ಪಿಕ್ಸರ್‌ ಅನಿಮೇಷನ್‌ ಸ್ಟುಡಿಯೊಸ್‌ ಎಂಬುದು ಅಮೆರಿಕಾದ‌ CGI ಅನಿಮೇಷನ್‌ ಚಲನಚಿತ್ರ ಸ್ಟುಡಿಯೊ. ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾ ರಾಜ್ಯದ ಎಮೆರಿವಿಲ್ಲೆ‌ನಲ್ಲಿ ನೆಲೆಗೊಂಡಿದೆ. ೨೦೦೬ ಇಸವಿಯಲ್ಲಿ ಪಿಕ್ಸರ್‌ ವಾಲ್ಟ್‌ ಡಿಸ್ನಿ ಕಂಪೆನಿಯ ಅಂಗಸಂಸ್ಥೆಯಾಯಿತು. ಈ ಸ್ಟುಡಿಯೊ ಇಪ್ಪತ್ತನಾಲ್ಕು ಅಕ್ಯಾಡಮಿ ಪ್ರಶಸ್ತಿಗಳು, ಆರು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ಹಾಗೂ ಮೂರು ಗ್ರ್ಯಾಮ್ಮಿ ಪ್ರಶಸ್ತಿಗಳನ್ನು ಇತರೆ ಹಲವು ಪ್ರಶಸ್ತಿಗಳು, ಮನ್ನಣೆಗಳು ಮತ್ತು ಸಾಧನೆಗಳ ನಡುವೆ ಗಳಿಸಿದೆ ಹಾಗೂ ವಿಶ್ವಾದ್ಯಂತ $ ೫.೫ ಶತಕೋಟಿ ಹಣ ಗಳಿಸಿದೆ. ಇದು ಬಹುಶಃ ಅತಿ ಹೆಚ್ಚು(ರಾಟೆನ್‌ ಟೊಮೆಟೊಸ್ [][] ಪ್ರಕಾರ,ಬಹುಶಃ ಏಕೈಕ)ವಿಮರ್ಶಾತ್ಮಕವಾಗಿ ಪ್ರಶಂಸೆ ಗಳಿಸಿದ ಚಲನಚಿತ್ರ ಸ್ಟುಡಿಯೊಗಳಲ್ಲಿ ಒಂದಾಗಿದೆ. CGI-ಆನಿಮೇಟ್‌ ಆಗಿರುವ ಚಲನಚಿತ್ರಗಳ ನಿರ್ಮಾಣಕ್ಕೆ ಪಿಕ್ಸರ್‌ ಹೆಸರುವಾಸಿಯಾಗಿದ್ದು ಫೊಟೊರಿಯಲಿಸ್ಟಿಕ್‌ ರೆಂಡರ್ಮನ್‌ಮೂಲಕ ಇದನ್ನು ಸೃಷ್ಟಿಸಲಾಗಿದೆ. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸಲು ಉದ್ಯಮ- ಪ್ರಮಾಣಿತ ರೆಂಡರ್‌ಮ್ಯಾನ್ ಚಿತ್ರ ಮೂಡಿಸುವ APIಯನ್ನು ಇದು ಸ್ವಯಂ ಅನುಷ್ಠಾನ ಮಾಡಿದೆ.

Pixar Animation Studios
ಸಂಸ್ಥೆಯ ಪ್ರಕಾರSubsidiary of Disney
(Formerly public as NASDAQPIXR)
ಪೂರ್ವಾಧಿಕಾರಿGraphics Group (1979-1986)
ಸ್ಥಾಪನೆ1979 (1979) as Graphics Group
1986 (1986) as Pixar
ಸಂಸ್ಥಾಪಕ(ರು)Ed Catmull
Alvy Ray Smith
Steve Jobs
ಮುಖ್ಯ ಕಾರ್ಯಾಲಯEmeryville, California, U.S.
ಪ್ರಮುಖ ವ್ಯಕ್ತಿ(ಗಳು)Ed Catmull, President, Walt Disney Animation Studios & Pixar Animation Studios
John Lasseter, Chief Creative Officer, Walt Disney Animation Studios & Pixar Animation Studios
Jim Morris, General Manager, Pixar Animation Studios
Steve Jobs, former CEO of Pixar Animation Studios and member of the Board of Directors at Walt Disney Animation Studios
ಉದ್ಯಮCGI animation, motion pictures, software
ಉತ್ಪನ್ನRenderMan, Marionette
ಮಾಲೀಕ(ರು)The Walt Disney Company
ಜಾಲತಾಣhttp://www.pixar.com

ಪಿಕ್ಸರ್‌ ಉದ್ದಿಮೆಯು ಮೊದಲಿಗೆ ೧೯೭೯ ರಲ್ಲಿ ಗ್ರ್ಯಾಫಿಕ್ಸ್‌ ಗ್ರೂಪ್‌ ಆಗಿ ಆರಂಭಗೊಂಡಿತ್ತು. ಇದು ಲುಕಾಸ್‌ಫಿಲ್ಮ್‌ನ ಕಂಪ್ಯುಟರ್‌ ವಿಭಾಗದ ಅಂಗವಾಗಿತ್ತು. ನಂತರ, ೧೯೮೬ ರಲ್ಲಿ ಆಪಲ್‌ ಸಹ-ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಈ ಉದ್ದಿಮೆಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. ೨೦೦೬ ಇಸವಿಯಲ್ಲಿ ವಾಲ್ಟ್ ಡಿಸ್ನಿ ಕಂಪೆನಿಯು ಪಿಕ್ಸಾರ್ ಉದ್ದಿಮೆಯನ್ನು ಖರೀದಿಸಿತು.

೧೯೯೫ ಇಸವಿಯಲ್ಲಿ ನಿರ್ಮಾಣವಾದ ಟಾಯ್ ಸ್ಟೋರಿ ಪಿಕ್ಸರ್‌ ನಿರ್ಮಾಣದ ಮೊದಲ ಚಲನಚಿತ್ರವಾಗಿದ್ದು, ಪಿಕ್ಸರ್‌ ಇದುವರೆಗೂ ಹನ್ನೊಂದು ಚಲನಚಿತ್ರಗಳನ್ನು ನಿರ್ಮಿಸಿದೆ. ಎಲ್ಲವೂ ವಿಮರ್ಶಾತ್ಮಕ ಹಾಗೂ ವಾಣಿಜ್ಯ ಯಶಸ್ಸು ಕಂಡಿವೆ. ಟಾಯ್‌ ಸ್ಟೋರಿ ಯ ನಂತರ, ಪಿಕ್ಸರ್‌ ನಿರ್ಮಾಣದ ಈ ಚಲನಚಿತ್ರಗಳು ತೆರೆಕಂಡವು: ಎ ಬಗ್ಸ್‌ ಲೈಫ್‌ (೧೯೯೮), ಟಾಯ್‌ ಸ್ಟೋರಿ ೨ (೧೯೯೯), ಮಾಂಸ್ಟರ್ಸ್‌ ಇನ್ಕಾರ್ಪೊರೇಟೆಡ್‌ (೨೦೦೧), ಫೈಂಡಿಂಗ್‌ ನೆಮೊ (೨೦೦೩) (ಇಲ್ಲಿವರೆಗಿನ ಪಿಕ್ಸಾರ್ ನಿರ್ಮಾಣದ ಅತಿ ಯಶಸ್ವಿ‌ ಚಲನಚಿತ್ರ, ವಿಶ್ವದಾದ್ಯಂತ $೮೦೦ ದಶಲಕ್ಷ ಗಳಿಕೆ), ದಿ ಇಂಕ್ರಿಡಿಬಲ್ಸ್‌ (೨೦೦೪), ಕಾರ್ಸ್‌ (೨೦೦೬), ರಟಾಟೂಯಿ (೨೦೦೭), WALL-E (೨೦೦೮), ‌Up (೨೦೦೯) (ಡಿಸ್ನಿ ಡಿಜಿಟಲ್‌ ೩-ಡಿಯಲ್ಲಿ ಪ್ರಸ್ತುತಪಡಿಸಲಾದ ಮೊದಲ ಪಿಕ್ಸರ್‌‌ ಚಲನಚಿತ್ರ) ಹಾಗೂ ಟಾಯ್‌ ಸ್ಟೊರಿ ೩ (೨೦೧೦). ಪಿಕ್ಸರ್‌ ಉದ್ದಿಮೆಯ ಹನ್ನೆರಡನೆಯ ಚಲನಚಿತ್ರ ಕಾರ್ಸ್‌ ೨ ೨೦೧೧೧ ರ ಜೂನ್‌ ೨೪ ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

೨೦೦೧ ರಲ್ಲಿ ಅತ್ಯುತ್ತಮ ಆನಿಮೇಟೆಡ್‌ ಚಲನಚಿತ್ರಕ್ಕಾಗಿ ಅಕ್ಯಾಡಮಿ ಪ್ರಶಸ್ತಿ ವಿಭಾಗವನ್ನು ಉದ್ಘಾಟಿಸಿದ ನಂತರ ಬಿಡುಗಡೆಯಾದ ಎಲ್ಲಾ ಪಿಕ್ಸರ್‌ ನಿರ್ಮಿತ ಚಲನಚಿತ್ರಗಳು ಈ ಪ್ರಶಸ್ತಿಗೆ ನಾಮನಿರ್ದೇಶಿತವಾಗಿವೆ. ಇದರಲ್ಲಿ ಮಾಂಸ್ಟರ್ಸ್‌, ಇಂಕಾರ್ಪೊರೇಟೆಡ್ ‌ ಮೊದಲ ಚಲನಚಿತ್ರವಾಗಿತ್ತು. ಏಳು ಚಲನಚಿತ್ರಗಳಲ್ಲಿ ಐದಕ್ಕೆ ಪ್ರಶಸ್ತಿ ಸಂದಿವೆ: ಪೈಂಡಿಂಗ್‌ ನೆಮೊ , ದಿ ಇಂಕ್ರಿಡಿಬಲ್ಸ್‌ , ರಟಾಟೂಲ್‌ , ವಾಲ್‌-ಇ ಹಾಗೂ ಅಪ್‌ . ಜೊತೆಗೆ, ಅಪ್‌ ಅತ್ಯುತ್ತಮ ಚಲನಚಿತ್ರಕ್ಕಾಗಿ ಅಕ್ಯಾಡಮಿ ಪ್ರಶಸ್ತಿ ನಾಮನಿರ್ದೇಶನವಾದ ಮೊದಲ ಚಲನಚಿತ್ರವೂ ಆಗಿದೆ. ಫೈಂಡಿಂಗ್‌ ನೆಮೊ , ದಿ ಇಂಕ್ರಿಡಿಬಲ್ಸ್‌ , ರಟಾಟೂಲ್‌ , ಅಪ್‌ ಹಾಗೂ ಟಾಯ್‌ ಸ್ಟೋರಿ ೩ ಸರ್ವಕಾಲಿಕ ಪ್ರಮುಖ ೫೦ ಹೆಚ್ಚು ಯಶಸ್ವಿ ಚಲನಚಿತ್ರಗಳ ಪಟ್ಟಿಗೆ ಸೇರಿವೆ. ಫೈಂಡಿಂಗ್‌ ನೆಮೊ ಪ್ರಮುಖ ೨೦ ರ ಪಟ್ಟಿಯಲ್ಲಿ ೨೦ ನೆಯ ಸ್ಥಾನ, ಟಾಯ್ ಸ್ಟೋರಿ ೩ ೨೩ ನೆಯ ಸ್ಥಾನ, ಅಪ್‌ ೩೬ ನೆಯ ಸ್ಥಾನ, ದಿ ಇಂಕ್ರಿಡಿಬಲ್ಸ್‌ ೪೬ ನೆಯ ಸ್ಥಾನ ಹಾಗೂ ರಟಾಟೂಲ್‌ ೪೮ ನೆಯ ಸ್ಥಾನ ಗಳಿಸಿದವು.

