ಪವಿತ್ರ ಭಟ್
ಪವಿತ್ರ ಭಟ್, [೧] ಮುಂಬಯಿನಗರದ ಭರತನಾಟ್ಯ ಪದ್ಧತಿಯ ಯುವ ನರ್ತಕ. ಭಾರತದಾದ್ಯಂತ ಭರತನಾಟ್ಯವನ್ನು ಪ್ರಚುರಪಡಿಸಿ, ವಿಶ್ವದಾದ್ಯಂತ ಸುತ್ತಿ, ಭರನಾಟ್ಯ ಕಲೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ. ಮುಂಬಯಿನ ಉಪನಗರ ಡೊಂಬಿವಲಿಯಲ್ಲಿ ಒಂದು ಭರತನಾಟ್ಯದ ಶಿಕ್ಷಣ ಸಂಸ್ಥೆ 'PAVI' ಯನ್ನು ಸ್ಥಾಪಿಸಿದ್ದಾರೆ. ಅವರು ಭರತನಾಟ್ಯದ ಗುರು, 'ದೀಪಕ್ ಮುಜುಂದಾರ್' ರವರ ಶಿಷ್ಯರು.[೨]'ಪವಿತ್ರ ಭಟ್, ಸೋಲೋ ನೃತ್ಯ ವಲ್ಲದೆ ಸಾಮೂಹಿಕ ನೃತ್ಯ ಶೈಲಿಗಳನ್ನು ಅಳವಡಿಸಿ, ಹಲವಾರು ಪ್ರಾಯೋಗಿಕ ಪದ್ಧತಿಗಳನ್ನು ಪ್ರಯತ್ನಿಸಿ, ಸಿದ್ಧಿಪಡೆದಿದ್ದಾರೆ.
ಪ್ರಾರಂಭಿಕ ಶಿಕ್ಷಣ
ಬದಲಾಯಿಸಿ'ಭರತ ನಾಟ್ಯ'ದಲ್ಲಿ ಪ್ರಾರಂಭಿಕ ಶಿಕ್ಷಣವನ್ನು 'ಕಲಾಂಜಲಿ ಕುಮಾರಿ ವಸಂತ', 'ಆಚಾರ್ಯ ಚೂಡಾಮಣಿ', ಹಾಗೂ 'ಅನಿತ ಗುಹ' ರವರಿಂದ ಕಲಿತರು.
೨೦೦೩ ರಿಂದ ಪ್ರಾರಂಭ
ಬದಲಾಯಿಸಿ೨೦೦೩ ರಿಂದ ಸತತವಾಗಿ 'ಸೋಲೋ' (ಏಕವ್ಯಕ್ತಿ) ಭರತನಾಟ್ಯವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಲವು ಬಾರಿ ಅವರ ನೃತ್ಯ ಗುರುಗಳ ಜೊತೆಯಲ್ಲೂ ಕೆಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವುಗಳು ಹೀಗಿವೆ :
- ಪುರಂದರ ಕೃಷ್ಣ,
- ಗುರುಶಿಷ್ಯ,
- ಅಭಂಗವಾಣಿ
- ನಾಟ್ಯವೇದ ಮೊದಲಾದವು.
ನೃತ್ಯಸಂಯೋಜನೆ
ಬದಲಾಯಿಸಿ- ಕೃಷ್ಣ ಲೀಲಾ ತರಂಗಿಣಿ,
- ರಾಧೆ ರಾಧೇ ಗೋವಿಂದ,
- ಕೃಷ್ಣಂ ವಂದೇ ಜಗದ್ಗುರುಂ,
- ಶ್ರೀ ರಂಗ,
ಭರತ ನಾಟ್ಯ ತರಪೇತಿ ಶಿಬಿರಗಳ ಆಯೋಜನೆ
ಬದಲಾಯಿಸಿ- ಎನ್ಸಿಪಿಎ,ಮುಂಬಯಿ, [೩]
- ಸೂರತ್,
- ಮುಂಬಯಿ,
- ಆಲಿರಾಜಪುರ್,(ಎಂ.ಪಿ)
- ಅಮೆರಿಕ ಸಂಯುಕ್ತ ಸಂಸ್ಥಾನ,
- ಇಂಡೋನೇಶಿಯ.
