ಭಾರತೀಯ ಉಪಭಾಷೆಗಳಲ್ಲಿ ಪಹಾಡಿ ಭಾಷೆಯೂ ಒಂದು. ಪಹಾಡಿ ಪದವು ಹಿಂದಿ ಭಾಷೆ ಮತ್ತು ನೆಪಾಲಿ ಭಾಷೆಯಲ್ಲಿ ಬಳಕೆಯಲ್ಲಿದೆ. ಪಹಾಡಿ ಎಂದರೆ ಪರ್ವತ ಅಥವ ಪರ್ಬತ ಎಂದರ್ಥ.ಹಿಮಾಲಯ, ಕಾಶ್ಮೀರ ಮತ್ತು ನೆಪಾಲದ ಕಣಿವೆಗಳಲ್ಲಿ ಪಹಾಡಿ ಭಾಷೆ ಪ್ರಚಲಿತದಲ್ಲಿದೆ. ಪಹಾಡಿ ಭಾಷೆಯು ಭಾರತಕ್ಕೆ ವಲಸೆ ಬಂದ ಆರ್ಯ ಜನಾಂಗದ ಬಳುವಳಿಯಾಗಿದೆ. ಜಾರ್ಜ ಅಬ್ರಹಮ್ ಗ್ರಿಯರ್ಸನ್ ರವರ ಪ್ರಕಾರ, ಇಂಡೊ- ಆರ್ಯನ್ ಭಾಷೆಯನ್ನು ೩ ಪ್ರವರ್ಗಗಳಾಗಿ ವಿಂಗಡಿಸಬಹುದು. - ಪೂರ್ವ ಪಹಾಡಿ ಭಾಷೆ (ನೆಪಾಲಿ), ಮಧ್ಯ ಪಹಾಡಿ ಭಾಷೆ (ಕುಮೌನಿ ಮತ್ತು ಘಡವಾಲಿ ಉಪಬಾಷೆಗಳು) ಮತ್ತು ಪಶ್ಚಿಮಿ ಪಹಾಡಿ ಭಾಷೆ (ಸತ್ಲಜ್,ಕುಲು,ಮಂಡಿ,ಚಂಬ ಪಂಗಡದವರ ಭಾಷೆ.......)ಅಂದಿನ ಖಷ ಸಾಮ್ರಾಜ್ಯವು , ಇಂದಿನ ಹಿಮಾಲಯವನ್ನು[] ಒಳಗೊಂಡಂತೆ ಕಾಶ್ಮೀರ ಟಿಬೇಟ್ ಮತ್ತು ಪೂರ್ವ ನೆಪಾಲದವರೆಗೆ ಹರಡಿತ್ತು.ಪಹಾಡಿ, ಖಷ ಜನಾಂಗದ ಅಧಿಕೃತ ಭಾಷೆಯಾಗಿತ್ತು ಎನ್ನಲಾಗುತ್ತದೆ. ಆದರೆ ಇದಕ್ಕೆ ಯಾವುದೇ ಲಿಖಿತ ಪುರಾವೆಗಳಿಲ್ಲ.

ಡೆಹರಾಡೂನ್ ಜಿಲ್ಲೆಯ ಕಳಸಿ ಬಳಿ ಕ್ರಿ. ಪೂ. ೩ ನೇ ಶತಮಾನದಲ್ಲಿ ಮೌರ್ಯ ದೊರೆ ಅಶೋಕ ಕೆತ್ತಿಸಿದ ಎನ್ನಲಾಗುತ್ತಿರುವ ೧೪ ಶಿಲಾಶಾಸನಗಳು ದೊರೆತಿವೆ. ಇವುಗಳಲ್ಲಿ ಮೊದಲಬಾರಿಗೆ ಪಹಾಡಿ ಭಾಷೆಯ ಉಲ್ಲೇಖಗಳನ್ನು ಕಾಣಬಹುದು. ಈ ಶಾಸನದಲ್ಲಿ ಶಕಾದ ಬದಲಾಗಿ ಷ ಅಕ್ಷರವನ್ನು ಪದೆ ಪದೆ ಬಳಸಲಾಗಿದೆ. ಇದು ಪಹಾಡಿ ಭಾಷೆಯ ಮೂಲ ಗುಣ. ಇಂದಿಗೂ ಸಹ ಉತ್ತರಖಂಡ ಪ್ರಾಂತ್ಯದ ಜನ ಮಾತನಾಡುವಾಗ ಶ ಷ ಸ ಅಕ್ಷರಗಳನ್ನು ಒಂದರ ಬದಲಾಗಿ ಮತ್ತೊಂದನ್ನು ಬಳಸುವುದು ಚಾಲ್ತಿಯಲ್ಲಿದೆ. ಪಹಾಡಿ ಭಾಷೆಯಲ್ಲಿ ಸ ವರ್ಗದ ಅಕ್ಷರಗಳಿಗೆ ಒಂದಕ್ಕಿಂತ ಹೆಚ್ಚು ಉಚ್ಚಾರಣೆಗಳು ಕಂಡುಬರುತ್ತವೆ. ಒಂದೇ ವರ್ಗಕ್ಕೆ ಸೇರಿದ ಅಕ್ಷರಗಳನ್ನು ಒಂದರ ಬದಲಾಗಿ ಬಳಸುವುದು ರೂಢಿಯಲ್ಲಿದೆ. ಮುಖ್ಯವಾಗಿ ಯ ವರ್ಗದ ಅಕ್ಷರಗಳಲ್ಲಿ (ಯ ರ ಲ ವ ಶ ಷ ಸ ಹ ಳ) ರ ಅಕ್ಷರದ ಳ ಅಕ್ಷರದ ಬದಲಾಗಿ ಬಳಸಲಾಗುತ್ತದೆ. ಕ್ರಿ.ಶ. ೩ನೇ ಶತಮಾನದ ಕುನಿಂದ ನಾಣ್ಯದ ಮೇಲೆ ಭಾಗವತ ಚತ್ರೇಶ್ವರ ಮಹಾತ್ಮ ಎಂದಿದೆ. ಚತ್ರೇಶ್ವರ ಎಂದರೆ ಛತ್ರದ ಅಧಿಪತಿ ಎಂದು ಅರ್ಥ ಬರುತ್ತದೆ. ಇಲ್ಲಿ ಛ ಬದಲಿಗೆ ಚ ಬಳಕೆಯಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-10-06. Retrieved 2019-10-06.