೨೦೦೯ ರ ಸೆಪ್ಟೆಂಬರ್‌ ೬ ರಂದು, ಪಿಕ್ಸರ್‌ನ ಕಾರ್ಯನಿರ್ವಾಹಕರಾದ ಜಾನ್‌ ಲ್ಯಾಸಟರ್‌, ಬ್ರ್ಯಾಡ್‌ ಬರ್ಡ್‌, ಪೀಟ್‌ ಡಾಕ್ಟರ್‌, ಆಂಡ್ರ್ಯೂ ಸ್ಟಾಂಟನ್‌ ಮತ್ತು ಲೀ ಉಂಕ್ರಿಚ್‌ರಿಗೆ ಬಯೆನಲ್‌ ವೆನಿಸ್‌ ಚಲನಚಿತ್ರೋತ್ಸವದಲ್ಲಿ ಸರ್ವಕಾಲಿಕ ಸಾಧನೆಯ ಗೋಲ್ಡನ್‌ ಲಯನ್‌ ಪ್ರಶಸ್ತಿ ಲಭಿಸಿತು. ಲುಕ್ಯಾಸ್‌ಫಿಲ್ಮ್‌ ಸಂಸ್ಥಾಪಕ ಜಾರ್ಜ್‌ ಲ್ಯೂಕಾಸ್‌ ಈ ಪ್ರಶಸ್ತಿ ಪ್ರದಾನ ಮಾಡಿದರು.

ಇತಿಹಾಸ

ಬದಲಾಯಿಸಿ

ಆರಂಭಿಕ ಇತಿಹಾಸ

ಬದಲಾಯಿಸಿ
 
ಎಮೆರಿವಿಲ್ಲೆ‌ನಲ್ಲಿರುವ ಪಿಕ್ಸರ್‌ ಸ್ಟುಡಿಯೊ ಆವರಣ.

ಪಿಕ್ಸರ್‌ನ್ನು ೧೯೭೯ ರಲ್ಲಿ ಗ್ರ್ಯಾಫಿಕ್ಸ್‌ ಗ್ರೂಪ್‌ ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ಇದು ಲುಕ್ಯಾಸ್‌ಫಿಲ್ಮ್‌ನ ಕಂಪ್ಯೂಟರ್‌ ವಿಭಾಗದ ಮೂರನೆಯ ಒಂದರಷ್ಟು ಭಾಗವಾಗಿತ್ತು. ನ್ಯೂಯಾರ್ಕ್‌ ತಂತ್ರಜ್ಞಾನ ಸಂಸ್ಥೆಯ (NYIT) [] ಕಂಪ್ಯೂಟರ್‌ ಗ್ರ್ಯಾಫಿಕ್ಸ್ ಲ್ಯಾಬ್‌ನ (CGL) ಮುಖ್ಯಸ್ಥ ಡಾ. ಎಡ್‌ ಕ್ಯಾಟ್ಮಲ್‌ರನ್ನು ಸೇವೆಗೆ ತೆಗೆದುಕೊಳ್ಳುವ ಮೂಲಕ ಇದನ್ನು ೧೯೭೯ ರಲ್ಲಿ ಆರಂಭಿಸಲಾಯಿತು. NYIT ಯಲ್ಲಿ ಸಂಶೋಧಕರು ಅನೇಕ CG ತಂತ್ರಜ್ಞಾನಗಳ ಹರಿಕಾರರಾಗಿದ್ದರು ಹಾಗೂ ಅವುಗಳನ್ನು ಪರಿಗಣಿಸಲಾಗಿದೆ ಮತ್ತು ಪ್ರಾಯೋಗಿಕ ಚಿತ್ರ ದಿ ವರ್ಕ್ಸ್‌ನಲ್ಲಿ ಕೆಲಸ ಮಾಡಿದ್ದರು. ಲುಕ್ಯಾಸ್‌ಫಿಲ್ಮ್‌ಗೆ ವಲಸೆಹೋದ ನಂತರ, ತಂಡವು ರೆಂಡರ್ಮನ್‌ನ ಮುಂಚಿನದನ್ನು ರಚಿಸುವಲ್ಲಿ ಮಗ್ನವಾಯಿತು. ಇದಕ್ಕೆ ಮೊಷನ್‌ ಡಾಕ್ಟರ್‌ ಎನ್ನಲಾಯಿತು. ಸಾಂಪ್ರದಾಯಿಕ ಸೆಲ್‌ ಆನಿಮೇಟರ್‌ಗಳು ಅತಿ ಕಡಿಮೆ ತರಬೇತಿಯ ಅಗತ್ಯದೊಂದಿಗೆ ಕಂಪ್ಯೂಟರ್‌ ಅನಿಮೇಷನ್‌ ಬಳಸಲು ಇದು ಅವಕಾಶ ನೀಡಿತು.[]

ಲುಕ್ಯಾಸ್‌ಫಿಲ್ಮ್‌ ನಿರ್ಮಿಸಿದ ಚಲನಚಿತ್ರ ದೃಶ್ಯಾವಳಿಗಳನ್ನು ಚಿತ್ರೀಕರಿಸಲು ತಂಡವು ಮುಂದಾಯಿತು ಅಥವಾ ವಿಶೇಷ ಪ್ರಭಾವಗಳಿಗಾಗಿ (ಸ್ಪೆಷಲ್‌ ಎಫೆಕ್ಟ್ಸ್‌) ಇಂಡಸ್ಟ್ರಿಯಲ್‌ ಲೈಟ್‌ ಅಂಡ್‌ ಮ್ಯಾಜಿಕ್‌ ಒಂದಿಗೆ ಒಂದುಗೂಡಿ ಕೆಲಸ ಮಾಡಿತು.[] ಹಲವು ವರ್ಷಗಳ ಸಂಶೋಧನೆ ಹಾಗೂ ಚಲನಚಿತ್ರಗಳಲ್ಲಿ ಪ್ರಮುಖ ಮೈಲಿಗಲ್ಲುಗಳು ಎನ್ನಲಾದ Star Trek II: The Wrath of Khan ಜೆನೆಸಿಸ್‌ ಎಫೆಕ್ಟ್ ಹಾಗೂ ‌ಯಂಗ್‌ ಷರ್ಲಾಕ್‌ ಹೋಮ್ಸ್‌ [] ನಲ್ಲಿ ಸ್ಟೇಯ್ನ್ಡ್‌ ಗ್ಲ್ಯಾಸ್‌ ನೈಟ್‌ ಎಫೆಕ್ಟ್‌ಗಳನ್ನು ಸೃಷ್ಟಿಸಿದ ನಂತರ, ಅಂದು ಸುಮಾರು ೪೫ ಸದಸ್ಯರಿದ್ದ ಈ ತಂಡವನ್ನು, ೧೯೮೬ ರಲ್ಲಿ ಆಗಷ್ಟೇ ಆಪಲ್‌ ಕಂಪ್ಯೂಟರ್‌ ಉದ್ದಿಮೆಯನ್ನು ತ್ಯಜಿಸಿದ್ದ ಸ್ಟೀವ್‌ ಜಾಬ್ಸ್‌ ತಮ್ಮ ಸ್ವಾಮ್ಯಕ್ಕೆ ಖರೀದಿಸಿದರು.[] ಸ್ಟೀವ್‌ ಜಾಬ್ಸ್‌ $೫ ದಶಲಕ್ಷವನ್ನು ಜಾರ್ಜ್‌ ಲ್ಯೂಕಾಸ್‌ಗೆ ನೀಡಿ, ಈ ಹೊಸ ಉದ್ದಿಮೆಯಲ್ಲಿ ೫ ದಶಲಕ್ಷ ಹೂಡಿಕೆ ಮಾಡಿದರು. ‌[][][] ಲ್ಯೂಕಾಸ್‌ ತಮ್ಮ ಉದ್ದಿಮೆಯನ್ನು ಮಾರಲು ೧೯೮೩ ಇಸವಿಯಲ್ಲಿ ವಿಚ್ಛೇದನೆ ಹಿನ್ನೆಲೆಯಲ್ಲಿ ಹಣದ ಹರಿವಿನ ಸಮಸ್ಯೆಗಳ ಹೆಚ್ಚಳ, ಅದಕ್ಕೆ ಹೊಂದಿಕೊಂಡು ರಿಟರ್ನ್‌ ಆಫ್‌ ದಿ ಜೆಡಿ ಬಿಡುಗಡೆಯಾಗಿ ಸ್ಟಾರ್‌ ವಾರ್ಸ್ ‌ ಪರವಾನಗಿಗಳಿಂದ ಆದಾಯಗಳಲ್ಲಿ ಹಠಾತ್ ಕುಸಿತ, ಜೊತೆಗೆ ಹೊವಾರ್ಡ್‌ ದಿ ಡಕ್ ನ ಕಳಪೆ ಬಾಕ್ಸ್‌ಆಫೀಸ್ ಸಾಧನೆ ‍ಪ್ರಮುಖ ಕಾರಣಗಳಾಗಿದ್ದವು.[] ಡಾ. ಎಡ್ವಿನ್‌ ಕ್ಯಾಟ್ಮಲ್‌ (ಉದ್ದಿಮೆಯ ಅಧ್ಯಕ್ಷ) ಹಾಗೂ ಡಾ.ಆಲ್ವಿ ರೇ ಸ್ಮಿತ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನಿರ್ದೇಶಕ ಹೊಸದಾಗಿ ಸ್ವತಂತ್ರ ಉದ್ದಿಮೆಯ ನೇತೃತ್ವ ವಹಿಸಿದ್ದರು. ಸ್ಟೀವ್‌ ಜಾಬ್ಸ್‌ ಪಿಕ್ಸರ್‌ನ ಅಧ್ಯಕ್ಷ ಮತ್ತು ಪ್ರಮುಖ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.[]

ಆರಂಭದಲ್ಲಿ, ಪಿಕ್ಸರ್‌ ಎಂಬುದು ಅತ್ಯಾಧುನಿಕ ಕಂಪ್ಯೂಟರ್‌ ಯಂತ್ರಾಂಶ ಉದ್ದಿಮೆಯಾಗಿತ್ತು. ಮುಖ್ಯವಾಗಿ ಸರ್ಕಾರಿ ಇಲಾಖೆಗಳು ಹಾಗೂ ವೈದ್ಯಕೀಯ ಸಮುದಾಯಕ್ಕೆ ಮಾರಲಾದ ಪಿಕ್ಸರ್‌ ಇಮೇಜ್‌ ಕಂಪ್ಯೂಟರ್‌ ಎಂಬುದು ಇದರ ಪ್ರಮುಖ ಉತ್ಪಾದನೆಯಾಗಿತ್ತು. ಪಿಕ್ಸರ್‌ ಇಮೇಜ್‌ ಕಂಪ್ಯೂಟರ್‌ ಕೊಳ್ಳುವ ಉದ್ದಿಮೆಗಳಲ್ಲಿ ಡಿಸ್ನಿ ಸ್ಟುಡಿಯೊಸ್‌ ಸಹ ಒಂದಾಗಿತ್ತು. ಇದು ನಿಗೂಢವಾದ ತಮ್ಮ CAPSಯೋಜನೆ ಭಾಗವಾಗಿ ಇಂತಹ ಉಪಕರಣವನ್ನು ಬಳಸುತ್ತಿತ್ತು. ಕೈಯ ಮೂಲಕ ಶಾಯಿ ಮತ್ತು ಬಣ್ಣ ಹಚ್ಚಿ ೨-D ಅನಿಮೇಷನ್‌ ಪ್ರಕ್ರಿಯೆ ನಡೆಸುವ ಬದಲಿಗೆ, ಇನ್ನಷ್ಟು ಸ್ವಯಂಚಾಲಿತ ಹಾಗೂ ಪರಿಣಾಮಕಾರಿ ವಿಧಾನಕ್ಕಾಗಿ ಇಂತಹ ಯಂತ್ರವನ್ನು ಮತ್ತು ಕಸ್ಟಮ್ ಸಾಫ್ಟ್‌ವೇರ್ ಬಳಸಲಾಯಿತು. ಈ ಇಮೇಜ್ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗಲಿಲ್ಲ.[] ಇದುವರೆಗೂ ಲಕ್ಸೊ ಜೂನಿಯರ್‌ ಮುಂತಾದ ಲಘು ಅವಧಿಯ ಪ್ರದರ್ಶನಾತ್ಮಕ ಅನಿಮೇಷನ್‌ಗಳನ್ನು ರಚಿಸಿ, ಪಿಕ್ಸರ್‌ ಉದ್ಯೋಗಿ ಜಾನ್‌ ಲ್ಯಾಸಿಟರ್‌ಅವರು ಉಪಕರಣದ ಸಾಮರ್ಥ್ಯವನ್ನು ತೋರಿಸುತ್ತಿದ್ದರು. ಕುಸಿದಿದ್ದ ಈ ವ್ಯವಸ್ಥೆಯನ್ನು ಉತ್ತೇಜಿಸಲು, ಕಂಪ್ಯೂಟರ್‌ ಗ್ರ್ಯಾಫಿಕ್ಸ್‌ ಉದ್ದಿಮೆಯ ಅತಿದೊಡ್ಡ ಸಮಾವೇಶ SIGGRAPH ನಲ್ಲಿ ಆಡಂಬರದೊಂದಿಗೆ ಲ್ಯಾಸಿಟರ್‌ ಪ್ರಥಮ ಪ್ರದರ್ಶನ ನೀಡಿದರು.[]

