲಿ ಅಭಿನಯಿಸಬೇಕು, ನಂತರ ಮತ್ತೆ ಬರಬಾರದು."[೨೬] ಬ್ರಾನ್ಸನ್ ಬಾಂಡ್ ಚಿತ್ರಗಳಲ್ಲಿ ಕೆಲಸ ಮಾಡುವ ಮಧ್ಯಮಧ್ಯದಲ್ಲೇ ಬೇರೆ ಯೋಜನೆಗಳಲ್ಲಿಯೂ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಪಾತ್ರವನ್ನು ಒಪ್ಪಿಕೊಳ್ಳುವ ಕಾಲದಲ್ಲೇ EON ನಿರ್ಮಾಪಕ ಸಂಸ್ಥೆಯವರನ್ನು ಕೋರಿಕೊಂಡಿದ್ದನು ಅವನ ಕೋರಿಕೆಗೆ ಮನ್ನಣೆ ನೀಡಲಾಯಿತು ಹಾಗೂ ತಾನೇ ತೆಗೆದ ಹಲವು ಚಿತ್ರಗಳನ್ಲ್ಲೂ ಸೇರಿದಂತೆ, ಪ್ರತಿ ಬಾಂಡ್ ಚಿತ್ರಕ್ಕೆ ಕಡಿಮೆಯೆಂದರೆ ಎರಡು ಮುಖ್ಯವಾಹಿನಿಯ ಚಿತ್ರಗಳಲ್ಲಿ ಬ್ರಾನ್ಸನ್ ಅಭಿನಯಿಸಿದನು.[] ಬಾಂಡ್ ಚಿತ್ರಗಳಲ್ಲಿ ನಟಿಸುವ ಮಧ್ಯಮಧ್ಯದಲ್ಲಿಯೇ ಬ್ರಾನ್ಸನ್ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದನು; ಟಿಮ್ ಬರ್ಟನ್ಮಾರ್ಸ್ ಅಟ್ಯಾಕ್ಸ್ ನಲ್ಲಿನ ವಿಜ್ಞಾನಿಯ ಪಾತ್ರ, ಡಾಂಟೇಸ್ ಪೀಕ್ ನಲ್ಲಿನ ಅಗ್ನಿಪರ್ವತ ತಜ್ಞನ ಪಾತ್ರ, ಗ್ರೇ ಔಲ್ ನಲ್ಲಿನ ಗ್ರೇ ಔಲ್ ನ ಪಾತ್ರಗಳ ಮೂಲಕ ತನ್ನ ಅಭಿನಯ ಕೌಶಲವನ್ನು ಮೆರೆದನು. ಗ್ರೇ ಔಲ್ ಆರ್ಚಿಬಾಲ್ಡ್ ಸ್ಟಾನ್ಸ್ ಫೀಲ್ಡ್ ಬೆಲಾನಿ ಎಂಬ ಒಬ್ಬ ಆಂಗ್ಲನು ಓಜಿಬ್ವಾದ ಹೆಸರಾದ ಗ್ರೇ ಔಲ್ ಅನ್ನು ತನ್ನ ಹೆಸರಾಗಿರಿಸಿಕೊಂಡು ಕೆನಡಾದ ಮೊದಲ ಸಂರಕ್ಷಣಾನಿರತನಾದ ಬಗೆಗಿನ ಜೀವನಚರಿತ್ರೆ ಬಿಂಬಿಸುವ ಚಿತ್ರ. ಡೈ ಅನದರ್ ಡೇ ಬಿಡುಗಡೆಯಾದ ಕೆಲವೇ ದಿನಗಳ ನಂತರ ಮಾಧ್ಯಮದವರು ಬ್ರಾನ್ಸನ್ ಬಾಂಡ್ ಆಗಿ 5ನೆಯ ಬಾರಿ ಅಭಿನಯಿಸುವನೋ ಇಲ್ಲವೋ ಎಂದು ಪ್ರಶ್ನಿಸಲಾರಂಭಿಸಿದರು. ಬ್ರಾನ್ಸನ್ ಗೆ ರೋಜರ್ ಮೂರ್ ತನ್ನ 58ನೆಯ ವಯಸ್ಸಿನವರೆಗೂ ಬಾಂಡ್ ಪಾತ್ರದಲ್ಲಿ ಅಭಿನಯಿಸಿದುದು ಅವನ ಅಭಿಮಾನಿಗಳಿಗೂ, ವಿಮರ್ಶಕರಿಗೂ ಅಸಂತೋಷ ಮೂಡಿಸಿದ್ದುದರ ಅರಿವಿತ್ತು, ಆದರೆ ಅವನಿಗೆ ಈಗಲೂ ವಿಮರ್ಶಕರಿಂದಲೂ, ಅಭಿಮಾನಿಗಳಿಂದಲೂ 5ನೆಯ ಬಾರಿ ಆ ಪಾತ್ರ ವಹಿಸಲು ಪ್ರಿಯವಾದ ಬೆಂಬಲ ದೊರೆಯುತ್ತಿತ್ತು. ಆದ್ದರಿಂದ ಮತ್ತೆ ಆ ಪಾತ್ರವನ್ನು ಕೈಗೆತ್ತಿಕೊಳ್ಳಲು ಉತ್ಸುಕನಾಗಿದ್ದನು.[೨೭] ಇಡೀ 2004ರಲ್ಲಿ ಬ್ರಾನ್ಸನ್ ಮತ್ತು ನಿರ್ಮಾಪಕೆರ ಮಧ್ಯೆ ವ್ಯಾವಹಾರಿಕ ಮಾತುಕತೆಗಳು ಆಗಿಬರಲಿಲ್ಲವೆಂದೂ, ನಿರ್ಮಾಪಕರು ಒಬ್ಬ ಹೊಸ, ಚಿಕ್ಕ ವಯಸ್ಸಿನ ನಟನೊಬ್ಬ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆಂದೂ ವದಂತಿ ಹರಡಿತು.[೨೮] ಈ ವದಂತಿಯನ್ನು MGM ಮತ್ತು EON ನಿರ್ಮಾಪಕ ಸಂಸ್ಥೆಗಳು ಅಲ್ಲಗಳೆದವು. ಜುಲೈ 2004ರಲ್ಲಿ ಬ್ರಾನ್ಸನ್ ಬಾಂಡ್ ನ ಪಾತ್ರವನ್ನು ಬಿಟ್ಟುಬಿಡುತ್ತಿರುವುದಾಗಿ ಘೋಷಿಸುತ್ತಾ, "ಬಾಂಡ್ ಮತ್ತೊಂದು ಜೀವನಕಾಲ, ನನ್ನಿಂದ ಹಿಂದೆ ಸರಿದ ಕಾಲಘಟ್ಟ" ಎಂದನು; ಿದನ್ನು ಕೆಲವರು ಫಲನೀಡದ ವ್ಯವಹಾರತಂತ್ರ ಎಂದು ಕರೆದರು.[೨೯] ಅಕ್ಟೋಬರ್ 2004ರಲ್ಲಿ ಬ್ರಾನ್ಸನ್ ತನ್ನನ್ನು ತಾನೇ ಆ ಪಾತ್ರದಿಂದ ಉಚ್ಛಾಟಿಸಲ್ಪಟ್ಟವನೆಂದು ತಿಳಿದಿರುವನೆಂದು ಹೇಳಿದನು.[೩೦] 007 ಬಾಂಡ್ ನ ಪಾತ್ರವಹಿಸಲು ಬ್ರಾನ್ಸನ್ ಇನ್ನೂ ಬೇಡಿಕೆಯಲ್ಲಿದ್ದಾನೆಂಬ ವದಂತಿ ಆಗಾಗ್ಗೆ ಕೇಳಿಬರುತ್ತಿದ್ದರೂ, ಬ್ರಾನ್ಸನ್ ಆ ವದಂತಿಗಳನ್ನು ಹಲವಾರು ಬಾರಿ ನಿರಾಕರಿಸಿದನು ಮತ್ತು ಫೆಬ್ರವರಿ 2005ರಲ್ಲಿ ತನ್ನ ವೆಬ್ ಸೈಟ್ ನಲ್ಲಿ ಆ ಪಾತ್ರಾಭಿನಯ ಮುಗಿದ ಕಥೆ ಎಂಬ ಹೇಳಿಕೆಯನ್ನು ನೀಡಿದನು.[೩೧] ಡೇನಿಯಲ್ ಕ್ರೈಗ್ ಬಾಂಡ್ ನ ಪಾತ್ರವನ್ನು 14ನೆಯ ಅಕ್ಟೋಬರ್ 2005ರಂದು ಕೈಗೆತ್ತಿಕೊಂಡನು.[೩೨] ದ ಗ್ಲೋಬ್ ಎಂಡ್ ಮೇಯ್ಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಬ್ರಾನ್ಸನ್ ನನ್ನು ಹೊಸ ಜೇಮ್ಸ್ ಬಾಂಡ್ ಪಾತ್ರಧಾರಿಯಾದ ಕ್ರೈಗ್ ಬಗ್ಗೆ ಅಭಿಪ್ರಾಯ ನೀಡಲು ಕೇಳಲಾಯಿತು. "ನಾವೆಲ್ಲರೂ ಅದನ್ನೇ ಎದುರುನೋಡುತ್ತಿರುವಂತೆಯೇ ನಾನೂ ಅದನ್ನೇ ಎದುರುನೋಡುತ್ತಿದ್ದೇನೆ. ಡೇನಿಯಲ್ ಕ್ರೈಗ್ ಒಬ್ಬಶ್ರೇಷ್ಠ ನಟ ಮತ್ತು ಆತ ಬಹಳ ಒಳ್ಳೆಯ ಅಭಿನಯವನ್ನೇ ನೀಡಲಿದ್ದಾನೆ" ಎಂದು ಉತ್ತರಿಸಿದನು ಬ್ರಾನ್ಸನ್.[೩೩] ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಗೆ ಬ್ರಾನ್ಸನ್ ನೀಡಿದ ೊಂದು ಸಂದರ್ಶನದಲ್ಲೂ ಬ್ರಾನ್ಸನ್ ಕ್ರೈಲ್ ಗೆ ತನ್ನ ಬೆಂಬಲವನ್ನು ದೃಢೀಕರಿಸುತ್ತಾ "ಸ್ಮರಣೀಯವಾದ ಬಾಂಡ್ ಆಗುವ ಪಥದಲ್ಲಿ (ಕ್ರೈಗ್) ಸಾಗುತ್ತಿದ್ದಾನೆ" ಎಂದು ನುಡಿದನು.[೩೪] ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಅಭಿನಯಿಸುತ್ತದ್ದ ಅವಧಿಯಲ್ಲಿ ಬ್ರಾನ್ಸನ್ ಜೇಮ್ಸ್ ಬಾಂಡ್ ವಿಡಿಯೋ ಗೇಮ್ಸ್ ಗಳಲ್ಲೂ ಪಾತ್ರವಹಿಸಿದನು. 2002ರಲ್ಲಿ ಬ್ರಾನ್ಸನ್ ನ ತದ್ರೂಪವನ್ನು ಜೇಮ್ಸ್ ಬಾಂಡ್ ವೀಡಿಯೋ ಗೇಮ್ ಆದ ನೈಟ್ ಫೈರ್ ನಲ್ಲಿ ಬಾಂಡ್ ನ ಮುಖವಾಗಿ ಬಿಂಬಿಸಲಾಯಿತು.(ಧ್ವನಿ ಮ್ಯಾಕ್ಸ್ ವೆಲ್ ಕಾಲ್ ಫೀಲ್ಡ್ ನದು). 2004ರಲ್ಲಿ ಬ್ರಾನ್ಸನ್ ಬಾಂಡ್ ಗೇಮ್ ಎವೆರಿಥಿಂಗ್ ಆರ್ ನಥಿಂಗ್ ನಲ್ಲಿ ಪಾತ್ರವಹಿಸಿ, ತನ್ನ ತದ್ರೂಪವನ್ನು ಬಳಸಲು ಮತ್ತು ಆ ಪಾತ್ರಕ್ಕೆ ಕಂಠದಾನ ನೀಡಲು ಕರಾರಿನ ಮೇಲೆ ಕೆಲಸ ಮಾಡಿಕೊಟ್ಟನು.[೩೫] 2001ರಲ್ಲಿ ಬ್ರಾನ್ಸನ್ ಜೇಮೀ ಲೀ ಕರ್ಟಿಸ್ ಮತ್ತು ಜೆಫ್ರಿ ರಷ್ ರೊಂದಿಗೂ "ದ ಟೈಲರ್ ಆಫ್ ಪನಾಮಾ"ದಲ್ಲಿ ಅಭಿನಯಿಸಿದನು.

