ಅನುತಾಪ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಕನಿಕರ ಲೇಖನಕ್ಕಾಗಿ ಇಲ್ಲಿ ನೋಡಿ.

ಪಶ್ಚಾತ್ತಾಪ ತಮ್ಮ ಕ್ರಿಯೆಗಳನ್ನು ಪರಿಶೀಲಿಸುವ ಚಟುವಟಿಕೆ ಮತ್ತು ಹಿಂದಿನ ತಪ್ಪುಗಳಿಗಾಗಿ ಪರಿತಾಪ ಅಥವಾ ವಿಷಾದ ಅನಿಸುವುದು. ಇಂದು, ಅದನ್ನು ಸಾಮಾನ್ಯವಾಗಿ ವೈಯಕ್ತಿಕ ಬದಲಾವಣೆಗೆ ಬದ್ಧತೆಯನ್ನು ಒಳಗೊಂಡಿರುವುದು ಮತ್ತು ಹೆಚ್ಚು ಜವಾಬ್ದಾರಿಯುತ ಹಾಗೂ ಮಾನವೀಯ ಜೀವನ ನಡೆಸುವ ಸಂಕಲ್ಪ ಎಂದು ಕಾಣಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತಮ್ಮ ತಪ್ಪುಗಳಿಗಾಗಿ ವಿಷಾದವಿರುವುದು. ಆದರೆ, ಅದು ಒಬ್ಬ ವ್ಯಕ್ತಿಯು ತಾನು ಮಾಡಿದ್ದೇನೆ ಎಂದು ಅನಿಸಿದ ಒಂದು ನಿರ್ದಿಷ್ಟ ಪಾಪ ಅಥವಾ ಪಾಪಗಳ ಸರಣಿಗಾಗಿ ದುಃಖವನ್ನೂ ಒಳಗೊಳ್ಳಬಹುದು. ಪಶ್ಚಾತ್ತಾಪದ ಆಚರಣೆ ಯಹೂದೀ ಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಮ್‍ನ ಮೋಕ್ಷದ ಸಿದ್ಧಾಂತಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ, ಮತ್ತು ಈ ಧರ್ಮಗಳಲ್ಲಿ ಪಶ್ಚಾತ್ತಾಪವನ್ನು ಹಲವುವೇಳೆ ಮೋಕ್ಷ ಸಾಧನೆಗೆ ಅವಶ್ಯಕವೆಂದು ಪರಿಗಣಿಸಲಾಗುತ್ತದೆ. ಹೋಲುವ ಆಚರಣೆಗಳು ಇತರ ವಿಶ್ವ ಧರ್ಮಗಳಲ್ಲೂ ಕಂಡುಬಂದಿವೆ. ಧಾರ್ಮಿಕ ಸಂದರ್ಭಗಳಲ್ಲಿ, ಅದು ಹಲವುವೇಳೆ ದೇವರ ಮುಂದೆ ಅಥವಾ (ಸಂನ್ಯಾಸಿ ಅಥವಾ ಪಾದ್ರಿಯಂತಹ) ಆಧ್ಯಾತ್ಮಿಕ ಹಿರಿಯನ ಎದುರಿಗೆ ತಪ್ಪೊಪ್ಪಿಗೆ ಕ್ರಿಯೆಯನ್ನು ಒಳಗೊಳ್ಳುತ್ತದೆ. ಇದು ಸಾಮಾನ್ಯವಾಗಿ ತಪ್ಪನಿಸಿಕೆಯ ಒಪ್ಪಿಗೆ, ತಪ್ಪನ್ನು ಪುನರಾವರ್ತಿಸುವುದಿಲ್ಲವೆಂಬ ವಚನ ಅಥವಾ ಸಂಕಲ್ಪ; ತಪ್ಪಿಗಾಗಿ ಪರಿಹಾರ ಒದಗಿಸುವ ಪ್ರಯತ್ನ, ಅಥವಾ ಯಾವುದೇ ರೀತಿಯಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ತಪ್ಪಿನ ಹಾನಿಕಾರಕ ಪರಿಣಾಮಗಳನ್ನು ನಿರರ್ಥಕಗೊಳಿಸುವುದನ್ನು ಒಳಗೊಳ್ಳುತ್ತದೆ. ಹಾಗೆ, ಅದು ಆಧುನಿಕ ದಿನದ ಚಿಕಿತ್ಸಕ ಅಭ್ಯಾಸಗಳಿಗೆ ಒಂದು ನಿರ್ದಿಷ್ಟ ಸಂಬಂಧ ಹೊಂದಿದೆ ಎಂದು ಕಾಣಬಹುದು, ಆದರೆ ಅದರ ವಿವರಗಳಲ್ಲಿ ಅದು ಸ್ಪಷ್ಟವಾಗಿ ಭಿನ್ನವಾಗಿದೆ.

ಕ್ರೈಸ್ತ ಧರ್ಮ

ಬದಲಾಯಿಸಿ

ಶಿಶುಗಳಿಗೆ ನೀರು ಸ್ನಾನ (ನೀರಿನಲ್ಲಿ ಮುಳುಗಿಸಿ ಎತ್ತುವುದು), ಪುನರ್ವಶ, ಮತ್ತು ನಿಗೂಢ ಸ್ವತ್ತುಗಳನ್ನು ಸುಡುವುದು, ಪಶ್ಚಾತ್ತಾಪದ ಕೆಲವು ನಿದರ್ಶನಗಳು. ಪಶ್ಚಾತ್ತಾಪ ಪದವು ಧರ್ಮಗ್ರಂಥಗಳಲ್ಲಿ ಎದ್ದುಕಾಣುವಂತೆ ಬರುತ್ತದೆ. ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯಲ್ಲಿ ಪಶ್ಚಾತ್ತಾಪದ ಬಗ್ಗೆ ಅನೇಕ ಬಾರಿ ಬರುತ್ತದೆ.

ಇಸ್ಲಾಂ

ಬದಲಾಯಿಸಿ

ತೌಬಾ ಎನ್ನುವ ಪದವನ್ನು ಕುರಾನ್‍ನಲ್ಲಿ ಉಲ್ಲೇಖಿಸಲಾಗಿದೆ. ಇಸ್ಲಾಮೀ ಸನ್ನಿವೇಶದಲ್ಲಿ, ಅದು ಅಲ್ಲಾಹನು ನಿಷೇಧಿಸಿರುವುದನ್ನು ಬಿಟ್ಟುಬಿಡುವ ಕ್ರಿಯೆ ಮತ್ತು ಅವನು ಆದೇಶಿಸಿದಂತೆ ಹಿಂತಿರುಗುವುದನ್ನು ಸೂಚಿಸುತ್ತದೆ. ಪಶ್ಚಾತ್ತಾಪದ ಕ್ರಿಯೆಯು ಪಾಪಗಳನ್ನು ತೊಡೆದುಹಾಕುತ್ತದೆ ಮತ್ತು ಸ್ವರ್ಗಕ್ಕೆ ಹೋಗುವ ಅವಕಾಶ ನೀಡುತ್ತದೆ.