ಪಿಕ್ಸರ್‌ನ ಕಂಪ್ಯೂಟರ್‌ಗಳ ಕಳಪೆ ಮಾರಾಟದಿಂದ ಉದ್ದಿಮೆ ಮುಚ್ಚಿಬಿಡುವ ಅಪಾಯ ಎದುರಾದಾಗ, ಹೊರಗಿನ ಉದ್ದಿಮೆಗಳಿಗಾಗಿ ಲ್ಯಾಸಿಟರ್‌ನ ಅನಿಮೇಷನ್‌ ವಿಭಾಗವು ಕಂಪ್ಯೂಟರ್‌-ಆನಿಮೇಟೆಡ್‌ ಜಾಹೀರಾತುಗಳ ನಿರ್ಮಾಣ ಆರಂಭಿಸಿತು. ಆರಂಭ ಹಂತದಲ್ಲಿನ ಯಶಸ್ಸುಗಳಲ್ಲಿ ಟ್ರಾಪಿಕೆನಾ, ಲಿಸ್ಟರೀನ್‌ ಹಾಗೂ ಲೈಫ್‌ಸೇವರ್ಸ್‌ ಅಭಿಯಾನಗಳಿದ್ದವು.[೧೦] ಈ ಕಾಲಾವಧಿಯಲ್ಲಿ, ಪಿಕ್ಸರ್‌ ವಾಲ್ಟ್‌ ಡಿಸ್ನಿ ಫೀಚರ್‌ ಅನಿಮೇಷನ್‌ಜತೆ ತಮ್ಮ ವ್ಯಾವಹಾರಿಕ ಸಂಬಂಧವನ್ನು ಮುಂದುವರೆಸಿತು.ಇದೊಂದು ಸ್ಟುಡಿಯೊ ಆಗಿದ್ದು, ಅದರ ಕಾರ್ರ್ಪೊರೇಟ್ ಮಾತೃಸಂಸ್ಥೆಯು ಅಂತಿಮವಾಗಿ ಪಿಕ್ಸರ್‌ನ ಅತಿ ಪ್ರಮುಖ ಪಾಲುದಾರ ಉದ್ದಿಮೆಯಾಯಿತು. ಉದ್ದಿಮೆಯ ಕಂಪ್ಯೂಟರ್‌ ವಿಭಾಗದಲ್ಲಿ ಬಹಳಷ್ಟು ಹುದ್ದೆಗಳ ಕಡಿತ ಸಂಭವಿಸಿದ ನಂತರ, ೧೯೯೧ ರಲ್ಲಿ ಪಿಕ್ಸರ್‌ ಡಿಸ್ನಿ ಸಂಸ್ಥೆಯೊಂದಿಗೆ ಮೂರು ಕಂಪ್ಯೂಟರ್‌-ಆನಿಮೇಟೆಡ್‌ ಚಲನಚಿತ್ರಗಳ ನಿರ್ಮಾಣಕ್ಕಾಗಿ $ ೨೬ ದಶಲಕ್ಷದ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡಿತು. ಇದರಲ್ಲಿ ಟಾಯ್‌ ಸ್ಟೋರಿ ಮೊದಲನೆಯದಾಗಿತ್ತು. ಆದರೂ ಸಹ, ಕಂಪೆನಿಯು ಉದ್ಯೋಗಗಳಿಗೆ ಸಾಕಷ್ಟು ಹಣ ವೆಚ್ಚ ಮಾಡಿದ್ದರಿಂದ ಅವರು ಉದ್ದಿಮೆಯನ್ನು ಮಾರಿಬಿಡುವ ಬಗ್ಗೆ ಆಲೋಚಿಸಿದರು. ಡಿಸ್ನಿ ಉದ್ದಿಮೆಯು ೧೯೯೫ ರಜೆಯ ಋತುವಿನಲ್ಲಿ ಟಾಯ್‌ ಸ್ಟೋರಿ ಚಲನಚಿತ್ರದ ವಿತರಣೆ ಮಾಡುತ್ತದೆಂಬುದನ್ನು ಖಚಿತಪಡಿಕೊಂಡ ನಂತರವೇ ಉದ್ದಿಮೆಗೆ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದರು.[೧೧] ಈ ಚಲನಚಿತ್ರವು ವಿಶ್ವದಾದ್ಯಂತ $350 ದಶಲಕ್ಷ ಗಳಿಸಿತು.[೧೨] ಅದೇ ವರ್ಷದ ಅಪರಾರ್ಧದಲ್ಲಿ, ೧೯೯೫ ರ ನವೆಂಬರ್‌ ೨೯ ರಂದು ಪಿಕ್ಸರ್‌ ತನ್ನ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆಯನ್ನು ಪ್ರಸ್ತಾಪಿಸಿತು. ಉದ್ದಿಮೆಯ ಸ್ಟಾಕ್‌ ಪ್ರತಿ ಷೇರಿಗೆ US$ ೨೨ ರಂತಿತ್ತು.[೧೩]

ಡಿಸ್ನಿ

ಬದಲಾಯಿಸಿ

ಟಾಯ್‌ ಸ್ಟೋರಿ ೨ ಚಲನಚಿತ್ರದ ನಿರ್ಮಾಣದ ನಂತರ ಪಿಕ್ಸರ್‌ ಮತ್ತು ಡಿಸ್ನಿ ಉದ್ದಿಮೆಗಳ ನಡುವೆ ಭಿನ್ನಾಭಿಪ್ರಾಯಗಳುಂಟಾದವು. ಮೊದಲಿಗೆ ನೇರ ವೀಡಿಯೊ ರೂಪದಲ್ಲಿ ಬಿಡುಗಡೆಗೆ ಇಚ್ಛಿಸಿ( ಪಿಕ್ಸರ್‌ನ ಮೂರು ಚಲನಚಿತ್ರಗಳನ್ನು ಒಳಗೊಳ್ಳುವ ಒಪ್ಪಂದದ ಭಾಗವಲ್ಲದಿದ್ದರೂ) ನಿರ್ಮಾಣ ಹಂತದಲ್ಲಿ ಈ ಚಲನಚಿತ್ರವನ್ನು ತರುವಾಯ ಚಿತ್ರಮಂದಿರ ಬಿಡುಗಡೆಗಾಗಿ ಸೂಕ್ತವಾಗಿ ಮೇಲ್ದರ್ಜೆಗೇರಿಸಲಾಯಿತು. ಈ ಚಲನಚಿತ್ರವನ್ನೂ ಸಹ ಮೂರು ಚಲನಚಿತ್ರದ ಒಪ್ಪಂದದಲ್ಲಿ ಸೇರಿಸಿಕೊಳ್ಳಬೇಕೆಂದು ಪಿಕ್ಸರ್‌ ಡಿಸ್ನಿ ಉದ್ದಿಮೆಯನ್ನು ಒತ್ತಾಯಿಸಿತು. ಆದರೆ ಡಿಸ್ನಿ ಉದ್ದಿಮೆ ಒಪ್ಪಲಿಲ್ಲ.[೧೪] ಪಿಕ್ಸರ್‌ನ ಮೊದಲ ಐದು ಚಲನಚಿತ್ರಗಳು ಒಟ್ಟು $ ೨.೫ ಶತಕೋಟಿ ಡಾಲರ್‌ ಹಣ ಗಳಿಸಿತು. ಇದು ಈ ಉದ್ದಿಮೆಯಲ್ಲಿ ಪ್ರತಿ ಚಲನಚಿತ್ರದ ಅತ್ಯಧಿಕ ಸರಾಸರಿ ಗಳಿಕೆಗೆ ಸಮನಾಗಿತ್ತು. ಉಭಯತ್ರರಿಗೆ ಲಾಭದಾಯಕವಾಗಿದ್ದರೂ, ಈ ವ್ಯವಸ್ಥೆಯು ಸಮಾನತೆಯಿಂದ ಕೂಡಿಲ್ಲ ಎಂದು ಪಿಕ್ಸರ್‌ ಆನಂತರ ದೂರಿತು. ಪಿಕ್ಸರ್‌ ಚಲನಚಿತ್ರದ ಸೃಷ್ಟಿ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿತು. ಡಿಸ್ನಿ ಮಾರುಕಟ್ಟೆ ಮತ್ತು ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿತು. ಲಾಭಗಳು ಮತ್ತು ನಿರ್ಮಾಣ ವೆಚ್ಚಗಳನ್ನು ೫೦ - ೫೦ ರಂತೆ ಇಬ್ಭಾಗಿಸಲಾಗಿತ್ತು; ಆದರೆ ಡಿಸ್ನಿ ಉದ್ದಿಮೆಯು ವಿಶೇಷವಾಗಿ ಎಲ್ಲಾ ಕಥೆ ಮತ್ತು ಉತ್ತರಭಾಗ ನಿರ್ಮಾಣ ಹಕ್ಕುಗಳ ಸ್ವಾಮ್ಯ ವಹಿಸಿತು. ಜೊತೆಗೆ ವಿತರಣಾ ಶುಲ್ಕವನ್ನು ಸಹ ವಸೂಲು ಮಾಡಿಕೊಂಡಿತು. ಕಥೆ ಹಾಗೂ ಚಲನಚಿತ್ರದ ಉತ್ತರ ಭಾಗದ ಹಕ್ಕುಗಳು ತನ್ನೊಡನೆ ಇಲ್ಲದಿರುವುದು ಪಿಕ್ಸರ್‌ನ ಅಸಮಾಧಾನದ ವಿಚಾರವಾಯಿತು. ಇದು ವಿವಾದಾತ್ಮಕ ಸಂಬಂಧಕ್ಕೆ ವೇದಿಕೆ ಕಲ್ಪಿಸಿತು.[೧೫]

೨೦೦೪ ಇಸವಿಯ ಆರಂಭದಲ್ಲಿ ಎರಡೂ ಉದ್ದಿಮೆಗಳು ಹೊಸ ಒಪ್ಪಂದ ಮುಟ್ಟಲು ಯತ್ನಿಸಿದವು. ಹೊಸ ಒಪ್ಪಂದವು ಕೇವಲ ವಿತರಣೆಗೆ ಮಾತ್ರ ಸೀಮಿತವಾಗಿತ್ತು. ಪಿಕ್ಸರ್‌ ನಿರ್ಮಾಣದ ಮೇಲೆ ನಿಯಂತ್ರಣ ಹೊಂದಿ, ಚಲನಚಿತ್ರದ ಸ್ವತ್ತುಗಳನ್ನು ಸ್ವತಃ ಉಳಿಸಿಕೊಳ್ಳಲು ಬಯಸಿತು. ಪಿಕ್ಸಾರ್ ತನ್ನ ಚಲನಚಿತ್ರಗಳಿಗೆ ಹಣವನ್ನು ಸ್ವತಃ ತೊಡಗಿಸಿಕೊಂಡು ಲಾಭಗಳಲ್ಲಿ ೧೦೦ % ರನ್ನೂ ಸಂಗ್ರಹಿಸುವ ಮೂಲಕ ಡಿಸ್ನಿಗೆ ಕೇವಲ ೧೦ ರಿಂದ ೧೫ % ರಷ್ಟು ವಿತರಣಾ ಶುಲ್ಕ ಪಾವತಿಸಲು ಬಯಸಿತು.[೧೬] ಇನ್ನೂ ಮುಖ್ಯವಾಗಿ, ಡಿಸ್ನಿಯೊಂದಿಗಿನ ಯಾವುದೇ ವಿತರಣಾ ಒಪ್ಪಂದದ ಪ್ರಕಾರ, ತಮ್ಮ ಹಿಂದಿನ ಒಪ್ಪಂದದಡಿ ದಿ ಇಂಕ್ರಿಡಿಬಲ್ಸ್‌ ಮತ್ತು ಕಾರ್ಸ್ ‌ ಸೇರಿದಂತೆ‌, ಆಗಲೇ ನಿರ್ಮಾಣದಲ್ಲಿರುವ ಚಲನಚಿತ್ರಗಳ ನಿಯಂತ್ರಣ ಹಕ್ಕುಗಳಿಗಾಗಿ ಪಿಕ್ಸಾರ್ ಒತ್ತಾಯಿಸಿತು. ಡಿಸ್ನಿ ಈ ಷರತ್ತುಗಳನ್ನು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಿತು.ಆದರೆ ಪಿಕ್ಸಾರ್ ಒಪ್ಪಿಕೊಳ್ಳಲು ತಯಾರಿರಲಿಲ್ಲ.[೧೬]