ಜೇಮ್ಸ್ ಬಾಂಡ್ ನಂತರ (2004ರಿಂದ ಇಂದಿನವರೆಗೆ)

ಬದಲಾಯಿಸಿ

ಬಾಂಡ್ ಪಾತ್ರಗಳ ನಂತರ ಬ್ರಾನ್ಸನ್ ವಹಿಸಿದ ಮೊದಲ ಪಾತ್ರವು 2004ರ ಲಾಸ್ ಆಫ್ ಅಟ್ರಾಕ್ಷನ್ ಚಿತ್ರದ ಡೇನಿಯಲ್ ರಾಫರ್ಟಿಯದು. ಎಂಟರ್ಟೈನ್ಮೆಂಟ್ .ie ಯ ಗ್ಯಾರೆತ್ ಮರ್ಫಿ ಬ್ರಾನ್ಸನ್ ನ ಅಭಿನಯವನ್ನು "ಆಶ್ಚರ್ಯಕರವಾಗಿ ಪರಿಣಾಮಕಾರಿ, ಮೃದುವಾಗಿ ಜೇಮ್ಸ್ ಬಾಂಡ್ ನ ವ್ಯಕ್ತಿತ್ವದಿಂದ ಹೊರಬಂದು, ಆ ಸ್ಥಳದಲ್ಲಿ ಮಿಂಚಿನ ಸಾಮರ್ಥ್ಯವನ್ನು ಅಳವಡಿಸಿಕೊಂಡಿದ್ದಾನೆ"ಎಂದು ಬಣ್ಣಿಸಿದ್ದಾರೆ.[೩೬] ಅದೇ ವರ್ಷ ಬ್ರಾನ್ಸನ್ ಆಫ್ಟರ್ ದ ಸನ್ ಸೆಟ್ ಎಂಬ ಚಿತ್ರದಲ್ಲಿ ಸಲ್ಮಾ ಹಯೆಕ್ ಮತ್ತು ವುಡಿ ಹಾರೆಲ್ಸನ್ ರೊಡನೆ ಅಭಿನಯಿಸಿದನು. ಈ ಚಿತ್ರವು ಸಾಮಾನ್ಯವಾಗಿ ನಕಾರಾತ್ಮಕ ವಿಮರ್ಶೆಗೊಳಗಾಗಿ ರಾಟನ್ ಟೊಮ್ಯಾಟೋಸ್ ನಲ್ಲಿ 17% ಕ್ರಮಾಂಕವನ್ನು ಪಡೆಯಿತು.[೩೭] ಬ್ರಾನ್ಸನ್ ನ ಮುಂದಿನ ಚಿತ್ರ 2005ರ ದ ಮೆಟಡೋರ್ . ಬ್ರಾನ್ಸನ್ ಜೂಲಿಯನ್ ನೋಬಲ್ ಎಂಬ ದಣಿದಿರುವ, ಕುಡುಕನಾದ ಕೊಲೆಗಾರನು ಪ್ರವಾಸಿ ಮಾರಾಟಗಾರನೊಬ್ಬ(ಗ್ರೆಗ್ ಕಿನ್ನಿಯರ್)ನನ್ನು ಮೆಕ್ಸಿಕನ್ ಬಾರ್ ಒಂದರಲ್ಲಿ ಭೇಟಿ ಮಾಡುವಂತಹ ಪಾತ್ರದಲ್ಲಿ ಅಭಿನಯಿಸಿದನು. ಈ ಚಿತ್ರ ಆಫ್ಟರ್ ದ ಸನ್ ಸೆಟ್ ಗಿಂತಲೂ ಚೆನ್ನಾಗಿ ಸ್ವೀಕೃತವಾಯಿತು ಮತ್ತು ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಸಂಪಾದಿಸಿತು.[೩೮] ಷಿಕಾಗೋ ಸನ್ ಟೈಮ್ಸ್ರೋಜರ್ ಎಬರ್ಟ್ ಬ್ರಾನ್ಸನ್ ನ ಅಭಿನಯವನ್ನು ಅವನ ಜೀವನದ ಅತ್ಯುತ್ತಮ ಅಭಿನಯವೆಂದನು.[೩೯] ಬ್ರಾನ್ಸನ್ ಸಂಗೀತಪ್ರಧಾನ ಅಥವಾ ಹಾಸ್ಯಪ್ರಧಾನ ಚಿತ್ರದಲ್ಲಿನ ಅತ್ಯುತ್ತಮ ನಟನಿಗೆ ನೀಡುವ ಗೋಲ್ಡನ್ ಗ್ಲೋಬ್ಪ್ರಶಸ್ತಿಗೆ ಸೂಚಿತನಾದನಾದರೂ ಜೊಆಕ್ವಿನ್ ಫೀನಿಕ್ಸ್ವಾಕ್ ದ ಲೈನ್ ಅಭಿನಯಕ್ಕೆ ಆ ವರ್ಷದ ಪ್ರಶಸ್ತಿ ಸಂದಿತು.[೪೦] ಡಿಸೆಂಬರ್ 2005ರಲ್ಲಿ ಬ್ರಾನ್ಸನ್ ದ ನವೆಂಬರ್ ಮ್ಯಾನ್ , ಎಂಬ ಬಿಲ್ ಗ್ರೇಯ್ನ್ ಜರ್ ನ ಕಾದಂಬರಿ ದೇರ್ ಆರ್ ನೋ ಸ್ಪೈಸ್ [೪೧] ಕಥೆಯಾಧಾರಿತವಾದ ಚಿತ್ರದಲ್ಲಿ ನಟಿಸುವನೆಂಬ ವರದಿಯಿದ್ದಿತಾದರೂ 2007ರಲ್ಲಿ ಆ ಚಿತ್ರನಿರ್ಮಾಣ ಯೋಜನೆಯು ರದ್ದಾಯಿತು. 2007ರಲ್ಲಿ ಬ್ರಾನ್ಸನ್ ಸೆರಾಫಿನ್ ಫಾಲ್ಸ್ ಚಿತ್ರದಲ್ಲಿ ಸಹ-ಐರಿಷ್ ಮ್ಯಾನ್ ಲಿಯಾಮ್ ನೀಸನ್ ನೊಡಗೂಡಿ ಪಾತ್ರವಹಿಸಿದನು. ಆ ಚಿತ್ರವು 26 ಜನವರಿ 2007ರಂದು ಮಿತವಾದ ಪ್ರದರ್ಶನಗಳಿಗೆ ಮಾತ್ರ ಬಿಡುಗಡೆಗೊಂಡು ಸಾಧಾರಣ ವಿಮರ್ಶೆ ಗಳಿಸಿತು. ಲಾಸ್ ಏಂಜಲೀಸ್ ಟೈಮ್ಸ್ ನ ಕೆವಿನ್ ಕ್ರಸ್ಟ್ ಬ್ರಾನ್ಸನ್ ಮತ್ತು ನೀಸನ್ "ಉತ್ತಮ ಎದುರಾಳಿಗಳು"[೪೨] ಆಗಿ ಅಭಿನಯಿಸಿರುವರೆಂದನು; ದ ಹಾಲಿವುಡ್ ರಿಪೋರ್ಟರ್ ನ ಮೈಕೆಲ್ ರೆಕ್ಟ್ ಷಾಫೆನ್ ಅವರಿಬ್ಬರೂ "ಬಹಳ ಕಡಿಮೆ ಸಂಭಾಷಣೆಯಿದ್ದ ತಮ್ಮ ಪಾತ್ರಗಳಿಗೆ ಜೀವ ತುಂಬಲು ಬಹಳ ತಿಣುಕಾಡಬೇಕಾಯಿತು" ಎಂದು ಅಭಿಪ್ರಾಯಪಟ್ಟನು.[೪೩] ದ ಟಾಪ್ ಕಾಪಿ ಅಫೇರ್ ಎಂಬ, 1999ರ ಚಿತ್ರ ದ ಥಾಮಸ್ ಕ್ರೌನ್ ಅಫೇರ್ ನ ಮುಂದುವರಿದ ಭಾಗದ, ಚಿತ್ರವು ನಿರ್ಮಾಣ-ಪೂರ್ವ ಹಂತದಲ್ಲಿದೆ. ಈ ಮುಂದುವರಿದ ಭಾಗವನ್ನು ಡಚ್ ನಿರ್ದೇಶಕ ಪಾಲ್ ವೆರ್ಹೋಯೆವನ್[೪೪] ನಿರ್ದೇಶಿಸುತ್ತಿದ್ದು, ಎರಿಕ್ ಆಂಬ್ಲರ್ ರ ಕಾದಂಬರಿ ದ ಲೈಟ್ ಆಫ್ ಡೇ ಮತ್ತು 1964ರ ರೂಪಾಂತರವಾದ ಟಾಪ್ ಕಾಪಿ ಯನ್ನು ಈ ಚಿತ್ರ ಆಧರಿಸಿದೆ.[೪೫] ಕವಿ ಡೈಲಾನ್ ಥಾಮಸ್ ನ ಹೆಂಡತಿ ಕೈಟ್ಲಿನ್ ಮೆಕ್ನಮಾರಾ ಕುರಿತು ತೆಗೆಯುತ್ತಿರುವ ಚಿತ್ರ ಕೈಟ್ಲಿನ್ ಗೆ ಬ್ರಾನ್ಸನ್ ಹಣಕಾಸಿನ ಬೆಂಬಲ ನೀಡುತ್ತಿರುವನು.[೪೬] ಶೀರ್ಷಿಕಾ ಪಾತ್ರವನ್ನು ಮಿರಾಂಡಾ ರಿಚರ್ಡ್ ಸನ್ ವಹಿಸಿವರು ಮತ್ತು ಬ್ರಾನ್ಸನ್ ಗೆ ಥಾಮಸ್ ನ ಸಾಹಿತ್ಯದ ಏಜೆಂಟ್ ಆದ ಜಾನ್ ಬ್ರಿನ್ನಿನ್ ಹೆಸರಿನ ಒಂದು ಚಿಕ್ಕ ಪಾತ್ರವಿರುವುದು, ಡೈ ಅನದರ್ ದೇ ಯಲ್ಲಿ ಬ್ರಾನ್ಸನ್ ನ ಸಹನಟನಾಗಿದ್ದ ರಾಸ್ಮಂಡ್ ಪೈಕ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವರು.[೪೭]

