ಪಿಇಎಸ್‍ಟಿ ವಿಶ್ಲೇಷಣೆ

ವ್ಯವಹಾರ ವಿಶ್ಲೇಷಣೆಯಲ್ಲಿ, ಪಿಇಎಸ್‍ಟಿ ವಿಶ್ಲೇಷಣೆ ("ರಾಜಕೀಯ, ಆರ್ಥಿಕ, ಸಾಮಾಜಿಕ-ಸಾಂಸ್ಕೃತಿಕ ಮತ್ತು ತಾಂತ್ರಿಕ") ಕಾರ್ಯತಂತ್ರದ ನಿರ್ವಹಣೆ, ಪರಿಸರ ಸ್ಕ್ಯಾನಿಂಗ್ ಘಟಕದಲ್ಲಿ ಬಳಸಲಾಗುವ ಸ್ಥೂಲ-ಪರಿಸರ ಅಂಶಗಳ ಚೌಕಟ್ಟನ್ನು ವಿವರಿಸುತ್ತದೆ. ಕಾರ್ಯತಂತ್ರದ ವಿಶ್ಲೇಷಣೆ ನಡೆಸುವಾಗ ಅಥವಾ ಮಾರುಕಟ್ಟೆ ಸಂಶೋಧನೆ ಮಾಡುವಾಗ ಇದು ಬಾಹ್ಯ ಪರಿಸರ ವಿಶ್ಲೇಷಣೆಯ ಭಾಗವಾಗಿದೆ ಮತ್ತು ಪರಿಗಣನೆಗೆ ತೆಗೆದುಕೊಳ್ಳಬೇಕಾದ ವಿವಿಧ ಸ್ಥೂಲ-ಪರಿಸರ ಅಂಶಗಳ ಅವಲೋಕನವನ್ನು ನೀಡುತ್ತದೆ. ಇದು ಮಾರುಕಟ್ಟೆಯ ಬೆಳವಣಿಗೆ ಅಥವಾ ಕುಸಿತ, ವ್ಯಾಪಾರದ ಸ್ಥಾನ, ಸಾಮರ್ಥ್ಯ ಮತ್ತು ಕಾರ್ಯಾಚರಣೆಯನ್ನು ಅರ್ಥಮಾಡಿಕೊಳ್ಳವ ಸಾಧನವಾಗಿದೆ.

ಪಿಇಎಸ್‍ಟಿ ವಿಶ್ಲೇಷಣೆಯನ್ನು ೧೯೬೭ರಲ್ಲಿ ಅಗ್ಯುಲರ್ ಪರಿಸರ ಸ್ಕ್ಯಾನಿಂಗ್ ಚೌಕಟ್ಟಿನಂತೆ ಇದನ್ನು ಅಭಿವೃದ್ಧಿಪಡಿಸಿದರು.[] ಸಂಸ್ಥೆಗಳ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಸಾಮಾಜಿಕ ವಿಭಾಗಗಳನ್ನು ಸ್ಕ್ಯಾನ್ ಮಾಡಬೇಕು ಎಂದು ವಾದಿಸಿದರು. ಪರಿಸರ ಸ್ಕ್ಯಾನಿಂಗ್ ಅನ್ನು ಈ ಕೆಳಗಿನಂತೆ ವ್ಯಾಖ್ಯಾನಿದರು, "ಕಂಪನಿಯ ಹೊರಗಿನ ಪರಿಸರದಲ್ಲಿನ ಘಟನೆಗಳು ಮತ್ತು ಸಂಬಂಧಗಳ ಬಗ್ಗೆ ಮಾಹಿತಿಗಾಗಿ ಸ್ಕ್ಯಾನ್ ಮಾಡುವುದು, ಅದರ ಜ್ಞಾನವು ಉನ್ನತ ಮಟ್ಟದಲ್ಲಿ ಸಹಾಯ ಮಾಡುತ್ತದೆ."[]

ಸಂಯೋಜನೆ

ಬದಲಾಯಿಸಿ

ಮೂಲ ಪಿಇಎಸ್‍ಟಿ ವಿಶ್ಲೇಷಣೆಯು ನಾಲ್ಕು ಅಂಶಗಳನ್ನು ಒಳಗೊಂಡಿದೆ:

  • ಆರ್ಥಿಕತೆಯಲ್ಲಿ ಸರ್ಕಾರವು ಹೇಗೆ ಮಧ್ಯಪ್ರವೇಶಿಸುತ್ತದೆ ಎಂಬುದಕ್ಕೆ ರಾಜಕೀಯ ಅಂಶಗಳು ಸಂಬಂಧಿಸಿವೆ. ನಿರ್ದಿಷ್ಟವಾಗಿ, ರಾಜಕೀಯ ಅಂಶಗಳು ತೆರಿಗೆ ನೀತಿ, ಕಾರ್ಮಿಕ ಕಾನೂನು, ಪರಿಸರ ಕಾನೂನು, ವ್ಯಾಪಾರ ನಿರ್ಬಂಧಗಳು, ಸುಂಕಗಳು ಮತ್ತು ರಾಜಕೀಯ ಸ್ಥಿರತೆ ಸೇರಿದ ಕ್ಷೇತ್ರಗಳನ್ನು ಹೊಂದಿವೆ. ರಾಜಕೀಯ ಅಂಶಗಳು ಸರ್ಕಾರವು ಒದಗಿಸುವ ಅಥವಾ ಗುರಿಯನ್ನು ಹೊಂದಿರುವ ಸರಕುಗಳು ಮತ್ತು ಸೇವೆಗಳನ್ನು ಒಳಗೊಂಡಿರಬಹುದು. ಇದಲ್ಲದೆ, ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳ ಮೇಲೆ ಸರ್ಕಾರವು ಹೆಚ್ಚಿನ ಪ್ರಭಾವನ್ನು ಬೀರುತ್ತವೆ.
  • ಆರ್ಥಿಕ ಅಂಶಗಳಲ್ಲಿ ಆರ್ಥಿಕ ಬೆಳವಣಿಗೆ, ವಿನಿಮಯ ದರಗಳು, ಹಣದುಬ್ಬರ ದರ ಮತ್ತು ಬಡ್ಡಿದರಗಳು ಸೇರಿವೆ. ಈ ಅಂಶಗಳು ವ್ಯವಹಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಉದಾಹರಣೆಗೆ, ಬಡ್ಡಿದರಗಳು ಸಂಸ್ಥೆಯ ಬಂಡವಾಳದ ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ.
  • ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳು, ಆರೋಗ್ಯ ಪ್ರಜ್ಞೆ, ಜನಸಂಖ್ಯೆಯ ಬೆಳವಣಿಗೆಯ ದರ, ವಯಸ್ಸಿನ ಹಂಚಿಕೆ, ವೃತ್ತಿ ವರ್ತನೆಗಳು ಸುರಕ್ಷತೆಗೆ ಒತ್ತು ನೀಡುತ್ತವೆ. ಸಾಮಾಜಿಕ ಅಂಶಗಳಲ್ಲಿನ ಹೆಚ್ಚಿನ ಪ್ರವೃತ್ತಿಗಳು ಕಂಪನಿಯ ಉತ್ಪನ್ನಗಳ ಬೇಡಿಕೆ ಮತ್ತು ಕಂಪನಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ವಯಸ್ಸಾದ ಜನಸಂಖ್ಯೆಯು ಚಿಕ್ಕದಾದ ಮತ್ತು ಕಡಿಮೆ-ಇಚ್ಛೆಯ ಕಾರ್ಯಪಡೆಯನ್ನು ಸೂಚಿಸುತ್ತದೆ (ಹೀಗಾಗಿ ಕಾರ್ಮಿಕರ ವೆಚ್ಚವನ್ನು ಹೆಚ್ಚಿಸುತ್ತದೆ). ಇದಲ್ಲದೆ, ಇದರಿಂದ ಉಂಟಾಗುವ ಸಾಮಾಜಿಕ ಪ್ರವೃತ್ತಿಗಳಿಗೆ ಹೊಂದಿಕೊಳ್ಳಲು ಕಂಪನಿಗಳು ವಿವಿಧ ನಿರ್ವಹಣಾ ತಂತ್ರಗಳನ್ನು ಬದಲಾಯಿಸಬಹುದು (ಉದಾಹರಣೆಗೆ ಹಳೆಯ ಕೆಲಸಗಾರರನ್ನು ನೇಮಿಸಿಕೊಳ್ಳುವುದು).
  • ತಾಂತ್ರಿಕ ಅಂಶಗಳು ಯಾಂತ್ರೀಕರಣ, ತಂತ್ರಜ್ಞಾನ ಪ್ರೋತ್ಸಾಹ ಮತ್ತು ತಾಂತ್ರಿಕ ಬದಲಾವಣೆಯ ದರದಂತಹ ತಾಂತ್ರಿಕ ಅಂಶಗಳನ್ನು ಒಳಗೊಂಡಿವೆ. ಇವುಗಳು ಪ್ರವೇಶಕ್ಕೆ ಅಡೆತಡೆಗಳನ್ನು ನಿರ್ಧರಿಸಬಹುದು, ಕನಿಷ್ಠ ಸಮರ್ಥ ಉತ್ಪಾದನಾ ಮಟ್ಟ ಮತ್ತು ಹೊರಗುತ್ತಿಗೆ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಇದಲ್ಲದೆ, ತಾಂತ್ರಿಕ ಬದಲಾವಣೆಗಳ ವೆಚ್ಚಗಳು, ಗುಣಮಟ್ಟ ಮತ್ತು ನಾವೀನ್ಯತೆಗೆ ಕಾರಣವಾಗುತ್ತವೆ.