ಪಿಕ್ಸರ್‌ ಮುಖ್ಯಸ್ಥ ಸ್ಟೀವ್‌ ಜಾಬ್ಸ್‌ ಮತ್ತು ಅಂದಿನ ಡಿಸ್ನಿ ಮುಖ್ಯಸ್ಥ ಹಾಗೂ ಸಿಇಒ ಮೈಕಲ್‌ ಈಸ್ನರ್‌ ನಡುವಿನ ಭಿನ್ನಾಭಿಪ್ರಾಯಗಳು ಮಾತುಕತೆಗಳನ್ನು ಅಂದುಕೊಂಡಿದ್ದಕ್ಕಿಂತಲೂ ಇನ್ನಷ್ಟು ಜಟಿಲಗೊಳಿಸಿತು. ೨೦೦೪ ಇಸವಿಯ ಮಧ್ಯಾವಧಿಯಲ್ಲಿ ಮಾತುಕತೆಗಳು ಸಂಪೂರ್ಣವಾಗಿ ಮುರಿದುಬಿದ್ದವು.ಪಿಕ್ಸರ್‌ ಡಿಸ್ನಿ ಸಂಸ್ಥೆ ಹೊರತುಪಡಿಸಿ ಇತರೆ ಸಂಸ್ಥೆಗಳೊಡನೆ ಪಾಲುದಾರಿಕೆ ಮಾಡಲು ಸಕ್ರಿಯವಾಗಿ ಹುಡುಕುತ್ತಿರುವುದಾಗಿ ಸ್ಟೀವ್‌ ಜಾಬ್ಸ್‌ ಘೋಷಿಸಿದರು.[೧೭] ಪಿಕ್ಸರ್‌ ಇತರೆ ವಿತರಕರೊಂದಿಗೆ ಯಾವುದೇ ಮಾತುಕತೆಗಳಿಗೆ ಪ್ರವೇಶಿಸಲಿಲ್ಲ. ಸುದೀರ್ಘ ವಿರಾಮದ ಬಳಿಕ, ಸೆಪ್ಟೆಂಬರ್‌ ೨೦೦೫ ರಲ್ಲಿ ಮೈಕಲ್‌ ಈಸ್ನರ್‌ ಡಿಸ್ನಿ ಸಂಸ್ಥೆಗೆ ರಾಜೀನಾಮೆ ನೀಡಿದ ನಂತರ, ಡಿಸ್ನಿ ಹಾಗೂ ಪಿಕ್ಸರ್‌ ಮಾತುಕತೆಗಳನ್ನು ಪುನಃ ಆರಂಭಿಸಿದವು. ಪಿಕ್ಸರ್‌ ಮತ್ತು ಡಿಸ್ನಿ ನಡುವಿನ ಸಂಭವನೀಯ ಅಂತ್ಯಕ್ಕೆ ಸಿದ್ಧತೆಯಾಗಿ, ಡಿಸ್ನಿ ಸಂಸ್ಥೆ ಆದೇಶದಂತೆ ನವೆಂಬರ್‌ ಕಾಲಮಿತಿಯೊಳಗೆ ಚಲನಚಿತ್ರಗಳನ್ನು ಬಿಡುಗಡೆಗೊಳಿಸದೇ, ಹೆಚ್ಚು ಲಾಭದಾಯಕ ಪೂರ್ವ ಬೇಸಿಗೆಯ ಮಾಸಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಜಾಬ್ಸ್ ೨೦೦೪ ರ ಕೊನೆಯಲ್ಲಿ ಪ್ರಕಟಿಸಿದರು. ಇದು ಕ್ರಿಸ್ಮಸ್‌ ಶಾಪಿಂಗ್ ಋತುವಿನಲ್ಲಿ ತಮ್ಮ ಪ್ರಮುಖ ಚಲನಚಿತ್ರಗಳ DVD ಪ್ರತಿಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡುತ್ತದೆ ಎಂಬುದು ಪಿಕ್ಸರ್‌ ಲೆಕ್ಕಾಚಾರವಾಗಿತ್ತು. ಪಿಕ್ಸರ್‌-ಡಿಸ್ನಿ ಒಪ್ಪಂದದಲ್ಲಿ ಉಳಿದ ಕಾಲಮಿತಿಯನ್ನು ವಿಸ್ತರಿಸುವ ಮೂಲಕ ಎರಡು ಕಂಪೆನಿಗಳ ನಡುವೆ ಮಾತುಕತೆಗಳ ಹಾದಿ ಯಾವ ಕಡೆ ಸಾಗುತ್ತದೆ ಎಂದು ಕಾದು ನೋಡುವುದು, ಕಾರ್ಸ್‌ ಚಲನಚಿತ್ರದ ಬಿಡುಗಡೆಯನ್ನು ವಿಳಂಬಗೊಳಿಸುವುದರಿಂದ ಅಗುವ ಇನ್ನೊಂದು ಅನುಕೂಲವಾಗಿತ್ತು.[೧೮]

ಡಿಸ್ನಿ ಪಿಕ್ಸರ್‌ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವುದು ಉಳಿದಿರುವಾಗ, ೨೦೦೭ ಲ್ಲಿ ಬಿಡುಗಡೆಯಾಗಬೇಕಿದ್ದ ರಟಾಟೂಲ್ ‌ ಚಲನಚಿತ್ರದ ವಿತರಣಾ ವ್ಯವಸ್ಥೆ ಕುರಿತು ಎರಡೂ ಉದ್ದಿಮೆಗಳು ಒಪ್ಪಂದ ಮಾಡಿಕೊಂಡವು. ಒಂದು ವೇಳೆ ಸ್ವಾಧೀನ ಪ್ರಕ್ರಿಯೆ ವಿಫಲವಾದರೂ ಕೂಡ, ಡಿಸ್ನಿ ವಿತರಣಾ ಮಾರ್ಗಗಳ ಮೂಲಕ ಈ ಚಲನಚಿತ್ರವನ್ನು ಬಿಡುಗಡೆ ಮಾಡಲು ಖಾತರಿಮಾಡಲಾಯಿತು. ರಟಾಟೂಲ್ ‌ ಚಲನಚಿತ್ರವು ಪಿಕ್ಸರ್‌ ಸ್ವತ್ತಾಗಿದ್ದು, ಡಿಸ್ನಿಗೆ ಕೇವಲ ವಿತರಣಾ ಶುಲ್ಕ ಸಲ್ಲಬೇಕು ಎಂಬ ಮುಂಚಿನ ಡಿಸ್ನಿ-ಪಿಕ್ಸರ್‌ ಒಪ್ಪಂದಕ್ಕೆ ಇದು ತದ್ವಿರುದ್ಧವಾಗಿತ್ತು.) ಡಿಸ್ನಿ ಪಿಕ್ಸರ್‌ ಸ್ವಾಧೀನವನ್ನು ಪೂರ್ಣಗೊಳಿಸಿದ್ದರಿಂದ, ಈ ವಿತರಣಾ ವ್ಯವಸ್ಥೆಯನ್ನು ಶೂನ್ಯಗೊಳಿಸಿತು.[೧೯]

ಡಿಸ್ನಿ ಸಂಸ್ಥೆಯಿಂದ ಪಿಕ್ಸರ್‌ ಸ್ವಾಧೀನ

ಬದಲಾಯಿಸಿ

ತಾನು ಎಲ್ಲಾ ಸ್ಟಾಕ್‌ ಒಪ್ಪಂದದ ಪ್ರಕಾರ ಪಿಕ್ಸರ್‌ ಉದ್ದಿಮೆಯನ್ನು $ ೭.೪ ಶತಕೋಟಿ ಡಾಲರ್‌ ಮೊತ್ತಕ್ಕೆ ಖರೀದಿಸಲು ಒಪ್ಪಿರುವುದಾಗಿ ಡಿಸ್ನಿ ದಿನಾಂಕ ೨೪ ಜನವರಿ ೨೦೦೬ ರಂದು ಘೋಷಿಸಿತು.[೨೦] ಪಿಕ್ಸರ್‌ ಷೇರುದಾರರ ಅನುಮೋದನೆ ಪಡೆದ ನಂತರ, ೫ ಮೇ ೨೦೦೬ ರಂದು ಡಿಸ್ನಿ ಪಿಕ್ಸರ್‌ ಉದ್ದಿಮೆಯನ್ನು ವಿಧ್ಯುಕ್ತವಾಗಿ ಸ್ವಾಧೀನಪಡಿಸಿಕೊಂಡಿತು. ಈ ವ್ಯವಹಾರದಿಂದಾಗಿ, ಇದುವರೆಗೂ ಪಿಕ್ಸರ್‌ನಲ್ಲಿ ಅತ್ಯಧಿಕ ಷೇರು (೫೦.೧%) ಹೊಂದಿದ್ದ ಸ್ಟೀವ್‌ ಜಾಬ್ಸ್‌ರನ್ನು ಡಿಸ್ನಿ ಉದ್ದಿಮೆಯಲ್ಲಿ ೭% ಷೇರಿನೊಂದಿಗೆ ಅತೀ ದೊಡ್ಡ ವೈಯಕ್ತಿಕ ಷೇರುದಾರರನ್ನಾಗಿಸಿತು ಮತ್ತು ನಿರ್ದೇಶಕರ ಮಂಡಳಿಯಲ್ಲಿ ಹೊಸ ಸ್ಥಾನವನ್ನು ಕಲ್ಪಿಸಿತು.[೨೧] ಸ್ಟೀವ್‌ ಜಾಬ್ಸ್‌ ಹೊಂದಿದ ಡಿಸ್ನಿ ಸಂಸ್ಥೆಯ ಷೇರುಗಳು ಮಾಜಿ ಸಿಇಒ ಮೈಕಲ್‌ ಈಸ್ನರ್ಇನ್ನೂ ಹೊಂದಿದ ೧.೭% ಷೇರುಗಳಿಗಿಂತಲೂ ಅಧಿಕವಾಗಿತ್ತು. ಡಿಸ್ನಿ ಉದ್ದಿಮೆಯ ನಿವೃತ್ತ ನಿರ್ದೇಶಕ ರಾಯ್‌ ಇ. ಡಿಸ್ನಿ ಡಿಸ್ನಿ ಸಂಸ್ಥೆಯ 1%ರಷ್ಟು ಷೇರುಧಾರಕರಾಗಿದ್ದರು.