 
ಬ್ರಾನ್ಸನ್ (ಎಡದಿಂದ ಎರಡನೆಯವರು) ಮಮ್ಮಾ ಮಿಯಾ! ದ ಪಾತ್ರವರ್ಗದೊಂದಿಗೆ.ಮತ್ತು ABBA (ಎಡದಿಂದ 1ನೇ, 5ನೇ, ಮತ್ತು 6ನೇ ಹಾಗೂ ಬಲದಿಂದ 2ನೆಯವರು )

2008ರಲ್ಲಿ ಬ್ರಾನ್ಸನ್ ಮೆರಿಲ್ ಸ್ಟ್ರೀಪ್ ಳೊಡನೆ ABBA ಮ್ಯೂಸಿಕಲ್ ಮಮ್ಮಾ ಮಿಯಾಚಲನಚಿತ್ರ ರೂಪಾಂತರದಲ್ಲಿ ಅಭಿನಯಿಸಿದನು.[೪೮] ಮುಖ್ಯ ಪಾತ್ರವಾದ ಅಮಂದಾ ಸೀಫ್ರೈಡ್ ನ ತಂದೆಯೆಂದು ಹೇಳಲಾದ ಮೂರು ಜನ ಗಂಡಸರ ಪೈಕಿ ಸ್ಯಾಮ್ ಕಾರ್ಮೈಕಲ್ ಎಂಬ ಪಾತ್ರದಲ್ಲಿ ಬ್ರಾನ್ಸನ್ ಅಭಿನಯಿಸಿದನು, ಸ್ಟ್ರೀಪ್ ತಾಯಿಯ ಪಾತ್ರ ವಹಿಸಿದಳು.[೪೯] ಚಿತ್ರದ ನಿರ್ಮಾಪಕರಾದ ಜೂಡಿ ಕ್ರೇಮರ್"ಬ್ರಾನ್ಸನ್ ಒಂದು ವಿಧದ ಚುಂಬನವಿಧವನ್ನು ಹೊಂದಿದ್ದು,ಮೆರಿಲ್ ಳೊಡನೆ ಪ್ರಣಯಹಾಸ್ಯ ದೃಶ್ಯಗಳಲ್ಲಿ ಅವನು ಸೊಗಸಾದ 'ರಸತಂತ್ರ' ಹೊಂದುವನೆಂದು ನಂಬಿದ್ದೇನೆ" ಎಂದನು.[೫೦] ಅ ಪಾತ್ರಕ್ಕಾಗಿ ಹಾಡಬೇಕಾದುದಕ್ಕೆ ಬ್ರಾನ್ಸನ್ ತಯಾರಾದ ವಿಧವು ಪ್ರತಿದಿನ ತೀರದ ಉದ್ದಕ್ಕೂ ಸಾಗುತ್ತಾ ತನ್ನ ಕಂಠಕ್ಕೆ ತಕ್ಕಂತೆ ಕರಾಓಕೆ ಹಾಡುತ್ತಾ ಆರು ವಾರ ಕಳೆದುದಾಗಿದ್ದು, ನ್ಯೂಯಾರ್ಕ್ ನಲ್ಲಿ ನಂತರ ರಿಹರ್ಸಲ್ (ಅಭ್ಯಾಸ) ಮಾಡುವುದಾಗಿದ್ದು, ಅದು "ಘೋರವಾಗಿ ಕೇಳಿಸುತ್ತಿತ್ತು" ಎನ್ನುತ್ತಾನೆ ಬ್ರಾನ್ಸನ್.[೫೧] ಆ ಚಿತ್ರದಲ್ಲಿನ ಬ್ರಾನ್ಸನ್ ನ ಹಾಡುವಿಕೆಯನ್ನು ಸಾಧಾರಣವಾಗಿ ಎಲ್ಲಾ ವಿಮರ್ಶಕರೂ ತಿರಸ್ಕರಿಸಿದರು, ಆ ಹಾಡುಗಾರಿಕೆಯನ್ನು ಒಬ್ಬೊಬ್ಬ ವಿಮರ್ಶಕನೂ ಒಂದೊಂದು ವಿಧವಾಗಿ ವರ್ಣಿಸಿದನು; ನೀರೆಮ್ಮೆ ಕೂಗಿದಂತೆ[೫೨] ಎಂದು ಒಬ್ಬ, ಕತ್ತೆ[೫೩] ಯ ಕೂಗಿನಂತೆ ಎಂದು ಮತ್ತೊಬ್ಬ, ಮತ್ತು ಗಾಯಗೊಂಡ ರಾಕೂನ್ ನ ದನಿಯಂತೆ ಎಂದು ಮಗದೊಬ್ಬ ವಿಮರ್ಶಿಸಿದರು.[೫೪] ಸೆಪ್ಟೆಂಬರ್ 2008ರಲ್ಲಿ ಬ್ರಾನ್ಸನ್ ನೇರ ಡಿವಿಡಿ ಸಂಚಿಕೆಯಾದ ಥಾಮಸ್ ದ ಟ್ಯಾಂಕ್ ಎಂಜಿನ್ ಎಂಡ್ ಫ್ರೆಂಡ್ಸ್, ದ ಗ್ರೇಟ್ ಡಿಸ್ಕವರಿ ಎಂಬ ವಿಶೇಷ ಕಾರ್ಯಕ್ರಮದ ಸಂಪೂರ್ಣ ವಿವರಣೆಗಾಗಿ ಕಂಠದಾನ ಮಾಡಿದನು. 2009ರಲ್ಲಿ ಬ್ರಾನ್ಸನ್ ದ ಬಿಗ್ ಬಿಯಾಝಾರೋ ಎಂಬ ವೊಂಡೀ ಕರ್ಟಿಸ್ ಹಾಲ್ ನಿರ್ದೇಶನದ ಚಿತ್ರದಲ್ಲಿ ಪಾತ್ರವಹಿಸುವರು. ಈ ಚಿತ್ರವು ಲಿಯೋನಾರ್ಡ್ ವೈಸ್ ರ ಅದೇ ಹೆಸರಿನ ಕಾದಂಬರಿಯ ರೂಪಾಂತರವಾಗಿದೆ. ಅವನದು ತಲೆತಿರುಕನಾದ ಪರರ ಹೆಜ್ಜೆಯಲ್ಲಿ ಸಾಗುವವನೊಬ್ಬನನ್ನು ದಾರಿಗೆ ತರುವ ಕಾರ್ಡ್ ಆಟಗಾರನ ಪಾತ್ರ.[೫೫] ಬ್ರಾನ್ಸನ್ ಇತ್ತೀಚೆಗೆ ಸಹ-ಐರಿಷ್ ಮೆನ್ ಗಳಾದ ಗ್ಯಾಬ್ರಿಯಲ್ ಬೈರ್ನ್ ಮತ್ತು ಕಾಲಿನ್ ಮಿಯಾನೀಯರೊಡಗೂಡಿ ಒಂದು ಪಾಶ್ಚಿಮಾತ್ಯ ಚಿತ್ರವನ್ನು ಮಾಡುವ ಬಗ್ಗೆ ಮಾತನಾಡಿದನು.[೫೬] ಬ್ರಾನ್ಸನ್ ಸವೋಯಿರ್ಸ್ ರೋನನ್ ಮತ್ತು ಮೋರ್ಗನ್ ಫ್ರೀಮನ್ ರೊಡನೆ ಡ್ಯಾನೀ ಡಿವಿಟೋರ ರೂಪಾಂತರವಾದ ದ ಟ್ರೂ ಕನ್ಫೆಷನ್ಸ್ ಆಫ್ ಚಾರ್ಲೊಟ್ಟೆ ಡಾಯ್ಲ್ ಎಂಬ ಕಾದಂಬರಿಯಾಧಾರಿತ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅವನು ಹಡಗಿನ ಕ್ಯಾಪ್ಟನ್, ಜ್ಯಾಗರಿ[೫೭] ಯ ಪಾತ್ರವನ್ನು ವಹಿಸುವನು. ಅವನು ದ ಘೋಸ್ಟ್ ಎಂಬ ಅದೇ ಹೆಸರಿನ ಕಥೆಯಾಧಾರಿತ ಚಿತ್ರವನ್ನು ಇತ್ತೀಚೆಗೆ ಮುಗಿಸಿದನು, ಆದರೆ ಅದರ ಬಿಡುಗಡೆಯು ಅದರ ಸಹ-ನಿರ್ಮಾಪಕ ಹಾಗೂ ನಿರ್ದೇಶಕ ರೋಮನ್ ಪೋಲಾನ್ಸ್ಕಿಯ ಬಿಡುಗಡೆಯಾದನಂತರ ಅಗುತ್ತದೆ.

