ಪಾಶುಪತಾಸ್ತ್ರ
ಪಾಶುಪತಾಸ್ತ್ರ
ಬದಲಾಯಿಸಿಇದು ಹಿಂದೂದೇವತೆಯಾದ ಶಿವನಿಗೆ ಪ್ರಿಯವಾದ ಒಂದು ಅಸ್ತ್ರ(ಬಾಣ).ಇದಕ್ಕೆ ಬ್ರಹ್ಮಶಿರ ಎಂಬ ಹೆಸರೂ ಇದೆ.ಇದು ರೌದ್ರಾಕಾರವಾಗಿಯೂ,ಭಯಂಕರ ಪರಾಕ್ರಮೌಳ್ಳದ್ದಾಗಿಯೂ ಇರುವುದು.ಮಂತ್ರಪೂರ್ವಕವಾಗಿ ಅಭಿಮಂತ್ರಿಸಿ ಪ್ರಯೋಗಿಸಿದರೆ ಈ ಅಸ್ತ್ರಕ್ಕೆ ಸಾವಿರಾರು ಶೂಲಗಳನ್ನು,ಸಾವಿರಾರು ಗದೆಗಳನ್ನು,ವಿಷಸರ್ಪಗಳಿಗೆ ಸಮನಾದ ಸಾವಿರಾರು ಬಾಣಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಇರುವುದು.ಈ ಅಸ್ತ್ರದ ಪ್ರಯೋಗ ದೇವಾನುದೇವತೆಗಳಿಗೂ ತಿಳಿಯದ್ದಾಗಿದೆ.ಸ್ವರ್ಗ,ಮರ್ತ್ಯ,ಪಾತಾಳಲೋಕಗಳಲ್ಲಿರುವ ಚರಾಚರಪ್ರಾಣಿಗಳಲ್ಲಿ ಯಾವುದೊಂದು ಪ್ರಾಣಿಯೂ ಇದಕ್ಕೆದುರಾಗಿ ನಿಲ್ಲಲಸಾಧ್ಯವಾದುದು.ಅಲ್ಪ ಬಲವಿರುವವನ ಮೇಲೆ ಪ್ರಯೋಗಿಸಿದರೆ ಇಡೀ ಬ್ರಹ್ಮಾಂಡವನ್ನೇ ದಹಿಸಿಬಿಡುವುದು.ಪ್ರಳಯಕಾರಕನಾದ ಶಿವನು ಈ ಅಸ್ತ್ರದಿಂದ ಯುಗಾಂತ್ಯದಲ್ಲಿ ಪ್ರಪಂಚವನ್ನು ಕ್ಷಣಮಾತ್ರದಲ್ಲಿ ನಿರ್ಮೂಲ ಮಾಡುವನೆಂದು ಪುರಾಣದಲ್ಲಿ ಉಲ್ಲೇಖಿತವಾಗಿದೆ.ಪಾಂಡವರಲ್ಲೊಬ್ಬನಾದ ಅರ್ಜುನ ಇದಕ್ಕಾಗಿ ಕಠಿಣ ತಪಸ್ಸನ್ನಾಚರಿಸಿ ಶಿವನಿಂದ ಇದನ್ನು ಪಡೆದು ಮಹಾಭಾರತ ಯುದ್ಧದಲ್ಲಿ ಸೈಂಧವ ನನ್ನು ಸಂಹರಿಸಿದನೆಂದು ಮಹಾಭಾರತ ದಕಥನದಲ್ಲಿ ಉಲ್ಲೇಖಿತವಾಗಿದೆ. (ವಿವರಣೆಯ ಆಕರ-ಮಹಾಭಾರತ ,ವನಪರ್ವ ,ಉಪಪರ್ವ-ಕೈರಾತಪರ್ವ.೪೦ನೇ ಅಧ್ಯಾಯ )