ಪಾದುಕೆ

ದಕ್ಷಿಣ ಏಷ್ಯಾದ ಪಾದರಕ್ಷೆಗಳು

ಪಾದುಕೆಯು ಭಾರತದ ಅತ್ಯಂತ ಹಳೆಯ, ಸರ್ವೋತೃಷ್ಟ ಪಾದರಕ್ಷೆಯಾಗಿದೆ. ಇದು ಬಹಳ ಸರಳವಾಗಿದ್ದು ಒಂದು ಅಟ್ಟೆ, ಮೇಲೆ ಆಧಾರ ಮತ್ತು ಹೆಬ್ಬೆಟ್ಟು ಹಾಗೂ ಎರಡನೇ ಕಾಲ್ಬೆರಳಿನ ನಡುವೆ ಬಳಸಲ್ಪಡುವ ಗುಬಟನ್ನು ಹೊಂದಿರುತ್ತದೆ. ಇದನ್ನು ಐತಿಹಾಸಿಕವಾಗಿ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದಲ್ಲಿ ಧರಿಸಲಾಗಿದೆ.

ಮದುಮಗಳ ಪಾದುಕೆಗಳು.[]

ಇದು ಭಾರತದಾದ್ಯಂತ ಅನೇಕ ರೂಪಗಳು ಹಾಗೂ ವಸ್ತುಗಳಲ್ಲಿ ಅಸ್ತಿತ್ವದಲ್ಲಿದೆ. ಇವುಗಳನ್ನು ನೈಜ ಪಾದಗಳ ಆಕಾರದಲ್ಲಿ ಅಥವಾ ಮೀನಿನ ಆಕಾರದಲ್ಲಿ ನಿರ್ಮಿಸಿರಬಹುದು. ಇವುಗಳನ್ನು ಸಾಮಾನ್ಯವಾಗಿ ಕಟ್ಟಿಗೆ, ದಂತ ಹಾಗೂ ಬೆಳ್ಳಿಯಿಂದ ಕೂಡ ನಿರ್ಮಿಸಲಾಗಿರುತ್ತದೆ. ಕೆಲವೊಮ್ಮೆ ಇವನ್ನು ಸಂಕೀರ್ಣವಾಗಿ ಅಲಂಕರಿಸಿರಬಹುದು.

ಇಂದು ಪಾದುರಕ್ಷೆಯಾಗಿ ಪಾದುಕೆಯನ್ನು ಸಾಮಾನ್ಯವಾಗಿ ಹಿಂದೂ, ಬೌದ್ಧ ಹಾಗೂ ಜೈನ ಧರ್ಮದ ಬೈರಾಗಿಗಳು ಹಾಗೂ ಸಂತರು ಧರಿಸುತ್ತಾರೆ. ಹಿಂದೂ ಧರ್ಮದಲ್ಲಿ ಇದರ ಮಹತ್ವವು ರಾಮಾಯಣ ಮಹಾಕಾವ್ಯಕ್ಕೆ ಸಂಪರ್ಕ ಹೊಂದಿದೆ. "ಪಾದುಕೆ" ಶಬ್ದವು ಪೂಜಿಸಲ್ಪಡುವ ದೇವತೆಗಳು ಹಾಗೂ ಸಂತರ ಹೆಜ್ಜೆಗುರುತುಗಳನ್ನೂ ಸೂಚಿಸಬಹುದು.[][]

ಉಲ್ಲೇಖಗಳು

ಬದಲಾಯಿಸಿ
  1. "britishmuseum.org". Archived from the original on 2015-10-25. Retrieved 2019-09-23.
  2. "The Paduka". Archived from the original on 2009-12-29. Retrieved 2009-12-26.
  3. "Paduka". Fashion Encyclopedia. Archived from the original on 2 February 2010. Retrieved 2009-12-26. {{cite web}}: Unknown parameter |dead-url= ignored (help)


"https://kn.wikipedia.org/w/index.php?title=ಪಾದುಕೆ&oldid=1168001" ಇಂದ ಪಡೆಯಲ್ಪಟ್ಟಿದೆ