ವೈಯಕ್ತಿಕ ಜೀವನ

ಬದಲಾಯಿಸಿ

ಬ್ರಾನ್ಸನ್ ಆಸ್ಟ್ರೇಲಿಯಾದ ನಟಿ ಕ್ಯಾಸಂಡ್ರಾ ಹ್ಯಾರಿಸ್ ಳನ್ನು ರಿಚರ್ಡ್ ಹ್ಯಾರಿಸ್ ನ ಅಣ್ಣಮ ಮಕ್ಕಳಲ್ಲಿ ಒಬ್ಬನಾದ ದೇವಿಡ್ ಹ್ಯಾರಿಸ್ ನ ಮೂಲಕ 1974ರಲ್ಲಿ, ರಂಗ-ಶಾಲೆಯನ್ನು ಬಿಟ್ಟಿ ಕೆಲವೇ ದಿನಗಳಲ್ಲಿ, ಭೇಟಿಯಾದನು. ಅವಳನ್ನು ಭೇಟಿಯಗುತ್ತಲೇ ಅವನಲ್ಲಿ ಉಂಟಾದ ಭಾವಗಳ ವಿವರಣೆ ನೀಡುತ್ತಾ"ಎಂತಹ ಚೆಲುವೆ. ಒಂದು ಕ್ಷಣವೂ ಅವಳು ನನ್ನೊಂದಿಗೆ 17 ವರ್ಷಗಳ ಕಾಲ ಇರುವಂತಹವಳೆಂದು ಅನಿಸಿರಲಿಲ್ಲ. ಅವಳನ್ನು ಮೆಚ್ಚಿಸುವ ಬಗ್ಗೆ ನಾನು ಯೋಚಿಸಲೂ ಇಲ್ಲ, ಅಂತಹ ಪ್ರಯತ್ನವನ್ನೂ ಮಾಡಲಿಲ್ಲ. ಅವಳ ಚೆಲುವನ್ನು ಆಸ್ವಾದಿಸಲು ಮತ್ತು ಅವಳು ಯಾರೆಂಬುದನ್ನು (ಇರುವ ರೀತಿಯನ್ನ) ಆಸ್ವಾದಿಸಲು ಬಯಸಿದೆನಷ್ಟೆ."ಎಂದನು.[] ಅವರು ಒಬ್ಬರನ್ನೊಬ್ಬರು ಭೇಟಿಯಾಗಲು ಆರಂಭಿಸಿದರು ಮತ್ತು ಇಬ್ಬರೂ ಕಷ್ಟಪಟ್ಟು ಹಣ ಸೇರಿಸಿ 1979ರಲ್ಲಿ ವಿಂಬಲ್ಡನ್ ನಲ್ಲಿ ಒಂದು ಸಣ್ಣ ಮನೆಯನ್ನು ಖರೀದಿಸಿದರು. ಅವರು ಅವಳ ಮಕ್ಕಳಾದ ಚಾರ್ಲೊಟ್ಟೆ (ಜನನ 27 ನವೆಂಬರ್ 1971 ) ಮತ್ತು ಕ್ರಿಸ್ತೋಫರ್ (ಜನನ 6 ಅಕ್ಡೋಬರ್ 1972 )ರೊಡನೆ ವಾಸಿಸುತ್ತಿದ್ದು, ಅವರ ನಿಜವಾದ ತಂದೆ ಡರ್ಮಟ್ ಹ್ಯಾರಿಸ್ 1986ರಲ್ಲಿ ನಿಧನನಾದನಂತರ, ಬ್ರಾನ್ಸನ್ ಇಬ್ಬರನ್ನೂ ದತ್ತು ತೆಗೆದುಕೊಂಡನು ಮತ್ತು ಅವರ ಸರ್ ನೇಮ್ (ಕುಟುಂಬನಾಮ)ಅನ್ನು ಬ್ರಾನ್ಸನ್ ಎಂದು ಬದಲಿಸಿದನು.[೫೮] ಅವರು ಡಿಸೆಂಬರ್ 27 , 1980ರಂದು ವಿವಾಹವಾದರು ಮತ್ತು ಸೀನ್ ಎಂಬ ಮಗನು ಅವರಿಗೆ 13 ಸೆಪ್ಟೆಂಬರ್ 1983ರಂದು ಜನಿಸಿದನು. ಹಣಕಾಸಿನ ಬಾಬ್ತಿನಲ್ಲಿ, ಬ್ರಾನ್ಸನ್ ಜೀವನ ಸಾಗಿಸಲು ಬೇಕಾದಷ್ಟು ಹಣ ಸಂಪಾದಿಸುವ ಬಗ್ಗೆ ಚಿಂತಿತನಾಗಿದ್ದನು ಮತ್ತು ತಮ್ಮ ಆದಾಯವನ್ನು ವೆಸ್ಟ್ ಎಂಡ್ ಪ್ರೊಡಕ್ಷನ್ಸ್ ನಲ್ಲಿ ಕೆಲಸ ಮಾಡುವುದರ ಮೂಲಕ ಮತ್ತು ಐರಿಷ್ ಕುದುರೆ ರೇಸಿಂಗ್ ಬಗ್ಗೆ ಒಂದು ಕಿರುತೆರೆಗಾಗಿ ತೆಗೆದ ಚಿತ್ರದಲ್ಲಿ ದುಡಿಯುವುದರ ಮೂಲಕ ಪಡೆಯುತ್ತಿದ್ದನು.[] ಹ್ಯಾರಿಸ್ ಜೇಮ್ಸ್ ಬಾಂಡ್ ಚಿತ್ರವಾದ ಫಾರ್ ಯುವರ್ ಐಸ್ ಓನ್ಲಿ ಯಲ್ಲಿ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ, ಬ್ಯಾಂಕ್ ನಿಂದ ಸಾಲ ಪಡೆದು, ಅವರು ದಕ್ಷಿಣ ಕ್ಯಾಲಿಫೋರ್ನಿಯಾಗೆ ಹೋದರು, ಅಲ್ಲಿ ರೆಮಿಂಗ್ಟನ್ ಸ್ಟೀಲ್ ಗಾಗಿ ಹಾಲಿವುಡ್ ನ ಒಂದು ಸಂದರ್ಶನವನ್ನು ಬ್ರಾನ್ಸನ್ ಎದುರಿಸಿದನು ಮತ್ತು ತದನಂತರ ಅವರಿಗೆ ಎಂದೂ ಹಣದ ಮುಗ್ಗಟ್ಟು ಒದಗಲೇ ಇಲ್ಲ. ರೆಮಿಂಗ್ಟನ್ ಸ್ಟೀಲ್ ಅನ್ನು ಐರ್ಲೆಂಡ್ ಗೆ ಒಂದು ಸಂಚಿಕೆಯ ಚಿತ್ರೀಕರಣಕ್ಕಾಗಿ ಕಳುಹಿಸಿದಾಗ, ತನ್ಮೂಲಕ ಬಹಳ ಪ್ರಚಾರ ಗಿಟ್ಟಿಸಿಕೊಂಡು, ತನ್ನ ಹೊಟೆಲ್ ಗೆ ಬಂದ ತನ್ನ ತಂದೆಯೊಡನೆ ಬ್ರಾನ್ಸನ್ ಕೊಂಚ ಸಮಯ ಕಳೆದನು. ಬ್ರಾನ್ಸನ್ ಒಬ್ಬ ಎತ್ತರದ ವ್ಯಕ್ತಿಯ ನಿರೀಕ್ಷೆಯಲ್ಲಿದ್ದನು, ಆದರೆ ಅವನು ತನ್ನ ತಂದೆಯನ್ನು ವರ್ಣಿಸುತ್ತಾ "ಸಾಧಾರಣ ಮೈಕಟ್ಟಿನ, ಹಿಂತಳ್ಳಲ್ಪಟ್ಟ ಬೆಳ್ಳಿಗೂದಲಿನ, ಸಣ್ಣಕಣ್ಣಿನ, ಜೋಲು ಗಲ್ಲದವನಾಗಿದ್ದನು. ಅವನಿಗೆ ಬಹಳ ಗಾಢವಾದ ಕೆರ್ರಿ ಭಾಷಾಛಾಯೆಯಿತ್ತು" ಎನ್ನುತ್ತಾನೆ.[] ಆದಾಗ್ಯೂ ತಾವು ಸಾರ್ವಜನಿಕ ವಾತಾವರಣದಲ್ಲಿ, ಅಂತಹ ಸಂದರ್ಭಗಳಲ್ಲಿ ಭೇಟಿಯಾಗುವ ಬದಲು ತಾನು ಬಯಸಿದ ರೀತಿಯಲ್ಲಿ ಭೇಟಿಯಾಗಿದ್ದಿದ್ದರೆ ತಂದೆಯೊಡನೆ ಖಾಸಗಿಯಾಗಿ ಮಾತನಾಡಲು ಅವಕಾಶ ದೊರೆಯುತ್ತಿತ್ತು ಎಂದು ವಿಷಣ್ಣನಾಗುತ್ತಾನೆ.[] 1987ರಲ್ಲಿ ಭಾರತದ ರಾಜಾಸ್ಥಾನದಲ್ಲಿ ದ ಡಿಸೀವರ್ಸ್ ಚಿತ್ರೀಕರಣಕ್ಕಾಗಿ ಹೋಗಿದ್ದಾಗ, ಅವನ ಹೆಂಡತಿ ಕ್ಯಾಸಂಡ್ರಾ ಹ್ಯಾರಿಸ್ ಖಾಯಿಲೆ ಬಿದ್ದಳು. ಅವಳಿಗೆ ಗರ್ಭಕೋಶದ ಕ್ಯಾನ್ಸರ್ ಇದೆ ಎಂದು ನಂತರ ತಿಳಿದುಬಂದು, ಆ ಖಾಯಿಲೆಯಿಂದ ನರಳಿ, ಬಳಲಿ ಅವಳು ಡಿಸೆಂಬರ್ 1991ರಂದು, ತನ್ನ 43ನೆಯ ವಯಸ್ಸಿನಲ್ಲೇ, ಕೊನೆಯುಸಿರೆಳೆದಳು.