ನೃತ್ಯಕಾರ್ಯಕ್ರಮಗಳು (ಸೋಲೋ)
ಬದಲಾಯಿಸಿಪವಿತ್ರ ಭಟ್ ಆಯೋಜಿಸಿ ಪ್ರದರ್ಶಿಸಿದ ನೃತ್ಯ ಕಾರ್ಯಕ್ರಮಗಳ ಪಟ್ಟಿ ಹೀಗಿದೆ : [೪]
ನಟ್ಟುವಾಂಗಂ
ಬದಲಾಯಿಸಿನಟ್ಟುವಾಂಗಮ್ ಕಲೆಯನ್ನು ಕಲಿತು ಅಭ್ಯಾಸಮಾಡಿ, ತಮ್ಮ ಗುರುಗಳಾದ 'ದೀಪಕ್ ಮುಜುಂದಾರ್' ರವರ ನೃತ್ಯ ಕಾರ್ಯಕ್ರಮಕ್ಕೆ ತಾವೇ ನಟ್ಟುವಾಂಗಮ್ [೫]ಕೊಟ್ಟಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- ನ್ಯಾಷನಲ್ ಎಮಿನೆನ್ಯೂಸ್ 'ಷಣ್ಮುಖ ಸಂಗೀತ ಶಿರೋಮಣಿ ಪ್ರಶಸ್ತಿ', ಮುಂಬಯಿನ ಪ್ರತಿಷ್ಠಿತ ಷಣ್ಮುಖಾನಂದ ಫೈನ್ ಆರ್ಟ್ಸ್ ಅಂಡ್ ಸಂಗೀತ ಸಭಾ ವತಿಯಿಂದ.
- ಯುವ ಕಲಾಭಾರತಿ ಭಾರತ್ ಕಲಾಕಾರ್ ಚೆನ್ನೈ, ಪ್ರಶಸ್ತಿ,
- ಮುಂಬಯಿ ದೂರದರ್ಶನದ 'ಎ ಗ್ರೇಡ್ ಕಲಾವಿದ'ನೆಂದು ಪರಿಗಣಿಸಲ್ಪಟ್ಟಿದೆ.,
- ಮುಂಬಯಿ ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಭರತನಾಟ್ಯ ನರ್ತಕನೆಂದು ಗುರುತಿಸಿ,ಎ. ಟಿ.ಗೋವಿಂದ ರಾಜನ್ ಪಿಳ್ಳೈ ಪ್ರಶಸ್ತಿ,
- ಮುಂಬಯಿ ವಿಶ್ವವಿದ್ಯಾಲಯದ ಬಂಗಾರದ ಪದಕ,
- ಸಿಂಗರ್ ಮಣಿ ಸುರಸಿಂಗಾರ್ ಸಂಸದ, ಪ್ರಶಸ್ತಿ,
- Lion's International young ambassador award for 21st Century,
- Acharya Vishvanath dev Award, in search of Talent in Vedic Heritage, New york,
- 'Naland Nrutya nipoona', Nalanda Dance Research Institute in collaboration of the Mumbai festival,
ಉಲ್ಲೇಖಗಳು
ಬದಲಾಯಿಸಿ- ↑ http://meetkalakar.com/Artist/1883-Pavitra-Bhat, meetkalakar.com]
- ↑ "Deepak muZumdar, Performer, Teacher and Choreographer". Archived from the original on 2019-03-11. Retrieved 2019-02-26.
- ↑ 'an-ode-to-lord-shiva'
- ↑ , meetkalakar.com
- ↑ Pavitra bhat, a fine nattuvanar, Free press journal, 12,Dec, 2015
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Bhat's elevating performanceReview, - Vijay Shanker, Mumbai
- Purush The Global dancing male, 20,Dec,2013, Q & A with Pavitra bhat,
- meetkalakar.com
- 'thi raseela', Onlinefor Performing Arts, Pavitra bhat's Bharata natyam Performance profile Archived 2019-01-08 ವೇಬ್ಯಾಕ್ ಮೆಷಿನ್ ನಲ್ಲಿ.
- Tribute to Gurus with recitals The Telegraph,Online edition, 13-03-2014
- Bharatnaytam dancer Pavitra Bhat to perform in Mumbai,July, 16th, 2017
- Pavitra Bhat's elevating performance - Vijay Shanker, Mumbai
- clear lines and angles. Hindu sept, 23, 2016
- P.A.V.I
- S. Rajam's music appreciation notes.