ಪಾಲ್ ವಾಕರ್
ಪಾಲ್ ವಾಕರ್
ಬದಲಾಯಿಸಿಪಾಲ್ ವಿಲಿಯಂ ವಾಕರ್ (ಸೆಪ್ಟೆಂಬರ್ ೧೨,೧೯೭೩-೨೦೧೩ ನವಂಬರ್ ೩೦)[೧]ಅಮೆರಿಕನ್ ನಟ.ವಾಕರ್ ತನ್ನ ವೃತ್ತಿ ಜೀವನವನ್ನು ಹಲವಾರು ದೂರದರ್ಶನ ಪ್ರದರ್ಶನದ ಮೂಲಕ ಮಾಡಿದ್ದಾರೆ. ಆದರಲ್ಲಿ ಯಂಗ್ ಆಂಡ್ ರೆಸ್ಟ್ಲೆಸ್ ಮತ್ತು ಟಚ್ಡ್ ಬೈ ಆನ್ ಏಂಜಲ್ ಶೋನಲ್ಲಿ ಕೆಲವು ಬಾರಿ ನಟಿಸಿದ್ದಾರೆ. ವಾಕರ್ ಬ್ರೇಕ್ಔಟ್ ಪಾತ್ರಗಳಲ್ಲ್ಲಿ ಪ್ರಾಮುಖ್ಯತೆಯನ್ನು ಪಡೆದರು. ಕಮಿಂಗ್ ಆಫ್ ಏಜ್ ಮತ್ತು ಹದಿಹರೆಯದ ಚಲನಚಿತ್ರಗಳು ಇವರ ಬ್ರೇಕ್ಔಟ್ ಚಿತ್ರಗಳು. ೨೦೦೧ ರಲ್ಲಿ ವಾಕರ್ ಬ್ರಿಯಾನ್ ಒ ಕಾನರ್ ಪಾತ್ರವನ್ನು ಫಾಸ್ಟ್ ಆಂಡ್ ದಿ ಫ್ಯೂರಿಯಸ್ ಚಿತ್ರದಲ್ಲಿ ಮಾಡಿ ಅಂತರಾಷ್ಟ್ರೀಯ ಕೀರ್ತಿಯನ್ನು ಗಳಿಸಿದರು. ಅವರು ಏಯಿಟ್ ಬಿಲೊ , ಟೈಮ್ಲೈನ್ ,ಇಂಟೂ ದ ಬ್ಲೂ, ಮುಂತಾದ ಚಲನಚಿತ್ರಹಳಲ್ಲಿ ನಟನೆಮಾಡಿದರು.ವಾಕರ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
ಆರಂಭಿಕ ಜೀವನ
ಬದಲಾಯಿಸಿವಾಕರ್ ಜನಿಸಿದ್ದು ಗ್ಲೆಂಡೇಲ್, ಕ್ಯಾಲಿಫೋರ್ನಿಯಾ, ಮತ್ತು ಅವರ ತಂದೆ ಚೆರಿಲ್ (ನೀ ಕ್ರಾಬ್ಟ್ರೀ), ಫ್ಯಾಶನ್ ಮಾಡೆಲ್, ಮತ್ತು ಪಾಲ್ ವಿಲಿಯಂ ವಾಕರ್ ಒಬ್ಬ ಒಳಚರಂಡಿ ಗುತ್ತಿಗೆದಾರ ಮತ್ತು ಎರಡು ಬಾರಿ ಗೋಲ್ಡನ್ ಗ್ಲೋವ್ಸ್ ಚಾಂಪಿಯನ್ ಆಗಿದ್ದವರು.[೨]ಪಾಲ್ ಕಡೆಯ ಅಜ್ಜ "ಐರಿಶ್ 'ಬಿಲ್ಲೀ ವಾಕರ್" ಅವರು ಬಾಕ್ಸಿಂಗ್ ವೃತ್ತಿಜೀವನ ಹೊಂದಿದರು. ಪಾಲ್ ಪೂರ್ವಜರು ಕೆಲವು ಜರ್ಮನ್, ಸ್ವಿಸ್, ಹೆಚ್ಚಾಗಿ ಇಂಗ್ಲೀಷವರು ಆಗಿತ್ತು ಮತ್ತು ಐರಿಷ್[೩].