[೫೯] ಬ್ರಾನ್ಸನ್ ಅವಳ ಕ್ಯಾನ್ಸರ್ ಮತ್ತು ಮರಣದೊಂದಿಗೆ ಹೊಂದಿಕೊಳ್ಳಲು ಹರಸಾಹಸ ಮಾಡಿದನು; "ಒಬ್ಬ ಯುವತಿ ತನ್ನ ಬದುಕಿನ ಪಥದಲ್ಲಿ ಸಾಗುತ್ತಿದ್ದಾಳೆ, ತಾಯಿಯಾಗೆ, ನಟಿಯಾಗಿ. ನಿಮ್ಮ ಸಹಚರರಿಗೆ ಕ್ಯಾನ್ಸರ್ ಬಂದರೆ, ಬದುಕು ಬದಲಾಗುತ್ತದೆ. ನಿಮ್ಮ ದೈನಂದಿನ ವೇಳಾಪಟ್ಟಿ ಮತ್ತು ದಿನನಿತ್ಯದ ಕೆಲಸಗಳ ಉಲ್ಲೇಖನ ಮತ್ತು ಬದುಕಿನ ದೃಷ್ಟಿಕೋನ ಎಲ್ಲವೂ ಬದಲಾಗುತ್ತದೆ. ಏಕೆಂದರೆ ನೀವು ಸಾವಿನೊಡನೆ ವ್ಯವಹರಿಸುತ್ತಿದ್ದೀರಿ. ನೀವು ಸಾಯುವುದರ ಬಗ್ಗೆ ಮತ್ತುಸಾವಿನ ಬಗ್ಗೆ ವ್ಯವಹರಿಸುತ್ತಿದ್ದೀರಿ. ಅದು ಕೆಮೋಥೆರಪಿಯ ಕಾಲದಲ್ಲಿ ಹಾಗೆಯೇ ಇತ್ತು, ಮೊದಲ ಸುತ್ತಿನ ಶಸ್ತ್ರಚಿಕಿತ್ಸೆಯಲ್ಲೂ ಅಷ್ಟೆ, ಎರಡನೆಯ ಬಾರಿ, ಮೂರನೆಯ ಬಾರಿ, ನಾಲ್ಕನೆಯ ಬಾರಿ, ಐದನೆಯ ಬಾರಿ. ಕ್ಯಾಸಿಯು ಜೀವನದ ಬಗ್ಗೆ ಬಹಳ ಸಕಾರಾತ್ಮಕವಾಗಿದ್ದಳು. ಎಂದರೆ, ಅವಳಲ್ಲಿ ಬಹಳ ಅದ್ಭುತವಾದ ಶಕ್ತಿ ಮತ್ತು ಜೀವನದ ಬಗ್ಗೆ ಒಳ್ಳೆಯ ದೃಷ್ಟಿಕೋನವಿತ್ತು. ಅದು ಬಲು ದೊಡ್ಡ ನಷ್ಟವಾಗಿತ್ತು, ಆಗಿದೆ, ಮತ್ತು ಅದು ಕಾಲಕಾಲಕ್ಕೆ ನನ್ನ ಮಕ್ಕಳಲ್ಲಿ ಬಿಂಬಿತವಾಗುವುದನ್ನು ಕಾಣುತ್ತೇನೆ." ಎನ್ನುತ್ತಾರೆ ಬ್ರಾನ್ಸನ್.[] ಹ್ಯಾರಿಸ್ ಯಾವಾಗಲೂ ಬ್ರಾನ್ಸನ್ ಜೇಮ್ಸ್ ಬಾಂಡ್ ನ ಪಾತ್ರದಲ್ಲಿ ಅಭಿನಯಿಸಬೇಕೆಂದು ಬಯಸುತ್ತಿದ್ದಳು ಮತ್ತು 1995ರಲ್ಲಿ, ಅವಳು ಕಾಲವಾದ ನಾಲ್ಕು ವರ್ಷಗಳ ನಂತರ, ಗೋಲ್ಡನ್ ಐ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಬ್ರಾನ್ಸನ್ ಈ ಸಾಧನೆಗೈದನು. [ಸಾಕ್ಷ್ಯಾಧಾರ ಬೇಕಾಗಿದೆ] 2001ರಲ್ಲಿ ಬ್ರಾನ್ಸನ್ ಅಮೆರಿಕದ ಪತ್ರಕರ್ತೆ ಕೀಲಿ ಶಾಯೆ ಸ್ಮಿತ್ ಳನ್ನು ಐರ್ಲೆಂಡ್[೬೦] ನ Co.Mayo ನಲ್ಲಿ ಮದುವೆಯಾದನು ಹಾಗೂ ಅವರಿಗೆ ಡೈಲಾನ್ ಥಾಮಸ್ ಬ್ರಾನ್ಸನ್(ಜನನ 13 ಜನವರಿ 1997)ಮತ್ತು ಪ್ಯಾರಿಸ್ ಬೆಕೆಟ್ ಬ್ರಾನ್ಸನ್ (ಜನನ 27 ಫೆಬ್ರವರಿ 2001)ಎಂಬ ಎರಡು ಗಂಡುಮಕ್ಕಳು ಜನಿಸಿದವು.[] ಜುಲೈ 2003ರಲ್ಲಿ ರಾಣಿ ಎಲಿಜಬೆತ್ II ಬ್ರಾನ್ಸನ್ ಗೆ ಗೌರವಯುತ OBE ಅನ್ನು "ಬ್ರಿಟಿಷ್ ಚಲನಚಿತ್ರೋದ್ಯಮಕ್ಕೆ ಅದ್ಭುತವಾದ ಕೊಡುಗೆ ನೀಡಿದುದಕ್ಕಾಗಿ" ನೀಡಿದರು.[೬೧] ಒಬ್ಬ ಐರಿಷ್ ನಾಗರಿಕನಾಗಿ ಅವನು ಸಂಪೂರ್ಣವಾಗಿ ಒಬೆ ಪಡೆಯಲು ಅನರ್ಹ, ಅದನ್ನು ಕಾಮನ್ವೆಲ್ತ್ ರಿಯಲಮ್ಸ್ ನ ನಾಗರಿಕರಿಗೆ ಮಾತ್ರ ನೀಡುವ ಗೌರವ. 2002ರಲ್ಲಿ ಬ್ರಾನ್ಸನ್ ಡಬ್ಲಿನ್ ಇನ್ಸ್ ಟಿಟ್ಯುಟ್ ಆಫ್ ಟೆಕ್ನಾಲಜಿ[೬೨] ಯು ಗೌರವ ಡಿಗ್ರಿ ನೀಡಿತು ಮತ್ತು, ಒಂದು ವರ್ಷದ ನಂತರ,ಯೂನಿವರ್ಸಿಟಿ ಕಾಲೇಜ್ ಕಾರ್ಕ್ ಬ್ರಾನ್ಸನ್ ನನ್ನು ಗೌರವಿಸಿತು.[೬೩] ಪಿಯರ್ಸ್ ಬ್ರಾನ್ಸನ್ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ತಂಡದ ಅಭಿಮಾನಿ.[೬೪] ೨೩ ಸೆಪ್ಟೆಂಬರ್ 2004ರಂದು ಬ್ರಾನ್ಸನ್ ಯುನೈಟೆಡ್ ಸ್ಟೇಟ್ಸ್ ನ ಪೌರನಾದನು, ಆದರೆ ಐಡಿಷ್ ಪೌರತ್ವವನ್ನೂ ಉಳಿಸಿಕೊಂಡಿದ್ದಾನೆ. "ನಾನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಐರಿಷ್ ನೆಸ್ ಇದೆ. ಅದು ನಾನು ಯಾರೆಂಬುದರ ಆತ್ಮಶಕ್ತಿ, ಮಾನವನಾಗಿ, ನಟನಾಗಿ, ತಂದೆಯಾಗಿ. ನಾನು ಬಂದದ್ದೇ ಅಲ್ಲಿಂದ" ಎನ್ನುವನು ಬ್ರಾನ್ಸನ್.[೨೬] ಬ್ರಾನ್ಸನ್ ನನ್ನು ಒಬ್ಬ ಅಭಿಮಾನಿಯು ಅವನು ಯಾವ ದೇಶಕ್ಕೆ ಸೇರಿದವನೆಂದು ಜನಗಳಿಗೆ ಗೊಂದಲವುಂಟಾದಾಗ ಅವನಿಗೆ (ಬ್ರಾನ್ಸನ್ ಗೆ) ಕಿರಿಕಿರಿಯಾಗುವುದಿಲ್ಲವೇ ಎಂದು ಕೇಳಿದನು. "ಉಣ್ಣೆಯಲ್ಲಿ ಸುತ್ತಲ್ಪಟ್ಟ, ಹುಟ್ಟು, ಬೆಳವಣಿಗೆಯಿಂದ ಐರಿಷ್ ಆದ ನನ್ನನ್ನು ಇಂಗ್ಲಿಷ್ ನವನೆಂದು ತಿಳಿದು, ನಂತರ ಗಲಿಬಿಲಿಗೊಳ್ಳುವುದು ನನಗೆ ಕೆಲವು ವಿಧಗಳಲ್ಲಿ ಮೋಜೆನಿಸುತ್ತದೆ.... " ಎಂದನು ಬ್ರಾನ್ಸನ್."ನಾನು ಯಾವುದೇ ಲಾಂಛನ/ಬಾವುಟದ ನೆರಳಲ್ಲಿ ಹಾರಾಡುವವನಲ್ಲ. ಆದರೆ, ಉಹುಂ! ಅದು ನನ್ನನ್ನು ಅದು ಬಾಧಿಸುವುದಿಲ್ಲ."[೬೫]

