ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ
ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ಕಲಬುರಗಿಯಲ್ಲಿ 1963ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ. [೧] [೨][೩]
ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಕಲಬುರಗಿ | |
---|---|
ಸ್ಥಾಪನೆ | 1963 |
ಸ್ಥಳ | ಕಲಬುರಗಿ, ಕರ್ನಾಟಕ |
ವಿದ್ಯಾರ್ಥಿಗಳ ಸಂಖ್ಯೆ | ೨೦೦೦ |
ಪದವಿ ಶಿಕ್ಷಣ | ೭೪೦ |
ಸ್ನಾತಕೋತ್ತರ ಶಿಕ್ಷಣ | ೧೨೦ |
ಅಂತರಜಾಲ ತಾಣ | http://www.pdaengg.com/ |
ವಿಭಾಗಗಳು
ಬದಲಾಯಿಸಿಪದವಿ ವಿಭಾಗಗಳು
- ವಾಹನ ಎಂಜಿನಿಯರಿಂಗ್
- ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
- ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
- ಕೈಗಾರಿಕಾ ಮತ್ತು ನಿರ್ಮಾಣ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ [೪]
- ಯಾಂತ್ರಿಕ ಎಂಜಿನಿಯರಿಂಗ್
- ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ (ಎಮ್. ಸಿ. ಎ.)
- ಸ್ನಾತಕೋತ್ತರ ವ್ಯವಹಾರ ಆಡಳಿತ (ಎಮ್. ಬಿ. ಎ.)
ಆವರಣ
ಬದಲಾಯಿಸಿಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು ಹಾಗೂ ಒಳಾಂಗಣ ಮೈದಾನ ಇದೆ.
ಗ್ರಂಥಾಲಯ
ಬದಲಾಯಿಸಿಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಪ್ರವೇಶ
ಬದಲಾಯಿಸಿದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
ವಿದ್ಯಾರ್ಥಿನಿಲಯಗಳು
ಬದಲಾಯಿಸಿ- ವಿದ್ಯಾರ್ಥಿ ನಿಲಯ
- ವಿದ್ಯಾರ್ಥಿನಿಯರ ನಿಲಯ
ಜೀವನ ಮಾರ್ಗದರ್ಶನ ಕೇಂದ್ರ
ಬದಲಾಯಿಸಿಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದ ಅಧಿಕೃತ ಅಂತರಜಾಲ ತಾಣ
- ↑ 10 Engineering colleges to get World Bank funding
- ↑ Plane greed? How Karnataka’s Dunkirk link went missing
- ↑ https://www.indiatimes.com/news/india/two-engineering-students-have-found-a-way-to-fit-the-gps-right-into-your-helmet-340170.html
- ↑ https://timesofindia.indiatimes.com/city/bengaluru/engineering-students-create-bluetooth-helmet/articleshow/63025820.cms