ಪಾರ್ಲೆ-ಜಿ
ಮಾಲೀಕರುಪಾರ್ಲೆ ಉತ್ಪನ್ನಗಳು
ದೇಶಭಾರತ
ಪರಿಚಯಿಸಲಾಗಿದೆ೧೯೩೯
ಮಾರುಕಟ್ಟೆಪ್ರಪಂಚದಾದ್ಯಂತ
ಜಾಲತಾಣparleproducts.com

ಪಾರ್ಲೆ-ಜಿ ಎಂಬುದು ಭಾರತದಲ್ಲಿ ಪಾರ್ಲೆ ಉತ್ಪನ್ನಗಳು ತಯಾರಿಸಿದ ಬಿಸ್ಕತ್ತುಗಳ ಬ್ರಾಂಡ್ ಆಗಿದೆ. ೨೦೧೧ರ ನೀಲ್ಸನ್ ಸಮೀಕ್ಷೆಯು ವಿಶ್ವದಲ್ಲೇ ಹೆಚ್ಚು ಮಾರಾಟವಾದ ಬಿಸ್ಕತ್ತುಗಳ ಬ್ರ್ಯಾಂಡ್ ಎಂದು ವರದಿ ಮಾಡಿದೆ. [] [] []

ಇತಿಹಾಸ

ಬದಲಾಯಿಸಿ

ಪಾರ್ಲೆ ಉತ್ಪನ್ನಗಳನ್ನು ೧೯೨೯ ರಲ್ಲಿ ಮುಂಬೈನ ವೈಲ್ ಪಾರ್ಲೆ ಉಪನಗರದಲ್ಲಿ ಮಿಠಾಯಿ ತಯಾರಿಸಲು ಸ್ಥಾಪಿಸಲಾಗಿತ್ತು. ಪಾರ್ಲೆ ಉತ್ಪನ್ನಗಳು ೧೯೩೯ ರಲ್ಲಿ ಬಿಸ್ಕತ್ತುಗಳನ್ನು ತಯಾರಿಸಲು ಪ್ರಾರಂಭಿಸಿದವು. ೧೯೪೭ ರಲ್ಲಿ, ಭಾರತ ಸ್ವತಂತ್ರವಾದಾಗ, ಕಂಪನಿಯು ತನ್ನ ಗ್ಲುಕೋ ಬ್ರಾಂಡ್ ಬಿಸ್ಕತ್ತುಗಳನ್ನು ಬ್ರಿಟಿಷ್-ಬ್ರಾಂಡ್ ಬಿಸ್ಕತ್ತುಗಳ ಭಾರತೀಯ ಪರ್ಯಾಯ ಎಂದು ಪ್ರದರ್ಶಿಸುವ ಜಾಹೀರಾತುಗಳನ್ನು ಪ್ರಾರಂಭಿಸಿತು. []

 
೧೯೪೭ರ ಜಾಹೀರಾತು

ಪಾರ್ಲೆ-ಜಿ ಬಿಸ್ಕತ್ತುಗಳನ್ನು ೧೯೮೦ರ ವರೆಗೆ ಪಾರ್ಲೆ ಗ್ಲುಕೋ ಬಿಸ್ಕತ್ತು ಎಂದು ಕರೆಯಲಾಗುತ್ತಿತ್ತು. ಪಾರ್ಲೆ-ಜಿ ಹೆಸರಿನಲ್ಲಿರುವ "ಜಿ" ಮೂಲತಃ " ಗ್ಲೂಕೋಸ್ " ಅನ್ನು ಸೂಚಿಸುತ್ತದೆ, ಆದರೂ ನಂತರ ಬಂದ ಘೋಷಣೆಯು "ಜಿ ಫಾರ್ ಜೀನಿಯಸ್" ಎಂದು ಹೇಳುತ್ತದೆ. []

೨೦೧೩ರಲ್ಲಿ, ಪಾರ್ಲೆ-ಜಿಯು ರೀಟೇಲ್ ಮಾರಾಟದಲ್ಲಿ ೫೦ ಬಿಲಿಯನ್ ಗಡಿ ದಾಟಿದ ಭಾರತದ ಮೊದಲ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ ಬ್ರ್ಯಾಂಡ್ ಆಯಿತು. []

