ಪಾಪಮ್ಮ
ಪಾಪಮ್ಮ ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಪೋಷಕ ನಟಿ.[೧]
೧೯೫೮ರಲ್ಲಿ ಬಿಡುಗಡೆಯಾದ ಅಣ್ಣ ತಂಗಿ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಪಾಪಮ್ಮ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅನೇಕ ಚಿತ್ರಗಳಲ್ಲಿ ಘಟವಾಣಿ ಅತ್ತೆ, ಅಮ್ಮ ಮುಂತಾದ ಪಾತ್ರಗಳಿಂದ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾಗಿದ್ದಾರೆ. ರಾಜ್ ಕುಮಾರ್ ಅವರ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಸಿದ್ದಲಿಂಗಯ್ಯ ಸಿರ್ದೇಶನದ ತಾಯಿ ದೇವರು(೧೯೭೧), ನ್ಯಾಯವೇ ದೇವರು(೧೯೭೧), ನಮ್ಮ ಸಂಸಾರ(೧೯೭೧) ಮತ್ತು ದೂರದ ಬೆಟ್ಟ(೧೯೭೩) ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ. ದುಡ್ಡೇ ದೊಡ್ಡಪ್ಪ(೧೯೬೬), ಮಾರ್ಗದರ್ಶಿ(೧೯೬೯) ಮುಂತಾದ ಚಿತ್ರಗಳಲ್ಲಿ ಮೃದು ಸ್ವಭಾವದ ಪಾತ್ರಗಳಲ್ಲಿಯೂ ಭಾವಪೂರ್ಣ ಅಭಿನಯ ನೀಡಿದ್ದಾರೆ.
೧೯೮೭ರಲ್ಲಿ ಬಿಡುಗಡೆಯಾದ ಮನ ಮೆಚ್ಚಿದ ಹುಡುಗಿ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.[೨].
ಉಲ್ಲೇಖಗಳು
ಬದಲಾಯಿಸಿ- ↑ "ಪಾಪಮ್ಮ". ಚಿಲೋಕ.ಕಾಮ್.
- ↑ "ಕರ್ನಾಟಕ ಸರ್ಕಾರದ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದವರ ಪಟ್ಟಿ". ವಿಕಿಪೀಡಿಯ.