ರೂಪಾಂತರಗಳು

ಬದಲಾಯಿಸಿ

ಪಿಇಎಸ್‍ಟಿ ಚೌಕಟ್ಟಿನ ಮೇಲೆ ನಿರ್ಮಿಸುವ ರೂಪಾಂತರಗಳು:

  • ಪಿಇಎಸ್‍ಟಿಇಎಲ್ ಅಥವಾ ಪಿಇಎಸ್‍ಟಿಎಲ್ಇ, ಇದು ಕಾನೂನು ಮತ್ತು ಪರಿಸರ ಅಂಶಗಳನ್ನು ಸೇರಿವೆ. ಕಾನೂನು ಅಂಶಗಳಲ್ಲಿ ತಾರತಮ್ಯ ಕಾನೂನು, ಗ್ರಾಹಕ ಕಾನೂನು, ಆಂಟಿಟ್ರಸ್ಟ್ ಕಾನೂನು, ಉದ್ಯೋಗ ಕಾನೂನು ಮತ್ತು ಆರೋಗ್ಯ ಮತ್ತು ಸುರಕ್ಷತಾ ಕಾನೂನು ಸೇರಿವೆ. ಇದು ಕಂಪನಿಯು ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ವೆಚ್ಚಗಳು ಮತ್ತು ಅದರ ಉತ್ಪನ್ನಗಳ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವಿಶೇಷವಾಗಿ ಪ್ರವಾಸೋದ್ಯಮ, ಕೃಷಿ ಮತ್ತು ವಿಮೆಯಂತಹ ಉದ್ಯಮಗಳ ಮೇಲೆ ಪರಿಣಾಮ ಬೀರಬಹುದು. ಉದಾಹರಣೆಗೆ, ಹವಾಮಾನ ಬದಲಾವಣೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಹೆಚ್ಚುತ್ತಿರುವ ಅರಿವು ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವರು ನೀಡುವ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಕರಾವಳಿ ವಲಯ ಮತ್ತು ಸಿಹಿನೀರಿನ ಸಂಪನ್ಮೂಲಗಳ ನಿರ್ವಹಣಾ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಬಾಹ್ಯ ಅಂಶಗಳ ಮೌಲ್ಯಮಾಪನ,[] ಸುಸ್ಥಿರ ಕಟ್ಟಡಗಳ ಅಭಿವೃದ್ಧಿ, [][] ಸುಸ್ಥಿರ ಶಕ್ತಿ ಪರಿಹಾರಗಳು,[][] ಸೇರಿದಂತೆ ವಿವಿಧ ಸಮರ್ಥನೀಯ ಯೋಜನೆಗಳಲ್ಲಿ ಈ ವಿಶ್ಲೇಷಣಾತ್ಮಕ ಸಾಧನವನ್ನು ಹೆಚ್ಚಿನ ಸಂಖ್ಯೆಯ ಅಧ್ಯಯನಗಳು ಅನ್ವಯಿಸಿವೆ.[][]
  • ಇಟಿಪಿಎಸ್ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಸಾಮಾಜಿಕ ಅಂಶಗಳನ್ನು ಸೇರಿವೆ.
  • ಎಸ್‍ಎಲ್‍ಇಪಿಟಿ, ಕಾನೂನು ಅಂಶಗಳನ್ನು ಸೇರಿವೆ.
  • ಎಸ್‍ಟಿಇಪಿಇ, ಪರಿಸರ ಅಂಶಗಳನ್ನು ಸೇರಿವೆ.[]