ಈ ಒಪ್ಪಂದದ ಅಂಗವಾಗಿ, ಪಿಕ್ಸರ್‌ ಸಹ-ಸಂಸ್ಥಾಪಕ ಹಾಗೂ ಅಂದಿನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್‌ ಲ್ಯಾಸಿಟರ್‌, ಪಿಕ್ಸರ್‌ ಹಾಗೂ ವಾಲ್ಟ್‌ ಡಿಸ್ನಿ ಅನಿಮೇಷನ್‌ ಸ್ಟುಡಿಯೊಸ್‌ಮುಖ್ಯ ರಚನಾತ್ಮಕ ಅಧಿಕಾರಿ (ಸಿಸಿಒ)ಯಾದರು. (ಅಧ್ಯಕ್ಷ ಹಾಗೂ ಸಿಇಒ ರಾಬರ್ಟ್‌ ಐಗರ್ಗೆ ವರದಿ ಒಪ್ಪಿಸಿ,ಡಿಸ್ನಿ ಸಂಸ್ಥೆ ನಿರ್ದೇಶಕ ರಾಯ್‌ ಡಿಸ್ನಿಯವರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು). ಇದಲ್ಲದೆ, ಉದ್ದಿಮೆಯ ಥೀಮ್‌ ಪಾರ್ಕ್‌ಗಳನ್ನು ವಿನ್ಯಾಸ ಮಾಡಿ,ನಿರ್ಮಿಸುವ ವಾಲ್ಟ್‌ ಡಿಸ್ನಿ ಇಮ್ಯಾಜಿನಿಯರಿಂಗ್‌ನ ಮುಖ್ಯ ರಚನಾತ್ಮಕ ಸಲಹಾಗಾರರಾಗಿದ್ದರು.[೨೧] ಕ್ಯಾಟ್ಮಲ್‌ ಪಿಕ್ಸರ್‌ನ ಅಧ್ಯಕ್ಷರಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು ಹಾಗೂ ವಾಲ್ಟ್‌ ಡಿಸ್ನಿ ಅನಿಮೇಷನ್‌ ಸ್ಟುಡಿಯೊದ ಅಧ್ಯಕ್ಷರೂ ಆದರು. ಬಾಬ್‌ ಐಗರ್ ಹಾಗೂ ವಾಲ್ಟ್‌ ಡಿಸ್ನಿ ಸ್ಟುಡಿಯೊ ಎಂಟರ್ಟೇನ್ಮೆಂಟ್‌ನ ಅಧ್ಯಕ್ಷ ಡಿಕ್‌ ಕುಕ್‌ಗೆ‌ ಇವರು ವರದಿ ಒಪ್ಪಿಸುತ್ತಿದ್ದರು. ಪಿಕ್ಸರ್‌ನಲ್ಲಿದ್ದ ಸ್ಟೀವ್‌ ಜಾಬ್ಸ್‌ರ ಅಧ್ಯಕ್ಷ ಹುದ್ದೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳನ್ನು ರದ್ದುಗೊಳಿಸಲಾಯಿತು. ಬದಲಿಗೆ ಅವರು ಡಿಸ್ನಿ ಉದ್ದಿಮೆಯ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಪಡೆದರು.[೨೨]

ಡಿಸ್ನಿ ಮತ್ತು ಪಿಕ್ಸರ್‌ ಸ್ಟುಡಿಯೊಗಳಿಗೆ ಲ್ಯಾಸಿಟರ್‌ ಹಾಗೂ ಕ್ಯಾಟ್ಮಲ್‌ ಮೇಲ್ವಿಚಾರಣೆಯಿಂದ, ಈ ಸ್ಟುಡಿಯೊಗಳು ಪರಸ್ಪರ ವಿಲೀನವಾಗುತ್ತಿದೆ ಎಂಬ ಅರ್ಥವನ್ನು ನೀಡುವುದಿಲ್ಲ. ಪಿಕ್ಸರ್‌ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳುವುದನ್ನು ಖಾತರಿ ಮಾಡಲು ಒಪ್ಪಂದದ ಭಾಗವಾಗಿ ಹೆಚ್ಚುವರಿ ಷರತ್ತುಗಳನ್ನು ಸೇರಿಸಲಾಗಿತ್ತು. ಡಿಸ್ನಿ ಒಪ್ಪಂದದ ಬಗ್ಗೆ ವಿಶ್ಲೇಷಕರು ಈ ಕುರಿತು ಚಿಂತೆ ವ್ಯಕ್ತಪಡಿಸಿದ್ದರು.[೨೩] ಉದ್ಯೋಗ ಗುತ್ತಿಗೆಗಳ ಕೊರತೆ ಸೇರಿದಂತೆ, ಪಿಕ್ಸರ್‌ ಉದ್ದಿಮೆಯ ಮಾನವ ಸಂಪನ್ಮೂಲ (HR) ನೀತಿಗಳು ಸ್ಥಿರವಾಗಿ ಉಳಿಯಬೇಕೆಂಬುದು ಇವುಗಳಲ್ಲಿ ಕೆಲವು ಷರತ್ತುಗಳಾಗಿತ್ತು. ಜೊತೆಗೆ, ಪಿಕ್ಸರ್‌ ಹೆಸರು ಮುಂದುವರೆಯುವುದು ಖಾತರಿಯಾಗಿತ್ತು; ಅಲ್ಲದೆ ಸ್ಟುಡಿಯೊ ತನ್ನ ಸದ್ಯದ ಸ್ಥಳವಾದ ಕ್ಯಾಲಿಫೊರ್ನಿಯಾದ ಎಮೆರಿವಿಲ್ಲೆನಲ್ಲೇ ಇದ್ದುಕೊಂಡು, ಪಿಕ್ಸರ್‌ ಲಾಂಛನವನ್ನು ಉಳಿಸಿಕೊಳ್ಳುತ್ತದೆ. ಅಂತಿಮವಾಗಿ, ವಿಲೀನದ ನಂತರ ನಿರ್ಮಿಸಲಾದ ಚಲನಚಿತ್ರಗಳು 'ಡಿಸ್ನಿ•ಪಿಕ್ಸರ್‌' ಲಾಂಛನದಡಿ ನಿರ್ಮಾಣವಾಗುತ್ತವೆ (ಈ ಜೋಡಿ ಲಾಂಛನದಡಿ ಕಾರ್ಸ್ ‌ ಮೊದಲ ಚಲನಚಿತ್ರ).[೨೪]

WALL-E ಚಲನಚಿತ್ರದ ನಿರ್ಮಾಪಕ ಜಿಮ್‌ ಮಾರಿಸ್‌ ಪಿಕ್ಸರ್‌ರ ಪ್ರಧಾನ ವ್ಯವಸ್ಥಾಪಕರಾಗಿ ನೇಮಕಗೊಂಡರು. ತಮ್ಮ ಹೊಸ ಹುದ್ದೆಯಲ್ಲಿ,ಮೋರಿಸ್ ಸ್ಟುಡಿಯೊದ ಎಲ್ಲಾ ವ್ಯವಸ್ಥೆಗಳ ದೈನಿಕ ವ್ಯವಹಾರಗಳನ್ನು ನೋಡಿಕೊಳ್ಳುವರು.[೨೫]

ವಿಸ್ತರಣೆ

ಬದಲಾಯಿಸಿ

ಪಿಕ್ಸರ್‌ ಅನಿಮೇಷನ್‌ ಸ್ಟುಡಿಯೊಸ್‌ ಕೆನಡಾ ದೇಶದ ಬ್ರಿಟಿಷ್‌ ಕೊಲಂಬಿಯಾ ರಾಜ್ಯದ ವ್ಯಾಂಕೊವರ್‌ನಲ್ಲಿ ಸಣ್ಣ ಸ್ಟುಡಿಯೊ ಆರಂಭಿಸಿದೆ. ೨೦೦೨ ಇಸವಿಯಲ್ಲಿ ನಿಧನರಾದ ಕೆನಡಾ ಮೂಲದ ಪಿಕ್ಸರ್‌ ಆನಿಮೇಟರ್‌ ಗ್ಲೆನ್‌ ಮೆಕ್ವೀನ್‌ ಸ್ಮರಣಾರ್ಥವಾಗಿ ಈ ಸ್ಟುಡಿಯೊಗೆ 'ಗ್ಲೆನ್‌ ಮೆಕ್ವೀನ್‌ ಅನಿಮೇಷನ್‌ ಸೆಂಟರ್‌' ಎಂದು ನಾಮಕರಣ ಮಾಡಲಾಗಿದೆ. ಫೈಂಡಿಂಗ್‌ ನೆಮೊ ಚಲನಚಿತ್ರವನ್ನು ಇವರಿಗೆ ಸಮರ್ಪಿಸಲಾಗಿತ್ತು). ಇದು ವ್ಯಾಂಕೊವರ್‌ ನಗರದ ವಾಣಿಜ್ಯ ಪ್ರದೇಶದಲ್ಲಿದ್ದು, ಸುಮಾರು ೨,೦೦೦ ಚದರ ಮೀಟರುಗಳಷ್ಟಿದೆ. ಪಿಕ್ಸರ್‌ ಕೆನಡಾ ೨೦ ಏಪ್ರಿಲ್‌ ೨೦೧೦ ರಂದು ತೆರೆಯಿತು.[೨೬]

ಚಲನಚಿತ್ರಗಳು ಮತ್ತು ಕಿರು-ಚಲನಚಿತ್ರಗಳು

ಬದಲಾಯಿಸಿ

ಸಂಪ್ರದಾಯಗಳು

ಬದಲಾಯಿಸಿ

ಜಾನ್‌ ಲ್ಯಾಸಿಟರ್‌ ಸೇರಿದಂತೆ, ಪಿಕ್ಸರ್‌ನ ಮೊದಲ ಆನಿಮೇಟರ್‌ಗಳು ಮುಂಚೆ ಸೆಲ್‌ ಆನಿಮೇಟರ್‌ಗಳಾಗಿದ್ದರು. ಅವರು ಸ್ಟಾಪ್‌ ಮೋಷನ್‌ ಅನಿಮೇಷನ್‌ ಅಥವಾ ಕಂಪ್ಯೂಟರ್‌ ಆನಿಮೇಷನ್‌ ಕ್ಷೇತ್ರದಿಂದ ಕೂಡ ಬಂದವರಾಗಿದ್ದರು. ಮತ್ತಿನ್ನೂ ಕೆಲವರು ಆಗಷ್ಟೇ ಕಾಲೇಜ್‌ನಿಂದ ಪದವಿ ಪಡೆದು ಬಂದಿದ್ದರು.[] ಪಿಕ್ಸರ್‌ ಎ ಬಗ್ಸ್‌ ಲೈಫ್‌ ಹಾಗೂ ಟಾಯ್ ಸ್ಟೋರಿ ೨ ಬಿಡುಗಡೆಗೊಳಿಸುವ ಸಮಯದಲ್ಲಿ, ಪಿಕ್ಸರ್‌ನ ಅನಿಮೇಷನ್‌ ವಿಭಾಗದಲ್ಲಿರುವ ಹಲವು ಆನಿಮೇಟರ್‌ಗಳು ನೇಮಕಗೊಂಡಿದ್ದರು. ಟಾಯ್‌ ಸ್ಟೋರಿ ಯಶಸ್ವಿ ಚಲನಚಿತ್ರವಾಗಿದ್ದರೂ, ಆ ಸಮಯದಲ್ಲಿ ಇದು ಪಿಕ್ಸರ್‌ನ ಆ ಕಾಲದ ಏಕೈಕ ಸಂಪೂರ್ಣ ಚಲನಚಿತ್ರವಾಗಿತ್ತು. ಅನಿಮೇಷನ್‌ ಉದ್ದಿಮೆಯ ಬಹಳಷ್ಟು ಪಾಲು ಇಂದಿಗೂ ಸಹ ಕ್ಯಾಲಿಫೊರ್ನಿಯಾದ ಲಾಸ್‌ ಏಂಜಲಿಸ್‌‌ನಲ್ಲಿದೆ. ಪಿಕ್ಸರ್‌ ಸ್ಯಾನ್‌ ಫ್ರಾನ್ಸಿಸ್ಕೊ ಬೇ ಏರಿಯಾದಲ್ಲಿ 350 miles (560 km) ಉತ್ತರದಲ್ಲಿದೆ. ಜೊತೆಗೆ, ಆನಿಮೇಟೆಡ್‌ ಪೂರ್ಣಪ್ರಮಾಣದ ಚಲನಚಿತ್ರಗಳಿಗಾಗಿ, ಸಾಂಪ್ರದಾಯಿಕ 2-Dಅನಿಮೇಷನ್‌ ಆಗ ಇನ್ನೂ ಪ್ರಬಲ ಮಾಧ್ಯಮವಾಗಿತ್ತು. ಲಾಸ್‌ ಏಂಜಲೀಸ್‌ ಮೂಲದ ಹಲವು ಆನಿಮೇಟರ್‌ಗಳು ತಮ್ಮ ಕುಟುಂಬಗಳೊಡನೆ ಇನ್ನಷ್ಟು ಉತ್ತರಕ್ಕೆ ಹೋಗಿ, ಸಾಂಪ್ರದಾಯಿಕ ಅನಿಮೇಷನ್‌ ಕೈಬಿಟ್ಟು ಕಂಪ್ಯೂಟರ್‌ ಅನಿಮೇಷನ್‌ ಯತ್ನಿಸಲು ಸಿದ್ಧರಿರಲಿಲ್ಲ. ಭಾಗಶಃ ಈ ಕಾರಣಕ್ಕಾಗಿಯೇ, ಪಿಕ್ಸರ್‌ ನೇಮಿಸಿದ ಆನಿಮೇಟರ್‌ಗಳು ಕಾಲೇಜ್‌ನಿಂದ ನೇರವಾಗಿ ಬಂದವರು ಅಥವಾ ಚಲನಚಿತ್ರ ಅನಿಮೇಷನ್‌ ಕ್ಷೇತ್ರದ ಹೊರಗೆ ಕಾರ್ಯ ನಿರ್ವಹಿಸಿದ್ದರು. ಮೆರಿಯೊನೆಟ್‌ ಎಂಬ ಪಿಕ್ಸರ್‌ ಅನಿಮೇಷನ್‌ ತಂತ್ರಾಂಶವನ್ನು ಸಾಂಪ್ರದಾಯಿಕ ಅನಿಮೇಷನ್‌ ಪರಿಣತರಿಗೆ ವಿನ್ಯಾಸಗೊಳಿಸಲಾಗಿತ್ತು. ಇವರು ಕನಿಷ್ಠಮಟ್ಟದ ತರಬೇತಿ ಪಡೆದು ಆ ಅನ್ವಯಿಕೆಯನ್ನು ಬಳಸಬಹುದಾಗಿದೆ.[]