ತನ್ನ ಪಿತಾಮಹರು ಫೋರ್ಡ್ ಕಾರ್ಖಾನೆಯಲ್ಲಿ ಇದ್ದರು.ಐದು ಜನ ಒಡಹುಟ್ಟಿದವರಲ್ಲಿ ಹಿರಿಯ, ವಾಕರ್ ಪ್ರಧಾನವಾಗಿ ಬೆಳೆದಿದ್ದು ಲಾಸ್ ಎಂಜಲೀಸ್ ನ ಸಂಲಾಂಡ್ ಸಮುದಾಯದಲ್ಲಿ.ವಾಕರ್ ಪ್ರೌಢಶಾಲಾ ವ್ಯಾಸಂಗವನ್ನು ಸ್ಯಾನ್ ಫೆರ್ನಾಂಡೊ ವ್ಯಾಲಿಯಲ್ಲಿ ಮುಗಿಸಿದರು. ಸನ್ ವ್ಯಾಲಿ ವಿಲೇಜ್ ಕ್ರಿಶ್ಚಿಯನ್ ಸ್ಕೂಲ್‍ನಲ್ಲಿ ೧೯೯೧ ರಲ್ಲಿ ಗ್ರಾಜುಯೆಶನ್ ಮುಗಿಸಿದರು.[೪] ಅವರು ಜೀಸಸ್ ಕ್ರೈಸ್ತ್ ಚರ್ಚ್ ಆಫ್ ಲ್ಯಾಟರ್ ಡೇ ಸೇಂಟ್ಸ್ ಅಲ್ಲಿ ಸದಸ್ಯರಾದಗಿದ್ದರು.ಪ್ರೌಢಶಾಲೆಯ ನಂತರ, ವಾಕರ್ ಹಲವಾರು ಸಮುದಾಯ ಕಾಲೇಜುಗಳು ಹಾಜರಿದ್ದರು. ದಕ್ಷಿಣ ಕ್ಯಾಲಿಫೊರ್ನಿಯನಲ್ಲಿ ಕಡಲಿನ ಜೀವಶಾಸ್ತ್ರ ಓದಿದರು.[೫]
ವೃತ್ತಿ
ಬದಲಾಯಿಸಿಅವರು ತನ್ನ ವೃತ್ತಿ ಜೀವನವನ್ನು ದೂರದರ್ಶನ ಜಾಹೀರಾತಿನ ಮೂಲಕ ಪ್ರಾರಂಭಿಸಿದರು. ಆವರು ಅಂಬೆಗಾಲಿಡುವ ಸಮಯದಲ್ಲಿ ತನ್ನ ಮೊದಲ ಬೆಳ್ಳಿತೆರೆ ನಟನಾವೃತ್ತಿಯನ್ನು ಪ್ಯಾಂಪರ್ಸ್ ಜಾಹಿರಾತಿನ ಮೂಲಕ ಆರಂಬಿಸಿದರು. ಅವರು ಎರಡನೇ ವಯಸ್ಸಿನಲ್ಲಿ ಮಾಡಲಿಂಗ್ ಮಾಡಲು ಆರಂಭಿಸಿದರು. ೧೯೮೫ರಿಂದ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಆರಂಭಿಸಿದರು.ಅದೇ ವರ್ಷ, ಅವರು ಶೋಬಿಜ್ ಪಿಜ್ಜಾ ಏಂಬ ಜಾಹಿರಾತಿನಲ್ಲಿ ಕಾಣಿಸಿಕೊಂಡರು.