ಪರಿಸರಸಂಬಂಧಿತ ಮತ್ತು ಸಹಾಯಾರ್ಥ ಕೆಲಸಗಳು

ಬದಲಾಯಿಸಿ

ಬ್ರಾನ್ಸನ್ 2004ರ ಅಧ್ಯಕ್ಷಗಿರಿಗಾಗಿ ನಡೆಯುವ ಚುನಾವಣೆಯಲ್ಲಿ ಜಾನ್ ಕೆರಿಯನ್ನು ಬೆಂಬಲಿಸಿದನು ಮತ್ತು ಸಲಿಂಗವಿವಾಹದ ಬಗ್ಗೆ ಮುಕ್ತವಾಗಿ ಬೆಂಬಲ ವ್ಯಕ್ತಪಡಿಸುತ್ತಿರುವನು.[೬೬] ತೀವ್ರತರವಾದ/ನೇರವಾದ ಪರಿಸರವಾದಿ[೬೭] ಯಾಗಿರುವ ಬ್ರಾನ್ಸನ್ 2004ರಲ್ಲಿ 'ಅತ್ಯುತ್ತಮ ಪೋಷಾಕು ಧರಿಸಿದ ಪರಿಸರವಾದಿ' ಎಂದು ಸಸ್ಟೇಯ್ನೆಬಲ್ ಸ್ಟೈಲ್ ಫೌಂಡೇಷನ್ ನಿಂದ ಗುರುತಿಸಲ್ಪಟ್ಟನು.[೬೮] BMW ಪತ್ರಿಕೆಯಲ್ಲೇ ಉಲ್ಲೇಖಿಸಿದಂತೆ ಬ್ರಾನ್ಸನ್ ಒಂದು ಬಿಎಂಡ್ಬ್ಲ್ಯೂ ಹೈಡ್ರೋಜನ್ 7 ಕಾರನ್ನು ಹೊಂದಿದ್ದಾರೆ. ಬ್ರಾನ್ಸನ್ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಬಗ್ಗೆ ತನ್ನ ಒಂಬತ್ತನೆಯ ವಯಸ್ಸಿನಲ್ಲೇ, ನೆವಾಡಾದಲ್ಲಿ 1962ರಲ್ಲಿ ಅಮೆರಿಕವು ಅಣ್ವಸ್ತ್ರಪ್ರಯೋಗ ನಡೆಸಿದಾಗ ಜಗದಾದ್ಯಂತ ಮಾಧ್ಯಮಗಳಲ್ಲಿ ಅದನ್ನು ಖಂಡಿಸಿ ಪ್ರಕಟವಾದ ತಲೆಬರಹಗಳನ್ನು ಕಂಡಾಗಿನಿಂದಲೂ, ಆ ವಿಚಾರದ ಬಗ್ಗೆ ಅರಿವುಳ್ಳವನಾಗಿದ್ದನು.[೬೯] 1990ರ ದಶಕದಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಅವನು ಸುದ್ದಿ ವಿನಿಮಯ ಗೋಷ್ಠಿಗಳಲ್ಲಿ ಭಾಗವಹಿಸಿ ಗ್ರೀನ್ ಪೀಸ್ ಈ ವಿಚಾರದ ಬಗ್ಗೆ ಎಲ್ಲರ ಗಮನ ಸೆಳೆಯುಲು ಸಹಾಯ ಮಾಡಿದನು.[೬೯] ಫ್ರೆಂಚ್ ನ್ಯೂಕ್ಲಿಯರ್ ಟೆಸ್ಟಿಂಗ್ ಯೋಜನೆಯನ್ನು ಪ್ರತಿಭಟಿಸುವ ಗ್ರೀನ್ ಪೀಸ್ ಸಂಸ್ಥೆಯನ್ನು ಬೆಂಬಲಿಸುವುದರ ಅಂಗವಾಗಿ ಬ್ರಾನ್ಸನ್ ಫ್ರೆಂಚ್ ಗೋಲ್ಡನ್ ಐ ಪ್ರೀಮಿಯರ್ ಅನ್ನು ಬಹಿಷ್ಕರಿಸಿದನು.[೭೦] 1997ರಿಂದ 2000ದವರೆಗೂ ಬ್ರಾನ್ಸನ್ ಮತ್ತು ಅವನ ಪತ್ನಿ ಸ್ಮಿತ್ ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ (NRDC) ಮತ್ತು ಇಂಟರ್ ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ ಫೇರ್ (IFAW)ಗೆ ಸೇವೆ ಸಲ್ಲಿಸುತ್ತಾ ಲಗೂನಾ ಸ್ಯಾನ್ ಇಗ್ನಾಷಿಯೋದಲ್ಲಿ ನಿರ್ಮಿತವಾಗಬೇಕಿದ್ದ ಒಂದು ಲವಣದ ಕಾರ್ಖಾನೆಯ ನಿರ್ಮಾಣಕಾರ್ಯವು ಸ್ಥಗಿತವಾಗುವಂತೆ ಮಾಡಲು ಶ್ರಮಿಸಿದರು.[೭೧] ಈ ದಂಪತಿಗಳು ಹಾಲೆ ಬೆರ್ರಿ, ಸಿಂಡಿ ಕ್ರಾಫರ್ಡ್ ಮತ್ತು ಡಾರಿಲ್ ಹನ್ನಾರೊಡನೆ ಸೇರಿ ಮಾಲಿಬೂ ತೀರದ ಅತ್ತಣ ಪ್ರದೇಶದಲ್ಲಿ ಕ್ಯಾಬ್ರಿಲೋ ಪೋರ್ಟ್ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಫೆಸಿಲಿಟಿ ನಿರ್ಮಿಸಲು ಯೋಜಿಸಿದ್ದ, ಸಮುದ್ರಪ್ರಾಣಿಗಳಿಗೆ ಮಾರಕವಾಗುವ ವಿರರುದ್ಧ ಯಶಸ್ವಿಯಾಗಿ ಸಮರ ಸಾರಿದನು.ದ ಸ್ಟೇಟ್ಸ್ ಲ್ಯಾಂಡ್ ಕಮಿಷನ್ ಇವರ ಪ್ರತಿಭಟನೆಗೆ ಮಣಿದು ಆ ಯೋಜನಿಗೆ ನೀಡಿದ್ದ ಭೂಮಿಯನ್ನು ಹಿಂತೆಗೆದುಕೊಂಡಿತು.[೭೨] ಮೇ 2007ರಲ್ಲಿ ರಾಜ್ಯಪಾಲ ಆರ್ನಾಲ್ಡ್ ಶ್ವಾರ್ಝೆನೆಗರ್ ಈ ಕಾರ್ಯವನ್ನು ಪುಷ್ಟೀಕರಿಸಿದರು.[೭೩] ಬ್ರಾನ್ಸನ್ ಸೀ ಷೆಪರ್ಡ್ ಸಲಹೆಗಾರರ ಮಂಡಳಿ[೭೪] ಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾನೆ. ಬ್ರಾನ್ಸನ್ ತನ್ನ ಚಿತ್ರಗಳನ್ನು (ಪೇಯ್ಡ್ ಟಿಂಗ್ ಗಳನ್ನು) ಮಾರಿ ಬಂದ ಹಣವನ್ನು ದಾನಕಾರ್ಯಗಳಿಗೆ ನೀಡುತ್ತ಻ನೆ. ಸಣ್ಣ ವಯಸ್ಸಿನಲ್ಲೇ ಕಲಾವಿದನಾಗಲು ತರಬೇತಿ ಪಡೆದ ಬ್ರಾನ್ಸನ್ ನಂತರ ರಂಗದತ್ತ ವಾಲಿದನು;ತನ್ನ ಹೆಂಡತಿಯ ಮಾರಣಾಂತಿಕ ಖಾಯಿಲೆಯ ಅವಧಿಯಲ್ಲಿ ಅವಳೊಂದಿಗಿರಲು ಅಭಿನಯದಿಂದಲೂ ದೂರವಿದ್ದು, ವೈದ್ಯಕೀಯ ಕಾರಣಗಳಿಗಾಗಿ ಚಿತ್ರಕಲೆಯನ್ನು ಕೈಗೆತ್ತಿಕೊಂಡು, ವರ್ಣಮಯವಾದ ಲ್ಯಾಂಡ್ ಸ್ಕೇಪ್ ಗಳನ್ನೂ, ಕುಟುಂಬದ ಭಾವಚಿತ್ರಗಳನ್ನೂ ಚಿತ್ರಿಸಿದನು. ಅಂದಿನಿಂದ ಚಿತ್ರೀಕರಣ ಸಮಯದಲ್ಲಿ ಮತ್ತು ಮನೆಯಲ್ಲಿ ಬಿಡುವು ದೊರೆತಾಗಲೆಲ್ಲಾ ಚಿತ್ರಕಲೆಯ ಹವ್ಯಾಸವನ್ನು ಮುಂದುವರಿಸಿದನು. ಅವನ ಚಿತ್ರಗಳ ಜಿಕ್ಲೀಲ್ ಪ್ರಿಂಟುಗಳ ಮಾರಾಟದಿಂದ ಬರುವ ಲಾಭವನ್ನು "ಪರಿಸರ, ಮಕ್ಕಳು ಮತ್ತು ಹೆಂಗಸರ ಆರೋಗ್ಯದ ಸಹಾಯಾರ್ಥ"ವಾಗಿ ಒಂದು ಟ್ರಸ್ಟ್ ಗೆ ನೀಡುತ್ತಿರುವನು.[೭೫] ಹ್ಯಾರಿಸ್ ಳ ನಿಧನಾನಂತರ ಬ್ರಾನ್ಸನ್ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು, 2006ರಲ್ಲಿ, ಲೀ ನ್ಯಾಷನಲ್ ಡೆನಿಮ್ ಡೇ ಎಂಬ ಸ್ತನ ಕ್ಯಾನ್ಸರ್ ಗಾಗಿ ಹಣ ಸಂಗ್ರಹಿಸುವ (ಈ ಸಂಸ್ಥೆಯು ಒಂದೇ ದಿನದಲ್ಲಿ ಬೇರೆಲ್ಲಾ ಸ್ತನ ಕ್ಯಾನ್ಸರ್ ಗೆ ಹಣ ಸಂಗ್ರಹಿಸುವ ಸಂಸ್ಥೇಗಳಿಗಿಂತಲೂ ಹೆಚ್ಚಿನ ಹಣ(ಮಿಲಿಯನ್ ಗಟ್ಟಲೆ ಡಾಲರ್ ಗಳು)ವನ್ನು ಒಂದೇ ದಿನದಲ್ಲಿ ಸಂಗ್ರಬಿಸುತ್ತದೆ)ಸಂಸ್ಥೆಯ ವಕ್ತಾರನಾಗಿ ಸೇವೆ ಸಲ್ಲಿಸಿದನು.[೭೬] ಮೇ 2007ರಲ್ಲಿ ಬ್ರಾನ್ಸನ್ ಮತ್ತು ಸ್ಮಿತ್ ತಮ್ಮ ವಾಸಸ್ಥಾನವಾದ ಹವಾಯಿಕಾಯೇಯ್ ದ್ವೀಪದ ಬಳಿ ಒಂದು ಆಟದ ಮೈದಾನವನ್ನು ಅದಲುಬದಲಿಸಲು $100,000ವನ್ನು ದಾನವಾಗಿ ನೀಡಿದರು.[೭೭] ಜುಲೈ 7, 2007ರಂದು ಬ್ರಾನ್ಸನ್ ಲೈವ್ ಅರ್ಥ್ ಎಂಬ ಚಿತ್ರವನ್ನು ಲಂಡನ್ ನಲ್ಲಿ ಮಂಡಿಸಿದನು.[೭೮] ಅದೇ ವಿಷಯ ಕುರಿತು ಒಂದು ಟೆಲಿವಿಷನ್ ಜಾಹಿರಾತನ್ನೂ ರೆಕಾರ್ಡ್ ಮಾಡಿದನು.[೭೯] ಬ್ರಾನ್ಸನ್ ತನ್ನ ಕುಟುಂಬದೊಂದಿಗೆ ಮಾಲಿಬು, ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾನೆ. ಪಿಯರ್ಸ್ ಬ್ರಾನ್ಸನ್ 2001ರಿಂದಲೂ UNICEF Ireland ನ ರಾಯಭಾರಿಯಾಗಿದ್ದಾನೆ. UNICEF ನ "ಮಕ್ಕಳಿಗಾಗಿ ಒಂದಾಗಿ. AIDS ವಿರುದ್ಧ ಒಂದಾಗಿ" ಚಳುವಳಿಗಾಗಿ ಲಿಯಾಮ್ ನೀಸನ್ ನೊಂದಿಗೆ ಆ ಚಳುವಳಿ ಕೈಗೊಂಡುದರ ಕುರುಹಾಗಿ ಒಂದು ವಿಶೇಷ ಘೋಷಣೆಯನ್ನು ರೆಕಾರ್ಡ್ ಮಾಡಿಕೊಟ್ಟನು.[೮೦]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