'ಪಿಕ್ಸರ್‌ ಸಂಸ್ಥೆಯಂತೆಯೇ, ಪಿಕ್ಸಾರ್ ಚಲನಚಿತ್ರಗಳು ಕೂಡ ಸ್ವಯಂ ಸುಧಾರಣೆಯ ಸಮಾನ ಕಥಾವಸ್ತುವನ್ನು ಅನುಸರಿಸುತ್ತದೆ. ಪಾತ್ರವೊಂದು ತನ್ನ ಕುಟುಂಬ ಅಥವಾ ಮಿತ್ರರ ಸಹಾಯದಿಂದ, ನೈಜ ಪ್ರಪಂಚದಲ್ಲಿ ಸಾಗಿ, ತನ್ನ ಕುಟುಂಬ ಸದಸ್ಯರು ಹಾಗೂ ಮಿತ್ರರನ್ನು ಗೌರವ ಭಾವನೆಯಿಂದ ಕಾಣಲು ಕಲಿಯುತ್ತದೆ' ಎಂದು ಜಾನ್‌ ಲ್ಯಾಸಿಟರ್, ಪಿಬಿಎಸ್‌ (PBS)ಮಾತುಕತೆ ಕಾರ್ಯಕ್ರಮ ನಿರೂಪಕ ಟೇವಿಸ್‌ ಸ್ಮೈಲಿ[೨೭] ಯೊಂದಿಗಿನ ಸಂದರ್ಶನದಲ್ಲಿ ‌ತಿಳಿಸಿದರು. ಲ್ಯಾಸಿಟರ್‌ ಹೇಳಿದಂತೆ, 'ಪ್ರಮುಖ ಪಾತ್ರದ ಬೆಳವಣಿಗೆ ಮತ್ತು ಹೇಗೆ ಬದಲಾವಣೆ ಹೊಂದುತ್ತದೆ ಎಂಬುದು ಇದರ ತಿರುಳಾಗಿದೆ.' [೨೭]

ಮಹಿಳಾ ಮುಖ್ಯ ಪಾತ್ರಗಳ ಕೊರತೆಗೆ ಪಿಕ್ಸರ್‌ನ್ನು ಟೀಕಿಸಲಾಗಿದೆ. ಬ್ರೇವ್ ‌ ಎಂಬುದು ಪಿಕ್ಸರ್‌ ಉದ್ದಿಮೆ ಬಿಡುಗಡೆಗಗೊಳಿಸಲಿರುವ ಹದಿಮೂರನೆಯ ಚಲನಚಿತ್ರವಾಗಲಿದೆ. ಇದರಲ್ಲಿ ಮಹಿಳೆಯೊಬ್ಬಳ ಪ್ರಮುಖ ಪಾತ್ರವಿರುವ ಸ್ಟುಡಿಯೊನ ಪ್ರಥಮ ಚಿತ್ರವಾಗಿದೆ.( ರೀಸ್‌ ವಿದರ್ಸ್ಪೂನ್‌ ಧ್ವನಿದಾನ ಮಾಡಿದ್ದಾರೆ) ಪಿಕ್ಸರ್‌ನ ಇತರೆ ಚಲನಚಿತ್ರಗಳಲ್ಲಿನ ವಿವಿಧ ಪಾತ್ರಗಳಿದ್ದರೂ ಸಹ, ಈ ಮಹಿಳಾ ಪಾತ್ರವನ್ನು ಡಿಸ್ನಿ ಪ್ರಿನ್ಸೆಸ್‌ ಎನ್ನಲಾಗಿದೆ.[೨೮]

ಆನಂತರದ ಭಾಗಗಳು

ಬದಲಾಯಿಸಿ

ಟಾಯ್‌ ಸ್ಟೋರಿ ೨ ಚಲನಚಿತ್ರವನ್ನು ಡಿಸ್ನಿ ಉದ್ದಿಮೆಯು ನೇರವಾಗಿ ವೀಡಿಯೊ ರೂಪದ 60-ನಿಮಿಷಗಳ ಚಲನಚಿತ್ರವಾಗಿ ನಿರ್ಮಿಸಿತ್ತು. ಟಾಯ್‌ ಸ್ಟೋರಿ ಚಲನಚಿತ್ರದ ಆನಂತರದ ಭಾಗ ನಿರ್ಮಾಣ ಹಂತದಲ್ಲೇ ಡಿಸ್ನಿ ಉದ್ದಿಮೆಯ ಕಾರ್ಯನಿರ್ವಾಹಕರು ಮೂಡಿಬಂದ ಚಿತ್ರಣಗಳನ್ನು ಅದೆಷ್ಟು ಮೆಚ್ಚಿದರೆಂದರೆ, ಇದನ್ನು ಚಿತ್ರಮಂದಿರಗಳಲ್ಲಿನ ಬಿಡುಗಡೆಗೆ ಮಾರ್ಪಾಡು ಮಾಡಬೇಕು ಎಂದು ನಿರ್ಣಯಿಸಿದರು. ಟಾಯ್‌ ಸ್ಟೋರಿ ೨ ಸ್ಥಿತಿಯಲ್ಲಿನ ಬದಲಾವಣೆಯು ಎರಡು ಕಂಪೆನಿಗಳಭಿನ್ನಾಭಿಪ್ರಾಯಕ್ಕೆ ಕಾರಣವಾಗಿ, ಎರಡೂ ಉದ್ದಿಮೆಗಳು ಬೇರೆಯಾಗುವ ಸ್ಥಿತಿ ತಲುಪಿತ್ತು. ಟಾಯ್‌ ಸ್ಟೋರಿ ೩ ಎಂಬುದು ನಂತರ ಭಾಗಗಳಲ್ಲಿ ಎರಡನೆಯದು ಎನ್ನಲಾಗಿತ್ತು. ಇದನ್ನು ೨೮ ಜೂನ್‌ ೨೦೧೦ ರಂದು ಬಿಡುಗಡೆಗೊಳಿಸಲಾಯಿತು. ಆನಂತರದ ಭಾಗಗಳಲ್ಲಿ ಮೂರನೆಯದಾದ ಕಾರ್ಸ್‌ ೨ ೨೦೧೧ ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿವೆ.

ಪಿಕ್ಸರ್‌ ಚಲನಚಿತ್ರದ ನಂತರದ ಭಾಗಗಳ ವಿರುದ್ಧವಾಗಿರಲಿಲ್ಲ. ಆದರೆ ಮೂಲ ಕಥೆಯಂತೆಯೇ ಈ ಉತ್ತರಬಾಗದ ಕಥೆಯೂ ಸಹ ಚೆನ್ನಾಗಿದ್ದರೆ ಅವನ್ನು ತಯಾರಿಸಬೇಕು ಎಂದು ನಂಬಿದ್ದರು. ಟಾಯ್ ಸ್ಟೋರಿ ೨ ಬಿಡುಗಡೆಯಾದ ನಂತರ, ಪಿಕ್ಸರ್‌ ಮತ್ತು ಡಿಸ್ನಿ ಉದ್ದಿಮೆಗಳು ಇನ್ನೊಂದು ಔಪಚಾರಿಕ ಒಪ್ಪಂದ ಮಾಡಿಕೊಂಡವು. ಇದರಂತೆ ಪಿಕ್ಸರ್‌ನ್ನು ಒಳಗೊಳ್ಳದೆ ಡಿಸ್ನಿ ಸಂಸ್ಥೆಗೆ ಹಕ್ಕಿದ್ದರೂ, ಯಾವುದೇ ಉತ್ತರ-ಭಾಗದ ಚಲನಚಿತ್ರ ನಿರ್ಮಿಸುವಂತಿಲ್ಲ. ೨೦೦೪ ರಲ್ಲಿ,ಹೊಸ ಒಪ್ಪಂದಕ್ಕೆ ಮಾಡಿಕೊಂಡ ವಿಫಲ ಪ್ರಯತ್ನದ ಬಗ್ಗೆ ಪಿಕ್ಸಾರ್ ಪ್ರಕಟಿಸಿದ ನಂತರ, ಪಿಕ್ಸಾರ್ ಚಲನಚಿತ್ರಗಳ ಉತ್ತರಭಾಗಗಳನ್ನು ಪಿಕ್ಸಾರ್ ಜತೆಗೆ ಅಥವಾ ಇಲ್ಲದೇ ಮುಂದುವರಿಯುವುದಾಗಿ ಡಿಸ್ನಿ ಪ್ರಕಟಿಸಿತು. ಆದರೂ ಪಿಕ್ಸಾರ್ ತಮ್ಮ ಜತೆ ಕೆಲಸ ಮಾಡುವುದಕ್ಕೆ ಒಪ್ಪಿಕೊಳ್ಳಲು ಆದ್ಯತೆ ನೀಡುವುದಾಗಿ ಹೇಳಿದರು. ವಾಲ್ಟ್‌ ಡಿಸ್ನಿ ಫೀಚರ್‌ ಅನಿಮೇಷನ್‌ನ ಹೊಸ ಸಿಜಿಐ ವಿಭಾಗವಾದ ಸರ್ಕಲ್‌ ೭ ಆನಿಮೇಷನ್‌ನಲ್ಲಿ ಟಾಯ್‌ ಸ್ಟೋರಿ ೩ ಚಲನಚಿತ್ರವನ್ನು ನಿರ್ಮಾಣ ಪೂರ್ವ ಹಂತಕ್ಕೆ ತರಲಾಯಿತು.

ವಿಲೀನಗೊಂಡ ನಂತರ ಲ್ಯಾಸಿಟರ್‌ ಎಲ್ಲಾ ಡಿಸ್ನಿ ಮತ್ತು ಪಿಕ್ಸರ್‌ ಆನಿಮೇಷನ್ ವಿಭಾಗಗಳ ಸಾರಥ್ಯ ವಹಿಸಿಕೊಂಡಾಗ,ಎಲ್ಲಾ ಉತ್ತರ ಭಾಗಗಳ ಚಿತ್ರಗಳ ನಿರ್ಮಾಣವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಎಂದು ಘೋಷಿಸಿದರು. ಟಾಯ್‌ ಸ್ಟೋರಿ ೩ ರದ್ದಾಗಿದೆ ಎಂದು ವಾಸ್ತವವಾಗಿ ಹೇಳುವ ಹಂತಕ್ಕೆ ಡಿಸ್ನಿ ಮುಂದೆ ಹೋಯಿತು. ಆದರೂ, ಮೇ ೨೦೦೬ ರಲ್ಲಿ ಪಿಕ್ಸರ್‌ ನಿಯಂತ್ರಣದಲ್ಲಿದ್ದ ಟಾಯ್ ಸ್ಟೋರಿ ೩ ಚಲನಚಿತ್ರವನ್ನು ನಿರ್ಮಾಣಪೂರ್ವ ಹಂತಕ್ಕೆ ತರಲಾಗಿದೆ ಎಂದು ಘೋಷಿಸಲಾಯಿತು.