ವಾಕರ್ ಚಲನಚಿತ್ರದ ವೃತ್ತಿಯನ್ನು ೧೯೮೬ರಲ್ಲಿ ಭಯಾನಕ / ಹಾಸ್ಯ ಚಿತ್ರ ಕ್ಲೋಸೆಟ್ ಮಾನ್ಸ್ಟರ್ ಮೂಲಕ ಆರಂಭಿಸಿದರು. ಅವರು ಮತ್ತು ಅವರ ಸಹೋದರಿ ಆಶ್ಲಿ ಐಮ್ ಟೆಲ್ಲಿಂಗ್ ಎಂಬ ಆಟದ ಸ್ಪರ್ದೆಯಲ್ಲಿ ಅವರು ಎರಡನೆಯ ಸ್ಥಾನವನ್ನು ಪಡೆದರು.೧೯೯೮ ರಲ್ಲಿ ವಾಕರ್ ತನ್ನ ಚಲನಚಿತ್ರ ಮೀಟ್ ದ ಡೀಡಲ್ಸ್ ರ ಮೂಲಕ ಅಂತಿಮವಾಗಿ ಖ್ಯಾತಿ ಗಳಿಸಿಕೊಂಡರು. ೨೦೦೧ರಲ್ಲಿ ವಿನ್ ಡೀಸಲ್ ನ ವಿರುದ್ಧ ನಟನಾಗಿ ವಾಕರ್ ಫಾಸ್ಟ್ ಮತ್ತು ಫ್ಯೂರಿಯಸ್ ಎಂಬ ಚಲನಚಿತ್ರದಲ್ಲಿ ಅಭಿನಯಿಸಿ ಪ್ರಮುಖ ತಿರುವು ಪಡೆದು ಖ್ಯಾತಿಯನ್ನು ಗಳಿಸಿಕೊಂಡರು.ಅದರ ನಂತರ ೨೦೦೩ಯಲ್ಲಿ ಟು ಫಾಸ್ಟ್ ಟು ಫ್ಯುರಿಯಸ್ ಎಂಬ ಚಿತ್ರದಲ್ಲಿ ಮುಖ್ಯ ನಟನಾಗಿ ಕಂಡುಬಂದರು. ವಾಕರ್ ನಂತರ ರೋಮಾಂಚಕ ರನ್ನಿಂಗ್ ಸ್ಕೆರ್ಡ್ ಮತ್ತು ವಾಲ್ಟ್ ಡಿಸ್ನಿ ಪಿಕ್ಚರ್ಸಸ್ ರವರ ಯೆಟ್ ಬಿಲೊ ಒಟ್ಟಿಗೆ ೨೦೦೬ರಲ್ಲಿ ಬಿಡುಗಡೆಯಾಗಿ ತನ್ನ ಮೊದಲ ವಾರಾಂತ್ಯದಲ್ಲಿ ಅಮೇರಿಕಾದ ಡಾಲರ್ ೨೦ ದಶಲಕ್ಷ ಹಣವನ್ನು ಗಳಿಸಿದವು.ವಾಕರ್ ಸ್ವತಂತ್ರ ನಟಿಸಿದ ಲಜಾರಸ್ ಪ್ರಾಜೆಕ್ಟ್ ಅಕ್ಟೋಬರ್ ೨೧,೨೦೦೮ರಂದು ಡಿವಿಡಿ ಬಿಡುಗಡೆಯಾಗಿ ಆನಂತರ ಫಾಸ್ಟ್ ಮತ್ತು ಫ್ಯೂರಿಯಸ್ ಪಾತ್ರಕ್ಕೆ ಮರಳಿದರು. ಫಾಸ್ಟ್ ಮತ್ತು ಫ್ಯೂರಿಯಸ್ ಏಪ್ರಿಲ್ ೩,೨೦೦೯ ರಂದು ಬಿಡುಗಡೆಯಾಯಿತುಯಿತು.ವಾಕರ್ ನಂತರ ಟೇಕರ್ಸ್ನಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ ೨೦೦೮ರಲ್ಲಿ ಚಿತ್ರೀಕರಣ ಮಾಡಲು ಆರಂಭಿಸಲಾಯಿತು, ಮತ್ತು ಆಗಸ್ಟ್ ೨೦೧೦ರಲ್ಲಿ ಬಿಡುಗಡೆ ಮಾಡಲಾಯಿತು. ಕೋಟಿ ಪ್ರೆಸ್ಟೀಜ್ ಸುಗಂಧ ಬ್ರ್ಯಾಂಡ್ ಮೆನ್ ಡೇವಿಡ್ ಆಫ್ ಕೂಲ್ ವಾಟರ್ ಜನವರಿ ೨೦೧೧ ರಲ್ಲಿ ಘೋಷಿಸಿತು.