1979 ಮರ್ಫೀಸ್ ಸ್ಟ್ರೋಕ್ ಎಡ್ ವರ್ಡ್ ಓ'ಗ್ರಾಡಿ ಕಿರುತೆರೆಗಾಗಿ-ಚಿತ್ರ
1980 ದ ಲಾಂಗ್ ಗುಡ್ ಫ್ರೈಡೇ ಮೊದಲನೇ ಐರಿಷ್ ಮನ್
ದ ಮಿರರ್ ಕ್ರ್ಯಾಕ್ಡ್ 'ಜೇಮೀ' ಯ ಪಾತ್ರದಲ್ಲಿ ಹೆಸರು ಸೂಚಿಸಲ್ಪಡದ ಪಾತ್ರ
1981 ಮ್ಯಾನಿಯನ್ಸ್ ಆಫ್ ಅಮೆರಿಕ ರೋರಿ ಓ'ಮ್ಯಾನಿಯನ್ ಕಿರುತೆರೆಗಾಗಿ ಕಿರುಚಿತ್ರ
1986 ನೋಮ್ಯಾಡ್ಸ್ ಜೀನ್ ಚಾರ್ಲ್ಸ್ ಪೊಮ್ಮಿಯರ್
ರೆಮಿಂಗ್ಟನ್ ಸ್ಟೀಲ್: ದ ಸ್ಟೀಲ್ ದಟ್ ವುಡ್ ನಾಟ್ ಡೈ ರೆಮಿಂಗ್ಟನ್ ಸ್ಟೀಲ್
1987 ಟಾಫಿನ್ ಮಾರ್ಕ್ ಟಾಫಿನ್
ದ ಫೋರ್ತ್ ಪ್ರೋಟೋಕಾಲ್ ವ್ಯಾಲೆರಿ ಪೆಟ್ರೋಫ್ಸ್ ಕೀ/ಜೇಮ್ಸ್ ಎಡ್ವರ್ಡ್ ರಾಸ್
1988 ದ ಡಿಸೀವರ್ಸ್ ವಿಲಿಯಮ್ ಸ್ಯಾವೇಜ್
ನೋಬಲ್ ಹೌಸ್ ಇಯಾನ್ ಡನ್ರಾಸ್ ಕಿರುತೆರೆಯ ಕಿರುಸರಣಿ
1989 ಅರೌಂಡ್ ದ ವರ್ಲ್ಡ್ ಇನ್ 80 ಡೇಸ್ ಫಿಲಿಯಾಸ್ ಫಾಗ್ ಕಿರುತೆರೆಗಾಗಿ - ಕಿರುಸರಣಿ
ದ ಹೀಸ್ಟ್ ನೀಲ್ ಸ್ಕಿನ್ನರ್ ಕಿರುತೆರೆಗಾಗಿ ಚಿತ್ರ
1990 ಮಿಸ್ಟರ್ ಜಾನ್ಸನ್ ಹ್ಯಾರಿ ರಬ್ಡೆಕ್
1991 ಮರ್ಡರ್ 101 ಚಾರ್ಲ್ಡ್ ಲ್ಯಾಟ್ಟಿಮೋರ್ ಕಿರುತೆರೆಗಾಗಿ ಕಿರುಚಿತ್ರ
ವಿಕ್ಟಿಮ್ ಆಫ್ ಲವ್ ಪಾಲ್ ಟಾಮಿಲ್ನ್ ಸನ್ ಕಿರುತೆರೆ-ಚಿತ್ರ
1992 ದ ಲಾನ್ ಮೋವರ್ ಮ್ಯಾನ್ ಡಾ. ಲಾರೆನ್ಸ್ ಏಂಜೆಲೋ
ಲೈವ್ ವೈರ್ ಡ್ಯಾನಿ ಓ'ನೀಲ್
1993 ಮಿಸೆಸ್ ಡೌಟ್ ಫೈರ್ ಸ್ಟುವರ್ಟ್ ಡನ್ಮೇಯರ್
ಲಿವ್ ಎಂಡ್ ಲೆಟ್ ಡೈ (1993) (ಕ್ರೇಟನ್) ಸಾಕ್ಷ್ಯಚಿತ್ರ
ಡೆತ್ ಟ್ರೈನ್ ಮೈಕಲ್ 'ಮೈಕ್' ಗ್ರಹಾಮ್ ಕಿರುತೆರೆಗಾಗಿ ಚಲನಚಿತ್ರ
ಎಂಟ್ಯಾಂಗಲ್ಡ್ ಗ್ಯಾರಾವಾನ್
ದ ಬ್ರೋಕನ್ ಚೈನ್ ಸರ್ ವಿಲಿಯಮ್ ಜಾನ್ಸನ್ ಕಿರುತೆರೆಗಾಗಿ ಚಲನಚಿತ್ರ
1994 ಲವ್ ಅಫೇರ್ ಕೆನ್ ಅಲನ್
ಡೋಂಟ್ ಟಾಕ್ ಟು ಸ್ಟ್ರೇಂಜರ್ಸ್ ಡಗ್ಲಾಸ್ ಪ್ಯಾಟ್ರಿಕ್ ಬ್ರೋಡಿ ಕಿರುತೆರೆಗಾಗಿ ಚಲನಚಿತ್ರ
1995 ನೈಟ್ ವಾಚ್ ಮೈಕೆಲ್ 'ಮೈಕ್' ಗ್ರಹಾಮ್ ಕಿರುತೆರೆಯ ಚಲನಚಿತ್ರ
ಗೋಲ್ಡನ್ ಐ ಜೇಮ್ಸ್ ಬಾಂಡ್ ನಾಮನಿರ್ದೇಶನ - ಅತ್ಯುತ್ತಮ ನಟ ಎಂದು ಸ್ಯಾಟರ್ನ್ ಪ್ರಶಸ್ತಿಗಾಗಿ
1996 ಮಾರ್ಸ್ ಅಟಾಕ್ಸ್! ಪ್ರೊಫೆಸರ್ ದೊನಾಲ್ಡ್ ಕೆಸ್ಲರ್
ದ ಮಿರರ್ ಹ್ಯಾಸ್ ಟೂ ಫೇಸಸ್ ಅಲೆಕ್ಸ್
1997 ರಾಬಿನ್ ಸನ್ ಕ್ರೂಸೋ ರಾಬಿನ್ ಸನ್ ಕ್ರೂಸೋ
ಟುಮಾರೋ ನೆವರ್ ಡೈಸ್ ಜೇಮ್ಸ್ ಬಾಂಡ್ ಶ್ರೇಷ್ಠ ಅಭಿನಯಕ್ಕಾಗಿ ಸ್ಯಾಟರ್ನ್ ಪ್ರಶಸ್ತಿ.
ನಾಮನಿರ್ದೇಶನ - ವಿಶ್ವದ ಚಲನಚಿತ್ರದಲ್ಲಿ ಯೂರೋಪಿಯನ್ ನ ುನ್ನತ ಮಟ್ಟದ ಸಾಧನೆಗಾಗಿ ಯೂರೋಪಿಯನ್ ಚಲನಚಿತ್ರ ಪ್ರಶಸ್ತಿ
ಡಾಂಟೇಸ್ ಪೀಕ್ ಹ್ಯಾರಿ ಡಾಲ್ಟನ್
1998 ಕ್ವೆಸ್ಟ್ ಫರ್ ಕ್ಯಾಮೆಲಾಟ್ ಕಿಂಗ್ ಆರ್ಥರ್
ದ ನೆವ್ಯೂ ಜೋ ಬ್ರ್ಯಾಡಿ ನಿರ್ಮಾಪಕನೂ ಹೌದು
1999 ಗ್ರೇ ಔಲ್ ಆರ್ಚಿಬಾಲ್ಡ್ "ಗ್ರೇ ಔಲ್" ಬೆಲಾನೀ
ದ ವರ್ಲ್ಡ್ ಈಸ್ ನಾಟ್ ಎನಫ್ ಜೇಮ್ಸ್ ಬಾಂಡ್ ಉತ್ತಮ ನಟನೆಂದು ಎಂಪೈರ್ ಪ್ರಶಸ್ತಿ
ದ ಮ್ಯಾಚ್ ಜಾನ್ ಮೆಕ್ ಗೀಲ್ ನಿರ್ಮಾಪಕನೂ ಹೌದು
ದ ಥಾಮಸ್ ಕ್ರೌನ್ ಅಫೇರ್ ಥಾಮಸ್ ಕ್ರೌನ್ ನಿರ್ಮಾಪಕನೂ ಹೌದು
2001 ದ ಟೈಲರ್ ಆಫ್ ಪನಾಮಾ ಅಂಡ್ರೂ ಆಸ್ನಾರ್ಡ್
2002 ಡೈ ಅನದರ್ ಡೇ ಜೇಮ್ಸ್ ಬಾಂಡ್ ನಾಮನಿರ್ದೇಶಿತ - ಅತ್ಯುತ್ತಮ ನಟ ಎಂದು ಸ್ಯಾಟರ್ನ್ ಪ್ರಶಸ್ತಿ
ಎವೆಲಿನ್ ಡೆಸ್ಮಂಡ್ ಡಾಯ್ಲ್ ನಿರ್ಮಾಪಕನೂ ಹೌದು
2004 ಆಫ್ಟರ್ ದ ಸನ್ ಸೆಟ್ ಮ್ಯಾಕ್ಸ್ ಬರ್ಡೆಟ್
ಲಾಸ್ ಆಫ್ ಅಟ್ರಾಕ್ಷನ್ ಡೇನಿಯಲ್ ರಾಫೆರ್ಟಿ ನಿರ್ವಾಹಕ ನಿರ್ಮಾಪಕನೂ ಹೌದು
2005 ದ ಮೆಟಡೋರ್ ಜೂಲಿಯನ್ ನೋಬಲ್ ನಾಮನಿರ್ದೇಶನ - ಅತ್ಯುತ್ತಮ ನಟ ಎಂದು ಸ್ಯಾಟರ್ನ್ ಪ್ರಶಸ್ತಿ
ನಾಮಸೂಚಿತ - [[ಮೋಷನ್ ಪಿಕ್ಷರ್ ಗಾನಪ್ರಧಾನ ಅಥವಾ ಹಾಸ್ಯಪ್ರಧಾನ ಚಿತ್ರದಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ]]
ನಾಮನಿರ್ದೇಶಿತ - ಮುಖ್ಯಪಾತ್ರದಲ್ಲಿನ ಶ್ರೇಷ್ಠ ನಟನೆಗಾಗಿ ಐರಿಷ್ ಚಲನಚಿತ್ರ ಮತ್ತು ಕಿರುತೆರೆ ಪ್ರಶಸ್ತಿ - ಚಲನಚಿತ್ರದಲ್ಲಿ
2006 ಸೆರಾಫಿಮ್ ಫಾಲ್ಸ್ ಗಿಡಿಯನ್
2007 ಬಟರ್ ಫ್ಲೈ ಆನ್ ಎ ವೀಲ್ ಟಾಮ್ ರಯಾನ್ ನಿರ್ಮಾಪಕನೂ ಹೌದು
ಮ್ಯಾರೀಡ್ ಲೈಫ್ ರಿಚರ್ಡ್ ಲ್ಯಾಂಗ್ಲೇ
2008 ಮಮ್ಮಾ ಮಿಯಾ ಸ್ಯಾಮ್ ಕಾರ್ಮೈಕಲ್ ನಾಮನಿರ್ದೇಶಿತ - ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಉತ್ತಮ ಅಭಿನಯಕ್ಕಾಗಿ - ಪುರುಷ ವರ್ಗದಲ್ಲಿ.