ಅಂಶಗಳ ಅನ್ವಯಿಸುವಿಕೆ

ಬದಲಾಯಿಸಿ

ಮಾದರಿಯ ಅಂಶಗಳು ಅದರ ಉದ್ಯಮ ಮತ್ತು ಅದು ಉತ್ಪಾದಿಸುವ ಸರಕುಗಳ ಆಧಾರದ ಮೇಲೆ ಬದಲಾಗುತ್ತವೆ. ಉದಾಹರಣೆಗೆ, ಗ್ರಾಹಕ ಮತ್ತು ಬಿ೨ಬಿ ಕಂಪನಿಗಳು ಸಾಮಾಜಿಕ ಅಂಶಗಳಿಂದ ಹೆಚ್ಚು ಪರಿಣಾಮ ಬೀರುತ್ತವೆ. ಆದರೆ ಜಾಗತಿಕ ರಕ್ಷಣಾ ಗುತ್ತಿಗೆದಾರರು ರಾಜಕೀಯ ಅಂಶಗಳಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಹೆಚ್ಚುವರಿಯಾಗಿ, ಭವಿಷ್ಯದಲ್ಲಿ ಬದಲಾಗುವ ಅಥವಾ ನಿರ್ದಿಷ್ಟ ಕಂಪನಿಗೆ ಹೆಚ್ಚು ಸಂಬಂಧಿತ ಅಂಶಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಉದಾಹರಣೆಗೆ, ಹೆಚ್ಚು ಸಾಲ ಪಡೆದ ಕಂಪನಿಯು ಆರ್ಥಿಕ ಅಂಶಗಳ ಮೇಲೆ ಹೆಚ್ಚು ಗಮನಹರಿಸಬೇಕು.