ಮುಂಬರುವ ಉತ್ತರದ ಭಾಗಗಳ ಕುರಿತು 'ಒಳ್ಳೆಯ ಕಥೆಗಳಿದ್ದಲ್ಲಿ ನಾವು ಉತ್ತರದ ಭಾಗ ತಯಾರಿಸುವೆವು' ಎಂಬ ಲ್ಯಾಸಿಟರ್‌ ಹೇಳಿಕೆಯು ಇನ್ನಷ್ಟು ಊಹಾಪೋಹಗಳಿಗೆ ಆಸ್ಪದ ಕಲ್ಪಿಸಿತು.[೨೯] ಕಾರ್ಸ್‌ ೨ - ಇದು ಪಿಕ್ಸಾರ್ಸ್‌ ಉದ್ದಿಮೆಯ ಮೊದಲ 'ಉತ್ತರದ ಭಾಗ', ಇದು ಟಾಯ್‌ ಸ್ಟೊರಿ ಯನ್ನು ಆಧರಿಸಿರಲಿಲ್ಲ. ದಿನಾಂಕ ೮ ಏಪ್ರಿಲ್‌ ೨೦೦೮ ರಂದು ಈ ಚಲನಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಯಿತು. ಮಾಂಸ್ಟರ್ಸ್‌ ಇನ್ಕಾರ್ಪೊರೇಟೆಡ್ ‌ ಚಲನಚಿತ್ರವನ್ನು ೨೨ ಏಪ್ರಿಲ್‌ ೨೦೧೦ ರಂದು ಘೋಷಿಸಲಾಯಿತು.ಇದು ೧೬ ನವೆಂಬರ್‌ ೨೦೧೨ ರಲ್ಲಿ ಬಿಡುಗಡೆಯಾಗಲಿದೆ.[೩೦]

ಕಿರುತೆರೆಯತ್ತ ವಿಸ್ತರಣೆ

ಬದಲಾಯಿಸಿ

ಟಾಯ್‌ ಸ್ಟೋರಿ ಕಿರುತೆರೆಯತ್ತ ವಿಸ್ತರಿಸಲಾದ ಮೊದಲನೆಯ ಚಲನಚಿತ್ರವಾಯಿತು. ಜೊತೆಗೆ ಬಝ್‌ ಲೈಟ್‌ಇಯರ್‌ ಆಫ್‌ ಸ್ಟಾರ್‌ ಕಮಾಂಡ್‌ ಚಲನಚಿತ್ರ ಮತ್ತು ಕಿರುತೆರೆ ಸರಣಿಯನ್ನೂ ಸಹ ವಿಸ್ತರಿಸಲಾಯಿತು. ಕಾರ್ಸ್ ‌ ಎಂಬುದು ಕಾರ್ಸ್‌ ಟೂನ್ಸ್ ‌ ಮೂಲಕ ಕಿರುತೆರೆಗೆ ವಿಸ್ತರಿಸಲಾಯಿತು. ಎಂದಿನ ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರದರ್ಶನಗಳ ನಡುವೆ, ಮೂರರಿಂದ ಐದು ನಿಮಿಷಗಳ ಸರಣಿಯನ್ನು ಮಧ್ಯದಲ್ಲಿ ತುರುಕಲಾಗುತ್ತಿತ್ತು. ಇದರಲ್ಲಿ ಮ್ಯಾಟರ್‌ ಎಂಬ ಟೋವ್ ಟ್ರಕ್ ತೋರಿಸಲಾಗುತ್ತಿದ್ದು, ಹಾಸ್ಯನಟ ಲ್ಯಾರಿ ದಿ ಕೇಬಲ್‌ ಗಯ್‌ ಧ್ವನಿದಾನ ಮಾಡಿದರು.[೩೧]

ಅನಿಮೇಷನ್‌ ಹಾಗೂ ಸಜೀವ ಸನ್ನಿವೇಶ

ಬದಲಾಯಿಸಿ

ಇಲ್ಲಿಯವರೆಗೆ ಪಿಕ್ಸಾರ್ ನಿರ್ಮಾಣದ ಎಲ್ಲಾ ಚಲನಚಿತ್ರಗಳೂ ಕಂಪ್ಯೂಟರ್‌-ಆನಿಮೇಟೆಡ್‌ ಆಗಿವೆ. ಕೇವಲ WALL-E ಮಾತ್ರ ಸಂಪೂರ್ಣ ಆನಿಮೇಟ್‌ ಆಗಿರದೆ, ಸಜೀವ ಸನ್ನಿವೇಶಗಳ ಅಲ್ಪ ಅಂಶವೂ ಉಂಟು. ಜಾನ್‌ ಕಾರ್ಟರ್‌ ಆಫ್‌ ಮಾರ್ಸ್‌ ಪಿಕ್ಸರ್‌ ನಿರ್ಮಾಣದ ಮೊಟ್ಟಮೊದಲ ಸಜೀವ ಸನ್ನಿವೇಶಗಳ ಚಲನಚಿತ್ರವಾಗಲಿದೆ. ಇದು ೨೦೧೨ ರಲ್ಲಿ ಬಿಡುಗಡೆಯಾಗಲಿದೆ. ಬ್ರ್ಯಾಡ್‌ ಬರ್ಡ್‌ ನಿರ್ದೇಶನದ ೧೯೦೬ , ಎರಡನೆಯ ಸಜೀವ ಸನ್ನಿವೇಶಗಳ ಚಲನಚಿತ್ರವಾಗಲಿದೆ. ನಿರ್ಮಾಣ ಹಂತದಲ್ಲಿರುವ ಈ ಚಿತ್ರವು ೧೯೦೬ ರಲ್ಲಿ ಸಂಭವಿಸಿದ ಸ್ಯಾನ್ ಫ್ರ್ಯಾನ್ಸಿಸ್ಕೊ ಭೂಕಂಪದ ಘಟನೆಯನ್ನು ಆಧರಿಸಿದೆ. ಕೆಲಸದ ವಾತಾವರಣ ಹಿತಕರವಾಗಿರುವ ಕಾರಣ, ಪಿಕ್ಸರ್‌ನಲ್ಲೇ ಇದ್ದುಕೊಂಡು, "ತಾವು ಕೆಲವು ಯೋಜನೆಗಳೊಂದಿಗೆ ನೈಜ ನಟನಾ ಮಾದರಿಯ ಚಲನಚಿತ್ರಗಳ ಜಗತ್ತಿಗೆ ಕಾಲಿಡುವ ಆಸಕ್ತಿಯನ್ನು ಹೊಂದಿರುವುದಾಗಿ" ಬ್ರ್ಯಾಡ್ ಬರ್ಡ್‌ ತಿಳಿಸಿದ್ದಾರೆ.

ಅಪೂರ್ಣ ಚಲನಚಿತ್ರ ನಿರ್ಮಾಣಗಳು

ಬದಲಾಯಿಸಿ

ನ್ಯೂಟ್ ‌ ಎಂಬುದು ಪಿಕ್ಸರ್‌ ೨೦೦೮ ರಲ್ಲಿ ಘೋಷಿಸಿದ ಚಲನಚಿತ್ರವಾಗಿತ್ತು. ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ ೨೦೧೨ ರಲ್ಲಿ ಈ ಚಲನಚಿತ್ರವನ್ನು ವಿತರಿಸುವ ನಿರೀಕ್ಷೆಯಿದೆ.[೩೨] ಕೊನೆಯ ಎರಡು ನೀಲಿ ಕಾಳುಗಳುಳ್ಳ ನ್ಯೂಟ್(ಉಭಯಚರ ಪ್ರಾಣಿ)ಗಳ ಅಸ್ತಿತ್ವದ ಬಗ್ಗೆ ಈ ಚಲನಚಿತ್ರ ಗಮನಸೆಳೆಯುತ್ತದೆ. ಅವು ತಮ್ಮ ಪ್ರಭೇದವನ್ನು ಅಳಿವಿನಿಂದ ರಕ್ಷಿಸಲು ಪರಸ್ಪರ ಕೂಡುವ ಅಗತ್ಯವಿದೆ. ಆದರೆ ಸನ್ನಿವೇಶಗಳು ಪರಿಸ್ಥಿತಿಯನ್ನು ಇನ್ನೆಷ್ಟು ಜಟಿಲಗೊಳಿಸುತ್ತದೆ. ಲೇಖಕ ಮತ್ತು ನಿರ್ದೇಶಕ ಗ್ಯಾರಿ ರಿಡ್‌ಸ್ಟ್ರೊಮ್‌ ವಿವರಿಸಿದಂತೆ, 'ನ್ಯೂಟ್‌ ಬಹಳ ಚುರುಕಾಗಿದ್ದರೂ ಅದು ತನಗಾಗಿ ಯೋಚಿಸುವ ಅಗತ್ಯವಿರಲಿಲ್ಲ, ಏಕೆಂದರೆ ಅದಕ್ಕೆ ಅಗತ್ಯಕಿಂತಲೂ ಹೆಚ್ಚು ಲಾಲನೆ-ಪಾಲನೆ ಸಿಕ್ಕಿತ್ತು. ಇನ್ನೊಂದೆಡೆ ಬ್ರೂಕ್‌ಗೆ ರೀತಿನೀತಿಗಳ ಪರಿಚಯವಿತ್ತು ಹಾಗೂ ಅದರೊಂದಿಗೆ ಹುಡುಗಾಟಿಕೆ ಸಾಧ್ಯವಿರಲಿಲ್ಲ. ಮೊದಲ ವಿಹಾರ ಕೆಟ್ಟುಹೋಗಬಹುದಾದಷ್ಟು ರೀತಿಯಲ್ಲಿತ್ತು!' [೩೩]

ನ್ಯೂಟ್ ‌ ಚಲನಚಿತ್ರವನ್ನು ಮೊದಲ ಬಾರಿಗೆ ಏಪ್ರಿಲ್‌ ೨೦೦೮ ರಲ್ಲಿ ಘೋಷಿಸಿದಾಗ, ಚಲನಚಿತ್ರವನ್ನು ಜೂನ್‌ ೨೦೧೨ ರಲ್ಲಿ ಬಿಡುಗಡೆಗೊಳಿಸುವ ಯೋಜನೆಯಿತ್ತು. ಇದಾದ ನಂತರ ದಿ ಬೆಯರ್‌ ಅಂಡ್‌ ದಿ ಬೋ ಎಂಬ ಫ್ಯಾಂಟಸಿ(ಕಾಲ್ಪನಿಕ) ಚಲನಚಿತ್ರದ ಯೋಜನೆಯೂ ಇತ್ತು.[೩೨] ಎರಡು ವರ್ಷಗಳ ನಂತರ, ಡಿಸ್ನಿ/ಪಿಕ್ಸರ್‌ ಘೋಷಣೆಯ ಪ್ರಕಾರ, ದಿ ಬೆಯರ್‌ ಅಂಡ್‌ ದಿ ಬೋ ಚಲನಚಿತ್ರವನ್ನು ಬ್ರೇವ್ ‌ ಎಂಬ ಹೊಸ ಶೀರ್ಷಿಕೆಯಡಿ ಮೊದಲು ಬಿಡುಗಡೆಗೊಳಿಸಲಾಗುವುದು.ಅದರ ಹಿಂದೆ ಆ ವರ್ಷದ ಅಪರಾರ್ಧದಲ್ಲಿ ೨೦೦೧ ರ ಪಿಕ್ಸರ್‌ ಚಲನಚಿತ್ರ ಮಾಂಸ್ಟರ್ಸ್‌ ಇನ್ಕಾರ್ಪೊರೇಟೆಡ್‌ ನ ಉತ್ತರ ಭಾಗ ಬಿಡುಗಡೆಯಾಗುವುದು.[೩೪] ಏಪ್ರಿಲ್‌ ೨೦೧೦ ರ ಘೋಷಣೆಯಲ್ಲಿ, ಡಿಸ್ನಿ/ಪಿಕ್ಸಾರ್ ನ್ಯೂಟ್ ‌ ಚಲನಚಿತ್ರ ಕುರಿತು ಯಾವುದೇ ಪರಿಷ್ಕೃತ ಬಿಡುಗಡೆ ದಿನಾಂಕ ಕುರಿತು ಮಾಹಿತಿ ಒದಗಿಸಲಿಲ್ಲ. ಜೊತೆಗೆ, ಪ್ರಮುಖ ಪತ್ರಪಾಲಕ ಡೇವ್‌ ಸ್ಮಿತ್‌ ಅಧಿಕೃತ ಡಿಸ್ನಿ ಎ ಟು ಝಡ್‌ ಎನ್ಸೈಕ್ಲೊಪೀಡಿಯಾ ಪೂರಕ ಪ್ರತಿಯಿಂದ ಈ ಚಲನಚಿತ್ರವನ್ನು ತೆಗೆಯಲಾಯಿತು.[೩೫] ಸ್ಮಿತ್‌ರ ವಿದ್ಯುನ್ಮಾನ ಅಂಚೆಯಿಂದ ಸಹಿ ಹಾಕಿಲ್ಲದ ಸಂದೇಶವೊಂದರಲ್ಲಿ, 'ಚಲನಚಿತ್ರವನ್ನು ರದ್ದುಗೊಳಿಸಲಾಗಿದೆ' ಎಂದಿತ್ತು.[೩೬] ಈ ಸಂದೇಶ ಹಾಗೂ ಚಿತ್ರರಂಗದ ಆಂತರಿಕ ವಲಯದಿಂದ ಬಂದ ಪ್ರತಿಕ್ರಿಯೆಗಳಿಂದಾಗಿ, ಚಲನಚಿತ್ರವು ನಿಜಕ್ಕೂ ರದ್ದಾಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು.[೩೭][೩೮] ಡಿಸ್ನಿ/ಪಿಕ್ಸರ್‌ ಅನಿಮೇಷನ್‌ ವಿಭಾಗದ ಮುಖ್ಯಸ್ಥ ಜಾನ್‌ ಲ್ಯಾಸಿಟರ್‌ ಯಾವುದೇ ಪ್ರತಿಕ್ರಿಯೆ ನೀಡಲು ಇಚ್ಛಿಸಲಿಲ್ಲ. ಆದರೆ, ಸ್ಟುಡಿಯೊ ಒಳಗಿನ ಪ್ರತ್ಯೇಕ ಮೂಲವೊಂದು ನಮ್ಮ 'ಸೃಜನಾತ್ಮಕ ತಂಡಗಳು ಕಾರ್ಸ್‌ ೨ , ಬ್ರೇವ್‌ ಹಾಗೂ ಮಾಂಸ್ಟರ್ಸ್‌ ಇನ್ಕಾರ್ಪೊರೇಟೆಡ್‌ ೨ ಚಲನಚಿತ್ರಗಳತ್ತ ಗಮನ ಕೇಂದ್ರೀಕರಿಸಲು ನ್ಯೂಟ್‌ನ್ನು ನಮ್ಮ ನಿರ್ಮಾಣ ಯೋಜನೆಯಿಂದ ತೆಗೆದಿದ್ದೇವೆ' ಎಂದು ಹೇಳಿಕೆ ನೀಡಿತು.[೩೯]