ಅತಿ ಕೆಟ್ಟ ಪೋಷಕ ನಟ ಎಂದು ರಾಝೀ ಪ್ರಶಸ್ತಿ ಪಡೆದನು.

ಥಾಮಸ್ ಎಂಡ್ ಫ್ರೆಂಡ್ಸ್ : ದ ಗ್ರೇಟ್ ಡಿಸ್ಕವರಿ ನ್ಯಾರೇಟರ್ ಅತಿಥಿ ನಟನಾಗಿ
2009 ದ ಗ್ರೇಟೆಸ್ಟ್ ಅಲನ್ ಬ್ರೂಯರ್
2010 ದ ಘೋಸ್ಟ್ ರೈಟರ್ ಆಡಮ್ ಲ್ಯಾಂಗ್ ಬಿಡುಗಡೆಯಾಗಬೇಕಿದೆ
Percy Jackson & the Olympians: The Lightning Thief ಚಿರಾನ್ ಸಂಪೂರ್ಣಗೊಂಡಿದೆ.
ರಿಮೆಂಬರ್ ಮಿ ಚಾರ್ಲ್ಸ್ ರೋತ್ ನಿರ್ಮಾಣ ಹಂತದಲ್ಲಿ

ಆಕರಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2013-11-02. Retrieved 2021-08-10.
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ Chutkow, Paul (December 1997). "Brosnan. Pierce Brosnan". Cigaraficionado.com. Archived from the original on 29 ಆಗಸ್ಟ್ 2008. Retrieved 23 October 2008.
  3. ೩.೦ ೩.೧ ೩.೨ "Pierce Brosnan". HELLO. Archived from the original on 2007-03-08. Retrieved 2007-02-22.
  4. ೪.೦ ೪.೧ ೪.೨ "Pierce Brosnan". Inside the Actors Studio. Season 9. Episode 903. 2002-11-24. Bravo. Archived from the original on 2007-08-09. https://web.archive.org/web/20070809080618/http://www.bravotv.com/Inside_the_Actors_Studio/guest/Pierce_Brosnan. 
  5. Byron Allen (host) (1993). "Pierce Brosnan: Part 2". Entertainers with Byron Allen. 
  6. "Brosnan is a true Father Figure". ShowBiz Ireland. 1 November 2002. Retrieved 2007-02-22.
  7. Nathan, Ian (October 1997). "The Empire 100 Interview". Empire (100): 116.
  8. ೮.೦ ೮.೧ Butler, Karen (2007-02). "Fierce Brosnan". Irish Echo Online. Archived from the original on 5 ಫೆಬ್ರವರಿ 2007. Retrieved 22 February 2007. {{cite news}}: Check date values in: |date= (help)
  9. "Alumni". St Martins College. Archived from the original on 2007-06-30. Retrieved 2007-04-22.
  10. ಪಿಯರ್ಸ್ ಬ್ರಾನ್ಸನ್: ಕ್ವೆಶ್ಚನ್ಸ್ ಫ್ರಂ ದ ಫ್ಲೋರ್ : guardian.co.uk © ಗಾರ್ಡಿಯನ್ ನ್ಯೂಸ್ ಎಂಡ್ ಮೀಡಿಯಾ - 18 ಮಾರ್ಚ್ 2003
  11. "Drama Centre London: Former". Central Saint Martins College of Art and Design. Archived from the original on 2007-02-04. Retrieved 2007-02-22.
  12. ಕ್ಯಾರಿಕ್, ಪೀಟರ್ [2002]. ಪಿಯರ್ಸ್ ಬ್ರಾನ್ಸನ್. ಸಿಟಾಡೆಲ್ ಪ್ರೆಸ್, ಪುಟ. 18–36. ISBN 0791067726
  13. ಮೆಂಬರಿ, ಯಾರ್ಕ್ [2002]. ಪಿಯರ್ಸ್ ಬ್ರಾನ್ಸನ್: ದ ಬಯಾಗ್ರಫಿ. ವರ್ಜಿನ್ ಬುಕ್ಸ್. ISBN 0791067726
  14. "Manions of America". MTV Movies. Archived from the original on 2015-10-17. Retrieved 2008-04-16.
  15. "Awards for Pierce Brosnan". Internet Movie Database. Retrieved 2007-02-22.
  16. ೧೬.೦ ೧೬.೧ ೧೬.೨ ೧೬.೩ ೧೬.೪ Last, Kimberly (1996). "Pierce Brosnan's Long and Winding Road To Bond". 007 Magazine. Archived from the original on 9 ಅಕ್ಟೋಬರ್ 2006. Retrieved 22 February 2007.
  17. Charlie Rose (host) (1999-08-05). "Pierce Brosnan/Rene Russo". The Charlie Rose Show. PBS. 
  18. Belson, Eve (July 1993). "Pierce Brosnan: Urbane Leading Man". Orange Coast. {{cite journal}}: |access-date= requires |url= (help)
  19. McDonagh, Maitland (19 April 2006). "The James Bonds who might have been". TV Guide. Archived from the original on 2007-12-25. Retrieved 2008-01-05.
  20. ಮೆಂಬರಿ, ಯಾರ್ಕ್ ೧೯೯೭ ಪಿಯರ್ಸ್ ಬ್ರಾನ್ಸನ್: ದ ನ್ಯೂ ಅನಾಥರೈಸ್ಡ್ ಬಯಾಗ್ರಫಿ ISBN 0753501589
  21. James Berardinelli (1995). "GoldenEye". reelviews. Retrieved 16 November 2006.
  22. "GoldenEye". Box Office Mojo. Retrieved 2006-11-15.
  23. "1995 Worldwide Grosses". Box Office Mojo. Retrieved 2006-11-24.
  24. "Box Office History for James Bond Movies". The Numbers. Retrieved 2006-11-11.
  25. "Bio Basics". The official Pierce Brosnan site. PBFC. Archived from the original on 2008-04-04. Retrieved 2008-04-15.
  26. ೨೬.೦ ೨೬.೧ Nathon, Ian (2002-12). "Numero Uno (Die Another Day cover story)". Empire (162): 103. {{cite journal}}: Check date values in: |date= (help)
  27. "Brosnan uncertain over more Bond". BBC NEWS. 2 April 2004. Retrieved 2007--22. {{cite news}}: Check date values in: |accessdate= (help)
  28. "Is Brosnan too old to be 007?". Daily Mail. 9 February 2004. Retrieved 22 February 2007.
  29. Rich, Joshua (27 July 2004). "Bond No More". Entertainment Weekly. Archived from the original on 9 ಫೆಬ್ರವರಿ 2007. Retrieved 22 February 2007.
  30. "Brosnan: No More 007". scifi.com. 14 October 2004. Archived from the original on 4 ನವೆಂಬರ್ 2004. Retrieved 22 February 2007.
  31. Brosnan, Pierce (2005-02). "The Official Pierce Brosnan site". Archived from the original on 2006-09-01. Retrieved 2006-09-13. {{cite web}}: Check date values in: |date= (help)
  32. "Daniel Craig takes on 007 mantle". BBC NEWS. 2005-10-14. Retrieved 22 February 2007.
  33. "Pierce Brosnan answers". The Globe and Mail. 14 September 2006. Archived from the original on 2008-07-09. Retrieved 2006-09-14.
  34. John Anderson (22 January 2007). "A grittier Brosnan takes on riskier roles". International Herald Tribune. Archived from the original on 25 January 2007.
  35. "Everything or Nothing". EA Games. Archived from the original on 2007-12-27. Retrieved 2007-02-22.
  36. Murphy, Garreth (10 May 2004). "Laws of Attraction". entertainment.ie. Retrieved 2007-02-22.
  37. "After the Sunset". Rotten Tomatoes. Archived from the original on 13 ಫೆಬ್ರವರಿ 2007. Retrieved 22 February 2007.
  38. "The Matador". Rotten Tomatoes. Archived from the original on 28 ಫೆಬ್ರವರಿ 2007. Retrieved 22 February 2007.
  39. Ebert, Roger (2006-01-06). "The Matador (2005)". Chicago Sun-Times. Archived from the original on 2007-02-02. Retrieved 2007-02-22.
  40. "'Brokeback Mountain' leads Golden Globe nominations". CNN. 15 December 2005. Retrieved 22 February 2007.
  41. Guider, Elizabeth (13 December 2005). "Duo plant a Wildflower". Variety. Retrieved 19 February 2007.
  42. Crust, Kevin (26 January 2007). "Seraphim Falls". Los Angeles Times. Retrieved 19 February 2007.
  43. Rechtshaffen, Michael (18 September 2006). "Seraphim Falls". The Hollywood Reporter. Archived from the original on 19 ಜನವರಿ 2007. Retrieved 19 February 2007.
  44. Davis, Dave (13 November 2007). "The Verhoeven Affair". Variety. {{cite journal}}: |access-date= requires |url= (help); Cite has empty unknown parameters: |laydate=, |laysource=, |laysummary=, |month=, |quotes=, and |coauthors= (help)
  45. Martindale, Stone (2007-01-26). "Pierce Brosnan: Thomas Crown in The Topkapi Affair". Monsters & Critics News. Archived from the original on 2008-10-12. Retrieved 2007-02-19.
  46. Thorpe, Vanessa (2006-11-26). "Race to put the passion of Dylan's Caitlin on big screen". The Observer. Retrieved 2007-02-22.
  47. Turner, Robin (19 February 2007). "Latest Dylan film based on Milk Wood". Retrieved 22 February 2007.
  48. "Pierce Brosnan to Romance Meryl Streep in Mamma Mia! Movie". Theatre.com. 7 March 2007. Retrieved 5 January 2008.
  49. Kit, Borys (7 March 2007). "Brosnan joining Streep in "Mamma Mia!"". Reuters. Archived from the original on 2009-01-11. Retrieved 2007-03-08.
  50. "Brosnan set for Abba show movie". BBC News. 7 March 2007. Retrieved 8 March 2007.
  51. "Welcome to Paradise! | PARADE Magazine". Parade.com. 15 June 2008. Retrieved 25 October 2008.
  52. ನ್ಯೂ ಯಾರ್ಕ್ ಮ್ಯಾಗಝೀನ್ಸ್, ನ್ಯೂ ಯಾರ್ಕ್ ಮೂವೀಸ್
  53. "ಫಿಲಡೆಲ್ಫಿಯಾ ಇನ್ ಕ್ವೈರರ್ ಮೂವೀ ರಿವ್ಯೂ, ಜುಲೈ 18, 2008". Archived from the original on 2010-12-11. Retrieved 2010-03-03.
  54. ಮಿಯಾಮಿ ಹೆರಾಲ್ಡ್ ಮೂವೀಸ್, ಜುಲೈ 18, 2008
  55. Fleming, Michael (17 January 2007). "Brosnan to turn Wise novel into film". Variety. Retrieved 24 February 2007.
  56. "Pierce Brosnan Plans All-Irish Western". StarPulse News. 17 March 2007. Archived from the original on 20 ಮಾರ್ಚ್ 2007. Retrieved 19 March 2007.
  57. Keck, William (2007). "Fox stars amuse themselves at Santa Monica pier party". USA Today. Retrieved 17 September 2007.
  58. Lipworth, Elaine (17 February 2006). "Pierce Brosnan: A new licence to thrill". The Independent. Archived from the original on 10 ಫೆಬ್ರವರಿ 2009. Retrieved 19 February 2007.
  59. "Cassandra Harris, Actress, 39". The New York Times. 31 December 1991. Retrieved 19 February 2007.
  60. "Pierce Brosnan and Keely Shaye Smith". HELLO. 6 August 2001. Retrieved 19 February 2007.
  61. "Bond star Brosnan made honorary OBE". BBC NEWS. 14 July 2003.
  62. "Pierce Brosnan and Eddie Jordan awarded Honorary Doctorates from Dublin Institute of Technology". Dublin Institute of Technology. 23 June 2003. Archived from the original on 1 ಫೆಬ್ರವರಿ 2014. Retrieved 3 ಮಾರ್ಚ್ 2010.
  63. "Honorary Conferring Ceremony– 4 June 2004" (Press release). University College Cork. 28 May 2004.
  64. [೧]
  65. Nathan, Ian. "Public Access: Pierce Brosnan". Empire (135): 10. {{cite journal}}: |access-date= requires |url= (help)
  66. "Metro.co.uk". Retrieved 2007-02-19.
  67. "The Official Pierce Brosnan website". Archived from the original on 2007-04-11. Retrieved 2007-02-19.
  68. "Sustainable Style Foundation". Archived from the original on 2007-02-19. Retrieved 2007-02-22.
  69. ೬೯.೦ ೬೯.೧ "PEACE AND NUCLEAR DISARMAMENT: PIERCE ON THE RECORD". piercebrosnan.com. 17 April 2007. Archived from the original on 22 ಏಪ್ರಿಲ್ 2010. Retrieved 17 April 2007.
  70. Lang, Kirsty (3 December 1995). "Bond drops a bomb". The Sunday Times.
  71. "Brosnan: Activist". piercebrosnan.com. 2007-04-17. Archived from the original on 2007-04-11. Retrieved 2007-04-17.
  72. Silverman, Stephen M. (11 April 2007). "Halle Berry, Others Protest Natural Gas Facility". People. Time Inc. Retrieved 2007-04-17.
  73. ದ ಸಾಂತಾ ಬಾರ್ಬಾರಾ ಇಂಡಿಪೆಂಡೆಂಟ್ ಕ್ಯಾಬ್ರಿಲೋ ಪೋರ್ಟ್ ಡೈಸ್ ಎ ಸಾಂತಾ ಬಾರ್ಬರಾ ಫ್ಲೇವರ್ಡ್ ಡೆತ್
  74. "Sea Shepherd Advisors - Pierce Brosnan". Archived from the original on 2016-03-03. Retrieved 2010-03-03.
  75. "Homepage". The Official Pierce Brosnan website. PBFC. Archived from the original on 8 ಮಾರ್ಚ್ 2010. Retrieved 19 February 2007.
  76. "Pierce Brosnan to promote Lee breast cancer fund raiser". The Business Journal. American City Business Journals. 10 July 2006. Retrieved 2007-02-22.
  77. "Brosnan, Wife Help School Kids in Hawaii". ABC News. 2007-05-31. Archived from the original on 2007-06-28. Retrieved 2007-06-14.
  78. "London Live Earth line-up revealed". NME News. 5 July 2007. Retrieved 2008-01-08.
  79. http://www.piercebrosnan.com/menu.php?mm=1&sm=1&pn=1 Archived 2006-09-01 ವೇಬ್ಯಾಕ್ ಮೆಷಿನ್ ನಲ್ಲಿ. 15 ಏಪ್ರಿಲ್ 2008ರಂದು ಪುನಶ್ಚೇತನಗೊಳಿಸಲ್ಪಟ್ಟ ಪಿಯಸ್ರ್ ಬ್ರಾನ್ಸನ್ ನ ಅಧಿಕೃತ ವೆಬ್ ಸೈಟ್.
  80. "Children and AIDS". Unicef.ie. Archived from the original on 2008-10-09. Retrieved 2008-10-25.

ಹೊರಗಿನ ಕೊಂಡಿಗಳು

ಬದಲಾಯಿಸಿ

ಅಲ್ಲದೆ ಟ್ರೂ ಕನ್ಫೆಷನ್ಸ್ ಆಫ್ ಚಾರ್ಲೊಟ್ ಡಾಯ್ಲ್ ಚಿತ್ರದಲ್ಲಿ ಸವೊಯಿರ್ಸ್ ರೋಹನ್ (ಚಾರ್ಲೊಟ್) ಮತ್ತು ಮೋರ್ಗನ್ ಫ್ರೀಮನ್ ಹಾಗೂ ಝಕಾರಿಯಾರೊಡನೆ ಕ್ಯಾಪ್ಟನ್ ಜ್ಯಾಗರಿಯ ಪಾತ್ರದಲ್ಲಿ ಅಭಿನಯಿಸಿದ್ದಾನೆ.