ಪಾಮನಕಲ್ಲೂರು

ಭಾರತ ದೇಶದ ಗ್ರಾಮಗಳು

ಪಾಮನಕಲ್ಲೂರು ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಪಾಮನಕಲ್ಲೂರು ಮಾನ್ವಿ ಪಟ್ಟಣಕ್ಕೆ ವಾಯುವ್ಯದಲ್ಲಿದೆ. ಪಾಮನಕಲ್ಲೂರು ರಾಯಚೂರು ಮತ್ತು ಬಾಗಲಕೋಟೆಯನ್ನು ಸಂಪರ್ಕಿಸುವ ರಸ್ತೆಯಲ್ಲಿದೆ. ಇದು ಜಿಲ್ಲಾ ಕೇಂದ್ರ ರಾಯಚೂರಿನಿಂದ ಪಶ್ಚಿಮಕ್ಕೆ ೫೧ ಕಿಮೀ ದೂರದಲ್ಲಿದೆ.[]

ಪಾಮನಕಲ್ಲೂರು
ಗ್ರಾಮ
ಪಾಮನಕಲ್ಲೂರು is located in Karnataka
ಪಾಮನಕಲ್ಲೂರು
ಪಾಮನಕಲ್ಲೂರು
ಪಾಮನಕಲ್ಲೂರು is located in India
ಪಾಮನಕಲ್ಲೂರು
ಪಾಮನಕಲ್ಲೂರು
Coordinates: 16°6′9″N 76°40′33″E / 16.10250°N 76.67583°E / 16.10250; 76.67583
ದೇಶ India
ರಾಜ್ಯಕರ್ನಾಟಕ
ಜಿಲ್ಲೆರಾಯಚೂರು ಜಿಲ್ಲೆ
ತಾಲ್ಲೂಕುಮಾನ್ವಿ
Population
 (೨೦೧೧)
 • Total೩೨೦೦
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (ಐಎಸ್‌ಟಿ)
ಪಿನ್ ಕೋಡ್
೫೮೪ ೧೨೦ []
ದೂರವಾಣಿ ಕೋಡ್೦೮೫೩೮
Vehicle registrationಕೆಎ ೩೬

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

೨೦೦೧ ರ ಭಾರತದ ಜನಗಣತಿಯ ಪ್ರಕಾರ, ಪಾಮನಕಲ್ಲೂರು ೨,೯೮೬ ಜನಸಂಖ್ಯೆಯನ್ನು ಹೊಂದಿತ್ತು. ಅದರಲ್ಲಿ ೧,೪೭೯ ಪುರುಷರು ಮತ್ತು ೧,೫೦೭ ಮಹಿಳೆಯರು ಮತ್ತು ೫೪೦ ಕುಟುಂಬಗಳು ಇದ್ದವು.[]

೨೦೧೧ ರ ಜನಗಣತಿಯ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣ ೧೯೫೩.೪೪ ಹೆಕ್ಟೇರ್. ಪಾಮನಕಲ್ಲೂರು ಒಟ್ಟು ೩,೨೦೦ ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ ಪುರುಷ ಜನಸಂಖ್ಯೆ ೧,೬೦೬ ಮತ್ತು ಮಹಿಳೆಯರ ಜನಸಂಖ್ಯೆ ೧,೫೯೪ ಆಗಿದೆ. ಪಾಮನಕಲ್ಲೂರು ಗ್ರಾಮದ ಸಾಕ್ಷರತೆ ಪ್ರಮಾಣ ೫೧.೪೧% ಇದರಲ್ಲಿ ೬೨.೧೪% ಪುರುಷರು ಮತ್ತು ೪೦.೫೯% ಮಹಿಳೆಯರು ಸಾಕ್ಷರರಾಗಿದ್ದಾರೆ. ಪಾಮನಕಲ್ಲೂರು ಗ್ರಾಮದಲ್ಲಿ ಸುಮಾರು ೬೦೫ ಮನೆಗಳಿವೆ.[] ಪಾಮನಕಲ್ಲೂರಿನ ಪಿನ್‌ಕೋಡ್‌ ೫೮೪ ೧೨೦ ಆಗಿದೆ.[]

ಶ್ರೀ ಆದಿ ಬಸವೇಶ್ವರ ದೇವಸ್ಥಾನ

ಬದಲಾಯಿಸಿ
 
ಶ್ರೀ ಆದಿ ಬಸವೇಶ್ವರ ದೇವಸ್ಥಾನ ಪಾಮನಕಲ್ಲೂರು

ಪಾಮನಕಲ್ಲೂರಿನಲ್ಲಿ ಶ್ರೀ ಆದಿ ಬಸವೇಶ್ವರ ದೇವಸ್ಥಾನವಿದೆ.[] ಇಲ್ಲಿ ಪ್ರತಿವರ್ಷವೂ ಬಸವೇಶ್ವರ ಜಯಂತಿಯ ದಿನದಂದು ಶ್ರೀ ಆದಿ ಬಸವೇಶ್ವರ ಜಾತ್ರೆಯನ್ನು ಆಚರಿಸಲಾಗುತ್ತದೆ. ಇಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಜಾತ್ರೆಯ ನಿಮಿತ್ಯ ಹಮ್ಮಿಕೊಳ್ಳಲಾಗುತ್ತಿದೆ. ಅಂದು ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ, ಅಮಾವಾಸ್ಯೆಯ ದಿನಗಳಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ವರ್ಷವೂ ಶ್ರೀಶೈಲಕ್ಕೆ ಪಾದ ಯಾತ್ರೆ ಮಾಡುವ ಭಕ್ತಾದಿಗಳಿಗೆ ಇಲ್ಲಿ ಅನ್ನ ದಾಸೋಹವನ್ನು ಸುಮಾರು ಒಂದು ವಾರದವರೆಗೂ ನಡೆಸಿಕೊಂಡು ಬರಲಾಗುತ್ತದೆ.

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://news.abplive.com/pincode/karnataka/raichur/pamankallur-pincode-584120.html
  2. https://www.onefivenine.com/india/villages/Raichur/Manvi/Pamanakallur
  3. "Census of India: View Population Details". Censusindia.gov.in. Retrieved 2012-12-27.
  4. https://villageinfo.in/karnataka/raichur/manvi/pamankallur.html
  5. https://news.abplive.com/pincode/karnataka/raichur/pamankallur-pincode-584120.html
  6. https://www.justdial.com/Raichur/sri-adi-basaveshwara-temple-Raichur-Hyderabad-Road/9999P8532-8532-221203005921-X3Z6_BZDET?srcterm=sri%2520adi%2520basaveshwara%2520temple&predocid=9999P8532.8532.180309232044.B7X6