[೬] ವಾಕರ್ ಜುಲೈ ೨೦೧೧ರ ಬ್ರಾಂಡ್ ಹೊಸ ಮುಖವಾಗಿ ಪರಿಚಯಿಸಲಾದರು. ಅವರು ಫಾಸ್ಟ್ ಮತ್ತು ಫ್ಯೂರಿಯಸ್ ಸರಣಿಯ ಐದನೇ ಕಂತು ರಲ್ಲಿ ತನ್ನ ಪಾತ್ರವನ್ನು ಫಾಸ್ಟ್ ಐದು (೨೦೧೧), ಮತ್ತು ಫಾಸ್ಟ್ ಮತ್ತು ಫ್ಯೂರಿಯಸ್ ೬ (೨೦೧೩). ಈ ಚಿತ್ರಕ್ಕೆ ಅವರು ನಟಿಸಿರುವ ವಿನ್ ಡೀಸಲ್ ಅತ್ಯುತ್ತಮ ತೆರೆಯ ಮೇಲಿನ ಜೋಡಿ ೨೦೧೪ ಎಂಟೀವಿ ಮೂವೀ ಪ್ರಶಸ್ತಿ ಗೆದ್ದಿದ್ದಾರೆ.ವೇಯ್ನ್ ಕ್ರಾಮರ್ ರ ಪಾನ್ ಶಾಪ್ ಕ್ರಾನಿಕಲ್ಸ್ ಅವರ ಸಾವಿನ ಮೊದಲು ಬಿಡುಗಡೆಯಾದ ಹಾಗು ಅವರ ಕೊನೆಯ ಚಿತ್ರ.
ಅವರ ಸಾವಿಗೆ ನಂತರ,ಕತ್ರಿನಾ ಚಂಡಮಾರುತ ಆಧಾರಿತ ಚಿತ್ರ ಅವರ್ಸ್ ಅವರು ಮುಂಚೆ ೨೦೧೩ ರಲ್ಲಿ ಪೂರ್ಣಗೊಳಿಸಿದ ಇದು ಡಿಸೆಂಬರ್ ೧೩ ರಂದು ಬಿಡುಗಡೆಯಾಯಿತು. ತನ್ನ ಸಾವಿನ ಸಮಯದಲ್ಲಿ ಏಪ್ರಿಲ್ ೨೦೧೪ ರಲ್ಲಿ, ವಾಕರ್ ಚಿತ್ರೀಕರಣ ಮಾಡಲಾಗಿದ ಫ್ಯೂರಿಯಸ್ ೭ , ಚಿತ್ರ ತನ್ನ ದೇಹದ / ನಿಂತು-ಇನ್ಗಳನ್ನು ಮತ್ತು ಸಿಜಿಐ ಡಬಲ್ಸ್ ಹಿಂದಿರುಗುವುದರಿಂದ ಸಹೋದರರನ್ನು ಕ್ಯಾಲೆಬ್ ಮತ್ತು ಕೋಡಿ ಬಳಸಿಕೊಂಡು ಪೂರ್ಣಗೊಂಡಿತು. ಏಪ್ರಿಲ್ ೨೦೧೫ ರಲ್ಲಿ ಈ ಚಿತ್ರ ಬಿಡುಗಡೆಯಾಯಿತು. ವಾಕರ್ ಏಜೆಂಟ್ ೪೭ ಮತ್ತು ಹಿಟ್ಮ್ಯಾನ್ ಚಿತ್ರ ರೂಪಾಂತರ ಮಾಡಾಬೇಕಾಗಿತ್ತು, ಆದರೆ ಅವರು ನಿಧನರಾದರು.