ಜನಪ್ರಿಯತೆ

ಬದಲಾಯಿಸಿ

ಪಾರ್ಲೆ-ಜಿ ಭಾರತದ ಅತ್ಯಂತ ಹಳೆಯ ಬ್ರಾಂಡ್ ಹೆಸರುಗಳಲ್ಲಿ ಒಂದಾಗಿದೆ. ದಶಕಗಳವರೆಗೆ, ಉತ್ಪನ್ನವು ಅದರ ಸಾಂಪ್ರದಾಯಿಕ ಬಿಳಿ ಮತ್ತು ಹಳದಿ ಮೇಣದ ಕಾಗದದ ಹೊದಿಕೆಯಿಂದ ತಕ್ಷಣವೇ ಗುರುತಿಸಲ್ಪಡುತಿತ್ತು. ಹೊದಿಕೆಯು ಚಿಕ್ಕ ಹುಡುಗಿಯ ಚಿತ್ರವನ್ನು ಒಳಗೊಂಡಿದೆ (೧೯೬೦ ರ ದಶಕದಲ್ಲಿ ಎವರೆಸ್ಟ್ ಕ್ರಿಯೇಟಿವ್ ಮಗನ್ಲಾಲ್ ದಯಾ ಅವರಿಂದ ಚಿತ್ರಿತ). []

.ಪಾರ್ಲೆ-ಜಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಹೊದಿಕೆಗಳಲ್ಲಿ ಲಭ್ಯವಿದೆ. ಆಧುನಿಕ ಹೊದಿಕೆಯೂ ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಉಳಿಸಿಕೊಂಡಿದೆ. ಮೀನಿನ ತೊಟ್ಟಿಯಲ್ಲಿ ಇರಿಸಲಾಗಿರುವ ಪಾರ್ಲೆ-ಜಿ ಪ್ಯಾಕೆಟ್ ಅನ್ನು ತೋರಿಸುವ ಜಾಹೀರಾತುಗಳೊಂದಿಗೆ ವಸ್ತುಗಳ ಬದಲಾವಣೆಯ ಪ್ರಚಾರ ಮಾಡಲಾಯಿತು. ೨೦೧೧ರಲ್ಲಿ, ಮಾರುಕಟ್ಟೆ ಸಂಶೋಧನಾ ಕಂಪನಿಯಾದ ನೀಲ್ಸನ್, "ಪಾರ್ಲೆ-ಜಿಯು ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ" ಎಂದು ವರದಿಯನ್ನು ಪ್ರಕಟಿಸಿತು. ವಾಸ್ತವವಾಗಿ, ಪಾರ್ಲೆ ಜಿ ಇತರ ಪ್ರಮುಖ ಬ್ರ್ಯಾಂಡ್‌ಗಳಾದ ಕ್ರಾಫ್ಟ್ ಫುಡ್ಸ್‌ನ ಓರಿಯೊ, ಮೆಕ್ಸಿಕೊದ ಗೇಮ್ಸಾ ಮತ್ತು ವಾಲ್‌ಮಾರ್ಟ್‌ನ ಖಾಸಗಿ ಲೇಬಲ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ಯಶಸ್ಸಿಗೆ ಪ್ರಮುಖ ಕಾರಣವೇನೆಂದರೆ ಭಾರತವು ಬಿಸ್ಕೆಟ್‌ಗಳಿಗೆ ವಿಶ್ವದ ಪ್ರಮುಖ ಮಾರುಕಟ್ಟೆಯಾಗಿದೆ, ಇದು ವಿಶ್ವದ ಕೆಲವು ದೊಡ್ಡ ಮಾರುಕಟ್ಟೆಗಳನ್ನು(ಯುಎಸ್ , ಮೆಕ್ಸಿಕೋ ,ಚೀನಾ ,ಇಟಲಿ ಮತ್ತು ಸ್ಪೇನ್) ದಾಟಿದೆ []

ಜನವರಿ ೨೦೧೩ರ ಹೊತ್ತಿಗೆ, ಪಾರ್ಲೆ-ಜಿಯ ಬಲವಾದ ವಿತರಣಾ ಜಾಲವು ಭಾರತದಲ್ಲಿ ೬ ಮಿಲಿಯನ್ ಅಂಗಡಿಗಳನ್ನು ಒಳಗೊಂಡಿದೆ. [] ಬ್ರಾಂಡ್ ಟ್ರಸ್ಟ್ ವರದಿಯು ೨೦೧೪ರಲ್ಲಿ ಪಾರ್ಲೆ-ಜಿಯನ್ನು ಭಾರತದ ೪೨ನೇ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎಂದು ಶ್ರೇಣೀಕರಿಸಿದೆ [೧೦]