ಮಿತಿಗಳು

ಬದಲಾಯಿಸಿ

ಪಿಇಎಸ್‍ಟಿ ವಿಶ್ಲೇಷಣೆಯನ್ನು ವ್ಯಾಪಾರ ಅಭ್ಯಾಸದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ವಿಮರ್ಶಕರು ಇದಕ್ಕೆ ಮಿತಿಗಳನ್ನು ಹೊಂದಿದೆ ಎಂದು ವಾದಿಸುತ್ತಾರೆ. ಪಿಇಎಸ್‍ಟಿ ವಿಶ್ಲೇಷಣೆಯು ಹಿಂದಿನ ಮಾರುಕಟ್ಟೆ ಬದಲಾವಣೆಗಳನ್ನು ವಿವರಿಸಲು ಸಹಾಯಕವಾಗಬಹುದು, ಆದರೆ ಮುಂಬರುವ ಮಾರುಕಟ್ಟೆ ಬದಲಾವಣೆಗಳನ್ನು ಊಹಿಸಲು ಅಥವಾ ಮುಂಗಾಣಲು ಇದು ಯಾವಾಗಲೂ ಸೂಕ್ತವಲ್ಲ.[೧೦] ಕಾರಣವೇನೆಂದರೆ, ಪಿಇಎಸ್‍ಟಿ ವಿಶ್ಲೇಷಣೆಯು ವ್ಯಾಪಕ ಶ್ರೇಣಿಯ ವರ್ಗಗಳನ್ನು ನೀಡುತ್ತದೆ ಅದು ಮೋಸಗೊಳಿಸಲು ಸರಳವಾಗಿದೆ. ಪಿಇಎಸ್‍ಟಿ ವಿಶ್ಲೇಷಣೆಯು ವರ್ಗಗಳಲ್ಲಿ ಯಾವುದಕ್ಕೆ ಒತ್ತು ನೀಡಬೇಕು ಮತ್ತು ಯಾವುದಕ್ಕೆ ಒತ್ತು ನೀಡಬಾರದು ಎಂಬುದಕ್ಕೆ ಮಾರ್ಗಸೂಚಿಗಳನ್ನು ನೀಡುವುದಿಲ್ಲ. ಇದರ ಪರಿಣಾಮವಾಗಿ, ವರ್ಗಗಳೊಳಗೆ ಅಚ್ಚುಕಟ್ಟಾಗಿ ವ್ಯಾಖ್ಯಾನಿಸಲಾಗದ ಅಡ್ಡಿಗಳಿಂದ ಸಂಸ್ಥೆಗಳು ಕುರುಡಾಗಬಹುದು.[೧೦]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ J., Aguilar, F. (1967). Scanning the business environment. Macmillan. OCLC 495475137.{{cite book}}: CS1 maint: multiple names: authors list (link)
  2. Sridhar, R.; Sachithanandam, V.; Mageswaran, T.; Purvaja, R.; Ramesh, R.; Vel, A. Senthil; Thirunavukkarasu, E. (2016-07-02). "A Political, Economic, Social, Technological, Legal and Environmental (PESTLE) approach for assessment of coastal zone management practice in India". International Review of Public Administration. 21 (3): 216–232. doi:10.1080/12294659.2016.1237091. ISSN 1229-4659. S2CID 132405731.
  3. Dalirazar, Sadaf; Sabzi, Zahra (2020-12-12). "Strategic analysis of barriers and solutions to development of sustainable buildings using PESTLE technique". International Journal of Construction Management. 23: 167–181. doi:10.1080/15623599.2020.1854931. ISSN 1562-3599. S2CID 234586813.
  4. Ulubeyli, Serdar; Kazanci, Oguzhan (2018-11-20). "Holistic sustainability assessment of green building industry in Turkey". Journal of Cleaner Production (in ಇಂಗ್ಲಿಷ್). 202: 197–212. doi:10.1016/j.jclepro.2018.08.111. ISSN 0959-6526. S2CID 158121323.
  5. Islam, F. R.; Mamun, K. A. (2017), Islam, F.M. Rabiul; Mamun, Kabir Al; Amanullah, Maung Than Oo (eds.), "Possibilities and Challenges of Implementing Renewable Energy in the Light of PESTLE & SWOT Analyses for Island Countries", Smart Energy Grid Design for Island Countries: Challenges and Opportunities, Green Energy and Technology (in ಇಂಗ್ಲಿಷ್), Cham: Springer International Publishing, pp. 1–19, doi:10.1007/978-3-319-50197-0_1, ISBN 978-3-319-50197-0, retrieved 2021-03-24
  6. Achinas, Spyridon; Horjus, Johan; Achinas, Vasileios; Euverink, Gerrit Jan Willem (2019). "A PESTLE Analysis of Biofuels Energy Industry in Europe". Sustainability (in ಇಂಗ್ಲಿಷ್). 11 (21): 5981. doi:10.3390/su11215981.
  7. Tan, J.; Chua, Wen Ling; Chow, C.; Chong, M.; Chew, B. C.; Melaka, Malaysia; Jaya, Hang Tuah (2012). "PESTLE Analysis on Toyota Hybrid Vehicles" (in ಇಂಗ್ಲಿಷ್). S2CID 110872826. {{cite journal}}: Cite journal requires |journal= (help)
  8. Guno, Charmaine Samala; Collera, Angelie Azcuna; Agaton, Casper Boongaling (2021). "Barriers and Drivers of Transition to Sustainable Public Transport in the Philippines". World Electric Vehicle Journal (in ಇಂಗ್ಲಿಷ್). 12 (1): 46. doi:10.3390/wevj12010046.
  9. Richardson, J. A Brief Intellectual History of the STEPE Model or Framework (i.e., the Social, Technical, Economic, Political, and Ecological), accessed 6 May 2019
  10. ೧೦.೦ ೧೦.೧ Diaz Ruiz, Carlos A.; Baker, Jonathan J.; Mason, Katy; Tierney, Kieran (2020-06-15). "Market-scanning and market-shaping: why are firms blindsided by market-shaping acts?". Journal of Business & Industrial Marketing (in ಇಂಗ್ಲಿಷ್). 35 (9): 1389–1401. doi:10.1108/JBIM-03-2019-0130. ISSN 0885-8624. S2CID 219736566.