ವೈಯಕ್ತಿಕ ಜೀವನ
ಬದಲಾಯಿಸಿವಾಕರ್ ಸಾಂಟಾ ಬಾರ್ಬರಾ ದಲ್ಲಿ ವಾಸಿಸುತ್ತಿದ್ದರು.ಅವರ ಪತ್ನಿ ರೆಬೆಕಾ ಸೋಟೀರಿಯೋಸ್, ಮೆಡೊವ್ ವಾಕರ್ ಹೆಸರಿನ ಮಗಳಿದ್ದಾಳೆ.[೭] ೧೩ ವರ್ಷಗಳ ಹವಾಯಿಯಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ ಮತ್ತು ನಂತರ ೨೦೧೧ ರಲ್ಲಿ ವಾಕರ್ ಜೊತೆ ಇರಲು ಕ್ಯಾಲಿಫೋರ್ನಿಯಗೆ ಹೋದರು. ಪಾಲ್ ಸಾವಿನ ನಂತರ ಅವರ ಗಾಡ್ಫಾದರ್ ವಿನ್ ಡೀಸಲ್. ವಾಕರ್ ನ ಆಸಕ್ತಿ ಮೆರೈನ್ ಬಯಾಲಜಿಯಲ್ಲ್ಲಿ ಇತ್ತು.ಅವರು ೨೦೦೬ರಲ್ಲಿ ಬಿಲ್ ಫಿಶ್ ಪ್ರತಿಷ್ಠಾನದ ನಿರ್ದೇಶಕರ ಮಂಡಳಿಯನ್ನು ಅವನು ಸೇರಿಕೊಂಡು ತನ್ನ ಜೀವಮಾನದ ಕನಸು ಪೂರೈಸಿದ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ಜೂನ್ ೨೦೧೦ ರಲ್ಲಿ ಪ್ರದರ್ಶಿತವಾಯಿತು.ಮಾರ್ಚ್ ೨೦೧೦ ರಲ್ಲಿ, ವಾಕರ್ ೨೭ ಫೆಬ್ರವರಿ ೨೦೧೦ರಂದು ಸಂಭವಿಸಿದ ೮.೮ ಪ್ರಮಾಣದ ಭೂಕಂಪದಲ್ಲಿ ಗಾಯಗೊಂಡ ಜನರ ಸಹಾಯ ಮತ್ತು ಬೆಂಬಲ ನೀಡಲು ನೆರವು ತಂಡ ಒಂದು ಸಹಾಯ ಕೈ ನೀಡಲು ವರ್ಲ್ಡ್ ವೈಡ್ ರೀಚ್ ಔಟ್ ಸಂಸ್ತೆಯ ಮೂಲಕ ನೆರವನ್ನು ನೀಡಿದರು.[೮] ವಾಕರ್ ತನ್ನ ಫಾಸ್ಟ್ ಮತ್ತು ಫ್ಯೂರಿಯಸ್ ಸಹನಟ ಟೈರೀಸ್ ಗಿಬ್ಸನ್ ಜೊತೆ ನಿಕಟ ಸ್ನೇಹವಿತ್ತು .ವಿನ್ ಡೀಸಲ್ ಮತ್ತು ವಾಕರ್ ಪರದೆಯ ಹೋರಗೆ ಮತ್ತು ಓಳಗೆ ಸಹೋದರರ ಹಾಗೆ ಪರಿಗಣಿಸುತ್ತಿದ್ದರು ಹಾಗೂ ಪ್ರೀತಿಯಿಂದ "ಪಾಬ್ಲೊ" ಎಂದು ಅವರು ಬಣ್ಣಿಸುತ್ತಿದ್ದರು.ವಾಕರ್ ತಾಯಿ, ಡೀಸೆಲ್ ವಾಕರ್ ನ "ಉಳಿದರ್ಧ"ಎಂದು ಕರೆಯುತ್ತಿದ್ದಳು.