ಕಡಿಮೆ ಬೆಲೆಯು ಪಾರ್ಲೆ-ಜಿ ಜನಪ್ರಿಯತೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಭಾರತದ ಹೊರಗೆ, ೨೦೧೨ರಲ್ಲಿ ಇದನ್ನು ೯೯ ಸೆಂಟ್‌ಗಳಿಗೆ ೪೧೮ ಗ್ರಾಂ ನ ಪ್ಯಾಕ್ ಮಾರಾಟ ಮಾಡಲಾಗುತ್ತಿತ್ತು. ಹೆಚ್ಚು ಸಾಮಾನ್ಯವಾದ ೬೫-ಗ್ರಾಂ "ಸ್ನ್ಯಾಕ್ ಪ್ಯಾಕ್" ಅನ್ನು ಭಾರತದಲ್ಲಿನ ಕಿರಾಣಿ ಅಂಗಡಿಗಳಲ್ಲಿ ₹೩ (೪ ಸೆಂಟ್ಸ್ USD) ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ ಮತ್ತು ಯುಎಸ್ಎ ನಲ್ಲಿರುವ ಭಾರತೀಯ ದಿನಸಿಗಳ ಪ್ರಮುಖ ಚಿಲ್ಲರೆ ವ್ಯಾಪಾರಿಗಳಲ್ಲಿ ೪೦ ಸೆಂಟ್‌ಗಳಿಗೆ ಮಾರಾಟವಾಗುತ್ತದೆ. ಎರಡು ಪಾರ್ಲೆ-ಜಿ ಬಿಸ್ಕತ್ತುಗಳನ್ನು ಹೊಂದಿರುವ ಪ್ಯಾಕ್‌ಗಳನ್ನು ಸಹ ಮಾರಾಟ ಮಾಡಲಾಗುತ್ತದೆ. [೧೧] [೧೨] ೨೦೧೬ ರ ಹೊತ್ತಿಗೆ, ೫೬.೪-ಗ್ರಾಂನ ಸಣ್ಣ ಪ್ಯಾಕ್‌ಗಳನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭಾರತೀಯ ದಿನಸಿ ಅಂಗಡಿಗಳಲ್ಲಿ ಒಂದು ಡಾಲರ್‌ಗೆ ಎಂಟು ಎಂದು ಮಾರಾಟ ಮಾಡಲಾಯಿತು. ಪಾರ್ಲೆ-ಜಿಗಾಗಿ ಮೊದಲ ಟಿವಿ ಜಾಹೀರಾತನ್ನು ೧೯೮೨ ರಲ್ಲಿ ಮಾಡಲಾಯಿತು. ಭಾರತೀಯ ಸೂಪರ್ ಹೀರೋ ಶಕ್ತಿಮಾನ್ ಕೂಡ ೧೯೯೦ರ ದಶಕದಲ್ಲಿ ಈ ಬ್ರ್ಯಾಂಡ್‌ಗಾಗಿ ಜಾಹೀರಾತು ನೀಡಿದ್ದರು . [೧೨] [೧೩]

ಹೆಚ್ಚಿನ ಓದುವಿಕೆ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Parle-G world's No 1 selling biscuit: Nielsen". 3 March 2011. Archived from the original on 14 July 2012. Retrieved 12 October 2011.
  2. "The worldwide success of Parle-G". The Michigan Daily (in ಅಮೆರಿಕನ್ ಇಂಗ್ಲಿಷ್). 2021-11-16. Archived from the original on 2022-10-23. Retrieved 2022-05-31.
  3. "Made in India: Biscuit manufacturer". BBC News (in ಬ್ರಿಟಿಷ್ ಇಂಗ್ಲಿಷ್). Archived from the original on 2022-05-31. Retrieved 2022-05-31.
  4. Jill Didur (2006). Unsettling partition: literature, gender, memory. University of Toronto Press. p. 22. ISBN 978-0-8020-7997-8.
  5. "Parle-G Glucose Biscuits". Archived from the original on 2015-08-21.
  6. 72-year-old biscuit pioneer, Parle-G becomes India’s first homegrown Rs 5K crore FMCG brand Archived 2023-12-01 ವೇಬ್ಯಾಕ್ ಮೆಷಿನ್ ನಲ್ಲಿ.. Economic Times, 13 February 2013.
  7. Shephali Bhatt (October 30, 2013). "The Chronicles of Parle-G". Economic Times. Archived from the original on December 16, 2018. Retrieved December 13, 2018.
  8. "Parle G is the largest selling biscuit brand in the world !". EDUINDEX NEWS (in ಇಂಗ್ಲಿಷ್). 2020-07-24. Archived from the original on 2023-07-01. Retrieved 2022-04-26.
  9. Will Parle-G be relevant to the next generation? Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. by Preethi Chamikutty. Economic Times, 16 January 2013.
  10. "India's Most Trusted Brands 2014". Archived from the original on May 2, 2015.
  11. Tripathi, Dhirendra (2020-06-09). "Parle-G, coronavirus and the millions who ate that biscuit as they went home". mint (in ಇಂಗ್ಲಿಷ್). Archived from the original on 2021-01-21. Retrieved 2021-01-15.
  12. ೧೨.೦ ೧೨.೧ 10 Unknown Facts About Parle-G, The Largest Selling Biscuit Brand In The World Archived 2023-12-24 ವೇಬ್ಯಾಕ್ ಮೆಷಿನ್ ನಲ್ಲಿ. by Postoast. Jan 14, 2019 - Uploaded by Doordarshan National Blog.
  13. "Parle-G: The journey of a biscuit for masses". The Economic Times. Archived from the original on 2022-05-31. Retrieved 2022-05-31.