ಪಿಕ್ಸರ್‌: ೨೦ ವರ್ಷಗಳ ಅನಿಮೇಷನ್‌

ಬದಲಾಯಿಸಿ

ಡಿಸೆಂಬರ್‌ ೨೦೦೫ ರಿಂದಲೂ, ಅನಿಮೇಷನ್‌ ಕ್ಷೇತ್ರದಲ್ಲಿ ತಮ್ಮ ಮೊದಲ ಇಪ್ಪತ್ತು ವರ್ಷಗಳಲ್ಲಿ ಕಲೆ ಮತ್ತು ಕಲಾವಿದರ ಸಾಧನೆಗಳನ್ನು ಪ್ರಶಂಸಿಸುವಂತಹ ಪ್ರದರ್ಶನಗಳನ್ನು ಆಯೋಜಿಸಿದೆ.[೪೦]

ಇಂತಹ ಒಂದು ಪ್ರದರ್ಶನವನ್ನು ಪಿಕ್ಸರ್‌ ೨೦೧೦ ರ ಏಪ್ರಿಲ್‌ನಿಂದ ಜೂನ್‌ರ ವರೆಗೆ, ಸಿಂಗಪುರದ ಜುರಾಂಗ್‌ ಈಸ್ಟ್‌ನಲ್ಲಿರುವ ಸೈಯನ್ಸ್ ಸೆಂಟರ್‌ ಸಿಂಗಪುರ‌ದಲ್ಲಿ ಅಯೋಜಿಸಿತು.[೪೧] ಸಿಂಗಪುರದಲ್ಲಿ ಪ್ರದರ್ಶನ ಆಯೋಜಿಸಿದ್ದು ಇದೇ ಮೊದಲು.

ವಿವಿಧ ಪಿಕ್ಸರ್‌ ನಿರ್ಮಾಣಗಳಿಂದ ಹಲವು 'ನಿರ್ಮಾಣ ಪ್ರಗತಿಯಲ್ಲಿದೆ' ಎನ್ನಲಾದ ರೇಖಾಚಿತ್ರಗಳು, ಜನಪ್ರಿಯ ಪಾತ್ರಗಳ ಜೇಡಿಮಣ್ಣು ಪ್ರತಿಮೆಗಳು ಹಾಗೂ ನಾಲ್ಕು ಪ್ರೊಜೆಕ್ಟರ್‌ಗಳ ಮೂಲಕ 3D ಆವೃತ್ತಿಯ ಪ್ರದರ್ಶನ ತುಣುಕುಗಳನ್ನು ತೋರಿಸುವ'ಆಟೊಸ್ಟೀರಿಯೊಸ್ಕೊಪಿಕ್‌ ಕಿರುಚಿತ್ರ. ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಝೋಟ್ರೋಪ್‌ನಲ್ಲಿ 'ಟಾಯ್ ಸ್ಟೋರಿ' ಪಾತ್ರಗಳ ಚಿತ್ರಗಳನ್ನು ನಿಜ ಜೀವನದ ಪಾತ್ರಗಳಂತೆ ಆನಿಮೇಟ್‌ ಮಾಡಿಸಿ ಪ್ರದರ್ಶಿಸುವುದು ಇನ್ನೊಂದು ಪ್ರಮುಖಾಂಶವಾಗಿದೆ.[೪೧]

ಇವನ್ನೂ ಗಮನಿಸಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2010-07-23. Retrieved 2010-08-09.
  2. "ಆರ್ಕೈವ್ ನಕಲು". Archived from the original on 2010-07-14. Retrieved 2010-08-09.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ Hormby, Thomas (2007-01-22). "The Pixar Story: Fallon Forbes, Dick Shoup, Alex Schure, George Lucas and Disney". Low End Mac. Retrieved 2007-03-01.
  4. Hertzfeld, Andy. "The End Of An Era". Folklore.org.
  5. "Pixar History". Pixar. Archived from the original on 2010-08-17. Retrieved 2008-04-11.
  6. Lee, Ellen (January 29, 2006). "The dynamic duo behind Pixar's big success / Lasseter and Catmull driving force behind studios' blockbusters". The San Francisco Chronicle.
  7. ಟೇಕ್‌ ಆವರ್‌ ವರ್ಡ್‌ ಫಾರ್‌ ಇಟ್‌, ಎರಡನೆಯ ಪುಟ, ವರ್ಡ್ಸ್‌ ಟು ದಿ ವೈಸ್‌
  8. "Advertisement Misunderstood Masterpieces: Howard the Duck". 411mania. Archived from the original on 2007-08-19. Retrieved 2008-04-22.
  9. ೯.೦ ೯.೧ "Pixar Animation Studios". Ohio State University. Archived from the original on 2010-06-24. Retrieved 2008-04-22.
  10. "Toy Stories and Other Tales". University of Saskatchewan. Archived from the original on 2008-12-01. Retrieved 2008-04-22.
  11. "Steve Jobs' Amazing Movie Adventure Disney Is Betting On computerdom's Ex-boy Wonder To Deliver This Year's Animated Christmas Blockbuster. Can He Do For Hollywood What He Did For Silicon Valley?". CNNMoney. Retrieved 1995-09-18. {{cite news}}: Check date values in: |accessdate= (help)Nevius, C.W. (August 24, 2005). "Pixar tells story behind 'Toy Story'". San Francisco Chronicle. Retrieved 2008-04-22.
  12. "ಟಾಯ್‌ ಸ್ಟೋರಿ". ಬಾಕ್ಸ್‌ ಆಫೀಸ್‌ ಮೊಜೊ. ೨೦೦೯ ರ ಜೂನ್‌ 10ರಂದು ಮರುಸಂಪಾದಿಸಲಾಯಿತು.
  13. "ಕಂಪೆನಿ FAQ `s‌" Archived 2006-07-02 ವೇಬ್ಯಾಕ್ ಮೆಷಿನ್ ನಲ್ಲಿ. ಪಿಕ್ಸರ್‌. ೨೦೧೦ ರ ಜೂನ್‌ ೧೦ ರಂದು ಮರುಸಂಪಾದಿಸಲಾಯಿತು.
  14. "Sequels to `Toy Story,' `Tail,' `Dragonheart' go straight to video". The Seattle Times. Archived from the original on 2012-05-30. Retrieved 2008-04-22.
  15. "Disney trying to patch things up with Pixar". Movies Online. Archived from the original on 2007-12-09. Retrieved 2008-04-22.
  16. ೧೬.೦ ೧೬.೧ "Pixar dumps Disney". CNN. January 29, 2004. Retrieved 2008-04-22.
  17. "Pixar Says 'So Long' to Disney". Wired. Archived from the original on 2012-05-30. Retrieved 2008-04-22.
  18. Grover, Ronald (2004-12-09). "Steve Jobs's Sharp Turn with Cars". Business Week. Retrieved 2007-02-23.
  19. "Pixar Perfectionists Cook Up 'Ratatouille' As Latest Animated Concoction". Star Pulse. Archived from the original on 2007-10-27. Retrieved 2008-04-22.
  20. CNN. January 24, 2006 http://money.cnn.com/2006/01/24/news/companies/disney_pixar_deal/. {{cite news}}: Missing or empty |title= (help)
  21. ೨೧.೦ ೨೧.೧ Holson, Laura M. (January 25, 2006). "Disney Agrees to Acquire Pixar in a $7.4 Billion Deal". The New York Times. Retrieved 2008-04-22.
  22. "Disney buys Pixar". CNN. January 24, 2006. Retrieved 2008-04-22.
  23. "Agreement and Plan of Merger by and among The Walt Disney Company, Lux Acquisition Corp. and Pixar". Securities and Exchange Commission. 2006-01-24. Retrieved 2007-04-25.
  24. "Sale unlikely to change Pixar culture". Inside Bay Area. Retrieved 2008-04-22.
  25. Graser, Marc. "Morris and Millstein named manager of Disney studios". Variety. Retrieved 2008-09-10.
  26. "Pixar Canada sets up home base in Vancouver, looks to expand". The Vancouver Sun. Archived from the original on 2010-04-22. Retrieved 2010-04-20.
  27. ೨೭.೦ ೨೭.೧ Smiley, Tavis (2007-01-24). "Tavis Smiley". PBS. Archived from the original on 2007-11-24. Retrieved 2007-03-01.
  28. Holmes, Linda. "Dear Pixar, From All The Girls With Band-Aids On Their Knees". National Public Radio. Retrieved 2009-12-19.
  29. Douglas, Edwards (2006-06-03). "Pixar Mastermind John Lasseter". comingsoon.net. Archived from the original on 2007-03-11. Retrieved 2007-03-01.
  30. "Disney announce Monsters Inc sequel". BBC News. 23 April 2010. Retrieved 23 April 2010.
  31. "Cars Toons Coming In October To Disney Channel". AnimationWorldNetwork. 2008-09-26. Retrieved 2008-12-04.
  32. ೩೨.೦ ೩೨.೧ "The Walt Disney Studios Rolls Out Slate of 10 New Animated Motion Pictures Through 2012". Walt Disney Company, via PRNewswire. 2008-04-08. Retrieved 2008-04-08.
  33. Olly Richards (2008-04-09). "Cars 2 & A Ton More 'Toons". Empire. Archived from the original on 2011-10-10. Retrieved 2008-04-09.
  34. Peter Sciretta (2010-04-22). "Pixar to Release Monsters Inc Sequel and Brave in 2012". /Film.com. Archived from the original on 2010-10-13. Retrieved 2010-04-23.
  35. David Smith (2010-05-11). "Disney A to Z: The Official Encyclopedia" (PDF). Retrieved 2010-06-04.
  36. Mike Bastoli (2010-05-11). "Exclusive: Newt is Cancelled". PixarBlog. Retrieved 2010-06-04.
  37. Gary North (2010-05-12). "Pixar's 'Newt' officially canceled?". Hollywood Wiretap. Retrieved 2010-06-04.
  38. Peter Sciretta (May 12, 2010). "Pixar's Newt Officially Canceled". /Film. Archived from the original on ಆಗಸ್ಟ್ 24, 2010. Retrieved May 10, 2010.
  39. Kate Ward (2010-05-13). "Disney/Pixar source says 'Newt' off development schedule". Entertainment Weekly. Retrieved 2010-06-04.
  40. "Pixar: 20 Years of Animation". Pixar. Archived from the original on 8 ಜನವರಿ 2007. Retrieved 28 June 2010.
  41. ೪೧.೦ ೪೧.೧ Eng Eng, Wang (April 1, 2010). "Pixar animation comes to life at Science Centre exhibition". MediaCorp Channel NewsAsia. Archived from the original on 4 ಏಪ್ರಿಲ್ 2010. Retrieved 28 June 2010.


ಬಾಹ್ಯ ಕೊಂಡಿಗಳು

ಬದಲಾಯಿಸಿ

37°49′58″N 122°17′02″W / 37.832639°N 122.283789°W / 37.832639; -122.283789