ಮರಣ
ಬದಲಾಯಿಸಿನವೆಂಬರ್ ೩೦,೨೦೧೩, ಸುಮಾರು ೩:೩೦ಕ್ಕೆ ವಾಕರ್ ಮತ್ತು ರೋಜರ್ ರೋಡಸ್, ವರ್ಲ್ಡ್ ವೈಡ್ ರೀಚ್ ಔಟ್ ಇಂದ ತಮ್ಮ ಕೆಂಪು ಪೋರ್ಷೆ ಕರೆರಾ ಜಿಟಿಯಲ್ಲಿ ಹಿಂತಿರುಗುತ್ತಿದ್ದಾಗ,ಅತೀವೇಗದಲ್ಲಿ ಬರುತ್ತಿದ್ದ ಅವರ ಕಾರು ಹರ್ಕ್ಯುಲಸ್ ಸ್ಟ್ರೀಟ್ನ ಕಾಂಕ್ರೀಟ್ ಲಾಂಪೋಸ್ಟ್ ಮತ್ತು ರಸ್ತೆ ಬದಿಯ ಎರಡು ಮರಗಳಿಗೆ ಅಪ್ಪಳಿಸಿತು[೯].ಈ ಅಪಘಾತದಲ್ಲಿ ಪಾಲ್ ವಾಕರ್ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ರೋಡ್ಸ್ ಮರಣವನ್ನಪ್ಪಿದರು.ಮಾರ್ಚ್ ೨೦೧೪ರಲ್ಲಿ ಹೆಚ್ಚಿನ ತನಿಖೆಯನ್ನು ಮಾಡಿದಾಗ ಕಾರಿನ ವೇಗ ಕುಸಿತ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಕಾರು ಗಂಟೆ (೧೩೦ ಕಿ.ಮಿ / ಗಂ) ಪ್ರತಿ ೮೦ ಮೈಲಿ ಮತ್ತು ಗಂಟೆಗೆ ೯೩ ಮೈಲಿ (೧೫೦ ಕಿಮೀ / ಗಂ) ನಡುವೆ ಪ್ರಯಾಣಿಸುತಿತ್ತು ಎಂದು ಹೇಳಲಾಗಿತ್ತು. ಸ್ನೇಹಿತರು ಮತ್ತು ಚಲನಚಿತ್ರ ತಾರೆಯರು ಹಲವಾರು ಸಾಮಾಜಿಕ ಮಾಧ್ಯಮದಲ್ಲಿ ವಾಕರ್ ಗೌರವ ಪೋಸ್ಟ್ ಗಳನ್ನು ಹಾಕಿದರು[೧೦].ಅವರ ದೇಹದ ಅಂತಿಮ ಸಂಸ್ಕಾರವನ್ನು ಫಾರೆಸ್ಟ್ ಲಾನ್ ಮೆಮೊರಿಯಲ್ ಪಾರ್ಕ್ - ಹಾಲಿವುಡ್ ಹಿಲ್ಸ್ನಲ್ಲಿ ಮಾಡಲಾಯಿತು.
ಉಲ್ಲೇಖಗಳು
ಬದಲಾಯಿಸಿ- ↑ https://www.nytimes.com/movies/person/237780/Paul-Walker/biography
- ↑ http://usatoday30.usatoday.com/life/movies/news/2003-06-05-paul-walker_x.htm
- ↑ https://news.google.ca/newspapers?id=ASknAAAAIBAJ&sjid=59AEAAAAIBAJ&pg=4376,3289087&dq=meet-paul-walker&hl=en
- ↑ http://losangeles.cbslocal.com/2013/12/01/stars-react-to-paul-walkers-death-other-crash-victim-identified/
- ↑ http://www.tribute.ca/people/paul-walker/1379/17622/
- ↑ "ಆರ್ಕೈವ್ ನಕಲು". Archived from the original on 2011-07-15. Retrieved 2015-11-04.
- ↑ http://dailyentertainmentnews.com/movies/meadow-walker-paul-walkers-daughter/
- ↑ https://www.roww.org/
- ↑ "ಆರ್ಕೈವ್ ನಕಲು". Archived from the original on 2015-10-21. Retrieved 2015-11-04.
- ↑ http://www.nzherald.co.nz/entertainment/news/article.cfm?c_id=1501119&objectid=11165594