ಎಂ.ಬಿ.ಪಾಟೀಲ

(ಪಾಟೀಲ ಮಲ್ಲನಗೌಡ ಬಸನಗೌಡ ಇಂದ ಪುನರ್ನಿರ್ದೇಶಿತ)

ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ಸಂಸದರು, ಬಿ.ಎಲ್.ಡಿ.ಈ.ಸಂಸ್ಥೆಯ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

ಎಂ.ಬಿ.ಪಾಟೀಲ(ಮಲ್ಲನಗೌಡ ಬಸನಗೌಡ ಪಾಟೀಲ)
ಎಂ.ಬಿ.ಪಾಟೀಲ
ಜನನ7ನೇ ಅಕ್ಟೋಬರ 1964
ವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಎಂ.ಬಿ.ಪಾಟೀಲರು 7ನೇ ಅಕ್ಟೋಬರ 1964ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ
  • ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಜಯಪುರದ ದರಬಾರ ಪ್ರೌಢ ಶಾಲೆಯಲ್ಲಿ ಪಡೆದಿದ್ದಾರೆ.

ರಾಜಕೀಯ

ಬದಲಾಯಿಸಿ
  • 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ 27ನೇ ವಯಸ್ಸಿನಲ್ಲಿ ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ಬಿ.ಪಾಟೀಲರು ಸ್ಪರ್ಧಿಸಿ ಪ್ರಥಮ ಬಾರಿಗೆ ಬಾರಿಗೆ ವಿಧಾನಸಭೆ ಪ್ರವೇಶ.
  • 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
  • 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.
  • ಎಐಸಿಸಿ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯರಾಗಿದ್ದರು.
  • 1990ರಿಂದ 2005ರ ವರೆಗೆ ಬಿ.ಎಲ್‌.ಡಿ.ಇ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹುದ್ದೆ, 2005ರಿಂದ ಬಿ.ಎಲ್‌.ಡಿ.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಚಿವರು

ಬದಲಾಯಿಸಿ
  • 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
  • 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು.[]

ವೈಯಕ್ತಿಕ ಜೀವನ

ಬದಲಾಯಿಸಿ

ಶ್ರೀಯುತರು ಆಶಾ ಪಾಟೀಲಯವರನ್ನು ಮದುವೆಯಾಗಿದ್ದು, ಬಸನಗೌಡ ಹಾಗೂ ಧ್ರುವ ಎಂಬ ಇಬ್ಬರು ಮಕ್ಕಳಿದ್ದು ವಿಜಯಪುರದಲ್ಲಿ ವಾಸವಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2018-12-28. Retrieved 2018-12-27.